Tag: rarul yadav

  • ಪಾಕಿಸ್ತಾನಕ್ಕೆ ಟಾಂಗ್ ಕೊಟ್ಟ ಪಾರುಲ್ ಯಾದವ್!

    ಪಾಕಿಸ್ತಾನಕ್ಕೆ ಟಾಂಗ್ ಕೊಟ್ಟ ಪಾರುಲ್ ಯಾದವ್!

    ಭಾರತ ಪದೇ ಪದೇ ಕೆಣಕಿಸಿಕೊಂಡೂ ಶಾಂತಿ ಪಥದಲ್ಲಿ ಮುಂದುವರೆಯುತ್ತಿದ್ದರೂ ಈ ಪಾಕಿಸ್ತಾನ ಪದೇ ಪದೇ ಕೆಣಕ್ಕುತ್ತಲೇ ಇರುತ್ತದೆ. ಅದಕ್ಕೆ ಸೌಹಾರ್ದದ ಸಂಕೇತವಾಗಬಲ್ಲ ಕ್ರಿಕೆಟ್ ಆಟವನ್ನೂ ಕೂಡಾ ಅಲ್ಲಿನ ಕೆಲ ವಿಕೃತ ಮನಸುಗಳು ಬಳಸಿಕೊಳ್ಳುತ್ತಿವೆ. ಕೆಲ ದಿನಗಳ ಹಿಂದೆ ಅಭಿನಂದನ್ ವರ್ತಮಾನ್ ಅವರನ್ನೇ ಹೋಲುವ ವ್ಯಕ್ತಿಯನ್ನಿಟ್ಟುಕೊಂಡು ಪಾಕಿ ಮಾಧ್ಯಮವೊಂದು ಭಾರತವನ್ನು ಕೆಣಕಿತ್ತು. ಇದಕ್ಕೆ ಭಾರತದ ಕಡೆಯಿಂದ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿತ್ತು. ಇದೀಗ ಭಾರತ ತಂಡ ಪಾಕಿಸ್ತಾನಿ ಕ್ರಿಕೆಟ್ ತಂಡವನ್ನು ಮಣಿಸುತ್ತಲೇ ನಟಿ ಪಾರುಲ್ ಯಾದವ್ ಕೂಡಾ ಪಾಕಿಸ್ತಾನಕ್ಕೆ ಸರಿಯಾಗೊಂದು ಟಾಂಗ್ ಕೊಟ್ಟಿದ್ದಾರೆ.

    ವೀರ ಯೋಧ ಅಭಿನಂದನ್ ವರ್ತಮಾನ್‍ಗೆ ಅವಮಾನಿಸಿದ ಪಾಕ್ ವಿರುದ್ಧ ಪಾರುಲ್ ಯಾದವ್ ಅವರದ್ದೇ ಸ್ಟೈಲಿನಲ್ಲಿ ಟಾಂಗ್ ಕೊಟ್ಟಿದ್ದಾರೆ. ಪಾಕ್ ಮಾಧ್ಯಮವೊಂದು ಭಾರತವನ್ನು ಅಣಕಿಸುವಂಥಾ ಜಾಹೀರಾತು ಮಾಡಿತ್ತಲ್ಲಾ? ಅಂಥಾದ್ದನ್ನೇ ತಾವೂ ಮಾಡಿರೋ ಪಾರುಲ್ ಅಭಿನಂದನ್ ಶೈಲಿಯ ಮೀಸೆ ಬಿಡಿಸಿಕೊಂಡು ಪಾಕ್‍ಗೆ ತಕ್ಕ ಉತ್ತರ ನೀಡಿದ್ದಾರೆ!

    ಅಭಿನಂದನ್ ಗೆಟಪ್ಪಿನಲ್ಲಿ ಪಾರುಲ್ ‘ಕಾಫಿ ಕಪ್ ನೀವೇ ಇಟ್ಟುಕೊಳ್ಳಿ ನಾವು ವಿಶ್ವಕಪ್ ಗೆಲ್ಲುತ್ತೇವೆ’ ಅಂತ ಖಡಕ್ ಉತ್ತರ ರವಾನಿಸಿದ್ದಾರೆ. ಪಾರುಲ್ ಯಾದವ್ ಇಂಡೋ ಪಾಕ್ ಟ್ರಿಕೆಟ್ ಟೂರ್ನಿಯನ್ನು ಸ್ನೇಹಿತರೊಂದಿಗೆ ನೋಡಿ ಎಂಜಾಯ್ ಮಾಡಿದ್ದರು. ಭಾರತ ಕ್ರಿಕೆಟ್ ತಂಡ ಪಾಕ್ ತಂಡವನ್ನು ಮಣಿಸಿದ್ದನ್ನೂ ಕೂಡಾ ಕಣ್ತುಂಬಿಕೊಂಡು ಖುಷಿ ಪಟ್ಟಿದ್ದರು. ಅದೇ ಖುಷಿಯಲ್ಲಿ ಈ ಮ್ಯಾಚ್ ಆರಂಭಕ್ಕೂ ಮುನ್ನ ಪಾಕ್ ಮಾಡಿದ್ದ ಕುಚೇಷ್ಟೆಗೆ ತಕ್ಕ ಉತ್ತರವನ್ನೇ ಕೊಟ್ಟಿದ್ದಾರೆ.

    ಪಾಕ್ ಮಾಡಿದ್ದ ಸಣ್ಣತನದ ಕೆಲಸದ ವಿರುದ್ಧ ಈಗಾಗಲೇ ಬಾಲಿವುಡ್ ಸೇರಿದಂತೆ ನಾನಾ ಚಿತ್ರತಂಡಗಳ ತಾರೆಯರು ತಮ್ಮದೇ ಆದ ರೀತಿಯಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ. ಪೂನಂ ಪಾಂಡೆ ಕೂಡಾ ಈ ನಿಟ್ಟಿನಲ್ಲಿ ಗಮನ ಸೆಳೆದಿದ್ದರು. ಇದೀಗ ಭಾರತ ತಂಡ ಪಾಕ್ ತಂಡದ ವಿರುದ್ಧ ಗೆದ್ದಿರೋದರಿಂದ ಪಾಕ್ ಕುಚೇಷ್ಟೆಗಳಿಗೆ ನಿರ್ಣಾಯಕ ಉತ್ತರ ರವಾನಿಸಿದಂತಾಗಿದೆ.