Tag: Ranya Rao

  • ಕಾಂಗ್ರೆಸ್ ಸಚಿವರಿಗೆ ರನ್ಯಾ ಕರೆ ಮಾಡಿದ್ದಾಳೆ: ಶಾಸಕ ಭರತ್ ಶೆಟ್ಟಿ ಬಾಂಬ್

    ಕಾಂಗ್ರೆಸ್ ಸಚಿವರಿಗೆ ರನ್ಯಾ ಕರೆ ಮಾಡಿದ್ದಾಳೆ: ಶಾಸಕ ಭರತ್ ಶೆಟ್ಟಿ ಬಾಂಬ್

    – ನಟಿಯನ್ನ ಬಚಾವ್ ಮಾಡಲು ಸಚಿವರು ಪ್ರಭಾವ ಬೀರಿದ್ದಾರೆ ಎಂದು ಆರೋಪ

    ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ (Gold Smuggling) ಕೇಸಲ್ಲಿ ರನ್ಯಾ ರಾವ್ (Ranya Rao) ಕೆಲವು ಕಾಂಗ್ರೆಸ್ ಸಚಿವರಿಗೆ ಕರೆ ಮಾಡಿ ಬಚಾವ್ ಆಗಲು ಯತ್ನಿಸಿದ್ದಾಳೆ ಎಂದು ಬಿಜೆಪಿ ಶಾಸಕ ಭರತ್ ಶೆಟ್ಟಿ (Bharath Shetty) ಹೊಸ ಬಾಂಬ್ ಸಿಡಿಸಿದ್ದಾರೆ.

    ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವರು ಕೂಡ ಆಕೆಯನ್ನು ರಕ್ಷಿಸಲು ಕರೆ ಮಾಡಿ ಪ್ರಭಾವ ಬೀರುತ್ತಿದ್ದಾರೆ ಎಂದು ಸಾರ್ವಜನಿಕವಾಗಿ ಮಾತನಾಡುತ್ತಿದ್ದಾರೆ. ಈಗ ಸಿಬಿಐ ಈ ಪ್ರಕರಣವನ್ನು ತೆಗೆದುಕೊಂಡ ಕಾರಣ ಇದರ ಹಿಂದೆ ಯಾರೆಲ್ಲಾ ಇದ್ದಾರೆ, ಯಾರ ಕೈವಾಡವಿದೆ ಎಂಬುದು ಖಂಡಿತ ಮುನ್ನಲೆಗೆ ಬರುತ್ತದೆ. ಸಿಬಿಐ ತನಿಖಾ ವರದಿಗೋಸ್ಕರ ನಾವೆಲ್ಲಾ ಕಾಯುತ್ತಿದ್ದೇವೆ ಎಂದರು. ಇದನ್ನೂ ಓದಿ: ಅಬಕಾರಿ ಇಲಾಖೆಯಲ್ಲಿ ಅಕ್ರಮ ಆರೋಪ – ಛತ್ತೀಸ್‌ಗಢ ಮಾಜಿ ಸಿಎಂ, ಪುತ್ರನ ಮನೆ ಮೇಲೆ ED ದಾಳಿ

    ರನ್ಯಾ ರಾವ್ ಒಡೆತನದ ಕಂಪನಿಗೆ ಸರ್ಕಾರ ಜಮೀನು ಮಂಜೂರು ಮಾಡಿರುವ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಕ್ರಿಮಿನಲ್ ಕೇಸ್ ಆಗಿದೆ. ಜಮೀನು ಮಂಜೂರಾತಿ ಪ್ರಕ್ರಿಯೆಯಲ್ಲಿ ತಪ್ಪಿದ್ದರೆ ಹೇಳಲಿ. ಈ ಪ್ರಕ್ರಿಯೆಯಲ್ಲಿ ಯಾವುದೇ ತಪ್ಪುಗಳಾಗಿಲ್ಲ. ಜಮೀನು ಮಂಜೂರಾತಿ ಪ್ರಕ್ರಿಯೆ ಬೇಗ ಆಗಿದೆ ಎಂಬುದು ಇವರ ಆರೋಪ. ನಿಮ್ಮದೇ ಸರ್ಕಾರ ಇದೆ. ಜಾಗ ಮಂಜೂರಾತಿಯಲ್ಲಿ ಏನಾದರೂ ಸಮಸ್ಯೆ ಇದ್ದರೆ ಅದನ್ನು ತನಿಖೆ ಮಾಡಿಸಿ ಎಂದು ಹೇಳಿದರು. ಇದನ್ನೂ ಓದಿ: ಹಾವೇರಿ| 33 ಸೆಕೆಂಡ್ ನಲ್ಲಿ 33 ಲಕ್ಷ ಹಣ ಕಳ್ಳತನ – ಓರ್ವ ಆರೋಪಿ ಅರೆಸ್ಟ್

  • ರನ್ಯಾ ರಾವ್ ಶೋಕಿಗೆ ಅಧಿಕಾರಿಗಳೇ ಶಾಕ್ – ನಟಿ ಬಳಿಯಿತ್ತು ಕೋಟಿ ಮೌಲ್ಯದ 39 ವಿದೇಶಿ ವಾಚ್‌ಗಳು

    ರನ್ಯಾ ರಾವ್ ಶೋಕಿಗೆ ಅಧಿಕಾರಿಗಳೇ ಶಾಕ್ – ನಟಿ ಬಳಿಯಿತ್ತು ಕೋಟಿ ಮೌಲ್ಯದ 39 ವಿದೇಶಿ ವಾಚ್‌ಗಳು

    ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ (Ranya Rao) ಬಂಧನ ಪ್ರಕರಣದಲ್ಲಿ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ನಟಿ ಬಳಿಯಿದ್ದ ಬರೋಬ್ಬರಿ 39 ವಾಚ್‌ಗಳು ಪತ್ತೆಯಾಗಿವೆ.

    ಈಗಾಗಲೇ ಡಿಆರ್‌ಐ ಮೂರು ದಿನ ಪೊಲೀಸ್ ಕಸ್ಟಡಿಗೆ ಪಡೆದಿದೆ. ಇಂದು ಪೊಲೀಸ್ ಕಸ್ಟಡಿಯೂ ಅಂತ್ಯ ಆಗಲಿದೆ. ಕಳೆದ ಐದು ದಿನಗಳ ಹಿಂದೆ ರನ್ಯಾ ಫ್ಲ್ಯಾಟ್‌ ಮೇಲೆ ದಾಳಿ ಮಾಡಿದ್ದ ಆರ್‌ಡಿಐ ಕೋಟ್ಯಂತರ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿತ್ತು. ಇದನ್ನೂ ಓದಿ: EXCLUSIVE: ರನ್ಯಾ ಕೇಸ್‌ಗೆ ಟ್ವಿಸ್ಟ್; ನಟಿ ಒಡೆತನದ ಕಂಪನಿಗೆ ಸರ್ಕಾರದಿಂದಲೇ 12 ಎಕರೆ ಜಮೀನು ಮಂಜೂರು!

    ಈ ನಡುವೆ ಇನ್ನೊಂದು ಆಶ್ಚರ್ಯಕರ ವಿಚಾರ ಬೆಳಕಿಗೆ ಬಂದಿದೆ. ರನ್ಯಾ ರಾವ್‌ಗೆ ಇದ್ದ ಕೋಟ್ಯಂತರ ರೂಪಾಯಿ ಮೌಲ್ಯದ ವಿದೇಶಿ ವಾಚ್‌ಗಳು ಸಿಕ್ಕಿವೆ. 39 ವಿದೇಶಿ ವಾಚ್‌ಗಳು ಪತ್ತೆಯಾಗಿವೆ. ಆದರೆ, ಚಿನ್ನಾಭರಣ ಮತ್ತು ಹಣವನ್ನು ಮಾತ್ರ ಡಿಆರ್‌ಐ ವಶಕ್ಕೆ ಪಡೆದಿದೆ.

    ವಾಚ್‌ಗಳನ್ನು ಡಿಆರ್‌ಐ ಅಧಿಕಾರಿಗಳು ವಶಕ್ಕೆ ಪಡೆದಿಲ್ಲ. ಸದ್ಯಕ್ಕೆ ತನಿಖೆ ಮುಂದುವರಿದಿದೆ. ಇದನ್ನೂ ಓದಿ: ಜಯಮಾಲಾ ಮಗಳ ಮದುವೆಯಲ್ಲಿ ಮಿಂಚಿದ್ದ ಆರೋಪಿ ರನ್ಯಾ ರಾವ್

    ದುಬೈನಿಂದ ಚಿನ್ನ ಕಳ್ಳ ಸಾಗಣೆ ಮಾಡುತ್ತಿದ್ದಾಗ ಬೆಂಗಳೂರಿನ ಏರ್‌ಪೋರ್ಟ್‌ನಲ್ಲಿ ನಟಿ ರನ್ಯಾ ರಾವ್ ಈಚೆಗೆ ಸಿಕ್ಕಿಬಿದ್ದಿದ್ದರು. ಆಕೆಯನ್ನು ಡಿಆರ್‌ಐ ಅಧಿಕಾರಿಗಳು ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ತನಿಖೆಯಲ್ಲಿ ನಟಿಯ ಅನೇಕ ಅಕ್ರಮ ಚಟುವಟಿಕೆಗಳು ಒಂದೊಂದಾಗಿ ಬಯಲಾಗುತ್ತಿವೆ.

  • 138 ಕೋಟಿ ಹೂಡಿಕೆ, 160 ಉದ್ಯೋಗ ಸೃಷ್ಟಿ: ರನ್ಯಾ ರಾವ್‌ಗೆ KIADB 12 ಎಕ್ರೆ ಜಾಗ ಸಿಕ್ಕಿದ್ದು ಹೇಗೆ?

    138 ಕೋಟಿ ಹೂಡಿಕೆ, 160 ಉದ್ಯೋಗ ಸೃಷ್ಟಿ: ರನ್ಯಾ ರಾವ್‌ಗೆ KIADB 12 ಎಕ್ರೆ ಜಾಗ ಸಿಕ್ಕಿದ್ದು ಹೇಗೆ?

    ಬೆಂಗಳೂರು: ಚಿನ್ನದ ಕಳ್ಳಸಾಗಣೆ (Gold Smuggling Case) ಪ್ರಕರಣದಲ್ಲಿ ಆರೋಪಿಯಾಗಿರುವ ಕನ್ನಡ ಚಿತ್ರನಟಿ ರನ್ಯಾ ರಾವ್ (Ranya Rao) ಅವರ ಮೆಸರ್ಸ್ ಕ್ಸಿರೋದ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಗೆ 12 ಎಕರೆ ಭೂಮಿ 2023ರ ಜನವರಿ 2ರಂದು ಮಂಜೂರಾಗಿದೆ ಎಂದುಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (KIADB) ಸಿಇಒ ಡಾ. ಮಹೇಶ್ ಭಾನುವಾರ ಹೇಳಿದ್ದಾರೆ.

    ಹಿಂದಿನ ಸರ್ಕಾರ ಅಧಿಕಾರದಲ್ಲಿ ಇದ್ದಾಗ 2023ರ ಜನವರಿ 2ರಂದು ನಡೆದ 137ನೇ ರಾಜ್ಯ ಮಟ್ಟದ ಸಿಂಗಲ್ ವಿಂಡೋ ಕ್ಲಿಯರೆನ್ಸ್ ಕಮಿಟಿ (ಎಸ್‌ಎಲ್‌ಎಸ್‌ಡಬ್ಲ್ಯು ಸಿಸಿ) ಸಭೆಯಲ್ಲಿ ತುಮಕೂರು ಜಿಲ್ಲೆ ಸಿರಾ ಕೈಗಾರಿಕಾ ಪ್ರದೇಶದಲ್ಲಿ ಸದರಿ ಭೂಮಿ ಮಂಜೂರಾತಿಗೆ ಈ ಅನುಮೋದನೆ ನೀಡಲಾಗಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: EXCLUSIVE: ರನ್ಯಾ ಕೇಸ್‌ಗೆ ಟ್ವಿಸ್ಟ್; ನಟಿ ಒಡೆತನದ ಕಂಪನಿಗೆ ಸರ್ಕಾರದಿಂದಲೇ 12 ಎಕರೆ ಜಮೀನು ಮಂಜೂರು!

    ಉಕ್ಕಿನಿಂದ ತಯಾರಿಸಲಾಗುವ ಟಿಎಂಟಿ ಪಟ್ಟಿ, ಸರಳು ಹಾಗೂ ಸಹ-ಉತ್ಪನ್ನಗಳ ಘಟಕವನ್ನು 138 ಕೋಟಿ  ರೂ.ಹೂಡಿಕೆಯಲ್ಲಿ ಸ್ಥಾಪಿಸಲಾಗುವುದು. ಇದರಿಂದ, ಸುಮಾರು 160 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಕಂಪನಿ ಪ್ರಸ್ತಾವ ಸಲ್ಲಿಸಿತ್ತು‌ ಎಂದು ಅವರು ವಿವರಿಸಿದ್ದಾರೆ.

  • EXCLUSIVE: ರನ್ಯಾ ಕೇಸ್‌ಗೆ ಟ್ವಿಸ್ಟ್; ನಟಿ ಒಡೆತನದ ಕಂಪನಿಗೆ ಸರ್ಕಾರದಿಂದಲೇ 12 ಎಕರೆ ಜಮೀನು ಮಂಜೂರು!

    EXCLUSIVE: ರನ್ಯಾ ಕೇಸ್‌ಗೆ ಟ್ವಿಸ್ಟ್; ನಟಿ ಒಡೆತನದ ಕಂಪನಿಗೆ ಸರ್ಕಾರದಿಂದಲೇ 12 ಎಕರೆ ಜಮೀನು ಮಂಜೂರು!

    – ಪ್ರಭಾವಿ ರಾಜಕಾರಣಿಯಿಂದ ಫಟಾಫಟ್ ಭೂಮಿ ಮಂಜೂರು?
    – ನಟಿ ರನ್ಯಾಗೆ ಪ್ರಭಾವಿ ರಾಜಕಾರಣಿಗಳ ನಂಟು?

    ಬೆಂಗಳೂರು: ನಟಿ ರನ್ಯಾ (Ranya Rao) ಗೋಲ್ಡ್ ಸ್ಮಗ್ಲಿಂಗ್ ಕೇಸ್‌ಗೆ ಮತ್ತೊಂದು ತಿರುವು ಸಿಕ್ಕಿದೆ. ನಟಿಗೆ ದೊಡ್ಡ ದೊಡ್ಡ ರಾಜಕಾರಣಿಗಳ ನಂಟಿರುವ ಶಂಕೆ ವ್ಯಕ್ತವಾಗಿದೆ.

    ರನ್ಯಾ ರಾವ್‌ಗೂ ಕರ್ನಾಟಕ ರಾಜಕೀಯ ವ್ಯಕ್ತಿಗಳಿಗೂ ದೊಡ್ಡ ನಂಟಿರುವುದು ಗೊತ್ತಾಗಿದೆ. ರನ್ಯಾ ರಾವ್ ನಿರ್ದೇಶಕಿಯಾಗಿರುವ ಕಂಪನಿಗೆ ಕರ್ನಾಟಕ ಸರ್ಕಾರದಿಂದಲೇ 12 ಎಕರೆ ಜಮೀನು ಮಂಜೂರಾಗಿದೆ. ಇದನ್ನೂ ಓದಿ: ಜಯಮಾಲಾ ಮಗಳ ಮದುವೆಯಲ್ಲಿ ಮಿಂಚಿದ್ದ ಆರೋಪಿ ರನ್ಯಾ ರಾವ್

    ರನ್ಯಾ ಮತ್ತು ರಷಬ್ ಇಬ್ಬರು ಕೂಡ ಕಂಪನಿಯ ನಿರ್ದೇಶಕರು. ರನ್ಯಾ ksiroda India private limited ಎಂಬ ಕಂಪನಿಯ ನಿರ್ದೇಶಕಿಯಾಗಿದ್ದಾರೆ. ಈ ಕಂಪನಿಗೆ 2023 ರಲ್ಲಿ ಕೆಐಎಡಿಬಿಯಿಂದ ಬರೋಬ್ಬರಿ 12 ಎಕರೆ ಜಮೀನು ಮಂಜೂರು ಮಾಡಲಾಗಿದೆ.

    ಸರ್ಕಾರ ಜಮೀನು ಮಂಜೂರು ಮಾಡಿರುವ ದಾಖಲೆಯಿದೆ. ಒಬ್ಬ ನಟಿ, ನಿರ್ದೇಶಕಿಯಾಗಿರುವ ಕಂಪನಿಗೆ 12 ಎಕರೆ ಜಮೀನು ಮಂಜೂರಾಗಿದ್ದು ಹೇಗೆ ಎಂಬ ಹತ್ತು ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ. ಇದನ್ನೂ ಓದಿ: ನಟಿಗೆ 14.2 ಕೆಜಿ ಚಿನ್ನ ದುಬೈನಲ್ಲಿ ಸಿಕ್ಕಿದ್ದು ಹೇಗೆ? – ರನ್ಯಾಗೆ DRIಯಿಂದ ಡ್ರಿಲ್‌

    ರನ್ಯಾ ರಾವ್ ಕಂಪನಿಗೆ ಫಟಾಫಟ್ ಭೂಮಿ ಮಂಜೂರಾಗಿದೆಯೇ ಎಂಬ ಗುಮಾನಿಯು ಮೂಡಿದೆ. ರಾಜಕಾರಣಿಯೊಬ್ಬರ ಕೃಪಾಕಟಾಕ್ಷದಿಂದ ಬರೋಬ್ಬರಿ 12 ಎಕರೆ ಕೆಐಎಡಿಬಿ ಲ್ಯಾಂಡ್ ಮಂಜೂರಾಗಿದೆ.

    ತುಮಕೂರಿನ ಶಿರಾದಲ್ಲಿ ಸ್ಟೀಲ್ ಕಂಪನಿಗೆ ಜಮೀನು ಮಂಜೂರಾಗಿದೆ. ಕಂಪನಿ ಸ್ಥಾಪನೆಯಾದ 9 ತಿಂಗಳಲ್ಲೇ ಸರ್ಕಾರ ಭೂಮಿ ಕೊಟ್ಟಿದೆ. 2022ರ ಏಪ್ರಿಲ್‌ನಲ್ಲಿ ಕಂಪನಿ ಸ್ಥಾಪನೆಯಾಯಿತು. 2023 ಜನವರಿಯಲ್ಲಿ ಭೂಮಿ ಮಂಜೂರು ಮಾಡಿ ಆದೇಶ ಹೊರಡಿಸಲಾಗಿದೆ. ರನ್ಯಾ ರಾವ್‌ಗಾಗಿ ಫೈಲ್ ಸ್ಪೀಡ್ ಅಪ್ ಆಗಿದ್ಯಾ? ರನ್ಯಾ ಹಿಂದಿರುವ ಆ ರಾಜಕಾರಣಿ ಯಾರು ಎಂಬ ಪ್ರಶ್ನೆ ಮೂಡಿದೆ. ಇದನ್ನೂ ಓದಿ: ಗೋಲ್ಡ್ ಸ್ಮಗ್ಲಿಂಗ್ ಕೇಸಲ್ಲಿ ನಟಿ ರನ್ಯಾಗೆ ಮತ್ತೊಂದು ಸಂಕಷ್ಟ – ಸಿಬಿಐನಿಂದ ಪ್ರತ್ಯೇಕ FIR ದಾಖಲು

  • ಜಯಮಾಲಾ ಮಗಳ ಮದುವೆಯಲ್ಲಿ ಮಿಂಚಿದ್ದ ಆರೋಪಿ ರನ್ಯಾ ರಾವ್

    ಜಯಮಾಲಾ ಮಗಳ ಮದುವೆಯಲ್ಲಿ ಮಿಂಚಿದ್ದ ಆರೋಪಿ ರನ್ಯಾ ರಾವ್

    ಬೆಂಗಳೂರು: ಚಿನ್ನ ಕಳ್ಳಸಾಗಾಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ಆರೋಪಿ ನಟಿ ರನ್ಯಾ ರಾವ್ (Ranya Rao) ತಮ್ಮ ಸಹೋದರನ ಮದುವೆಯಲ್ಲಿ ಮಿಂಚಿದ್ದ ದೃಶ್ಯಗಳು `ಪಬ್ಲಿಕ್ ಟಿವಿ’ಗೆ ಲಭ್ಯವಾಗಿವೆ.

    ಹೌದು, ಇತ್ತೀಚಿಗಷ್ಟೇ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿಆರ್‌ಐ ಅಧಿಕಾರಿಗಳು ನಟಿ ರನ್ಯಾ ರಾವ್‌ನ್ನು ಬಂಧಿಸಿ, 12 ಕೋಟಿ ಮೌಲ್ಯದ 14.8 ಕೆಜಿ ಚಿನ್ನವನ್ನು ವಶಕ್ಕೆ ಪಡೆದಿದ್ದರು. ಇದನ್ನೂ ಓದಿ:ರನ್ಯಾ ಭೇಟಿಗೆ ಅವಕಾಶ ನೀಡ್ತಿರಲಿಲ್ಲ, ಅಂತರ ಬೆಳೆದಿತ್ತು – ಕೇಸ್‌ನಿಂದ ಕುಟುಂಬಕ್ಕೆ ಕಳಂಕ: ರಾಮಚಂದ್ರ ರಾವ್

    ರನ್ಯಾ ರಾವ್ ಬಂಧನದ ಬಳಿಕ ಆಕೆಯ ಮಲತಂದೆ ಕೆ.ರಾಮಚಂದ್ರರಾವ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ, ನಾನು ನನ್ನ ಮಗಳು ದೂರ ಆಗಿ 4 ತಿಂಗಳು ಕಳೆದಿದೆ. 2025ರಲ್ಲಿ ರನ್ಯಾ, ಜತಿನ್ ವಿವಾಹವಾಗಿತ್ತು. ಅವಳ ಸಂಸಾರದ ವಿಚಾರಕ್ಕೆ ನಾನು ಹೋಗೋದಿಲ್ಲ. ಮದುವೆಯಾದ ಬಳಿಕ ಅವರಿಬ್ಬರು ಸಂಪೂರ್ಣ ಸ್ವಾತಂತ್ರ್ಯ, ಗೌಪ್ಯತೆಯನ್ನು ಕಾಪಾಡಿಕೊಂಡಿದ್ದರು. ಜೊತೆಗೆ ನಮ್ಮ ಮನೆಗೆ ಭೇಟಿ ನೀಡುವುದನ್ನು ನಿಲ್ಲಿಸಿದ್ದರು. ಇತ್ತೀಚಿಗೆ ನನ್ನ ಮಗಳು ತುಂಬಾ ದಿನದಿಂದ ಕಾಂಟಾಕ್ಟ್ ಇಲ್ಲ ಎಂದು ಹೇಳಿದ್ದರು. ಈ ರೀತಿ ಬರೆದು ಪತ್ರಿಕಾ ಪ್ರಕಟಣೆಯ ಮೂಲಕ ಪ್ರತಿಕ್ರಿಯಿಸಿದ್ದರು.

    ಫೆಬ್ರವರಿಯಲ್ಲಿ ನಡೆದಿದ್ದ ಸೌಂದರ್ಯ ಜಯಮಾಲಾ ಹಾಗೂ ರುಷಬ್ ಮದುವೆಯಲ್ಲಿ ನಟಿ ರನ್ಯಾ ಮಿಂಚಿದ್ದರು. ಸಹೋದರನ ಮದುವೆಯಲ್ಲಿ ಆಕೆಯ ತಾಯಿ ರೋಹಿಣಿ ಜೊತೆ ಕಳಸ ಹಿಡಿದುಕೊಂಡು ಓಡಾಡಿದ್ದರು. ತಿಂಗಳ ಹಿಂದೆಯಷ್ಟೇ ತಮ್ಮ ಕುಟುಂಬದವರೊಂದಿಗೆ ರನ್ಯಾ ಖುಷಿಯಾಗಿದ್ದರು. ಆದರೆ ರಾಮಚಂದ್ರರಾವ್ ನನ್ನ ಮಗಳು ದೂರವಾಗಿ 4 ತಿಂಗಳು ಕಳೆದಿವೆ ಎಂದು ಹೇಳಿದ್ದರು. ಸದ್ಯ ರಾಮಚಂದ್ರರಾವ್ ಅವರು ರನ್ಯಾ ರಾವ್ ಬಗ್ಗೆ ಸುಳ್ಳು ಹೇಳಿದ್ದಾರಾ? ಎನ್ನುವ ಪ್ರಶ್ನೆ ಎಲ್ಲರಲ್ಲಿ ಮೂಡಿದೆ.

    ಪ್ರಕರಣ ಏನು?
    ಮೂಲತಃ ಚಿಕ್ಕಮಗಳೂರಿನವರಾದ ಎಡಿಜಿಪಿ ರಾಮ್‌ಚಂದ್ರರಾವ್ ಅವರ 2ನೇ ಪತ್ನಿಯ ಮೊದಲ ಗಂಡನ ಮಗಳು ರನ್ಯಾ ರಾವ್. ಮಾ.04 ರಂದು ಖಚಿತ ಮಾಹಿತಿ ಮೇರೆಗೆ ಡಿಆರ್‌ಐ ಅಧಿಕಾರಿಗಳು ನಟಿ ರನ್ಯಾ ರಾವ್‌ನ್ನು ಬಂಧಿಸಿ, 12 ಕೋಟಿ ಮೌಲ್ಯದ 14.8 ಕೆಜಿ ಚಿನ್ನ ವಶಕ್ಕೆ ಪಡೆದಿದ್ದರು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ವಿಶೇಷ ಆರ್ಥಿಕ ಅಪರಾಧಗಳ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.ಇದನ್ನೂ ಓದಿ: ನಟಿಗೆ 14.2 ಕೆಜಿ ಚಿನ್ನ ದುಬೈನಲ್ಲಿ ಸಿಕ್ಕಿದ್ದು ಹೇಗೆ? – ರನ್ಯಾಗೆ DRIಯಿಂದ ಡ್ರಿಲ್‌

     

  • ನಟಿಗೆ 14.2 ಕೆಜಿ ಚಿನ್ನ ದುಬೈನಲ್ಲಿ ಸಿಕ್ಕಿದ್ದು ಹೇಗೆ? – ರನ್ಯಾಗೆ DRIಯಿಂದ ಡ್ರಿಲ್‌

    ನಟಿಗೆ 14.2 ಕೆಜಿ ಚಿನ್ನ ದುಬೈನಲ್ಲಿ ಸಿಕ್ಕಿದ್ದು ಹೇಗೆ? – ರನ್ಯಾಗೆ DRIಯಿಂದ ಡ್ರಿಲ್‌

    ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ಕೇಸಲ್ಲಿ ಬಂಧನಕ್ಕೆ ಒಳಗಾಗಿರುವ ನಟಿ ರನ್ಯಾ ರಾವ್‌ ವಿಚಾರಣೆಯನ್ನ ಡಿಆರ್‌ಐ ಅಧಿಕಾರಿಗಳು ಆರಂಭಿಸಿದ್ದಾರೆ.

    ನಿನ್ನೆ ಬಾಡಿ ವಾರೆಂಟ್ ಮೇಲೆ ಕಸ್ಟಡಿಗೆ ಪಡೆದಿರುವ ಅಧಿಕಾರಿಗಳು 14.2 ಕೆಜಿ ಚಿನ್ನದ ಮೂಲ ಯಾವುದು? ಹಣ ಇನ್ವೆಸ್ಟ್‌ಮೆಂಟ್ ಹೇಗೆ ಅಂತಾ ನಟಿಯನ್ನ ವಿಚಾರಣೆ ಮಾಡುತ್ತಿದ್ದಾರೆ.

    ನಟಿಗೆ 14.2 ಕೆಜಿ ಗೋಲ್ಡ್ ದುಬೈನಲ್ಲಿ ಸಿಕ್ಕಿದ್ದು ಹೇಗೆ?
    ನಟಿಯೇ ಕೋಟಿ ಕೋಟಿ ಇನ್ವೆಸ್ಟ್ ಮಾಡಿ ಗೋಲ್ಡ್ ಖರೀದಿಸಿ ಅಕ್ರಮವಾಗಿ ತಂದಳಾ? 14.2 ಕೆಜಿ ಚಿನ್ನ ಖರೀದಿಗೆ 10 ರಿಂದ 12 ಕೋಟಿ ಹಣ ಬೇಕು. ಆ ಹಣ ಎಲ್ಲಿಂದ ಬಂತು ಎಂದು ಅಧಿಕಾರಿಗಳು ಪ್ರಶ್ನೆಗಳನ್ನು ಎತ್ತಿದ್ದಾರೆ.

    ದುಬೈನಿಂದ ಚಿನ್ನದ ಕಳ್ಳ ಮಾಲನ್ನು ಸೇಫಾಗಿ ತರುವ ಕೆಲಸ‌ ಮಾಡುತ್ತಿದ್ದಾಳಾ ಅಥವಾ ಮದ್ಯವರ್ತಿಯಾಗಿ ಏರ್ಪೋರ್ಟ್‌ನಿಂದ ಸುರಕ್ಷಿತವಾಗಿ ಚಿನ್ನ ಸಾಗಿಸ್ತಿದ್ದಳಾ ಎಂಬ ಗುಮಾನಿಯೂ ಮೂಡಿದೆ.

    ಕಸ್ಟಮ್ಸ್ ತೊಂದರೆಯಾಗದಂತೆ ಏರ್ಪೋರ್ಟ್ ದಾಟಿಸಿ ಕಮಿಷನ್ ಪಡೆಯುತ್ತಿದ್ದಳಾ? ಚಿನ್ನದ ಸ್ಮಗ್ಲಿಂಗ್ ಹಿಂದೆ ಬೇರೆ ಯಾರ ಕೈವಾಡವಿದೆ? ದುಬೈನಲ್ಲಿ ನಟಿಯ ಕೈಗೆ ಚಿನ್ನ ಸಿಕ್ಕಿದ್ದಾದರೂ ಹೇಗೆ? ಅಕ್ರಮ ಚಿನ್ನ ಸಾಗಾಟದ ಹಿಂದೆ ಯಾರಿದ್ದಾರೆ.. ಹೀಗೆ ಹಲವು ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ.

  • ಗೋಲ್ಡ್ ಸ್ಮಗ್ಲಿಂಗ್ ಕೇಸಲ್ಲಿ ನಟಿ ರನ್ಯಾಗೆ ಮತ್ತೊಂದು ಸಂಕಷ್ಟ – ಸಿಬಿಐನಿಂದ ಪ್ರತ್ಯೇಕ FIR ದಾಖಲು

    ಗೋಲ್ಡ್ ಸ್ಮಗ್ಲಿಂಗ್ ಕೇಸಲ್ಲಿ ನಟಿ ರನ್ಯಾಗೆ ಮತ್ತೊಂದು ಸಂಕಷ್ಟ – ಸಿಬಿಐನಿಂದ ಪ್ರತ್ಯೇಕ FIR ದಾಖಲು

    ಬೆಂಗಳೂರು: ಚಿನ್ನ ಕಳ್ಳ ಸಾಗಣೆ ಪ್ರಕರಣ ಎದುರಿಸುತ್ತಿರುವ ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್‌ಗೆ (Ranya Rao) ಮತ್ತೊಂದು ಸಂಕಷ್ಟ ಎದುರಾಗಿದೆ. ನಟಿ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ಗೆ ಸಿಬಿಐ ಎಂಟ್ರಿ ಕೊಟ್ಟಿದೆ.

    ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ (CBI) ಪ್ರತ್ಯೇಕವಾಗಿ ಎಫ್‌ಐಆರ್ ದಾಖಲಿಸಿಕೊಂಡಿದೆ. ದೇಶಾದ್ಯಂತ ಗೋಲ್ಡ್ ಸ್ಮಗ್ಲಿಂಗ್ ಹೆಚ್ಚಾದ ಹಿನ್ನೆಲೆ ಪ್ರತ್ಯೇಕವಾಗಿ ತನಿಖೆ ಪ್ರಾರಂಭ ಮಾಡಿದೆ. ಇದನ್ನೂ ಓದಿ: ಯೂರೋಪ್‌, ಅಮೆರಿಕ, ದುಬೈಗೆ ನಿರಂತರ ಸುತ್ತಾಟ – ನಟಿ ರನ್ಯಾ ಟ್ರಾವೆಲ್‌ ಹಿಸ್ಟರಿ ಬಯಲು

    ಗೋಲ್ಡ್ ಸ್ಮಗ್ಲಿಂಗ್‌ನ ಸಿಂಡಿಕೇಟ್‌ನ ಪತ್ತೆ ಹಚ್ಚಲು ಸಿಬಿಐ ಮುಂದಾಗಿದೆ. ದೆಹಲಿ, ಮುಂಬೈ, ಬೆಂಗಳೂರಿನಲ್ಲಿ ಸಿಬಿಐ ತನಿಖೆ ಪ್ರಾರಂಭಿಸಿದೆ.

    ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಈಚೆಗೆ ಬೆಂಗಳೂರು ಏರ್‌ಪೋರ್ಟ್ನಲ್ಲಿ ನಟಿ ರನ್ಯಾ ರಾವ್ ಬಂಧನಕ್ಕೆ ಒಳಗಾಗಿದ್ದರು. ಡಿಆರ್‌ಐ ಅಧಿಕಾರಿಗಳು ಆರೋಪಿ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ರನ್ಯಾ ಭೇಟಿಗೆ ಅವಕಾಶ ನೀಡ್ತಿರಲಿಲ್ಲ, ಅಂತರ ಬೆಳೆದಿತ್ತು – ಕೇಸ್‌ನಿಂದ ಕುಟುಂಬಕ್ಕೆ ಕಳಂಕ: ರಾಮಚಂದ್ರ ರಾವ್

    ದುಬೈನಿಂದ 14 ಕೆಜಿಗೂ ಹೆಚ್ಚು ತೂಕದ ಚಿನ್ನವನ್ನು ತೊಡೆಯ ಭಾಗದಲ್ಲಿ ಅಂಟಿಸಿಕೊಂಡು ನಟಿ ಸಾಗಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ನಟಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಗೋಲ್ಡ್ ಸ್ಮಗ್ಲಿಂಗ್ ಮಾಡುತ್ತಿರುವುದು ಗೊತ್ತಾಗಿದೆ.

  • ಯೂರೋಪ್‌, ಅಮೆರಿಕ, ದುಬೈಗೆ ನಿರಂತರ ಸುತ್ತಾಟ – ನಟಿ ರನ್ಯಾ ಟ್ರಾವೆಲ್‌ ಹಿಸ್ಟರಿ ಬಯಲು

    ಯೂರೋಪ್‌, ಅಮೆರಿಕ, ದುಬೈಗೆ ನಿರಂತರ ಸುತ್ತಾಟ – ನಟಿ ರನ್ಯಾ ಟ್ರಾವೆಲ್‌ ಹಿಸ್ಟರಿ ಬಯಲು

    ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ (Ranya Rao) ಈಗ DRI ಅಧಿಕಾರಿಗಳ ಕಸ್ಟಡಿ ಸೇರಿದ್ದಾಳೆ. ಕಸ್ಟಡಿಯಲ್ಲಿರೋ ನಟಿಯ ಟ್ರಾವೆಲ್ ಹಿಸ್ಟರಿ ಬಯಲಾಗಿದೆ.

    ಈಕೆ ವಿಮಾನ ನಿಲ್ದಾಣದ ವಲಸೆ ವಿಭಾಗದಲ್ಲಿ ಫ್ರಿಕ್ವೆಂಟ್ ಟ್ರಾವೆಲರ್ ಅಂತ ನೋಂದಣಿಯೂ ಆಗಿದ್ದಾಳೆ. ಫ್ರಿಕ್ವೆಂಟ್ ಟ್ರಾವೆಲರ್ ಅಂದ್ರೆ ನಿರಂತರವಾಗಿ ವಿದೇಶ ಪ್ರಯಾಣ ಮಾಡೋರು ಅಂತ ಪರಿಗಣಿಸಿದ್ದಾರೆ. ಇದನ್ನೂ ಓದಿ: ರನ್ಯಾರಾವ್ 3 ದಿನ ಡಿಆರ್‌ಐ ಕಸ್ಟಡಿಗೆ – ಕೋರ್ಟ್‌ ಸೂಚನೆ ಏನು?

    ಆದನ್ನೇ ರನ್ಯಾ ಬಂಡವಾಳ ಕೂಡ ಮಾಡಿಕೊಂಡಿದ್ದಾಳೆ. ನಟಿಯೇ DRI ಮುಂದೆ ನೀಡಿರುವ ಹೇಳಿಕೆಯ ಪ್ರಕಾರ, ಯೂರೋಪ್, ಅಮೆರಿಕ, ದುಬೈ ಎಲ್ಲವನ್ನೂ ಸುತ್ತಾಟ ಮಾಡಿದ್ದಾಳೆ. ಇದನ್ನೂ ಓದಿ: ರನ್ಯಾ ಭೇಟಿಗೆ ಅವಕಾಶ ನೀಡ್ತಿರಲಿಲ್ಲ, ಅಂತರ ಬೆಳೆದಿತ್ತು – ಕೇಸ್‌ನಿಂದ ಕುಟುಂಬಕ್ಕೆ ಕಳಂಕ: ರಾಮಚಂದ್ರ ರಾವ್

    ಟ್ರಾವೆಲ್‌ ಹಿಸ್ಟರಿ ಹೀಗಿದೆ!
    * ಡಿಸೆಂಬರ್ 24 ರಲ್ಲಿ ದುಬೈ ಪ್ರಯಾಣ ಮಾಡಿ 27 ಕ್ಕೆ ವಾಪಸ್‌
    * ಜನವರಿ 18 ರಂದು ಅಮೆರಿಕಕ್ಕೆ ಪ್ರಯಾಣ, 7 ದಿನ ಅಮೆರಿಕದಲ್ಲಿ ತಂಗಿದ್ದ ರನ್ಯಾ
    * ಜನವರಿ 25 ರಂದು ಅಮೆರಿಕದಿಂದ ಬೆಂಗಳೂರಿಗೆ ವಾಪಸ್‌
    * ಫೆಬ್ರವರಿಯಲ್ಲಿ ನಿರಂತರವಾಗಿ ದುಬೈ ಪ್ರವಾಸ ಪ್ರಾರಂಭ ಮಾಡಿದ್ದ ರನ್ಯಾ
    * ಫೆಬ್ರವರಿ 2 ರಂದು ದುಬೈಗೆ ಪ್ರಯಾಣ ಮಾಡಿದ್ದ ನಟಿ
    * ಫೆಬ್ರವರಿ 2 ರಿಂದ ಮಾರ್ಚ್ 3 ವರೆಗೂ 5 ಬಾರಿ ಪ್ರಯಾಣ ಬೆಳೆಸಿದ್ದ ರನ್ಯಾ

  • ರನ್ಯಾರಾವ್ 3 ದಿನ ಡಿಆರ್‌ಐ ಕಸ್ಟಡಿಗೆ – ಕೋರ್ಟ್‌ ಸೂಚನೆ ಏನು?

    ರನ್ಯಾರಾವ್ 3 ದಿನ ಡಿಆರ್‌ಐ ಕಸ್ಟಡಿಗೆ – ಕೋರ್ಟ್‌ ಸೂಚನೆ ಏನು?

    ಬೆಂಗಳೂರು: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ʻಮಾಣಿಕ್ಯʼ ಸಿನಿಮಾ ನಟಿ ರನ್ಯಾ ರಾವ್‌ರನ್ನ (Ranya Rao) 3 ದಿನಗಳ ಕಾಲ ಡಿಆರ್‌ಐ (DRI) ಕಸ್ಟಡಿಗೆ ನೀಡಿ ಕೋರ್ಟ್‌ ಆದೇಶಿಸಿದೆ.

    ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ನಲ್ಲಿ (Gold Smuggling Case) ಮಹತ್ವದ ಸುಳಿವು ಸಿಕ್ಕಿದೆ, ಹಾಗಾಗಿ ಆರೋಪಿ ಸ್ಥಾನದಲ್ಲಿರುವ ನಟಿ ರನ್ಯಾ ರಾವ್‌ಗೆ ಹೆಚ್ಚಿನ ವಿಚಾರಣೆಯ ಅವಶ್ಯಕತೆಯಿದೆ. ಆದ್ದರಿಂದ ಮೂರು ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಡಿಆರ್‌ಐ ಅಧಿಕಾರಿಗಳು ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅಧಿಕಾರಿಗಳ ಮನವಿ ಪುಸ್ಕರಿಸಿದ ನ್ಯಾಯಮೂರ್ತಿ ವಿಶ್ವನಾಥ್ ಸಿ ಗೌಡರ್ ಅವರಿದ್ದ ಪೀಠ ಮೂರು ದಿನಗಳ ಕಸ್ಟಡಿಗೆ ನೀಡಿ ಆದೇಶಿಸಿತು.

    ಪರಪ್ಪನ ಅಗ್ರಹಾರ ಜೈಲಿನದಿಂದ ಆರೋಪಿಯನ್ನ ಕರೆದುತಂದು ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಮೂರು ದಿನಗಳ ಕಸ್ಟಡಿಗೆ ನೀಡಿದ ಕೋರ್ಟ್‌ ಒಂದಿಷ್ಟು ವಿಶೇಷ ಸೂಚನೆಗಳನ್ನೂ ನೀಡಿತು. ಇದನ್ನೂ ಓದಿ: Gold Smuggling Case| ರನ್ಯಾ ರಾವ್‌ ಮನೆಯಲ್ಲಿ ಸಿಕ್ಕಿದ್ದೇನು? – ಅತೀ ದೊಡ್ಡ ಕಾರ್ಯಾಚರಣೆ ಎಂದ DRI

    ಕೋರ್ಟ್‌ ಸೂಚನೆಗಳೇನು?
    ಡಿಆರ್‌ಐ ತನಿಖಾಧಿಕಾರಿ ನಾಗೇಶ್ವರ ರಾವ್ ನೇತೃತ್ವದಲ್ಲಿ ತನಿಖೆ ನಡೆಯಲಿದೆ. ಅಧಿಕಾರಿಗಳ ಸಮ್ಮುಖದಲ್ಲೇ 30 ನಿಮಿಷಗಳ ಕಾಲ ವಕೀಲರ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ. ಪ್ರತಿದಿನ ವೈದ್ಯಕೀಯ ತಪಾಸಣೆ ನಡೆಸಲು ಕೋರ್ಟ್‌ ಸೂಚಿಸಿದೆ. ಇದೇ ವೇಳೆ ತನಿಖೆಗೆ ಸಹಕರಿಸುವಂತೆ ಆರೋಪಿಗೂ ಕೋರ್ಟ್ ಸೂಚನೆ ನೀಡಿದೆ.

    ಕಸ್ಟಡಿ ವೇಳೆ ಹಿಲ್ ಟ್ರೀಟ್ಮೆಂಟ್ ಕೊಡದಂತೆ ಅಧಿಕಾರಿಗಳಿಗೆ ತಾಕೀತು ಮಾಡಿದೆ. ಊಟ, ಹಾಸಿಗೆಯಂತಹ ಮೂಲ ಸೌಲಭ್ಯಗಳನ್ನು ನೀಡಬೇಕೆಂದಿರುವುದಲ್ಲದೇ ಸುಪ್ರೀಂ ಕೋರ್ಟ್ ನಿಯಮಗಳನ್ನ ಪಾಲಿಸುವಂತೆ, ಆರೋಪಿ ಮೇಲೆ ಒತ್ತಡ ಹೇರದಂತೆ ಡಿಆರ್‌ಐ ಅಧಿಕಾರಿಗಳಿಗೆ ಎಚ್ಚರಿಸಿದೆ. ಇದನ್ನೂ ಓದಿ: 40 ಬಾರಿ ದುಬೈಗೆ ಹೋಗಿದ್ದ ರನ್ಯಾ ಅಧಿಕಾರಿಗಳ ಬಲೆಗೆ ಬಿದ್ದಿದ್ದೆ ರೋಚಕ

  • ರನ್ಯಾ ಭೇಟಿಗೆ ಅವಕಾಶ ನೀಡ್ತಿರಲಿಲ್ಲ, ಅಂತರ ಬೆಳೆದಿತ್ತು – ಕೇಸ್‌ನಿಂದ ಕುಟುಂಬಕ್ಕೆ ಕಳಂಕ: ರಾಮಚಂದ್ರ ರಾವ್

    ರನ್ಯಾ ಭೇಟಿಗೆ ಅವಕಾಶ ನೀಡ್ತಿರಲಿಲ್ಲ, ಅಂತರ ಬೆಳೆದಿತ್ತು – ಕೇಸ್‌ನಿಂದ ಕುಟುಂಬಕ್ಕೆ ಕಳಂಕ: ರಾಮಚಂದ್ರ ರಾವ್

    – ನನ್ನ ಜೀವನದಲ್ಲಿ ಊಹೆಗೂ ನಿಲುಕದ ಘಟನೆಯಾಗುತ್ತೆ ಅನ್ಕೊಂಡಿರಲಿಲ್ಲ

    ಬೆಂಗಳೂರು: ನನ್ನ ಜೀವನದಲ್ಲಿ ಊಹೆಗೂ ನಿಲುಕದ ಘಟನೆಯಾಗುತ್ತೆ ಅಂದುಕೊಂಡಿರಲಿಲ್ಲ. ದಯವಿಟ್ಟು ನನ್ನನ್ನು ದುಃಖಿತ ತಂದೆ ಎಂದು ಗುರುತಿಸಿ ಎಂದು ರನ್ಯಾ ಮಲತಂದೆ ಎಡಿಜಿಪಿ ಕೆ.ರಾಮಚಂದ್ರ ರಾವ್ (K Ramachandra Rao) ಪ್ರತಿಕ್ರಿಯೆ ನೀಡಿದ್ದಾರೆ.

    ರನ್ಯಾ ರಾವ್ ಚಿನ್ನದ ಕಳ್ಳಸಾಗಾಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮ ಪ್ರಕಟಣೆ ಮೂಲಕ ತಿಳಿಸಿರುವ ಅವರು, ಈ ವಿಷಯದಿಂದ ಪೋಷಕನಾಗಿ ನನ್ನ ಹೃದಯ ಒಡೆದು ಹೋಗಿದೆ, ನನಗೆ ಆಗಿರುವ ಆಘಾತದ ಕುರಿತು ಹೇಳಲು ಪದಗಳೇ ಸಿಗುತ್ತಿಲ್ಲ. ಇತ್ತೀಚಿನ ಬೆಳವಣಿಗೆಯಿಂದ ನನ್ನ ಮನಸಿಗೆ ತುಂಬಾ ನೋವಾಗಿದೆ. ಈ ಪ್ರಕರಣದಿಂದಾಗಿ ನನಗೆ ಹಾಗೂ ನನ್ನ ಕುಟುಂಬಕ್ಕೆ ತುಂಬಾ ಕಷ್ಟದ ಸಮಯ. ಈ ಸಂದರ್ಭವನ್ನು ಎದುರಿಸಲು ನಾವು ಕಷ್ಟಪಡುತ್ತಿದ್ದೇವೆ ಎಂದು ಅಸಮಾಧಾನ ಹೊರಹಾಕಿದರು.ಇದನ್ನೂ ಓದಿ: ನನ್ನನ್ನು ಎಲ್ಲರೂ ಸೇರಿ ಟ್ರ್ಯಾಪ್‌ ಮಾಡಿದ್ರು.. ಅದ್ಕೆ ಈ ರೀತಿ ಕೆಲಸ ಮಾಡಿದ್ದೇನೆ: ನಟಿ ರನ್ಯಾ ಅಳಲು

    ರನ್ಯಾ ಹಾಗೂ ಜತಿನ್ ಹುಕ್ಕೇರಿ 2024ರಲ್ಲಿ ಮದುವೆಯಾದರು. ನಂತರ ತಮ್ಮ ಖಾಸಗಿತನ ಹಾಗೂ ಸ್ವಾತಂತ್ರ‍್ಯವನ್ನು ಕಾಪಾಡಿಕೊಂಡಿದ್ದಾರೆ. ಮದುವೆಯಾದ ಬಳಿಕ ಅವಳು ನಮ್ಮ ಮನೆಗೆ ಬರುವುದನ್ನು ನಿಲ್ಲಿಸಿದ್ದಳು. ಜೊತೆಗೆ ಭೇಟಿಯಾಗಲು ಅವಕಾಶವೂ ನೀಡುತ್ತಿರಲಿಲ್ಲ. ಇದರಿಂದ ನಮ್ಮ ಹಾಗೂ ಅವರ ನಡುವೆ ಅಂತರ ಬೆಳೆದಿತ್ತು ಎಂದರು.

    ನಾನು ಕೆಲಸದಲ್ಲಿ ಪ್ರಾಮಾಣಿಕನಾಗಿದ್ದೇನೆ, ನನ್ನದೇ ಆದ ಶಿಸ್ತಿನ ಜೀವನ ನಡೆಸಿದ್ದೇನೆ. ಈ ಕೇಸ್‌ನಿಂದಾಗಿ ನಮ್ಮ ಕುಟುಂಬಕ್ಕೆ ಕಳಂಕ ಬಂದಿದೆ. ನನ್ನನ್ನು ಒಬ್ಬ ದುಃಖಿತ ತಂದೆ ಎಂದು ಗುರುತಿಸಿ ಎಂದು ಕೇಳಿಕೊಳ್ಳುತ್ತೇನೆ. ನನ್ನ ಜೀವನದಲ್ಲಿ ಊಹೆಗೂ ನಿಲುಕದ ಘಟನೆ ನಡೆಯುತ್ತದೆ ಎಂದು ಅಂದುಕೊಂಡಿರಲಿಲ್ಲ. ರನ್ಯಾ ವಿಚಾರದಲ್ಲಿ ನಾನು ಕಾನೂನು ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಿ ಎಂದು ಉಲ್ಲೇಖಿಸಿದ್ದಾರೆ.

    ಪ್ರಕರಣ ಏನು?
    ಮೂಲತಃ ಚಿಕ್ಕಮಗಳೂರಿನವರಾದ ಎಡಿಜಿಪಿ ರಾಮ್‌ಚಂದ್ರರಾವ್ ಅವರ 2ನೇ ಪತ್ನಿಯ ಮೊದಲ ಗಂಡನ ಮಗಳು ರನ್ಯಾ ರಾವ್. ಮಾ 04 ರಂದು ನಟಿ ರನ್ಯಾ ರಾವ್ ಬಳಿ 12 ಕೋಟಿ ಮೌಲ್ಯದ 14.8 ಕೆಜಿ ಚಿನ್ನ ಪತ್ತೆಯಾಗಿತ್ತು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ವಿಶೇಷ ಆರ್ಥಿಕ ಅಪರಾಧಗಳ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.ಇದನ್ನೂ ಓದಿ: 1 ಕೆಜಿ ಚಿನ್ನ ಸಾಗಾಟಕ್ಕೆ ರನ್ಯಾಗೆ 4ರಿಂದ 5 ಲಕ್ಷ ಕಮಿಷನ್ – ನಟಿ ಕೇವಲ ಪಾತ್ರಧಾರಿ, ಅಸಲಿ ಕಿಂಗ್‌ಪಿನ್ ಬೇರೆ!