Tag: Rasgulla

  • ರಸಗುಲ್ಲ ತಿನ್ನುವ ವಿಚಾರಕ್ಕೆ ಗಲಾಟೆ – ವ್ಯಕ್ತಿ ಸಾವು

    ರಸಗುಲ್ಲ ತಿನ್ನುವ ವಿಚಾರಕ್ಕೆ ಗಲಾಟೆ – ವ್ಯಕ್ತಿ ಸಾವು

    ಲಕ್ನೋ: ಮದುವೆಯೊಂದರಲ್ಲಿ (Wedding) ರಸಗುಲ್ಲ (Rasgulla) ತಿನ್ನುವ ವಿಚಾರವಾಗಿ ನಡೆದ ಜಗಳವು ವಿಕೋಪಕ್ಕೆ ತಿರುಗಿ, ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ (Uttara Pradesh) ಮೈನ್‍ಪುರಿಯಲ್ಲಿ ನಡೆದಿದೆ.

    ಮೃತನನ್ನು ಹರ್ಯಾಣದ ರಣವೀರ್ ಸಿಂಗ್ (50) ಎಂದು ಗುರುತಿಸಲಾಗಿದೆ. ಮೈನ್‍ಪುರಿ ಜಿಲ್ಲೆಯ ಕುರವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಬಿಕಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

    ಮದುವೆಯೊಂದರಲ್ಲಿ ರಸಗುಲ್ಲ ತಿನ್ನುವ ವಿಚಾರಕ್ಕೆ ಜಗಳ ನಡೆದಿದೆ. ಮೊದಲಿಗೆ ವಧು ಹಾಗೂ ವರನ ಕಡೆಯವರಿಗೆ ಜಗಳ ನಡೆದಿದ್ದು, ಬಳಿಕ ಒಬ್ಬರಿಗೊಬ್ಬರು ಹಲ್ಲೆ ಮಾಡಿಕೊಂಡಿದ್ದಾರೆ. ಈ ವೇಳೆ ಇದು ವಿಕೋಪಕ್ಕೆ ಹೋಗಿದ್ದು, ಅಲ್ಲಿದ್ದ ರಣವೀರ್ ಸಿಂಗ್‍ಗೆ ಕಬ್ಬಿಣದ ರಾಡ್‍ನಿಂದ ಹೊಡೆದಿದ್ದಾರೆ. ಗಂಭೀರವಾಗಿ ಗಾಯಗೊಂಡ ರಣವೀರ್ ಸಿಂಗ್‍ನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

    ಘಟನೆ ವೇಳೆ ರಣವೀರ್‌ ಸಹೋದರ ಸಂಬಂಧಿ ರಾಮ್‌ ಕಿಶೋರ್‌ ಮೇಲೆಯೂ ನಾಲ್ವರು ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ ವ್ಯಕ್ತಿಗಳನ್ನು ರಜತ್‌, ಅಜಯ್‌, ಸತ್ಯಭಾನ್‌ ಹಾಗೂ ಭರತ್‌ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಬಿಕಾಪುರ ಗ್ರಾಮದ ನಿವಾಸಿಗಳಾಗಿದ್ದಾರೆ. ರಾಮ್‌ ಕಿಶೋರ್‌ನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಬಜೆಟ್‌ನಲ್ಲಿ ಕಡೆಗಣನೆ – ರಾಜ್ಯ ಸರ್ಕಾರಕ್ಕೆ ಈಡಿಗ ಸಮುದಾಯದಿಂದ ಎಚ್ಚರಿಕೆ

    ಈ ಬಗ್ಗೆ ರಣ್‍ವೀರ್ ಪುತ್ರ ಸಚಿನ್ ಕುಮಾರ್ ಮಾತನಾಡಿ, ಮದುವೆ ವೇಳೆ ಬಂದ ಅತಿಥಿಗಳಿಗೆ ನೀಡಲು ಬಕೆಟ್‍ಗಳಲ್ಲಿ ರಸಗುಲ್ಲವನ್ನು ಹಾಕಿ ಇಡಲಾಗಿತ್ತು. ಆದರೆ, ಇಲ್ಲಿಗೆ ಬಂದಿದ್ದ ವರನ ಕಡೆಯ ರಜತ್ ಎಂಬಾತ, ಇದನ್ನು ಕದ್ದು ತಿಂದಿದ್ದಲ್ಲದೆ, ಇನ್ನೊಂದು ಬಕೆಟ್‍ನಲ್ಲಿ ತುಂಬಿಸಿಕೊಂಡು ಹೋಗುತ್ತಿದ್ದ. ಇದನ್ನು ರಾಮ್‍ಕಿಶೋರ್ ಆಕ್ಷೇಪಿಸಿದ್ದು, ಇದಕ್ಕಾಗಿ ಮಾತಿಗೆ ಮಾತು ಬೆಳೆದು ಜಗಳ ಏರ್ಪಟ್ಟಿತು. ಸ್ವಲ್ಪವೇ ಹೊತ್ತಿನಲ್ಲಿ ರಜತ್ ಜೊತೆ ಆತನ ಮೂವರು ಸ್ನೇಹಿತರು ಸೇರಿಕೊಂಡು ಗಲಾಟೆ ಮಾಡಲು ಆರಂಭ ಮಾಡಿದರು ಎಂದು ತಿಳಿಸಿದ್ದಾನೆ. ಇದನ್ನೂ ಓದಿ: ಯೋಗಿಯಿಂದಲೇ ರಾಮ ಮಂದಿರ ನಿರ್ಮಾಣಕ್ಕೆ ಗುದ್ದಲಿ ಪೂಜೆ: ಬಿಜೆಪಿ ಪ್ಲಾನ್‌

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಸಗುಲ್ಲ ಖಾಲಿಯಾಗಿದ್ದಕ್ಕೆ ವಧು-ವರನ ಕುಟುಂಬದ ಮಧ್ಯೆ ಡಿಶುಂ ಡಿಶುಂ – ಯುವಕ ಸಾವು

    ರಸಗುಲ್ಲ ಖಾಲಿಯಾಗಿದ್ದಕ್ಕೆ ವಧು-ವರನ ಕುಟುಂಬದ ಮಧ್ಯೆ ಡಿಶುಂ ಡಿಶುಂ – ಯುವಕ ಸಾವು

    ಲಕ್ನೋ: ಊಟದಲ್ಲಿ ರಸಗುಲ್ಲ (Rasgulla) ಖಾಲಿ ಆಯ್ತು ಅಂತ ಮದುವೆ ಸಮಾರಂಭದಲ್ಲಿಯೇ (Marriage Function) ಗಲಾಟೆ (Quarrel) ನಡೆದು, ಯುವಕನೊಬ್ಬನ ಹತ್ಯೆಯಲ್ಲಿ ಹೊಡೆದಾಟ ಅಂತ್ಯಗೊಂಡಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಆಗ್ರಾದಲ್ಲಿ (Agra) ನಡೆದಿದೆ.

    ವರದಿಗಳ ಪ್ರಕಾರ ಮದುವೆ ಸಮಾರಂಭದಲ್ಲಿ ರಸಗುಲ್ಲ ಖಾಲಿ ಆಯ್ತು ಅಂತ ವಧು ಹಾಗೂ ವರನ ಕಡೆಯವರ ನಡುವೆ ವಾಗ್ವಾದ ನಡೆದಿದೆ. ಬಳಿಕ ವಾಗ್ವಾದ ಹೊಡೆದಾಟಕ್ಕೆ ತಿರುಗಿ, ಅಲ್ಲೇ ಇದ್ದ ವ್ಯಕ್ತಿಯೊಬ್ಬ ಚಾಕುವಿನಿಂದ ಯುವಕ ಸನ್ನಿ (22) ಮೇಲೆ ಹಲ್ಲೆ ನಡೆಸಿದ್ದಾನೆ. ಇದನ್ನೂ ಓದಿ: ಬಂಡೇ ಮಠದ ಶ್ರೀ ಬರೆದಿದ್ದು ಒಟ್ಟು 6 ಪುಟಗಳ ಡೆತ್‍ನೋಟ್ – ಈಗಾಗಲೇ 20 ಮಂದಿಯ ವಿಚಾರಣೆ

    ಗಂಭೀರವಾಗಿ ಗಾಯಗೊಂಡಿದ್ದ ಸನ್ನಿಯನ್ನು ಮೊದಲು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಯಿತು. ಬಳಿಕ ಆಗ್ರಾದ ಸರೋಜಿನಿ ನಾಯ್ಡು ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೇ ಯುವಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಹಾಲಿನ ಪ್ಯಾಕೆಟ್‌ಗೆ ಹಣ ನೀಡದ್ದಕ್ಕೆ ಗ್ರಾಹಕನ ಮೇಲೆ ಮಾಲೀಕನಿಂದ ಹಲ್ಲೆ

    ಘಟನೆಯಲ್ಲಿ ಇನ್ನೂ ಐವರಿಗೆ ಗಾಯಗಳಾಗಿದ್ದು, ಅವರನ್ನು ಎತ್ಮಾದ್‌ಪುರದ ಸಮದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಮೃತ ಯುವಕನ ಕುಟುಂಬದವರು ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ.

    Live Tv
    [brid partner=56869869 player=32851 video=960834 autoplay=true]

  • ದೀಪಾವಳಿ ಸ್ಪೆಷಲ್- ಮನೆಯಲ್ಲಿಯೇ ಮಾಡಿ ರಸಭರಿತ ರಸಗುಲ್ಲ

    ದೀಪಾವಳಿ ಸ್ಪೆಷಲ್- ಮನೆಯಲ್ಲಿಯೇ ಮಾಡಿ ರಸಭರಿತ ರಸಗುಲ್ಲ

    ಸಂತೋಷದೊಂದಿಗೆ ಸಿಹಿ ಹಂಚುವ ಹಬ್ಬ ದೀಪಾವಳಿಗೆ ಮನೆಯಲ್ಲಿಯೇ ಸಿಹಿ ಮಾಡಿಲ್ಲವೆಂದರೆ ಹೇಗೆ? ಇಂದು ದೀಪಾವಳಿಯ ಪ್ರಯುಕ್ತ ಜನಪ್ರಿಯವಾದ ಸಿಹಿ ರಸಗುಲ್ಲ (Rasgulla) ಮಾಡುವ ವಿಧಾನವನ್ನು ನಾವು ಹೇಳಿಕೊಡುತ್ತೇವೆ. ನೀವೂ ಇದನ್ನು ಮನೆಯಲ್ಲಿ ಟ್ರೈ ಮಾಡಿ ಹಬ್ಬವನ್ನು ಸಿಹಿಯೊಂದಿಗೆ ಆಚರಿಸಿ.

    ಬೇಕಾಗುವ ಪದಾರ್ಥಗಳು:
    ಹಾಲು – 2 ಲೀಟರ್
    ನಿಂಬೆ ರಸ – 2 ಟೀಸ್ಪೂನ್
    ಸಕ್ಕರೆ – 1 ಕಪ್
    ನೀರು – 5 ಕಪ್
    ಏಲಕ್ಕಿ – 3

    ಮಾಡುವ ವಿಧಾನ:
    * ಮೊದಲಿಗೆ ದೊಡ್ಡ ಪಾತ್ರೆಯಲ್ಲಿ ಹಾಲನ್ನು ಹಾಕಿ, ಕುದಿಸಿ.
    * ಹಾಲು ಕುದಿ ಬಂದ ನಂತರ ನಿಂಬೆ ರಸವನ್ನು ಅದಕ್ಕೆ ಹಾಕಿ, ಚೆನ್ನಾಗಿ ಬೆರೆಸಿ.
    * ಈಗ ಉರಿಯನ್ನು ಕಡಿಮೆ ಮಾಡಿ, ಹಾಲು ಸಂಪೂರ್ಣವಾಗಿ ಒಡೆಯಲು ಬಿಡಿ.
    * ಹಾಲು ಸಂಪೂರ್ಣವಾಗಿ ಒಡೆದ ನಂತರ ಅದನ್ನು ಶುಭ್ರವಾದ ಬಟ್ಟೆಯ ಸಹಾಯದಿಂದ ಸೋಸಿ ನೀರಿನಂಶದಿಂದ ಪನೀರ್ ಅನ್ನು ಬೇರ್ಪಡಿಸಿ.
    * ಈಗ ಪನೀರ್‌ನಿಂದ ನಿಂಬೆಹಣ್ಣಿನ ಹುಳಿ ಅಂಶವನ್ನು ತೆಗೆದು ಹಾಕಲು ಅದೇ ಬಟ್ಟೆಯ ಸಹಾಯದಿಂದ ತಣ್ಣೀರಿನಲ್ಲಿ ತೊಳೆಯಿರಿ.
    * ಈಗ ಪನೀರ್‌ನಿಂದ ನೀರಿನ ಅಂಶವನ್ನು ಆದಷ್ಟು ಹಿಂಡಿ ತೆಗೆಯಿರಿ. ನೀರು ಇಳಿದು ಹೋಗಲು 1 ಗಂಟೆಗಳ ಕಾಲ ಪನೀರ್ ಅನ್ನು ಅದೇ ಬಟ್ಟೆಯಲ್ಲಿ ಕಟ್ಟಿ, ನೇತು ಹಾಕಿ. ಇದನ್ನೂ ಓದಿ: ಸಿಹಿಯಾದ ಜಿಲೇಬಿ ಮಾಡಿ ನಾಲಿಗೆ ಚಪ್ಪರಿಸಿ ಸವಿಯಿರಿ

    * ಈಗ ಪನೀರ್ ಅನ್ನು 5 ನಿಮಿಷ ಕೈಯಿಂದಲೇ ಮ್ಯಾಶ್ ಮಾಡಿ. ಪನೀರ್‌ನಲ್ಲಿ ಯಾವುದೇ ಗಂಟಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕ ಸಣ್ಣ ಸಣ್ಣ ಉಂಡೆ ಕಟ್ಟಿಕೊಳ್ಳಿ.
    * ಈಗ ಒಂದು ದೊಡ್ಡ ಪಾತ್ರೆಯನ್ನು ತೆಗೆದುಕೊಂಡು, ಅದಕ್ಕೆ 5 ಕಪ್ ನೀರು, 1 ಕಪ್ ಸಕ್ಕರೆ ಹಾಗೂ 3 ಏಲಕ್ಕಿ ಹಾಕಿ, ಸಕ್ಕರೆ ಕರಗುವವರೆಗೆ ಚೆನ್ನಾಗಿ ಕುದಿಸಿ.
    * ಸಕ್ಕರೆ ಪಾಕ 5 ನಿಮಿಷ ಕುದಿದ ಬಳಿಕ ಪನೀರ್ ಉಂಡೆಗಳನ್ನು ಒಂದೊಂದಾಗಿಯೇ ಪಾಕದಲ್ಲಿ ಬಿಡಿ.
    * ಈಗ 10 ನಿಮಿಷ ರಸಗುಲ್ಲವನ್ನು ಸಕ್ಕರೆ ಪಾಕದೊಂದಿಗೆ ಕುದಿಸಿ.
    * ಬಳಿಕ ರಸಗುಲ್ಲವನ್ನು ಪಾಕದಿಂದ ತೆಗೆದು ತಕ್ಷಣ ತಣ್ಣನೆಯ ನೀರಿನಲ್ಲಿ ಬಿಡಿ. ಇದರಿಂದ ರಸಗುಲ್ಲ ಕುಗ್ಗುವುದನ್ನು ತಡೆಯಬಹುದು.
    * ಈಗ ಬಡಿಸುವ ಬೌಲ್ ತೆಗೆದುಕೊಂಡು, ಅದಕ್ಕೆ ರಸಗುಲ್ಲ ಹಾಕಿ, ಸಕ್ಕರೆ ಪಾಕವನ್ನೂ ಸುರಿದು ಬಡಿಸಿ. ಇದನ್ನೂ ಓದಿ: ಸೀಬೆ ಹಣ್ಣಿನಿಂದ ಬರ್ಫಿ ಮಾಡಿ ನೋಡಿ

    Live Tv
    [brid partner=56869869 player=32851 video=960834 autoplay=true]

  • ರಸಗುಲ್ಲ ತಿನ್ನಿಸೋ ನೆಪದಲ್ಲಿ ವರನಿಗೆ ಸಿಹಿ ಮುತ್ತಿಟ್ಟ ನಾದಿನಿ – ವೀಡಿಯೋ ವೈರಲ್

    ರಸಗುಲ್ಲ ತಿನ್ನಿಸೋ ನೆಪದಲ್ಲಿ ವರನಿಗೆ ಸಿಹಿ ಮುತ್ತಿಟ್ಟ ನಾದಿನಿ – ವೀಡಿಯೋ ವೈರಲ್

    ನವದೆಹಲಿ: ಮದುವೆ ಅಂದ್ರೇನೆ ಸಂಭ್ರಮ, ಇಲ್ಲಿ ಮೋಜು ಮಸ್ತಿ ಎಲ್ಲವೂ ಸಹಜ. ಇದರೊಂದಿಗೆ ನೂರಾರು ಶಾಸ್ತ್ರ, ಸಂಪ್ರದಾಯ ಇದ್ದೇ ಇರುತ್ತವೆ. ಆಯಾ ಪ್ರದೇಶಕ್ಕೆ ಅನುಸಾರವಾಗಿ ಶಾಸ್ತ್ರ, ಸಂಪ್ರದಾಯಗಳೂ ಬದಲಾಗಿರುತ್ತವೆ. ಕೆಲವೊಂದು ಶಾಸ್ತ್ರಗಳು ಹೆಚ್ಚು ನಗು ತರಿಸುತ್ತವೆ. ಇಂತಹ ಶಾಸ್ತ್ರಗಳೂ ಇವೆಯಾ ಎಂದು ಅನ್ನಿಸುತ್ತದೆ.

     

    View this post on Instagram

     

    A post shared by Bhutni_ke (@bhutni_ke_memes)

    ಆದರೆ ಇಲ್ಲೊಂದು ಪ್ರದೇಶದಲ್ಲಿ ಮದುವೆ ವೇಳೆ ವರನಿಗೆ ನಾದಿನಿ ರಸಗುಲ್ಲ ತಿನ್ನಿಸುವುದು ಸಂಪ್ರದಾಯ. ಇಲ್ಲೊಂದು ಟ್ವಿಸ್ಟ್ ಕೂಡ ಇದೆ. ವರನಿಗೆ ರಸಗುಲ್ಲ ತಿನ್ನಿಸುವ ವೇಳೆ, ವರ ಅದನ್ನು ತಿನ್ನದಂತೆ ನಾದಿನಿಯರು ತಡೆಯುತ್ತಾರೆ. ತಡೆದರೆ ಅವರು ಗೆದ್ದಂತೆ, ಇಲ್ಲವಾದರೆ ವರ ಆಟದ ವಿನ್ನರ್ ಆಗ್ತಾನೆ. ಹೀಗೆ ತಟ್ಟೆಯಲ್ಲಿ ರಸಗುಲ್ಲ ಹಿಡಿದುಕೊಂಡು ನಾದಿನಿ ನಿಂತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಇನ್ನೇನು ನಾದಿನಿ ವರನಿಗೆ ರಸಗುಲ್ಲ ತಿನ್ನಿಸಬೇಕು ಎನ್ನುವಷ್ಟರಲ್ಲಿ ವರ ನಾದಿನಿಯ ಕೈಯನ್ನು ಹಿಡಿದು ಎಳೆಯುತ್ತಾನೆ. ವರನಿಗೋ ಆಟ ಗೆಲ್ಲುವ ತವಕ. ನಾದಿನಿ ಕೂಡಾ ತಾನೇನು ಕಮ್ಮಿ ಎನ್ನುವಂತೆ ತಡೆಯಲು ಪ್ರಯತ್ನಿಸುತ್ತಾಳೆ. ಈ ಕ್ಷಣ ವಿಡಿಯೋದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಪ್ರಕರಣ – ಬೆಳ್ಳಾರೆ, ಸುಬ್ರಹ್ಮಣ್ಯ ಠಾಣಾ ಎಸ್‍ಐಗಳ ಎತ್ತಂಗಡಿ

    ಇಬ್ಬರ ನಡುವಿನ ಪೈಪೋಟಿಯಲ್ಲಿ ರಸಗುಲ್ಲ ಮಾತ್ರ ನೆಲದ ಮೇಲೆ ಬೀಳುತ್ತದೆ. ಅದರ ಮಧ್ಯೆ ಒಂದು ಅಚಾತುರ್ಯವೂ ನಡೆದು ಹೋಗುತ್ತದೆ. ನಾದಿನಿ ಕೈ ಹಿಡಿದು ರಸಗುಲ್ಲ ತಿನ್ನಲು ಎಳೆಯುತ್ತಾನೆ. ಆದರೆ ತಾನೇ ಗೆಲ್ಲಬೇಕು ಎಂದು ರಸಗುಲ್ಲ ತಿನ್ನಲು ನಾದಿನಿ ಮುಂದಾಗುತ್ತಾಳೆ, ರಸಗುಲ್ಲ ಕೆಳಕ್ಕೆ ಬಿದ್ದು, ವರನಿಗೆ ಮುತ್ತಿಡುತ್ತಾಳೆ. ಅಲ್ಲಿದ್ದವರೆಲ್ಲಾ ಇದನ್ನೂ ತಮಾಷೆಯಾಗಿಯೇ ಸ್ವೀಕರಿಸುತ್ತಾರೆ. ಪಕ್ಕದಲ್ಲಿದ್ದ ವಧುವಿಗೆ ಮಾತ್ರ ಏನು ನಡೆಯುತ್ತಿದೆ ಎನ್ನುವುದು ಒಂದು ಕ್ಷಣಕ್ಕೆ ಅರ್ಥವಾದಂತೆ ಕಾಣುವುದಿಲ್ಲ.

    Live Tv
    [brid partner=56869869 player=32851 video=960834 autoplay=true]

  • ರಾಜಸ್ಥಾನ್‌ ವಿರುದ್ಧ ಗೆದ್ರೆ 50 ರಸಗುಲ್ಲ ತಿನ್ನುತ್ತೇನೆ ಎಂದಿದ್ದ ಫ್ಯಾನ್‌ಗೆ ʻವಿಕ್ಟರಿʼ ಬಳಿಕ ಕೆಕೆಆರ್‌ ಹೇಳಿದ್ದೇನು?

    ರಾಜಸ್ಥಾನ್‌ ವಿರುದ್ಧ ಗೆದ್ರೆ 50 ರಸಗುಲ್ಲ ತಿನ್ನುತ್ತೇನೆ ಎಂದಿದ್ದ ಫ್ಯಾನ್‌ಗೆ ʻವಿಕ್ಟರಿʼ ಬಳಿಕ ಕೆಕೆಆರ್‌ ಹೇಳಿದ್ದೇನು?

    ನವದೆಹಲಿ: ಐದು ಪಂದ್ಯಗಳಲ್ಲಿ ಸೋಲನುಭವಿಸಿದ ನಂತರ ಕೋಲ್ಕತ್ತಾ ನೈಟ್‌ ರೈಡರ್ಸ್‌ (KKR) ಸೋಮವಾರ ರಾಜಸ್ಥಾನ್‌ ರಾಯಲ್ಸ್‌ (RR) ವಿರುದ್ಧ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಕೆಕೆಆರ್‌ ಗೆಲುವು ಸಾಧಿಸಬೇಕು ಎಂದು ಅಭಿಮಾನಿಯೊಬ್ಬ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದ. ಅದಕ್ಕೆ ಕೆಕೆಆರ್‌ ತಂಡ ಖುಷಿಯಿಂದ ಪ್ರತಿಕ್ರಿಯೆ ನೀಡಿದೆ.

    ಸೋಮವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ಕೆಕೆಆರ್‌ ಗೆಲುವಿಗಾಗಿ ಅಭಿಮಾನಿಗಳು ಪ್ರಾರ್ಥಿಸಿದ್ದರು. ʼಕೆಕೆಆರ್‌ ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸಿದರೆ, ನಾನು 50 ರಸಗುಲ್ಲ ತಿನ್ನುತ್ತೇನೆʼ ಎಂದು ಅಭಿಮಾನಿಯೊಬ್ಬ ಪ್ರಾರ್ಥಿಸಿದ್ದ. ಈ ಕುರಿತು ಪೋಸ್ಟರ್‌ ಕೂಡ ಪ್ರದರ್ಶಿಸಿದ್ದ. ಇದನ್ನೂ ಓದಿ: ರಾಜಸ್ಥಾನಕ್ಕೆ ಮುಳುವಾದ ರಿಂಕು, ರಾಣಾ ಜೊತೆಯಾಟ – ಕೋಲ್ಕತ್ತಾಗೆ 7 ವಿಕೆಟ್‍ಗಳ ಜಯ

    ವಿಶೇಷ ಪ್ರಾರ್ಥನೆ ಹೊತ್ತು, ಪೋಸ್ಟರ್‌ ಪ್ರದರ್ಶಿಸುತ್ತಿರುವ ಅಭಿಮಾನಿಯ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದ ಕೆಕೆಆರ್‌ ʼಸೋ ಸ್ವೀಟ್‌ʼ ಎಂದು ಕಾಮೆಂಟ್‌ ಮಾಡಿದೆ. ತನ್ನ ಅಭಿಮಾನಿಯ ಪ್ರೀತಿಗೆ ಕೃತಜ್ಞತೆ ಸಲ್ಲಿಸಿದೆ.

    ಕೆಕೆಆರ್‌ ತಂಡದ ಅಭಿಮಾನಿಯ ವಿಶೇಷ ಪ್ರಾರ್ಥನೆಗೆ ಅನೇಕ ಕಾಮೆಂಟ್‌ಗಳು ಕೂಡ ಬಂದಿದ್ದವು. ಕೆಲ ನೆಟ್ಟಿಗರು ʼಶುಭವಾಗಲಿʼ ಎಂದು ಪ್ರತಿಕ್ರಿಯಿಸಿದ್ದರು. ಮತ್ತೆ ಕೆಲವರು, ʻಈತ ಮಧುಮೇಹ ಹೆಚ್ಚಿಸಿಕೊಳ್ಳಬಹುದುʼ ಎಂದು ಹಾಸ್ಯವಾಗಿ ಕಾಮೆಂಟ್‌ ಮಾಡಿದ್ದರು. ಇದನ್ನೂ ಓದಿ: ತನಗಿಂತ 28 ವರ್ಷ ಚಿಕ್ಕವಳ ಕೈಹಿಡಿದ ಮಾಜಿ ಕ್ರಿಕೆಟಿಗ ಅರುಣ್ ಲಾಲ್

    ಸೋಮವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ವಿರುದ್ಧ ಕೋಲ್ಕತ್ತಾ ನೈಟ್‌ ರೈಡರ್ಸ್‌ 3 ವಿಕೆಟ್‌ ನಷ್ಟಕ್ಕೆ 158 ರನ್‌ ಸಿಡಿಸಿ ಭರ್ಜರಿ ಗೆಲುವು ಸಾಧಿಸಿತು. ʼಇದು ಈದ್‌ ಉಡುಗೊರೆʼ ಎಂದು ಕೆಕೆಆರ್‌ ಗೆಲುವನ್ನು ಅಭಿಮಾನಿಗಳು ಸಂಭ್ರಮಿಸಿದರು.

  • `ರಸಗುಲ್ಲಾ’ಗಾಗಿ ರಣರಂಗವಾದ ಮದುವೆಮನೆ!

    `ರಸಗುಲ್ಲಾ’ಗಾಗಿ ರಣರಂಗವಾದ ಮದುವೆಮನೆ!

    ಪಾಟ್ನಾ: ಮದುವೆಮನೆಯಲ್ಲಿ ಊಟ ಮಾಡುವಾಗ ರಸಗುಲ್ಲಾ ಸಿಗಲಿಲ್ಲವೆಂದು ವಧುವಿನ ಕುಟುಂಬದ ಮೇಲೆ ಹಲ್ಲೆ ನಡೆಸಿ ಮದುವೆ ನಿಲ್ಲಿಸಿದ ಘಟನೆ ಬಿಹಾರದ ನಂಲದಾ ಜಿಲ್ಲೆಯಲ್ಲಿ ನಡೆದಿದೆ.

    ಮೂಲಗಳ ಪ್ರಕಾರ ಹಲ್ಲೆ ನಡೆಸಿದವರು ಶೋಕ್ಪುರ ಜಿಲ್ಲೆಯ ಮಂಡಪ್‍ಸೌನಾ ಗ್ರಾಮದವರಾಗಿದ್ದು, ಮದುವೆಗಾಗಿ ಮಣಿರಾಮ್‍ಗೆ ಬಂದಿದ್ದರು. ಆಗ ವರನ ಕಡೆಯವರು ಊಟ ಮಾಡುವಾಗ ರಸಗುಲ್ಲ ಕೇಳಿದ್ದರು. ಮೊದಲ ಬಾರಿಗೆ ನೀಡಿದ್ದಾಗ ಪುನಃ ಸಿಹಿ ಕೇಳಿದರು. ಆಗ ವಧು ಕಡೆಯವರು ವರದ ಸಂಬಂಧಿಕರಿಗೆ 5ಕ್ಕೂ ಹೆಚ್ಚೂ ಸಿಹಿಯನ್ನು ನೀಡಿದ್ದಾರೆ.

    5ಕ್ಕೂ ಹೆಚ್ಚೂ ರಸಗುಲ್ಲ ಪಡೆದ ನಂತರವೂ ಅವರು ಮತ್ತಷ್ಟು ರಸಗುಲ್ಲ ಬೇಕೆಂದು ಕೇಳಿದ್ದರು. ಆಗ ವಧು ಕಡೆಯವರು ರಸಗುಲ್ಲ ನೀಡಲು ನಿರಾಕರಿಸಿದ್ದಾರೆ. ಇದ್ದರಿಂದ ಕೋಪಗೊಂಡ ವರನ ಕಡೆಯವರು ವಧುವಿನ ಸಂಬಂಧಿಕರ ಜೊತೆ ಜಗಳವಾಡಲು ಶುರು ಮಾಡಿದ್ದಾರೆ.

    ಇದಾದ ಸ್ವಲ್ಪ ಸಮಯದಲ್ಲೇ ವರನ ಕಡೆಯವರು ಕೈಯಲ್ಲಿ ದೊಣ್ಣೆ ಹಾಗೂ ರಾಡ್ ಹಿಡಿದು ಮದುವೆಮನೆಗೆ ಬಂದಿದ್ದಾರೆ. ಮದುವೆಮನೆಗೆ ಬಂದ ತಕ್ಷಣ ಅವರು ವಧುವಿನ ತಂದೆ, ಸಹೋದರ, ತಾಯಿ, ಸಹೋದರಿ ಹಾಗೂ ಆಕೆಯ ಸ್ನೇಹಿತೆ ಮೇಲೆ ಹಲ್ಲೆ ನಡೆಸಿದ್ದಾರೆ.

    ಮದುವೆಮನೆಯಲ್ಲಿ ಯಾರೇ ಎಲ್ಲೇ ಕಂಡರೂ ಅವರ ಮೇಲೆ ಹಲ್ಲೆ ನಡೆಸುತ್ತಿದ್ದರು. ಮಹಿಳೆ ಹಾಗೂ ಮಕ್ಕಳೆಂದು ನೋಡದೇ ಅವರನ್ನು ಥಳಿಸಿದ್ದಾರೆ. ವರನ ಕಡೆಯವರ ಹಲ್ಲೆಯಿಂದ ತಪ್ಪಿಸಿಕೊಂಡು ವಧು ಕಡೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಸ್ಥಳಕ್ಕೆ ಬಂದ ಪೊಲೀಸರು ಎಲ್ಲರನ್ನೂ ಶಾಂತಿಗೊಳಿಸಿದ್ದಾರೆ. ಈ ಘಟನೆ ಆದ ಬಳಿಕ ಮದುವೆಯನ್ನು ನಿಲ್ಲಿಸಿ, ಹಲ್ಲೆಗೊಳಗಾದವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.