ತೆಲುಗು ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ್ದ `ಆರ್‌ಆರ್‌ಆರ್’ (RRR Film) ದೂರದ ಜಪಾನ್‌ನಲ್ಲಿ ಪ್ರಥಮ ಪ್ರದರ್ಶನ ಕಂಡ ಬೆನ್ನಲ್ಲೇ ಇದೀಗ `ಪುಷ್ಪ’ (Pushpa) ಚಿತ್ರದ ಪ್ರಿಮಿಯರ್ ಪ್ರದರ್ಶನಕ್ಕಾಗಿ ಮಾಸ್ಕೋಗೆ ಅಲ್ಲು ಅರ್ಜುನ್ ಮತ್ತು ರಶ್ಮಿಕಾ (Rashmika Mandanna) ಹಾರಿದ್ದಾರೆ. ಕರ್ನಾಟಕದಲ್ಲಿ ರಶ್ಮಿಕಾ ಬ್ಯಾನ್ ಬಗ್ಗೆ ಆಕ್ರೋಶ ಹೊರಹಾಕಿರುವ ಬೆನ್ನಲ್ಲೇ ನಟಿ ವಿದೇಶಕ್ಕೆ ಹಾರಿದ್ದಾರೆ.

`ಪುಷ್ಪ ದಿ ರೈಸ್’ ಟಾಲಿವುಡ್ ಮಾತ್ರವಲ್ಲದೇ ಬಹುಭಾಷೆಯಲ್ಲಿ ಈ ಸಿನಿಮಾ ಕಮಾಲ್ ಮಾಡಿತ್ತು. ಜೊತೆಗೆ ಕೋಟಿ ಕೋಟಿ ಲೂಟಿ ಮಾಡಿ, ಸಕ್ಸಸ್‌ಫುಲ್ ಪ್ರದರ್ಶನ ಕಂಡಿತ್ತು. ಇದೀಗ `ಆರ್‌ಆರ್‌ಆರ್’ ಚಿತ್ರದ ಹಾದಿಯಲ್ಲೇ `ಪುಷ್ಪ ದಿ ರೈಸ್’ ಚಿತ್ರತಂಡ ಹೆಜ್ಜೆ ಇಡುತ್ತಿದೆ. ಇತ್ತೀಚೆಗಷ್ಟೇ ಜಪಾನ್‌ನಲ್ಲಿ ರಾಜಮೌಳಿ ನಿರ್ದೇಶನದ ಚಿತ್ರ `ಆರ್‌ಆರ್‌ಆರ್’ ಪ್ರದರ್ಶನವಾಗಿತ್ತು. ಇದೀಗ ದೂರದ ಮಾಸ್ಕೋದಲ್ಲಿ ಪುಷ್ಪ ಚಿತ್ರದ ಪ್ರಿಮಿಯರ್ ಪ್ರದರ್ಶನವಾಗಲಿದೆ. ಇದನ್ನೂ ಓದಿ: ಪ್ರಭಾಸ್ ಜೊತೆಗಿನ ಡೇಟಿಂಗ್ ವಿಚಾರಕ್ಕೆ ಮೌನ ಮುರಿದ ಕೃತಿ ಸನೂನ್
Team #PushpaTheRise Landed in Russia ????????
Meet the team at the Russian language Special premieres on Dec 1st at Moscow & Dec 3rd at St. Petersburg ????????#PushpaInRussia from Dec 8th ????
Icon Star @alluarjun @iamRashmika @aryasukku @ThisIsDSP @MythriOfficial @4SeasonsCreati1 pic.twitter.com/Mt6xucws4h
— Pushpa (@PushpaMovie) November 30, 2022
ಡಿಸೆಂಬರ್ 1ರಂದು ಮಾಸ್ಕೋದಲ್ಲಿ ರಷ್ಯನ್ ಭಾಷೆಯಲ್ಲಿ `ಪುಷ್ಪ’ ತೆರೆಕಾಣಲಿದೆ. ಈ ಸಿನಿಮಾಗಾಗಿ ಪುಷ್ಪ ಮತ್ತು ಶ್ರೀವಲ್ಲಿ ಮಾಸ್ಕೋದಲ್ಲಿ ಈಗಾಗಲೇ ಬೀಡು ಬಿಟ್ಟಿದ್ದಾರೆ. ಚಿತ್ರತಂಡಕ್ಕೆ ಮಾಸ್ಕೋ ಜನರು ವೆಲ್‌ಕಮ್ ಮಾಡಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

`ಪುಷ್ಪ’ ಸಿನಿಮಾ ರಷ್ಯನ್ ಭಾಷೆಯಲ್ಲಿ ಡಬ್ ಆಗಿದೆ. ಡಿಸೆಂಬರ್ 1ಕ್ಕೆ ಪ್ರದರ್ಶನವಾಗುತ್ತಿರುವ ಈ ಚಿತ್ರವನ್ನು ಮಾಸ್ಕೋ ಚಿತ್ರಪ್ರೇಮಿಗಳು ಅಪ್ಪಿ ಒಪ್ಪಿಕೊಳ್ಳತ್ತಾರಾ ಎಂಬುದನ್ನ ಕಾದುನೋಡಬೇಕಿದೆ.



ವಿಜಯ್ ಅವರ ʻಲೈಗರ್ʼ ಚಿತ್ರದ ಅರೆ ನಗ್ನ ಫೋಟೋಗೆ ರಶ್ಮಿಕಾ ಪ್ರತಿಕ್ರಿಯಿಸಿದ್ದಾರೆ. ವಿಜಯ್, ಇನ್ಮುಂದೆ ನಿಮ್ಮ ಹೆಸರು ಲೈಗರ್ ನಿಮಗೆ ನಮ್ಮ ಪ್ರೀತಿ ಮತ್ತು ಬೆಂಬಲವಿದೆ. ನೀವು ಏನು ಮಾಡಬಹುದು ಎಂಬುದನ್ನು ಜಗತ್ತಿಗೆ ತೋರಿಸಿ. ಆಲ್ ದಿ ಬೆಸ್ಟ್ ಎಂದು ಬರೆದುಕೊಂಡಿದ್ದಾರೆ. ಇನ್ನು ರಶ್ಮಿಕಾ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ವಿಜಯ್, ಋಷಿ `ಗೀತ ಗೋವಿಂದಂ’ ಚಿತ್ರದ ಕಾಲದಿಂದಲೂ ನೀವು ನನಗೆ ಸ್ಫೂರ್ತಿಯಾಗಿದ್ದೀರಿ. ಜಗತ್ತು ʻಲೈಗರ್ʼ ಮಿಂಚನ್ನು ನೋಡುತ್ತದೆ ಎಂದು ಪೋಸ್ಟ್ ಮಾಡಿದ್ದಾರೆ. ಇದೀಗ ಅವರಿಬ್ಬರ ಪೋಸ್ಟ್ ವೈರಲ್ ಆಗಿದೆ. ಈ ಬಗ್ಗೆ ಅಭಿಮಾನಿಗಳು ನಾನಾ ರೀತಿಯಲ್ಲಿ ಚರ್ಚೆ ನಡೆಸುತ್ತಿದ್ದಾರೆ.
ನಮ್ಮಿಬ್ಬರ ನಡುವೆ ಏನು ಇಲ್ಲ ಎಂದು ಹೇಳಿಕೊಳ್ಳುವ ಈ ಜೋಡಿ. ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಾ ನಮ್ಮ ನಡುವೆ ಪ್ರೀತಿ ಎಂಬ ರೀತಿಯಲ್ಲಿ ಕಾಣಿಸಿಕೊಳ್ತಿರುತ್ತಾರೆ. ಒಟ್ನಲ್ಲಿ ರಶ್ಮಿಕಾ, ವಿಜಯ್ ವಿಶ್ ಮಾಡಿರುವ ರೀತಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.


















ದಿಲ್ ರಾಜು ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಹೊಸ ಚಿತ್ರಕ್ಕೆ ಫಸ್ಟ್ ಟೈಮ್ ದಳಪತಿ ವಿಜಯ್‌ಗೆ ನಾಯಕಿಯಾಗಿ ರಶ್ಮಿಕಾ ನಟಿಸುತ್ತಿದ್ದಾರೆ. ರಶ್ಮಿಕಾ ಕೂಡ ದಳಪತಿ ವಿಜಯ್ ಅವರ ಅಭಿಮಾನಿಯಾಗಿದ್ದು, ಇದೇ ಖುಷಿಯಲ್ಲಿ ಹೊಸ ಚಿತ್ರದ ಮುಹೂರ್ತದ ವೇಳೆ ರಶ್ಮಿಕಾ ಖುಷಿ ಖುಷಿಯಾಗಿ ಲಟಿಕೆ ಮುರಿದು ವಿಜಯ್‌ಗೆ ದೃಷ್ಠಿ ತೆಗೆದಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
`ಪುಷ್ಪ’ ಸಕ್ಸಸ್ ನಂತರ ಡೈರೆಕ್ಟರ್ ವಂಶಿ ಪಡಿಪಲ್ಲಿ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ದಳಪತಿ ವಿಜಯ್ ನಟನೆಯ ೬೬ನೇ ಚಿತ್ರ ತೆಲುಗು ಮತ್ತು ತಮಿಳು ಎರಡು ಭಾಷೆಗಳಲ್ಲಿ ಈ ಚಿತ್ರ ಮೂಡಿ ಬರಲಿದೆ. ವಿಜಯ್ ಮತ್ತು ರಶ್ಮಿಕಾ ಕಾಂಬಿನೇಷನ್‌ನ ಚಿತ್ರ ಗ್ರ್ಯಾಂಡ್ ಮುಹೂರ್ತ ನೆರೆವೇರಿದೆ. ವಿಜಯ್ ನಟನೆಯ `ಬಿಗಿಲ್’, `ಸರ್ಕಾರ್’ ಹೀಗೆ ಬ್ಯಾಕ್ ಟು ಬ್ಯಾಕ್ ಚಿತ್ರಗಳು ಹಿಟ್ ಆಗಿದೆ. ಈಗ ನಿರ್ದೇಶಕ ವಂಶಿ ಪಡಿಪಲ್ಲಿ ವಿಭಿನ್ನ ಕಥೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದನ್ನು ಓದಿ: