Tag: Rashmika Mandana

  • ಮತ್ತೊಮ್ಮೆ ಒಟ್ಟಿಗೆ ಕಾಣಿಸಿಕೊಂಡ ರಶ್ಮಿಕಾ, ವಿಜಯ್ ದೇವರಕೊಂಡ

    ಮತ್ತೊಮ್ಮೆ ಒಟ್ಟಿಗೆ ಕಾಣಿಸಿಕೊಂಡ ರಶ್ಮಿಕಾ, ವಿಜಯ್ ದೇವರಕೊಂಡ

    ಮುಂಬೈ: ಟಾಲಿವುಡ್ ನಟ ವಿಜಯ್ ದೇವರಕೊಂಡ ಹಾಗೂ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಇಬ್ಬರೂ ಮುಂಬೈನ ರೆಸ್ಟೋರೆಂಟ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಈ ಜೋಡಿಗಳು ಇದೀಗ ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದವು, ಇದೀಗ ಮತ್ತೆ ಕಾಣಿಸಿಕೊಂಡಿರುವ ವೀಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಯೊಬ್ಬರು ಶೇರ್ ಮಾಡಿದ್ದು, ಈ ವೀಡಿಯೋಕ್ಕೆ ಭರ್ಜರಿ ಕಾಮೆಂಟ್ಸ್ ಹಾಗೂ ಲೈಕ್‌ಗಳು ಬರುತ್ತಿವೆ. ಅಷ್ಟೇ ಅಲ್ಲದೆ ಅಭಿಮಾನಿಗಳು ರಶ್ಮಿಕಾ ಹಾಗೂ ದೇವರಕೊಂಡ ಜೋಡಿಯನ್ನು ರಣಬೀರ್ ಹಾಗೂ ಆಲಿಯಾ ಜೋಡಿಗೆ ಹೋಲಿಸಿದ್ದಾರೆ. ಇವರಿಬ್ಬರ ಜೋಡಿಗೆ ಅಭಿಮಾನಿಗಳು ಫೀದಾ ಆಗಿದ್ದಾರೆ.

    ವೀಡಿಯೋದಲ್ಲಿ ಏನಿದೆ?: ಖಾಸಗಿ ರೆಸ್ಟೋರೆಂಟ್‌ ನಿಂದ ಭಾನುವಾರ ರಾತ್ರಿ ನಟ ವಿಜಯ್ ದೇವರಕೊಂಡ ಮೊದಲು ಹೊರಗೆ ಬಂದು ತಮ್ಮ ಕಾರನ್ನು ಹತ್ತಿದ್ದಾರೆ. ನಂತರದಲ್ಲಿ ನಟಿ ರಶ್ಮಿಕಾ ಮಂದಣ್ಣ ಹೊರಗೆ ಬಂದು ಕಾರನ್ನು ಹತ್ತಿರುವ ವೀಡಿಯೋ ವೈರಲ್ ಆಗುತ್ತಿದೆ. ಒಬ್ಬರು ಒಂದೇ ಹೋಟೆಲ್ ನಿಂದ ಹೊರಗೆ ಬಂದರೂ ಕೂಡಾ ಬೇರೆ ಬೇರೆಯಾಗಿ ಬಂದು ತಮ್ಮ ಕಾರ್ ಹತ್ತಿ ಅಲ್ಲಿಂದ ಹೊರಟು ಹೋಗಿದ್ದಾರೆ. ಇದನ್ನೂ ಓದಿ: ರಿಷಭ್ ಪಂತ್ ಈಗ ಉತ್ತರಾಖಂಡ್ ಬ್ರಾಂಡ್ ಅಂಬಾಸಿಡರ್

     

    View this post on Instagram

     

    A post shared by Manav Manglani (@manav.manglani)

    2018ರಲ್ಲಿ ತೆರೆಕಂಡ ಗೀತಾ ಗೋವಿಂದಂ ಚಿತ್ರದಲ್ಲಿ ಮೊದಲ ಬಾರಿಗೆ ಸ್ಕ್ರಿನ್  ಹಂಚಿಕೊಂಡಿದ್ದರು. 2019ರಲ್ಲಿ ತೆರೆ ಕಂಡ ಡಿಯರ್ ಕಾಮ್ರೆಡ್ ಸಿನೆಮಾದಲ್ಲಿ ಈ ಜೋಡಿ ಯಶಸ್ಸು ಕಂಡಿತ್ತು. ನಂತರ ಈ ಜೋಡಿಗಳ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ತಲೆಕೂದಲು ತೆಗೆದ ಫೋಟೋ ಶೇರ್ ಮಾಡಿ ಶಾಕಿಂಗ್ ಸುದ್ದಿ ಕೊಟ್ಟ ಮೋಹಿನಿ ನಟಿ

    ಸದ್ಯ ಪುರಿ ಜಗನ್ನಾಥ್ ಅವರ ಮುಂಬರುವ ಚಿತ್ರ ಲೈಗರ್‌ನಲ್ಲಿ ವಿಜಯ್ ಅವರು ನಟಿ ಅನನ್ಯಾ ಪಾಂಡೆಯ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ. ಇತ್ತೀಚೆಗಷ್ಟೇ ತೆರೆಕಂಡ ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನೆಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

  • ನನ್ನ ಕಣ್ಣಲ್ಲಿ  ಜಾದೂ ಇದೆ: ರಶ್ಮಿಕಾ ಮಂದಣ್ಣ

    ನನ್ನ ಕಣ್ಣಲ್ಲಿ ಜಾದೂ ಇದೆ: ರಶ್ಮಿಕಾ ಮಂದಣ್ಣ

    ಬೆಂಗಳೂರು: ಕಿರಿಕ್ ಬೆಡಗಿ, ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಈಗ ನನ್ನ ಕಣ್ಣಲ್ಲಿ ಜಾದೂ ಇದೆ ಎನ್ನುತ್ತಾ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿದ್ದಾರೆ.

    ರಶ್ಮಿಕಾ ತಮ್ಮ ಈ ಲೆಟೆಸ್ಟ್ ಫೋಟೋ ಶೇರ್ ಮಾಡಿದ್ದು, ನನ್ನ ಕಣ್ಣಲ್ಲಿ ಜಾದೂ ಇದೆ ಎಂದು ಬರೆದುಕೊಂಡಿದ್ದಾರೆ. ಫೋಟೋದಲ್ಲಿ ತಮ್ಮ ಕೈಯಲ್ಲಿರುವ ಟ್ಯಾಟೂವನ್ನು ಪ್ರದರ್ಶಿಸಿದ್ದಾರೆ. ರಶ್ಮಿಕಾರ ಮಾದಕ ನೋಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ನಟಿಯ ಈ ಲುಕ್ ಕಂಡು ಲೈಕ್ಸ್ ಜೊತೆ ಕಮೆಂಟ್ ಸಹ ಮಾಡುತ್ತಿದ್ದಾರೆ. ಇದನ್ನೂ ಓದಿ:  ಸಖತ್ ಸ್ಟೈಲಿಶ್ ಆಗಿ ಮುಂಬೈನಲ್ಲಿ ಕಾಣಿಸಿಕೊಂಡ ಯಶ್

    ಸೌತ್ ಬ್ಯೂಟಿ ಹಾಗೂ ನ್ಯಾಷನಲ್ ಕ್ರಶ್ ರಶ್ಮಿಕಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಫೇಮಸ್ ಆಗಿದ್ದಾರೆ. ಬಾಲಿವುಡ್ ಸಿನಿಮಾ, ಜಾಹೀರಾತಗಳಲ್ಲಿ ಮಿಂಚಲಾರಂಭಿಸಿದ್ದಾರೆ. ಜೊತೆಗೆ ಹೊಸ ಹಿಂದಿ ಸಿನಿಮಾ ಸಹ ರಶ್ಮಿಕಾ ಕೈ ಸೇರಿವೆ. ಇದೋಗ ಈ ನಟಿ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಾಟ್ ಫೋಟೋ ಹಂಚಿಕೊಳ್ಳುವುದ ಜೊತೆಗೆ ನನ್ನ ಕಣ್ಣಲ್ಲಿ ಜಾದು ಇದೆ ಎನ್ನುತ್ತಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ರಶ್ಮಿಕಾ ಅಭಿಮಾನಿಗಳಿಗೆ ತಮ್ಮ ಲೇಟೆಸ್ಟ್ ಫೋಟೋ ಹಂಚಿಕೊಳ್ಳುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುತ್ತಾರೆ. ಈಗಲೂ ಸಹ ಅವರ ಈ ಹಾಟ್ ಫೋಟೋ ನೆಟ್ಟಿಗರ ನಿದ್ದೆಗೆಡಿಸಿದೆ.

  • ಅಂಜನಿಪುತ್ರ ಚಿತ್ರದ ಅದ್ಧೂರಿ ಮೇಕಿಂಗ್ ರಿಲೀಸ್

    ಅಂಜನಿಪುತ್ರ ಚಿತ್ರದ ಅದ್ಧೂರಿ ಮೇಕಿಂಗ್ ರಿಲೀಸ್

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಅಂಜನಿಪುತ್ರ ಚಿತ್ರದ ಆಕರ್ಷಕ ಮೇಕಿಂಗ್ ರಿಲೀಸ್ ಆಗಿದೆ.

    ಮುಂದಿನ ವಾರ ಚಿತ್ರ ಬಿಡುಗಡೆಯಾಗೋದಕ್ಕೆ ಸಜ್ಜಾಗಿದೆ. ಈ ವರ್ಷದ ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿರುವ ಚಿತ್ರ ಅಂಜನಿಪುತ್ರ. ಎ. ಹರ್ಷ ನಿರ್ದೇಶನದ ಈ ಚಿತ್ರದಲ್ಲಿ ಪುನೀತ್ ಜೊತೆ ರಶ್ಮಿಕಾ ಮಂದಣ್ಣ ಜೋಡಿಯಾಗಿದ್ದಾರೆ. ವಾರದ ಹಿಂದೆ ಚಿತ್ರದ ಮೇಕಿಂಗ್‍ ವೊಂದು ರಿಲೀಸ್ ಆಗಿತ್ತು. ಇದೀಗ ಮತ್ತೊಂದು ಮೇಕಿಂಗ್ ರಿಲೀಸ್ ಆಗಿದ್ದು, ಅಂಜನಿಪುತ್ರ ಚಿತ್ರದ ಭರ್ಜರಿ ಪ್ರಚಾರ ಶುರುವಾಗಿದೆ.

    ಪುನೀತ್ ರಾಜ್ ಕುಮಾರ್ ಅವರ ಒಡೆತನದ ಪಿಆರ್ ಕೆ ಆಡಿಯೋ ಸಂಸ್ಥೆ ಮೊದಲ ಬಾರಿಗೆ ಹಾಡುಗಳ ಹಕ್ಕುಗಳನ್ನು ಪಡೆದಿದೆ. ಅಂಜನಿಪುತ್ರ ಚಿತ್ರದ ಮೂಲಕ ಮೊದಲ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದೆ.

    ಈ ಚಿತ್ರದಲ್ಲಿ ರಮ್ಯಾಕೃಷ್ಣ, ರವಿಶಂಕರ್, ಚಿಕ್ಕಣ್ಣ ಸೇರಿದಂತೆ ಬಹುದೊಡ್ಡ ತಾರಾಗಣವಿದ್ದು, ನಟಿ ಹರಿಪ್ರಿಯಾ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಎಂ.ಎನ್. ಕುಮಾರ್ ಅವರು ಬಂಡವಾಳ ಹೂಡಿದ್ದಾರೆ.