Tag: Ranya Rao

  • ನನ್ನಿಂದ ನೀವೆಲ್ಲ ಸಿಕ್ಕಿಬಿದ್ರಿ.. ತಪ್ಪಾಯ್ತು: ಅರೆಸ್ಟ್ ಆದಾಗ ಪ್ರೋಟೊಕಾಲ್ ಸಿಬ್ಬಂದಿ ಮುಂದೆ ಕಣ್ಣೀರಿಟ್ಟಿದ್ದ ನಟಿ

    ನನ್ನಿಂದ ನೀವೆಲ್ಲ ಸಿಕ್ಕಿಬಿದ್ರಿ.. ತಪ್ಪಾಯ್ತು: ಅರೆಸ್ಟ್ ಆದಾಗ ಪ್ರೋಟೊಕಾಲ್ ಸಿಬ್ಬಂದಿ ಮುಂದೆ ಕಣ್ಣೀರಿಟ್ಟಿದ್ದ ನಟಿ

    – ಡ್ಯಾಡಿ, ಅಂಕಲ್‌ಗೆ ವಿಷಯ ತಿಳಿಸಿ: ಸಿಬ್ಬಂದಿ ಬಸವರಾಜ್‌ಗೆ ಹೇಳಿದ್ದ ರನ್ಯಾ

    ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ (Ranya Rao) ಕೇಸ್‌ನಲ್ಲಿ ಮತ್ತಷ್ಟು ವಿಚಾರಗಳು ಬಯಲಾಗಿವೆ. ಚಿನ್ನ ಕಳ್ಳಸಾಗಾಟದಲ್ಲಿ ಏರ್‌ಪೋರ್ಟ್‌ನಲ್ಲಿ ಅರೆಸ್ಟ್ ಆಗುತ್ತಿದ್ದಂತೆ ನಟಿ ಕಣ್ಣೀರಿಟ್ಟಿದ್ದರು.

    ಏರ್‌ಪೋರ್ಟ್‌ನಲ್ಲಿ ಡಿಆರ್‌ಐಗೆ ಲಾಕ್ ಆಗುತ್ತಿದ್ದಂತೆ ನಟಿ ಕಣ್ಣೀರಿಟ್ಟಿದ್ದರು. ‘ನನ್ನಿಂದ ನೀವೆಲ್ಲ ಸಿಕ್ಕಿಬಿದ್ರಿ.. ನನ್ನಿಂದ ತಪ್ಪಾಯ್ತು. ಡ್ಯಾಡಿ, ಅಂಕಲ್‌ಗೆ ಕಾಲ್ ಮಾಡಿ ತಿಳಿಸು’ ಎಂದು ಕಣ್ಣೀರಿಡುತ್ತ ಪ್ರೋಟೊಕಾಲ್ ಸಿಬ್ಬಂದಿ ಬಸವರಾಜ್‌ಗೆ ನಟಿ ರನ್ಯಾ ಹೇಳಿದ್ದರಂತೆ.

    ಅರೆಸ್ಟ್ ಆಗುತ್ತಿದ್ದಂತೆ ಸಿಬ್ಬಂದಿ ಬಸವರಾಜ್ ಮುಂದೆ ನಟಿ ರನ್ಯಾ ಗಳಗಳನೆ ಅತ್ತಿದ್ದರು ಎಂಬ ಮಾಹಿತಿ ಬೆಳಕಿಗೆ ಬಂದಿದೆ.

  • ರನ್ಯಾಗೇ ಜೈಲೇ ಗತಿ  -ಜಾಮೀನು ಅರ್ಜಿ ವಜಾ

    ರನ್ಯಾಗೇ ಜೈಲೇ ಗತಿ -ಜಾಮೀನು ಅರ್ಜಿ ವಜಾ

    ಬೆಂಗಳೂರು: ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದಿಂದ (DRI)  ಬಂಧನಕ್ಕೆ ಒಳಗಾದ ನಟಿ ರನ್ಯಾ ರಾವ್‌ (Ranya Rao)  ಜಾಮೀನು (Bail) ಅರ್ಜಿಯನ್ನು ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ.

    ಸದ್ಯ ಪರಪ್ಪನ ಅಗ್ರಹಾರದಲ್ಲಿರುವ ರನ್ಯಾ ರಾವ್‌ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಳು. ನ್ಯಾ. ವಿಶ್ವನಾಥ್ ಸಿ. ಗೌಡರ್ ಅವರು ಅರ್ಜಿಯನ್ನು ವಿಚಾರಣೆ ನಡೆಸಿ ವಜಾಗೊಳಿಸಿದ್ದಾರೆ.

    ಡಿಆರ್‌ಐ ಪರ ವಕೀಲರು ರನ್ಯಾಗೆ ಜಾಮೀನು ನೀಡಬಾರದು ಎಂದು ಪ್ರಬಲವಾಗಿ ವಾದ ಮಂಡಿಸಿದ್ದರು. ಈ ವಾದವನ್ನು ಕೋರ್ಟ್‌ ಪುರಸ್ಕರಿಸಿದೆ. ಇದನ್ನೂ ಓದಿ: ನಾನು ವಿಮಾನದಲ್ಲಿ ಚಿನ್ನ ತಂದೇ ಇಲ್ಲ, ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲಾಗಿದೆ: ರನ್ಯಾ ರಾವ್‌

    ನಟಿ ರನ್ಯಾ ಪರ ಹಿರಿಯ ವಕೀಲ ಕಿರಣ್ ಜವಳಿ ವಾದ ಮಾಡಿದ್ದರು.  ಡಿಆರ್‌ಐ‌ ಅಧಿಕಾರಿಗಳು ಸುಪ್ರೀಂ ಕೋರ್ಟ್ ಮಾರ್ಗಸೂಚಿ ಪಾಲನೆ ಮಾಡಿಲ್ಲ. ಹೆಣ್ಣು ಎಂದೂ ನೋಡದೇ ರಾತ್ರಿಯಿಡೀ ತನಿಖೆ ಮಾಡಿ ಮಾನಸಿವಾಗಿ ಹಿಂಸೆ ನೀಡುವ ಕೆಲಸವಾಗಿದೆ. ಅರೆಸ್ಟ್ ಮೇಮೊ ಕೂಡ ಕೊಟ್ಟಿಲ್ಲ. ಈ ಪ್ರಕರಣದಲ್ಲಿ ರನ್ಯಾ ಪಾತ್ರ ಇಲ್ಲ‌. ತನಿಖೆಗೆ ಸಹಕಾರ‌ ನೀಡುತ್ತಿದ್ದು, ಜಾಮೀನು ನೀಡುವಂತೆ ಮನವಿ ಮಾಡಿಕೊಂಡಿದ್ದರು.

    ಡಿಆರ್‌ಐ ಪರ ವಕೀಲ ಮಧುರಾವ್,  ಪ್ರಾಥಮಿಕ ತನಿಖೆಯ ವೇಳೆ ಆರೋಪಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಮಾಡಿರುವುದು ಕಂಡುಬಂದಿದೆ. ಚಿನ್ನವನ್ನ ಕೂಡ ವಶಕ್ಕೆ ಪಡೆದುಕೊಂಡು ತನಿಖೆ ಮಾಡಲಾಗುತ್ತಿದೆ. ಮನೆ ಶೋಧ ಕಾರ್ಯದ ವೇಳೆ ಕೋಟಿ ಕೋಟಿ ಹಣ ಹಾಗೂ ಚಿನ್ನಭರಣಗಳು ಪತ್ತೆ ಆಗಿವೆ. ಒಂದು ದೊಡ್ಡ ಸಿಂಡಿಕೇಟ್ ಕೆಲಸ ಮಾಡುತ್ತಿರುವ ಬಗ್ಗೆ ತನಿಖೆಯ ವೇಳೆ ಮಾಹಿತಿ ಲಭ್ಯವಾಗಿದೆ. ಹವಾಲ ಹಣದಲ್ಲಿ ವ್ಯವಹಾರ ಆಗಿರುವ ಬಗ್ಗೆ ಅನುಮಾನಗಳು ಕೂಡ ಇವೆ. ಪೊಲೀಸ್ ಪ್ರೋಟೊಕಾಲ್ ದುರುಪಯೋಗ ಆಗಿದ್ದು, ಆ ಬಗ್ಗೆಯೂ ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ಆರೋಪಿ ನಟಿ ರನ್ಯಾ ರಾವ್‌ಗೆ ಜಾಮೀನು ನೀಡಿದರೆ, ತನಿಖೆಗೆ ಹಿನ್ನಡೆ ಆಗುತ್ತದೆ ಎಂದು ವಾದಿಸಿದ್ದರು.  ವಾದ-ಪ್ರತಿವಾದ ಅಲಿಸಿದ್ದ ನ್ಯಾಯಾದೀಶರು ಇಂದಿಗೆ ಆದೇಶ ಕಾಯ್ದಿರಿಸಿದ್ದರು.

    ಮಾ.10 ರಂದು ಕೋರ್ಟ್‌ ರನ್ಯಾ ರಾವ್‌ಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಪ್ರಕಟಿಸಿತ್ತು. ಹೀಗಾಗಿ ಮಾ.24 ರವರೆಗೆ ರನ್ಯಾ ರಾವ್‌ ಪರಪ್ಪನ ಅಗ್ರಹಾರದಲ್ಲೇ ಇರಲಿದ್ದಾಳೆ. ಮಾರ್ಚ್‌ 3 ರಂದು ರನ್ಯಾಳನ್ನು ವಶಕ್ಕೆ ಪಡೆದಿದ್ದ  ಡಿಆರ್‌ಐ ಮಾರ್ಚ್‌ 4 ರಂದು ಬಂಧಿಸಿತ್ತು.  ಇದನ್ನೂ ಓದಿ: ದುಬೈ ಟು ಬೆಂಗಳೂರು – ಆ 9 ಗಂಟೆಯಿಂದ ರನ್ಯಾ ರಾವ್‌ ಅರೆಸ್ಟ್‌!

    ವಜಾಗೊಂಡಿದ್ದು ಯಾಕೆ?
    ಈ ಪ್ರಕರಣದಲ್ಲಿ ಅಂತರರಾಷ್ಟ್ರೀಯ ಲಿಂಕ್‌ಗಳಿವೆ. ಒಂದು ವರ್ಷದ ಅವಧಿಯಲ್ಲಿ 27 ಬಾರಿ ವಿದೇಶಿ ಪ್ರಯಾಣ ಮಾಡಿದ್ದಾಳೆ. ಇದರಿಂದ ಅಂದಾಜು 38% ಕಸ್ಟಮ್ಸ್ ಸುಂಕ ವಂಚನೆ ಆಗಿರಬಹುದು. ಜೈಲಿನಿಂದ ಹೊರಬಂದಲ್ಲಿ ಸಾಕ್ಷಿ ನಾಶವಾಗುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟ ಕೋರ್ಟ್‌ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.

  • ನಾನು ವಿಮಾನದಲ್ಲಿ ಚಿನ್ನ ತಂದೇ ಇಲ್ಲ, ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲಾಗಿದೆ: ರನ್ಯಾ ರಾವ್‌

    ನಾನು ವಿಮಾನದಲ್ಲಿ ಚಿನ್ನ ತಂದೇ ಇಲ್ಲ, ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲಾಗಿದೆ: ರನ್ಯಾ ರಾವ್‌

    ಬೆಂಗಳೂರು: ನಾನು ವಿಮಾನದಲ್ಲಿ ಚಿನ್ನವನ್ನು (Gold) ತಂದೇ ಇಲ್ಲ ಎಂದು ನಟಿ ರನ್ಯಾ ರಾವ್‌ (Ranya Rao) ದೂರು ನೀಡಿದ್ದಾಳೆ.

    ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ (Judicial Custody) ರನ್ಯಾ ರಾವ್‌ ಈಗ ದೂರು ನೀಡುವ ಮೂಲಕ ಪ್ರಕರಣಕ್ಕೆ ಟ್ವಿಸ್ಟ್‌ ನೀಡಿದ್ದಾಳೆ.

    ಪರಪ್ಪನ ಅಗ್ರಹಾರ (Parappana Agrahara) ಜೈಲರ್‌ಗೆ ದೂರು ನೀಡಿರುವ ರನ್ಯಾ ನನ್ನ ಮೇಲೆ ಸುಳ್ಳು ಆರೋಪ ಮಾಡಲಾಗಿದೆ. ಯಾರನ್ನೋ ಬಚಾವ್ ಮಾಡಲು ನನ್ನನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಆರೋಪಿಸಿದ್ದಾಳೆ. ಇದನ್ನೂ ಓದಿ: ದುಬೈ ಟು ಬೆಂಗಳೂರು – ಆ 9 ಗಂಟೆಯಿಂದ ರನ್ಯಾ ರಾವ್‌ ಅರೆಸ್ಟ್‌!

    ನಾನು ವಿಮಾನದಲ್ಲಿ ಚಿನ್ನವನ್ನು ತಂದೇ ಇಲ್ಲ. ಈ ಪ್ರಕರಣದಲ್ಲಿ ನಾನು ನಿರಪರಾಧಿಯಾಗಿದ್ದೇನೆ. ದುಬೈನಲ್ಲಿ ನನಗೆ ರಿಯಲ್‌ ಎಸ್ಟೇಟ್‌ ಬಿಸಿನೆಸ್‌ ಮಾಡುತ್ತಿದ್ದೆ. ಈ ಕಾರಣಕ್ಕೆ ನಾನು ದುಬೈಗೆ ತೆರಳಿದ್ದೆ. ಮಾರ್ಚ್ 3 ರಂದು ಬೆಳಗ್ಗೆ ಹೋಗಿ ಕೆಲಸ ಮುಗಿಸಿದ ಬಳಿಕ ತಕ್ಷಣ ಮರಳಿದ್ದೇನೆ ಎಂದು ಹೇಳಿದ್ದಾಳೆ.

     

    ಜೈಲರ್‌ಗೆ ಸಲ್ಲಿಸಿದ ದೂರನ್ನು ಪೊಲೀಸ್‌ ಅಧಿಕಾರಿಗಳು ಡಿಆರ್‌ಐಗೆ ವರ್ಗಾವಣೆ ಮಾಡಿದ್ದಾರೆ. ಈಗ ಡಿಆರ್‌ಐ ಅಧಿಕಾರಿಗಳು ದೂರನ್ನು ಪರಿಶೀಲನೆ ಮಾಡುತ್ತಿದ್ದಾರೆ.

    ರನ್ಯಾ ಬಂಧನವಾಗುವ 2 ವಾರಗಳ ಹಿಂದೆ ರನ್ಯಾ ದುಬೈಗೆ ಹೋಗಿ ಬಂದಿದ್ದಳು. ಆಗ ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಕಸ್ಟಮ್ ಅಧಿಕಾರಿಗಳೊಂದಿಗೆ ಕಿರಿಕ್ ಮಾಡಿಕೊಂಡು, ನಾನು ಡಿಜಿಪಿ ಮಗಳು ಎಂದು ತಪಾಸಣೆಗೆ ಒಳಗಾಗದೇ ಹೊರಗೆ ಬರುತ್ತಿದ್ದದ್ದಳು. ಪ್ರತಿ ಬಾರಿ ಆಕೆಯನ್ನು ಕರೆದೊಯ್ಯಲು ವಿಮಾನ ನಿಲ್ದಾಣ ಪೊಲೀಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್ ಬಸವರಾಜು ಹೋಗುತ್ತಿದ್ದರು. ಈ ಜಗಳದ ಬಳಿಕ ರನ್ಯಾಳ ಮೇಲೆ ಕಣ್ಣಿಟ್ಟಿದ್ದ ಡಿಆರ್‌ಐ ಅಧಿಕಾರಿಗಳು ಆಕೆಯ ವಿದೇಶ ಪ್ರಯಾಣದ ಮೇಲೆ ಕಣ್ಣಿಟ್ಟಿದ್ದರು.

     

    ರನ್ಯಾ ಮತ್ತೆ ದುಬೈಗೆ ಪ್ರಯಾಣ ಬೆಳೆಸಿದ ಬೆನ್ನಲ್ಲೇ ಜಾಗೃತರಾದ ಅಧಿಕಾರಿಗಳು ರನ್ಯಾ ಬರುವಿಕೆಗಾಗಿಯೇ ಕಾಯುತ್ತಿದ್ದರು. ಮಾ. 3 ರಂದು ರನ್ಯಾ ಪತಿ ಜೊತೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಣಕ್ಕೆ ಬಂದಿಳಿಯುತ್ತಿದ್ದಂತೆ ಡಿಆರ್‌ಐ ಅಧಿಕಾರಿಗಳು ಆಕೆಯನ್ನು ವಶಕ್ಕೆ ಪಡೆದಿದ್ದಾರೆ. ಆಗಲೂ ಸಹ ರನ್ಯಾಳನ್ನು ತಪಾಸಣೆ ಇಲ್ಲದೇ ಹೊರಗೆ ಕರೆತರಲು ವಿಮಾನ ನಿಲ್ದಾಣ ಠಾಣೆ ಹೆಡ್ ಕಾನ್‌ಸ್ಟೇಬಲ್ ಬಸವರಾಜ್ ತೆರಳಿದ್ದರು. ರನ್ಯಾಳನ್ನ ಅಧಿಕಾರಿಗಳು ವಶಕ್ಕೆ ಪಡೆದಾಗ ಅವರು ಡಿಜಿಪಿ ರಾಮಚಂದ್ರರಾವ್ ಅವರ ಮಗಳು ಎಂದಿದ್ದಾರೆ. ಇದನ್ನೂ ಓದಿ: 6 ಅಡಿ ಎತ್ತರದ ವ್ಯಕ್ತಿಯೊಬ್ಬ ಚಿನ್ನವಿದ್ದ ಎರಡು ಬಾಕ್ಸ್ ನೀಡಿದ್ದ: ರನ್ಯಾ ತಪ್ಪೊಪ್ಪಿಗೆ

    ಕೂಡಲೇ ರನ್ಯಾಳನ್ನು ಲೋಹ ಪರಿಶೋಧಕ ಕಚೇರಿಯಲ್ಲಿ ಪರೀಕ್ಷೆಗೆ ಒಳಪಡಿಸಿದಾಗ 1 ಕೆಜಿ ತೂಕದ 14 ಗೋಲ್ಡ್ ಬಿಸ್ಕೆಟ್ ತಂದಿರುವುದು ತಿಳಿದಿದೆ. ತೊಡೆಯ ಭಾಗಕ್ಕೆ 14 ಬಿಸ್ಕೆಟ್‌ಗಳನ್ನು ಗಮ್ ಹಾಕಿ ಅಂಟಿಸಿಕೊಂಡು ಬಳಿಕ ಟೇಪ್‌ನಿಂದ ಸುತ್ತಿಕೊಂಡಿದ್ದಳು. ಯಾವುದೇ ಸ್ಕ್ಯಾನರ್‌ನಲ್ಲಿ ಅನುಮಾನ ಬಾರದಂತೆ ಕ್ರ್ಯಾಂಪ್‌ ಬ್ಯಾಂಡೇಜ್ ಹಾಕಿಕೊಂಡು ಬಂದಿದ್ದಳು. ಕೂಡಲೇ ಡಿಆರ್‌ಐ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಿಸಿದಾಗದೇ ಆಕೆ ಪೊಲೀಸ್ ಅಧಿಕಾರಿಯ ಮಗಳು ಎನ್ನುವುದು ಬಯಲಾಗಿದೆ.

  • ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್; ನಟಿ ರನ್ಯಾ ಜಾಮೀನು ಭವಿಷ್ಯ ಇಂದು ನಿರ್ಧಾರ

    ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್; ನಟಿ ರನ್ಯಾ ಜಾಮೀನು ಭವಿಷ್ಯ ಇಂದು ನಿರ್ಧಾರ

    ಬೆಂಗಳೂರು:‌ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಬಂಧನವಾಗಿರುವ ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ (Ranya Rao) ಜಾಮೀನು ಭವಿಷ್ಯ ಇಂದು ನಿರ್ಧಾರವಾಗಲಿದೆ.

    ದುಬೈನಿಂದ ಕೋಟಿ ಕೋಟಿ ಬೆಲೆಬಾಳುವ ಚಿನ್ನ ತಂದು ಡಿಆರ್‌ಐ ಅಧಿಕಾರಿಗಳಿಗೆ ಲಾಕ್ ಆಗಿರುವ ನಟಿ ರನ್ಯಾ ರಾವ್ ಜಾಮೀನು ಅರ್ಜಿ, ಆರ್ಥಿಕ ಅಪರಾಧದ ವಿಶೇಷ ನ್ಯಾಯಾಲದಲ್ಲಿ ವಾದ-ಪ್ರತಿವಾದ ನಡೆಸಲಾಗಿದ್ದು, ಜಾಮೀನು ಆದೇಶ ಇಂದಿಗೆ ಕಾಯ್ದಿರಿಸಲಾಗಿದೆ. ಇದನ್ನೂ ಓದಿ: 6 ಅಡಿ ಎತ್ತರದ ವ್ಯಕ್ತಿಯೊಬ್ಬ ಚಿನ್ನವಿದ್ದ ಎರಡು ಬಾಕ್ಸ್ ನೀಡಿದ್ದ: ರನ್ಯಾ ತಪ್ಪೊಪ್ಪಿಗೆ

    ಇಂದು ಮಧ್ಯಾಹ್ನದ ನಂತರ ನಟಿಯ ಜಾಮೀನು ಭವಿಷ್ಯ ನಿರ್ಧಾರವಾಗಲಿದೆ. ಆರೋಪಿ ನಟಿ ರನ್ಯಾ ಪರ ಹಿರಿಯ ವಕೀಲ ಕಿರಣ್ ಜವಳಿ ವಾದ ಮಾಡಿದ್ದು, ಡಿಆರ್‌ಐ‌ ಅಧಿಕಾರಿಗಳು ಸುಪ್ರೀಂ ಕೋರ್ಟ್ ಮಾರ್ಗಸೂಚಿ ಪಾಲನೆ ಮಾಡಿಲ್ಲ. ಹೆಣ್ಣು ಎಂದೂ ನೋಡದೆ ರಾತ್ರಿಯಿಡೀ ತನಿಖೆ ಮಾಡಿ ಮಾನಸಿವಾಗಿ ಹಿಂಸೆ ನೀಡುವ ಕೆಲಸವಾಗಿದೆ. ಅರೆಸ್ಟ್ ಮೇಮೊ ಕೂಡ ಕೊಟ್ಟಿಲ್ಲ. ಈ ಪ್ರಕರಣದಲ್ಲಿ ನನ್ನ ಕಕ್ಷಿದಾರೆಯ ಪಾತ್ರ ಇಲ್ಲ‌. ತನಿಖೆಗೆ ಸಹಕಾರ‌ ನೀಡುತ್ತಿದ್ದು, ಜಾಮೀನು ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

    ಆದರೆ, ಡಿಆರ್‌ಐ ಪರ ವಕೀಲ ಮಧುರಾವ್ ಪ್ರಾಥಮಿಕ ತನಿಖೆಯ ವೇಳೆ ಆರೋಪಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಮಾಡಿರುವುದು ಕಂಡುಬಂದಿದೆ. ಚಿನ್ನವನ್ನ ಕೂಡ ವಶಕ್ಕೆ ಪಡೆದುಕೊಂಡು ತನಿಖೆ ಮಾಡಲಾಗುತ್ತಿದೆ. ಮನೆ ಶೋಧ ಕಾರ್ಯದ ವೇಳೆ ಕೋಟಿ ಕೋಟಿ ಹಣ ಹಾಗೂ ಚಿನ್ನಭರಣಗಳು ಪತ್ತೆ ಆಗಿವೆ. ಒಂದು ದೊಡ್ಡ ಸಿಂಡಿಕೇಟ್ ಕೆಲಸ ಮಾಡುತ್ತಿರುವ ಬಗ್ಗೆ ತನಿಖೆಯ ವೇಳೆ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ರನ್ಯಾಗೆ ಮಾತ್ರ ಸಿನಿಮಾ ನಂಟಿಲ್ಲ – ಆರೋಪಿ ತರುಣ್‌ಗೆ ಇದೆ ಟಾಲಿವುಡ್ ನಂಟು!

    ಹವಾಲ ಹಣದಲ್ಲಿ ವ್ಯವಹಾರ ಆಗಿರುವ ಬಗ್ಗೆ ಅನುಮಾನಗಳು ಕೂಡ ಇವೆ. ಪೊಲೀಸ್ ಪ್ರೋಟೊಕಾಲ್ ದುರುಪಯೋಗ ಆಗಿದ್ದು, ಆ ಬಗ್ಗೆಯೂ ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ಆರೋಪಿ ನಟಿ ರನ್ಯಾ ರಾವ್‌ಗೆ ಜಾಮೀನು ನೀಡಿದರೆ, ತನಿಖೆಗೆ ಹಿನ್ನಡೆ ಆಗುತ್ತದೆ ಎಂದು ಡಿಆರ್‌ಐ ಪರ ವಕೀಲ ಪ್ರತಿವಾದ ಮಾಡಿದ್ದಾರೆ. ವಾದ-ಪ್ರತಿವಾದ ಅಲಿಸಿರುವ ನ್ಯಾಯಾದೀಶರು ಇಂದಿಗೆ ಆದೇಶ ಕಾಯ್ದಿರಿಸಿದ್ದರು.

  • ರನ್ಯಾ ರಾವ್ ಕೇಸ್‌ನಲ್ಲಿ ಸರ್ಕಾರ ಯಾರನ್ನೋ ರಕ್ಷಣೆ ಮಾಡಲು ಪ್ರಯತ್ನ: ಪ್ರಹ್ಲಾದ್ ಜೋಶಿ

    ರನ್ಯಾ ರಾವ್ ಕೇಸ್‌ನಲ್ಲಿ ಸರ್ಕಾರ ಯಾರನ್ನೋ ರಕ್ಷಣೆ ಮಾಡಲು ಪ್ರಯತ್ನ: ಪ್ರಹ್ಲಾದ್ ಜೋಶಿ

    ಹುಬ್ಬಳ್ಳಿ: ರನ್ಯಾ ರಾವ್ ಪ್ರಕರಣದಲ್ಲಿ ರಾಜ್ಯ ಸರ್ಕಾರದ ನಿರ್ವಹಣೆ ನೋಡಿದರೆ ಯಾರನ್ನೋ ರಕ್ಷಣೆ ಮಾಡಲು ಪ್ರಯತ್ನ ಮಾಡುತ್ತಿದ್ದಂತೆ ಕಾಣುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಆರೋಪಿಸಿದ್ದಾರೆ.

    ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾಲು ಸಾಲಾಗಿ ಇಷ್ಟು ಆರೋಪಗಳು ಬರುತ್ತಿರುವುದು ನೋಡಿದರೆ ಇದರಲ್ಲಿ ರಾಜಕಾರಣಿಗಳು ಇರುವುದು ಸ್ಪಷ್ಟವಾಗುತ್ತಿದೆ. ಯಾರೋ ಮಂತ್ರಿಯನ್ನು ರಕ್ಷಣೆ ಮಾಡುವ ಕಾರ್ಯ ನಡೆದಿದೆ. ಇದು ದೇಶದ್ರೋಹದ ಕೆಲಸವಾಗಿದೆ. ಅಕ್ರಮವಾಗಿ ತಂದ ಬಂಗಾರ ಎಲ್ಲಿಗೆ ಹೋಗುತ್ತಿತ್ತು. ದೇಶದ್ರೋಹಿಗಳಿಗಾ, ನಕ್ಸಲ್‌ಗಳಿಗಾ, ಎಲ್ಲಿಗೆ ಹೋಗುತ್ತಿತ್ತು? ಇದರಲ್ಲಿ ಸರ್ಕಾರ ಯಾರನ್ನು ರಕ್ಷಣೆ ಮಾಡಲು ಹೊರಟಿದೆ. ಇದರಲ್ಲಿ ರಾಜ್ಯ ಸರ್ಕಾರದ ಪಾತ್ರ ಇದೆ ಎಂಬ ಅನುಮಾನವಿದೆ. ಡಿಐಜಿ ಮಗಳು ಇದ್ದಾರೆ ಎನ್ನುವ ಆರೋಪಯಿದೆ ಎಂದು ದೂರಿದ್ದಾರೆ. ಇದನ್ನೂ ಓದಿ: ಗುಜರಾತ್‌ ವಿರುದ್ಧ ಮುಂಬೈಗೆ 47 ರನ್‌ಗಳ ಭರ್ಜರಿ ಜಯ – ಶನಿವಾರ ಡೆಲ್ಲಿ ವಿರುದ್ಧ ಫೈನಲ್‌

    ಸಿಐಡಿಗೆ ತನಿಖೆಗೆ ಯಾಕೆ ನೀಡಿದರು. ಒಬ್ಬ ಡಿಐಜಿಯನ್ನು ಒಬ್ಬ ಸಿಐಡಿ ಎಸ್ಪಿ ತನಿಖೆ ಮಾಡಲು ಆಗುತ್ತಾ? ಗೃಹ ಸಚಿವ ಪರಮೇಶ್ವರ ಅವರೇ ಯಾರದ್ದೋ ಒತ್ತಡದಿಂದ ಹೇಳಿಕೆ ನೀಡಬೇಡಿ ಎಂದಿದ್ದಾರೆ. ಇನ್ನೂ ಧರ್ಮಾಧಾರಿತ ಮೀಸಲಾತಿ ಒಪ್ಪಲು ಸಾಧ್ಯವಿಲ್ಲ. ಈ ಬಗ್ಗೆ ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿದೆ. ನಾವು ಈ ಬಗ್ಗೆ ಕಾನೂನು ಹೋರಾಟ ಮಾಡುತ್ತೇವೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಮರಾಠಿಯಲ್ಲಿ ಮಾತನಾಡುವಂತೆ ಪಿಡಿಓಗೆ ಧಮ್ಕಿ – ಆರೋಪಿ ಹಿಂಡಲಗಾ ಜೈಲಿಗೆ

    ಯಾವ ಜಮೀರ್ ಅಹ್ಮದ್ ಹೇಳಿದ್ರೂ ಆಗಲ್ಲ. ಈ ಹಿಂದೆ ಜಮೀರ್ ನೀಡಿದ್ದ ಒಂದು ಹೇಳಿಕೆ ಏನಾಗಿದೆ ಗೊತ್ತು ಎಷ್ಟು ಆತ್ಮಹತ್ಯೆಗಳಾಗಿವೆ. 40 ಪರ್ಸೆಂಟ್ ಕಮಿಷನ್ ತನಿಖೆ ನ್ಯಾಯಯುತವಾಗಿ ಆಗಬೇಕು. ರಿಪೋರ್ಟ್ ಮಂಡಿಸಿ, ನೀವು ಯಾರಿಗೆ ನೋಟಿಸ್ ಕೊಟ್ಟಿದೀರಿ ನಮಗೆ ಗೊತ್ತಿರುವ ಹಾಗೆ ಯಾರಿಗೂ ನೋಟಿಸ್ ಕೊಟ್ಟಿಲ್ಲ. ಆರೋಪ ಬಂದವರಿಗೆ ನೋಟಿಸ್ ಕೊಟ್ಟಿಲ್ಲ. ಮೊದಲು ನೋಟಿಸ್ ಕೊಡಿ ನೋಟಿಸ್ ಬಂದ ಮೇಲೆ ನಾವು ಉತ್ತರ ಕೊಡುತ್ತೇವೆ. ಗೊಡ್ಡು ಬೆದರಿಕೆಗೆ ನಾವು ಹೆದರಲ್ಲ ಎಂದಿದ್ದಾರೆ. ಇದನ್ನೂ ಓದಿ: ಪ್ರತ್ಯೇಕ ಕರಾವಳಿಯ ಕೂಗು ಎಬ್ಬಿಸಿದ ಪೂಂಜಾ

  • 6 ಅಡಿ ಎತ್ತರದ ವ್ಯಕ್ತಿಯೊಬ್ಬ ಚಿನ್ನವಿದ್ದ ಎರಡು ಬಾಕ್ಸ್ ನೀಡಿದ್ದ: ರನ್ಯಾ ತಪ್ಪೊಪ್ಪಿಗೆ

    6 ಅಡಿ ಎತ್ತರದ ವ್ಯಕ್ತಿಯೊಬ್ಬ ಚಿನ್ನವಿದ್ದ ಎರಡು ಬಾಕ್ಸ್ ನೀಡಿದ್ದ: ರನ್ಯಾ ತಪ್ಪೊಪ್ಪಿಗೆ

    ಬೆಂಗಳೂರು: ರನ್ಯಾ ರಾವ್ (Ranya Rao) ಗೋಲ್ಡ್ ಸ್ಮಗ್ಲಿಂಗ್ ಪ್ರಕರಣಕ್ಕೆ (Gold Smuggling Case) ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಕಂದಾಯ ಗುಪ್ತಚರ ನಿರ್ದೇಶನಾಲಯ(DRI) ತನಿಖೆಯಲ್ಲಿ ಹೊಸ ಹೊಸ ವಿಚಾರಗಳು ಬಯಲಾಗುತ್ತಿದೆ. ವಿಚಾರಣೆ ವೇಳೆ ರನ್ಯಾ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ. ಆದರೆ ಆಕೆಯ ಹೇಳಿಕೆಯಲ್ಲಿ ಯಾವುದೇ ಸ್ಪಷ್ಟತೆ ಇಲ್ಲ. ಇದು ಹತ್ತಾರು ಅನುಮಾನಗಳಿಗೆ ಕಾರಣವಾಗ್ತಿದೆ.

    ಇದೇ ವೇಳೆ, ರನ್ಯಾ ಪ್ರೋಟೋಕಾಲ್‌ಗೆ ಸಂಬಂಧಿಸಿ ಪ್ರೋಟೋಕಾಲ್ ಅಧಿಕಾರಿ ನೀಡಿದ್ದ ಹೇಳಿಕೆಯೂ ಬಯಲಾಗಿದೆ. ಶಿಷ್ಟಾಚಾರ ದುರ್ಬಳಕೆ ಪ್ರಕರಣ ರನ್ಯಾ ಮಲತಂದೆ ಬುಡಕ್ಕೆ ಬರುವಂತೆ ಕಾಣುತ್ತಿದೆ. ಹೀಗಾಗಿ ಐಪಿಎಸ್ ರಾಮಚಂದ್ರ ರಾವ್ ಅವರನ್ನು ಸುದೀರ್ಘ ಅವಧಿಗೆ ಕಡ್ಡಾಯ ರಜೆ ಮೇಲೆ ಕಳಿಸಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ಹೇಳಲಾಗಿದೆ.

    ಈ ಮಧ್ಯೆ ಶಿಷ್ಟಾಚಾರ ದುರ್ಬಳಕೆ ಆರೋಪ ಪ್ರಕರಣದಲ್ಲಿ ರಾಮಚಂದ್ರರಾವ್ ಪಾತ್ರದ ಬಗ್ಗೆ ತನಿಖೆ ನಡೆಸುತ್ತಿರುವ ಎಸಿಎಸ್ ಗೌರವ್ ಗುಪ್ತಾಗೆ ನೆರವಾಗಲು ಸಿಐಡಿ ಡಿಐಜಿ ವಂಶಿಕೃಷ್ಣರನ್ನು ಸರ್ಕಾರ ನೇಮಕ ಮಾಡಿದೆ. ಇದನ್ನೂ ಓದಿ: ರನ್ಯಾಗೆ ಮಾತ್ರ ಸಿನಿಮಾ ನಂಟಿಲ್ಲ – ಆರೋಪಿ ತರುಣ್‌ಗೆ ಇದೆ ಟಾಲಿವುಡ್ ನಂಟು!

    ರನ್ಯಾ ಹೇಳಿದ್ದೇನು?
    ಮಾರ್ಚ್ 1ರಂದು ವಿದೇಶಿ ನಂಬರ್‌ನಿಂದ ನನಗೆ ಕರೆ ಬಂದಿತ್ತು. ಚಿನ್ನ ತಂದು ಡೆಲಿವರಿ ಮಾಡಬೇಕು ಎಂಬ ಸೂಚನೆ ಆ ಕರೆಯಲ್ಲಿ ಇತ್ತು. ನಂತರ ಟಿಕೆಟ್ ಬುಕ್ ಮಾಡಿಕೊಂಡು ಮಾರ್ಚ್ 2ರಂದು ದುಬೈಗೆ ಹೋದೆ.

    ದುಬೈ ವಿಮಾನ ನಿಲ್ದಾಣದ ಟರ್ಮಿನಲ್ 3ರ ಗೇಟ್ ಎ ಬಳಿ ಬರಲು ಸೂಚನೆ ಸಿಕ್ಕಿತ್ತು. 6 ಅಡಿ ಎತ್ತರದ ವ್ಯಕ್ತಿಯೊಬ್ಬ ಬಂದು ಚಿನ್ನವಿದ್ದ ಎರಡು ಬಾಕ್ಸ್ ನೀಡಿದ. ಬಂಗಾರ ಬಚ್ಚಿಡಲು ವಿಮಾನ ನಿಲ್ದಾಣದಲ್ಲೇ ಬ್ಯಾಡೇಜ್ ಮತ್ತು ಕತ್ತರಿ ಖರೀದಿಸಿದೆ.

    ವಾಶ್‌ರೂಂಗೆ ಹೋಗಿ ಮೈಗೆ ಚಿನ್ನದ ಗಟ್ಟಿಗಳನ್ನು ಅಂಟಿಸಿಕೊಂಡು ಬಂದೆ. ಹೇಗೆ ಕಳ್ಳಸಾಗಣೆ ಮಾಡಬೇಕು ಎಂಬುದನ್ನು ಯೂಟ್ಯೂಬ್ ನೋಡಿ ಕಲಿತೆ. ಹಿಂದೆಂದೂ ನಾನು ಚಿನ್ನ ಕಳ್ಳಸಾಗಣೆ ಮಾಡಿರಲಿಲ್ಲ. ಮೊದಲ ಬಾರಿಗೆ ಕಳ್ಳ ಸಾಗಾಣಿಕೆ ಮಾಡಿದ್ದೆ.

    ಬೆಂಗಳೂರು ಏರ್‌ಪೋರ್ಟ್ ಟೋಲ್ ಬಳಿ ಬರಲು ನನಗೆ ಸೂಚನೆ ಸಿಕ್ಕಿತ್ತು. ಸರ್ವೀಸ್ ರೋಡ್‌ನಲ್ಲಿ ನಿಲ್ಲಿಸಿದ ಆಟೋದಲ್ಲಿ ಚಿನ್ನ ಇಟ್ಟು ಹೋಗಲು ತಿಳಿಸಿದ್ದರು. ನನ್ನ ಜೊತೆ ಮಾತಾಡಿದ್ದು ಯಾರೆಂದು ಗೊತ್ತಿಲ್ಲ. ಭಾಷೆ ನೋಡಿದರೆ ಆ ವ್ಯಕ್ತಿ ಆಫ್ರಿಕನ್ ಅಮೆರಿಕನ್ ಇರಬಹುದು.

     

  • ರನ್ಯಾಗೆ ಮಾತ್ರ ಸಿನಿಮಾ ನಂಟಿಲ್ಲ – ಆರೋಪಿ ತರುಣ್‌ಗೆ ಇದೆ ಟಾಲಿವುಡ್ ನಂಟು!

    ರನ್ಯಾಗೆ ಮಾತ್ರ ಸಿನಿಮಾ ನಂಟಿಲ್ಲ – ಆರೋಪಿ ತರುಣ್‌ಗೆ ಇದೆ ಟಾಲಿವುಡ್ ನಂಟು!

    – ರನ್ಯಾಗೆ ನಿರ್ದೇಶನ ನೀಡುತ್ತಿದ್ದದ್ದೇ ತರುಣ್‌!

    ಬೆಂಗಳೂರು: ಚಿನ್ನದ ಕಳ್ಳ ಸಾಗಾಣೆ ಪ್ರಕರಣದಲ್ಲಿ (Gold Smuggling Case) ರನ್ಯಾ ರಾವ್ (Ranya Rao) ಜೊತೆಗೆ ಬಂಧನಕ್ಕೆ ಒಳಗಾಗಿರುವ ಮತ್ತೊಬ್ಬ ಆರೋಪಿ ತರುಣ್ ರಾಜ್‌ಗೆ ಕೂಡ ಸಿನಿಮಾ ನಂಟಿರುವುದು ಬೆಳಕಿಗೆ ಬಂದಿದೆ.

    ರನ್ಯಾ ಆಪ್ತ ಸ್ನೇಹಿತನಾಗಿದ್ದ ತರುಣ್ ರಾಜ್ (Tarun Raj) ತೆಲುಗು ಸಿನಿಮಾದಲ್ಲಿ ಸಕ್ರಿಯನಾಗಿದ್ದ. ತೆಲುಗಿನ ಮೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕ ನಟನಾಗಿ ತರುಣ್ ರಾಜ್ ಅಭಿನಯಿಸಿದ್ದಾನೆ.

    ಸಿನಿಮಾ ನಟನೆಗೆಂದೇ ತರುಣ್ ಕೊಂಡೂರು ರಾಜ್ ಹೆಸರನ್ನು ವಿರಾಟ್ ಕೊಂಡೂರು ರಾಜ್ ಎಂದು ಬದಲಾಯಿಸಿಕೊಂಡಿದ್ದ. ಎಲ್ಲರ ಜೊತೆಗೂ ವಿರಾಟ್ ಎಂದೇ ಗುರುತಿಸಿಕೊಂಡಿದ್ದ.

    ಪರಿಚಯಂ ಸಿನಿಮಾದಲ್ಲಿ ನಾಯಕನಟನಾಗಿ ಅಭಿನಯಿಸಿದ್ದ. 2018 ರಲ್ಲಿ ತೆರೆ ಕಂಡಿದ್ದ ತೆಲುಗಿನ ಪರಿಚಯಂ ಸಿನಿಮಾದ ನಾಯಕ ನಟನಾಗಿದ್ದ ತರುಣ್‌ಗೆ ಸಿನಿಮಾ ಮೂಲಕವೇ ರನ್ಯಾ ಜೊತೆ ಸ್ನೇಹ ಬೆಳೆಸಿದ್ದ ಮಾಹಿತಿ ಸಿಕ್ಕಿದೆ. ಬಳಿಕ ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಸಿಂಡಿಕೇಟ್‌ನಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಡಿಆರ್‌ಐ ಕಸ್ಟಡಿಯಲ್ಲಿರುವ ತರುಣ್ ರಾಜ್ ತೀವ್ರ ವಿಚಾರಣೆ ಮುಂದುವರೆದಿದೆ.

    ದುಬೈನಲ್ಲಿ ಚಿನ್ನ ಸಂಗ್ರಹಿಸುವ ಕುರಿತು ನಟಿ ರನ್ಯಾಗೆ ಸ್ನೇಹಿತ ಹಾಗೂ ಹೋಟೆಲ್ ಉದ್ಯಮಿ ಪುತ್ರ ತರುಣ್ ರಾಜ್ ಮಾಹಿತಿ ನೀಡುತ್ತಿದ್ದ ಎಂದು ಮೂಲಗಳು ಹೇಳಿವೆ. ದುಬೈನಲ್ಲಿ ಯಾರಿಂದ ಚಿನ್ನ ಪಡೆದು ಆನಂತರ ಹೇಗೆ ಬೆಂಗಳೂರಿಗೆ ಸಾಗಿಸಬೇಕು ಎಂಬ ನೀಲನಕ್ಷೆಯನ್ನು ರನ್ಯಾಗೆ ತರುಣ್ ರವಾನಿಸುತ್ತಿದ್ದ. ಇದನ್ನೂ ಓದಿ: ಡೆಲ್ಲಿ ಅಂಗಳ ತಲುಪಿದ ನಟಿ ರನ್ಯಾ ರಾವ್ ಕೇಸ್: ಇಬ್ಬರು ಸಚಿವರು ಸೇಫ್

    ದುಬೈ ಪಯಣದಲ್ಲಿ ಗೆಳತಿ ಜತೆ ನಿರಂತರವಾಗಿ ಆತ ಸಂಪರ್ಕದಲ್ಲಿದ್ದು ಸೂಚನೆ ಕೊಡುತ್ತಿದ್ದ. ತನ್ನ ಗೆಳೆಯನ ಸೂಚನೆ ಅನುಸಾರ ರನ್ಯಾ ನಡೆದುಕೊಳ್ಳುತ್ತಿದ್ದಳು ಎಂಬ ವಿಚಾರ ಪ್ರಾಥಮಿಕ ತನಿಖೆ ವೇಳೆ ಬೆಳಕಿಗೆ ಬಂದಿದೆ.

    ವಿದೇಶದಿಂದ ಚಿನ್ನ ಸಾಗಿಸುವ ಜಾಲ ಕೊರಿಯರ್‌ ಆಗಿ ರನ್ಯಾಳನ್ನು ಬಳಕೆ ಮಾಡಿರುವ ಸಾಧ್ಯತೆ ಇದೆ. ಈ ಚಿನ್ನ ಅಕ್ರಮ ಸಾಗಾಣ ಪ್ರಕರಣದಲ್ಲಿ ಹಲವರು ದೊಡ್ಡ ದೊಡ್ಡವರು ಭಾಗಿಯಾಗಿರುವ ವಿಚಾರ ಬಳಕಿಗೆ ಬರುತ್ತಿದ್ದಂತೆ ತನಿಖೆಗೆ ಈಗ ಜಾರಿ ನಿರ್ದೇಶನಾಲಯ ಎಂಟ್ರಿಕೊಟ್ಟಿದೆ.

  • ರನ್ಯಾರಾವ್ ಕೇಸ್; ಸಿಬಿಐ ತನಿಖೆ ಮುಗಿಯುವ ತನಕ ಬಿಜೆಪಿಯವರು ಕಾಯಬೇಕು: ಸತೀಶ್ ಜಾರಕಿಹೊಳಿ

    ರನ್ಯಾರಾವ್ ಕೇಸ್; ಸಿಬಿಐ ತನಿಖೆ ಮುಗಿಯುವ ತನಕ ಬಿಜೆಪಿಯವರು ಕಾಯಬೇಕು: ಸತೀಶ್ ಜಾರಕಿಹೊಳಿ

    – ಸಚಿವರ ಹೆಸರು ಹೇಳಲಿ ಜಾರಕಿಹೊಳಿ

    ಬೆಂಗಳೂರು: ರನ್ಯಾರಾವ್ ಕೇಸ್‌ನ (Ranya Rao Case) ತನಿಖೆ ಮುಗಿಯುವ ತನಕ ಕಾಯಬೇಕು. ಯಾವ ಸಚಿವರು ಇದ್ದಾರೆ ಎಂದು ಬಿಜೆಪಿ (BJP) ಅವರು ಹೆಸರು ಹೇಳಲಿ ಎಂದು ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ.

    ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಸಿಬಿಐ ತನಿಖೆ ನಡೆಯುತ್ತಿದೆ, ಕಾಯಬೇಕು. ಏರ್‌ಪೋರ್ಟ್ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತೆ. ಅದು ಕೇಂದ್ರ ಸರ್ಕಾರದ ಜವಾಬ್ದಾರಿ. ಸಚಿವರ ಬಗ್ಗೆ ಮಾತನಾಡಿದರೆ ಏಕೆ ಡ್ಯಾಮೇಜ್ ಆಗುತ್ತೆ? ಅವರ ಹೆಸರು ಹೇಳಲಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಉಪಗ್ರಹಗಳ ಅನ್‌ಡಾಕ್ ಕಾರ್ಯ ಯಶಸ್ವಿ – ಇಸ್ರೋ ಮತ್ತೊಂದು ಸಾಧನೆ; ಚಂದ್ರಯಾನ-4ಕ್ಕೆ ದಾರಿ

    ಇದೇ ವೇಳೆ ಕೆಪಿಸಿಸಿ ಅಧ್ಯಕ್ಷರ ಡಿನ್ನರ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಡಿಕೆಶಿ ಅವರು ಡಿನ್ನರ್‌ಗೆ ಕರೆದಿದ್ದಾರೆ, ಹೋಗುತ್ತೇನೆ. ಹೋಗಲು ಬೇಕಾಗುತ್ತದೆ. ಅವರು ಪಾರ್ಟಿ ಹೆಸರಲ್ಲಿ ಡಿನ್ನರ್ ಕೊಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಕಾಂಗ್ರೆಸ್ ವಿರುದ್ಧ 60% ಕಮಿಷನ್ Just Loot it ಆರೋಪ: ಬಿಜೆಪಿ ಎಕ್ಸ್ ಖಾತೆಯಲ್ಲಿ ವ್ಯಂಗ್ಯ

    ಇನ್ನು 40% ಕಮಿಷನ್ ಆರೋಪದ ಬಗ್ಗೆ ಮಾತನಾಡಿ, ನ್ಯಾ.ನಾಗಮೋಹನ್‌ದಾಸ್ ನೇತೃತ್ವದ ಆಯೋಗ ವರದಿ ಕೊಟ್ಟಿದ್ದಾರೆ. ವರದಿಯಲ್ಲಿ ಏನಿದೆ ನೋಡಬೇಕು ಎಂದರು. ಕಾಂಗ್ರೆಸ್ ವಿರುದ್ಧ ಬಿಜೆಪಿಯಿಂದ 60% ಕಮಿಷನ್ ಆರೋಪದ ಪೋಸ್ಟರ್ ವಿಡಿಯೋ ಬಿಡುಗಡೆ ಬಗ್ಗೆ ಕಿಡಿಕಾರಿದ ಅವರು, ನಮಗೆ ದಾಖಲೆ ಇತ್ತು, ಆರೋಪ ಮಾಡಿದ್ವಿ, ಅವರ ಆರೋಪಕ್ಕೆ ಏನಿದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ನಟಿ ರನ್ಯಾ ರಾವ್ ಮನೆ ಮೇಲೆ ED ದಾಳಿ

  • ಡೆಲ್ಲಿ ಅಂಗಳ ತಲುಪಿದ ನಟಿ ರನ್ಯಾ ರಾವ್ ಕೇಸ್: ಇಬ್ಬರು ಸಚಿವರು ಸೇಫ್

    ಡೆಲ್ಲಿ ಅಂಗಳ ತಲುಪಿದ ನಟಿ ರನ್ಯಾ ರಾವ್ ಕೇಸ್: ಇಬ್ಬರು ಸಚಿವರು ಸೇಫ್

    ಬೆಂಗಳೂರು: ನಟಿ ರನ್ಯಾ ರಾವ್‌ (Ranya Rao) ಕೇಸ್ ಡೆಲ್ಲಿ ಅಂಗಳ ತಲುಪಿದೆ. ಕಾಂಗ್ರೆಸ್ ಹೈಕಮಾಂಡ್‌ಗೆ ಕರ್ನಾಟಕದ (Karnataka) ರಿಪೋರ್ಟ್ ರವಾನೆಯಾಗಿದೆ. ಸಚಿವರ ಮೇಲೆ ಅನುಮಾನ, ಆರೋಪಗಳ ಬೆನ್ನಲ್ಲೇ ರಿಪೋರ್ಟ್ ಕಳುಹಿಸಿದ್ದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

    ಇಬ್ಬರ ಬಗ್ಗೆ ಸ್ಪಷ್ಟ ಮಾಹಿತಿ ಎರಡೇ ಎರಡು ಸ್ಪಷ್ಟೀಕರಣ ವರದಿಯಲ್ಲಿ ಇದೆ ಎನ್ನಲಾಗಿದೆ. ಸಚಿವರ ವಿಚಾರದಲ್ಲಿ ಡೇಂಜರ್ ಝೋನ್ ಇಲ್ಲ. ನಮ್ಮ ಯಾವ ಸಚಿವರ ಪಾತ್ರವೂ ಇಲ್ಲ ಎಂಬ ವರದಿ ರವಾನೆಯಾಗಿರುವ ಬಗ್ಗೆ ಮೂಲಗಳು ಮಾಹಿತಿ ನೀಡಿವೆ.

     

    ಪ್ರೋಟೋಕಾಲ್ ಉಲ್ಲಂಘನೆ ಆರೋಪದಲ್ಲಿ ಸರ್ಕಾರ ಕಠಿಣ ಕ್ರಮ ಅಧಿಕಾರಿಗಳ ಮಟ್ಟದಲ್ಲಿ ಲೋಪ ಆಗಿರುವ ಬಗ್ಗೆ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ವರದಿಯಲ್ಲಿ ಹೇಳಿದ್ದಾರೆ ಎಂಬುದು ಮೂಲಗಳ ಮಾಹಿತಿ.

    ಸಚಿವರ ಮೇಲೆ ಬಿಜೆಪಿ ಆರೋಪ ಊಹಾಪೋಹಾ ಅಷ್ಟೇ. ಮದುವೆಗೆ ಹೋಗಿದ್ದನ್ನೇ ಬಿಜೆಪಿ ಲಿಂಕ್ ಮಾಡುತ್ತಿದ್ದಾರೆ ಪಿತೂರಿ ಅಷ್ಟೇ. ಸರ್ಕಾರ, ಸಚಿವರ ವಿಚಾರದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಪ್ರಕರಣದ ಬಗ್ಗೆ ಕಾಂಗ್ರೆಸ್‌ ಹೈಕಮಾಂಡ್‌ಗೆ ರವಾನೆಯಾದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

  • ನಟಿ ರನ್ಯಾ ರಾವ್ ಮನೆ ಮೇಲೆ ED ದಾಳಿ

    ನಟಿ ರನ್ಯಾ ರಾವ್ ಮನೆ ಮೇಲೆ ED ದಾಳಿ

    – ರನ್ಯಾ ಪತಿ ಜತಿನ್‌, ಗೆಳೆಯನ ಮನೆ ಸೇರಿ 9 ಕಡೆ ಡಿಆರ್‌ಐನಿಂದಲೂ ರೇಡ್‌

    ಬೆಂಗಳೂರು: ಚಿನ್ನ ಕಳ್ಳಸಾಗಣೆ (Gold Smuggling Case) ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟಿ ರನ್ಯಾ ರಾವ್ (Ranya Rao) ಮನೆ ಮೇಲೆ ಇ.ಡಿ (ಜಾರಿ ನಿರ್ದೇಶನಾಲಯ) ದಾಳಿ ನಡೆಸಿದೆ.

    ನಂದವಾಣಿ ಮ್ಯಾನ್ಸನ್ ಸೇರಿದಂತೆ 6 ಕಡೆ ಇಡಿ ದಾಳಿ ಮಾಡಿದೆ. ಪ್ರಕರಣ ಸಂಬಂಧ ದೆಹಲಿಯಲ್ಲಿ ಇಸಿಐಆರ್ ಆಗಿದೆ. ಈ ಹಿನ್ನೆಲೆಯಲ್ಲಿ ದೆಹಲಿ ತಂಡದಿಂದ ಬೆಂಗಳೂರಿನಲ್ಲಿ ದಾಳಿ ನಡೆಸಲಾಗಿದೆ. ಇದನ್ನೂ ಓದಿ: EXCLUSIVE |ರನ್ಯಾ ಬಳಿ ಇದೆ ದುಬೈ ರೆಸಿಡೆಂಟ್ ವೀಸಾ – ಜಾಮೀನು ಸಿಕ್ರೆ ದೇಶ ಬಿಟ್ಟು ಹೋಗ್ತಾರಾ?

    ಇದಕ್ಕೂ ಮುನ್ನ ನಟಿ ರನ್ಯಾ, ಆಕೆಯ ಪತಿ ಜತಿನ್ ಹಾಗೂ ಗೆಳೆಯ ತರುಣ್ ಮನೆಗಳು ಸೇರಿದಂತೆ 9 ಕಡೆಗಳಲ್ಲಿ ಡಿಆರ್‌ಐ ದಾಳಿ ನಡೆಸಿತ್ತು.

    ರನ್ಯಾ ಪತಿ ಜತಿನ್ ಹುಕ್ಕೇರಿ ನಿವಾಸ, ರನ್ಯಾ ಮತ್ತು ಗೆಳೆಯ ತರುಣ್‌ಗೆ ಸೇರಿದ ಜಾಗ ಹಾಗೂ ಕೋರಮಂಗಲ, ಇಂದಿರಾನಗರ ಸೇರಿದಂತೆ 9 ಕಡೆ ದಾಳಿ ಮಾಡಿ ಪರಿಶೀಲನೆ ನಡೆಸಲಾಗಿದೆ.

    ಆಡುಗೋಡಿ ಬಳಿ ರನ್ಯಾ ರಾವ್ ಅವರ ಪತಿ ನಿವಾಸದ ಮೇಲೆ ಡಿಆರ್‌ಐ ಅಧಿಕಾರಿಗಳು ಬೆಳಗ್ಗೆಯೇ ದಾಳಿ ನಡೆಸಿದ್ದರು. ಇದನ್ನೂ ಓದಿ: ರನ್ಯಾ ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ – ನಾಲ್ವರಿಗೆ ಸಿಬಿಐ ನೋಟಿಸ್‌