Tag: rara rakkamma

  • ರಾರಾ ರಕ್ಕಮ್ಮ ಹಾಡಿಗೆ ರೇಣುಕಾಚಾರ್ಯ ಭರ್ಜರಿ ಸ್ಟೆಪ್ಸ್

    ರಾರಾ ರಕ್ಕಮ್ಮ ಹಾಡಿಗೆ ರೇಣುಕಾಚಾರ್ಯ ಭರ್ಜರಿ ಸ್ಟೆಪ್ಸ್

    ದಾವಣಗೆರೆ: ಸದಾ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಲ್ಲಿರುವ ಶಾಸಕ ಎಂ.ಪಿ ರೇಣುಕಾಚಾರ್ಯ ಈ ಬಾರಿ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣದ ಹಾಡೊಂದಕ್ಕೆ ಹೆಜ್ಜೆ ಹಾಕುವ ಮೂಲಕ ಸುದ್ದಿಯಾಗಿದ್ದಾರೆ.

    ಹೌದು, ಶಾಸಕರು ರಾರಾ ರಕ್ಕಮ್ಮ ಹಾಗೂ ನಾಟಿ ಪೋರಿಯೋ ಹಾಡಿಗೆ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಹೊನ್ನಾಳಿಯ ಗೋವಿನಕೋವಿ ಗ್ರಾಮದಲ್ಲಿ ಆಯೋಜನೆ ಮಾಡಿದ್ದ ಆರ್ಕೇಸ್ಟ್ರಾ ಕಾರ್ಯಕ್ರಮದಲ್ಲಿ ಮಕ್ಕಳ ಜೊತೆ ರೇಣುಕಾಚಾರ್ಯ ಸ್ಟೆಪ್ಸ್ ಹಾಕಿದ್ದಾರೆ.

    ಇತ್ತ ವೇದಿಕೆ ಮೇಲೆ ರೇಣುಕಾಚಾರ್ಯ ಬರುತ್ತಿದ್ದಂತೆ ಮಕ್ಕಳು ಕುಣಿದಾಡಿದ್ದಾರೆ. ಅಂತೆಯೇ ರೇಣುಕಾಚಾರ್ಯ ಅವರು ಕೆಲ ಕಾಲ ಮಕ್ಕಳ ಜೊತೆ ಹೆಜ್ಜೆ ಹಾಕಿ ಅವರನ್ನು ಮನರಂಜಿಸಿದರು. ಇದನ್ನೂ ಓದಿ: ಈದ್ಗಾ ಮೈದಾನ ಮಾಲೀಕತ್ವ ನಮ್ಮದಲ್ಲ – ಉಲ್ಟಾ ಹೊಡೆದ BBMP

    Live Tv