Tag: rash driving

  • ಬೆಂಗಳೂರಲ್ಲಿ ಚಾಲಕನ ರ‍್ಯಾಶ್ ಡ್ರೈವಿಂಗ್‌ಗೆ 4ರ ಬಾಲಕ ಬಲಿ

    ಬೆಂಗಳೂರಲ್ಲಿ ಚಾಲಕನ ರ‍್ಯಾಶ್ ಡ್ರೈವಿಂಗ್‌ಗೆ 4ರ ಬಾಲಕ ಬಲಿ

    ಬೆಂಗಳೂರು: ಚಾಲಕನ ರ‍್ಯಾಶ್ ಡ್ರೈವಿಂಗ್‌ಗೆ (Rash Driving) ನಾಲ್ಕು ವರ್ಷದ ಬಾಲಕ (Boy) ಬಲಿಯಾದ ಘಟನೆ ಜೈ ಭೀಮಾನಗರದ ಮುರಗೇಶ್ ಪಾಳ್ಯದಲ್ಲಿ ನಡೆದಿದೆ.

    ಹಳೆಯ ಏರ್‌ಪೋರ್ಟ್ ರಸ್ತೆಯಲ್ಲಿ (Old Airport Road) ಬೆಳಗ್ಗೆ 10:30ರ ಸುಮಾರಿಗೆ ಘಟನೆ ನಡೆದಿದ್ದು, ಆರವ್ (4) ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತ ಆರವ್ ಮನೆ ಮುಂದೆಯ ರಸ್ತೆಯಲ್ಲಿ ಆಟವಾಡುತ್ತಿದ್ದ ಸಂದರ್ಭ ರ‍್ಯಾಶ್ ಡ್ರೈವಿಂಗ್ ಮಾಡಿಕೊಂಡ ಬಂದ ಚಾಲಕ ಬಾಲಕನಿಗೆ ಡಿಕ್ಕಿ ಹೊಡೆದಿದ್ದಾನೆ. ಇದನ್ನೂ ಓದಿ: ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಉದ್ವಿಗ್ನ – ಪ್ರತಿಭಟನಾಕಾರರು, ಪೊಲೀಸರ ನಡುವೆ ಘರ್ಷಣೆ

    ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬಾಲಕನ ದೇಹ ಛಿದ್ರವಾಗಿದೆ. ಸದ್ಯ ಬಾಲಕನ ಮೃತದೇಹವನ್ನು ಮಣಿಪಲ್ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ರ‍್ಯಾಶ್ ಡ್ರೈವಿಂಗ್ ಮಾಡಿದ ಕಾರು ಚಾಲಕನನ್ನು ಜೀವನ್ ಭೀಮಾನಗರ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಕಾರು ಅಪಘಾತದಲ್ಲಿ ಕಿರುತೆರೆ ನಟಿ ಪವಿತ್ರಾ ಜಯರಾಂ ದುರ್ಮರಣ

  • ಡೇರ್ ಡೆವಿಲ್ ಸ್ಟಂಟ್ ಮಾಡಿದ ನಟ ಪವನ್ – ಕೇಸ್ ದಾಖಲಿಸಿದ ಪೊಲೀಸರು

    ಡೇರ್ ಡೆವಿಲ್ ಸ್ಟಂಟ್ ಮಾಡಿದ ನಟ ಪವನ್ – ಕೇಸ್ ದಾಖಲಿಸಿದ ಪೊಲೀಸರು

    ಹೈದರಾಬಾದ್: ಕಾರಿನ ರೂಫ್‌ನಲ್ಲಿ ಡೇರ್ ಡೆವಿಲ್ ಸ್ಟಂಟ್ (Car dare Devil Stunt) ಮಾಡಿದ್ದ ನಟ ಪವನ್ ಕಲ್ಯಾಣ್ ವಿರುದ್ಧ ಪೊಲೀಸರು ಕೇಸ್ (Police Case) ದಾಖಲಿಸಿದ್ದಾರೆ. ಅತಿವೇಗದ ಕಾರು ಚಾಲನೆ ಮತ್ತು ಇತರರ ಜೀವ ಹಾಗೂ ವೈಯಕ್ತಿಕ ಸುರಕ್ಷತೆಗೆ ಅಪಾಯ ತಂದೊಡ್ಡಿದ್ದ ಆರೋಪದ ಮೇಲೆ ಪವನ್ ಕಲ್ಯಾಣ್ (Pawan Kalyan) ವಿರುದ್ಧ ಎಫ್‌ಐಆರ್ (FIR) ದಾಖಲಿಸಲಾಗಿದೆ.

    ಕಳೆದ ವಾರ ಪವನ್ ಕಲ್ಯಾಣ್ ವೇಗವಾಗಿ ಚಲಿಸುತ್ತಿದ್ದ ಕಾರಿನ ರೂಫ್ ಮೇಲೆ ಕುಳಿತಿದ್ದರು. ಅದೇ ಕಾರಿನಲ್ಲಿ ಅಕ್ಕಪಕ್ಕ ಐದಾರು ಜನ ಡೋರ್ ಹಿಡಿದು ನಿಂತಿದ್ದರು. ಈ ವೀಡಿಯೋ ಜಾಲತಾಣದಲ್ಲಿ (Social Media) ವೈರಲ್ ಆಗಿತ್ತು. ಇದನ್ನೂ ಓದಿ: ಡ್ಯಾನ್ಸ್ ಮಾಡ್ಬೇಕು ಸಾಂಗ್ ಹಾಕಿ ಅಂದಿದ್ದೆ ತಪ್ಪಾ? – ದಲಿತ ಯುವಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು

    ಈ ವೇಳೆ ಬೈಕ್ ಸವಾರನೊಬ್ಬ ನಿಯಂತ್ರಣತಪ್ಪಿ ಬಿದ್ದಿದ್ದಾನೆ ಎಂದು ದೂರುದಾರ ಪಿ.ಶಿವಕುಮಾರ್ ಎಂಬವರು ದೂರು ನೀಡಿದ್ದಾರೆ. ಡೇರ್ ಡೆವಿಲ್ ಸ್ಟಂಟ್‌ನಲ್ಲಿ ಭಾಗಿಯಾಗಿದ್ದ ಪವನ್ ಕಲ್ಯಾಣ್ ಮತ್ತು ಇತರರ ವಿರುದ್ಧ ಪೊಲೀಸ್ ಕ್ರಮಕ್ಕೆ ಅವರು ಒತ್ತಾಯಿಸಿದ್ದಾರೆ. ಶಿವಕುಮಾರ್ ದೂರಿನ ಮೇರೆಗೆ ಕೇಸ್ ದಾಖಲಾಗಿದೆ. ಇದನ್ನೂ ಓದಿ: ‘ಬಿಗ್ ಬಾಸ್’ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ: ಅಚ್ಚರಿಯ ಮತ್ತೊಂದು ಹೆಸರು

    ಪವನ್ ಕಲ್ಯಾಣ್ ಅವರು ಕಾರಿನ ರೂಫ್‌ನಲ್ಲಿ ಕುಳಿತಿದ್ದರೂ ಚಾಲಕ ಅದನ್ನು ಲೆಕ್ಕಿಸಿದೇ ಮಿತಿ ಮೀರಿದ ವೇಗದಲ್ಲಿ ಚಲಿಸುತ್ತಿದ್ದ. ಅಲ್ಲದೇ ಇತರ ಬೆಂಗಾವಲು ವಾಹನಗಳೂ ಇದೇ ವೇಗದಲ್ಲಿ ಅವರನ್ನು ಹಿಂಬಾಲಿಸಿದ್ದವು.

    ಜನಸೇನಾ ಪಕ್ಷದ (Jana Sena Party) ಅಧ್ಯಕ್ಷರಾಗಿರುವ ಪವನ್ ಕಲ್ಯಾಣ್ ಕಳೆದ ವಾರ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಇಪ್ಪಟ್ಟಂ ಗ್ರಾಮಕ್ಕೆ ಭೇಟಿ ನೀಡಿದ್ದರು. ಅಲ್ಲಿ ರಸ್ತೆ ಅಗಲೀಕರಣ ಮಾಡುವುದಕ್ಕಾಗಿ ಮನೆಗಳನ್ನು ಕೆಡವಲಾಗಿದೆ ಎಂಬ ಅರೋಪ ಕೇಳಿ ಬಂದಿದ್ದರಿಂದ ಸ್ಥಳೀಯರನ್ನು ಭೇಟಿ ಮಾಡಲು ತೆರಳಿದ್ದರು.

    Live Tv
    [brid partner=56869869 player=32851 video=960834 autoplay=true]

  • ರ‍್ಯಾಶ್ ಡ್ರೈವಿಂಗ್ ಮಾಡಿದ್ರೆ ಭಾರೀ ದಂಡದ ಜೊತೆ ಜೈಲು ಶಿಕ್ಷೆ

    ರ‍್ಯಾಶ್ ಡ್ರೈವಿಂಗ್ ಮಾಡಿದ್ರೆ ಭಾರೀ ದಂಡದ ಜೊತೆ ಜೈಲು ಶಿಕ್ಷೆ

    ಬೆಂಗಳೂರು: 4 ವರ್ಷ ಮೇಲ್ಪಟ್ಟ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯ. ಇಲ್ಲದಿದ್ರೆ ದಂಡದ ಜೊತೆ ಡಿಎಲ್ ಸಸ್ಪೆಂಡ್ ಮಾಡುವ ಆದೇಶ ಹೊರಡಿಸಿದ್ದ ಸಾರಿಗೆ ಇಲಾಖೆ ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ರ‍್ಯಾಶ್ ಡ್ರೈವಿಂಗ್ ಮಾಡುವವರಿಗೆ ಭಾರೀ ದಂಡದ ಜೊತೆ ಜೈಲು ಶಿಕ್ಷೆ ವಿಧಿಸುವ ಸಂಬಂಧ ಆದೇಶ ಹೊರಡಿಸಿದೆ.

    ವೀಲಿಂಗ್, ಸೈಲೆನ್ಸರ್ ಅಲ್ಟ್ರೇಷನ್, ಅಡ್ಡಾದಿಡ್ಡಿ ಚಾಲನೆ, ಅಪಾಯಕಾರಿ ಚಾಲನೆ ಮಾಡಿದರೆ ಅಪರಾಧ ದಂಡ ಸಂಹಿತೆ(ಸಿಆರ್‌ಪಿಸಿ) ಸೆಕ್ಷನ್ 107ರ ಆಡಿ ಕೇಸ್ ದಾಖಲಿಸಲಾಗುತ್ತಿದೆ. ಮೊದಲ ಬಾರಿ ನಿಯಮ ಉಲ್ಲಂಘನೆ ಮಾಡಿದರೆ 50 ಸಾವಿರದಿಂದ 2 ಲಕ್ಷ ಮೊತ್ತದ ಬಾಂಡ್ ಬರೆದು ಕೊಡಬೇಕಾಗುತ್ತದೆ. ಆರು ತಿಂಗಳ ಒಳಗೆ ಮತ್ತೆ ನಿಯಮ ಉಲ್ಲಂಘಿಸಿದರೆ ಈ ಮೊತ್ತ ಭರಿಸಬೇಕು. ಜೊತೆಗೆ ಜೈಲು ಸೇರಬೇಕಾಗುತ್ತದೆ. ಇದನ್ನೂ ಓದಿ: ಬೆಂಗಳೂರಲ್ಲಿ ದಂಡ ದಂಡ – ಪೊಲೀಸ್ , ಮಾರ್ಷಲ್ ಆಯ್ತು ಈಗ ಆರ್‌ಟಿಒ ಸರದಿ

    ಸಿಆರ್‌ಪಿಸಿ 107ರ ಆಡಿ ಕೇಸ್ ದಾಖಲು ಮಾಡಿದರೆ ಪಾಸ್ ಪೋರ್ಟ್ ಕ್ಲಿಯರ್ ಆಗುವುದಿಲ್ಲ. ವಿದ್ಯಾಭ್ಯಾಸ, ವಿದೇಶಿ ಪ್ರಯಾಣಕ್ಕೆ ಕುತ್ತು ಬರಲಿದೆ. ಕಳೆದು ಒಂದು ವಾರದಲ್ಲಿ 14 ಮಂದಿ ವಾಹನ ಸವಾರರ ಮೇಲೆ ಸಿಆರ್‌ಪಿಸಿ 107ರ ಅಡಿ ಕೇಸ್ ದಾಖಲಾಗಿದೆ.

  • ವೃದ್ಧ ದಂಪತಿ ಮುಂದೆ ಪ್ಯಾಂಟ್ ಬಿಚ್ಚಿ ವಿಕೃತಿ ಮೆರೆದ ಮಹಾನುಭಾವ

    ವೃದ್ಧ ದಂಪತಿ ಮುಂದೆ ಪ್ಯಾಂಟ್ ಬಿಚ್ಚಿ ವಿಕೃತಿ ಮೆರೆದ ಮಹಾನುಭಾವ

    ಬೆಂಗಳೂರು: ಮಗನ ರ‍್ಯಾಶ್ ಡ್ರೈವಿಂಗ್ ಫೋಟೋ ತೆಗೆದಿದ್ದಕ್ಕೆ ಪತ್ನಿ ಪೊರಕೆ ಹಿಡಿದು ರೋಡಿನಲ್ಲಿ ನಿಂತರೆ, ಇತ್ತ ಪತಿ ಫೋಟೋಶೂಟ್ ಮಾಡಿಕೋ ಎಂದು ಪ್ಯಾಂಟ್ ಬಿಚ್ಚಿ ವಿಕೃತಿ ಮೆರೆದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಕ್ಷುಲ್ಲಕ ಕಾರಣಕ್ಕೆ ವೃದ್ಧ ದಂಪತಿ ಮೇಲೆ ಪತ್ನಿ ಪೊರಕೆಯಲ್ಲಿ ಹಲ್ಲೆ ಮಾಡಲು ಮುಂದಾಗಿದ್ದು, ಪತಿ ಪ್ಯಾಂಟ್ ಬಿಚ್ಚಿ ವಿಕೃತಿ ಮೆರೆದಿದ್ದಾನೆ. ವೃದ್ಧ ದಂಪತಿ ಮೇಲಾಗಿರುವ ದೌರ್ಜನ್ಯ ಸಿಸಿಟಿಯಲ್ಲಿ ಸೆರೆಯಾಗಿದ್ದು, ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ವೃದ್ಧ ದಂಪತಿ ಆಗಿರುವ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಬೆನೆಟ್ ಮತ್ತು ಸುಶೀಲಾ ಅರಕೆರೆಯ ಸರಸ್ವತಿ ಪುರಂನಲ್ಲಿ ವಾಸವಾಗಿದ್ದಾರೆ. ಪಕ್ಕದ ಮನೆಯ ಮಹೇಂದ್ರ ಕಶ್ಯಪ್ ಹಾಗೂ ಭಾಗ್ಯ ದಂಪತಿ ಮಗ ಮೈನರ್ ಆಗಿದ್ದು, ನಿತ್ಯ ಮನೆ ಮುಂದೆ ರ‍್ಯಾಶ್ ಡ್ರೈವಿಂಗ್ ಮಾಡುತ್ತಿರುತ್ತಾನೆ. ಯುವಕನಿಗೆ ಬುದ್ಧಿವಾದ ಹೇಳಿದರೂ ಕಿವಿಗೆ ಹಾಕಿಕೊಳ್ಳದಕ್ಕೆ ಬೆನೆಟ್ ಫೋಟೋ ತೆಗೆದುಕೊಂಡಿದ್ದಾರೆ.

    ಮಗನ ಫೋಟೋ ತೆಗೆದ ಕಾರಣಕ್ಕೆ ನಮ್ಮ ಮೇಲೆ ಮಹೇಂದ್ರ ಕಶ್ಯಾಪ್ ದಂಪತಿ ಪೋರಕೆ ಹಾಗೂ ದೊಣ್ಣೆಗಳಿಂದ ಹಲ್ಲೆಗೆ ಮುಂದಾಗಿದಲ್ಲದೇ ಪ್ಯಾಂಟ್ ಬಿಚ್ಚಿ ವಿಕೃತಿ ಮೆರೆದ್ದಾರೆ ಎಂದು ಬೆನೆಟ್ ಆರೋಪಿಸಿದ್ದಾರೆ.

    ಬೆನೆಟ್ ತಮ್ಮ ಮೇಲಾದ ದೌರ್ಜನ್ಯದ ಸಿಸಿಟಿವಿ ದೃಶ್ಯಗಳಿಡಿದು ಹುಳಿಮಾವು ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದಾರೆ. ಆದರೆ ಪೊಲೀಸರು ಮಾತ್ರ ದೂರು ದಾಖಲಿಸಿಕೊಂಡಿಲ್ಲ. ಹುಳಿಮಾವು ಪೊಲೀಸರು ದೂರು ದಾಖಲಿಸಿಕೊಂಡಿಲ್ಲ ಎನ್ನುವ ಕಾರಣಕ್ಕೆ ವೃದ್ಧ ದಂಪತಿ ಕಮಿಷನರ್ ಕಚೇರಿಗೆ ಬಂದಿದ್ದಾರೆ. ಕಮಿಷನರ್ ಕಚೇರಿಯಲ್ಲೂ ಸಮರ್ಪಕವಾಗಿ ಉತ್ತರ ಸಿಕ್ಕಿದೇ ಇರುವುದರಿಂದ ವೃದ್ಧ ದಂಪತಿ ನ್ಯಾಯಕ್ಕಾಗಿ ಅಲೆದಾಡುವಂತಾಗಿದೆ.

     

  • ಕಾರ್ ಚಾಲನೆ ವೇಳೆ ಸೆಕ್ಸ್- ಜೋಡಿಗೆ ಆರು ತಿಂಗಳು ಜೈಲು ಶಿಕ್ಷೆ

    ಕಾರ್ ಚಾಲನೆ ವೇಳೆ ಸೆಕ್ಸ್- ಜೋಡಿಗೆ ಆರು ತಿಂಗಳು ಜೈಲು ಶಿಕ್ಷೆ

    ಮ್ಯಾಡ್ರಿಡ್: ಸ್ಪ್ಯಾನಿಷ್ ಮೋಟರ್ ವೇನಲ್ಲಿ ಕಾರು ಚಲಾಯಿಸುತ್ತಿದ್ದಾಗ ದಂಪತಿ ಸೆಕ್ಸ್ ಮಾಡಿದ್ದಕ್ಕೆ ಆರು ತಿಂಗಳು ಜೈಲು ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ.

    ಕಳೆದ ವರ್ಷ ಸೆಗೊವಿಯಾ ಪ್ರಾಂತ್ಯದ ವಿಲ್ಕಾಸ್ಟಿನ್ ಬಳಿ ಎಪಿ-6 ರಸ್ತೆಯ ಮಧ್ಯೆ ಸಂಚರಿಸುತ್ತಲೇ ದಂಪತಿ ಸೆಕ್ಸ್ ಮಾಡಿದ್ದು, ಈ ವಿಡಿಯೋವನ್ನು ಇನ್ನೊಬ್ಬ ವಾಹನ ಸವಾರ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದನು.

    ವಿಡಿಯೋದಲ್ಲಿ ಬೆತ್ತಲೆಯಾಗಿ ಕಾಣಿಸಿಕೊಂಡಿರುವ ಮಹಿಳೆ ತನ್ನ ಸಂಗಾತಿಯ ತೊಡೆ ಮೇಲೆ ಕುಳಿತು ರಸ್ತೆಯ ಮಧ್ಯೆ ಕಾರಿನಲ್ಲಿ ಮಾತುಕತೆ ನಡೆಸುತ್ತಿದ್ದಳು. ಅಲ್ಲದೆ, ಇತರ ವಾಹನಗಳಿಗಿಂತ ವೇಗವಾಗಿ ವಾಹನ ಚಲಾಯಿಸುತ್ತಿದ್ದರು. ಸ್ಲೋ ಲೈನ್ ನಲ್ಲಿ ವೇಗವಾಗಿ ಕಾರ್ ಚಲಾಯಿಸುತ್ತಿರುವದನ್ನು ಕಂಡು ಇತರ ವಾಹನ ಸವಾರರು ಬೆಚ್ಚಿಬಿದ್ದಿದ್ದರು.

    ಈ ರೀತಿ ರ‍್ಯಾಶ್ ಡ್ರೈವಿಂಗ್ ಮಾಡುತ್ತ, ಕಾರ್ ನಲ್ಲೇ ಸೆಕ್ಸ್ ಮಾಡುತ್ತಿದ್ದ ಜೋಡಿಯ ಮಾಹಿತಿಗಾಗಿ ಪೊಲೀಸರು ತಡಕಾಡುತ್ತಿದ್ದರು. ನಂತರ ಚಾಲಕನನ್ನು ಪತ್ತೆ ಹಚ್ಚಿದ್ದು, ವಿಚಾರಣೆ ನಡೆಸಿದಾಗ ರ‍್ಯಾಶ್ ಡ್ರೈವಿಂಗ್ ಕುರಿತು ಒಪ್ಪಿಕೊಂಡಿದ್ದಾನೆ. ನಂತರ ತನ್ನ ಪ್ರಿಯತಮೆಯ ಹೆಸರು ಹೇಳಿದ್ದಾನೆ. ಅಜಾಗರೂಕತೆಯಿಂದ ವಾಹನ ಚಲಾಯಿಸಿದ ಆರೋಪವನ್ನು ಈ ಜೋಡಿ ಒಪ್ಪಿಕೊಂಡಿದ್ದು, ಆರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. ಅಲ್ಲದೆ ಎರಡು ವರ್ಷಗಳ ಕಾಲ ವಾಹನ ಚಲಾಯಿಸುವುದನ್ನು ನಿಷೇಧಿಸಲಾಗಿದೆ.

    ಸೆಗೋವಿಯಾದ ನ್ಯಾಯಾಧೀಶರು ನೀಡಿದ ಆದೇಶದಲ್ಲಿ ಕಾರ್ ಜಿಗ್-ಜ್ಯಾಗಡ್ ಎಂಬ ಸಾಲುಗಳನ್ನು ಸೇರಿಸಿದ್ದಾರೆ. ಅಲ್ಲದೆ ಡ್ರೈವರ್ ಮೇಲೆ ಆತನ ಗೆಳತಿ ಕುಳಿತುಕೊಂಡು ಲೈಂಗಿಕ ಕ್ರಿಯೆ ನಡೆಸಿದ್ದಾಳೆ. ಇದನ್ನು ಕಂಡ ಇತರ ವಾಹನ ಸವಾರರು ನಿಬ್ಬೆರಗಾಗಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

     

    ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗಿರುವ ವಿಡಿಯೋವನ್ನು ಮತ್ತೊಬ್ಬ ವಾಹನ ಚಾಲಕ ಚಿತ್ರೀಕರಿಸಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಎಚ್ಚೆತ್ತುಕೊಂಡಿದ್ದು, ನಂತರ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಈ ರೀತಿಯ ವರ್ತನೆಗೆ ಸ್ಪೇನ್‍ನ ಕಾನೂನಿನ ಪ್ರಕಾರ 2 ವರ್ಷ ಜೈಲು ಶಿಕ್ಷೆ, 500 ಯೂರೋ(39,201 ರೂ.) ದಂಡ ವಿಧಿಸಬಹುದಾಗಿದೆ.

  • ವೋಕ್ಸ್ ವೇಗನ್ ಕಾರಿನಲ್ಲಿ ಅಡ್ಡಾದಿಡ್ಡಿ ಚಾಲನೆ- ವಾಹನ ಸವಾರನನ್ನ ನಡುರಸ್ತೆಯಲ್ಲೇ ನಿಂದಿಸಿದ ಮಹಿಳೆ

    ವೋಕ್ಸ್ ವೇಗನ್ ಕಾರಿನಲ್ಲಿ ಅಡ್ಡಾದಿಡ್ಡಿ ಚಾಲನೆ- ವಾಹನ ಸವಾರನನ್ನ ನಡುರಸ್ತೆಯಲ್ಲೇ ನಿಂದಿಸಿದ ಮಹಿಳೆ

     

    ಹೈದರಾಬಾದ್: ಮಹಿಳೆಯೊಬ್ಬರು ಅಡ್ಡಾದಿಡ್ಡಿ ಕಾರ್ ಚಾಲನೆ ಮಾಡಿದ್ದಲ್ಲದೆ ವ್ಯಕ್ತಿಯನ್ನ ನಡುರಸ್ತೆಯಲ್ಲೇ ನಿಂದಿಸಿರೋ ಘಟನೆ ಬೇಗಂಪೇಟ್‍ನಲ್ಲಿ ನಡೆದಿದೆ.

    ಗುರುವಾರದಂದು ಮಹಿಳೆಯೊಬ್ಬರು ವೋಕ್ಸ್ ವೇಗನ್ ಕಾರನ್ನ ಅಡ್ಡಾದಿಡ್ಡಿ ಚಲಾಯಿಸಿದ್ದಾರೆ. ರಸ್ತೆಯಲ್ಲಿ ಮನಬಂದಂತೆ  ಡ್ರೈವಿಂಗ್ ಮಾಡಿದ್ದು, ಹಲವು ವಾಹನ ಸವಾರರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಮಹಿಳೆ ದ್ವಿಚಕ್ರ ವಾಹನ ಸವಾರರೊಬ್ಬರನ್ನ  ಬಾಯಿಗೆ ಬಂದಂತೆ ನಿಂದಿಸಿದ್ದಾರೆ.

    ಪ್ರತ್ಯಕ್ಷದರ್ಶಿಯೊಬ್ಬರು ಈ ಘಟನೆಯ ದೃಶ್ಯವನ್ನ ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸದ್ಯ ಈ ವಿಡಿಯೋ ವೈರಲ್ ಆಗಿದೆ.

    ಕಾರನ್ನ ಮನಬಂದಂತೆ ಚಾಲನೆ ಮಾಡಿದ ಮಹಿಳೆಯನ್ನ ಬೇಗಂಪೇಟ್‍ನಲ್ಲಿ ವ್ಯಕ್ತಿಯೊಬ್ಬರು ತಡೆದು ಪ್ರಶ್ನಿಸಿದ್ದಾರೆ. ಆದ್ರೆ ಆಕೆ ಆ ವ್ಯಕ್ತಿಯ ಮೇಲೆಯೇ ಮಹಿಳೆ ತಿರುಗಿ ಬಿದ್ದಿದ್ದು ಬಾಯಿಗೆ ಬಂದಂತೆ ಬೈದಿದ್ದಾರೆ. ಸ್ಥಳದಲ್ಲಿದ್ದ ಟ್ರಾಫಿಕ್ ಪೊಲೀಸರು ಮಹಿಳೆಯನ್ನ ಸಮಾಧಾನ ಮಾಡಲು ಯತ್ನಿಸೋದನ್ನ ವಿಡಿಯೋದಲ್ಲಿ ಕಾಣಬಹುದು.

    ಅಡ್ಡಾದಿಡ್ಡಿ ಡ್ರೈವಿಂಗ್ ಮಾಡಿದ್ದಲ್ಲದೆ ಸಂಚಾರಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಎಸ್‍ಆರ್ ನಗರ ಟ್ರಾಫಿಕ್ ಇನ್ಸ್ ಪೆಕ್ಟರ್ ನೀಡಿದ ದೂರಿನನ್ವಯ ಮಹಿಳೆಯ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.

    https://www.youtube.com/watch?time_continue=61&v=LrTxh66-jf8

    https://www.youtube.com/watch?time_continue=82&v=aATJGCfn7X8