Tag: Rap Song

  • ಮಲ್ಲಿಗೆ ಹೂವಾ ಹಾಡಿನಲ್ಲಿ ಆಶಿಕಾ ರಂಗನಾಥ್ ಗ್ಲಾಮರಸ್ ಕಿಕ್

    ಮಲ್ಲಿಗೆ ಹೂವಾ ಹಾಡಿನಲ್ಲಿ ಆಶಿಕಾ ರಂಗನಾಥ್ ಗ್ಲಾಮರಸ್ ಕಿಕ್

    ನ್ನಡದ ಪ್ರತಿಭಾನ್ವಿತ ನಟ ಕಮ್ ರ್ಯಾಪರ್ ಅಲೋಕ್ (All ok) ಸದಾ ಹೊಸ ಪ್ರಯೋಗದ ಮೂಲಕ ಸದ್ದು ಮಾಡುತ್ತಾರೆ. ಹೊಸ ಹೊಸ ರ್ಯಾಪ್ ಸಾಂಗ್ (Rap song) ಮೂಲಕ ಮೋಡಿ ಮಾಡುತ್ತಾರೆ. ಇದೀಗ ಮಲ್ಲಿಗೆ ಹೂವಿನ ಮೇಲೆ ಹಾಡು ಮಾಡಿ, ಹೆಜ್ಜೆ ಹಾಕಿದ್ದಾರೆ. ಅಲೋಕ್‌ಗೆ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ (Ashika ranganath) ಸಾಥ್ ನೀಡಿದ್ದಾರೆ.

     

    View this post on Instagram

     

    A post shared by Alok Babu R (@all_ok_official)

    ಟ್ರೆಂಡಿ ಹಾಡುಗಳನ್ನ ಕಂಪೋಸ್ ಮಾಡುವುದರಲ್ಲಿ ಎತ್ತಿದ ಕೈ ಆಲ್ ಓಕೆ ಯಾವಾಗಲೂ ಮುಂದು. ಕನ್ನಡದ ಕಂಪು ಪ್ರತಿ ಹಾಡಲ್ಲೂ ಇರುತ್ತವೆ. ತಮ್ಮ ಹಾಡಿನ ಚೌಕಟ್ಟಿನಲ್ಲಿ ಕನ್ನಡದ ಕಂಪನ್ನ ಸೂಸುತ್ತಲೇ ಇರೋ ಈ ಗಾಯಕ, ಈ ಸಲ ಸಿಂಗಪುರಕ್ಕೆ ಹೋಗಿದ್ದಾರೆ. ಅಲ್ಲಿಯ ಸಮುದ್ರದ ಮೇಲೆ ತೇಲೋ ಬೃಹತ್ ಕ್ರೂಸ್ ಮೇಲೆ ಮಲ್ಲಿಗೆ ಹೂವಿನ ಅಂದ ಚಂದವನ್ನ ಸೆರೆ ಹಿಡಿದು ಚಂದದ ಹಾಡೊಂದನ್ನ ಮಾಡಿಕೊಂಡು ಬಂದಿದ್ದಾರೆ. ಅಷ್ಟೇ ಅಲ್ಲ, ಮಲ್ಲಿಗೆ ಹೂವಿನ ಅಂದವನ್ನ ಆಶಿಕಾ ರಂಗನಾಥ್ ಬ್ಯೂಟಿಗೆ ಹೋಲಿಸಲಾಗಿದೆ. ಚೆಂದದ ಹಾಡಿಗೆ ಅಲೋಕ್ (Alok) ಜೊತೆ ಪಟಾಕಿ ಪೋರಿ ಆಶಿಕಾ(Ashika ranganath) ಕೂಡ ಹೆಜ್ಜೆ ಹಾಕಿದ್ದಾರೆ. ಇದನ್ನೂ ಓದಿ:ಪಾಕಿಸ್ತಾನಿ ಬೌಲರ್ ನಸೀಮ್ ಶಾಗೆ ಬೋಲ್ಡ್ ಆದ `ಐರಾವತ’ ನಟಿ

     

    View this post on Instagram

     

    A post shared by Ashika Ranganath (@ashika_rangnath)

    ಈ ಹಾಡಿನಲ್ಲಿ ಆಶಿಕಾ ಮುದ್ದಾದ ನಗು, ನಟಿಯ ಸ್ಟೈಲ್, ಮತ್ತು ಸಿಂಗಾಪುರದ ಬ್ಯೂಟಿಫುಲ್ ಲೋಕೆಷನ್ ಹೈಲೈಟ್ ಆಗಿದೆ. ಈ ಹೊಸ ಆಲ್ಬಂ ಸಾಂಗ್ ಮೂಲಕ ಆಶಿಕಾ ರಂಗನಾಥ್ ಮತ್ತು ಅಲೋಕ್ ಸದ್ದು ಮಾಡುತ್ತಿದೆ. ಸಾಂಗ್ ನೋಡಿ ಫ್ಯಾನ್ಸ್ ಕೂಡ ಫಿದಾ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಆರ್‌ಸಿಬಿ ತಂಡದ ಗೀತೆ ಬಿಡುಗಡೆ – ಕನ್ನಡ ಅಭಿಮಾನಿಗಳಿಂದ ವಿರೋಧ

    ಆರ್‌ಸಿಬಿ ತಂಡದ ಗೀತೆ ಬಿಡುಗಡೆ – ಕನ್ನಡ ಅಭಿಮಾನಿಗಳಿಂದ ವಿರೋಧ

    ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಮ್ಮ ತಂಡದ ಗೀತೆಯನ್ನು ಬಿಡುಗಡೆ ಮಾಡಿದ್ದು, ಇದಕ್ಕೆ ಕೆಲ ಕನ್ನಡದ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

    ಐಪಿಎಲ್ ಆಡಲು ಆರ್‌ಸಿಬಿ ತಂಡ ಸಿದ್ಧವಾಗಿದೆ, ಯುಎಇಯಲ್ಲಿ ಅಭ್ಯಾಸ ಮುಗಿಸಿ ಚೊಚ್ಚಲ ಟ್ರೋಫಿಗೆ ಮುತ್ತಿಕ್ಕಲು ಕಾಯುತ್ತಿದೆ. ಇದೇ ಸೆಪ್ಟಂಬರ್ 21ರ ಸೋಮವಾರ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಸಂಜೆ 7 ಗಂಟೆಗೆ ಆರ್‌ಸಿಬಿ ಐಪಿಎಲ್-2020ರ ತನ್ನ ಮೊದಲ ಪಂದ್ಯವನ್ನು ಆಡಲಿದೆ.

    ಈ ವಿಚಾರಚಾಗಿ ತಮ್ಮದೇ ತಂಡದ ರ‍್ಯಾಪ್ ಗೀತೆಯೊಂದನ್ನು ಆರ್‍ಸಿಬಿ ರಚನೆ ಮಾಡಿದ್ದು, ಇದನ್ನು ಇಂದು ಬೆಳಗ್ಗೆ ಟ್ವಿಟ್ಟರ್ ಖಾತೆಯಲ್ಲಿ ಬಿಡುಗಡೆ ಮಾಡಿತ್ತು. ಆದರೆ ಈ ಹಾಡಿಗೆ ಕೆಲ ಆರ್‌ಸಿಬಿ ಅಭಿಮಾನಿಗಳು ಮತ್ತು ಕನ್ನಡಿಗರು ಬೇಸರ ವ್ಯಕ್ತಪಡಿಸಿದ್ದಾರೆ. ಹಾಡಿನಲ್ಲಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಯ ಪದಗಳನ್ನು ಹೆಚ್ಚಾಗಿ ಬಳಸಿದ್ದಾರೆ. ಈ ಗೀತೆಯಲ್ಲಿ ಕನ್ನಡವನ್ನು ಕಡೆಗಣಿಸಲಾಗಿದೆ ಎಂದು ಟ್ವೀಟ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನು ಓದಿ: ಮಾಯಂತಿ ಲ್ಯಾಂಗರ್ ಔಟ್ – ಐಪಿಎಲ್ ಹೊಸ ನಿರೂಪಕರ ಲಿಸ್ಟ್ ಬಿಡುಗಡ

    ಈ ಹಾಡಿಗೆ ವಿರೋಧ ವ್ಯಕ್ತಪಡಿಸಿರುವ ಕೆಲವರು, ಇನ್ನೂ ಕನ್ನಡ ಪದಗಳನ್ನು ಬಳಸಬಹುದಿತ್ತು. ಹಿಂದಿ ಹೇರಿಕೆ ಬಗ್ಗೆ ಈಗ ಚರ್ಚೆಯಾಗುತ್ತಿರುವ ಸಮಯದಲ್ಲಿ ಹಿಂದಿಯನ್ನು ಬಳಸಿದ್ದು ಯಾಕೆ? ಚೆನ್ನೈ ತಂಡ ತಮಿಳು ಭಾಷೆಯಲ್ಲಿ ಹಾಡನ್ನು ಬಿಡುಗಡೆ ಮಾಡಿದೆ. ಪಂಜಾಬ್ ತಂಡ ಪಂಜಾಬಿಯಲ್ಲಿ ಗೀತೆ ರಚನೆ ಮಾಡಿದೆ. ಹೀಗಿರುವಾಗ ಕರ್ನಾಟಕದ ತಂಡವಾದ ಆರ್‌ಸಿಬಿ ಯಾಕೆ ಹೆಚ್ಚು ಕನ್ನಡ ಪದಗಳನ್ನು ಬಳಸಿಲ್ಲ. ಅವಶ್ಯಕತೆ ಇಲ್ಲದ ಜಾಗದಲ್ಲಿ ಹಿಂದಿ ಪದಗಳನ್ನು ಬಳಸಲಾಗಿದೆ ಎಂದು ಕಿಡಿಕಾರಿದ್ದಾರೆ.

    ಈಗ ಇದೇ ವಿಷಯಕ್ಕೆ ಪರ ವಿರೋಧ ಟ್ವೀಟ್‍ಗಳು ಬಂದಿದ್ದು, ಕೆಲವರು ಹಿಂದೆ ಭಾಷೆ ಬಳಸಿದ್ದರಲ್ಲಿ ಏನೂ ತಪ್ಪಿದೆ. ತಂಡದಲ್ಲಿ ಆಡುವ ಹಲವಾರು ಆಟಗಾರರು ಬೇರೆ ರಾಜ್ಯದವರು. ಎಬಿಡಿ ಬೇರೆ ದೇಶದವರು. ಹೀಗಿರುವಾಗ ಮಾಡಿರುವ ಹಾಡಿಗೆ ಮೆಚ್ಚುಗೆ ಸೂಚಿಸುವುದನ್ನು ಬಿಟ್ಟು ಯಾಕೆ ವಿರೋಧ ಮಾಡುತ್ತೀರಾ? ಕ್ರೀಡೆಯಲ್ಲಿ ಪ್ರಾದೇಶಿಕತೆ ನೋಡುವುದು ತಪ್ಪು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇದನ್ನು ಓದಿ: ಕೊಹ್ಲಿಯನ್ನು ಟಗರಿಗೆ ಹೋಲಿಸಿದ ಶಿವಣ್ಣ – ಕ್ರಿಕೆಟ್ ಬಗ್ಗೆ ರಾಜ್ ಪುತ್ರನ ಮಾತು

    ಟ್ವಿಟ್ಟರ್ ನಲ್ಲಿ ವಿರೋಧ ಕಂಡುಬರುತ್ತಿದ್ದಂತೆ ಇನ್ನೊಂದು ಟ್ವೀಟ್ ಮಾಡಿರುವ ಆರ್‌ಸಿಬಿ ತಂಡ ಕನ್ನಡ ಗೀತೆ, “ಏನೇ ಬರಲಿ ಎಂತೇ ಇರಲಿ ಆರ್‌ಸಿಬಿ” ಎಂದು ಬರೆದುಕೊಂಡಿದೆ. ಆದರೆ ಕೆಲ ಅಭಿಮಾನಿಗಳು ಆರ್‌ಸಿಬಿ ತಂಡ ಟ್ವಿಟ್ಟರ್ ಆಡ್ಮಿನ್ ಅನ್ನು ತರಾಟೆಗೆ ತೆಗೆದುಕೊಂಡಿದ್ದು, ನಾವು ಮಾಡುವ ಕೆಲ ಟ್ವೀಟ್‍ಗಳನ್ನು ನೀವು ಯಾಕೆ ಹೈಡ್ ಮಾಡುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ. ನಾಳೆಯಿಂದ ಐಪಿಎಲ್ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಮುಂಬೈ ಮತ್ತು ಚೆನ್ನೈ ತಂಡ ಮುಖಾಮುಖಿಯಾಗಲಿವೆ.

  • ಮಲೆ ಮಹದೇಶ್ವರ ಭಕ್ತರ ಕೆಂಗಣ್ಣಿಗೆ ಗುರಿಯಾದ ಚಂದನ್ ಶೆಟ್ಟಿ

    ಮಲೆ ಮಹದೇಶ್ವರ ಭಕ್ತರ ಕೆಂಗಣ್ಣಿಗೆ ಗುರಿಯಾದ ಚಂದನ್ ಶೆಟ್ಟಿ

    ಚಾಮರಾಜನಗರ: ಬಿಗ್‍ಬಾಸ್ ವಿಜೇತ ಹಾಗೂ ರ‍್ಯಾಪರ್ ಚಂದನ್ ಶೆಟ್ಟಿ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. ಈ ಬಾರಿ ಅವರು ಮಲೆ ಮಹದೇಶ್ವರ ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಘಟನೆಯೇನು..?
    ಗಣೇಶ ಹಬ್ಬಕ್ಕೆ ‘ಕೋಲು ಮಂಡೆ ಜಂಗಮ ದೇವರು’ ಎಂಬ ಹೊಸ ರ‍್ಯಾಪ್ ಸಾಂಗ್ ಅನ್ನು ಚಂದನ್ ಶೆಟ್ಟಿ ಯೂಟ್ಯೂಬ್‍ನಲ್ಲಿ ಬಿಡುಗಡೆ ಮಾಡಿದ್ದರು. ಇದೀಗ ಮಾದಪ್ಪನ ಗೀತೆಯನ್ನು ಅಶ್ಲೀಲವಾಗಿ ತೋರಿಸಿರುವ ಆರೋಪ ಚಂದನ್ ಶೆಟ್ಟಿ ವಿರುದ್ಧ ಕೇಳಿಬಂದಿದೆ.

    ಶಿವಶರಣೆ ಸಂಕಮ್ಮನ ಬಗ್ಗೆ ಅಶ್ಲೀಲ ಪ್ರದರ್ಶಿಸಲಾಗಿದೆ ಮತ್ತು ಭಕ್ತಿ ಗೀತೆಯನ್ನು ತಿರುಚಲಾಗಿದೆ. ಈ ಮೂಲಕ ಮಾದಪ್ಪನ ಭಕ್ತರ ಧಾರ್ಮಿಕ ಮನೋಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚಂದನ್ ಶೆಟ್ಟಿ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.

    ಮಲೆ ಮಹದೇಶ್ವರ ಸ್ವಾಮಿ ಗ್ರೂಪ್‍ನಲ್ಲಿ ಚಾಮರಾಜನಗರ ಜಿಲ್ಲೆಯ ಹಲವು ಯುವಕರು ಚಂದನ್ ವಿರುದ್ಧ ಕಿಡಿಕಾರಿದ್ದಾರೆ. ಹಾಡು ವೈರಲ್ ಆದ್ರೂ, ಚಾಮರಾಜನಗರದಲ್ಲಿ ಈ ಹಾಡಿಗೆ ವಿರೋಧ ವ್ಯಕ್ತವಾಗಿದೆ. ಈ ಹಿಂದೆ ಯುವ ದಸರಾ ವೇದಿಕೆಯಲ್ಲಿ ಎಂಗೇಜ್‍ಮೆಂಟ್ ಆಗಿ ಚಂದನ್ ಸಾಕಷ್ಟು ವಿವಾದ ಸೃಷ್ಟಿಯಾಗಿತ್ತು. ಈಗಾಗಲೇ ಯುವ ದಸರಾ ವೇದಿಕೆಯಿಂದ ಚಂದನ್ ಬ್ಯಾನ್ ಆಗಿದ್ದಾರೆ. ಇದೀಗ ಧಾರ್ಮಿಕ ಮನೋಭಾವನೆಗೆ ಧಕ್ಕೆ ತಂದು ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ.

    ಆಗಸ್ಟ್ 23 ರಂದು ಈ ವಿಡಿಯೋ ಬಿಡುಗಡೆಯಾಗಿದ್ದು, ಈಗಾಗಲೇ 35 ಲಕ್ಷಕ್ಕೂ ಅಧಿಕ ವ್ಯೂ ಕಂಡಿದೆ. ಯೂ ಟ್ಯೂಬ್‍ನಲ್ಲಿ ನಂಬರ್ ಒನ್ ಟ್ರೆಂಡಿಂಗ್ ಆಗಿದೆ.

  • ಚಂದನ್ ಶೆಟ್ಟಿ ದಂಪತಿಯಿಂದ ಕೊರೊನಾ ಜಾಗೃತಿ ರ‍್ಯಾಪ್ ಸಾಂಗ್

    ಚಂದನ್ ಶೆಟ್ಟಿ ದಂಪತಿಯಿಂದ ಕೊರೊನಾ ಜಾಗೃತಿ ರ‍್ಯಾಪ್ ಸಾಂಗ್

    – ಎಣ್ಣೆ ಸಪ್ಲೈ ಮಾಡ್ಬೋದೇನೋ ಕುಡುಕ್ರೂ ಸ್ವಲ್ಪ ತಡ್ಕಳಿ
    – ಕೊರೊನಾ ನಿಂಗೆ ಸದ್ಯದಲ್ಲೇ ಮಾಡ್ತೀವಿ ತಿಥಿನಾ

    ಬೆಂಗಳೂರು: ರ‍್ಯಾಪರ್ ಚಂದನ್ ಶೆಟ್ಟಿ ತಮ್ಮ ವಿಭಿನ್ನ ಶೈಲಿಯ ರ‍್ಯಾಪ್ ಸಾಂಗ್‍ಗಳ ಮೂಲಕ ಯುವ ಸಮುದಾಯಕ್ಕೆ ಹತ್ತಿರವಾಗಿದ್ದಾರೆ. ಕೊರೊನಾ ಬಗ್ಗೆ ದೇಶವನ್ನೇ ಸ್ತಬ್ಧವನ್ನಾಗಿಸಿದ್ದು, ಎಲ್ಲರೂ ಸ್ವಯಂ ದಿಗ್ಬಂಧನ ವಿಧಿಸಿಕೊಂಡಿದ್ದಾರೆ. ಈ ಮಧ್ಯೆ ಹಾಡಿನ ಮೂಲಕ ಸಂಗೀತಗಾರರು ಜಾಗೃತಿ ಮೂಡಿಸುತ್ತಿದ್ದಾರೆ. ಇತ್ತೀಚೆಗೆ ಖ್ಯಾತ ಸಿನಿಮಾ ಸಾಹಿತಿ ಜಯಂತ್ ಕಾಯ್ಕಿಣಿ ಅವರು ಬರೆದಿದ್ದ ಸಾಹಿತ್ಯಕ್ಕೆ ಎಸ್.ಪಿ.ಬಾಲಸುಬ್ರಹ್ಮಣ್ಯ ಅವರು ಧ್ವನಿ ನೀಡಿದ್ದರು. ಇದೀಗ ಚಂದನ್ ಶೆಟ್ಟಿ ತಾವೇ ರಚಿಸಿದ ಹಾಡನ್ನು ಹೇಳಿದ್ದಾರೆ.

    ಕೊರೊನಾ ಇಡೀ ದೇಶವನ್ನೇ ಹಿಂಡಿ ಹಿಪ್ಪೆ ಮಾಡುತ್ತಿದ್ದು, ದೇಶದ ಜನತೆ ಭಯಭೀತರಾಗಿದ್ದಾರೆ. ಹೀಗಾಗಿ ಎಲ್ಲೆಡೆ ಜಾಗೃತಿ ಹೆಚ್ಚಾಗುತ್ತಿದ್ದು, ಸಿನಿಮಾ ತಾರೆಯರಂತೂ ಟೊಂಕ ಕಟ್ಟಿ ನಿಂತಿದ್ದಾರೆ. ಎಲ್ಲರೂ ಸಾಮಾಜಿಕ ಜಾಲತಾಣಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದು, ಮನೆಯಲ್ಲೇ ಇರಿ, ಆರೋಗ್ಯವಾಗಿರಿ ಎಂಬ ಸಂದೇಶವನ್ನು ನೀಡುತ್ತಿದ್ದಾರೆ. ಇದಕ್ಕೆ ತಕ್ಕಂತೆ ಸಂಗೀತಗಾರರು ಹಾಗೂ ಸಾಹಿತಿಗಳು ಸಹ ತಮ್ಮ ವಿಭಿನ್ನ ಶೈಲಿಯಲ್ಲಿ ಹಾಡು ರಚಿಸುವ ಮೂಲಕ ಜನರಿಗೆ ತಿಳಿ ಹೇಳುತ್ತಿದ್ದಾರೆ.

     

    View this post on Instagram

     

    Be home .. Be safe ..

    A post shared by Chandan Shetty (@chandanshettyofficial) on

    ರ‍್ಯಾಪರ್ ಚಂದನ್ ಶೆಟ್ಟಿ ಸಹ ತಮ್ಮ ಶೈಲಿಯಲ್ಲಿ ರ‍್ಯಾಪ್ ಗೀತೆಯನ್ನು ರಚಿಸಿದ್ದು, ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇಬ್ಬರೂ ಸೇರಿಕೊಂಡು ತಾವೇ ರಚಿಸಿದ ಹಾಡನ್ನು ಹೇಳಿದ್ದಾರೆ. ಇದನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದು, ರ‍್ಯಾಪ್ ಸಾಂಗ್ ಮೂಲಕ ಜನರಿಗೆ ತಿಳಿ ಹೇಳಿದ್ದಾರೆ. ಕೊರೊನಾ…ಕೊರೊನಾ….ಕೊರೊನಾ…..ನಿಂಗೆ ಸದ್ಯದಲ್ಲೇ ಮಾಡ್ತೀವಿ ತಿಥಿನಾ ಎಂಬ ಸಾಲುಗಳು ಯುವ ಸಮುದಾಯಕ್ಕೆ ಅಪ್ಯಾಯಮಾನವಾಗುತ್ತವೆ.

    ಎಣ್ಣೆ ಸಪ್ಲೈ ಮಾಡ್ಬೋದೇನೋ ಕುಡುಕ್ರೂ ಸ್ವಲ್ಪ ತಡ್ಕಳಿ, ನಾವೆಲ್ಲಾ ಮನೆಲೇ ಇರೋಣ, ಮಿಸ್ ಆದರೆ ಡೈರೆಕ್ಟೂ ಸ್ಮಶಾನ ಎಂಬ ಸಾಲುಗಳು ಯುವಕರನ್ನು ಹೆಚ್ಚು ಸೆಳೆಯುತ್ತವೆ. ಇದರೊಂದಿಗೆ ಮಾಸ್ಕ್, ಗುಂಪು ಸೇರದಂತೆ ಕೇಳಿಕೊಂಡಿದ್ದಾರೆ. ಇದು ಮೇಡ್ ಇನ್ ಚೀನಾ ಎಂದು ಹರಿಹಾಯ್ದಿದ್ದಾರೆ.