Tag: rapes

  • ಅತ್ಯಾಚಾರಿಗಳ ಲೈಂಗಿಕ ಶಕ್ತಿಗೆ ಕತ್ತರಿ ಶಿಕ್ಷೆ

    ಅತ್ಯಾಚಾರಿಗಳ ಲೈಂಗಿಕ ಶಕ್ತಿಗೆ ಕತ್ತರಿ ಶಿಕ್ಷೆ

    – ಪಾಕ್ ಸಂಸತ್ತಿನಲ್ಲಿ ಮಸೂದೆ ಅಂಗೀಕಾರ

    ಇಸ್ಲಾಮಾಬಾದ್: ಪದೇ-ಪದೇ ಅತ್ಯಾಚಾರ ಕೃತ್ಯಗಳಲ್ಲಿ ಭಾಗಿಯಾಗುವವರ ವಿರುದ್ಧ ಕಠಿಣ ಕ್ರಮಕ್ಕೆ ಪಾಕಿಸ್ತಾನ ಮುಂದಾಗಿದೆ. ಇಂಥ ಕೃತ್ಯಗಳಲ್ಲಿ ಆಗ್ಗಾಗ್ಗೆ ಭಾಗಿಯಾಗಿ ಬಂಧನಕ್ಕೊಳಗಾಗುವವರಿಗೆ ಲೈಂಗಿಕ ಉತ್ಸಾಹವನ್ನೇ ಕುಂಠಿತ ಗೊಳಿಸುವ ಶಿಕ್ಷೆಗೆ ಗುರಿ ಪಡಿಸಲು ನಿರ್ಧರಿಸಿದೆ.

    ಅತ್ಯಾಚಾರ ಪ್ರಕರಣಗಳ ತ್ವರಿತ ತನಿಖೆ, ಸಾಕ್ಷ್ಯ ಸಂಗ್ರಹ, ವಿಚಾರಣೆ ಪೂರ್ಣ ಮತ್ತು ಲೈಂಗಿಕ ಶಕ್ತಿ ಕುಂಠಿತಗೊಳಿಸುವ ಶಿಕ್ಷೆ ಜಾರಿ ಸೇರಿದಂತೆ ಮಹತ್ವದ ಅಂಶಗಳನ್ನು ಒಳಗೊಂಡ ಮಸೂದೆಗೆ ಪಾಕ್ ಸಂಸತ್ ಬುಧವಾರ ಅಂಗೀಕಾರ ನೀಡಿದೆ. ಇದನ್ನೂ ಓದಿ: ತಿರುಪತಿಯಲ್ಲಿ ಪ್ರವಾಹ- ಜಲಪಾತದಂತೆ ಧುಮ್ಮಿಕ್ಕುತ್ತಿದೆ ಮಳೆ ನೀರು, ಕೊಚ್ಚಿ ಹೋಗ್ತಿವೆ ವಾಹನಗಳು!

    ಪಾಕ್‍ನಲ್ಲಿ ಅತ್ಯಚಾರ ಪ್ರಕರಣದ ದೋಷಿಗಳಿಗೆ 20-25 ವರ್ಷ ಜೈಲು ಅಥವಾ ಮರಣದಂಡನೆ ವಿಧಿಸುವ ಅವಕಾಶ ಇದೆ. ಆದರೆ ಸಾವಿರಾರು ಅತ್ಯಾಚಾರ ಪ್ರಕರಣ ದಾಖಲಾದರೂ ಶಿಕ್ಷೆ ಜಾರಿಯಾಗುವ ಪ್ರಮಾಣ ಕೇವಲ ಶೇ.3 ಕ್ಕಿಂತ ಕಡಿಮೆ ಇದೆ. ಇದನ್ನೂ ಓದಿ: ಸೋನಿಯಾ ಮಗಳು, ಉಪೇಂದ್ರ ಪತ್ನಿ ಹೆಸರು ಪ್ರಿಯಾಂಕಾ ಆದ್ರೆ ಖರ್ಗೆ ಪುತ್ರ ಯಾವ ಪ್ರಿಯಾಂಕ: ಪ್ರತಾಪಸಿಂಹ ಪ್ರಶ್ನೆ

    RAPE CASE

    ಜೊತೆಗೆ ಇತ್ತೀಚಿನ ದಿನಗಳಲ್ಲಿ ದೇಶದಾದ್ಯಂತ ಮಕ್ಕಳು ಮತ್ತು ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣ ಹೆಚ್ಚುತ್ತಿದೆ. ಈ ಬಗ್ಗೆ ದೇಶದಾದ್ಯಂತ ಭಾರೀ ಪ್ರತಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಇಂಥ ಕಠಿಣ ಕ್ರಮಕ್ಕೆ ಮುಂದಾಗಿದೆ. ಈ ಶಿಕ್ಷೆ ಯನ್ನು ಕೆಲವೊಂದು ರಾಸಾಯನಿಕ ಬಳಸಿ ಇಂಜೆಕ್ಷನ್ ಮೂಲಕ ಜಾರಿಗೊಳಿಸಲಾಗುತ್ತದೆ. ಶಿಕ್ಷೆ ಈಗಾಗಲೇ ದಕ್ಷಿಣ ಕೊರಿಯಾ, ಪೊಲೆಂಡ್, ಅಮೆರಿಕಾದ ಕೆಲ ರಾಜ್ಯಗಳು ಜೆಕ್‍ರಿಪಬ್ಲಿಕ್ ಮೊದಲಾದ ದೇಶಗಳಲ್ಲಿ ಜಾರಿಯಲ್ಲಿದೆ.

  • 12ರ ಪೋರನಿಂದ 10 ವರ್ಷದ ಬಾಲಕಿ ಮೇಲೆ ನಿರಂತರ ಅತ್ಯಾಚಾರ

    12ರ ಪೋರನಿಂದ 10 ವರ್ಷದ ಬಾಲಕಿ ಮೇಲೆ ನಿರಂತರ ಅತ್ಯಾಚಾರ

    – ಗರ್ಭಿಣಿಯಾದಳು ಪುಟ್ಟ ಬಾಲಕಿ

    ಮುಂಬೈ: ಅಪ್ರಾಪ್ತ ಬಾಲಕನೊಬ್ಬ 10ರ ಬಾಲೆಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿ, ಆಕೆಯನ್ನು ಗರ್ಭಿಣಿಯಾಗಿಸಿದ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.

    ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಬಾಲಕನಿಗೆ 12 ವರ್ಷ. ಈ ಸಂಬಂಧ ಸಂತ್ರಸ್ತ ಬಾಲಕಿಯ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ಸಂತ್ರಸ್ತ ಬಾಲಕಿ ಹಾಗೂ ಆರೋಪಿ ಬಾಲಕ ಇಬ್ಬರೂ ನೆರೆಹೊರೆಯ ಮನೆಯವರು. ಬಾಲಕ ಕಳೆದ ನಾಲ್ಕು ತಿಂಗಳಿನಿಂದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆನೆಂದು ಸಂತ್ರಸ್ತ ಬಾಲಕಿಯ ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ ಎಂದು ಮೋಖದಾ ಪೊಲೀಸ್ ಠಾಣೆಯ ಅಧಿಕಾರಿ ಹೇಳಿದ್ದಾರೆ.

     

    ಬಾಲಕಿಗೆ ಕೆಲ ದಿನಗಳ ಹಿಂದೆ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಇದರಿಂದಾಗಿ ಪೋಷಕರು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ತಪಾಸಣೆ ನಡೆಸಿದ ವೈದ್ಯರು ಬಾಲಕಿ ಗರ್ಭಿಣಿಯಾಗಿದ್ದಾಳೆ ತಿಳಿಸಿದ್ದಾರೆ. ಇದರಿಂದ ಆತಂಕಕ್ಕೆ ಒಳಗಾದ ಪೋಷಕರು ಕೇಳಿದಾಗ ಬಾಲಕಿ ನಡೆದ ಘಟನೆಯನ್ನು ವಿವರಿಸಿದ್ದಾಳೆ.

    ಈ ಸಂಬಂಧ ಬಾಲಕನ ವಿರುದ್ಧ ಮೋಖದಾ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಹಾಗೂ ಪೊಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

    ಆರೋಪಿ ಬಾಲಕನನ್ನು ಬಂಧಿಸಿಲ್ಲ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv