Tag: Rashmika Mandanna

  • ಉರಿಯುತ್ತಿದ್ದ ಬಸ್‌ನೊಳಗೆ ಪ್ರಯಾಣಿಕರು ಅದೆಷ್ಟು ನೋವು ಅನುಭವಿಸಿರಬೇಕು: ಕರ್ನೂಲ್‌ ದುರಂತಕ್ಕೆ ರಶ್ಮಿಕಾ ಕಂಬನಿ

    ಉರಿಯುತ್ತಿದ್ದ ಬಸ್‌ನೊಳಗೆ ಪ್ರಯಾಣಿಕರು ಅದೆಷ್ಟು ನೋವು ಅನುಭವಿಸಿರಬೇಕು: ಕರ್ನೂಲ್‌ ದುರಂತಕ್ಕೆ ರಶ್ಮಿಕಾ ಕಂಬನಿ

    20 ಪ್ರಯಾಣಿಕರನ್ನು ಬಲಿ ಪಡೆದ ಆಂಧ್ರದ ಕರ್ನೂಲ್‌ ಬಸ್‌ ದುರಂತಕ್ಕೆ ನಟಿ ರಶ್ಮಿಕಾ ಮಂದಣ್ಣ ದುಃಖ ವ್ಯಕ್ತಪಡಿಸಿದ್ದಾರೆ.

    ಕರ್ನೂಲ್‌ನಿಂದ ಬಂದ ಸುದ್ದಿ ನನ್ನ ಹೃದಯವನ್ನು ಭಾರವಾಗಿಸಿದೆ. ಉರಿಯುತ್ತಿದ್ದ ಬಸ್ಸಿನೊಳಗೆ ಆ ಪ್ರಯಾಣಿಕರು ಏನೆಲ್ಲಾ ಅನುಭವಿಸಿರಬೇಕು ಎಂದು ಊಹಿಸಿಕೊಳ್ಳುವುದೂ ಅಸಾಧ್ಯ. ಪುಟ್ಟ ಮಕ್ಕಳು ಸೇರಿದಂತೆ ಇಡೀ ಕುಟುಂಬ ಮತ್ತು ಅನೇಕರು ಕೆಲವೇ ನಿಮಿಷಗಳಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡರು ಎಂದು ಯೋಚಿಸುವುದು ನಿಜಕ್ಕೂ ಹೃದಯವಿದ್ರಾವಕ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

    ಈ ದುರಂತದಿಂದ ಬಾಧಿತರಾದ ಪ್ರತಿಯೊಂದು ಕುಟುಂಬದೊಂದಿಗೆ ನನ್ನ ಪ್ರಾರ್ಥನೆಗಳು ಇವೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ರಶ್ಮಿಕಾ ಸಂತಾಪ ಸೂಚಿಸಿದ್ದಾರೆ.

    ಆಂಧ್ರಪ್ರದೇಶದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡ ದೇಶವನ್ನೇ ಆಘಾತಕ್ಕೆ ದೂಡಿದೆ. 43 ಪ್ರಯಾಣಿಕರಿದ್ದ ಬಸ್ ಪ್ರಯಾಣದ ಮಧ್ಯದಲ್ಲಿ ಬೆಂಕಿಗೆ ಆಹುತಿಯಾಯಿತು. ಇಬ್ಬರು ಚಾಲಕರು ಸೇರಿದಂತೆ 23 ಜನರು ಅಪಾಯದಿಂದ ಪಾರಾಗಿದ್ದಾರೆ. 20 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

  • ವಿಜಯ್ ದೇವರಕೊಂಡ ಮನೆಯಲ್ಲಿ ದೀಪಾವಳಿ ಆಚರಿಸಿದ ರಶ್ಮಿಕಾ – ಸಿಕ್ಕಿಬಿದ್ದದ್ದು ಹೇಗೆ?

    ವಿಜಯ್ ದೇವರಕೊಂಡ ಮನೆಯಲ್ಲಿ ದೀಪಾವಳಿ ಆಚರಿಸಿದ ರಶ್ಮಿಕಾ – ಸಿಕ್ಕಿಬಿದ್ದದ್ದು ಹೇಗೆ?

    ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ (Vijay Deverakonda) ನಡುವೆ ನಿಶ್ಚಿತಾರ್ಥವಾಗಿರುವ ವದಂತಿ ಇದೆ. ರಶ್ಮಿಕಾ ಕೈಯಲ್ಲಿರುವ ಉಂಗುರವೂ ಈ ವಿಚಾರಕ್ಕೆ ಸಾಕ್ಷಿ ಹೇಳುತ್ತಿದೆ. ಆದರೆ ಇಬ್ಬರೂ ಈ ಬಗ್ಗೆ ಬಾಯ್ಬಿಟ್ಟಿಲ್ಲ. ಅಲ್ಲದೇ ಇಬ್ಬರೂ ಔಟಿಂಗ್‌ ಹೋದ್ರೂ ಒಟ್ಟಿಗೆ ಕಾಣಿಸಿಕೊಳ್ತಿಲ್ಲ. ಇದರ ಬೆನ್ನಲ್ಲೇ ವಿಜಯ್ ದೇವರಕೊಂಡ ಮನೆಯಲ್ಲೇ ರಶ್ಮಿಕಾ ಮಂದಣ್ಣ (Rashmika Mandanna) ದೀಪಾವಳಿ ಹಬ್ಬ ಆಚರಿಸಿ ಸಿಕ್ಕಿಬಿದ್ದಿದ್ದಾರೆ.

     

    View this post on Instagram

     

    A post shared by Vijay Deverakonda (@thedeverakonda)

    ಟಾಲಿವುಡ್ ಹೀರೋ ವಿಜಯ್ ದೇವರಕೊಂಡ ಈ ಬಾರಿ ಅದ್ಧೂರಿಯಾಗಿ ದೀಪಾವಳಿ ಹಬ್ಬ ಆಚರಿಸಿದ್ದಾರೆ. ಇನ್‌ಸ್ಟಾದಲ್ಲಿ ಪೋಸ್ಟ್ ಮಾಡಿರುವ ಒಂದಷ್ಟು ಫೋಟೋ ಹಾಗೂ ವೀಡಿಯೋಗಳಲ್ಲಿ ಭರ್ಜರಿ ಸೆಲೆಬ್ರೇಷನ್ ಮಾಡಿರುವುದು ಕಾಣುತ್ತಿದೆ. ಆದರೆ ದೃಶ್ಯದಲ್ಲೆಲ್ಲೂ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿಲ್ಲ. ವಿಶೇಷ ಅಂದ್ರೆ ರಶ್ಮಿಕಾ ಧ್ವನಿ ಮಾತ್ರ ಸ್ಪಷ್ಟವಾಗಿ ಕೇಳಿಸುತ್ತಿದೆ. ಪಟಾಕಿ ಸಿಡಿಯುವಾಗ ಎಲ್ಲರೂ ಜೋರಾಗಿ ನಕ್ಕಿರೋದನ್ನ ಫ್ಯಾನ್ಸ್‌ ಪತ್ತೆಹಚ್ಚಿದ್ದಾರೆ. ವಿಡಿಯೋದಲ್ಲಿ ರಶ್ಮಿಕಾ ನಗು ಕ್ಲಿಯರ್ ಆಗಿ ಕೇಳಿಸುತ್ತಿದೆ. ಈ ವೀಡಿಯೋವನ್ನ ವಿಜಯ್ ದೇವರಕೊಂಡ ಪೋಸ್ಟ್ ಮಾಡಿದ್ದಾರೆ.

    ಅಫಿಷಿಯಲ್ ಅನೌನ್ಸ್ಮೆಂಟ್ ಆಗೋವರೆಗೂ ರಶ್ಮಿಕಾ ಹಾಗೂ ವಿಜಯ್ ತಮ್ಮ ಪ್ರೀತಿಯ ವಿಚಾರವನ್ನ ಗುಟ್ಟಾಗಿ ಇಡುವ ನಿರ್ಧಾರಕ್ಕೆ ಬಂದಂತಿದೆ. ಹೀಗಾಗಿ ಅಡ್ಡಗೋಡೆ ಮೇಲೆ ದೀಪವಿಡುವಂತೆ ವರ್ತಿಸುತ್ತಿರುತ್ತಾರೆ. ಇದೀಗ ವಿಜಯ್ ದೇವರಕೊಂಡ ಪೋಸ್ಟ್ ಮಾಡಿರುವ ವೀಡಿಯೋದಲ್ಲಿ ರಶ್ಮಿಕಾ ಧ್ವನಿ ಇರುವುದನ್ನ ಕೇಳಿಸಿಕೊಂಡಿರುವ ಅಭಿಮಾನಿಗಳು ಕೂಡ ಅದನ್ನು ಗುರುತಿಸಿ ಕಾಮೆಂಟ್ಸ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಈ ಜೋಡಿಯ ಕಣ್ಣಾಮುಚ್ಚಾಲೆ ಆಟವಂತೂ ಮುಂದುವರೆದಿದೆ.

  • ಹುಡ್ಗೀರು ಬ್ರೇಕಪ್ ನೋವನ್ನ ಬೇಗ ಮರೆಯುತ್ತಾರೆ – ಮೌನ ಮುರಿದ ʻಶ್ರೀವಲ್ಲಿʼ

    ಹುಡ್ಗೀರು ಬ್ರೇಕಪ್ ನೋವನ್ನ ಬೇಗ ಮರೆಯುತ್ತಾರೆ – ಮೌನ ಮುರಿದ ʻಶ್ರೀವಲ್ಲಿʼ

    ನಟಿ ರಶ್ಮಿಕಾ ಮಂದಣ್ಣ ಅಭಿನಯದ ʻಥಾಮಾʼ ಸಿನಿಮಾ ಬಿಡುಗಡೆಯಾಗಿ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಇತ್ತ ಅವರ ಇನ್ನೊಂದು ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಆ ಸಿನಿಮಾದ ಸಂದರ್ಶನದ ವೇಳೆ ರಶ್ಮಿಕಾ (Rashmika Mandanna) ಹಲವಾರು ವಿಷಯದ ಬಗ್ಗೆ ಮಾತಾಡಿದ್ದಾರೆ. ಮುಖ್ಯವಾಗಿ ಲವ್, ಬ್ರೇಕಪ್‌ (Love And Breakup) ಬಗ್ಗೆ ಮಾತಾಡಿರೋ ವಿಡಿಯೋ ವೈರಲ್ ಆಗ್ತಿದೆ.

    ಅಂದ್ಹಾಗೆ ʻಗರ್ಲ್ಫ್ರೆಂಡ್ʼ ಸಿನಿಮಾದ ಪ್ರಮೋಷನ್ ವೇಳೆ ಆಂಕರ್ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ. ಮೊದಲ ಪ್ರೀತಿ ಪರಿಶುದ್ಧನಾ? ಕೊನೆಯ ಪ್ರೀತಿ ಪರಿಶುದ್ಧನಾ? ಎಂದು ಸಹನಟ ದೀಕ್ಷಿತ್ ಶೆಟ್ಟಿಗೆ ಕೇಳಲಾದ ಪ್ರಶ್ನೆಗೆ ರಶ್ಮಿಕಾ ಉತ್ತರಿಸಿದ್ದಾರೆ. ರಶ್ಮಿಕಾ ಮೊದಲ ಪ್ರೀತಿಯಲ್ಲ, ಕೊನೆಯ ಪ್ರೀತಿ ಪರಿಶುದ್ಧ ಎಂದಿದ್ದಾರೆ. ಇನ್ನೂ ಮುಂದುವರಿದು ಪ್ರೀತಿ ಅಂದರೆ ಅಸೂಯೆ ಅಲ್ಲ, ಪ್ರೀತಿಯಲ್ಲಿ ಅಸೂಯೆಗೆ ಜಾಗ ಇರೋದಿಲ್ಲ. ನಾನಾ ವಿಧದ ಭಾವನೆಗಳಿಂದ ಕೂಡಿರುವ ಸುಂದರವಾದ ಅನುಭವ ʻಪ್ರೀತಿʼ ಎಂದಿದ್ದಾರೆ ನ್ಯಾಷನಲ್ ಕ್ರಶ್.

    ಅಲ್ಲದೇ ಪ್ರೀತಿಯಲ್ಲಿ ವಿರಹ ವೇದನೆ ಕಾಡಿದಾಗ ಹುಡುಗಿಯರು ಬ್ರೇಕಪ್ ನೋವನ್ನ ಹುಡುಗರಿಗಿಂತ ಬೇಗ ಮರೆಯುತ್ತಾರೆ. ತಮ್ಮ ಜೀವನದಲ್ಲಿ ಮುಂದುವರೆಯುತ್ತಾರೆ ಎನ್ನುವ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಹುಡುಗರು ಗಡ್ಡ ಬಿಟ್ಟುಕೊಂಡು, ಧೂಮಪಾನ, ಮದ್ಯಪಾನ ಮಾಡ್ಕೊಂಡು ತಾವು ನೋವಲ್ಲಿದ್ದೇವೆ ಎಂದು ತೋರಿಸಿಕೊಳ್ಳುತ್ತಾರೆ. ಆದರೆ ಹುಡುಗಿಯರು ಹಾಗಲ್ಲ, ಅವರು ಮನದಲ್ಲಿಯೇ ನೊಂದು ಬೆಂದು ಹೋಗುತ್ತಾರೆ. ಹುಡುಗರಿಗಿಂತ ಹೆಚ್ಚಿನ ನೋವನ್ನು ಹುಡುಗಿಯರು ಅನುಭವಿಸುತ್ತಾರೆ ಎಂದು ಹೇಳಿದ್ದಾರೆ. ಆದ್ರೆ ರಕ್ಷಿತ್ ಶೆಟ್ಟಿ ಜೊತೆಗಿನ ಲವ್, ಬ್ರೇಕಪ್ ಬಗ್ಗೆ ಎಲ್ಲೂ ಪ್ರಸ್ತಾಪಿಸಿಲ್ಲ, ಈ ವಿಡಿಯೋ ಈಗ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ.

  • ರಶ್ಮಿಕಾ ನಟನೆಯ `ದಿ ಗರ್ಲ್‌ಫ್ರೆಂಡ್‌’ ಸಿನಿಮಾ ರಿಲೀಸ್ ಡೇಟ್ ಫಿಕ್ಸ್

    ರಶ್ಮಿಕಾ ನಟನೆಯ `ದಿ ಗರ್ಲ್‌ಫ್ರೆಂಡ್‌’ ಸಿನಿಮಾ ರಿಲೀಸ್ ಡೇಟ್ ಫಿಕ್ಸ್

    ಟಿ ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ದೀಕ್ಷಿತ್ ಶೆಟ್ಟಿ (Deekshith Shetty) ಅಭಿಯದ `ದಿ ಗರ್ಲ್‌ಫ್ರೆಂಡ್‌’ (The Girlfriend) ಚಿತ್ರದ ಹೊಸ ಅಪ್‌ಡೇಟ್ ಸಿಕ್ಕಿದೆ. ತನ್ನ ಟೈಟಲ್‌ನಿಂದಲೇ ಹೆಚ್ಚು ಗಮನ ಸೆಳೆದಿರೋ ಈ ಚಿತ್ರ, ಯಾವಾಗ ರಿಲೀಸ್ ಆಗುತ್ತೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಮುಂದಿನ ತಿಂಗಳು ಅಂದ್ರೆ ನವೆಂಬರ್ 7ರಂದು `ದಿ ಗರ್ಲ್‌ಫ್ರೆಂಡ್‌’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ.

    ದಿ ಗರ್ಲ್‌ಫ್ರೆಂಡ್‌ ಸಿನಿಮಾವನ್ನು `ಗೀತಾ ಆರ್ಟ್ಸ್’ ಹಾಗೂ `ಧೀರಜ್ ಮೊಗಿಲಿನೇನಿ ಎಂಟರ್ಟೈನ್ಮೆಂಟ್’ ಸಂಸ್ಥೆಗಳು ಒಟ್ಟಾಗಿ ನಿರ್ಮಾಣ ಮಾಡುತ್ತಿವೆ. ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಅವರು ಈ ಸಿನಿಮಾವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಇದನ್ನೂ ಓದಿ: ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ ಪಡೆದ ರಕ್ಷಿತ್‌ ಶೆಟ್ಟಿಗೆ ರಿಷಬ್‌ ವಿಶ್‌ – ಥ್ಯಾಂಕ್ಸ್‌ ಮಗ ಎಂದ ಚಾರ್ಲಿ ಹೀರೋ

    ರಾಹುಲ್ ರವೀಂದ್ರನ್ ಅವರು ನಿರ್ದೇಶನ ಮಾಡಿದ್ದಾರೆ. ಸುಂದರ ಪ್ರೇಮಕಥೆಯನ್ನು `ದಿ ಗರ್ಲ್‌ಫ್ರೆಂಡ್‌’ ಸಿನಿಮಾ ಮೂಲಕ ಅವರು ಹೇಳಲಿದ್ದಾರೆ. ಹೇಶಮ್ ಅಬ್ದುಲ್ ವಹಾಬ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಕೃಷ್ಣನ್ ವಸಂತ್ ಛಾಯಾಗ್ರಹಣ, ಚೋಟಾ.ಕೆ ಪ್ರಸಾದ್ ಸಂಕಲನ ಸಿನಿಮಾಗಿದೆ.

  • ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

    ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

    ಹೈದರಾಬಾದ್‌: ನಟಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ನಟ ವಿಜಯ್‌ ದೇವರಕೊಂಡ (Vijay Deverakonda) ನಿಶ್ಚಿತಾರ್ಥ ಮಾಡಿಕೊಂಡಿದ್ದು ಫೆಬ್ರವರಿಯಲ್ಲಿ ಮದುವೆಯಾಗಲಿದ್ದಾರೆ ಎಂದು ವರದಿಯಾಗಿದೆ.

    ಟಾಲಿವುಡ್‌ನ ವಿಶ್ವಾಸಾರ್ಹ ಮೂಲಗಳಿಂದ ಬಂದಿರುವ ವರದಿಗಳ ಪ್ರಕಾರ, ಪ್ರೇಮ ಪಕ್ಷಿಗಳಾದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಇಂದು ರಹಸ್ಯವಾಗಿ ಹೈದರಾಬಾದ್‌ನ ದೇವರಕೊಂಡ ಮನೆಯಲ್ಲಿ ನಿಶ್ಚಿತಾರ್ಥ (Engaemet) ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.‌ ಇದನ್ನೂ ಓದಿ:  ವಿಜಯ್‌ ದೇವರಕೊಂಡ ಜೊತೆ ರಶ್ಮಿಕಾ ಮಂದಣ್ಣ ದೀಪಾವಳಿ ಸೆಲೆಬ್ರೇಶನ್‌

    ನಿಶ್ಚಿತಾರ್ಥವು ಇಬ್ಬರೂ ತಾರೆಯರ ಆಪ್ತ ಸ್ನೇಹಿತರು ಮತ್ತು ಎರಡು ಕುಟುಂಬಗಳ ಸಮ್ಮುಖದಲ್ಲಿ ಬಹಳ ಖಾಸಗಿಯಾಗಿ ನಡೆದಿದೆ. ವಿಜಯ್‌ ಮತ್ತು ರಶ್ಮಿಕಾ ಶೀಘ್ರವೇ ಈ ಸುದ್ದಿಯನ್ನು ಅಧಿಕೃತಗೊಳಿಸಲಿದ್ದಾರೆ ಎಂದು ವರದಿಯಾಗಿದೆ.

    ವಿಜಯ್ ಮತ್ತು ರಶ್ಮಿಕಾ ಇಬ್ಬರೂ ಬಹಳ ಸಮಯದಿಂದ ಪರಸ್ಪರ ಭೇಟಿಯಾಗುತ್ತಿದ್ದಾರೆ. ವಿದೇಶ ಪ್ರವಾಸದಲ್ಲೂ ಇಬ್ಬರು ಜೊತೆಯಾಗಿರುವ ಫೋಟೋಗಳು ಲಭ್ಯವಾಗಿದ್ದರೂ ಅಧಿಕೃತವಾಗಿ ನಾವಿಬ್ಬರು ಪ್ರೀತಿಸುತ್ತಿದ್ದೇವೆ ಎಂದು ಎಲ್ಲಿಯೂ ಹೇಳಿಕೊಂಡಿರಲಿಲ್ಲ.

  • ದೆವ್ವವಾಗಿ ಕಾಡುವ ರಶ್ಮಿಕಾರನ್ನು ನೋಡಿದ್ರಾ?

    ದೆವ್ವವಾಗಿ ಕಾಡುವ ರಶ್ಮಿಕಾರನ್ನು ನೋಡಿದ್ರಾ?

    ರಶ್ಮಿಕಾ (Rashmika Mandanna) ವಿಭಿನ್ನ ಪಾತ್ರಗಳನ್ನ ಆಯ್ಕೆ ಮಾಡಿಕೊಳ್ಳುವ ಮೂಲಕ ಸುದ್ದಿಯಾಗುತ್ತಿದ್ದಾರೆ. ಇದೀಗ `ಥಮಾ’ ಚಿತ್ರದಲ್ಲಿ ದೆವ್ವದ ಪಾತ್ರ ಮಾಡಿರುವ ರಶ್ಮಿಕಾ ಹಿಂದಿನ ಪಾತ್ರಗಳಿಗಿಂತ ವಿಭಿನ್ನವಾಗಿ ಕಾಣಿಸ್ಕೊಂಡಿದ್ದಾರೆ.

    `ಥಮಾ’ (Thama) ಚಿತ್ರದ ಟ್ರೈಲರ್‌ ರಿಲೀಸ್ (Trailer Release) ಆಗಿದ್ದು, ರಶ್ಮಿಕಾ ದೆವ್ವದ ಪಾತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ. ಸಿನಿಮಾದಲ್ಲಿ ಆಯುಷ್ಮಾನ್ ಖುರಾನ್‌ (Ayushmann Khurrana) ಜೊತೆ ತೆರೆ ಹಂಚಿಕೊಂಡಿದ್ದಾರೆ.ಇದನ್ನೂ ಓದಿ: ಈ ಬಾರಿ ಬಿಗ್ ಬಾಸ್ ಮನೆಗೆ ಹೋಗುವ ಕಂಟೆಸ್ಟೆಂಟ್‌ ಯಾರ್ ಗೊತ್ತಾ? – ಇಲ್ಲಿದೆ ನೋಡಿ ಫೈನಲ್ ಲಿಸ್ಟ್

    ಥಮಾ ಒಂದು ಹಾರರ್‌ ಸಿನಿಮಾ ಆಗಿದ್ದು,ಫ್ಯಾಂಟಸಿ ಜೊತೆ ಕಾಮಿಡಿ ಕಥೆಯನ್ನು ಹೊಂದಿದೆ. ಹಿಂದ್ಯಾವತ್ತೂ ರಶ್ಮಿಕಾ ಮಂದಣ್ಣ ಈ ರೀತಿಯ ಪಾತ್ರದಲ್ಲಿ ಕಾಣಿಸ್ಕೊಂಡಿರಲಿಲ್ಲ. ಇದೀಗ ತಡ್ಕಾ ಪಾತ್ರದಲ್ಲಿ ಮನುಷ್ಯನನ್ನು ಪ್ರೀತಿಸುವ ದೆವ್ವವಾಗಿ ವಿಭಿನ್ನ ರೂಪದಲ್ಲಿ ತೆರೆ ಮೇಲೆ ಬರಲಿದ್ದಾರೆ. ಭಯ ಹುಟ್ಟಿಸಿ, ಎಮೋಷನಲ್ ಆಗಿ ಕನೆಕ್ಟ್ ಆಗುತ್ತಾರೆ. ಇದೀಗ ರಶ್ಮಿಕಾ ಅವರ ಹೊಸ ಪಾತ್ರದ ಆಯ್ಕೆ ಮತ್ತೆ ಬಾಲಿವುಡ್‌ನಲ್ಲಿ ಸೌಂಡ್ ಮಾಡುತ್ತಿದೆ.

  • `ಕ್ರಿಶ್-4′ ಹೃತಿಕ್‌ಗೆ ನಾಯಕಿಯಾಗ್ತಾರಾ ಶ್ರೀವಲ್ಲಿ?

    `ಕ್ರಿಶ್-4′ ಹೃತಿಕ್‌ಗೆ ನಾಯಕಿಯಾಗ್ತಾರಾ ಶ್ರೀವಲ್ಲಿ?

    ಭಾರತೀಯ ಚಿತ್ರರಂಗದಲ್ಲಿ ಸದ್ಯ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ನಟಿ ರಶ್ಮಿಕಾ ಮಂದಣ್ಣಗೆ (Rashmika Mandanna) ಮತ್ತೆ ಬಾಲಿವುಡ್‌ನಿಂದ ಅವಕಾಶವೊಂದು ಅರಸಿ ಬಂದಿದೆ. ಸಲ್ಮಾನ್‌ಖಾನ್ ಜೊತೆ ನಟಿಸಿದ ಸಿಕಂದರ್ ಸಿನಿಮಾ ಮಕಾಡೆ ಮಲಗಿದ್ರೂ ಅವರಿಗೆ ಬಾಲಿವುಡ್‌ನಲ್ಲಿ ಅವಕಾಶಗಳು ಕಮ್ಮಿಯಾಗಿಲ್ಲ. ಅನಿಮಲ್ ಹಾಗೂ ಛಾವಾ ಸಿನಿಮಾದ ಬಿಗ್ ಸಕ್ಸಸ್ ರಶ್ಮಿಕಾಗೆ ಮತ್ತೊಂದು ಅವಕಾಶ ಕಲ್ಪಿಸಿದೆ.

    ರಶ್ಮಿಕಾ ಮಂದಣ್ಣ ನಟಿಸಿದ ದಕ್ಷಿಣ ಭಾರತದ ಪುಷ್ಪ ಹಾಗೂ ಪುಷ್ಪ-2 ಸಿನಿಮಾದ ಬ್ಲಾಕ್‌ಬಸ್ಟರ್ ಹಿಟ್ ಇತಿಹಾಸ ಸೇರಿದೆ. ಸದ್ಯ ಬಾಲಿವುಡ್‌ನಲ್ಲಿ ಕ್ರಿಶ್-4 ಸಿನಿಮಾದ ಸ್ಟಾರ್‌ಕ್ಯಾಸ್ಟ್ ಆಯ್ಕೆ ನಡೆಯುತ್ತಿದೆ. ಸಿನಿಮಾದ ನಾಯಕರಾಗಿ ಹೃತಿಕ್‌ ರೋಷನ್ (Hrithik Roshan) ಇದ್ರೆ ನಾಯಕಿಯಾಗಿ ರಶ್ಮಿಕಾಗೆ ಮಣೆಹಾಕುತ್ತಿದೆಯಂತೆ ಚಿತ್ರತಂಡ. ಅಂದಹಾಗೆ ಕ್ರಿಶ್-4 ಸಿನಿಮಾವನ್ನ ಗ್ರೀಕ್‌ಗಾಡ್ ಹೃತಿಕ್ ರೋಷನ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ.

    ಕ್ರಿಶ್ ಸರಣಿಗಳನ್ನ ಹೃತಿಕ್ ರೋಷನ್ ಅವರ ತಂದೆ ರಾಕೇಶ್ ರೋಷನ್ ನಿರ್ದೇಶನ ಮಾಡಿದ್ದರು. ಈ ಬಾರಿ ನಿರ್ದೇಶನದ ಜವಾಬ್ದಾರಿ ಕೂಡಾ ಹೃತಿಕ್ ರೋಷನ್ ಮೇಲೆ ಬಿದ್ದಿದೆ. ಪುಷ್ಪ ಸಿನಿಮಾ ಮೂಲಕ ಶ್ರೀವಲ್ಲಿಯಾಗಿ ಖ್ಯಾತಿ ಪಡೆದಿರೋ ರಶ್ಮಿಕಾ ಬಾಲಿವುಡ್‌ನಲ್ಲೂ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕ್ರಿಶ್, ಕ್ರಿಶ್-3 ಚಿತ್ರದಲ್ಲಿ ಪ್ರಿಯಾಂಕ ಚೋಪ್ರಾ ನಟಿಸಿದ್ದರು. ಸದ್ಯ ಪ್ರಿಯಾಂಕ ಚೋಪ್ರಾ ಹಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ರಶ್ಮಿಕಾ ಅವರನ್ನ ಆಯ್ಕೆ ಮಾಡಿಕೊಳ್ಳಲು ಚಿತ್ರತಂಡ ತಯಾರಿ ಮಾಡಿಕೊಂಡಿದೆ ಎನ್ನಲಾಗ್ತಿದೆ.

  • ಜಾಲಿ ಮೂಡಿನಲ್ಲಿ ನಟ ವಿಜಯ್ ದೇವರಕೊಂಡ – ರಶ್ಮಿಕಾ ಎಲ್ಲಿ ಅಂದ್ರು ಫ್ಯಾನ್ಸ್‌!

    ಜಾಲಿ ಮೂಡಿನಲ್ಲಿ ನಟ ವಿಜಯ್ ದೇವರಕೊಂಡ – ರಶ್ಮಿಕಾ ಎಲ್ಲಿ ಅಂದ್ರು ಫ್ಯಾನ್ಸ್‌!

    `ಕಿಂಗ್ಡಮ್’ ಸಿನಿಮಾದ ಸೋಲಿನ ನಂತರ ರಿಲ್ಯಾಕ್ಸ್‌ ಆಗಲು ತೆರಳಿದ್ದಾರೆ ಟಾಲಿವುಡ್ ನಟ ವಿಜಯ್ ದೇವರಕೊಂಡ (Vijay Deverakonda). ಇತ್ತೀಚೆಗೆ ತಮ್ಮ ಸ್ನೇಹಿತರ ಜೊತೆ ಸೇರಿ ಕೌಯಿ ದ್ವೀಪಕ್ಕೆ ಭೇಟಿ ನೀಡಿದ ಕ್ಷಣಗಳನ್ನ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವರ್ಷ ತೆರೆಕಂಡ ಸಿನಿಮಾ ವಿಜಯ್ ದೇವರ ಕೊಂಡಗೆ ಸೋಲಿನ ದರ್ಶನ ಮಾಡಿಸಿದೆ.

     

    View this post on Instagram

     

    A post shared by Vijay Deverakonda (@thedeverakonda)

    ವಿಜಯ್ ದೇವರಕೊಂಡ ಮುಂದಿನ ಸಿನಿಮಾದ (Cinema) ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಮುಂಚೆ ಕೌಯಿ ದ್ವೀಪಕ್ಕೆ ಭೇಟಿ ನೀಡಿದ್ದಾರೆ. ಈ ದ್ವೀಪದ ಸುಂದರ ಕ್ಷಣಗಳನ್ನು ಸೆರೆಹಿಡಿದಿದ್ದಾರೆ. ಈ ವೇಳೆ ಸ್ನೇಹಿತರ ಜೊತೆ ಸಖತ್ ಎಂಜಾಯ್ ಮಾಡಿದ್ದಾರೆ. ಈ ಎಲ್ಲಾ ಕ್ಷಣಗಳನ್ನು ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ನಟ ವಿಜಯ್ ದೇವರಕೊಂಡ.

    ವಿಜಯ್ ದೇವರಕೊಂಡ ಸದ್ಯ ಸಿನಿಮಾದ ಕೆಲಸಗಳಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಈ ಸಮಯವನ್ನ ಸ್ನೇಹಿತರ ಜೊತೆ ಕಳೆಯುತ್ತಿದ್ದಾರೆ. ಇತ್ತೀಚೆಗೆ ಕಳೆದ ಕ್ಷಣಗಳನ್ನ ಹಂಚಿಕೊಂಡಿದ್ದಾರೆ. ಜೊತೆ ಕ್ಯಾಪ್ಷನ್ ನಲ್ಲಿ ಪರಿಪೂರ್ಣ ಜೀವನ ಅಂತ ತಮ್ಮ ಕನಸು ನನಸಾದ ಬಗೆಯನ್ನ ವ್ಯಕ್ತಪಡಿಸಿದ್ದಾರೆ. ವಿಜಯ್ ದೇವರಕೊಂಡ ಹಂಚಿಕೊಂಡ ವಿಡಿಯೋ ಹಾಗೂ ಫೋಟೋಗಳಿಗೆ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಇನ್ನೂ ವಿಜಯ್‌ ದೇವರಕೊಂಡ ಹಂಚಿಕೊಂಡ ಪೋಸ್ಟ್‌ಗೆ ಸಿಂಗಲ್ಲಾಗಿ ಹೋಗಿದ್ದೀರಾ? ರಶ್ಮಿಕಾ ಮಂದಣ್ಣ (Rashmika Mandanna) ಎಲ್ಲಿ ಅಂತೆಲ್ಲಾ ಕಾಮೆಂಟ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ.

  • ಮತ್ತೆ ರೊಮ್ಯಾನ್ಸ್‌ಗೆ ರೆಡಿಯಾದ ರಶ್ಮಿಕಾ-ವಿಜಯ್ ದೇವರಕೊಂಡ

    ಮತ್ತೆ ರೊಮ್ಯಾನ್ಸ್‌ಗೆ ರೆಡಿಯಾದ ರಶ್ಮಿಕಾ-ವಿಜಯ್ ದೇವರಕೊಂಡ

    ಒಟ್ಟಿಗೆ ನಟಿಸಿದ್ದು ಎರಡೇ ಸಿನಿಮಾ ಆದ್ರೂ ಈ ಜೋಡಿ ಒಟ್ಟಿಗೆ ಕಾಣಿಸ್ಕೊಂಡಾಗ ತೆರೆಮೇಲೆ ಮ್ಯಾಜಿಕ್ ಆಗೋದು ಗ್ಯಾರಂಟಿ. ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ವಿಜಯ್ ದೇವರಕೊಂಡ (Vijay Deverakonda) ಟಾಲಿವುಡ್‌ನ ಹಾಟ್ ಕಪಲ್. ಆನ್‌ಸ್ಕ್ರೀನ್‌ ಕೆಮಿಸ್ಟ್ರಿ ವರ್ಕೌಟ್ ಆದ್ಮೇಲೆ ಆಫ್‌ಸ್ಕ್ರೀನ್‌ನಲ್ಲೂ ಕೆಮೆಸ್ಟ್ರಿ ನಿಭಾಯಿಸಿಕೊಂಡು ಬಂದಿರುವ ತಾರೆಗಳು ಇವರು. ಇದೇ ಗ್ಯಾಪಲ್ಲೇ 3ನೇ ಬಾರಿ ಆನ್‌ಸ್ಕ್ರೀನ್‌ ಜೋಡಿಯಾಗಿ ಕಾಣಿಸ್ಕೊಳ್ಳಲು ಈ ತಾರೆಗಳು ರೆಡಿಯಾಗಿದ್ದಾರೆ.

    ತೆಲುಗಿನ ರಾಹುಲ್ ಸಂಕೃತ್ಯ ನಿರ್ದೇಶನದಲ್ಲಿ ಮುಂಬರುವ ಚಿತ್ರಕ್ಕಾಗಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮತ್ತೆ ತೆರೆಯ ಮೇಲೆ ಒಂದಾಗಲಿದ್ದಾರೆ. ಗೀತ ಗೋವಿಂದಂ (Geetha Govindam), ಡಿಯರ್ ಕಾಮ್ರೇಡ್ ಚಿತ್ರಗಳಲ್ಲಿ ಈ ಹಿಂದೆ ಒಟ್ಟಿಗೆ ನಟಿಸಿ ಪ್ರೇಕ್ಷಕರ ಮನಗೆದ್ದಿದ್ದ ನೆಚ್ಚಿನ ಜೋಡಿ ಇದು. ಈ ಬಾರಿ 1800ರ ದಶಕದಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿ ನಡೆದ ಕಥೆಯಲ್ಲಿ ಈ ಜೋಡಿ ಪರದೆ ಹಂಚಿಕೊಳ್ಳಲಿದ್ದಾರೆ. ಇದು ಐತಿಹಾಸಿಕ ಕಥೆಯಾಗಿರುವುದು ವಿಶೇಷ. ಇದನ್ನೂ ಓದಿ:  ಯಶ್ ನಟನೆಯ ರಾಮಾಯಣ-2 ಚಿತ್ರಕ್ಕೆ VFX ಗಾಗಿ ಗಾಡ್ಜಿಲ್ಲ ತಂತ್ರಜ್ಞರು ಎಂಟ್ರಿ

    ಪ್ರಾಥಮಿಕ ಮಾಹಿತಿಯ ಪ್ರಕಾರ, ನಟ ವಿಜಯ್ ದೇವರಕೊಂಡ ಆಂಧ್ರದ ರಾಯಲುಸೀಮೆಯ ಹಳ್ಳಿಗಾಡಿನ ಪಾತ್ರವನ್ನು ನಿರ್ವಹಿಸುವ ನಿರೀಕ್ಷೆ ಇದೆ. ಇದು ಅವರ ವೃತ್ತಿಜೀವನದಲ್ಲಿ ಮೊದಲ ಪ್ರಯತ್ನ. ರಶ್ಮಿಕಾ ಕೂಡ ವಿಭಿನ್ನ ಪಾತ್ರದಲ್ಲೇ ಕಾಣಿಸ್ಕೊಳ್ಳಲಿದ್ದಾರೆ. ಆ್ಯಕ್ಷನ್ ಕಥೆಯ ಬಿಗ್ ಬಜೆಟ್ ಚಿತ್ರವಾಗಿ ಶೀಘ್ರದಲ್ಲೇ ಸೆಟ್ಟೇರಲು ಸಿದ್ಧವಾಗಿದೆ. ಇನ್ನಷ್ಟು ಮಾಹಿತಿಗಳು ಒಂದೊಂದಾಗೇ ಹೊರಬೀಳುವ ಸಾಧ್ಯತೆ ಇದೆ. ಇನ್ನು 6 ವರ್ಷಗಳ ಬಳಿಕ ಒಂದಾಗುತ್ತಿರುವ ರಶ್ಮಿಕಾ ಹಾಗೂ ವಿಜಯ್ ದೇವಕೊಂಡ ಜೋಡಿ ಮತ್ತೊಮ್ಮೆ ತೆರೆ ಮೇಲೆ ಮ್ಯಾಜಿಕ್ ಸೃಷ್ಟಿಸುವಂತೆ ಭಾಸವಾಗುತ್ತಿದೆ. ಇದನ್ನೂ ಓದಿ: ಮದ್ವೆಯಲ್ಲಿ ಅನುಶ್ರೀ ಉಟ್ಟ ಸೀರೆಯ ಬೆಲೆ 2.5 ಲಕ್ಷ ಅಲ್ಲ ಕೇವಲ 2,700 ರೂ.

  • Kanchana 4 | ದೆವ್ವವಾಗಿ ಕಾಡಲಿದ್ದಾರೆ ರಶ್ಮಿಕಾ!

    Kanchana 4 | ದೆವ್ವವಾಗಿ ಕಾಡಲಿದ್ದಾರೆ ರಶ್ಮಿಕಾ!

    ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ಬಿಡುವಿಲ್ಲದ ನಟಿಯಾಗಿ ಹೊರಹೊಮ್ಮಿದ್ದಾರೆ. ಸ್ಟಾರ್ ಸಿನಿಮಾಗಳ ನಾಯಕಿಯಾಗುವುದರ ಜೊತೆ ಜೊತೆಗೆ ನಾಯಕಿ ಪ್ರಧಾನ ಸಿನಿಮಾಗಳಲ್ಲೂ ರಶ್ಮಿಕಾ ನಟಿಸುತ್ತಿದ್ದಾರೆ. ಗರ್ಲ್‍ಫ್ರೆಂಡ್, ಮೈಸಾ, ಥಮಾ ಸಿನಿಮಾಗಳ ಚಿತ್ರೀಕರಣದಲ್ಲಿ ರಶ್ಮಿಕಾ ಬ್ಯುಸಿ ಇರುವ ಹೊತ್ತಿಗೇ ಮತ್ತೊಂದು ಬಿಗ್ ಪ್ರಾಜೆಕ್ಟ್ ಬಾಚಿಕೊಂಡ ಸುದ್ದಿ ಬಂದಿದೆ. ಅದುವೇ  (Kanchana 4) `ಕಾಂಚನ 4′.

    ದಕ್ಷಿಣ ಭಾರತದಲ್ಲಿ ಕಾಂಚನ ಸಿರೀಸ್ ಒಂದು ದಾಖಲೆ ಬರೆದ ಚಿತ್ರ ಸರಣಿ. ಪ್ರತಿ ಸರಣಿಯಲ್ಲೂ ರಾಘವ ಲಾರೆನ್ಸ್ ಕುತೂಹಲದ ಕಥೆ ಕಟ್ಟಿಕೊಡುವಲ್ಲಿ ಗೆದ್ದಿದ್ದಾರೆ. ಈ ಸಲದ ಕಾಂಚನ ಸಿರೀಸ್‍ನ ನಾಯಕಿಯ ಆಫರ್ ರಶ್ಮಿಕಾಗೆ ಹೋಗಿದೆ ಎನ್ನಲಾಗುತ್ತಿದೆ. ರಶ್ಮಿಕಾ ಇಲ್ಲಿ ದೆವ್ವದ ಪಾತ್ರ ಮಾಡಲಿದ್ದಾರಂತೆ. ಇದನ್ನೂ ಓದಿ: ಸುದೀಪ್ ಹುಟ್ಟುಹಬ್ಬಕ್ಕೆ ಬಿಲ್ಲ ರಂಗ ಬಾಷಾ ಫಸ್ಟ್ ಲುಕ್ ಪೋಸ್ಟರ್

    ಗ್ಲ್ಯಾಮರ್, ಪರ್ಫಾಮೆನ್ಸ್ ಎಲ್ಲದಕ್ಕೂ ಸೈ ಎನ್ನುವ ರಶ್ಮಿಕಾ ದಕ್ಷಿಣ ಭಾರತದ ಚಿತ್ರಕರ್ಮಿಗಳ ಆಯ್ಕೆಯ ಲಿಸ್ಟ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಘೋಷಣೆಯಾಗಿರುವ ಚಿತ್ರಗಳು ಮೂರೇ ಆಗಿದ್ದರೂ ರಶ್ಮಿಕಾ ಕೈಯಲ್ಲಿ ಹತ್ತಾರು ಪ್ರಾಜೆಕ್ಟ್‌ಗಳಿವೆ. ಅದೆಲ್ಲವೂ ಕಾಲ ಬಂದಾಗ ಘೋಷಣೆಯಾಗುತ್ತೆ.

    ಶೀಘ್ರದಲ್ಲೇ ಕಾಂಚನ 4 ಚಿತ್ರದ ಘೋಷಣೆ ಆಗಲಿದ್ದು ಇಲ್ಲಿ ರಶ್ಮಿಕಾ ಪ್ರಧಾನ ನಾಯಕಿಯಾಗಿ ಅಭಿನಯಿಸಲಿದ್ದಾರಂತೆ. ಹಾರರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗ್ಲೇ ರಿಲೀಸ್ ಆಗಿರುವ ರಶ್ಮಿಕಾ ಅಭಿನಯಿಸಿರುವ ಥಮಾ ಸಿನಿಮಾದ ಪೋಸ್ಟರ್ ಪ್ರಕಾರ ನೋಡೋದಾದ್ರೆ ಹಾರರ್ ಶೈಲಿಯಲ್ಲೇ ಕಾಣಿಸುತ್ತದೆ. ಮೈಸಾದಲ್ಲೂ ಅಗ್ರೆಸ್ಸಿವ್ ಪಾತ್ರ ಪೋಷಿಸಿದ್ದು ಮತ್ತೊಮ್ಮೆ ರಶ್ಮಿಕಾ ಅಂಥದ್ದೇ ಪರ್ಫಾಮೆನ್ಸ್ ಓರಿಯೆಂಟೆಡ್ ಪಾತ್ರ ಮಾಡುತ್ತಿರುವುದು ವಿಶೇಷ. ಇದನ್ನೂ ಓದಿ: ಸಾಲ ವಾಪಸ್ ಕೇಳಿದ್ದಕ್ಕೆ ಉದ್ಯಮಿ ಕಿಡ್ನ್ಯಾಪ್ – ನಿರ್ದೇಶಕ ನಂದಕಿಶೋರ್‌ಗೆ ಹಣ ಕೊಡಿಸಿದ್ದ ರೌಡಿಶೀಟರ್‌