Tag: Rapper

  • ಒಂದೇ ತಿಂಗಳಲ್ಲಿ ಬರೋಬ್ಬರಿ 18 ಕೆಜಿ ತೂಕ ಇಳಿಸಿಕೊಂಡ ಹನಿ ಸಿಂಗ್

    ಒಂದೇ ತಿಂಗಳಲ್ಲಿ ಬರೋಬ್ಬರಿ 18 ಕೆಜಿ ತೂಕ ಇಳಿಸಿಕೊಂಡ ಹನಿ ಸಿಂಗ್

    ಖ್ಯಾತ ರ‍್ಯಾಪರ್, ಗಾಯಕ ಹನಿ ಸಿಂಗ್ (Honey Singh) ಕೇವಲ ಒಂದೇ ತಿಂಗಳಲ್ಲಿ 18 ಕೆ.ಜಿ ತೂಕ ಇಳಿಸಿಕೊಳ್ಳುವ ಮೂಲಕ ಸುದ್ದಿಯಲ್ಲಿದ್ದಾರೆ. ಈ ಮೂಲಕ 95 ಕೆ.ಜಿಯಿಂದ 77 ಕೆ.ಜಿಗೆ ಇಳಿದಿದ್ದು ಹೇಗೆ ಎನ್ನೋದು ಕುತೂಹಲ ಮೂಡಿಸಿದೆ.

    ಇತ್ತೀಚಿಗೆ ಹನಿ ಸಿಂಗ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿಕೊಂಡಿದ್ದರು. ಆಗ ಅಭಿಮಾನಿಗಳು ಆರೋಗ್ಯ ಸರಿಯಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದರು. ಇನ್ನೂ ಕೆಲವರು ಅವರು ತೂಕ ಇಳಿಸಿಕೊಂಡಿದ್ದಾರೆ ಎಂದಿದ್ದರು. ಸದ್ಯ ಈ ಕುರಿತು ಮಾಹಿತಿಯೊಂದು ಬಹಿರಂಗಗೊಂಡಿದೆ. ಅವರು ಆರೋಗ್ಯವಾಗಿದ್ದು, ವ್ಯಾಯಾಮದಲ್ಲಿ ತೊಡಗಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಲ್ಲಿ ಗಂಟೆಗಟ್ಟಲೆ ಕಾದು ದರ್ಶನ್ ಭೇಟಿಯಾದ ವಿಜಯಲಕ್ಷ್ಮಿ

    ಇನ್ನೂ ಈ ಕುರಿತು ಹನಿ ಸಿಂಗ್ ಅಭಿಮಾನಿಯೊಬ್ಬರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಕಳವಳ ವ್ಯಕ್ತಪಡಿಸಿದ್ದು, ಯಾಕೆ ಅಂತ ಗೊತ್ತಿಲ್ಲ, ಹನಿ ಸಿಂಗ್ ಅವರಿಗೆ ಏನೋ ಆಗಿದೆ. ಕಳೆದ ಎರಡು ವರ್ಷಗಳಿಂದ ಅವರು ತುಂಬಾ ಗ್ಲಾಮರಸ್ ಆಗಿ ಕಾಣುತ್ತಿದ್ದರು, ಆದರೆ ಇತ್ತೀಚಿಗೆ ಅವರು ಹಂಚಿಕೊಂಡಿದ್ದ ಕೆಲವು ಪೋಸ್ಟ್ ಹಾಗೂ ಸ್ಟೋರಿಗಳಲ್ಲಿ ಅವರ ಮೂಗಿಗೆ ಏನೋ ಆಗಿದೆ ಎಂದು ಕಾಣುತ್ತದೆ. ಹನಿ ಸಿಂಗ್ ಪ್ರತಿದಿನ ಜಿಮ್‌ಗೆ ಹೋಗುತ್ತಾರೆ. ಆದರೆ ಅವರು ಮೊದಲಿನಂತಿಲ್ಲ. ಯಾರ ಮುಂದೆಯೂ ಹಂಚಿಕೊಳ್ಳಲು ಸಾಧ್ಯವಾಗದಂತಹದ್ದು ಏನೋ ಅವರ ಜೀವನದಲ್ಲಿ ನಡೆದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಇದಕ್ಕೆ ಹನಿ ಸಿಂಗ್ ಅವರು ಹಾಸ್ಯ ಮಾಡುವಂತೆ ಕುಚ್ ನಹಿ ಹುವಾ (ಏನೂ ಆಗಿಲ್ಲ) ಎಂದು ನಗುವ ಎಮೋಜಿಯೊಂದಿಗೆ ಉತ್ತರಿಸಿದ್ದಾರೆ. ತಮ್ಮ ಫಿಟ್ನೆಸ್ ಅಪ್ಡೇಟ್ ಅನ್ನು ಹಂಚಿಕೊಳ್ಳುತ್ತಾ, ಅವರು ನಾನು ಭವಿಷ್ಯದ ದೃಷ್ಟಿಯಿಂದ ವ್ಯಾಯಾಮ ಮಾಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

    ಹನಿ ಸಿಂಗ್ ತೂಕ ಇಳಿಸಿಕೊಂಡಿದ್ದು ಹೇಗೆ?
    ಇತ್ತೀಚಿಗೆ ಒಂದು ಸಂದರ್ಶನದಲ್ಲಿ ಈ ಕುರಿತು ಹನಿ ಸಿಂಗ್ ಮಾತನಾಡಿದ್ದಾರೆ. ನನ್ನ ಚಯಾಪಚಯ ಕ್ರಿಯೆ ಹೆಚ್ಚಿಸಲು ಹಾಗೂ ತೂಕ ಇಳಿಸಿಕೊಳ್ಳಲು ಹಸಿರು ದ್ರವವೊಂದನ್ನು ಸೇವಿಸುವುದಾಗಿ ತಿಳಿಸಿದ್ದಾರೆ. ಚಯಾಪಚಯ ಕ್ರಿಯೆಯು ಆಹಾರದಿಂದ ಕಾರ್ಬೋಹೈಡ್ರೇಟ್, ಪ್ರೋಟೀನ್ ಮತ್ತು ಕೊಬ್ಬನ್ನು ನಿಮ್ಮ ದೇಹಕ್ಕೆ ಶಕ್ತಿಯನ್ನಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ. ಹೀಗಾಗಿ ಇದು ನಿಮ್ಮ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದಿದ್ದಾರೆ.ಇದನ್ನೂ ಓದಿ: ದಾದಾ ಫ್ಯಾನ್ಸ್‌ಗೆ ಶುಭ ಸುದ್ದಿ – ಬರುತ್ತಿದೆ ಹೊಸ ಸ್ಮಾರಕ

  • ಬುಸುಗುಡುತ್ತಿದ್ದ ಚಂದನ್ ಶೆಟ್ಟಿ ಮತ್ತು ಆಲ್ ಓಕೆ ಈ ಹಾಡಿಗೆ ಒಂದಾದರು

    ಬುಸುಗುಡುತ್ತಿದ್ದ ಚಂದನ್ ಶೆಟ್ಟಿ ಮತ್ತು ಆಲ್ ಓಕೆ ಈ ಹಾಡಿಗೆ ಒಂದಾದರು

    ಸ್ಯಾಂಡಲ್ ವುಡ್ ಸಂಗೀತ ಲೋಕದಲ್ಲಿ  ರಾಪ್ ಹಾಡುಗಳ ಬಗ್ಗೆ ಹುಚ್ಚು ಹಚ್ಚಿಸಿದವರಲ್ಲಿ ಪ್ರಮುಖರು ಚಂದನ್ ಶೆಟ್ಟಿ ಮತ್ತು ಆಲ್ ಓಕೆ ಖ್ಯಾತಿಯ ಅಲೋಕ್ ಕುಮಾರ್. ಈ ಇಬ್ಬರು ಒಂದು ಕಾಲದಲ್ಲಿ ಒಟ್ಟಿಗೆ ಕನ್ನಡ ರಾಪ್ ಸಾಂಗ್ ಗಳನ್ನ ಸೃಷ್ಟಿಸಲು ಮುಂತಾದವರು. ಆದ್ರೆ ಕ್ರಮೆಣ ಅವರೊಂದು ದಾರಿ ಇವ್ರೊಂದು ದಾರಿಯಲ್ಲಿ ತಮ್ಮದೆ ಶೈಲಿಯಲ್ಲಿ ರಾಪ್ ಸಾಂಗ್ಸ್  ಕನ್ನಡಿಗರಿಗೆ ಕೊಟ್ಟವರು, ಕನ್ನಡದ ಜೊತೆಗೆ ಸಕಲ ಸಂಗೀತ ಪ್ರಿಯರಿಗೆ ಇಷ್ಟವಾದವರು. ಇದನ್ನೂ ಓದಿ : Exclusive- ಅಮೆಜಾನ್ ಪ್ರೈಮ್ನಲ್ಲಿ ‘ಕೆಜಿಎಫ್ 2’ : ಫಸ್ಟ್ ಟೈಮ್ ಮೆಂಬರ್ ಅಲ್ಲದವರೂ ಸಿನಿಮಾ ನೋಡಬಹುದು

    ಈಗ ಇದೇ ಆಲ್ ಓಕೆ ಮತ್ತು ಚಂದನ್ ಶೆಟ್ಟಿ ಒಟ್ಟಿಗೆ ಸೇರಿ ಒಂದು ಹೊಸ ರಾಪ್ ಸಾಂಗ್ ಅನ್ನು ಬಿಡುಗಡೆ ಮಾಡಲು ಮುಂದಾಗಿದ್ದಾರೆ.  ಕಾಣೆಯಾದವರ ಬಗ್ಗೆ ಪ್ರಕಟಣೆಗಳು ಚಿತ್ರಕ್ಕಾಗಿ ಇಬ್ಬರೂ ಈ ಗೀತೆಯನ್ನು ಹಾಡಿದ್ದಾರೆ. ನಿನ್ನೆಯಷ್ಟೇ ಈ ಹಾಡಿನ ರೆಕಾರ್ಡಿಂಗ್‌ ಕಾರ್ಯ ಮುಗಿದಿದೆ. ಇದನ್ನೂ ಓದಿ : ಪತಿ ಉಪ್ಪಿಗಿಂತಲೂ ಪತ್ನಿ ಪ್ರಿಯಾಂಕಾ ಉಪೇಂದ್ರ ಫಾಸ್ಟ್ : ಡಿಟೆಕ್ಟೀವ್ ತೀಕ್ಷ್ಣ @ 50

    ಕಾಣೆಯಾದವರ ಬಗ್ಗೆ ಪ್ರಕಟಣೆ ವಿಶಿಷ್ಠ ಟೈಟಲ್ ನಿಂದ ಗಮನ ಸೆಳೆದಿರೋ ಸಿನಿಮಾ ಇದು. ರಾಂಬೋ 2 , ಕೃಷ್ಣ ರುಕ್ಕು ಸಿನಿಮಾ ಖ್ಯಾತಿಯ ಅನಿಲ್ ಕುಮಾರ್ ನಿರ್ದೇಶನದ ಜೊತೆಗೆ ಫಸ್ಟ್ ಟೈಮ್ ಆ್ಯಕ್ಟಿಂಗ್ ಮಾಡಿರೋ ಸಿನಿಮಾ.  ಸ್ಯಾಂಡಲ್ ವುಡ್  ನ ಬಹು ಬೇಡಿಕೆಯ ಪೋಷಕ ಕಲಾವಿದರಾದ ರಂಗಾಯಣ ರಘು ,ಆರ್ಮುಗಂ ರವಿಶಂಕರ್, ತಬಲ ನಾಣಿ ಹಾಗೂ ಚಿಕ್ಕಣ್ಣ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ‘‘ಕಾಣೆಯಾದವರ ಬಗ್ಗೆ ಪ್ರಕಟಣೆ’’ ಸಿನಿಮಾದಲ್ಲಿ ವೆನಿಲಾ ಐಸ್  ಕ್ರೀಮ್ ಮೇಲೆ ಕಾಣೋ ಚರಿಯಂತೆ ಈ ಸಿನಿಮಾದಲ್ಲಿ ಚುಟು ಚುಟು ಬೆಡಗಿ , ಪಠಾಕಿ ಪೋರಿ ಆಶಿಕಾ ರಂಗನಾಥ್ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಒಂದು ಇಂಟರಸ್ಟಿಂಗ್ ಟ್ರೈಲರ್ ಬಿಟ್ಟು ಗಮ ಗಮನ ಸೇಳಿದ್ದಿದ್ದ ಕಾಣೆಯಾದವರ ಬಗ್ಗೆ ಪ್ರಕಟಣೆ ಟೀಮ್ ಈ ಬಾರಿ ಇಬ್ಬರು ಸ್ಟಾರ್ ರಾಪ್ ಸ್ಟಾರ್ಸ್ ಗಳನ್ನ ಒಟ್ಟು ಸೇರಿಸಿ ಹಾಡಿಸಿದ್ದಾರೆ.ಇದನ್ನೂ ಓದಿ : ಕಾಲೇಜು ದಿನಗಳಲ್ಲೇ ರಮ್ಯಾ ಮೇಲೆ ಕ್ರಶ್ ಆಗಿದೆ : ರಕ್ಷಿತ್ ಶೆಟ್ಟಿ

    ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ಸಂಯೋಜನೆಯಲ್ಲಿ ಕ್ರಾಂತಿ ಕುಮಾರ್ ಸಾಹಿತ್ಯದ ಸಿರಿಯಲ್ಲಿ ಒಂದು ಪಾರ್ಟಿ ಸಾಂಗ್ ಅನ್ನ ಆಲ್ ಓಕೆ ಮತ್ತು ಚಂದನ್ ಶೆಟ್ಟಿ ಅವರಿಂದ ಹಾಡಿಸಿದೆ ಚಿತ್ರತಂಡ. ಈ ಹಾಡಿನಲ್ಲಿ ರಂಗಯಾಣ ರಘು , ತಬಲ ನಾಣಿ , ರವಿಶಂಕರ್ ಹಾಗೂ ಚಿಕ್ಕಣ ರಾಪ್ ಸ್ಟಾರ್ ಗಳಂತೆ ಕುಣಿದಿರೋದು ವಿಶೇಷ.. ಈ ಕಾಣೆಯಾದವರ ಬಗ್ಗೆ ಪ್ರಕಟಣೆ ಸಿನಿಮಾ ರಿಲೀಸ್ ಸಿದ್ಧವಾಗುತ್ತಿದ್ದು ಮುಂದಿನ ದಿನಗಳಲ್ಲಿ ಒಂದೊಳ್ಳೆ ಡೇಟ್ ನೋಡ್ಕೊಂಡು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದೆ.

  • ಮನೆಗೆ ಹೊಸ ಅತಿಥಿಯನ್ನು ಸ್ವಾಗತಿಸಿದ ಆಲ್ ಒಕೆ ಅಲೋಕ್ ಬಾಬು

    ಮನೆಗೆ ಹೊಸ ಅತಿಥಿಯನ್ನು ಸ್ವಾಗತಿಸಿದ ಆಲ್ ಒಕೆ ಅಲೋಕ್ ಬಾಬು

    ಬೆಂಗಳೂರು: ಕನ್ನಡದಲ್ಲಿ ರ‍್ಯಾಪರ್ ಹಾಡುಗಳ ಮೂಲಕ ಫೇಮಸ್ ಆಗಿರುವ ಅಲೋಕ್ ಬಾಬು ಅಲಿಯಾಸ್ ಆಲ್‍ಓಕೆ ಬಾಬು ಮನೆಗೆ ಹೊಸ ಅತಿಥಿ ಆಗಮಿಸಿದ್ದಾರೆ.

    All OK Alok Babu

    ಹೌದು, 2019ರಲ್ಲಿ ತಮ್ಮ ಬಾಲ್ಯದ ಗೆಳತಿ ನಿಷಾ ಜೊತೆ ಸಪ್ತಪದಿ ತುಳಿದ ಅಲೋಕ್ ಬಾಬು ಇದೀಗ ಗಂಡು ಮಗುವಿಗೆ ತಂದೆಯಾಗಿದ್ದಾರೆ. ಇಂದು ಬೆಳಗಿನ ಜಾವ 2.14ಕ್ಕೆ ನಿಷಾ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಇಬ್ಬರು ಕ್ಷೇಮವಾಗಿದ್ದಾರೆ ಎಂದು ಅಲೋಕ್ ಬಾಬು ತಿಳಿಸಿದ್ದಾರೆ. ಇದನ್ನೂ ಓದಿ: WhatsApp, Facebook, Instagram 9 ಗಂಟೆ ಬಂದ್ – ಜುಕರ್‌ಬರ್ಗ್‌ಗೆ 44 ಸಾವಿರ ಕೋಟಿ ನಷ್ಟ

    All OK Alok Babu

    ಸದ್ಯ ತಂದೆಯಾಗಿರುವ ಅಲೋಕ್ ಬಾಬು, ಪತ್ನಿ ಜೊತೆಗಿರುವ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ಫೋಟೋದಲ್ಲಿ ನಿಷಾ ಬೇಬಿ ಬಂಪ್‍ನಲ್ಲಿ ಕಾಣಿಸಿಕೊಂಡಿದ್ದು, ಅಲೋಕ್ ಪತ್ನಿಯ ಬೇಬಿ ಬಂಪ್ ತೋರಿಸುತ್ತಿರುವುದನ್ನು ಕಾಣಬಹುದಾಗಿದೆ. ಜೊತೆಗೆ ಕ್ಯಾಪ್ಷನ್‍ನಲ್ಲಿ ನಮಸ್ಕಾರ, ನಮಗೆ ಇಂದು ಗಂಡು ಮಗು ಜನಿಸಿರುವ ವಿಚಾರವನ್ನು ಹಂಚಿಕೊಳ್ಳಲು ಸಂತಸವಾಗುತ್ತಿದೆ. ನಿಮ್ಮೆಲ್ಲರ ಪ್ರೀತಿ ಆರೈಕೆಗಳಿಗೆ ತುಂಬು ಹೃದಯದ ಧನ್ಯವಾದಗಳು, ಹರಸಿ, ಹಾರೈಸಿ, ಕೈ ಹಿಡಿದು, ಬೆಳೆಸಿ ಈ ನಮ್ಮ ಪುಟ್ಟ ಕಂದನನ್ನು, ಇನ್ಮುಂದೆ ಇವನು ನಿಮ್ಮ ಸ್ವತ್ತು ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ರೈತರ ಮೇಲೆ ವಾಹನ ಹತ್ತಿಸಿದ ವೀಡಿಯೋ ಲಭ್ಯ- ಅಜಯ್ ಮಿಶ್ರಾ ಪುತ್ರನ ವಿರುದ್ಧ ಕೊನೆಗೂ FIR

     

    View this post on Instagram

     

    A post shared by Alok Babu R (@all_ok_official)

    ಕನ್ನಡದಲ್ಲಿ ಹಲವಾರು ರ‍್ಯಾಪ್ ಸಾಂಗ್ ಹಾಡಿರುವ ಅಲೋಕ್ ಬಾಬು ಅವರು ಇತ್ತೀಚೆಗೆ ಹಾಡಿದ್ದ ಹ್ಯಾಪಿ ಆಗಿದೆ ರ‍್ಯಾಪ್ ಸಾಂಗ್ ಸಿಕ್ಕಾಪಟ್ಟೆ ಜನಪ್ರಿಯಗೊಂಡಿತ್ತು. ಈ ಮುನ್ನ ನಿರ್ದೇಶಕ ಶಿವಮಣಿ ಆ್ಯಕ್ಷನ್ ಕಟ್ ಹೇಳಿದ್ದ 2009ರಲ್ಲಿ ತೆರೆಕಂಡಿದ್ದ ಜೋಶ್ ಸಿನಿಮಾದಲ್ಲಿ ಅಲೋಕ್ ಬಾಬು ಅಭಿನಯಿಸಿದ್ದರು.

  • 30ನೇ ವಸಂತಕ್ಕೆ ಕಾಲಿಟ್ಟ ಚಂದನ್ ಶೆಟ್ಟಿ- ಬರ್ತ್ ಡೇಯಲ್ಲಿ ಬಾರ್ಬಿ ಡಾಲ್

    30ನೇ ವಸಂತಕ್ಕೆ ಕಾಲಿಟ್ಟ ಚಂದನ್ ಶೆಟ್ಟಿ- ಬರ್ತ್ ಡೇಯಲ್ಲಿ ಬಾರ್ಬಿ ಡಾಲ್

    ಬೆಂಗಳೂರು: ರ‍್ಯಾಪರ್ ಚಂದನ್ ಶೆಟ್ಟಿ 30ನೇ ವಸಂತಕ್ಕೆ ಕಾಲಿಟ್ಟಿದ್ದು, ಅಭಿಮಾನಿಗಳೊಂದಿಗೆ ತಮ್ಮ ನಿವಾಸದ ಬಳಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

    ಈ ಸಂದರ್ಭದಲ್ಲಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಚಂದನ್ ಶೆಟ್ಟಿ, ಹುಟ್ಟು ಹಬ್ಬದ ವಿಶೇಷವಾಗಿ ‘ಬ್ಯಾಡ್ ಬಾಯ್’ ಹಾಡಿನ ಟೀಸರ್ ಇಂದು ಸಂಜೆ ಲಹರಿ ಸಂಸ್ಥೆಯ ಅಡಿ ಬಿಡುಗಡೆ ಮಾಡಲಿದ್ದೇವೆ. ‘ರೋಡ್ ಕಿಂಗ್’ ಸಿನಿಮಾಗೆ ಈ ಹಾಡನ್ನು ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಹಲವು ಸಿನಿಮಾಗಳಲ್ಲಿ ನಾನು ಹಾಡಿರುವ ಹಾಡು ಬಿಡುಗಡೆಯಾಗಲಿದೆ. ಇದು ನನ್ನ ಕಡೆಯಿಂದ ಅಭಿಮಾನಿಗಳಿಗೆ ನೀಡುತ್ತಿರುವ ಉಡುಗೊರೆಯಾಗಿದ್ದು, ನಿಮ್ಮ ಬೆಂಬಲ ಸದಾ ಮುಂದುವರಿಯಲಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಇದನ್ನು ಓದಿ: 5 ಹಾಡಿಗೆ ಚಂದನ್ ಶೆಟ್ಟಿಗೆ ಸಿಕ್ತು ಊಹಿಸಲಾಗದಷ್ಟು ಸಂಭಾವನೆ

    ಅಭಿಮಾನಿಗಳೊಂದಿಗೆ ನಟಿ ನಿವೇದಿತಾ ಗೌಡ ಅವರು ಕೂಡ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಚಂದನ್ ಶೆಟ್ಟಿ ಅವರಿಗೆ ಹುಟ್ಟ ಹಬ್ಬದ ಶುಭಾಶಯ ಕೋರಿದರು.

    ಮೂಲತಃ ಹಾಸನದವರಾದ ಚಂದನ್ ಶೆಟ್ಟಿ ಹುಟ್ಟಿದ್ದು, 1989 ರಲ್ಲಿ, 2012 ರಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಜೊತೆ ಅಲೆಮಾರಿ ಸಿನಿಮಾಗೆ ಗೀತ ರಚನೆ ಮಾಡಿದ್ದರು. ಕನ್ನಡ ಬಿಗ್ ಬಾಸ್ ನ ಸೀಸನ್ 5ರ ರಿಯಾಲಿಟಿ ಶೋದಲ್ಲಿ ವಿಜೇತರಾಗಿದ್ದರು. ಇವರಿಗೆ ‘ಹಾಳಾಗೋದೆ’ ಆಲ್ಬಂ ಬಹುದೊಡ್ಡ ಬ್ರೇಕ್ ನೀಡಿತ್ತು. ಇದರೊಂದಿಗೆ 2 ಪೇಗ್, ಚಾಕೋಲೇಟ್ ಗರ್ಲ್, ಟಕಿಲಾ, ಫೈಯರ್ ಆಲ್ಬಂ ಗಳನ್ನು ಮಾಡಿದ್ದಾರೆ. ಸದ್ಯ ಸಿನಿಮಾ ಸಂಗೀತ ನಿರ್ದೇಶನದೊಂದಿಗೆ ಖಾಸಗಿ ವಾಹಿನಿಯೊಂದರ ರಿಯಾಲಿಟಿ ಶೋ ತೀರ್ಪುಗಾರರಾಗಿಯೂ ಕೆಲಸ ಮಾಡುತ್ತಿದ್ದಾರೆ.

  • ಮದುವೆ ಇಂಗಿತ ಬಿಚ್ಚಿಟ್ಟ ಕನ್ನಡ ರ‍್ಯಾಪರ್ ಚಂದನ್ ಶೆಟ್ಟಿ

    ಮದುವೆ ಇಂಗಿತ ಬಿಚ್ಚಿಟ್ಟ ಕನ್ನಡ ರ‍್ಯಾಪರ್ ಚಂದನ್ ಶೆಟ್ಟಿ

    ಬೆಂಗಳೂರು: ಬಿಗ್ ಬಾಸ್ ಸೀಸನ್-5ರ ವಿನ್ನರ್ ಹಾಗೂ ಕನ್ನಡ ರ‍್ಯಾಪರ್ ಚಂದನ್ ಶೆಟ್ಟಿ ಅವರಿಗೆ ಹಸೆಮಣೆ ಏರುವ ಬಯಕೆ ಮೂಡಿದೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಹೊಸ ಅಭಿಮಾನಿಗಳು ಸಿಕ್ಕರೆ ಎಲ್ಲರೂ ಮದುವೆ ಯಾವಾಗ ಎಂಬ ಪ್ರಶ್ನೆಯನ್ನೇ ಕೇಳುತ್ತಿದ್ದಾರೆ. ಹೀಗಾಗಿ ಇದೀಗ ತಾನೂ ಮದುವೆ ಆಗಬೇಕು ಎಂದು ಅನಿಸುತ್ತಿದೆ ಎಂದು ಹೇಳಿದ್ದಾರೆ.

    ಸ್ನೇಹಿತರ ಮದುವೆ, ಪಾರ್ಟಿ, ಫಂಕ್ಷನ್‍ಗಳಿಗೆ ಹೋದರೆ ನನ್ನ ಎಲ್ಲಾ ಸ್ನೇಹಿತರು ತಮ್ಮ ಲೈಫ್ ಪಾರ್ಟ್ನರ್ ಜೊತೆ ಬರುತ್ತಿದ್ದಾರೆ. ನಾನು ಮಾತ್ರ ಸಿಂಗಲ್ ಆಗಿ ಹೋದಾಗ ನಾನು ಮದುವೆ ಆಗಬೇಕು ಎಂದು ಅನಿಸುತ್ತದೆ. ಹೀಗಾಗಿ ನಾನು ಅದಷ್ಟು ಬೇಗ ಮದುವೆ ಆಗುತ್ತೇನೆ ಎಂದು ಹೇಳಿದ್ದಾರೆ.

    ಚಂದನ್ ಮದುವೆ ಆಗುವ ಹುಡುಗಿ ಯಾರು ಎನ್ನುವುದು ಇನ್ನೂ ಫೈನಲ್ ಆಗಿಲ್ಲ. ಏಕೆಂದರೆ ಅವರು ಮೊದಲು ಸ್ವಂತ ಮನೆ ಮಾಡಬೇಕು. ಅದು ಆದಷ್ಟು ಬೇಗ ಮಾಡುತ್ತೀನಿ. ಆದಾದ ಬಳಿಕವೇ ಮದುವೆ ಆಗುತ್ತೀನಿ ಎಂದು ಹೇಳಿದ್ದಾರೆ.

    ಬಿಗ್‍ಬಾಸ್ ಮನೆಗೆ ಹೋಗಿ ಬಂದ ಮೇಲೆ ಚಂದನ್ ಲಕ್ ಬದಲಾಯಿತು. ಆಸ್ಟೇಲಿಯಾ, ಅಮೇರಿಕಾ ಸೇರಿದಂತೆ ಬೇರೆ ಬೇರೆ ದೇಶದಲ್ಲಿರುವ ಕನ್ನಡಿಗರು ಫೈಯರ್ ಸಾಂಗ್‍ಗೆ ಫಿದಾ ಆಗಿದ್ದಾರೆ. ಡ್ಯಾನ್ಸ್ ಮಾಡಿ ವಿಡಿಯೋಗಳನ್ನು ಕೂಡ ಕಳುಹಿಸುತ್ತಿದ್ದಾರೆ. ಈ ಎಲ್ಲದರ ನಡುವೆ ಇದೀಗ ಚಂದನ್‍ಗೆ ಮದುಮಗನಾಗುವ ಆಸೆ ಮನದಲ್ಲಿ ಚಿಗುರೊಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv