Tag: Rapido

  • ಐದೇ ನಿಮಿಷದಲ್ಲಿ ಆಟೋ, ಇಲ್ಲವಾದಲ್ಲಿ 50 ರೂ. ಆಫರ್ ನೀಡಿ ವಂಚನೆ – ರಾಪಿಡೋಗೆ 10 ಲಕ್ಷ ದಂಡ

    ಐದೇ ನಿಮಿಷದಲ್ಲಿ ಆಟೋ, ಇಲ್ಲವಾದಲ್ಲಿ 50 ರೂ. ಆಫರ್ ನೀಡಿ ವಂಚನೆ – ರಾಪಿಡೋಗೆ 10 ಲಕ್ಷ ದಂಡ

    – ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ಕಟ್ಟುನಿಟ್ಟಿನ ಕ್ರಮ

    ನವದೆಹಲಿ: ‘ಐದೇ ನಿಮಿಷದಲ್ಲಿ ಆಟೋ ಅಥವಾ ಪಡೆಯಿರಿ ಅಥವಾ 50 ರೂ. ಪಡೆಯಿರಿ’ (AUTO IN 5 MIN OR GET Rs 50) ಹೀಗೆ ಆಫರ್ ನೀಡಿ ಗ್ರಾಹಕರನ್ನು ವಂಚಿಸುತ್ತಿದ್ದ ‘ರಾಪಿಡೋ’ (Rapido) ಸಂಸ್ಥೆಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ಬರೋಬ್ಬರಿ 10 ಲಕ್ಷ ರೂ. ದಂಡ ವಿಧಿಸುವ ಮೂಲಕ ಕಠಿಣ ಕ್ರಮ ಕೈಗೊಂಡಿದೆ. ಇಂಥ ಮೋಸದ ಜಾಹೀರಾತು ನೀಡುವಂಥ ಸಂಸ್ಥೆಗಳಿಗೆ ಈ ಮೂಲಕ ಎಚ್ಚರಿಕೆ ನೀಡಿದೆ.

    ಸದಾ ಗ್ರಾಹಕರ ದಾರಿ ತಪ್ಪಿಸುವ ಜಾಹೀರಾತು ನೀಡಿ ವಂಚಿಸುತ್ತಿದ್ದ ಕಾರಣಕ್ಕೆ ರಾಪಿಡೋ ಸಂಸ್ಥೆ ವಿರುದ್ಧ ಅತ್ಯಧಿಕ ದೂರುಗಳು ಬಂದಿದ್ದರಿಂದ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಸಚಿವ ಪ್ರಹ್ಲಾದ್ ಜೋಶಿ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಿದ್ದರು. ಅದರಂತೆ ಕಾರ್ಯಾಚರಣೆಗಿಳಿದ ಸಿಸಿಪಿಎ ಪರಿಶೀಲನೆ ನಡೆಸಿ ಕ್ರಮ ಕೈಗೊಂಡಿದ್ದು, ತಕ್ಷಣದಿಂದಲೇ ಇಂಥ ದಾರಿ ತಪ್ಪಿಸುವ ಜಾಹೀರಾತುಗಳನ್ನು ನಿಲ್ಲಿಸುವಂತೆ ಆದೇಶ ಸಹ ನೀಡಿದೆ.

    ಗ್ರಾಹಕರ ಹಕ್ಕುಗಳ ರಕ್ಷಣೆ ವಿಚಾರದಲ್ಲಿ ಒಂದು ಹೆಜ್ಜೆ ಮುಂದಿರುವ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ಜನರ ದಾರಿ ತಪ್ಪಿಸುವ ಜಾಹೀರಾತು ಹಾಗೂ ಅನ್ಯಾಯದ ವ್ಯಾಪಾರ ಪದ್ಧತಿ ಅನುಸರಿಸುತ್ತಿದ್ದ ಕಾರಣಕ್ಕೆ ರಾಪಿಡೋ ಟ್ರಾನ್ಸ್ಪೋರ್ಟೇಷನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್‌ಗೆ 10 ಲಕ್ಷ ರೂ. ದಂಡ ವಿಧಿಸಿದೆ.

    ಮೋಸದ ಜಾಹೀರಾತು ನಿಲ್ಲಿಸಲು ರಾಪಿಡೋಗೆ ಸ್ಪಷ್ಟ ನಿರ್ದೇಶನ:
    ‘5 ನಿಮಿಷದಲ್ಲಿ ಆಟೋ ಸೇವೆ ಅಥವಾ 50 ರೂ. ಪಡೆಯಿರಿ’ ಹಾಗೂ ‘ಗ್ಯಾರಂಟಿ ಆಟೋ’ ಎಂದೆಲ್ಲಾ ಭರವಸೆ ನೀಡುತ್ತಿದ್ದ ರಾಪಿಡೋ ಜಾಹೀರಾತು ಮತ್ತು ಸಂಬಂಧಿತ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಸಿಸಿಪಿಎ ಇದೊಂದು ಮೋಸದ ಜಾಹೀರಾತು ಎಂಬುದನ್ನು ಖಚಿತಪಡಿಸಿಕೊಂಡಿದೆ. ಈ ಜಾಹೀರಾತು ವಂಚನೆಯಿಂದ ಕೂಡಿದ್ದು, ಜನರ ದಾರಿ ತಪ್ಪಿಸುವುದಾಗಿದೆ. ಅಲ್ಲದೇ, ಗ್ರಾಹಕರನ್ನು ಮೋಸಗೊಳಿಸುವುದಾಗಿದೆ. ಹಾಗಾಗಿ ತಕ್ಷಣವೇ ಇದನ್ನು ನಿಲ್ಲಿಸುವಂತೆ ರಾಪಿಡೋಗೆ ಸ್ಪಷ್ಟ ನಿರ್ದೇಶನ ನೀಡಿದೆ.

    ಗ್ರಾಹಕರಿಂದ 1799 ದೂರುಗಳು:
    ರಾಪಿಡೋ ಸಂಸ್ಥೆಯ ಮೋಸದ ಜಾಹೀರಾತು ವಿರುದ್ಧ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (ಎನ್‌ಸಿಹೆಚ್) ಮೂಲಕ ಅತ್ಯಧಿಕ ದೂರುಗಳು ದಾಖಲಾಗಿವೆ. 2023ರ ಏಪ್ರಿಲ್‌ನಿಂದ 2024ರ ಮೇ ವರೆಗೆ 575 ದೂರುಗಳು ಬಂದಿವೆ. 2024 ಜೂನ್‌ನಿಂದ 2025ರ ಜುಲೈವರೆಗೆ ಹಿಂದಿನಕ್ಕಿಂತ ದುಪ್ಟಟ್ಟು ಅಂದರೆ 1,224 ದೂರುಗಳು ಬಂದಿವೆ. ಹೀಗಾಗಿ ಸಚಿವ ಪ್ರಹ್ಲಾದ್ ಜೋಶಿ ಅವರು ಇದನ್ನು ಗಂಭೀರವಾಗಿ ಪರಿಗಣಿಸಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರಕ್ಕೆ ಸೂಚನೆ ನೀಡಿದ್ದರು.

    ಸಿಸಿಪಿಎ ತನಿಖೆ ವೇಳೆ ರಾಪಿಡೋ ಜಾಹೀರಾತುಗಳಲ್ಲಿ ಟಿ&ಸಿ ಅನ್ವಯ ಎಂಬುದು ಓದಲಾಗದಂಥ ಅತ್ಯಂತ ಚಿಕ್ಕ ಗಾತ್ರದ ಅಕ್ಷರದಲ್ಲಿ ಪ್ರದರ್ಶಿಸಲ್ಪಟ್ಟಿತ್ತು. ಅಲ್ಲದೇ, ಭರವಸೆ ನೀಡಿದಂತೆ 50 ರೂ. ಮೊತ್ತವೂ ಸಿಗುತ್ತಿರಲಿಲ್ಲ. ಬದಲಿಗೆ ‘ರಾಪಿಡೋ ನಾಣ್ಯಗಳು’ ರೂಪದಲ್ಲಿ ಅದೂ ಕೇವಲ 7 ದಿನಗಳ ಮಾನ್ಯತೆ ಹೊಂದಿತ್ತು. ಇದಲ್ಲದೆ, ಈ ಆಫರ್ ಅನ್ನು ‘ವೈಯಕ್ತಿಕ ಕ್ಯಾಪ್ಟನ್‌ಗಳು ನೀಡುತ್ತಿದ್ದಾರೆಯೇ ಹೊರತು ರಾಪಿಡೋ’ ಅಲ್ಲ ಎಂದು ಹೇಳಿ ಕಂಪನಿ ಹೊಣೆಗಾರಿಕೆಯಿಂದ ಜಾರಿಕೊಳ್ಳತೊಡಗಿತ್ತು.

    ರಾಪಿಡೋ ವಿರುದ್ಧ ಗ್ರಾಹಕರಿಂದ ಹೆಚ್ಚಿನ ಸಂಖ್ಯೆಯಲ್ಲಿ ದೂರುಗಳು ಬರುತ್ತಲೇ ಇದ್ದವು. ಸೇವಾ ನ್ಯೂನತೆ, ಪಾವತಿಸಿದ ಮೊತ್ತ ಮರುಪಾವತಿ ಮಾಡದೇ ಇರುವುದು, ಅಧಿಕ ಶುಲ್ಕ ವಿಧಿಸುವುದು, ಭರವಸೆ ನೀಡಿದಂತೆ ಸೇವೆ ಒದಗಿಸುವಲ್ಲಿ ವಿಫಲ ಹಾಗೂ ಖಾತರಿಪಡಿಸಿದ ‘5 ನಿಮಿಷ’ ಸೇವೆ ಪೂರೈಸದಿರುವ ಬಗ್ಗೆ ದೂರುಗಳು ವ್ಯಾಪಕವಾಗಿದ್ದವು. ಈ ಬಗ್ಗೆ ಸಂಸ್ಥೆಯ ಗಮನ ಸೆಳೆದರೂ ಪರಿಹರಿಸದೆ ಕಡೆಗಣಿಸಿತ್ತು ರಾಪಿಡೋ.

    ದೊಡ್ಡ ದೊಡ್ಡ ಭರವಸೆ ನೀಡುವ ಅಥವಾ ಷರತ್ತುಗಳನ್ನು ವಿವರಿಸದೆ ‘ಖಾತರಿ’ ಅಥವಾ ‘ಖಚಿತ’ದಂತಹ ನುಡಿಗಟ್ಟು ಬಳಸುವ ಜಾಹೀರಾತುಗಳ ಬಗ್ಗೆ ಗ್ರಾಹಕರು ಜಾಗರೂಕರಾಗಿರಬೇಕು ಎಂದು ಸಿಸಿಪಿಎ ಸಲಹೆ ನೀಡಿದೆ. ಅಲ್ಲದೇ, ಇಂಥ ದಾರಿ ತಪ್ಪಿಸುವ ಜಾಹೀರಾತು, ಅನ್ಯಾಯದ ವ್ಯಾಪಾರ ಪದ್ಧತಿಗಳಿಂದ ಸಮಸ್ಯೆ ಎದುರಿಸಿದರೆ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ ‘1915’ ಕರೆ ಮಾಡಿ ದೂರು ಸಲ್ಲಿಸಲು ಅಥವಾ ಎನ್‌ಸಿಹೆಚ್ ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ಮೂಲಕ ದೂರು ಸಲ್ಲಿಸುವಂತೆ ತಿಳಿಸಿದೆ.

  • ಕರ್ನಾಟಕದಲ್ಲಿ ಮತ್ತೆ ಬೈಕ್ ಟ್ಯಾಕ್ಸಿ ಸೇವೆ ಆರಂಭ

    ಕರ್ನಾಟಕದಲ್ಲಿ ಮತ್ತೆ ಬೈಕ್ ಟ್ಯಾಕ್ಸಿ ಸೇವೆ ಆರಂಭ

    ಬೆಂಗಳೂರು: ಒಂದು ತಿಂಗಳ ನಂತರ ರಾಜ್ಯದಲ್ಲಿ ಮತ್ತೆ ಬೈಕ್ ಟ್ಯಾಕ್ಸಿ (Bike Taxi) ಸೇವೆ ಆರಂಭವಾಗಿದೆ.ಇದನ್ನೂ ಓದಿ: ಯೂಟ್ಯೂಬರ್‌ ಸಮೀರ್‌ಗೆ ಜಾಮೀನು ಮಂಜೂರು

    ಕರ್ನಾಟಕ ಹೈಕೋರ್ಟ್ (High Court) ಏಕಸದಸ್ಯ ಪೀಠದ ಆಅದೇಶದಂತೆ ಜೂ.16ರಿಂದ ರಾಜ್ಯಾದ್ಯಂತ ಬೈಕ್ ಟ್ಯಾಕ್ಸಿ ಸ್ಥಗಿತಗೊಂಡಿತ್ತು. ಈ ಕುರಿತಂತೆ ಹೈಕೋರ್ಟ್ ಸರ್ಕಾರಕ್ಕೆ ಒಂದು ತಿಂಗಳೊಳಗೆ ನಿರ್ಧಾರ ತಿಳಿಸುವಂತೆ ಸೂಚಿಸಿದೆ.

    ಈಗಾಗಲೇ ಎರಡು ಫ್ಲಾಟ್‌ಫಾರಂಗಳಲ್ಲಿ ಬುಕ್ಕಿಂಗ್ ಆಯ್ಕೆ ತೋರಿಸುತ್ತಿದ್ದು, ಓಲಾ ಹೊರತುಪಡಿಸಿ ರ‍್ಯಾಪಿಡೋ (Rapido) ಹಾಗೂ ಊಬರ್ (Uber) ಕಂಪನಿಗಳಿಂದ ಸೇವೆ ಆರಂಭವಾಗಿದೆ.ಇದನ್ನೂ ಓದಿ: ನನ್ನ ಪತಿ ಸುಳ್ಳು ಹೇಳ್ತಿದ್ದಾನೆ, ಇಟ್ಟುಕೊಂಡವಳ ಜೊತೆ ಸಂಸಾರ ಮಾಡಲು ನನ್ನನ್ನು ಓಡಿಸಿದ್ದ: ಅನಾಮಿಕನ ಮೊದಲ ಪತ್ನಿ

  • ಶಾರ್ಟ್‌ಕಟ್‌ನಲ್ಲಿ ಬಂದಿದ್ದಕ್ಕೆ ಇಂಗ್ಲಿಷ್‌ನಲ್ಲಿ ಕೆಟ್ಟದಾಗಿ ಬೈಯ್ದು, ಹಲ್ಲೆ ಮಾಡಿದ್ರು – ರ‍್ಯಾಪಿಡೊ ಚಾಲಕ ಸುಹಾಸ್‌

    ಶಾರ್ಟ್‌ಕಟ್‌ನಲ್ಲಿ ಬಂದಿದ್ದಕ್ಕೆ ಇಂಗ್ಲಿಷ್‌ನಲ್ಲಿ ಕೆಟ್ಟದಾಗಿ ಬೈಯ್ದು, ಹಲ್ಲೆ ಮಾಡಿದ್ರು – ರ‍್ಯಾಪಿಡೊ ಚಾಲಕ ಸುಹಾಸ್‌

    – ಯುವತಿ ಮೇಲಿನ ಹಲ್ಲೆ ಕೇಸ್‌ಗೆ ಟ್ವಿಸ್ಟ್‌

    ಬೆಂಗಳೂರು: ಯುವತಿ ಮೇಲೆ ರ‍್ಯಾಪಿಡೊ (Rapido) ಬೈಕ್‌ ಚಾಲಕ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ. ಮೊದಲು ಆ ಯುವತಿಯೇ ನನ್ನ ಮೇಲೆ ಹಲ್ಲೆ ಮಾಡಿದ್ದು ಎಂದು ಬೈಕ್‌ ಚಾಲಕ (Bike Rider) ಸುಹಾಸ್‌ ಆರೋಪಿಸಿದ್ದಾನೆ.

    ವಿಡಿಯೋವೊಂದರಲ್ಲಿ (Viral Video) ಮಾತನಾಡಿರುವ ಬೈಕ್‌ ಚಾಲಕ ಸುಹಾಸ್‌, ಮೊದಲು ಆ ಹುಡುಯೇ ನನ್ನ ಮೇಲೆ ಹಲ್ಲೆ ಮಾಡಿದ್ದು. ಅವಾಚ್ಯ ಶಬ್ಧಗಳಿಂದ ನಿಂಧಿಸಿ ಹಲ್ಲೆ ಮಾಡಿದ್ದು ಆ ಯುವತಿಯೇ. ಶಾರ್ಟ್‌ಕಟ್‌ನಲ್ಲಿ ಬಂದೆ ಅಂತ ಅರ್ಧ ದಾರಿಯಲ್ಲಿ ನಿಲ್ಲಿಸಿ ಇಂಗ್ಲಿಷ್‌ನಲ್ಲಿ ಬೈದ್ರು. ನಾನು 5 ವರ್ಷದಿಂದ ರ‍್ಯಾಪಿಡೋ ಓಡಿಸ್ತಾ ಇದ್ದೇನೆ, ದಾರಿ ಗೊತ್ತು ಅಂದೆ. ಗಾಡಿ‌ ನಿಲ್ಲಿಸಿ ಇಂಗ್ಲಿಷ್‌ನಲ್ಲಿ ನನಗೆ ಕೆಟ್ಟದಾಗಿ ಬೈದರು, ಟಿಫಿನ್ ಬಾಕ್ಸ್‌ನಲ್ಲಿ ಹೊಡೆದ್ರು ಎಂದು ಆರೋಪಿಸಿದ್ದಾನೆ.

    ಅಷ್ಟು ಜನರ ಮುಂದೆ ಹೊಡೆದಿದ್ದರಿಂದ ನಾನೂ ಸಿಟ್ಟಿನಲ್ಲಿ ಹೊಡೆದೆ. ಆಮೇಲೆ ನಾನು ಅವರು ಕೆಲಸ ಮಾಡುವ ಸ್ಟೋರ್‌ಗೆ ಹೋದೆ. ಹೋಗಿ ಅಲ್ಲಿನ ಮ್ಯಾನೇಜರ್‌ಗೆ ದೂರು ನೀಡಿದೆ. ಅದಕ್ಕೆ ಮ್ಯಾನೇಜರ್ ಅಂದರು ಅವಳು ಸೈಕೋ, ಇಲ್ಲೂ ಹುಚ್ಚುಚ್ಚಾಗಿ ಆಡ್ತಾ ಇರ್ತಾಳೆ ಅಂದ್ರು. ಅದಕ್ಕೆ ನಾನು ವಾಪಸ್ ಬಂದೆ, ಈಗ ವಿಡಿಯೋ ವೈರಲ್ ಆದ್ಮೇಲೆ ಪೊಲೀಸರು ಕಾಲ್ ಮಾಡಿದ್ರು. ತನಿಖೆಗೆ ಸಹಾಕರ ನೀಡ್ತೆನೆ ಎಂದು ಹೇಳಿದ್ದಾರೆ.

    ಏನಾಗಿತ್ತು?
    ಶ್ರೇಯಾ ಅನ್ನೋ ಯುವತಿ ರ‍್ಯಾಪಿಡೊ ಬುಕ್ ಮಾಡಿದ್ರು. ಬೈಕ್ ಚಾಲಕ ಸುಹಾಸ್ ಮಹಿಳೆಯನ್ನ ಕೂರಿಸಿಕೊಂಡು ಡ್ರೈವ್ ಮಾಡುವಾಗ ಓವರ್ ಸ್ಪೀಡ್‌ನಲ್ಲಿ ಬೈಕ್ ಚಲಾಯಿಸಿದ್ದ. ಆಗ ಓವರ್ ಸ್ಪೀಡಾಗಿ ಹೋಗದಂತೆ ಶ್ರೇಯಾ ಎಚ್ಚರಿಕೆ ನೀಡಿದ್ದಾಳೆ. ಇದೇ ವಿಚಾರಕ್ಕೆ ಶ್ರೇಯಾ ಮತ್ತು ಸುಹಾಸ್ ನಡುವೆ ಕಿರಿಕ್ ನಡೆದಿತ್ತು. ಈ ವೇಳೆ ಮಾತಿಗೆ ಮಾತು ಬೆಳೆದು ಸುಹಾಸ್, ಶ್ರೇಯಾಳ ಕಪಾಳಕ್ಕೆ ರಪ್ ಅಂತ ಬಾರಿಸಿದ್ದ. ಬಳಿಕ ಸ್ಥಳೀಯರು ಶ್ರೇಯಾಳನ್ನ ರಕ್ಷಣೆ ಮಾಡಿದ್ದರು. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲೂ ವೈರಲ್‌ ಆಗಿತ್ತು.

  • ರ‍್ಯಾಪಿಡೊ ಚಾಲಕನಿಂದ ಹಲ್ಲೆ – ಒಂದೇ ಏಟಿಗೆ ಕೆಳಗೆ ಬಿದ್ದ ಯುವತಿ, ಸ್ಥಳೀಯರಿಂದ ರಕ್ಷಣೆ

    ರ‍್ಯಾಪಿಡೊ ಚಾಲಕನಿಂದ ಹಲ್ಲೆ – ಒಂದೇ ಏಟಿಗೆ ಕೆಳಗೆ ಬಿದ್ದ ಯುವತಿ, ಸ್ಥಳೀಯರಿಂದ ರಕ್ಷಣೆ

    ಬೆಂಗಳೂರು: ಹಣಕಾಸು ವಿಚಾರಕ್ಕೆ ಗಲಾಟೆ ನಡೆದು ಯುವತಿಯೊಬ್ಬಳ ಮೇಲೆ ರ‍್ಯಾಪಿಡೊ ಬೈಕ್‌ (Rapido Bike) ಚಾಲಕ ಮನಬಂದಂತೆ ಥಳಿಸಿರುವ ಘಟನೆ ಬೆಂಗಳೂರು ನಗರದಲ್ಲಿ (Bengaluru City) ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ರ‍್ಯಾಪಿಡೊ ಬೈಕ್‌ ಚಾಲಕ ಯುವತಿಗೆ (Young Women) ಕಪಾಳಕ್ಕೆ ಪಟಾರನೆ ಹೊಡೆದಿದ್ದಾನೆ. ಒಂದೇ ಏಟಿಗೆ ಯುವತಿ ಕೆಳಗೆ ಬಿದ್ದಿದ್ದು, ಸ್ಥಳೀಯರೊಬ್ಬರು ಈ ಹಲ್ಲೆಯ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಹಲ್ಲೆಯ ವಿಡಿಯೋ ವೈರಲ್ ಆಗಿದೆ. ಇದನ್ನೂ ಓದಿ: ವಿಮಾನ ದುರಂತದ ಹೆಣದ ಮೇಲೆ ನಾವು ರಾಜಕೀಯ ಮಾಡಲ್ಲ, ಅದು ಬಿಜೆಪಿ, ಜೆಡಿಎಸ್ ಕೆಲಸ: ಡಿಕೆಶಿ

    ಶ್ರೇಯಾ ಅನ್ನೋ ಯುವತಿ ರ‍್ಯಾಪಿಡೊ ಬುಕ್‌ ಮಾಡಿದ್ರು. ಬೈಕ್ ಚಾಲಕ ಸುಹಾಸ್ ಮಹಿಳೆಯನ್ನ ಕೂರಿಸಿಕೊಂಡು ಡ್ರೈವ್ ಮಾಡುವಾಗ ಓವರ್ ಸ್ಪೀಡ್‌ನಲ್ಲಿ (Over Speed) ಬೈಕ್ ಚಲಾಯಿಸಿದ್ದಾ‌ನೆ. ಆಗ ಓವರ್ ಸ್ಪೀಡಾಗಿ ಹೋಗದಂತೆ ಶ್ರೇಯಾ ಎಚ್ಚರಿಕೆ ನೀಡಿದ್ದಾಳೆ. ಇದೇ ವಿಚಾರಕ್ಕೆ ಶ್ರೇಯಾ ಮತ್ತು ಸುಹಾಸ್ ನಡುವೆ ಕಿರಿಕ್ ನಡೆದಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಸುಹಾಸ್‌, ಶ್ರೇಯಾಳ ಕಪಾಳಕ್ಕೆ ರಪ್ ಅಂತ ಬಾರಿಸಿದ್ದಾನೆ. ಬಳಿಕ ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ: ಮಲೆನಾಡಿನಲ್ಲಿ ಮಳೆಗೆ 4ನೇ ಬಲಿ – ಮರ ಬಿದ್ದು ವ್ಯಕ್ತಿ ಸಾವು

    ಜಯನಗರ ಠಾಣೆಯಲ್ಲಿ ಚಾಲಕನ ವಿರುದ್ಧ ದೂರು ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಇರಾನ್‌ನ ತೈಲ ಸಂಗ್ರಹ, ಅನಿಲ ಉತ್ಪಾದನಾ ಘಟಕಗಳೇ ಇಸ್ರೇಲ್‌ಗೆ ಟಾರ್ಗೆಟ್

  • ಫುಡ್ ಡೆಲಿವರಿಗೂ ಕಾಲಿಡ್ತಿದೆ Rapido – ಸ್ವಿಗ್ಗಿ, ಝೊಮ್ಯಾಟೋಗಿಂತಲೂ ಕಡಿಮೆ ಕಮಿಷನ್

    ಫುಡ್ ಡೆಲಿವರಿಗೂ ಕಾಲಿಡ್ತಿದೆ Rapido – ಸ್ವಿಗ್ಗಿ, ಝೊಮ್ಯಾಟೋಗಿಂತಲೂ ಕಡಿಮೆ ಕಮಿಷನ್

    – ಸ್ವಿಗ್ಗಿ, ಝೊಮ್ಯಾಟೋ ಷೇರುಗಳ ಮೌಲ್ಯ ಇಳಿಕೆ
    – ಬೆಂಗಳೂರಿನಲ್ಲಿ ಪ್ರಾಯೋಗಿಕ ಪರೀಕ್ಷೆ

    ನವದೆಹಲಿ: ಆಟೋ, ಬೈಕ್ ಟ್ಯಾಕ್ಸಿ ಸೇರಿದಂತೆ ಇನ್ನಿತರ ಸೇವೆಗಳನ್ನು ಒದಗಿಸುತ್ತಿರುವ ರ‍್ಯಾಪಿಡೋ (Rapido) ಇದೀಗ ಫುಡ್ ಡೆಲಿವರಿ (Food Delivery) ಸೇವೆಯನ್ನು ಒದಗಿಸಲು ಮುಂದಾಗಿದೆ.

    ಹೌದು, ಬೈಕ್ ಟ್ಯಾಕ್ಸಿಗೆ ಹೆಸರಾಗಿರುವ ರ‍್ಯಾಪಿಡೋ ಇದೀಗ ಫುಡ್ ಡೆಲಿವರಿ ಮಾಡಲು ಸಜ್ಜಾಗುತ್ತಿದೆ. ಈ ಮೂಲಕ ಸ್ವಿಗ್ಗಿ ಹಾಗೂ ಝ್ಯೊಮ್ಯಾಟೋಗೆ ಕಠಿಣ ಸ್ಪರ್ಧೆ ನೀಡಲಿದ್ದು, ಕಡಿಮೆ ಕಮಿಷನ್‌ನಲ್ಲಿ ಗ್ರಾಹಕರಿಗೆ ಸೇವೆ ಒದಗಿಸಲಿದೆ. ಈಗಾಗಲೇ ರಾಷ್ಟ್ರೀಯ ಹೋಟೆಲ್ ಒಕ್ಕೂಟಗಳ (NRAI) ಜೊತೆ ಒಪ್ಪಂದದ ಕುರಿತಾಗಿ ರ‍್ಯಾಪಿಡೋ ಮಾತುಕತೆ ನಡೆಸಿದ್ದು, ರೆಸ್ಟೋರೆಂಟ್‌ಗಳೊಂದಿಗಿನ ನಿಯಮಗಳಿಗೆ ಒಪ್ಪಿಗೆ ಸೂಚಿಸಿದೆ ಹಾಗೂ ರೆಸ್ಟೋರೆಂಟ್‌ಗಳಿಗೆ ಕಡಿಮೆ ಕಮಿಷನ್ ದರ ನೀಡುವ ಮೂಲಕ ಹೊಸ ಹೆಜ್ಜೆಹಾಕಲು ಸಿದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: DCET ಜೂ.10ರಿಂದ 13ರವರೆಗೆ ದಾಖಲಾತಿ ಪರಿಶೀಲನೆ – KEA

    NRAI ಮಾಹಿತಿ ಪ್ರಕಾರ, ರ‍್ಯಾಪಿಡೋ ಈ ಮೂಲಕ ಸಣ್ಣ ಮಟ್ಟದ ರೆಸ್ಟೋರೆಂಟ್‌ಗಳಿಗೆ ಸಹಾಯ ಮಾಡಲಿದ್ದು, ಆರ್ಡರ್‌ನ ಬೆಲೆಯ ಆಧಾರದ ಮೇಲೆ ರೆಸ್ಟೋರೆಂಟ್‌ಗಳಿಂದ 8-15% ಕಮಿಷನ್ ವಿಧಿಸುವ ನಿರೀಕ್ಷೆಯಿದೆ. ಝ್ಯೊಮ್ಯಾಟೋ ಮತ್ತು ಸ್ವಿಗ್ಗಿಗೆ ಹೋಲಿಸಿದರೆ ಈ ಕಮಿಷನ್ ದರ ಕಡಿಮೆಯಾಗಿದ್ದು, ಅವುಗಳು 16-30% ಶುಲ್ಕ ವಿಧಿಸುತ್ತವೆ. ರ‍್ಯಾಪಿಡೋ 400 ರೂ.ಗಿಂತ ಕಡಿಮೆಯಿರುವ ಆರ್ಡರ್‌ಗಳಿಗೆ 25 ರೂ. ಮತ್ತು 400 ರೂ.ಗಿಂತ ಹೆಚ್ಚಿನ ಆರ್ಡರ್‌ಗಳಿಗೆ 50 ರೂ. ನಿಗದಿತ ಶುಲ್ಕವನ್ನು ವಿಧಿಸುತ್ತದೆ ಎಂದು ವರದಿಗಳು ತಿಳಿಸಿವೆ.

    ಈ ಮೊದಲು 2015ರಲ್ಲಿ ಓಲಾ ಕಂಪನಿ ಓಲಾ ಕೆಫೆಯನ್ನು (Ola Cafe) ಪ್ರಾರಂಭಿಸಿತು. ಅದಾದ ಬಳಿಕ 2017ರಲ್ಲಿ ಉಬರ್ ಕಂಪನಿಯು ಉಬರ್ ಈಟ್ಸ್ (Uber Eats) ಎಂಬುವುದನ್ನು ಪ್ರಾರಂಭಿಸಿತು. ಬಳಿಕ 2020ರಲ್ಲಿ ಉಬರ್ ಝ್ಯೊಮ್ಯಾಟೋ ಜೊತೆಗೆ ಒಪ್ಪಂದ ಮಾಡಿಕೊಂಡು 10% ಪಾಲನ್ನು ಪಡೆಯುತ್ತಿತ್ತು. ಆದರೆ 2022ರಲ್ಲಿ ಉಬರ್ ತನ್ನ ಸಂಪೂರ್ಣ ವ್ಯವಹಾರವನ್ನು ಝ್ಯೊಮ್ಯಾಟೋಗೆ ಮಾರಾಟ ಮಾಡಿತು.

    ಸದ್ಯ ಬೈಕ್, ಆಟೋ, ಪಾರ್ಸೆಲ್, ಕ್ಯಾಬ್ ಎಕಾನಮಿ ಮತ್ತು ಕ್ಯಾಬ್ ಪ್ರೀಮಿಯಂ ಸೇರಿದಂತೆ ಇನ್ನಿತರ ಸೇವೆಗಳನ್ನು ಒದಗಿಸುತ್ತಿರುವ ರ‍್ಯಾಪಿಡೋ ಜೂನ್ ಅಂತ್ಯ ಅಥವಾ ಜುಲೈ ಆರಂಭದಲ್ಲಿ ಫುಡ್ ಡೆಲಿವರಿ ಸೇವೆಯನ್ನು ಬೆಂಗಳೂರಿನಲ್ಲಿ ಆರಂಭಿಸಲಿದೆ ಹಾಗೂ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ತ್ವರಿತವಾಗಿ ಸಿಗುತ್ತದೆ ಸೇವೆಯನ್ನು ನೀಡಲಿದೆ ಎಂದು ತಿಳಿಸಿದೆ.

    ಇನ್ನೂ ಸ್ವಿಗ್ಗಿ (Swiggy) ಹಾಗೂ ಝೊಮ್ಯಾಟೋ (Zomato) ಷೇರುಗಳ ಮೌಲ್ಯದಲ್ಲಿ (Share Price) ಇಳಿಕೆಯಾಗಿದ್ದು, ಸ್ವಿಗ್ಗಿ ಷೇರು ಮೌಲ್ಯ 2.79% (10.45 ರೂ.) ಕುಸಿದು 364.10ರೂ.ನಲ್ಲಿ ವ್ಯವಹಾರ ಮುಗಿಸಿದರೆ, ಝೋಮ್ಯಾಟೋ ಮೌಲ್ಯ 1.92% (4.87 ರೂ.) ಕುಸಿದು 256.84 ರೂ.ನಲ್ಲಿ ವ್ಯವಹಾರ ಮುಗಿಸಿದೆ.ಇದನ್ನೂ ಓದಿ: Honeymoon Murder | ಕಾಂಟ್ರ್ಯಾಕ್ಟ್‌ ಕಿಲ್ಲರ್ಸ್‌.. ಫೋನ್‌ಕಾಲ್‌ನಲ್ಲೇ ಪಿನ್‌ ಟು ಪಿನ್‌ ಅಪ್ಡೇಟ್‌ – ಕೊಲೆ ರಹಸ್ಯ ಬಯಲಾಗಿದ್ದೇ ರೋಚಕ

  • ದೆಹಲಿಯಲ್ಲಿ ಬೈಕ್ ಟ್ಯಾಕ್ಸಿಗಳ ಸಂಚಾರಕ್ಕೆ ಸುಪ್ರೀಂ ತಡೆ

    ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಬೈಕ್ ಟ್ಯಾಕ್ಸಿ (Bike Taxi) ಸಂಚಾರಕ್ಕೆ ಅನುಮತಿ ನೀಡಿದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ (Supreme Court) ಸೋಮವಾರ ತಡೆ ನೀಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಂತಿಮ ನೀತಿಯನ್ನು ರೂಪಿಸುವವರೆಗೆ ದೆಹಲಿಯ ರಸ್ತೆಗಳಲ್ಲಿ ಬೈಕ್ ಟ್ಯಾಕ್ಸಿಗಳು ಸಂಚರಿಸುವಂತಿಲ್ಲ ಎಂದು ಕೋರ್ಟ್ ಹೇಳಿದೆ.

    ಬೈಕ್ ಟ್ಯಾಕ್ಸಿಗಳನ್ನು ನಡೆಸುವ ರ‍್ಯಾಪಿಡೋ (Rapido) ಮತ್ತು ಉಬರ್‌ಗಳಿಗೆ (Uber) ದೆಹಲಿಯಲ್ಲಿ ಕಾರ್ಯನಿರ್ವಹಿಸಲು ಹೈಕೋರ್ಟ್ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ದೆಹಲಿ (Delhi) ಸರ್ಕಾರ ಸಲ್ಲಿಸಿದ ಎರಡು ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಿರುದ್ಧ್ ಬೋಸ್ ಮತ್ತು ರಾಜೇಶ್ ಬಿಂದಾಲ್ ಅವರ ರಜಾಕಾಲದ ಪೀಠ ಈ ಮಧ್ಯಂತರ ತಡೆ ನೀಡಿದೆ. ಇದನ್ನೂ ಓದಿ: ಮತ್ತೆ ಬೀದಿಗಿಳಿದ ರೈತರು- ದೆಹಲಿ, ಚಂಡೀಗಢ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ

    ಸರ್ಕಾರ ಅಂತಿಮ ನೀತಿಯನ್ನು ಪ್ರಕಟಿಸುವವರೆಗೂ ಬೈಕ್ ಟ್ಯಾಕ್ಸಿ ಅಗ್ರಿಗೇಟರ್ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬಾರದು ಎಂದು ಹೈಕೋರ್ಟ್ ನಿರ್ದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಆಪ್ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು.

    ದೆಹಲಿ ಸರ್ಕಾರದ ಪರ ಹಿರಿಯ ವಕೀಲ ಮನೀಶ್ ವಶಿಷ್ಟ್ ವಾದ ಮಂಡಿಸಿದರು. ಈ ವೇಳೆ ಅಂತಿಮ ನೀತಿಯನ್ನು ಪ್ರಕಟಿಸುವವರೆಗೆ ಸರ್ಕಾರದ ನೋಟಿಸ್‍ಗೆ ತಡೆ ನೀಡುವ ಹೈಕೋರ್ಟ್‍ನ ನಿರ್ಧಾರ ರ‍್ಯಾಪಿಡೋ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಅನುಮತಿಸಿದಂತಿದೆ. ದೆಹಲಿ ಸರ್ಕಾರವು ಈ ವರ್ಷದ ಆರಂಭದಲ್ಲಿ ಬೈಕ್ ಟ್ಯಾಕ್ಸಿಗಳು ದೆಹಲಿಯಲ್ಲಿ ಸಂಚರಿಸದಂತೆ ಎಚ್ಚರಿಕೆ ನೀಡಿತ್ತು ಮತ್ತು ಉಲ್ಲಂಘಿಸಿದರೆ ಒಟ್ಟು 1 ಲಕ್ಷ ರೂ.ಗಳ ವರೆಗೂ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿತ್ತು ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಇದನ್ನೂ ಓದಿ: ಎಚ್ಚರಿಕೆಯ ನಡುವೆಯು ಪ್ರವಾಸಿಗರ ಹುಚ್ಚಾಟ – ಮುರುಡೇಶ್ವರದಲ್ಲಿ ಸಮುದ್ರದ ಪಾಲಾದ ಯುವಕ, ಇಬ್ಬರ ರಕ್ಷಣೆ

  • ರ‍್ಯಾಪಿಡೋ ಬೈಕ್‌ ಸವಾರನಿಂದ ಲೈಂಗಿಕ ಕಿರುಕುಳ – ಬೇಸತ್ತ ಯುವತಿ ಬೈಕ್‌ನಿಂದ ಜಂಪ್‌

    ರ‍್ಯಾಪಿಡೋ ಬೈಕ್‌ ಸವಾರನಿಂದ ಲೈಂಗಿಕ ಕಿರುಕುಳ – ಬೇಸತ್ತ ಯುವತಿ ಬೈಕ್‌ನಿಂದ ಜಂಪ್‌

    ಬೆಂಗಳೂರು: ರ‍್ಯಾಪಿಡೋ (Rapido) ಬೈಕ್‌ ಸವಾರನ ಲೈಂಗಿಕ ಕಿರುಕುಳಕ್ಕೆ ಬೇಸತ್ತು ಯುವತಿಯೊಬ್ಬಳು ಚಲಿಸುತ್ತಿದ್ದ ಬೈಕ್‌ನಿಂದಲೇ ಜಿಗಿದಿರುವ ಘಟನೆ ಯಲಹಂಕದ ಹೊರವಲಯದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಬೆಂಗಳೂರಿನ ಯಲಹಂಕ ಉಪನಗರ ನಾಗೇನಹಳ್ಳಿ ಠಾಣಾ (Yelahanka Police Station) ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸದ್ಯ ಆರೋಪಿಯನ್ನ ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ದೊಡ್ಡಗೌಡರ ಕೋಟೆಗೆ ಇಂದು ಯುಪಿ ಸಿಎಂ ಎಂಟ್ರಿ – ಎಲ್ಲೆಲ್ಲಿ ಏನೇನು ಕಾರ್ಯಕ್ರಮ?

    ಏನಿದು ಘಟನೆ?
    ಖಾಸಗಿ ಕಂಪನಿಯಲ್ಲಿ ಆರ್ಕಿಟೆಕ್ಚರ್ ಆಗಿ ಕೆಲಸ ಮಾಡ್ತಿದ್ದ ಯುವತಿ ಇದೇ ತಿಂಗಳ ಏಪ್ರಿಲ್‌ 21 ರಂದು ಯಲಹಂಕದಿಂದ ಇಂದಿರಾನಗರಕ್ಕೆ ತೆರಳಲು ರ‍್ಯಾಪಿಡೋ ಬುಕ್‌ ಮಾಡಿದ್ದಾಳೆ. ಬೈಕ್‌ (Rapido Bike) ಸವಾರ ಓಟಿಪಿ ಪಡೆಯುವ ನೆಪದಲ್ಲಿ ಮೊಬೈಲ್‌ ಕಸಿದಿದ್ದಾನೆ. ಬಳಿಕ ಯುವತಿಗೆ ಲೈಂಗಿಕ ಕಿರುಕುಳ ನೀಡಲು ಆರಂಭಿಸಿದ್ದಾನೆ. ಇದರಿಂದ ಬೇಸತ್ತ ಯುವತಿ ಚಲಿಸುತ್ತಿದ್ದ ಬೈಕ್‌ನಿಂದ ಜಿಗಿದಿದ್ದಾಳೆ. ಇದನ್ನೂ ಓದಿ: ಇಂದಿರಾ ಗಾಂಧಿಯ ಪ್ರತಿರೂಪ ಎಂದಿದ್ದಕ್ಕೆ ಮಹಿಳೆಗೆ ಪ್ರೀತಿಯ ಅಪ್ಪುಗೆ ನೀಡಿದ ಪ್ರಿಯಾಂಕಾ

    ನಂತರ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಗೆ ಯುವತಿ ದೂರು ನೀಡಿದ್ದಾಳೆ. ದೂರಿನ ಆಧಾರದ ಮೇರೆಗೆ ಕೇಸ್‌ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಆಂಧ್ರಪ್ರದೇಶ ಮೂಲದ ದೀಪಕ್‌ ರಾವ್‌ನನ್ನ ಬಂಧಿಸಿದ್ದಾರೆ. ಯಲಹಂಕ ಉಪನಗರ ಪೊಲೀಸರಿಂದ ತನಿಖೆ ಮುಂದುವರಿದಿದೆ.

  • ಡಿ.29ಕ್ಕೆ ಬೆಂಗ್ಳೂರಲ್ಲಿ ಆಟೋ ಸಂಚಾರ ಬಂದ್ – ಸಾರಿಗೆ ಇಲಾಖೆ ವಿರುದ್ಧ ಸಿಡಿದ ಚಾಲಕರು

    ಡಿ.29ಕ್ಕೆ ಬೆಂಗ್ಳೂರಲ್ಲಿ ಆಟೋ ಸಂಚಾರ ಬಂದ್ – ಸಾರಿಗೆ ಇಲಾಖೆ ವಿರುದ್ಧ ಸಿಡಿದ ಚಾಲಕರು

    ಬೆಂಗಳೂರು: ಸಿಲಿಕಾನ್ ಸಿಟಿ ಜನರಿಗೆ ವರ್ಷದ ಕೊನೆಯಲ್ಲಿ ಆಟೋ ಚಾಲಕರು (Auto Drivers) ಶಾಕ್ ನೀಡಿದ್ದಾರೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿಸೆಂಬರ್ 29 ರಿಂದ ಆಟೋ ಚಾಲಕರು ಆಟೋ ಸಂಚಾರ ಬಂದ್ ಮಾಡಲು ತೀರ್ಮಾನಿಸಿದ್ದು, ಆಟೋ ಓಡಾಟ ಬಹುತೇಕ ಸ್ತಬ್ಧವಾಗುವ ಸಾಧ್ಯತೆ ಇದೆ.

    ಬರುವ ಹೊಸ ವರ್ಷವನ್ನು ಅದ್ಧೂರಿಯಿಂದ ಸ್ವಾಗತಿಸುವ ಖುಷಿಯಲ್ಲಿದ್ದ ಜನರಿಗೆ ಆಟೋ ಚಾಲಕರು ಶಾಕ್ ಕೊಟ್ಟಿದ್ದಾರೆ. ಸಾರಿಗೆ ಇಲಾಖೆ ರ‍್ಯಾಪಿಡೊ ಬೈಕ್ (Rapido Bike), ಟ್ಯಾಕ್ಸಿ ಬ್ಯಾನ್ ಮಾಡಬೇಕು, ಬೌನ್ಸ್ ಎಲೆಕ್ಟ್ರಿಕ್‌ ಬೈಕ್‌ಗೆ (Electric Bike) ನೀಡಿರುವ ಅನುಮತಿ ತೆಗೆದುಹಾಕಬೇಕು ಎಂದು ಆಗ್ರಹಿಸಿ ಬೃಹತ್ ಪ್ರತಿಭಟನೆಗೆ (Protest) ಕರೆ ನೀಡಲಾಗಿದೆ. ಡಿ.29ಕ್ಕೆ ಸಂಪೂರ್ಣ ಆಟೋ ಓಡಾಟ ಸ್ಥಗಿತಗೊಳಿಸಲು ತೀರ್ಮಾನಿಸಿದ್ದು, ಬರೊಬ್ಬರಿ ನಗರದ 2 ಲಕ್ಷ ಆಟೋ ಚಾಲಕರು ಬೆಂಬಲ ಸೂಚಿಸಿದ್ದಾರೆ. ಇದನ್ನೂ ಓದಿ: ಈ ದೇಶಕ್ಕಾಗಿ BJP ನಾಯಕನ ಮನೆ ನಾಯಿಯೂ ಸತ್ತಿಲ್ಲ – ಕೋಲಾಹಲ ಎಬ್ಬಿಸಿದ ಖರ್ಗೆ ಹೇಳಿಕೆ

    ಇತ್ತೀಚಿಗಷ್ಟೇ ಸಾರಿಗೆ ಇಲಾಖೆ ರಾಜ್ಯದಲ್ಲಿ ಕೆಲ ಖಾಸಗಿ ಕಂಪನಿಗಳ ಎಲೆಕ್ಟ್ರಿಕ್‌ ಬೈಕ್ (Electric Bike), ಟ್ಯಾಕ್ಸಿಗೆ ಅವಕಾಶ ನೀಡಿತ್ತು. ಸದ್ಯ ಈ ವಿಚಾರ ಆಟೋ ಚಾಲಕರ ಕೆಂಗೆಣ್ಣಿಗೆ ಗುರಿಯಾಗಿದೆ. ಹಲವು ವರ್ಷಗಳಿಂದ ನಗರದ ಜನರಿಗೆ ಸೇವೆ ಸಲ್ಲಿಸುತ್ತಿರೋ ಆಟೋ ಚಾಲಕರಿಗೆ ಆಗಬಹುದಾದ ಪರಿಣಾಮಗಳ ಬಗ್ಗೆ ಚಿಂತಿಸದೇ ಏಕಾಏಕಿ ಬೈಕ್ ಟ್ಯಾಕ್ಸಿಗೆ ಸಾರಿಗೆ ಇಲಾಖೆ ಅವಕಾಶ ನೀಡಿರೋದಕ್ಕೆ ಚಾಲಕ ಸಂಘಟನೆಗಳು ಆಕ್ರೋಶಗೊಂಡಿವೆ. ಇದನ್ನೂ ಓದಿ: ನೂಪೂರ್‌ಗೆ ಬೆಂಬಲ ನೀಡಿದ್ದಕ್ಕೆ ತಬ್ಲೀಘಿ ಜಮಾತ್‌ನ ಮೂಲಭೂತವಾದಿಗಳಿಂದ ಔಷಧ ವ್ಯಾಪಾರಿಯ ಹತ್ಯೆ: ಎನ್‌ಐಎ

    ಮೊದಲ ಹಂತದಲ್ಲಿ 100 ಎಲೆಕ್ಟ್ರಿಕ್‌ ಬೈಕ್‌ಗಳನ್ನ (E-Bike) ರಸ್ತೆಗಿಳಿಸಲು ನಿರ್ಧರಿಸಿರುವ ಬೌನ್ಸ್ ಕಂಪನಿ, ನಂತರ ಹಂತ-ಹಂತವಾಗಿ ಸಾವಿರ ಇ- ಬೈಕ್‌ಗಳನ್ನ ರಸ್ತೆಗಿಳಿಸಲು ನಿರ್ಧಾರ ಮಾಡಿದೆ. ಈ ಹಿಂದೆ ಬೌನ್ಸ್ ಕಂಪನಿ ಬೈಕ್ ಸೇವೆ ನೀಡುತ್ತಿತ್ತು. ಆದ್ರೆ ಕೊರೊನಾ ಸಮಯದಲ್ಲಿ ಬೈಕ್ ಸೇವೆಯನ್ನ ಸ್ಥಗಿತಗೊಳಿಸಿತ್ತು. ಈಗ ಮತ್ತೆ ಇ-ಬೈಕ್ ಸೇವೆ ನೀಡಲು ಮುಂದಾಗಿರೋದು ಚಾಲಕರ ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ ಈಗಾಗಲೇ ಕೊರೊನಾ ಸಂಕಷ್ಟದಿಂದ ಬೇಸತ್ತಿರುವ ಚಾಲಕರಿಗೆ ಎಲೆಕ್ಟ್ರಿಕ್‌ ಬೈಕ್ ಟ್ಯಾಕ್ಸಿ ಗಾಯದ ಮೇಲೆ ಬರೆ ಎಳೆದಂತೆ ಆಗಲಿದೆ ಎಂದು ಸಾರಿಗೆ ಇಲಾಖೆ ವಿರುದ್ಧ ಕಿಡಿಕಾರಿದ್ದಾರೆ.

    ಇನ್ನೂ ಸಾರಿಗೆ ಇಲಾಖೆ ನಿರ್ಧಾರವನ್ನು ಹಿಂಪಡೆಯುವಂತೆ ಒತ್ತಾಯಿಸಿ ಡಿ.29 ರಂದು ಬೆಂಗಳೂರಿನಾದ್ಯಂತ ಆಟೋ ಸಂಚಾರ ಸ್ಥಗಿತಗೊಳಿಸಲು ಆಟೋ ಚಾಲಕರು ಮುಂದಾಗಿದ್ದಾರೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ (ಮೆಜೆಸ್ಟಿಕ್) ದಿಂದ ಬೃಹತ್ ಆಟೋ ರ‍್ಯಾಲಿ ಮೂಲಕ ವಿಧಾನಸೌಧಕ್ಕೆ ತೆರಳಿ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ. ಈ ಆಟೋ ಮುಷ್ಕರಕ್ಕೆ ಈಗಾಗಲೇ 21 ಆಟೋ ಸಂಘಟನೆಗಳು ಸಾಥ್ ನೀಡಿವೆ. ರಾಜಧಾನಿಯ 2.10 ಲಕ್ಷ ಆಟೋ ಚಾಲಕರು ಮುಷ್ಕರಕ್ಕೆ ಬೆಂಬಲ ನೀಡಿದ್ದು 29ರ ಗುರುವಾರದಂದು ರಾಜಧಾನಿಯಲ್ಲಿ ಸಂಪೂರ್ಣ ಆಟೋ ಸಂಚಾರ ಸ್ತಬ್ಧವಾಗಲಿದೆ ಎಂದು ಆದರ್ಶ ಅಟೋ ಚಾಲಕರ ಸಂಘದ ಪ್ರಮುಖ ಮಂಜುನಾಥ್ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಡ್ರಾಪ್ ನೆಪದಲ್ಲಿ ನಡೀತು ಗ್ಯಾಂಗ್ ರೇಪ್- ಎಲೆಕ್ಟ್ರಾನಿಕ್ ಸಿಟಿಯಲ್ಲಿ ಪೈಶಾಚಿಕ ಕೃತ್ಯ

    ಡ್ರಾಪ್ ನೆಪದಲ್ಲಿ ನಡೀತು ಗ್ಯಾಂಗ್ ರೇಪ್- ಎಲೆಕ್ಟ್ರಾನಿಕ್ ಸಿಟಿಯಲ್ಲಿ ಪೈಶಾಚಿಕ ಕೃತ್ಯ

    ಬೆಂಗಳೂರು: ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಗ್ಯಾಂಗ್ ರೇಪ್ ನಡೆದಿರುವುದು ಬೆಳಕಿಗೆ ಬಂದಿದೆ.

    ಎಲೆಕ್ಟ್ರಾನಿಕ್ ಸಿಟಿ (Electronic City) ನೀಲಾದ್ರಿ ನಗರದ ಬಳಿ ಗುರುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕೇರಳ ಮೂಲದ ಯುವತಿ ಮೇಲೆ ಇಬ್ಬರು ಯುವಕರು ರೇಪ್ ಮಾಡಿದ್ದಾರೆ. ರ‍್ಯಾಪಿಡೋ ಬೈಕ್ ಪಿಕಪ್ ಮಾಡೋ ಸವಾರ ಹಾಗೂ ಆತನ ಸ್ನೇಹಿತನಿಂದ ಅತ್ಯಾಚಾರ ನಡೆದಿದೆ. ಸದ್ಯ ಯುವತಿ ದೂರಿನ ಮೇರೆಗೆ ಗ್ಯಾಂಗ್ ರೇಪಿಸ್ಟ್ ಗಳನ್ನು ಪೊಲೀಸರು ಬಂಧಿಸಿದ್ದಾರೆ.

    ನಡೆದಿದ್ದೇನು..?: ಬಿಟಿಎಂ ಲೇಔಟ್‍ (BTM Layout) ನ ಸಂಸ್ಥೆಯೊಂದರಲ್ಲಿ ಫ್ರೀಲ್ಯಾನ್ಸರ್ ಆಗಿ ಯುವತಿ ಕೆಲಸ ಮಾಡುತ್ತಿದ್ದಾಳೆ. ಹೀಗಾಗಿ ಕೆಲಸ ಮುಗಿದ ಬಳಿಕ ಗುರುವಾರ ರಾತ್ರಿ ರ‍್ಯಾಪಿಡೋ ಬೈಕ್ (Rapido Bike) ಮಾಡಿದ್ದಳು. ಬಿಟಿಎಂ ಲೇಔಟ್‍ನಿಂದ ನೀಲಾದ್ರಿ ನಗರಕ್ಕೆ ರ‍್ಯಾಪಿಡೋ ಬೈಕ್ ಬುಕ್ಕಿಂಗ್ ಮಾಡಿದ್ದಳು. ಬೈಕ್ ಹುಡುಗ ಪಿಕ್‍ಅಪ್ ವೇಳೆ ಯುವತಿ ಮದ್ಯಪಾನ ಮಾಡಿದ್ದಳು. ನೀಲಾದ್ರಿ ನಗರ ತಲುಪುವ ಹೊತ್ತಿಗೆ ಅರೆ ಪ್ರಜ್ಞಾವಸ್ಥೆಯಲ್ಲಿದ್ದಳು. ಇದನ್ನೂ ಓದಿ: ಹಸುವಿನೊಂದಿಗೆ ಲೈಂಗಿಕ ತೃಷೆ ತೀರಿಸಿಕೊಳ್ಳುತ್ತಿದ್ದ ಪಾಪಿ ಜೈಲುಪಾಲು

    ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಯುವತಿಯನ್ನು ರ‍್ಯಾಪಿಡೋ ಯುವಕ ಡ್ರಾಪ್ ಪಾಯಿಂಟ್‍ನಲ್ಲಿ ಬಿಡಲಿಲ್ಲ. ಅಲ್ಲದೆ ಇದೇ ಸಂದರ್ಭದಲ್ಲಿ ಆತ ತನ್ನ ಸ್ನೇಹಿತನನ್ನು ಕೂಡ ಸ್ಥಳಕ್ಕೆ ಕರೆಸಿಕೊಳ್ಳುತ್ತಾನೆ. ನಂತರ ಇಬ್ಬರು ನೀಲಾದ್ರಿ ನಗರದ ತನ್ನ ರೂಮ್‍ಗೆ ಕರೆದೊಯ್ದು ಯುವತಿ ಮೇಲೆ ಗ್ಯಾಂಗ್ ರೇಪ್ ಮಾಡಿದ್ದಾರೆ. ಪ್ರಜ್ಞೆ ಬಂದ ಬಳಿಕ ಯುವತಿಯನ್ನು ಬಿಟ್ಟು ಕಳುಹಿಸಿದ್ದಾರೆ. ಅಲ್ಲದೆ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾರೆ.

    ಘಟನೆ ಬಳಿಕ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ಯುವತಿ ದೂರು ಕೊಟ್ಟಿದ್ದಾಳೆ. ಸದ್ಯ ದೂರು ಆಧರಿಸಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಓಲಾ, ಉಬರ್‌ ಆಟೋಗಳಿಗೆ ಶೇ.5 ಕಮಿಷನ್‌ ದರ ನಿಗದಿ

    ಓಲಾ, ಉಬರ್‌ ಆಟೋಗಳಿಗೆ ಶೇ.5 ಕಮಿಷನ್‌ ದರ ನಿಗದಿ

    – ಸಾರಿಗೆ ಇಲಾಖೆಯಿಂದ ದರ ನಿಗದಿ 

    ಬೆಂಗಳೂರು: ಓಲಾ, ಉಬರ್‌(Ola, Uber) ಆಟೋ ಬಳಕೆಗೆ ಸಾರಿಗೆ ಇಲಾಖೆ ದರವನ್ನು ನಿಗದಿ ಮಾಡಿದೆ. ಕನಿಷ್ಠ ಶುಲ್ಕದ ಜೊತೆ ಶೇ.5 ಸೇವಾ ಶುಲ್ಕ ಅಥವಾ ಕಮಿಷನ್‌ ದರ ನಿಗದಿ ಮಾಡಿದೆ.

    ಈ ದರ ಅಲ್ಲದೇ ಸರಕು ಮತ್ತು ಸೇವಾ ತೆರಿಗೆ(GST)) ಸೇರಿಸಬಹುದು ಎಂದು ಸರ್ಕಾರ ಹೈಕೋರ್ಟ್‌ಗೆ (Hig Court)ತಿಳಿಸಿದೆ. ಇದನ್ನೂ ಓದಿ: ತಡೆಯಾಜ್ಞೆ ತೆರವು – ಕಾಂತಾರ ವರಾಹರೂಪಂ ಹಾಡು ಬಳಕೆಗೆ ಅನುಮತಿ

    ಆಪ್‌ ಆಧಾರಿತ ಸೇವೆ ಓಲಾ, ಉಬರ್‌ ಆಟೋ ಬಳಕೆಗೆ ದರ ನಿಗದಿ ಮಾಡುವಂತೆ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ನ.25ರ ಒಳಗಡೆ ದರವನ್ನು ನಿರ್ಧಾರ ಮಾಡಿ ತಿಳಿಸಲಾಗುವುದು ಎಂದು ಸರ್ಕಾರ ಹೇಳಿತ್ತು.

    ಆ್ಯಪ್ ಆಧಾರಿತ ಆಟೋ ರಿಕ್ಷಾಗಳಿಗೆ ನಿರ್ಬಂಧ ವಿಧಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಉಬರ್ ಇಂಡಿಯಾ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿತ್ತು. ಅಲ್ಲದೆ ದರ ಹೆಚ್ಚಳಕ್ಕೆ ಕೋರಿ ಓಲಾ, ಉಬರ್ ಸಂಸ್ಥೆಗಳು ಮಧ್ಯಂತರ ಅರ್ಜಿ ಸಲ್ಲಿಸಿದ್ದವು.

    ಸರ್ಕಾರ ಈಗ ದರ ನಿಗದಿ ಮಾಡಿದ್ದು ಮುಂದಿನ ವಿಚಾರಣೆ ನ.28 ಸೋಮವಾರದಂದು ಹೈಕೋರ್ಟ್‌ನಲ್ಲಿ ನಡೆಯಲಿದೆ.

    Live Tv
    [brid partner=56869869 player=32851 video=960834 autoplay=true]