Tag: Rap

  • Rapನಲ್ಲೇ ಕಂಟೆಸ್ಟೆಟ್ ಗೆ ಚಾಟಿ ಬೀಸಿದ ಇಶಾನಿ

    Rapನಲ್ಲೇ ಕಂಟೆಸ್ಟೆಟ್ ಗೆ ಚಾಟಿ ಬೀಸಿದ ಇಶಾನಿ

    ‘ಕವಿತೆ ಹುಟ್ಟಲು ಐಶಾರಾಮಿ ಜಾಗವೇ ಬೇಕಿಲ್ಲ, ಒಂದು ಪೆನ್ನು, ಒಂದು ಚೂರು ಖಾಲಿ ಕಾಗದ ಸಾಕು’ ಎಂಬ ಮಾತಿದೆ. ಇದು ಹೊರಜಗತ್ತಿನಲ್ಲಿ ಎಷ್ಟರಮಟ್ಟಿಗೆ ಸತ್ಯವೋ ಗೊತ್ತಿಲ್ಲ. ಆದರೆ ಬಿಗ್‌ಬಾಸ್ (Bigg Boss Kannada) ಮನೆಯಲ್ಲಿ ಮಾತ್ರ ಅಕ್ಷರಶಃ ಸತ್ಯವಾಗಿದೆ. ಏನಿದು ಕವಿಸಮಯ? JioCinemaದಲ್ಲಿ ನೇರಪ್ರಸಾರವಾಗುತ್ತಿರುವ ಬಿಗ್ ಬಾಸ್‌ ಕನ್ನಡದ ‘ಅನ್‌ಸೀನ್ ಕಥೆಗಳು’ ಸೆಗ್ಮೆಂಟ್‌ನಲ್ಲಿ ಈ ಪ್ರಶ್ನೆಗೆ ಉತ್ತರವಿದೆ.

    ಬಿಗ್‌ಬಾಸ್‌ ಸ್ಪರ್ಧಿಗಳಲ್ಲಿ ಪದ್ಯ ಬರೆಯುವ ಕೌಶಲ ಇರುವವರು ಇಶಾನಿ (Ishani) ಮಾತ್ರ. ರ್‍ಯಾಪ್ (Rap) ಹಾಡುಗಳನ್ನು ಕಟ್ಟಿ ಹಾಡುತ್ತಲೇ ಮುನ್ನಲೆಗೆ ಬಂದ ಇಶಾನಿ ಬಿಗ್ ಬಾಸ್‌ ಮನೆಯೊಳಗೆ ಸದ್ದುಮಡಿದ್ದು ಜೋರು ಧನಿಯ ಜಗಳ ಮತ್ತು ನಗುವಿನಿಂದಲೇ ಹೊರತು ರ್‍ಯಾಪ್ ಹಾಡುಗಳ ಮೂಲಕ ಅಲ್ಲ. ಹಿಂದೊಮ್ಮೆ ಅವರೊಂದು ಕನ್ನಡ ರ್‍ಯಾಪ್ ಸಾಂಗ್ ಕಟ್ಟಿದ್ದರಾದರೂ ಅದು ಅಷ್ಟೇನೂ ಸದ್ದು ಮಾಡಲಿಲ್ಲ. ಕಿಚನ್ ರೀಡಿಂಗ್‌ಗೇ ಮುಗಿದುಹೋಯಿತು. ಆದರೆ ಇಶಾನಿ ಪ್ರಯತ್ನವನ್ನು ಮಾತ್ರ ನಿಲ್ಲಿಸಿಲ್ಲ.

    ಮತ್ತೆ ಮತ್ತೆ ಕನ್ನಡದಲ್ಲಿ ರ್‍ಯಾಪ್ ಸಾಂಗ್ ಕಟ್ಟುವ ಪ್ರಯತ್ನ ನಡೆಸಿಯೇ ಇದ್ದಾರೆ. ಈ ಬಾರಿ ಅವರಿಗೆ ಸಿಕ್ಕಿದ್ದು ಟಿಶ್ಯೂ. ಟಿಶ್ಯೂ ಪೇಪರ್‍ ಮೇಲೆಯೇ ಇಂಗ್ಲಿಷ್‌ ಲಿಪಿಯಲ್ಲಿ ಕನ್ನಡದ ಸಾಲುಗಳನ್ನು ಬರೆಯುತ್ತ ಪದ್ಯ ಕಟ್ಟುತ್ತಿದ್ದಾರೆ ಇಶಾನಿ. ಪದ್ಯದ ಒಂದೊಂದು ಸಾಲೂ ಉಳಿದ ಸ್ಪರ್ಧಿಗಳನ್ನು ರೋಸ್ಟ್ ಮಾಡುವಂತಿದೆ. ಇಶಾನಿ ರ್‍ಯಾಪ್ ಸಾಂಗ್ ಲಿರಿಕ್ಸ್ ಹೇಗಿದೆ ಗೊತ್ತಾ?

    ನಾನ್ ಯಾರು ಅಂತ ನಿಮಗೆ ಗೊತ್ತಿಲ್ವಾ?

    ಗೊತ್ತಿಲ್ಲ ಅಂತ ತಿಳಿಸೋಕೆ ಬಂದ್ನಲ್ವಾ?

    ಉಪ್ಪಿನಕಾಯಿ ಟೇಸ್ಟು ನಿಮಗೆ ಸಾಲ್ತಿಲ್ವಾ?

    ತಿಳ್ಕೊಳ್ರೋ ಇನ್ನು ನೀವಲ್ಲ

    ಇನ್ಮುಂದೆ ನಿಮ್ದು ಏನು ನಡೆಯಲ್ಲ

    ಈ ರಾಜ್ಯಕ್ಕೆ ರಾಣಿನೇ ನಾನಲ್ವಾ

    ತಲೆಬಗ್ಸೀನೇ ನಡೀಬೇಕು ಈಗೆಲ್ಲ

    ಸುಮ್ನಿದ್ರೆ ಮಾಡ್ತೀರಾ ಸೈಕು

    ಹಿಡ್ದಿದ್ದೀನಿ ನಾನೀಗ ಮೈಕು

    ಹೋಗ್ತೀನಿ ಒಂದೇ ಟೇಕು

    ಮಾಡ್ತೀನಿ ನಿಮ್ ಈಗೊ ಬ್ರೇಕು

    ತೋರಿಸ್ತೀನಿ ಯಾರೆಲ್ಲ ಫೇಕು

    ತುಕಾಲಿಗೇ ಫಸ್ಟು ಸ್ಟ್ರೈಕು

    ಮಾಡಿದ್ರೆ ತುಕಾಲಿ ಜೋಕು

    ಪ್ರತಾಪ್‌ ನೀನಿರಲೇ ಬೇಕು

    ಕ್ಯಾಮೆರಾ ಮುಂದೆ ನೀ ಬರೀ ಫೇಕು

    ಇಲ್ದಿದ್ರೆ ನೀ ಸುಟ್ಟ ಕೇಕು

    ಹೀಗೆ ಇಶಾನಿ ಹಾಡು ಬೆಳೆಯುತ್ತಲೇ ಇದೆ. ಅದು ಎಲ್ಲಿಗೆ ಹೋಗಿ ಮುಟ್ಟುತ್ತದೆ? ಯಾವಾಗ ಪ್ರೆಸೆಂಟ್ ಆಗುತ್ತದೆ? ಗೊತ್ತಿಲ್ಲ. ಆದರೆ ಮನೆಯೊಳಗಂತೂ ಹೊಸ ಸಂಚಲನ ಹುಟ್ಟು ಹಾಕುವುದು ಗ್ಯಾರಂಟಿ. ಎಲ್ಲ ಸ್ಪರ್ಧಿಗಳಿಗೂ ಹಾಡಿನ ಮೂಲಕವೇ ಟಾಂಗ್ ಕೊಡಲು ಸಜ್ಜಾಗುತ್ತಿರುವ ಇಶಾನಿ ತಮ್ಮ ಯತ್ನದಲ್ಲಿ ಯಶಸ್ವಿಯಾಗ್ತಾರಾ?  ಕಾದು ನೋಡಬೇಕು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿದೇಶದಲ್ಲೂ ಕನ್ನಡದ ಕಂಪು ಪಸರಿಸಲು ಹೊರಟ ಚಂದನ್ ಶೆಟ್ಟಿ!

    ವಿದೇಶದಲ್ಲೂ ಕನ್ನಡದ ಕಂಪು ಪಸರಿಸಲು ಹೊರಟ ಚಂದನ್ ಶೆಟ್ಟಿ!

    ಬೆಂಗಳೂರು: ಚಂದನ್ ಶೆಟ್ಟಿ ತಮ್ಮ ರ‍್ಯಾಪ್ ಹಾಡುಗಳ ಮೂಲಕವೇ ಕನ್ನಡದ ಜನತೆಯಿಂದ ಮೆಚ್ಚುಗೆ ಪಡೆದಿದ್ದಾರೆ. ಈಗಾಗಲೇ ಕರ್ನಾಟಕದಲ್ಲಿ ರ‍್ಯಾಪ್ ಸ್ಟಾರ್ ಆಗಿ ಮಿಂಚುತ್ತಿರುವ ಚಂದನ್, ಮೊದಲ ಬಾರಿಗೆ ಹೊರದೇಶದಲ್ಲಿ ಕಾರ್ಯಕ್ರಮವನ್ನು ಮಾಡಲಿದ್ದಾರೆ.

    ಬಿಗ್ ಬಾಸ್-5 ಗೆದ್ದ ನಂತರ ಚಂದನ್ ಶೆಟ್ಟಿ ಕರ್ನಾಟಕದಲ್ಲಿ ಹಲವು ಕಾರ್ಯಕ್ರಮವನ್ನು ಮಾಡಿದ್ದಾರೆ. ಈಗ ಇದೇ ಮೊದಲ ಬಾರಿಗೆ ಚಂದನ್ ಆಸ್ಟ್ರೇಲಿಯಾದಲ್ಲಿ ಲೈವ್ ಕಾರ್ಯಕ್ರಮ ನೀಡುತ್ತಿದ್ದಾರೆ. ಈ ಬಗ್ಗೆ ಸ್ವತಃ ಚಂದನ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಪ್ರೇಕ್ಷಕರಿಗೆ ತಿಳಿಸಿದ್ದಾರೆ.

    ಕರ್ನಾಟಕದಲ್ಲಿ ಶೋ ಮಾಡುತ್ತಿದ್ದ ಚಂದನ್ ಈಗ ಆಸ್ಟ್ರೇಲಿಯಾದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಮಾರ್ಚ್ 16ರಂದು ಸಿಡ್ನಿ, ಮಾರ್ಚ್ 17ರಂದು ಮೆಲ್ಬರ್ನ್ ಹಾಗೂ ಮಾರ್ಚ್ 18ರಂದು ಅಡಿಲೇಡ್ ನಲ್ಲಿ ಕಾರ್ಯಕ್ರಮ ಮಾಡಲಿದ್ದಾರೆ. ಇದನ್ನೂ ಓದಿ: ಕಷ್ಟದಲ್ಲಿದ್ದಾಗ ಯಾರೂ ಇರಲಿಲ್ಲ ಅಂದ್ರು ಚಂದನ್ ಶೆಟ್ಟಿ

    ನಾನು ಮೊದಲ ಬಾರಿಗೆ ನಮ್ಮ ದೇಶ ಬಿಟ್ಟು ಆಸ್ಟ್ರೇಲಿಯಾದಲ್ಲಿ ಕಾರ್ಯಕ್ರಮ ಮಾಡುತ್ತಿರುವುದಕ್ಕೆ ನಾನು ಕಾತುರದಿಂದ ಕಾಯುತ್ತಿದ್ದೇನೆ. ನಿಮ್ಮಲ್ಲರ ಪ್ರೀತಿ ಹಾಗೂ ಆಶೀರ್ವಾದ ನನಗೆ ಬೇಕಿದೆ. ನಿಮ್ಮನ್ನು ಭೇಟಿ ಮಾಡುವುದಕ್ಕೆ ನಾನು ತುಂಬಾ ಖುಷಿಯಾಗಿದ್ದೀನಿ ಎಂದು ಚಂದನ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಮಂಗ್ಳೂರು ಸಮುದ್ರದಲ್ಲಿ ಸ್ನೇಹಿತರ ಜೊತೆ ಸಂಭ್ರಮ: ಜಾಲಿಮೂಡಲ್ಲಿ ಬಿಗ್ ಬಾಸ್ ಚಂದನ್ ಶೆಟ್ಟಿ

    ಚಂದನ್ ಶೆಟ್ಟಿ ಬಿಗ್ ಬಾಸ್ ಶೋ ಗೆದ್ದಿದ್ದು ಮಾತ್ರವಲ್ಲದೆ, ಕನ್ನಡದಲ್ಲಿ ರ‍್ಯಾಪ್ ಹಾಡುಗಳ ಮೂಲಕ ಜಗತ್ತಿನಾದ್ಯಂತ ಜನಪ್ರಿಯರಾಗಿದ್ದಾರೆ. 3ಪೆಗ್ ಹಾಡು ಚಂದನ್ ಗೆ ಬೇರೆ ಲೆವೆಲ್ಲಿನ ವರ್ಚಸ್ಸು ತಂದುಕೊಟ್ಟಿದೆ.

  • ಚಂದನ್ ಶೆಟ್ಟಿಗಾಗಿ ರ‍್ಯಾಪ್ ಹಾಡು ಹಾಡಿದ 7ರ ಬಾಲೆ!

    ಚಂದನ್ ಶೆಟ್ಟಿಗಾಗಿ ರ‍್ಯಾಪ್ ಹಾಡು ಹಾಡಿದ 7ರ ಬಾಲೆ!

    ಬೆಂಗಳೂರು: ಬಿಗ್‍ಬಾಸ್ ಮನೆಯಲ್ಲಿ ಚಂದನ್ ಶೆಟ್ಟಿ ತಮ್ಮ ಸಹಸ್ಪರ್ಧಿಯರಿಗೆ ಹಾಡು ಬರೆದು ಅವರಿಗಾಗಿ ಹಾಡುತ್ತಿದ್ದರು. ಆಶಿತ, ನಿವೇದಿತಾ, ಅನುಪಮ, ಕೃಷಿ ತಾಪಂಡ, ಶೃತಿ ಪ್ರಕಾಶ್ ಅವರಿಗೆ ಹಾಡುಗಳನ್ನು ಬರೆದು ಹಾಡುತ್ತಿದ್ದರು. ಇದೀಗ ಚಂದನ್ ಶೆಟ್ಟಿಗೆ 7 ವರ್ಷದ ಬಾಲಕಿ ರ‍್ಯಾಪ್ ಸಾಂಗ್ ಹಾಡಿದ್ದಾರೆ.

    7ರ ಬಾಲಕಿ ಮಾನ್ಯ ಹರ್ಷ ಗೆ ಚಂದನ್ ಎಂದರೆ ತುಂಬಾ ಇಷ್ಟ. ಚಂದನ್ ಶೆಟ್ಟಿಗಾಗಿಯೇ ಒಂದು ಹಾಡನ್ನು ಮಾಡಿ ಅದನ್ನ ರ‍್ಯಾಪ್ ಸ್ಟೈಲ್‍ನಲ್ಲೇ ಹಾಡಿ ಯೂಟ್ಯೂಬ್‍ನಲ್ಲಿ ಹೊಸ ಸೆನ್ಸೇಶನ್ ಸೃಷ್ಟಿ ಮಾಡಿದ್ದಾಳೆ.

    ಮಾನ್ಯ ಸ್ವತಃ ಸಾಹಿತ್ಯ ರಚಿಸಿ ಚಂದನ್‍ಗಾಗಿ ರ‍್ಯಾಪ್ ಸ್ಟೈಲ್‍ನಲ್ಲಿಯೇ ಹಾಡನ್ನು ಹಾಡಿದ್ದಾರೆ. ಮಾನ್ಯಗೆ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಎಂದರೆ ತುಂಬ ಇಷ್ಟ. ಬಿಗ್ ಬಾಸ್ ಮನೆಯಲ್ಲಿ ಚಂದನ್ ಹಾಗೂ ನಿವೇದಿತಾ ಗೌಡರನ್ನು ನೋಡಿ ಅವರಂತೆಯೇ ಮಿಮಿಕ್ರಿ ಮಾಡುತ್ತಾಳೆ.

    ಸದ್ಯ ಮಾನ್ಯ 2ನೇ ತರಗತಿ ಓದುತ್ತಿದ್ದು, ಇಂಗ್ಲೀಷ್ ಪದ್ಯಗಳನ್ನು ಬರೆಯುತ್ತಾಳೆ. ಅಷ್ಟೇ ಅಲ್ಲದೇ ಡ್ಯಾನ್ಸ್, ಆ್ಯಕ್ಟಿಂಗ್, ಫ್ಯಾಶನ್ ಹಾಗೂ ಮಿಮಿಕ್ರಿಯಲ್ಲೂ ಹೆಚ್ಚು ಆಸಕ್ತಿ ಹೊಂದಿದ್ದಾಳೆ. ಮಿಮಿಕ್ರಿ ಮಾಡುವುದರಿಂದ ಈಕೆಗೆ ಜೂನಿಯರ್ ನಿವೇದಿತಾ ಎಂದು ಕರೆಯುತ್ತಾರೆ.

    https://www.youtube.com/watch?v=p6hllcCTRWM

  • ರಶಿಯನ್ ಯುವತಿಯನ್ನ ಅತ್ಯಾಚಾರಗೈದ ಬ್ಯಾಂಕ್ ಮ್ಯಾನೇಜರ್

    ರಶಿಯನ್ ಯುವತಿಯನ್ನ ಅತ್ಯಾಚಾರಗೈದ ಬ್ಯಾಂಕ್ ಮ್ಯಾನೇಜರ್

    ಲಕ್ನೋ: ರಾಷ್ಟ್ರೀಕೃತ ಬ್ಯಾಂಕ್ ಮ್ಯಾನೇಜರ್ ಒಬ್ಬ 20 ವರ್ಷದ ರಶಿಯನ್ ಯುವತಿಯನ್ನು ಅತ್ಯಾಚಾರಗೈದಿರುವ ಘಟನೆ ಉತ್ತರ ಪ್ರದೇಶ ರಾಜ್ಯದ ಬೃಂದಾವನ ಪಟ್ಟಣದಲ್ಲಿ ನಡೆದಿದೆ.

    ಬೃಂದಾವನ ಪಟ್ಟಣದ ಯುಸಿಓ ಬ್ಯಾಂಕ್ ಮ್ಯಾನೇಜರ್ ಮಹೇಂದ್ರ ಪ್ರಸಾದ್ ಸಿಂಗ್ ಎಂಬಾತನೇ ಅತ್ಯಾಚಾರಗೈದ ಕಾಮುಕ. ಫೇಸ್ ಬುಕ್ ನಲ್ಲಿ ಯುವತಿಯನ್ನು ಪರಿಚಯಿಸಿಕೊಂಡ ಮಹೇಂದ್ರ ಯುವತಿಯೊಂದಿಗೆ ಚಾಟ್ ಮಾಡುತ್ತಿದ್ದನು. ಸೆಪ್ಟಂಬರ್ ನಲ್ಲಿ ಯುವತಿ ಭಾರತಕ್ಕೆ ಭೇಟಿ ನೀಡಿದ್ದಾಗ, ಈ ವೇಳೆ ಪರಿಚಯನಾಗಿದ್ದ ಮಹೇಂದ್ರ ಯುವತಿಯನ್ನು ತನ್ನ ಮನೆಗೆ ಕರೆಸಿಕೊಂಡು ಅತ್ಯಾಚಾರ ಎಸೆಗಿದ್ದಾನೆ.

    ಫೇಸ್‍ಬುಕ್ ನಲ್ಲಿ ಪರಿಚಯ: ಮಹೇಂದ್ರ 2016 ನವೆಂಬರ್ ನಿಂದ ಯುವತಿಯನ್ನು ಫೇಸ್‍ಬುಕ್ ನಲ್ಲಿ ಪರಿಚಯ ಮಾಡಿಕೊಂಡಿದ್ದನು. ಈ ವೇಳೆ ಪ್ರತಿನಿತ್ಯ ಪರಸ್ಪರ ಚಾಟ್ ಸಹ ಮಾಡುತ್ತಿದ್ದರು. ಪರಿಚಯದ ಬಳಿಕ ಮಹೇಂದ್ರ ಯುವತಿಗೆ ಭಾರತಕ್ಕೆ ಬರುವಂತೆ ಆಹ್ವಾನಿಸಿದ್ದಾನೆ. ಸೆಪ್ಟಂಬರ್ ತಿಂಗಳಲ್ಲಿ ಭಾರತಕ್ಕೆ ಬಂದ ಯುವತಿ ಬೃಂದಾವನದ ಹೋಟೆಲನಲ್ಲಿ ಉಳಿದುಕೊಂಡಿದ್ದರು.

    ಬೃಂದಾವನಕ್ಕೆ ಬಂದ ಯುವತಿಯನ್ನು ಮನೆಗೆ ಕರೆಸಿ ರೇಪ್ ಮಾಡಿದ್ದಾನೆ. ಘಟನೆ ನಂತರ ಯುವತಿಗೆ ಬೃಂದಾವನದಲ್ಲಿ ಮತ್ತೊಬ್ಬ ಮಹಿಳೆಯ ಸಲಹೆಯಂತೆ ಮಹೇಂದ್ರ ವಿರುದ್ಧ ದೂರು ದಾಖಲಿಸಿದ್ದಾರೆ. ದೂರು ದಾಖಲಾದ ಬಳಿಕ ಪೊಲೀಸರು ಆರೋಪಿ ಮಹೇಂದ್ರನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇತ್ತ ಯುವತಿಯನ್ನು ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ.