ಬೆಂಗಳೂರು: ಓಲಾ, ಊಬರ್, ರಾಪಿಡೋ(Uber, Ola, Rapido) ಕಂಪನಿಗಳು ತಮ್ಮ ಹಠವನ್ನು ಮುಂದುವರಿಸಿವೆ. ಆಟೋ(Auto) ದರ ನಿಗದಿ ಸಂಬಂಧ ಸಾರಿಗೆ ಇಲಾಖೆ ನಡೆಸಿದ ಸಭೆಯಲ್ಲಿ ಭರ್ಜರಿ ಬೇಡಿಕೆ ಇರಿಸಿವೆ.
ರಾಪಿಡೋ ಸಂಸ್ಥೆಯಯವರು ಕಿಲೋಮೀಟರ್ 50 ರೂಪಾಯಿಗೆ ಫಿಕ್ಸ್ ಮಾಡುವಂತೆ ಕೋರಿದ್ದಾರೆ. ಆದರೆ ಆಟೋ ಚಾಲಕರು ಮಾತ್ರ, ಮೊದಲು ಇವರ ಸೇವೆಗಳನ್ನೇ ಬಂದ್ ಮಾಡಿ ಎಂದು ಆಗ್ರಹಿಸಿದ್ದಾರೆ. ಈ ಮಧ್ಯೆ ಮಂಗಳವಾರ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಸಾರಿಗೆ ಇಲಾಖೆ ಮುಂದಾಗಿದೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಗ್ರಾಹಕರನ್ನು ಮತ್ತು ಚಾಲಕರನ್ನು ಸುಲಿಗೆ ಮಾಡುತ್ತಿದ್ದ ಓಲಾ (Ola), ಉಬರ್ (Uber), ರ್‍ಯಾಪಿಡೋ (Rapido) ಆಟೋಗಳ (Auto) ಕಂಪನಿಗಳಿಗೆ ಹೊಸದಾಗಿ ದರ ನಿಗದಿಪಡಿಸಲು ಸರ್ಕಾರ ಮುಂದಾಗಿದೆ.
15 ದಿನದೊಳಗೆ ಹೊಸ ದರ ನಿಗದಿ ಮಾಡುವಂತೆ ಹೈಕೋರ್ಟ್ (High Court) ಸೂಚಿಸಿದ್ದ ಬೆನ್ನಲ್ಲೇ ಸರ್ಕಾರ ಇಂದು ಓಲಾ, ಉಬರ್ ರ್‍ಯಾಪಿಡೋ ಹಾಗೂ ಆಟೋ ಯೂನಿಯನ್ ಸಭೆ ನಡೆಸಿದೆ. ಸದ್ಯ ಸಾರಿಗೆ ಇಲಾಖೆ 2ಕೀ ಮೀಟರ್‌ಗೆ 30 ರೂ. ನಿಗದಿ ಮಾಡಿದ್ದು. ಮಿನಿಮಮ್ ದರ ಎರಡು ಕಿ.ಮೀಗೆ 50 ರೂ. ಹಾಗೂ ನಂತರದ ಪ್ರತೀ ಕಿ.ಮೀಗೆ 25 ರೂ. ಮಾಡಿ ಅಂತಾ ಓಲಾ, ಉಬರ್ ಕಂಪನಿಗಳು ಡಿಮ್ಯಾಂಡ್ ಮಾಡಿವೆ. ಈ ಎಲ್ಲದರ ಕುರಿತು ಸಭೆಯಲ್ಲಿ ಚರ್ಚೆ ಮಾಡಲಾಗಿದ್ದು, ಸರ್ಕಾರ ನಿರ್ಧಾರವನ್ನು ಸ್ಪಷ್ಟಪಡಿಸಿಲ್ಲ. ನವೆಂಬರ್ 7ಕ್ಕೆ ಕೋರ್ಟ್‍ಗೆ ಸಾರಿಗೆ ಇಲಾಖೆ ವರದಿ ಸಲ್ಲಿಕೆಯಾಗಬೇಕಿದ್ದು, ಕೋರ್ಟ್ ಬೆಳವಣಿಗೆ ನಂತರ ದರ ನಿಗದಿಯಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಎಸ್ಟಿಗೆ ತಳವಾರ, ಪರಿವಾರ ಜಾತಿಗಳ ಸೇರ್ಪಡೆ – ಒಬಿಸಿ ಮೀಸಲಾತಿ ಪಟ್ಟಿಯಿಂದ ತೆಗೆದು ಸರ್ಕಾರ ಆದೇಶ
ಹೈಕೋರ್ಟ್ ಸೂಚನೆಯ ಬಳಿಕ ಓಲಾ, ಉಬರ್ ಆ್ಯಪ್ (App) ಕಂಪನಿಯು ಅ.17 ರಿಂದ ಆಟೋರಿಕ್ಷಾ ಪ್ರಯಾಣ ದರ ಸುಲಿಗೆಯನ್ನು ನಿಲ್ಲಿಸಿದ್ದವು. ಇದೀಗ ಸಾಮಾನ್ಯ ಆಟೋರಿಕ್ಷಾಗಳಿಗೆ ಸರ್ಕಾರ ನಿಗದಿಪಡಿಸಿರುವ ಮೀಟರ್ ದರದ ಜೊತೆ ಶೇ. 10 ಹಾಗೂ ಜಿಎಸ್‍ಟಿ ಒಳಗೊಂಡ ದರವನ್ನು ಪ್ರಯಾಣಿಕರಿಂದ ಪಡೆಯುತ್ತಿವೆ. ಸದ್ಯ ಓಲಾ, ಉಬರ್ ಎರಡೂ ಆ್ಯಪ್‍ಗಳಲ್ಲಿಯೂ ಎರಡು ಕಿ.ಮೀ.ಗೆ 40 ರೂ.ಗಿಂತ ಕಡಿಮೆ ದರವಿದೆ. ಇದನ್ನೂ ಓದಿ: SSLC ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ – ಏಪ್ರಿಲ್ 1ರಿಂದ ಪರೀಕ್ಷೆ ಆರಂಭ
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಓಲಾ (Ola) , ಉಬರ್ (Uber), ರ್ಯಾಪಿಡೋ ಆಪ್ ಆಧಾರಿತ ಆಟೋಗಳ ಸುಲಿಗೆಗೆ ಬ್ರೇಕ್ ಹಾಕಲು ಸಾರಿಗೆ ಇಲಾಖೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯಿಂದ ಎರಡು ವಾಟ್ಸ್‌ಪ್ ನಂಬರ್‌ಗಳು ಈಗಾಗಲೇ ಬಿಡುಗಡೆಯಾಗಿದೆ. ಇಲಾಖೆ ಸಾರ್ವಜನಿಕರಿಗೆ ಸಹಾಯವಾಣಿ ನಂಬರ್ ನೀಡಿದ್ದು, ಆ ಮೂಲಕ ದೂರು ಸ್ವೀಕರಿಸಲಿದೆ. ಜೊತೆಗೆ ನಿಯಮ ಮೀರಿ ಓಲಾ, ಉಬರ್ ಕಾರ್ಯನಿರ್ವಹಿಸಿದರೆ, ಇಲಾಖೆ ದಂಡ ಪ್ರಯೋಗ ಮಾಡಲಿದೆ. ಅದು ಹೇಗೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಓಲಾ, ಉಬರ್, ರ‍್ಯಾಪಿಡೋ ಆಟೋಗಳು ಒಂದೊಮ್ಮೆ ನಿಯಮ ಮೀರಿ ಚಾಲಕರು ಆಪ್ ಆನ್ ಮಾಡಿ ಸೇವೆ ನೀಡಿದರೆ, 5 ಸಾವಿರ ದಂಡವನ್ನು (Fine) ಕಂಪನಿ ಕಟ್ಟಬೇಕಾಗಲಿದೆ ಎಂದು ಸಾರಿಗೆ ಇಲಾಖೆ ಎಚ್ಚರಿಕೆ ಕೊಟ್ಟಿದೆ. ಇನ್ನೂ ಸಾರಿಗೆ ಇಲಾಖೆ ಕೂಡ ಫೀಲ್ಡ್‌ಗೆ ಇಳಿಯಲಿದೆ. ಅಗ್ರಿಗೇಟರ್ ಲೈಸೆನ್ಸ್ ಪಡೆಯುವವರೆಗೂ ಓಲಾ, ಉಬರ್ ಅಡಿ ತ್ರಿಚಕ್ರ ವಾಹನಗಳು ಓಡಾಡುವಂತಿಲ್ಲ. ನಿಯಮ ಉಲ್ಲಂಘನೆ ಮಾಡಿದರೆ ಅಂತಹ ಆಟೋಗಳನ್ನ (Auto) ಪತ್ತೆ ಹಚ್ಚಿ 5 ಸಾವಿರ ದಂಡ ವಿಧಿಸಲಿದೆ.
ಓಲಾ, ಉಬರ್ ಆಟೋ ಓಡಿಸಿದರೆ ಸಾರ್ವಜನಿಕರು ಕೂಡ ನೇರವಾಗಿ ದೂರು ನೀಡಬಹುದಾಗಿದೆ. ಅಥವಾ ಸಾರಿಗೆ ಇಲಾಖೆಯಿಂದ ನೀಡಿರುವ ಸಹಾಯವಾಣಿ 9449863426 ನಂಬರ್‍ಗೆ ಪ್ರಯಾಣಿಕರೂ ಕೂಡ ದೂರು ನೀಡಬಹುದು. ಇದಕ್ಕಾಗಿ ಈಗಾಗಲೇ ಸಾರಿಗೆ ಇಲಾಖೆ ಸಹ ಹೆಲ್ಪ್‍ಲೈನ್ ಬಿಡುಗಡೆ ಮಾಡಿದ್ದು, ಸಾರ್ವಜನಿಕರು ಕೂಡ ದೂರು ಸಲ್ಲಿಸಲು ಅವಕಾಶ ನೀಡಿದೆ. ಇನ್ನೂ ಸಾರಿಗೆ ಇಲಾಖೆಯ ನಿರ್ಧಾರವನ್ನು ಆಟೋ ಚಾಲಕರು ಸ್ವಾಗತಿಸಿದ್ದಾರೆ. ನಮ್ಮ ಆಟೋಗಳನ್ನ ಬೇಕಾದ್ರೆ ಪರಿಶೀಲನೆ ಮಾಡಲಿ, ಸರ್ಕಾರದ ಆದೇಶದಂತೆ ಆಪ್ ಬಳಸಲ್ಲ ಎಂದಿದ್ದಾರೆ. ಇದನ್ನೂ ಓದಿ: ಮುಂದಿನ ವಾರಾಂತ್ಯದಲ್ಲಿ ದೆಹಲಿಗೆ ಸಿಎಂ ಭೇಟಿ
ಸಾರಿಗೆ ಇಲಾಖೆಯ ನಿರ್ಧಾರವನ್ನು ಆಟೋ ಚಾಲಕರು ಸ್ವಾಗತಿಸಿದ್ದಾರೆ. ನಮ್ಮ ಆಟೋಗಳನ್ನು ಬೇಕಾದರೆ ಪರಿಶೀಲನೆ ಮಾಡಲಿ, ಸರ್ಕಾರದ ಆದೇಶದಂತೆ ಆಪ್ ಬಳಸಲ್ಲ ಎಂದಿದ್ದಾರೆ. ಆದರೂ ಇನ್ನೂ ಲೈಸನ್ಸ್ ಇಲ್ಲದಿದ್ರೂ ಓಲಾ, ಉಬರ್ ಸೇವೆ ನಗರದಲ್ಲಿ ಮುಂದುವರಿದಿದೆ. ಗ್ರಾಹಕರಿಗೆ ಆಪ್‍ಗಳಲ್ಲಿ ತಪ್ಪು ಮಾಹಿತಿ ನೀಡಿ, ಸುಲಿಗೆ ಮಾಡ್ತಿದೆ. ದೂರದ ಪ್ರಯಾಣವನ್ನ ಕಡಿಮೆ ಕಿಲೋ ಮೀಟರ್ ಅಂತರ ತೋರಿಸಿ ಗ್ರಾಹಕರಿಗೆ ವಂಚನೆ ಮಾಡಲಾಗುತ್ತಿರುವುದು ದುರಂತವಾಗಿದೆ. ಇದನ್ನೂ ಓದಿ: ಬೆಂಗ್ಳೂರಿನ ಹಾಟ್‌ಸ್ಪಾಟ್‌ನಲ್ಲಿ ಪ್ರಿಪೇಯ್ಡ್ ಕೌಂಟರ್ – ಆಟೋ ಚಾಲಕರ ಮಾಸ್ಟರ್ ಪ್ಲ್ಯಾನ್
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಓಲಾ(OLA), ಉಬರ್ (Uber), ರ್ಯಾಪಿಡೋ (Rapido) ಆಪ್ ಆಧಾರಿತ ಆಟೋಗಳ ಸುಲಿಗೆಗೆ ಬ್ರೇಕ್ ಹಾಕಲು ಸಾರಿಗೆ ಇಲಾಖೆ ಮುಂದಾಗಿದೆ. ಆಟೋಗಳನ್ನ ಸೀಜ್ ಮಾಡಲು ಹೊರಟಿದ್ದ ಸಾರಿಗೆ ಇಲಾಖೆಯ ವಿರುದ್ಧ ದೊಡ್ಡ ಪ್ರತಿಭಟನೆಯೇ ನಡೆದಿದೆ.
ಹೌದು. ಓಲಾ, ಉಬರ್, ರ್ಯಾಪಿಡೋ ಆಪ್ ಆಧಾರಿತ ಆಟೋಗಳಿಂದ ಹಾಡಹಗಲೇ ಜನರಿಂದ ಸುಲಿಗೆ ನಡೀತಾ ಇದೆ. ಸಾರಿಗೆ ಇಲಾಖೆ ಖಡಕ್ ಎಚ್ಚರಿಕೆ ಕೊಟ್ಟಿದ್ರೂ ನಿಂತಿಲ್ಲ ಇವರುಗಳ ಸುಲಿಗೆ. `ಆಟೋ’ಟೋಪದ ಬಗ್ಗೆ ಪಬ್ಲಿಕ್ ಟಿವಿ ವರದಿಗಾರರು ವಾಸ್ತವ ಚಿತ್ರಣವನ್ನ ತೆರೆದಿಟ್ಟಿದ್ದಾರೆ.
ಓಲಾ, ಉಬರ್, ರ್‍ಯಾಪಿಡೋ ಕಂಪನಿಗಳಿಗೆ ಈಗಾಗಲೇ ನೋಟಿಸ್ ನೀಡಿ ಕೊಟ್ಟ ಗಡುವು ಕೂಡ ಮುಗಿದಿದೆ. ಆದರೆ ಓಲಾ, ಉಬರ್ ಕಂಪನಿಗಳು ಹೆಚ್ಚುವರಿ ಹಣ ವಸೂಲಿ ಮಾಡ್ತಿಲ್ಲ ಅಂತ ವಾದ ಮಾಡ್ತಿದೆ. ನಾಳೆ ಸಂಜೆ ಓಲಾ, ಉಬರ್ ಆಟೋಗಳ ಭವಿಷ್ಯ ನಿರ್ಧಾರವಾಗಲಿದ್ದು, ಸಭೆ ಬಳಿಕ ಸಾರಿಗೆ ಇಲಾಖೆ (Transport Department) ಅಂತಿಮ ನಿರ್ಣಯ ಗೊತ್ತಾಗಲಿದೆ. ಇದನ್ನೂ ಓದಿ: ಬಿಜೆಪಿ ಸುಳ್ಳಿನ ಫ್ಯಾಕ್ಟರಿ, ಮೋದಿ ಒಳ್ಳೆಯ ನಾಟಕವಾಡುತ್ತಾರೆ: ಸಿದ್ದರಾಮಯ್ಯ
ಆಪ್ ಆಧಾರಿತ ಆಟೋ (Auto)ಗಳ ವಿರುದ್ಧ ಸಾರಿಗೆ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಓಲಾ, ಉಬರ್, ರ್ಯಾಪಿಡೋ ಆಪ್ ಮೂಲಕ ಆಟೋ ಓಡಿಸಿದ್ರೆ ಜಪ್ತಿ ಮಾಡೋದಾಗಿ ಸಾರಿಗೆ ಇಲಾಖೆ ಎಚ್ಚರಿಕೆ ಕೊಟ್ಟಿದೆ. ಈ ಬೆನ್ನಲ್ಲೇ ಜಯನಗರ ಆರ್‌ಟಿಓ ಅಧಿಕಾರಿಗಳು ಆಪ್ ಆಧಾರಿತ ಆಟೋ ಚಾಲಕನಿಗೆ ಗೆ 6 ಸಾವಿರ ರೂ. ದಂಡದ ರಶೀದಿಯನ್ನ ಕೊಟ್ಟಿದ್ದಾರೆ. ಇದರಿಂದ ರೊಚ್ಚಿಗೆದ್ದ ಆಟೋ ಚಾಲಕರು ಜಯನಗರ ಬಸ್ ನಿಲ್ದಾಣದ ಬಳಿ ಬೃಹತ್ ಪ್ರತಿಭಟನೆ ನಡೆಸಿದ್ರು.
ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳದೇ ಆಟೋಗಳನ್ನ ಸೀಜ್ ಮಾಡುವ ಸಾರಿಗೆ ಇಲಾಖೆಯ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿವೆ. ಆಟೋಗಳನ್ನ ಸೀಜ್ ಮಾಡಿದ್ರೆ, ಸಿಎಂ, ಸಾರಿಗೆ ಸಚಿವರ ಮನೆಗಳಿಗೆ ಮುತ್ತಿಗೆ ಹಾಕ್ತೇವೆ ಅಂತ ಆಪ್ ಆಧಾರಿತ ಆಟೋ ಚಾಲಕರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ನಗರದಲ್ಲಿ ಓಲಾ (Ola), ಉಬರ್ (Uber) ಆಟೋದಲ್ಲಿ (Auto) ಓಡಾಡ್ತಿರೋರಿಗೆ ಇನ್ಮುಂದೆ ಆ್ಯಪ್‍ನಲ್ಲಿ (APP) ಸಿಗೋದು ಡೌಟ್. ದುಪ್ಪಟ್ಟು ದರ ವಿಧಿಸುತ್ತಿದ್ದ ಆ್ಯಪ್ ಆಟೋಗಳ ವಿರುದ್ಧ ಸಾರಿಗೆ ಇಲಾಖೆಯೇ ಖುದ್ದು ಸಮರ ಸಾರಿ, ನೋಟಿಸ್ ಜಾರಿ ಮಾಡಿದೆ.
ಆಟೋಗಳ ಮಿನಿಮಮ್ ಜಾರ್ಜ್ 30 ರೂ. ಇದೆ. ಆದರೆ, ಓಲಾ-ಉಬರ್ ಆಟೋಗಳು 100 ರೂಪಾಯಿ ವಸೂಲಿ ಮಾಡುತ್ತಿವೆ. ಈ ಬಗ್ಗೆ, ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಟೀಕೆ ದೂರು ಕೇಳಿಬಂದಿತ್ತು. ಹೀಗಾಗಿ ರಸ್ತೆ ಸುರಕ್ಷತಾ ವಿಭಾಗದಲ್ಲಿ ಆ್ಯಪ್ ಸಂಸ್ಥೆಗಳಿಗೆ ನೋಟಿಸ್ ನೀಡಿದೆ. ಇದನ್ನೂ ಓದಿ: ಕಾಂಗ್ರೆಸ್ PayCM ಕ್ಯಾಂಪೇನ್ – ಬಿಜೆಪಿ ನಾಯಕರಿಗೆ ಹೈಕಮಾಂಡ್ ಕ್ಲಾಸ್
3 ದಿನದೊಳಗೆ ವಿವರಣೆ ಸಲ್ಲಿಸಬೇಕು. ಇಲ್ಲದೇ ಇದ್ದರೆ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಸಿದೆ. ಸಾರಿಗೆ ಇಲಾಖೆಯ ನೋಟಿಸ್ ಸ್ವಾಗತಾರ್ಹ ಎಂದು ಆಟೋ ಚಾಲಕರು, ಓಲಾ-ಉಬರ್ ಕ್ಯಾಬ್ ಡ್ರೈವರ್ ಅಸೋಸಿಯೇಷನ್ ಹೇಳಿದೆ. ಅಂದಹಾಗೆ, ಓಲಾ-ಉಬರ್ ಆಟೋಗಳ ಸುಲಿಗೆ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಿಎಂ ಬಸವರಾಜ ಬೊಮ್ಮಾಯಿಗೆ (Basavaraj Bommai) ಸಂಸದ ತೇಜಸ್ವಿ ಸೂರ್ಯ (Tejasvi Surya) ಮನವಿ ಮಾಡಿದ್ದರು. ಇದನ್ನೂ ಓದಿ: ಗರ್ಭಿಣಿಯರು ಹೆರಿಗೆಗೆ ಕೈಲಾಸಕ್ಕೆ ಬನ್ನಿ: ನಿತ್ಯಾನಂದನ ಕರೆಯೋಲೆ
Live Tv
[brid partner=56869869 player=32851 video=960834 autoplay=true]