Tag: Ranya Rao

  • ಗೃಹ ಸಚಿವ ಪರಂ ಕೇಸ್‌ಗೆ ರನ್ಯಾರಾವ್ ಲಿಂಕ್?

    ಗೃಹ ಸಚಿವ ಪರಂ ಕೇಸ್‌ಗೆ ರನ್ಯಾರಾವ್ ಲಿಂಕ್?

    ಬೆಂಗಳೂರು: ಗೃಹ ಸಚಿವ ಪರಮೇಶ್ವರ್‌ (G. Parameshwara) ಮಾಲೀಕತ್ವದ ಶಿಕ್ಷಣ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯ(ED) ದಾಳಿ ಹಿಂದೆ ರನ್ಯಾ ರಾವ್‌ ಕೇಸ್‌ (Ranya Rao Case) ಲಿಂಕ್‌ ಇದ್ಯಾ ಎಂಬ ಗಂಭೀರ ಪ್ರಶ್ನೆ ಎದ್ದಿದೆ.

    ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್‌ ಅಶೋಕ್‌ (R Ashok) ಮಾಡಿದ ಗಂಭೀರ ಆರೋಪದಿಂದ ಈ ಪ್ರಶ್ನೆ ಈಗ ಎದ್ದಿದೆ.  ಇದನ್ನೂ ಓದಿ: ಗೂಗಲ್ ಮ್ಯಾಪ್ ನಂಬಿ ಗದ್ದೆಗೆ ಬಂದು ನಿಂತ ಟಿಟಿ!

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅಶೋಕ್‌, ರನ್ಯಾರಾವ್ ವಿದೇಶದಿಂದ ಚಿನ್ನ ತಂದು ಹಲವು ಪ್ರಮುಖರಿಗೆ ನೀಡಿರುವ ಮಾಹಿತಿಯಿದೆ. ಈ ಹಣ ಸಿದ್ದಾರ್ಥ ಶಿಕ್ಷಣ ಸಂಸ್ಥೆಯಲ್ಲಿ ಹೂಡಿಕೆ ಮಾಡುತ್ತಿದ್ದ ಬಗ್ಗೆ ಇಡಿ ಮಾಹಿತಿ ಸಂಗ್ರಹಿಸಿರಬಹುದು ಎಂಬ ಗಂಭೀರ ಆರೋಪ ಮಾಡಿದರು. ಇದನ್ನೂ ಓದಿ: ಕನ್ನಡ ಮಾತನಾಡಲ್ಲ ಎಂದು ಉದ್ದಟತನ ಪ್ರದರ್ಶಿಸಿದ್ದ ಎಸ್‌ಬಿಐ ಮ್ಯಾನೇಜರ್ ದಿಢೀರ್ ವರ್ಗಾವಣೆ

    ತನಿಖೆ ನಡೆದ ಬಳಿಕ ಮತ್ತಷ್ಟು ವಿಷಯಗಳು ಹೊರಬರಬಹುದು. ಈ ಪ್ರಕರಣ ಸರ್ಕಾರಕ್ಕೆ ಮುಜುಗರ ತಂದಿದೆ. ಆದರೆ ದಾಳಿಯಿಂದ ಇವರು ಹೆದರುತ್ತಾರೆ ಎಂದು ಅನಿಸುವುದಿಲ್ಲ. ಯಾಕೆಂದರೆ ಇವರು ಲೂಟಿ ಮಾಡಲೆಂದೇ ಬಂದಿದ್ದಾರೆ ಎಂದರು.

     

    ಮೊದಲು ಇಡಿ ದಾಳಿ ಮುಗಿದು ತನಿಖೆ ನಡೆಯಲಿದೆ. ತನಿಖೆ ಪೂರ್ತಿ ಆದ ಮೇಲೆ ನಾವು ಪರಮೇಶ್ವರ್ ವಿರುದ್ಧ ಕ್ರಮಕ್ಕೆ ಆಗ್ರಹಿಸ್ತೇವೆ. ಮುಂದಿನ ಹೋರಾಟ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.

    ಚಿನ್ನ ಕಳ್ಳ ಸಾಗಾಣಿಕೆ ಮಾಡಿ ಸಿಕ್ಕಿಬಿದ್ದಿರುವ ರನ್ಯಾ ನಿವಾಸ ಮೇಲೆ ಇಡಿ ದಾಳಿ ನಡೆಸಿತ್ತು. ಇಡಿ ದಾಳಿಯ ವೇಳೆ ಹಲವು ಮಹತ್ವದ ದಾಖಲೆಗಳು ಲಭ್ಯವಾಗಿದ್ದವು. ಈ ದಾಖಲೆಗಳ ಆಧಾರದ ಮೇಲೆ ಪರಮೇಶ್ವರ್‌ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆದಿದೆ ಎನ್ನಲಾಗುತ್ತಿದೆ.

  • ಗೋಲ್ಡ್ ಸ್ಮಗ್ಲಿಂಗ್ ಕೇಸ್ | ನಟಿ ರನ್ಯಾರಾವ್‌ಗೆ ಜಾಮೀನು ಮಂಜೂರು

    ಗೋಲ್ಡ್ ಸ್ಮಗ್ಲಿಂಗ್ ಕೇಸ್ | ನಟಿ ರನ್ಯಾರಾವ್‌ಗೆ ಜಾಮೀನು ಮಂಜೂರು

    – ದೇಶ ಬಿಟ್ಟು ಹೊರಗೆ ಹೋಗದಂತೆ ಸೂಚನೆ

    ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ (Gold Smuggling Case) ಬಂಧನಕ್ಕೆ ಒಳಗಾಗಿದ್ದ ನಟಿ ರನ್ಯಾರಾವ್‌ಗೆ ಆರ್ಥಿಕ ವ್ಯವಹಾರಗಳ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

    ranya rao 4

    ಜೊತೆಗೆ ಪ್ರಕರಣದ 2ನೇ ಆರೋಪಿ ತರುಣ್‌ ಕೊಂಡರಾಜುಗೂ ಜಾಮೀನು ಮಂಜೂರು ಮಾಡಿ ಕೋರ್ಟ್‌ ಆದೇಶಿಸಿದೆ. 60 ದಿನ ಕಳೆದರೂ ಡಿಆರ್‌ಐ ಅಧಿಕಾರಿಗಳು ದೋಷಾರೋಪ ಪಟ್ಟಿ ಸಲ್ಲಿಸದ ಹಿನ್ನೆಲೆ ಆರೋಪಿಗಳು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಆರ್ಥಿಕ ವ್ಯವಹಾರಗಳ ವಿಶೇಷ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

    ranya rao 6

     ಇಬ್ಬರು ಶ್ಯೂರಿಟಿ, 2 ಲಕ್ಷ ರೂ. ಬಾಂಡ್ ಮೇಲೆ ಜಾಮೀನು ನೀಡಲಾಗಿದೆ. ಅಲ್ಲದೇ ಮುಂದೆ ಇಂತಹ ಕೃತ್ಯಗಳಲ್ಲಿ ಭಾಗಿಯಾದಂತೆ ಹಾಗೂ ದೇಶ ಬಿಟ್ಟು ಹೊರಗೆ ಹೋಗದಂತೆ ಸೂಚನೆ ನೀಡಿದೆ. ರನ್ಯಾರಾವ್ ಪರವಾಗಿ ವಕೀಲ ಗಿರೀಶ್ ವಾದ ಮಂಡಿಸಿದರು.

    ಆದ್ರೆ, ರನ್ಯಾರಾವ್ ಜಾಮೀನು ಪಡೆದುಕೊಂಡ್ರು ಕೂಡ ಬಿಡುಗಡೆಯ ಭಾಗ್ಯ ಇಲ್ಲ. ಕಾಫೆಪೋಸಾ ಹಾಕಿರೋ ಹಿನ್ನೆಲೆಯಲ್ಲಿ ರನ್ಯಾ ಜೈಲಿನಲ್ಲೇ ಇರಬೇಕಾದ ಪರಿಸ್ಥಿತಿ ಎದುರಾಗಿದೆ.

    12 ಕೋಟಿ ರೂ. ಮೌಲ್ಯದ 14 ಕೆ.ಜಿ ಚಿನ್ನದ ಗಟ್ಟಿಗಳನ್ನು ದುಬೈನಿಂದ ಬೆಂಗಳೂರಿಗೆ (Bengaluru) ತಂದು ನಟಿ ರನ್ಯಾ ರಾವ್‌ ಬಂಧನಕ್ಕೆ ಒಳಗಾಗಿದ್ದರು. ಈ ಹಿಂದೆ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ಮತ್ತು ಮ್ಯಾಜಿಸ್ಟ್ರೇಟ್ ಕೋರ್ಟ್ ತಿಸ್ಕರಿಸಿತ್ತು.

  • ಗೋಲ್ಡ್ ಸ್ಮಗ್ಲಿಂಗ್ ಕೇಸ್ – ರನ್ಯಾರಾವ್ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್

    ಗೋಲ್ಡ್ ಸ್ಮಗ್ಲಿಂಗ್ ಕೇಸ್ – ರನ್ಯಾರಾವ್ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್

    ಬೆಂಗಳೂರು: ನಟಿ ರನ್ಯಾರಾವ್ (Ranya Rao) ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ದಿನಕ್ಕೊಂದು ಬೆಳವಣಿಗೆಯಾಗುತ್ತಿದ್ದು, ಇದೀಗ ಹೈಕೋರ್ಟ್ ಏಕಸದಸ್ಯ ಪೀಠ ಆರೋಪಿ ರನ್ಯಾರಾವ್ ಹಾಗೂ ಎ2 ಆರೋಪಿ ತರುಣ್ ರಾಜ್ ಜಾಮೀನು ಅರ್ಜಿ ವಜಾಗೊಳಿಸಿದೆ.

    ಇನ್ನು ಮುಂದಿನ ಒಂದು ವರ್ಷಗಳ ಕಾಲ ರನ್ಯಾರಾವ್ ಖಾಯಂ ವಿಳಾಸ ಪರಪ್ಪನ ಅಗ್ರಹಾರವಾಗಿಯೇ ಇರಲಿದೆ. ನ್ಯಾಯಮೂರ್ತಿ ವಿಶ್ವಜಿತ್ ಪೀಠ ಜಾಮೀನು ಅರ್ಜಿ ವಿಚಾರಣೆ ಮಾಡಿದ್ದರು. ಆರೋಪಿ ರನ್ಯಾರಾವ್ ಪರ ಹಿರಿಯ ವಕೀಲ ಸಂದೇಶ್ ಚೌಟ ವಾದ ಮಾಡಿದ್ದರು. ಇದನ್ನೂ ಓದಿ: ಕಲಬುರಗಿ| ಎಸ್‌ಬಿಐ ಎಟಿಎಂ ದರೋಡೆಕೋರರ ಕಾಲಿಗೆ ಪೊಲೀಸರ ಗುಂಡೇಟು

    ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ (Gold Smuggling Case) ರನ್ಯಾರಾವ್ ಪರಪ್ಪನ ಅಗ್ರಹಾರಕ್ಕೆ ಹೋಗಿ 50 ದಿನಗಳು ಆಗಿದೆ. ಮಾ. 3ರಂದು ಡಿಆರ್‌ಐ ಅಧಿಕಾರಿಗಳು ರನ್ಯಾರಾವ್‌ರನ್ನ ಬಂಧನ ಮಾಡಿ ಜೈಲಿಗೆ ಕಳಿಸಿದ್ದರು. ಇಲ್ಲಿಯವರೆಗೆ 2 ಬಾರಿ ರನ್ಯಾರಾವ್ ಜಾಮೀನು ಅರ್ಜಿ ವಜಾ ಆಗಿದೆ.

  • ರನ್ಯಾರಾವ್ ವಿರುದ್ಧ ಕಾಫಿಪೋಸಾ ಜಾರಿ – ಒಂದು ವರ್ಷ ಜೈಲೇ ಗತಿ

    ರನ್ಯಾರಾವ್ ವಿರುದ್ಧ ಕಾಫಿಪೋಸಾ ಜಾರಿ – ಒಂದು ವರ್ಷ ಜೈಲೇ ಗತಿ

    ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ರನ್ಯಾರಾವ್ (Ranya Rao) ಗೋಲ್ಡ್ ಸ್ಮಗ್ಲಿಂಗ್ ಕೇಸ್‌ಗೆ (Gold Smuggling Case) ಬಿಗ್ ಟ್ವಿಸ್ಟ್ ಸಿಕ್ಕಿದೆ. ರನ್ಯಾರಾವ್ ಮತ್ತು ಸಂಗಡಿಗರು 1 ವರ್ಷ ಜೈಲಿನಲ್ಲೇ ಇರಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿದೆ.

    ಹೌದು, ರನ್ಯಾರಾವ್ ವಿರುದ್ಧ ಕಾಫಿಪೋಸಾ ಕಾಯ್ದೆಯನ್ನು (COFEPOSA Act) ಜಾರಿ ಮಾಡಲಾಗಿದೆ. ಹೀಗಾಗಿ ರನ್ಯಾರಾವ್ 1 ವರ್ಷ ಕಾಲ ಜೈಲಿನಲ್ಲೇ ಇರಬೇಕಾದ ಅನಿವಾರ್ಯ ಎದುರಾಗಿದೆ. ರನ್ಯಾರಾವ್ 100 ಕೆಜಿಯಷ್ಟು ಚಿನ್ನವನ್ನು ವಿದೇಶದಿಂದ ಕಳ್ಳ ಸಾಗಾಣೆ ಮಾಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಇದೀಗ ರನ್ಯಾರಾವ್, ತರುಣ್ ಕೊಂಡಾರಾಜ್ ಮತ್ತು ಸಾಹಿಲ್ ಜೈನ್ ವಿರುದ್ಧ ಕಾಫಿಪೋಸಾ ಜಾರಿ ಮಾಡಲಾಗಿದೆ. ಇದನ್ನೂ ಓದಿ: ಎನ್‌ಕೌಂಟರ್‌ಗೆ ಲಷ್ಕರ್‌ ಟಾಪ್‌ ಉಗ್ರ ಬಲಿ

    ಏನಿದು ಕಾಫಿಪೋಸಾ ಕಾಯ್ದೆ?
    ಕಾಫಿಪೋಸಾ ಎಂದರೆ ವಿದೇಶಿ ವಿನಿಮಯ ನಿಯಂತ್ರಣ ಹಾಗೂ ಕಳ್ಳ ಸಾಗಾಣಿಕೆ ತಡೆ ಕಾಯ್ದೆಯಾಗಿದೆ. ಈ ಕಾಫಿಪೋಸಾ ಕಾಯ್ದೆಯನ್ನು ಕಳ್ಳಸಾಗಣೆ ಮಾಡುವವರ ವಿರುದ್ಧ ಹಾಕಲಾಗುತ್ತದೆ. ಆರೋಪಿಯು ಜಾಮೀನು ಪಡೆಯಬಾರದು ಎಂಬುದು ಇದರ ಮೂಲ ಉದ್ದೇಶವಾಗಿದೆ. ಇದನ್ನೂ ಓದಿ: ನಾಲ್ಕು ಮರಕ್ಕೆ ಗುಂಡು ಹಾರಿಸಿ, ಸರ್ಜಿಕಲ್ ಸ್ಟ್ರೈಕ್‌ ಅಂತಾ ಬಿಜೆಪಿ ಬಿಂಬಿಸಿತ್ತು: ಎಂ.ಲಕ್ಷ್ಮಣ್‌

    ಆರೋಪಿಯು ಜಾಮೀನು ಪಡೆದು ಹೊರಗೆ ಬಂದರೆ ನಿರಂತರವಾಗಿ ಮತ್ತೆ ಕಳ್ಳ ಸಾಗಾಣಿಕೆ ಮಾಡುತ್ತಾರೆ. ಅಲ್ಲದೇ ಜೈಲಿನಿಂದ ಬಂದ ಬಳಿಕ ತಪ್ಪಿಸಿಕೊಳ್ಳಬಹುದು. ತನಿಖೆಗೆ ಸರಿಯಾಗಿ ಸಹಕಾರ ಕೊಡದೇ, ನಿರಂತರವಾಗಿ ಸ್ಮಗ್ಲಿಂಗ್‌ನಲ್ಲಿ ಮುಂದುವರೆಯುತ್ತಾರೆ ಎಂದು ಕಾಯ್ದೆ ಜಾರಿಗೊಳಿಸಲಾಗುತ್ತದೆ. ಇದನ್ನೂ ಓದಿ: ಮಂಗಳೂರಲ್ಲಿ ಪಹಲ್ಗಾಮ್ ದಾಳಿ ಸಮರ್ಥಿಸಿಕೊಂಡ ದುಷ್ಟ – ಪೊಲೀಸರಿಂದ ಕಿಡಿಗೇಡಿಗಾಗಿ ಹುಡುಕಾಟ

    ಕಾಫಿಪೋಸಾ ಕಾಯ್ದೆಯನ್ನು ಕೇಂದ್ರ ಆರ್ಥಿಕ ಗುಪ್ತಚರ ಬ್ಯೂರೋ(CEIB) ಜಾರಿ ಮಾಡುತ್ತದೆ. ಸಿಇಐಬಿಗೆ ವಿಚಾರ ನೀಡಬೇಕಿರೋದು ಡಿಆರ್‌ಐ(ಕಂದಾಯ ಗುಪ್ತಚರ ನಿರ್ದೇಶನಾಲಯ). ಕಾಫಿಪೋಸಾ ಕಾಯ್ದೆಯನ್ನು ಜಾರಿಗೊಳಿಸಿದರೆ ಆರೋಪಿಯು 1 ವರ್ಷಗಳ ಕಾಲ ಜೈಲಿನಲ್ಲೇ ಇರಬೇಕು.

  • ಚಿನ್ನ ತರಲು 5 ಸ್ಟೆಪ್ ಕೋಡ್‌ವರ್ಡ್ ಬಳಕೆ – ಚಿನ್ನದ ಚೋರಿಯ ನಾಟಕ ಬಯಲು

    ಚಿನ್ನ ತರಲು 5 ಸ್ಟೆಪ್ ಕೋಡ್‌ವರ್ಡ್ ಬಳಕೆ – ಚಿನ್ನದ ಚೋರಿಯ ನಾಟಕ ಬಯಲು

    – 6 ತಿಂಗಳಿನಲ್ಲಿ 49.6 ಕೆಜಿ ಚಿನ್ನ ಭಾರತಕ್ಕೆ ತಂದಿದ್ದಳಂತೆ ರನ್ಯಾ

    ಬೆಂಗಳೂರು: ದುಬೈನಿಂದ ಚಿನ್ನ ತಂದು ಪರಪ್ಪನ ಅಗ್ರಹಾರ ಸೇರಿರುವ ರನ್ಯಾ ರಾವ್(Ranya Rao) ಕೇಸ್‌ನಲ್ಲಿ ದಿನಕ್ಕೊಂದು ತಿರುವು ಸಿಗ್ತಿದೆ. `ಮಾಣಿಕ್ಯ’ ಬೆಡಗಿಯ ಕಳ್ಳಸಾಗಾಣಿಕೆಗೆ ಬಳಸುತ್ತಿದ್ದ ಕೋಡ್‌ವರ್ಡ್‌ಗಳ ರಹಸ್ಯ ಬಯಲಾಗಿದೆ.

    ಕಳೆದ 5 ತಿಂಗಳಿನಲ್ಲಿಯೇ ಗೋಲ್ಡ್ ರಾಣಿ ದುಬೈನಿಂದ(Dubai) ಕದ್ದು ತಂದಿರುವ ಚಿನ್ನದ ಲೆಕ್ಕ ಕೇಳಿದ್ರೆ ನಿಬ್ಬೆರಗಿಸುತ್ತೆ. ಹೌದು, ರನ್ಯಾರಾವ್ ಗೋಲ್ಡ್ ಸ್ಮಗ್ಲಿಂಗ್(Gold Smuggling) ಕೇಸ್ ತನಿಖೆ ಮಾಡುತ್ತಿರುವ ಡಿಆರ್‌ಐ(DRI) ಅಧಿಕಾರಿಗಳು ಹಲವು ಸಂಗತಿಗಳನ್ನ ಬಯಲಿಗೆಳೆದಿದ್ದಾರೆ. ಗೋಲ್ಡ್ ಸ್ಮಗ್ಲಿಂಗ್‌ನಲ್ಲಿ ಹವಾಲ ನಂಟಿನ ಬಗ್ಗೆ ಸಾಕ್ಷ್ಯ ಕಲೆಹಾಕಿದ್ದಾರೆ. ರನ್ಯಾರಾವ್ ಮೊಬೈಲ್‌ನಲ್ಲಿ ಸೇವ್ ಆಗಿದ್ದ ಆ ಒಂದು ನಂಬರ್‌ನಿಂದ ಚಿನ್ನ ಕಳ್ಳಸಾಗಾಣಿಕೆಯ ಸ್ಫೋಟಕ ರಹಸ್ಯ ಹೊರಬಂದಿದೆ. ಇದನ್ನೂ ಓದಿ: ನೇಪಾಳದಲ್ಲಿ 5.0 ತೀವ್ರತೆಯ ಭೂಕಂಪನ – ಉತ್ತರ ಭಾರತದಲ್ಲೂ ಎಫೆಕ್ಟ್‌

    ರನ್ಯಾ ಮೊಬೈಲ್‌ನಲ್ಲಿ `ಎಯು ಬೆಂಗಳೂರು ಡಿಸ್ಪ್ಯಾಚ್‌ ನ್ಯೂಟನ್’ ಎಂಬ ಹೆಸರಿನಲ್ಲಿ ಒಂದು ನಂಬರ್ ಸೇವ್ ಆಗಿತ್ತು. ಆ ನಂಬರ್‌ನ ಮೂಲಕವೇ ರನ್ಯಾ ಮತ್ತು ಸಾಹಿಲ್ ಮೆಸೇಜ್ ಮಾಡುತ್ತಿದ್ದರು. ಅಲ್ಲದೇ ಸ್ಮಗ್ಲಿಂಗ್ ನಡೆಸಲು ಐದು ಸ್ಟೆಪ್‌ಗಳನ್ನು ಫಾಲೋ ಮಾಡಿದ್ದರು ಎಂಬ ವಿಚಾರವೂ ಗೊತ್ತಾಗಿದೆ. ಇದನ್ನೂ ಓದಿ: ದೆಹಲಿಯಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಯಾರು ಚರ್ಚೆ ಮಾಡಿಲ್ಲ: ಸತೀಶ್ ಜಾರಕಿಹೊಳಿ

    ಅದರಲ್ಲಿ ಮೊದಲನೇಯ ಹಂತ ಇನೀಶಿಯೇಷನ್ ಆದ್ರೆ, ಎರಡನೇಯದು ಕಮ್ಯೂನಿಕೇಷನ್, ಮೂರನೇಯದು ಅಥನ್ಟಿಕೇಷನ್, ಇನ್ನೂ ನಾಲ್ಕುನೇಯದು ಡೆಲಿವರಿ, ಕೊನೆಯದ್ದು ಸೆಟಲ್‌ಮೆಂಟ್. ಈ 5 ಸ್ಟೆಪ್ ಮೂಲಕ ಗೋಲ್ಡ್ ಗ್ಯಾಂಗ್ ಚಿನ್ನ ನೀಡಿ ಹಣ ಪಡೆದು ಸೆಟಲ್‌ಮೆಂಟ್ ಮಾಡಿರುವ ವಿಚಾರ ತನಿಖೆಯಲ್ಲಿ ಬಯಲಾಗಿದೆ.

    ರನ್ಯಾರಾವ್ ಚಿನ್ನ ಸಾಗಾಟ ಮತ್ತು ಮಾರಾಟದ ನಡುವೆ ಅವಿನಾಶ್ ಎಂಬಾತ ಭಾಗಿಯಾಗಿದ್ದ ಬಗ್ಗೆ ಅಧಿಕಾರಿಗಳಿಗೆ ಸಾಕ್ಷಿ ಸಿಕ್ಕಿದೆ. ರನ್ಯಾ ಈ ಹಿಂದೆ ಅವಿನಾಶ್ ಜೊತೆಗೆ ಸಾಕಷ್ಟು ಬಾರಿ ವ್ಯವಹಾರ ನಡೆಸಿರುವುದು ಗೊತ್ತಾಗಿದೆ. ರನ್ಯಾ ಅವಿನಾಶ್ ಗೋಲ್ಡ್ ಸ್ಮಗ್ಲಿಂಗ್ ಬಗ್ಗೆ ತಿಳಿಸಿದ ನಂತ್ರ ಸಾಹಿಲ್ ಜೈನ್ ಪ್ರವೇಶ ಮಾಡ್ತಿದ್ದ. ಕಳೆದ ನವೆಂಬರ್ ನವೆಂಬರ್ ಒಂದರಂದು ಮೊದಲ ಬಾರಿಗೆ ರನ್ಯಾ ಹಾಗೂ ಸಾಹಿಲ್ ಸಂಪರ್ಕ ವಾಗುತ್ತೆ. ಅಲ್ಲದೆ ರನ್ಯಾ ರಾವ್ ಒಮ್ಮೆ ಸಾಹಿಲ್ ಜೈನ್ ನಡೆಸುತಿದ್ದ ಚಿನ್ನದ ಅಂಗಡಿಗೆ ಹೋಗಿ ಡಿಲಿವರಿ ಮಾಡಿದ್ದು ತನಿಖೆಯಿಂದ ಬಹಿರಂಗವಾಗಿದೆ. ಜೊತೆಗೆ ರನ್ಯಾ ರಾವ್ ಕಳೆದ ಆರು ತಿಂಗಳಿನಲ್ಲಿ ಬರೊಬ್ಬರಿ 49.6 ಕೆಜಿ ಚಿನ್ನ ಭಾರತಕ್ಕೆ ತಂದಿದ್ದಳಂತೆ. ಇದನ್ನೂ ಓದಿ: IPL 2025 | ಸಿಎಸ್‌ಕೆ ತಂಡಕ್ಕೆ ಮತ್ತೆ ಲೆಜೆಂಡ್‌ ಮಹಿ ಕ್ಯಾಪ್ಟನ್‌?

    ನವೆಂಬರ್ 2024
    8 ಕೆ ಜಿ 981 ಗ್ರಾಂ ಚಿನ್ನದ ಗಟ್ಟಿ
    6 ಕೋಟಿ 82 ಲಕ್ಷ ಮೌಲ್ಯ
    6 ಕೋಟಿ 50 ಲಕ್ಷ ಹಣ ದುಬೈಗೆ ಹವಾಲ
    32 ಲಕ್ಷ ರನ್ಯಾರಾವ್ ಕಮಿಷನ್ ಲಾಭ

    ಡಿಸೆಂಬರ್ 2024
    12 ಕೆಜಿ 621 ಗ್ರಾಂ ಚಿನ್ನ
    9 ಕೋಟಿ 94 ಲಕ್ಷ ಮೌಲ್ಯ
    9 ಕೋಟಿ 64 ಲಕ್ಷ ದುಬೈಗೆ ಹವಾಲ
    32 ಲಕ್ಷ ರನ್ಯಾರಾವ್ ಕಮಿಷನ್ ಲಾಭ

    ಜನವರಿ 2025
    14 ಕೆ ಜಿ 562 ಗ್ರಾಂ ಚಿನ್ನ
    11 ಕೋಟಿ 56 ಲಕ್ಷ ಮೌಲ್ಯ
    11 ಕೋಟಿ 10 ಲಕ್ಷ ದುಬೈಗೆ ಹವಾಲ
    55 ಲಕ್ಷ ರನ್ಯಾರಾವ್ ಕಮಿಷನ್ ಲಾಭ

    ಫೆಬ್ರವರಿ 2025
    13 ಕೆಜಿ 433 ಗ್ರಾಂ ಚಿನ್ನ
    11 ಕೋಟಿ 81 ಲಕ್ಷ ಮೌಲ್ಯ
    11 ಕೋಟಿ 25 ದುಬೈಗೆ ಹವಾಲ ಹಣ
    56 ಲಕ್ಷ ರನ್ಯಾರಾವ್ ಗೆ ಕಮಿಷನ್ ಲಾಭ

    ಮಾರ್ಚ್ 2025
    14 ಕೆ ಜಿ 213 ಗ್ರಾಂ ಚಿನ್ನ
    13 ಕೋಟಿ ಚಿನ್ನದ ಮೌಲ್ಯ
    11 ಕೋಟಿ ಹವಾಲ ಮೂಲಕ ದುಬೈಗೆ
    ಮಾರ್ಚ್ 03 ರಂದು ಸಿಕ್ಕಿಬಿದ್ದ ರನ್ಯಾರಾವ್
    ಆಖI ಅಧಿಕಾರಿಗಳಿಂದ ರನ್ಯಾರಾವ್ ಬಂಧನ

  • Exclusive | ದುಬೈನಿಂದ 50 ಕೆಜಿ ಚಿನ್ನ ತಂದು ಸಾಹಿಲ್‌ಗೆ ಕೊಟ್ಟಿದ್ದ ರನ್ಯಾ

    Exclusive | ದುಬೈನಿಂದ 50 ಕೆಜಿ ಚಿನ್ನ ತಂದು ಸಾಹಿಲ್‌ಗೆ ಕೊಟ್ಟಿದ್ದ ರನ್ಯಾ

    ಬೆಂಗಳೂರು: ನಟಿ ರನ್ಯಾ ರಾವ್‌ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ (Gold Smuggling Case) ಬಗೆದಷ್ಟೂ ಸ್ಫೋಟಕ ರಹಸ್ಯಗಳು ಬಯಲಾಗುತ್ತಲೇ ಇವೆ. ಹವಾಲಾ ವಹಿವಾಟಿನಲ್ಲಿ ನಟಿ ರನ್ಯಾ (Ranya Rao) ಪಂಟರ್‌ ಆಗಿದ್ದ ನಟಿ, ಕಳೆದ ನವೆಂಬರ್‌ ತಿಂಗಳಿನಿಂದಲೇ ದುಬೈನಿಂದ 50 ಕೆಜಿ ಚಿನ್ನ ಸಾಗಿಸಿದ್ದಳು ಅನ್ನೋ ಸ್ಫೋಟಕ ಮಾಹಿತಿ ತನಿಖೆಯಲ್ಲಿ ಬಯಲಾಗಿದೆ.

    ಕಳೆದ ನವೆಂಬರ್‌ ತಿಂಗಳಿನಿಂದಲೇ ಬರೋಬ್ಬರಿ 50 ಕೆಜಿ ಚಿನ್ನ ತಂದು ತನಗೆ ಕೊಟ್ಟಿರುವುದಾಗಿ ಗೋಲ್ಡ್‌ ಸ್ಮಗ್ಲಿಂಗ್‌ ಪ್ರಕರಣದ 3ನೇ ಆರೋಪಿ ಸಾಹಿಲ್‌ ಜೈನ್‌ (Sahil Jain) ಡಿಆರ್‌ಐ ಮುಂದೆ ಬಾಯ್ಬಿಟ್ಟಿದ್ದಾನೆ. ಇದನ್ನೂ ಓದಿ: Exclusive | ರನ್ಯಾ ಗೋಲ್ಡ್ ಸ್ಮಗ್ಲಿಂಗ್‌ ಕೇಸ್‌ – ಮೊದಲು ಚಿನ್ನ ಸಾಗಿಸಿದ್ದು ದಕ್ಷಿಣಾ ಆಫ್ರಿಕಾದಿಂದ ದುಬೈಗೆ!

    Ranya Rao Gold Smuggling Case Sahil Jain

    ಕಳೆದ ನವೆಂಬರ್‌ನಿಂದಲೇ ರನ್ಯಾ ರಾವ್‌ ಬರೋಬ್ಬರಿ 50 ಕೆಜಿ ಚಿನ್ನ ತಂದು ಸಾಹಿಲ್‌ ಜೈನ್‌ಗೆ ಕೊಟ್ಟಿದ್ದಳು. ಈ ಚಿನ್ನವನ್ನ ಸಾಹಿಲ್‌ ಮಾರಾಟ ಮಾಡಿಕೊಡುವ ಕೆಲಸ ಮಾಡಿದ್ದ. ಅಷ್ಟೇ ಅಲ್ಲ ರನ್ಯಾ ರಾವ್‌ 30 ಕೋಟಿ ರೂ. ಹಣವನ್ನು ಹವಾಲಾ ಮೂಲಕ ದುಬೈಗೆ ಸಾಗಾಟ ಮಾಡಲಾಗಿತ್ತು ಎಂದು ಸಾಹಿಲ್‌ ಜೈನ್‌ ಡಿಆರ್‌ಐ ಅಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದಾನೆ. ಡಿಆರ್‌ಐ ಅಧಿಕಾರಿಗಳು ಕೋರ್ಟ್ ಮುಂದೆ ತನಿಖೆಯ ಮಾಹಿತಿ ಹಂಚಿಕೊಂಡಿದ್ದಾರೆ.  ಇದನ್ನೂ ಓದಿ: ರನ್ಯಾ ಕೇಸ್ – ಗೌರವ್ ಗುಪ್ತಾ ಮಧ್ಯಂತರ ವರದಿ ಕೊಟ್ಟಿರಬಹುದು: ಪರಮೇಶ್ವರ್

    ಈ ಪ್ರಕರಣದ ಮೂರನೇ ಆರೋಪಿ ಸಾಹಿಲ್‌ ಜೈನ್‌ಗೆ ನಿನ್ನೆಯಷ್ಟೆ ಕೋರ್ಟ್‌ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ. ಬಳ್ಳಾರಿ (Ballari) ಮೂಲದ ಸಾಹಿಲ್ ಜೈನ್ ರನ್ಯಾ ರಾವ್ ಜೊತೆಗೆ ವಾಟ್ಸಪ್ ಚಾಟಿಂಗ್ ಮಾಡಿದ್ದ ಹಿನ್ನೆಲೆ ಸಾಹಿಲ್ ಜೈನ್ ಲಾಕ್ ಆಗಿದ್ದ. ಸಾಹಿಲ್ ಜೈನ್ ತಂದೆ ಮಹೇಂದ್ರ ಜೈನ್ ಅವರ ಸಹೋದರರ ಬಟ್ಟೆ ಅಂಗಡಿ ಬಳ್ಳಾರಿಯಲ್ಲಿದ್ದು, ಸಹೋದರರು ಬಳ್ಳಾರಿಯಲ್ಲಿ ವಾಸವಾಗಿದ್ದಾರೆ. ಆದರೆ ಕೆಲ ವರ್ಷಗಳಿಂದ ಸಾಹಿಲ್ ಜೈನ್ ಕುಟುಂಬ ಬೆಂಗಳೂರಿಗೆ ಶಿಫ್ಟ್ ಆಗಿದೆ.  ಇದನ್ನೂ ಓದಿ: Gold Smuggling Case | ಸ್ವಂತ ಚಿನ್ನಾಭರಣ ಮಳಿಗೆ ಆರಂಭಿಸಲು ಪ್ಲ್ಯಾನ್‌ ಮಾಡಿದ್ದ ರನ್ಯಾ

    ಸಾಹಿಲ್ ಚಿಕ್ಕಂದಿನಿಂದಲೇ ಸೋದರ ಮಾವನ ಜೊತೆಯಲ್ಲಿ ಮುಂಬೈನಲ್ಲಿ ವಾಸ ಮಾಡುತ್ತಿದ್ದ. ಈಗಾಗಲೇ ಇದೇ ರೀತಿಯ ಪ್ರಕರಣದಲ್ಲಿ ಸಾಹಿಲ್ ಮುಂಬೈನಲ್ಲಿ ಒಮ್ಮೆ ಬಂಧನಕ್ಕೆ ಒಳಗಾಗಿದ್ದ. ಕಸ್ಟಮ್ಸ್ ಅಧಿಕಾರಿಗಳು ಮುಂಬೈ ಏರ್ಪೋರ್ಟ್‌ನಲ್ಲಿ ಬಂಧಿಸಿದ್ದರು. ಈಗಿನ ಪ್ರಕರಣ ಮತ್ತು ಹಿಂದಿನ ಪ್ರಕರಣದಲ್ಲಿ ಚಿನ್ನವನ್ನು ಮಾರಾಟ ಮಾಡುತ್ತಿದ್ದ ಹಾಗೂ ಹವಾಲಾ ನಂಟಿನ ಆರೋಪದಲ್ಲಿಯೇ ಸಾಹಿಲ್ ಜೈನ್ ಬಂಧಿತನಾಗಿದ್ದ.

    ಚಿನ್ನದ ವ್ಯಾಪಾರಿಗಳ ಜೊತೆ ನಂಟು ಇರೋ ಹಿನ್ನೆಲೆ ಚಿನ್ನದ ಮಾರಾಟದ ಜವಾಬ್ದಾರಿಯೂ ಸಾಹಿಲ್ ಮೇಲಿತ್ತು. ಬಂಧನದ ಬಳಿಕ ಸಾಹಿಲ್ ಜೈನ್‌ನನ್ನ ಡಿಆರ್‌ಐ ಅಧಿಕಾರಿಗಳು ಕೋರ್ಟ್‌ ಮುಂದೆ ಹಾಜರುಪಡಿಸಿ 7 ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದರು. ಇಂದು ಕಸ್ಟಡಿ ಅವಧಿ ಮುಕ್ತಾಯಗೊಂಡ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್‌ ಆದೇಶ ನೀಡಿತ್ತು.

  • ಗೋಲ್ಡ್ ರಾಣಿಗೆ ಮತ್ತೆ ಶಾಕ್ ಕೊಟ್ಟ ಪತಿ – ವಿಚ್ಛೇದನಕ್ಕೆ ಅರ್ಜಿ

    ಗೋಲ್ಡ್ ರಾಣಿಗೆ ಮತ್ತೆ ಶಾಕ್ ಕೊಟ್ಟ ಪತಿ – ವಿಚ್ಛೇದನಕ್ಕೆ ಅರ್ಜಿ

    ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ (Gold Smuggling Case) ಸಿಲುಕಿ ಜೈಲು ಪಾಲಾಗಿರೋ ಸ್ಯಾಂಡಲ್‌ವುಡ್‌ ನಟಿ ರನ್ಯಾ ರಾವ್‌ಗೆ (Ranya Rao) ಪತಿ ಜತೀನ್ ಹುಕ್ಕೇರಿ ಶಾಕ್‌ ಕೊಟ್ಟಿದ್ದಾರೆ.

    ಈಗಾಗಲೇ ವೈವಾಹಿಕ ಜೀವನದಲ್ಲಿ ಸಾಕಷ್ಟು ಜಗಳ ಆಗಿದೆ ಮನಸ್ತಾಪಗಳು ಇದ್ದಾವೆ ಅಂತ ಹೇಳಿಕೊಂಡಿದ್ದ ಜತೀನ್ ಹುಕ್ಕೇರಿ ಈಗ ವಿಚ್ಚೇದನಕ್ಕೆ ಮೊರೆ ಹೋಗಿದ್ದಾರೆ. ಫ್ಯಾಮಿಲಿ ಕೋರ್ಟ್‌ನಲ್ಲಿ (Family Court) ವಿಚ್ಚೇದನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ ಎಂಬ ಮಾಹಿತಿ ಸಿಕ್ಕಿದ್ದು, ಇನ್ನೂ ಕೂಡ ಕೋರ್ಟ್ ನಂಬರಿಂಗ್ ಆಗಿಲ್ಲ. ಇದನ್ನೂ ಓದಿ: ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಬಳ್ಳಾರಿ ಮೂಲದ ಸಾಹಿಲ್ ಜೈನ್ ಬಂಧನ

    Ranya Rao Gold Smuggling Case Sahil Jain

    ಬಳ್ಳಾರಿ ಮೂಲದ ಸಾಹಿಲ್‌ಗೆ ಜೈಲೇ ಗತಿ:
    ಇನ್ನೂ ಈ ಪ್ರಕರಣದ ಮೂರನೇ ಆರೋಪಿ ಸಾಹಿಲ್‌ ಜೈನ್‌ಗೂ (Sahil Jain) ಜೈಲೇ ಗತಿಯಾಗಿದೆ. ನ್ಯಾಯಾಂಗ ಬಂಧನಕ್ಕೆ ಕೋರ್ಟ್‌ ಆದೇಶ ನೀಡಿದೆ. ಇದನ್ನೂ ಓದಿ: ರನ್ಯಾ ಕೇಸ್ – ಗೌರವ್ ಗುಪ್ತಾ ಮಧ್ಯಂತರ ವರದಿ ಕೊಟ್ಟಿರಬಹುದು: ಪರಮೇಶ್ವರ್

    ಬಳ್ಳಾರಿ (Ballari) ಮೂಲದ ಸಾಹಿಲ್ ಜೈನ್ ರನ್ಯಾ ರಾವ್ ಜೊತೆಗೆ ವಾಟ್ಸಪ್ ಚಾಟಿಂಗ್ ಮಾಡಿದ್ದ ಹಿನ್ನೆಲೆ ಸಾಹಿಲ್ ಜೈನ್ ಲಾಕ್ ಆಗಿದ್ದ. ಸಾಹಿಲ್ ಜೈನ್ ತಂದೆ ಮಹೇಂದ್ರ ಜೈನ್ ಅವರ ಸಹೋದರರ ಬಟ್ಟೆ ಅಂಗಡಿ ಬಳ್ಳಾರಿಯಲ್ಲಿದ್ದು, ಸಹೋದರರು ಬಳ್ಳಾರಿಯಲ್ಲಿ ವಾಸವಾಗಿದ್ದಾರೆ. ಆದರೆ ಕೆಲ ವರ್ಷಗಳಿಂದ ಸಾಹಿಲ್ ಜೈನ್ ಕುಟುಂಬ ಬೆಂಗಳೂರಿಗೆ ಶಿಫ್ಟ್ ಆಗಿದೆ. ಇದನ್ನೂ ಓದಿ: Exclusive | ರನ್ಯಾ ಗೋಲ್ಡ್ ಸ್ಮಗ್ಲಿಂಗ್‌ ಕೇಸ್‌ – ಮೊದಲು ಚಿನ್ನ ಸಾಗಿಸಿದ್ದು ದಕ್ಷಿಣಾ ಆಫ್ರಿಕಾದಿಂದ ದುಬೈಗೆ!

    ಸಾಹಿಲ್ ಚಿಕ್ಕಂದಿನಿಂದಲೇ ಸೋದರ ಮಾವನ ಜೊತೆಯಲ್ಲಿ ಮುಂಬೈನಲ್ಲಿ ವಾಸ ಮಾಡುತ್ತಿದ್ದ. ಈಗಾಗಲೇ ಇದೇ ರೀತಿಯ ಪ್ರಕರಣದಲ್ಲಿ ಸಾಹಿಲ್ ಮುಂಬೈನಲ್ಲಿ ಒಮ್ಮೆ ಬಂಧನಕ್ಕೆ ಒಳಗಾಗಿದ್ದ. ಕಸ್ಟಮ್ಸ್ ಅಧಿಕಾರಿಗಳು ಮುಂಬೈ ಏರ್ಪೋರ್ಟ್‌ನಲ್ಲಿ ಬಂಧಿಸಿದ್ದರು. ಈಗಿನ ಪ್ರಕರಣ ಮತ್ತು ಹಿಂದಿನ ಪ್ರಕರಣದಲ್ಲಿ ಚಿನ್ನವನ್ನು ಮಾರಾಟ ಮಾಡುತ್ತಿದ್ದ ಹಾಗೂ ಹವಾಲಾ ನಂಟಿನ ಆರೋಪದಲ್ಲಿಯೇ ಸಾಹಿಲ್ ಜೈನ್ ಬಂಧಿತನಾಗಿದ್ದ. ಚಿನ್ನದ ವ್ಯಾಪಾರಿಗಳ ಜೊತೆ ನಂಟು ಇರೋ ಹಿನ್ನೆಲೆ ಚಿನ್ನದ ಮಾರಾಟದ ಜವಾಬ್ದಾರಿಯೂ ಸಾಹಿಲ್ ಮೇಲಿತ್ತು. ಬಂಧನದ ಬಳಿಕ ಸಾಹಿಲ್ ಜೈನ್‌ನನ್ನ ಡಿಆರ್‌ಐ ಅಧಿಕಾರಿಗಳು ಕೋರ್ಟ್‌ ಮುಂದೆ ಹಾಜರುಪಡಿಸಿ 7 ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದರು. ಇಂದು ಕಸ್ಟಡಿ ಅವಧಿ ಮುಕ್ತಾಯಗೊಂಡ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್‌ ಆದೇಶ ನೀಡಿದೆ.

  • ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಬಳ್ಳಾರಿ ಮೂಲದ ಸಾಹಿಲ್ ಜೈನ್ ಬಂಧನ

    ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಬಳ್ಳಾರಿ ಮೂಲದ ಸಾಹಿಲ್ ಜೈನ್ ಬಂಧನ

    ಬಳ್ಳಾರಿ: ರನ್ಯಾ ರಾವ್ (Ranya Rao) ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ (Gold Smuggling Case) ಬಗೆದಷ್ಟು ಬಯಲಾಗುತ್ತಿದೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೇ ಆರೋಪಿಯ ಬಂಧನವಾಗಿದೆ.

    ಬಳ್ಳಾರಿ (Ballari) ಮೂಲದ ಸಾಹಿಲ್ ಜೈನ್ (Sahil Jain) ಬಂಧಿತ ಆರೋಪಿ. ರನ್ಯಾ ರಾವ್ ಜೊತೆಗೆ ವಾಟ್ಸಾಪ್ ಚಾಟಿಂಗ್ ಮಾಡಿದ್ದ ಹಿನ್ನೆಲೆ ಸಾಹಿಲ್ ಜೈನ್ ಲಾಕ್ ಆಗಿದ್ದಾನೆ. ಸಾಹಿಲ್ ಜೈನ್ ತಂದೆ ಮಹೇಂದ್ರ ಜೈನ್ ಅವರ ಸಹೋದರರ ಬಟ್ಟೆ ಅಂಗಡಿ ಬಳ್ಳಾರಿಯಲ್ಲಿದ್ದು, ಸಹೋದರರು ಬಳ್ಳಾರಿಯಲ್ಲಿ ವಾಸವಾಗಿದ್ದಾರೆ. ಆದರೆ ಕೆಲ ವರ್ಷಗಳಿಂದ ಸಾಹಿಲ್ ಜೈನ್ ಕುಟುಂಬ ಬೆಂಗಳೂರಿಗೆ ಶಿಫ್ಟ್ ಆಗಿದೆ. ಇದನ್ನೂ ಓದಿ: ಅಪ್ರಾಪ್ತೆ ಮೇಲೆ ಚಿಕ್ಕಪ್ಪನಿಂದಲೇ ಅತ್ಯಾಚಾರ – ಬಾಲಕಿ 6 ತಿಂಗಳ ಗರ್ಭಿಣಿ

    ಸಾಹಿಲ್ ಚಿಕ್ಕಂದಿನಿಂದಲೇ ಸೋದರ ಮಾವನ ಜೊತೆಯಲ್ಲಿ ಮುಂಬೈನಲ್ಲಿ ವಾಸ ಮಾಡುತ್ತಿದ್ದ. ಈಗಾಗಲೇ ಇದೇ ರೀತಿಯ ಪ್ರಕರಣದಲ್ಲಿ ಸಾಹಿಲ್ ಮುಂಬೈನಲ್ಲಿ ಒಮ್ಮೆ ಬಂಧನಕ್ಕೆ ಒಳಗಾಗಿದ್ದ. ಕಸ್ಟಮ್ಸ್ ಅಧಿಕಾರಿಗಳು ಮುಂಬೈ ಏರ್ಪೋರ್ಟ್ನಲ್ಲಿ ಬಂಧಿಸಿದ್ದರು. ಈಗಿನ ಪ್ರಕರಣ ಮತ್ತು ಹಿಂದಿನ ಪ್ರಕರಣದಲ್ಲಿ ಚಿನ್ನವನ್ನು ಮಾರಾಟ ಮಾಡುತ್ತಿದ್ದ ಹಾಗೂ ಹವಾಲಾ ನಂಟಿನ ಆರೋಪದಲ್ಲಿಯೇ ಸಾಹಿಲ್ ಜೈನ್ ಬಂಧಿತನಾಗಿದ್ದ. ಚಿನ್ನದ ವ್ಯಾಪಾರಿಗಳ ಜೊತೆ ನಂಟು ಇರೋ ಹಿನ್ನೆಲೆ ಚಿನ್ನದ ಮಾರಾಟದ ಜವಾಬ್ದಾರಿಯೂ ಸಾಹಿಲ್ ಮೇಲಿತ್ತು. ಸದ್ಯ ಸಾಹಿಲ್ ಜೈನ್ ವಶಕ್ಕೆ ಪಡೆದಿರುವ ಡಿಆರ್‌ಐ ಅಧಿಕಾರಿಗಳು ಸಾಹಿಲ್ ಜೈನ್ ತಂದೆ ಮಹೇಂದ್ರ ಜೈನ್‌ಗೂ ನೋಟೀಸ್ ಕೊಟ್ಟಿದ್ದಾರೆ. ಇದನ್ನೂ ಓದಿ: Uttar Pradesh | ಪತ್ನಿಯ ಅಕ್ರಮ ಸಂಬಂಧ ತಿಳಿದು ಪ್ರಿಯಕರನೊಂದಿಗೇ ಮದ್ವೆ ಮಾಡಿಸಿದ ಪತಿ

  • ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ – ರನ್ಯಾ ರಾವ್‌ ಜಾಮೀನು ಅರ್ಜಿ ಆದೇಶ ಇಂದು

    ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ – ರನ್ಯಾ ರಾವ್‌ ಜಾಮೀನು ಅರ್ಜಿ ಆದೇಶ ಇಂದು

    ಬೆಂಗಳೂರು: ಚಿನ್ನಕಳ್ಳಸಾಗಣೆ ಪ್ರಕರಣದಲ್ಲಿ (Gold Smuggling Case) ಬಂಧನಕ್ಕೆ ಒಳಗಾಗಿರುವ ಸ್ಯಾಂಡಲ್‌ವುಡ್‌ ನಟಿ ರನ್ಯಾ ರಾವ್ (Ranya Rao) ಜಾಮೀನು ಅರ್ಜಿ ಆದೇಶ ಇಂದು ಹೊರಬೀಳಲಿದೆ.

    14 ಕೆ.ಜಿ ಅಂದ್ರೆ 12 ಕೋಟಿ ಮೌಲ್ಯದ ಚಿನ್ನದ ಗಟ್ಟಿಗಳನ್ನು ದುಬೈನಿಂದ ಬೆಂಗಳೂರಿಗೆ (Bengaluru) ತಂದು ಬಂಧನಕ್ಕೆ ಒಳಗಾಗಿದ್ದ ರನ್ಯಾ ರಾವ್‌ಗೆ ಮ್ಯಾಜಿಸ್ಟ್ರೇಟ್ ಕೋರ್ಟ್ ಶಾಕ್ ನೀಡಿತ್ತು. ಇದನ್ನೂ ಓದಿ: ಐಎಎಸ್ ಅಧಿಕಾರಿ ಅಂತ ಹೇಳ್ಕೊಂಡು ದೇಶ್ಯಾದ್ಯಂತ 20ಕ್ಕೂ ಅಧಿಕ ಮಹಿಳೆಯರಿಗೆ ವಂಚನೆ

    ಮತ್ತೆ ಜಾಮೀನು ಕೋರಿ ಸೆಷನ್ಸ್ ಕೋರ್ಟ್ ಅಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ವಿಚಾರಣೆ ವೇಳೆ ಚಿನ್ನ ಕಳ್ಳ ಸಾಗಾಣೆ ಮಾಡೋದಕ್ಕೆ ಹವಾಲ ವಹಿವಾಟು ನಡೆಸಲಾಗುತ್ತಿತ್ತು ಎಂಬ ಗಂಭೀರ ಆರೋಪವನ್ನು ಡಿಆರ್‌ಐ ಮಾಡಿತ್ತು. ಸುದೀರ್ಘ ವಾದ – ಪ್ರತಿವಾದ ಆಲಿಸಿದ ನ್ಯಾಯಾಲಯ ಆದೇಶ ಕಾಯ್ದಿರಿಸಿತ್ತು. ಇಂದು ಆದೇಶ ಹೊರಬೀಳಲಿದೆ.  ಇದನ್ನೂ ಓದಿ: ಚಾಮರಾಜನಗರ| ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವ – 18 ಅಡಿ ಉದ್ದದ ಸರಳಲ್ಲಿ ಬಾಯಿ ಬೀಗ

  • Exclusive | ರನ್ಯಾ ಗೋಲ್ಡ್ ಸ್ಮಗ್ಲಿಂಗ್‌ ಕೇಸ್‌ – ಮೊದಲು ಚಿನ್ನ ಸಾಗಿಸಿದ್ದು ದಕ್ಷಿಣಾ ಆಫ್ರಿಕಾದಿಂದ ದುಬೈಗೆ!

    Exclusive | ರನ್ಯಾ ಗೋಲ್ಡ್ ಸ್ಮಗ್ಲಿಂಗ್‌ ಕೇಸ್‌ – ಮೊದಲು ಚಿನ್ನ ಸಾಗಿಸಿದ್ದು ದಕ್ಷಿಣಾ ಆಫ್ರಿಕಾದಿಂದ ದುಬೈಗೆ!

    ಬೆಂಗಳೂರು: ರನ್ಯಾ ರಾವ್‌ (Ranya Rao) ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಗೆದಷ್ಟೂ ರಹಸ್ಯಗಳು ಬಯಲಾಗುತ್ತಿವೆ. ಈ ನಡುವೆ ಟಾಲಿವುಡ್ ನಟ ತರುಣ್ ಬಂಧನಕ್ಕೆ ಡಿಆರ್‌ಐ ನೀಡಿದ ಕಾರಣಗಳೇನು ಅನ್ನೋ ಮಾಹಿತಿ ದಾಖಲೆಗಳ ಸಮೇತ ʻಪಬ್ಲಿಕ್‌ ಟಿವಿʼಗೆ (Public TV) ಲಭ್ಯವಾಗಿದೆ.

    ಹೌದು. ತರುಣ್ ಹಿನ್ನೆಲೆ ಏನು? ರನ್ಯಾ ಚಿನ್ನ. ತಂದಿದ್ದಕ್ಕೆ ತರುಣ್ ಬಂಧಿಸಿದ್ದು ಏಕೆ? ಈ ಎಲ್ಲ ಕಾರಣಗಳನ್ನು ಉಲ್ಲೇಖಿಸಿ ಡಿಆರ್‌ಐ (DRI) ಕೋರ್ಟ್‌ಗೆ ಸಲ್ಲಿಸಿದ ದಾಖಲೆಯ ಮಾಹಿತಿ ʻಪಬ್ಲಿಕ್‌ ಟಿವಿʼಗೆ ಲಭ್ಯವಾಗಿದೆ.

    ಒಮ್ಮೆ 4 ಕೆಜಿ ಒಮ್ಮೆ ಇನ್ಮೊಮ್ಮೆ 2 ಕೆಜಿ ಚಿನ್ನ, ಇದೆ ರೀತಿ ಸಾಗಿಸಿರುವುದಾಗಿ ತರುಣ್‌ (Tarun Konduru Raju) ಒಪ್ಪಿಕೊಂಡಿದ್ದಾರೆ. ತನ್ನ ಪಾಸ್ ಪೋರ್ಟ್ ಬಳಸಿ ಜಿನೀವಾಗೆ ಹೋಗುವುದಾಗಿ ಹೇಳಿ ಭಾರತಕ್ಕೆ ಚಿನ್ನ ತರುತ್ತಿದ್ದರು ಎಂಬುದಾಗಿ ಖುದ್ದು ತರುಣ್ ಕೊಂಡೂರು ರಾಜು ಹೇಳಿಕೆ ನೀಡಿದ್ದಾರೆ ಎಂದು ಡಿಆರ್‌ಐ ತನ್ನ ದಾಖಲೆಯಲ್ಲಿ ಉಲ್ಲೇಖಿಸಿದೆ.

    ತರುಣ್‌ ಬಂಧನವಾಗಿದ್ದು ಹೇಗೆ?
    ರನ್ಯಾ ರಾವ್ ಬಂಧನವಾದ ಬಳಿಕ ರನ್ಯಾ ಅಪಾರ್ಟ್ಮೆಂಟ್ ಮೇಲೆ ದಾಳಿ ಮಾಡಿದ್ದ ಡಿಆರ್‌ಐ ಹಲವು ರಹಸ್ಯಗಳನ್ನ ಪತ್ತೆಹಚ್ಚಿತ್ತು. ಇದೇ ವೇಳೆ ತರುಣ್‌ ಸಂಪರ್ಕದಲ್ಲಿರೋದು ಪತ್ತೆಯಾಗಿತ್ತು. ಕೂಡಲೇ ಲುಕ್‌ಔಟ್‌ ನೋಟಿಸ್‌ ಜಾರಿ ಮಾಡಿ ತರುಣ್‌ನನ್ನ ಡಿಆರ್‌ಐ ಹದರಾಬಾದ್‌ನಲ್ಲಿ ಬಂಧಿಸಿತ್ತು.

    ಇದು ಬರೀ ಭಾರತದ ಕಥೆಯಲ್ಲ:
    ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ ಬರೀ ದುಬೈ, ಭಾರತದ ಕಥೆಯಲ್ಲ. ಮೊದಲು ದಕ್ಷಿಣಾ ಅಫ್ರಿಕಾದಿಂದ ದುಬೈಗೆ ಚಿನ್ನ ಸಾಗಾಟ ಮಾಡುತ್ತಿದ್ದರಂತೆ. ನಂತರ ಅದನ್ನ ಜಿನೀವಾಗೆ ಸಾಗಿಸುವ ನೆಪದಲ್ಲಿ ಭಾರತಕ್ಕೆ ರವಾನೆ ಮಾಡುತ್ತಿದ್ದಂತೆ.

    ಅಷ್ಟೇ ಅಲ್ಲ ದಕ್ಷಿಣ ಅಫ್ರಿಕಾಗೆ ಹೋಗಲು ಅಲ್ಲಿಯ ಗೃಹ ಮಂತ್ರಾಲಯದಿಂದಲೂ ಆರೋಪಿಗಳು ಅನುಮತಿ ಪಡೆದಿದ್ದರು. ದುಬೈನಲ್ಲಿ ಇವರು ಶುರು ಮಾಡಿದ್ದ ವೈರಾ ಡೈಮಂಡ್ ಕಂಪನಿಗೆ ಮೊದಲು ಚಿನ್ನ ಸಾಗಾಟ ಮಾಡಿದ್ದರಂತೆ. ನಂತರ ಅಲ್ಲಿಂದ ಇದನ್ನ ಭಾರತಕ್ಕೆ ತರುಣ್ ಅಮೇರಿಕ ಪಾಸ್ ಪೋರ್ಟ್ ಹಾಗೂ ರನ್ಯಾಗಿದ್ದ ಪ್ರೊಟೋಕಾಲ್ ಬಳಸಿ ರವಾನೆ ಮಾಡಿದ್ದರಂತೆ. ಖುದ್ದು ಈ ಬಗ್ಗೆ ತರುಣ್ ಕೊಂಡೂರು ರಾಜು ಹೇಳಿಕೆ ದಾಖಲಿಸಿದ್ದಾರೆ ಎಂದು ಡಿಆರ್‌ಐ ತನ್ನ ವರದಿಯಲ್ಲಿ ತಿಳಿಸಿದೆ ಎಂಬ ಮಾಹಿತಿ ಪಬ್ಲಿಕ್‌ ಟಿವಿಗೆ ಲಭ್ಯವಾಗಿದೆ.