Tag: Ranya Rao

  • Exclusive: ನಟಿ ರನ್ಯಾ ರಾವ್‌ಗೆ ಬರೋಬ್ಬರಿ 102 ಕೋಟಿ ರೂ. ದಂಡ

    Exclusive: ನಟಿ ರನ್ಯಾ ರಾವ್‌ಗೆ ಬರೋಬ್ಬರಿ 102 ಕೋಟಿ ರೂ. ದಂಡ

    – 127 ಕೆಜಿ ಚಿನ್ನ ಅಕ್ರಮ ಸಾಗಾಟ ತನಿಖೆಯಲ್ಲಿ ಸಾಬೀತು

    ಬೆಂಗಳೂರು: ಸ್ಯಾಂಡಲ್‌ವುಡ್‌ ನಟಿ ರನ್ಯಾ ರಾವ್‌ಗೆ ಡಿಆರ್‌ಐ ಶಾಕ್‌ ನೀಡಿದೆ. 127 ಕೆಜಿ ಚಿನ್ನ ಅಕ್ರಮ ಸಾಗಾಟ ಸಾಬೀತಾದ ಹಿನ್ನೆಲೆ ನಟಿಗೆ 102 ಕೋಟಿ ರೂ. ದಂಡ ವಿಧಿಸಿದೆ.

    127 ಕೆಜಿ ಚಿನ್ನ ಅಕ್ರಮ ಸಾಗಾಟ ಮಾಡಿರುವುದು ತನಿಖೆಯಲ್ಲಿ ಸಾಬೀತಾಗಿದೆ. ಡಿಆರ್‌ಐ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ 102 ಕೋಟಿ ರೂ. ಪಾವತಿ ಮಾಡುವಂತೆ ರನ್ಯಾ ರಾವ್‌ಗೆ ಡಿಆರ್‌ಐ ಶೋಕಾಸ್‌ ನೋಟಿಸ್‌ ನೀಡಿದೆ.

    ನಾಲ್ವರು ಆರೋಪಿಗಳಿಗೂ ಡಿಆರ್‌ಐ ಶೋಕಾಸ್ ನೋಟಿಸ್ ನೀಡಿದೆ. ಈಗಾಗಲೇ ಇ.ಡಿ 37 ಕೋಟಿಯಷ್ಟು ಆಸ್ತಿ ಜಪ್ತ ಮಾಡಿದೆ. ಆಸ್ತಿ ಕಳೆದುಕೊಂಡು ಖಾಲಿ ಕೈಯಾಗಿರುವ ರನ್ಯಾ ರಾವ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ದಂಡ ಸಮೇತ 102 ಕೋಟಿ ಹಣ ಸಂದಾಯ ಮಾಡಲು ನೋಟಿಸ್ ಕೊಡಲಾಗಿದೆ.

    ಸದ್ಯ ಕಾಫಿಪೋಸಾ ಅಡಿಯಲ್ಲಿ ರನ್ಯಾ ರಾವ್ ಬಂಧನ ಆಗಿದೆ. ಡಿಆರ್‌ಐ ತನಿಖೆಯಲ್ಲಿ ದುಬೈನಿಂದ ಚಿನ್ನ ವಹಿವಾಟು ಮಾಡಿರುವುದು ಸಾಬೀತಾಗಿದೆ. 127 ಕೆಜಿ ಚಿನ್ನವನ್ನು 1 ವರ್ಷದಲ್ಲಿ ನಟಿ ಬೆಂಗಳೂರಿಗೆ ತಂದಿದ್ದರು.

  • ರನ್ಯಾರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಡಿಆರ್‌ಐ ಅಧಿಕಾರಿಗಳಿಂದ ರಾಮಚಂದ್ರ ರಾವ್ ವಿಚಾರಣೆ

    ರನ್ಯಾರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಡಿಆರ್‌ಐ ಅಧಿಕಾರಿಗಳಿಂದ ರಾಮಚಂದ್ರ ರಾವ್ ವಿಚಾರಣೆ

    – ಮತ್ತೆ ನೋಟಿಸ್ ನೀಡಲು ತಯಾರಿ

    ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ರನ್ಯಾರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ (Ranya Rao Gold Smuggling Case) ಮತ್ತೆ ಸದ್ದು ಮಾಡುತ್ತಿದೆ. ಈಗಾಗಲೇ ಕಾಫಿಪೋಸಾ ಕಾಯ್ದೆಯಡಿ ಜೈಲು ಸೇರಿರೋ ರನ್ಯಾರಾವ್ ವಿರುದ್ಧ ಡಿಆರ್‌ಐ ತನ್ನ ತನಿಖೆಯನ್ನು ಮುಂದುವರೆಸಿದೆ. ಇದು ಕೇವಲ ರನ್ಯಾರಾವ್‌ಗೆ ಮಾತ್ರ ಅಲ್ಲ ಅವರ ತಂದೆ ರಾಮಚಂದ್ರರಾವ್‌ಗೂ ಬಿಸಿ ತಟ್ಟಿದೆ.

    ರಾಮಚಂದ್ರರಾವ್ ಅವರಿಗೆ ನೋಟಿಸ್ ಮಾಡಿದ್ದ ಡಿಆರ್‌ಐ (DRI) ಅಧಿಕಾರಿಗಳು ಒಂದೆರಡು ದಿನದ ಹಿಂದೆ ಅವರ ವಿಚಾರಣೆ ನಡೆಸಿದೆ. ಮ್ಯಾರಥಾನ್ ವಿಚಾರಣೆ ಮಾಡಿದ ಡಿಆರ್‌ಐ ಅಧಿಕಾರಿಗಳು ರನ್ಯಾರಾವ್‌ಗೆ ಮತ್ತು ರಾಮಚಂದ್ರರಾವ್‌ಗೆ ಇರೋ ಸಂಬಂಧ, ಚಿನ್ನ ಸಾಗಾಟ ಮಾಡೋ ಸಂದರ್ಭದಲ್ಲಿ ಸಹಾಯ ಮಾಡಲಾಗಿತ್ತಾ? ಪ್ರೋಟೋ ಕಾಲ್ ದುರ್ಬಳಕೆ ಮಾಡಿಕೊಂಡಿದ್ದರ ಬಗ್ಗೆ, ಜೊತೆಗೆ ಎರಡೇ ತಿಂಗಳಲ್ಲಿ 20ಕ್ಕೂ ಹೆಚ್ಚು ಬಾರಿ ದುಬೈಗೆ ಹೋಗಿ ಬಂದ ವಿಚಾರವನ್ನು ಸವಿರವಾಗಿ ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ಬಿ.ಎಲ್ ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ – ಮಹೇಶ್ ಶೆಟ್ಟಿ ತಿಮರೋಡಿ ಅರೆಸ್ಟ್‌

    ಆದರೆ ಮೂಲಗಳ ಮಾಹಿತಿ ಪ್ರಕಾರ, ಇವೆಲ್ಲಾ ಆರೋಪವನ್ನು ರಾಮಚಂದ್ರರಾವ್ ತಳ್ಳಿ ಹಾಕಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಡಿಆರ್‌ಐ ಮತ್ತೆ ನೋಟಿಸ್ ನೀಡಲು ತಯಾರಿ ನಡೆಸಿದೆ. ಇದನ್ನೂ ಓದಿ: ಟೈರ್ ಬ್ಲಾಸ್ಟ್ ಆಗಿ ಕಾಂಪೌಂಡ್ ಗೋಡೆಗೆ ಖಾಸಗಿ ಬಸ್ ಡಿಕ್ಕಿ – 10 ಮಂದಿಗೆ ಗಂಭೀರ ಗಾಯ

  • ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ – ನಟಿಗೆ ಒಂದು ವರ್ಷ ಜೈಲೇ ಗತಿ!

    ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ – ನಟಿಗೆ ಒಂದು ವರ್ಷ ಜೈಲೇ ಗತಿ!

    ಬೆಂಗಳೂರು: ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ (Gold Smuggling Case) ಬಂಧನಕ್ಕೆ ಒಳಗಾಗಿರುವ ಸ್ಯಾಂಡಲ್‌ವುಡ್‌ ನಟಿ ರನ್ಯಾ ರಾವ್‌ (Ranya Rao) ಒಂದು ‌ವರ್ಷ ಜೈಲಿನಲ್ಲೇ ಇರಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿದೆ.

    ಹೌದು, ರನ್ಯಾರಾವ್ ವಿರುದ್ಧ ಕಾಫಿಪೋಸಾ ಕಾಯ್ದೆಯನ್ನು (COFEPOSA Act) ಜಾರಿ ಮಾಡಲಾಗಿದೆ. ಹೀಗಾಗಿ ರನ್ಯಾರಾವ್ 1 ವರ್ಷ ಕಾಲ ಜೈಲಿನಲ್ಲೇ ಇರಬೇಕಾದ ಅನಿವಾರ್ಯ ಎದುರಾಗಿದೆ. ಒಂದು ವೇಳೆ ಜಾಮೀನು ನೀಡಿದ್ರೆ ವಿದೇಶಕ್ಕೆ ಹಾರುವ ಸಾಧ್ಯತೆಗಳಿದೆ, ಜೊತೆಗೆ ಸಾಕ್ಷ್ಯಗಳ ಮೇಲೂ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ರನ್ಯಾ ವಿರುದ್ಧ ಕಾಫಿಪೋಸಾ ಜಾರಿ ಮಾಡಿ ಕಾಫಿಪೋಸಾ ಅಡ್ವೈಸರಿ ಬೋರ್ಡ್ ಆದೇಶ ಹೊರಡಿಸಿದೆ. ಇದನ್ನೂ ಓದಿ: ಗದಗ | ವಿಚಿತ್ರ ಲವ್‌ಜಿಹಾದ್ ಪ್ರಕರಣ – ಬಲವಂತವಾಗಿ ಹಿಂದೂ ಯುವಕನ ಮತಾಂತರ ಮಾಡಿಸಿರೋ ಆರೋಪ

    ಕಾಫಿಪೋಸಾ ಅನ್ವಯ ರನ್ಯಾ ರಾವ್‌ ಹಾಗೂ ಇತರ ಆರೋಪಿಗಳು ಒಂದು ವರ್ಷ ಜಾಮೀನಿಗೆ ಅರ್ಜಿ ಸಲ್ಲಿಸುವಂತಿಲ್ಲ. ಈ ಕುರಿತು ಕಾಫಿ ಪೋಸಾ ಅಡ್ವೈಸರಿ ಬೋರ್ಡ್ DRIಗೆ ಮಾಹಿತಿ ನೀಡಿದ್ದು, DRI ನಿಂದ ಜೈಲು ಅಧೀಕ್ಷಕರಿಗೆ ಮಾಹಿತಿ ರವಾನೆ ಮಾಡಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಹೂಡಿಕೆ: ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಜೊತೆ ರೋಲ್ಸ್‌ ರಾಯ್ಸ್‌ ಕಂಪನಿ ಮಾತುಕತೆ

    ಏನಿದು ಕಾಫಿಪೋಸಾ ಕಾಯ್ದೆ?
    ಕಾಫಿಪೋಸಾ ಎಂದರೆ ವಿದೇಶಿ ವಿನಿಮಯ ನಿಯಂತ್ರಣ ಹಾಗೂ ಕಳ್ಳ ಸಾಗಾಣಿಕೆ ತಡೆ ಕಾಯ್ದೆಯಾಗಿದೆ. ಈ ಕಾಫಿಪೋಸಾ ಕಾಯ್ದೆಯನ್ನು ಕಳ್ಳಸಾಗಣೆ ಮಾಡುವವರ ವಿರುದ್ಧ ಹಾಕಲಾಗುತ್ತದೆ. ಆರೋಪಿಯು ಜಾಮೀನು ಪಡೆಯಬಾರದು ಎಂಬುದು ಇದರ ಮೂಲ ಉದ್ದೇಶವಾಗಿದೆ. ಆರೋಪಿಯು ಜಾಮೀನು ಪಡೆದು ಹೊರಗೆ ಬಂದರೆ ನಿರಂತರವಾಗಿ ಮತ್ತೆ ಕಳ್ಳ ಸಾಗಾಣಿಕೆ ಮಾಡುತ್ತಾರೆ. ಅಲ್ಲದೇ ಜೈಲಿನಿಂದ ಬಂದ ಬಳಿಕ ತಪ್ಪಿಸಿಕೊಳ್ಳಬಹುದು. ತನಿಖೆಗೆ ಸರಿಯಾಗಿ ಸಹಕಾರ ಕೊಡದೇ, ನಿರಂತರವಾಗಿ ಸ್ಮಗ್ಲಿಂಗ್‌ನಲ್ಲಿ ಮುಂದುವರೆಯುತ್ತಾರೆ ಎಂದು ಕಾಯ್ದೆ ಜಾರಿಗೊಳಿಸಲಾಗುತ್ತದೆ. ಇದನ್ನೂ ಓದಿ: ಕೇರಳ ನರ್ಸ್‌ ತಪ್ಪಿಗೆ ಕ್ಷಮೆಯಿಲ್ಲ, ಗಲ್ಲಿಗೇರಿಸಲೇಬೇಕು: ಕೊಲೆಯಾದ ಯೆಮನ್‌ ವ್ಯಕ್ತಿ ಸಹೋದರ ಪ್ರತಿಕ್ರಿಯೆ

  • ರನ್ಯಾ ರಾವ್‌ಗೆ ಸೇರಿದ 34.12 ಕೋಟಿ ಮೌಲ್ಯದ ಆಸ್ತಿ ಜಪ್ತಿ

    ರನ್ಯಾ ರಾವ್‌ಗೆ ಸೇರಿದ 34.12 ಕೋಟಿ ಮೌಲ್ಯದ ಆಸ್ತಿ ಜಪ್ತಿ

    ನವದೆಹಲಿ/ಬೆಂಗಳೂರು: ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣಕ್ಕೆ (Gold Smuggling Case) ಸಂಬಂಧಿಸಿದಂತೆ ರನ್ಯಾ ರಾವ್‌ಗೆ (Ranya Rao) ಸಂಬಂಧಿಸಿದಂತೆ ಬೆಂಗಳೂರು ಮತ್ತು ತುಮಕೂರಿನಲ್ಲಿರುವ ಒಟ್ಟು 34.12 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ED) ಮುಟ್ಟುಗೋಲು ಹಾಕಿದೆ.

    ವಿಕ್ಟೋರಿಯಾ ಲೇಔಟ್ ಮನೆ, ಅರ್ಕಾವತಿ ಲೇಔಟ್ ನ ಪ್ಲಾಟ್, ಶಿರಾದ ಇಂಡಸ್ಟ್ರಿಯಲ್ ಲ್ಯಾಂಡ್, ಆನೇಕಲ್ ನ ಕೃಷಿ ಭೂಮಿ ಸೇರಿದಂತೆ 34.12 ಕೋಟಿ ರೂ. ಆಸ್ತಿಯನ್ನು ಇಡಿ ವಶಕ್ಕೆ ಪಡೆದಿದೆ. ಇದನ್ನೂ ಓದಿ: ಮಳೆ ಪ್ರಮಾಣದಲ್ಲಿ ಚಿರಾಪುಂಜಿ, ಆಗುಂಬೆಯನ್ನು ಹಿಂದಿಕ್ಕಿದ ಉಡುಪಿ

     

    ಇಡಿ ಹೇಳಿದ್ದೇನು?
    ರನ್ಯಾ ರಾವ್ ಮತ್ತು ತರುಣ್ ಕೊಂಡೂರು ರಾಜು ಮತ್ತು ಇತರರು ದುಬೈ, ಉಗಾಂಡಾ ಮತ್ತು ಬೇರೆ ದೇಶಗಳಲ್ಲಿರುವ ಪೂರೈಕೆದಾರರಿಂದ ಚಿನ್ನವನ್ನು ಖರೀದಿಸಿ ಹವಾಲಾ ಮಾರ್ಗದ ಮೂಲಕ ನಗದು ಹಣವನ್ನು ಪಾವತಿಸುತ್ತಿದ್ದರು. ಇದನ್ನೂ ಓದಿ: ಟ್ರಂಪ್ ಬಿಗ್ ಬ್ಯೂಟಿಫುಲ್ ಬಿಲ್‌ಗೆ ಒಪ್ಪಿಗೆ ಭಾರತೀಯರಿಗೂ ಕಾದಿದೆ ಆಘಾತ

    ಕಳ್ಳಸಾಗಣೆ ಮಾಡಿದ ಚಿನ್ನವನ್ನು ಭಾರತದೊಳಗೆ ಆಭರಣ ವ್ಯಾಪಾರಿಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೆ ನಗದು ರೂಪದಲ್ಲಿ ಮಾರಾಟ ಮಾಡಲಾಗಿತ್ತು. ಈ ಹಣ ಮತ್ತೆ ಚಿನ್ನ ತರಲು ಬಳಕೆಯಾಗುತ್ತಿತ್ತು.

    ವಶಪಡಿಸಿಕೊಂಡ ಮೊಬೈಲ್ ಫೋನ್‌ಗಳು ಮತ್ತು ಡಿಜಿಟಲ್ ಸಾಧನಗಳ ಮೂಲಕ ವಿದೇಶದಲ್ಲಿರುವ ವಿದೇಶಿ ಚಿನ್ನದ ಪೂರೈಕೆದಾರರು, ಹವಾಲಾ ನಿರ್ವಾಹಕರು ಮತ್ತು ದುಬೈ ಮೂಲದ ಕಸ್ಟಮ್ಸ್ ಏಜೆಂಟ್‌ಗಳೊಂದಿಗೆ ಆರೋಪಿಗಳು ಸಂವಹನ ನಡೆಸಿರುವುದು ದೃಢಪಟ್ಟಿದೆ ಎಂದು ಇಡಿ ಹೇಳಿದೆ.

  • ಬೇರೆ ಬ್ಯಾರಕ್‌ಗೆ ಶಿಫ್ಟ್‌ ಮಾಡಿ- ರನ್ಯಾ ರಾವ್‌ಗೆ ಮಹಿಳಾ ಕೈದಿಗಳಿಂದಲೇ ಕಿರುಕುಳ!

    ಬೇರೆ ಬ್ಯಾರಕ್‌ಗೆ ಶಿಫ್ಟ್‌ ಮಾಡಿ- ರನ್ಯಾ ರಾವ್‌ಗೆ ಮಹಿಳಾ ಕೈದಿಗಳಿಂದಲೇ ಕಿರುಕುಳ!

    ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ (Gold Smuggling Case) ಸಿಕ್ಕಿಬಿದ್ದು ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟಿ ರನ್ಯಾರಾವ್‌ಗೆ (Ranya Rao) ಜೈಲಿನಲ್ಲಿ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಿದೆಯಂತೆ.

    ಮೊದ ಮೊದಲು ಜೈಲು, ಅಲ್ಲಿನ ಊಟ, ಸೆಟ್ ಆಗದೇ ಪರದಾಡಿದ್ದರು. ಆನಂತರ ದಿನ ಕಳೆದಂತೆ ಜೈಲಿನ ವಾತಾವರಣ, ಅಲ್ಲಿನ ಊಟ, ಅಲ್ಲಿನ ಸಿಬ್ಬಂದಿ ವರ್ತನೆಗೆ ಒಗ್ಗಿಕೊಂಡಿದ್ದಾರೆ. ಎಲ್ಲಾ ಸರಿಯಾಯ್ತು ಎನ್ನುವಷ್ಟರಲ್ಲಿ ರನ್ಯಾ ರಾವ್ ಇರುವ ಜೈಲಿನ ಬ್ಯಾರಕ್‌ನಲ್ಲಿ ಮಹಿಳಾ ಕೈದಿಗಳ ಕಾಟ ಶುರುವಾಗಿದೆ.

    ರನ್ಯಾ ರಾವ್‌ಗೆ ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿರುವ ಸಹ ಮಹಿಳಾ ಕೈದಿಗಳಿಂದ ಕಿರುಕುಳ ನಡೆಯುತ್ತಿದೆ ಎಂಬ ಗಂಭೀರ ಆರೋಪ ಬಂದಿದೆ. ಸಹ ಕೈದಿಗಳು ರನ್ಯಾರಾವ್‌ಗೆ ಚಿನ್ನ ಕಳ್ಳಿ, ಏನ್ ಸಮಾಚಾರ? ಹೇಗಿದೆ ಜೈಲು ಅಂತಾ ಹೀಯಾಳಿಸಿ ಮಾತನಾಡುತ್ತಿದ್ದಾರೆ. ಇದರಿಂದ ನೊಂದ ನಟಿ ರನ್ಯಾ ರಾವ್ ಜೈಲಿನ ಸಿಬ್ಬಂದಿ ಬಳಿ ಬೇರೆಯೊಂದು ಬ್ಯಾರಕ್‌ಗೆ ಶಿಫ್ಟ್ ಮಾಡಿ ಅಂತಾ ಮನವಿ ಮಾಡಿದ್ದಾಳೆ.

    ರನ್ಯಾರಾವ್ ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಬೇರೊಂದು ಬ್ಯಾರಕ್‌ಗೆ ಶಿಫ್ಟ್ ಮಾಡಲು ಸಿದ್ದತೆ ನಡೆಸಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ.

  • ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಜುಲೈ ಮೊದಲ ವಾರಕ್ಕೆ ವಿಚಾರಣೆ ಮುಂದೂಡಿಕೆ

    ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಜುಲೈ ಮೊದಲ ವಾರಕ್ಕೆ ವಿಚಾರಣೆ ಮುಂದೂಡಿಕೆ

    ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ (Ranya Rao) ಗೋಲ್ಡ್ ಸ್ಮಗ್ಲಿಂಗ್ (Gold Smuggling) ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಹೈಕೋರ್ಟ್ ಅರ್ಜಿ ವಿಚಾರಣೆ ನಡೆಸಿದ್ದು, ಜುಲೈ ಮೊದಲ ವಾರಕ್ಕೆ ವಿಚಾರಣೆ ಮುಂದೂಡಿದೆ.

    ರನ್ಯಾರಾವ್ ತಾಯಿ ರೋಹಿಣಿ ಹೈಕೋರ್ಟ್‌ಗೆ (High Court) ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಕೆ ಮಾಡಿದ್ದರು. ಡಿಆರ್‌ಐ (DRI) ಅಧಿಕಾರಿಗಳು ನನ್ನ ಮಗಳನ್ನು ಅಕ್ರಮ ಬಂಧನದಲ್ಲಿ ಇರಿಸಿದ್ದಾರೆ. ಈಗಾಗಲೇ ರನ್ಯಾಗೆ ಜಾಮೀನು ಮಂಜೂರಾಗಿದೆ ಎಂದು ಅರ್ಜಿ ಸಲ್ಲಿಸಲಾಗಿತ್ತು. ಆದರೆ ಇದಕ್ಕೆ ಹೈಕೋರ್ಟ್ ಅಲ್ಲಿ ಆಕ್ಷೇಪಣೆ ಎತ್ತಿದ ನ್ಯಾಯಾಲಯ ರನ್ಯಾ ಸೇರಿದಂತೆ 4 ಆರೋಪಿಗಳ ವಿರುದ್ಧ ಕಾಫೆಪೋಸಾ ಆಕ್ಟ್ ಹಾಕಲಾಗಿದೆ. ಕಾಫೆಪೋಸಾ ಇತ್ಯರ್ಥ ಮಾಡೋದು ಸಲಹಾ ಮಂಡಳಿ ಅಲ್ಲಿ ತೀರ್ಮಾನ ಆಗಬೇಕಿದೆ ಎಂದು ಹೈಕೋರ್ಟ್ ಗೆ ಮಾಹಿತಿ ನೀಡಲಾಗಿದೆ. ಇದನ್ನೂ ಓದಿ: ಆನ್‌ಲೈನ್‌ನಲ್ಲಿ ತರಿಸಿದ್ದ ಕೇಕ್ ತಿಂದು 6ರ ಮಗು ಸಾವು?

    ಇನ್ನು ರನ್ಯಾ ರಾವ್ ಪರ ವಕೀಲರು ಸಲಹಾ ಮಂಡಳಿಯಲ್ಲಿ ನಾಳೆ ಅರ್ಜಿ ವಿಚಾರಣೆಗೆ ಬರುತ್ತದೆ ಎಂದಿದ್ದಾರೆ. ಇದನ್ನು ಗಮನಿಸಿದ ಹೈಕೋರ್ಟ್ ಸಲಹಾ ಮಂಡಳಿಯಲ್ಲಿ ಅರ್ಜಿಯ ಸ್ಥಿತಿಗತಿ ನೋಡಿ ವಿಚಾರಣೆ ಮುಂದುವರೆಸೋದಾಗಿ ಹೇಳಿ ವಿಚಾರಣೆಯನ್ನು ಮುಂದೂಡಿಕೆ ಮಾಡಿದೆ. ಇದನ್ನೂ ಓದಿ: ಇರಾನಿನ ಪರಮಾಣು ಘಟಕದ ಮೇಲೆ ಅಮೆರಿಕ 14 ಸಾವಿರ ಕೆಜಿ ತೂಕದ ಬಾಂಬ್‌ ಹಾಕುತ್ತಾ?

  • ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ – DRI, ED ಬಳಿಕ ಈಗ IT ಎಂಟ್ರಿ

    ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ – DRI, ED ಬಳಿಕ ಈಗ IT ಎಂಟ್ರಿ

    ಬೆಂಗಳೂರು: ರನ್ಯಾ ರಾವ್ (Ranya Rao) ಚಿನ್ನ ಕಳ್ಳ ಸಾಗಾಣಿಕೆ (Gold Smuggling) ಪ್ರಕರಣಕ್ಕೆ ಸಂಬಂಧಿಸಿದಂತೆ ಕಂದಾಯ ಗುಪ್ತಚರ ನಿರ್ದೇಶನಾಲಯ (DRI), ಜಾರಿ ನಿರ್ದೇಶನಾಲಯದ (ED) ಬಳಿಕ ಈಗ ಆದಾಯ ತೆರಿಗೆ (Income Tax) ಇಲಾಖೆ ಎಂಟ್ರಿಯಾಗಿದೆ.

    ರನ್ಯಾ ರಾವ್ ಮತ್ತು ಮೂವರು ಆರೋಪಿಗಳ ವಿರುದ್ಧ ಐಟಿ ಪ್ರಕರಣ ದಾಖಲಿಸಿದೆ ಅಷ್ಟೇ ಅಲ್ಲದೇ 3 ದಿನಗಳ ಕಾಲ ಹೇಳಿಕೆ ದಾಖಲು ಮಾಡಲು ಕೋರ್ಟ್‌ನಿಂದ (Court) ಅನುಮತಿ ಪಡೆದಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಹಾಸನ ಮೂಲದ ಯುವಕ ಹೃದಯಾಘಾತಕ್ಕೆ ಬಲಿ

     

    ಜೂನ್‌ 11 ರಿಂದ 13 ರವರೆಗೆ ಪರಪ್ಪನ ಅಗ್ರಹಾರದಲ್ಲಿ (Parappana Agrahara) ಹೇಳಿಕೆ ದಾಖಲಿಸಲು ಕೋರ್ಟ್‌ ಅನುಮತಿ ನೀಡಿದೆ. ಕೋರ್ಟ್‌ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಆರೋಪಿಗಳ ಹೇಳಿಕೆಯನ್ನು ಐಟಿ ದಾಖಲು ಮಾಡಿದೆ.

    ಮಾರ್ಚ್​ 3ರ ರಾತ್ರಿ ದುಬೈನಿಂದ ಎಮಿರೇಟ್ಸ್ ಏರ್‌ಲೈನ್ಸ್ ವಿಮಾನದಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಟಿಯನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್‌ಐ)ದ ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದ್ದು, ಈ ವೇಳೆ ನಟಿ ಬಳಿ 14.80 ಕೆಜಿ ಚಿನ್ನ ಪತ್ತೆಯಾಗಿತ್ತು. ತಕ್ಷಣ ನಟಿಯನ್ನು ಬಂಧಿಸಲಾಗಿತ್ತು.

  • ರನ್ಯಾರಾವ್‌ಗೆ ಪರಮೇಶ್ವರ್ ಶಿಕ್ಷಣ ಸಂಸ್ಥೆ ಸಾಲ ಕೊಟ್ಟಿರಬಹುದು: ರಾಮಲಿಂಗಾ ರೆಡ್ಡಿ

    ರನ್ಯಾರಾವ್‌ಗೆ ಪರಮೇಶ್ವರ್ ಶಿಕ್ಷಣ ಸಂಸ್ಥೆ ಸಾಲ ಕೊಟ್ಟಿರಬಹುದು: ರಾಮಲಿಂಗಾ ರೆಡ್ಡಿ

    ಬೆಂಗಳೂರು: ರನ್ಯಾರಾವ್(Ranya Rao), ಪರಮೇಶ್ವರ್ ಶಿಕ್ಷಣ ಸಂಸ್ಥೆಗೆ ಹಣ ಕೊಟ್ಟರೆ ತಪ್ಪಾಗುತ್ತೆ. ಆದ್ರೆ ರನ್ಯಾರಾವ್ ಅವರಿಗೆ ಶಿಕ್ಷಣ ಸಂಸ್ಥೆ ಸಾಲ ಕೊಟ್ಟಿರಬಹುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ(Ramalinga Reddy) ಹೇಳಿದರು.

    ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೀವು ಹೇಳ್ತಿರೋ 40 ಲಕ್ಷದ ಬಗ್ಗೆ ನನಗೆ ಗೊತ್ತಿಲ್ಲ. ರನ್ಯಾರಾವ್ ಪರಮೇಶ್ವರ್‌ಗೆ(Parameshwar) ಪರಿಚಯ ಇರಬಹುದು. ಅವರ ತಂದೆ ರಾಮಚಂದ್ರ ರಾವ್ ಐಪಿಎಸ್ ಅಧಿಕಾರಿ. ರನ್ಯಾರಾವ್ ಮದುವೆಗೆ ಎಲ್ಲರೂ ಹೋಗಿದ್ದಾರೆ. ರಾಮಚಂದ್ರ ರಾವ್ ಮಗನ ಮದುವೆಗೂ ಎಲ್ಲ ಹೋಗಿದ್ದಾರೆ. ವಿಪಕ್ಷದವರು ಹೋಗಿದ್ದಾರೆ. ಅದರಲ್ಲಿ ಏನಿದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಭಾರೀ ಮಳೆಗೆ ಬಿಬಿಎಂಪಿ ವ್ಯಾಪ್ತಿಯ 63 ಕೆರೆಗಳು ಸಂಪೂರ್ಣ ಭರ್ತಿ: ಪ್ರೀತಿ ಗೆಹ್ಲೋಟ್

    ಕೇಂದ್ರ ಸರ್ಕಾರವು ಐಟಿ ಹಾಗೂ ಇಡಿಯ ದುರ್ಬಳಕೆ ಮಾಡಿಕೊಳ್ತಿದೆ. ಪರಮೇಶ್ವರ್ ಶಿಕ್ಷಣ ಸಂಸ್ಥೆ ಮೇಲಿನ ಇಡಿ ದಾಳಿ(ED Raid) ರಾಜಕೀಯ ಪ್ರೇರಿತ ಎಂದು ಕಿಡಿಕಾರಿದರು.

  • ರನ್ಯಾ ಮದುವೆಗೆ ಪರಮೇಶ್ವರ್‌ 20 ಲಕ್ಷ ಗಿಫ್ಟ್‌ ಕೊಟ್ಟಿರಬಹುದು: ಡಿಕೆಶಿ

    ಬೆಂಗಳೂರು: ರನ್ಯಾ (Parameshwara) ಮದುವೆಗೆ ಪರಮೇಶ್ವರ್‌ (Parameshwara) 15- 20 ಲಕ್ಷ ರೂ. ಗಿಫ್ಟ್‌ ಕೊಟ್ಟಿರಬಹುದು ಎಂದು ಡಿಸಿಎಂ ಡಿ.ಕೆ ಶಿವಕುಮಾರ್‌ (D.K Shivakumar) ಹೇಳಿದ್ದಾರೆ.

    ವಿಧಾನಸೌಧದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಪರಮೇಶ್ವರ್ ಮಾಲೀಕತ್ವದ ಶಿಕ್ಷಣ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯ(ED) ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಅವರು, ರನ್ಯಾಗೆ 15 ರಿಂದ 25 ಲಕ್ಷ ರೂ. ನೀಡಿದ್ದಾರಂತೆ. ಆಕೆಯ ಮದುವೆಗೆ ಗಿಫ್ಟ್‌ ಮಾಡಿರಬಹುದು. ನಾನು ಅವರ ಬಳಿ ಮಾತಾಡಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಗೃಹ ಸಚಿವ ಪರಂ ಕೇಸ್‌ಗೆ ರನ್ಯಾರಾವ್ ಲಿಂಕ್?

    ಪರಮೇಶ್ವರ್‌ ಆರೋಗ್ಯವಾಗಿದ್ದು, ಕ್ಯಾಬಿನೆಟ್‌ಗೆ ಬರುತ್ತಾರೆ. ಅವರ ಮೇಲೆ ಸಾಕಷ್ಟು ಜವಾಬ್ದಾರಿ ಇದೆ. ಅವರು ಗೌರವಾನ್ವಿತ ವ್ಯಕ್ತಿ, ನಾನು ಅವರ ಜೊತೆ ಇರುತ್ತೇನೆ. ಇನ್ನೂ, ರನ್ಯಾ ತಪ್ಪು ಮಾಡಿದ್ರೆ ಕ್ರಮ ಆಗಲಿ ಎಂದಿದ್ದಾರೆ.

    ಇಡಿ ದಾಳಿ ವಿಚಾರವಾಗಿ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌, ಬುಧವಾರ ಸುದ್ದಿಗೋಷ್ಠಿ ನಡೆಸಿ, ರನ್ಯಾರಾವ್ ವಿದೇಶದಿಂದ ಚಿನ್ನ ತಂದು ಹಲವು ಪ್ರಮುಖರಿಗೆ ನೀಡಿರುವ ಮಾಹಿತಿಯಿದೆ. ಈ ಹಣ ಸಿದ್ದಾರ್ಥ ಶಿಕ್ಷಣ ಸಂಸ್ಥೆಯಲ್ಲಿ ಹೂಡಿಕೆ ಮಾಡುತ್ತಿದ್ದ ಬಗ್ಗೆ ಇಡಿ ಮಾಹಿತಿ ಸಂಗ್ರಹಿಸಿರಬಹುದು ಎಂದು ಆರೋಪಿಸಿದ್ದರು. ಇದನ್ನೂ ಓದಿ: ಪರಂಗೆ ಇಡಿ ಈಟಿ – 140 ಕೋಟಿ ವ್ಯವಹಾರ ನಡೆದ್ರೂ 95 ಕೋಟಿಗೆ ಖರೀದಿ?

  • ಪರಂಗೆ ಇಡಿ ಈಟಿ – 140 ಕೋಟಿ ವ್ಯವಹಾರ ನಡೆದ್ರೂ 95 ಕೋಟಿಗೆ ಖರೀದಿ?

    ಪರಂಗೆ ಇಡಿ ಈಟಿ – 140 ಕೋಟಿ ವ್ಯವಹಾರ ನಡೆದ್ರೂ 95 ಕೋಟಿಗೆ ಖರೀದಿ?

    ತುಮಕೂರು: ಬುಧವಾರ ಬೆಳ್ಳಂಬೆಳಗ್ಗೆ ಸಚಿವ ಜಿ.ಪರಮೇಶ್ವರ್ (G Parameshwar) ಶಿಕ್ಷಣ ಸಂಸ್ಥೆ ಮೇಲೆ ಇಡಿ (ED)ದಾಳಿ ನಡೆಸಿದೆ. ಈ ನಡುವೆ ಪರಮೇಶ್ವರ್ ಕ್ರಯ ಮಾಡಿದ್ದ ಎಚ್.ಎಮ್.ಎಸ್ ಕಾಲೇಜಿನ ಕ್ರಯಪತ್ರವನ್ನು ವಶಕ್ಕೆ ಪಡಿಸಿಕೊಂಡಿರುವ ಇಡಿ ಅಧಿಕಾರಿಗಳು, ಶೋಧಕಾರ್ಯವನ್ನು ಮುಂದುವರಿಸಿದ್ದಾರೆ.

    ಪರಮೇಶ್ವರ್ ಒಡೆತನದ ತುಮಕೂರಿನ ಹೆಗ್ಗೆರೆಯಲ್ಲಿರುವ ಸಿದ್ದಾರ್ಥ ಮೆಡಿಕಲ್ ಕಾಲೇಜು, ಸಿದ್ದಾರ್ಥ ಇಂಜಿನಿಯರಿಂಗ್ ಕಾಲೇಜು ಮತ್ತು ನೆಲಮಂಗಲದ ಟಿ. ಬೇಗೂರು ಬಳಿ ಇರುವ ಮೆಡಿಕಲ್ ಕಾಲೇಜುಗಳ ಮೇಲೆ ಇಡಿ ದಾಳಿ ನಡೆಸಿದೆ. ಈ ವೇಳೆ ಕಾಲೇಜಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದೆ. ಇದನ್ನೂ ಓದಿ: ಮೇ 22ಕ್ಕೆ ಬಿಕನೇರ್ ವಾಯುನೆಲೆಗೆ ಪ್ರಧಾನಿ ಮೋದಿ ಭೇಟಿ

    ತುಮಕೂರಿನಲ್ಲಿರುವ ತಾಂತ್ರಿಕ ಕಾಲೇಜಿನಲ್ಲಿ ಶೋಧ ನಡೆಸಿದ ಅಧಿಕಾರಿಗಳಿಗೆ ಆಸ್ತಿಯ ಕ್ರಯಪತ್ರವೊಂದು ಸಿಕ್ಕಿದೆ ಎನ್ನಲಾಗಿದೆ. ಜಿ ಪರಮೇಶ್ವರ್ ಮಾಜಿ ಶಾಸಕ ಶಫಿ ಅಹ್ಮದ್‌ರಿಂದ ಎಚ್.ಎಮ್.ಎಸ್ ಕಾಲೇಜು ಖರೀದಿಸಿದ್ದರು. ಸುಮಾರು 95 ಕೋಟಿ ರೂ. ಗೆ ಖರೀದಿ ಮಾಡಿದ್ದಾರೆ ಎಂದು ಕ್ರಯಪತ್ರದಲ್ಲಿ ನಮೂದಿಸಿದ್ದರೂ ಅಸಲಿಗೆ 140 ಕೋಟಿ ರೂ.ಗೆ ವ್ಯವಹಾರ ನಡೆದಿದೆ ಎನ್ನಲಾಗಿದೆ. ಪರಮೇಶ್ವರ್ ಸಂದಾಯ ಮಾಡಿದ್ದ ಹಣವನ್ನು ದುಬೈನಲ್ಲಿ ಇದ್ದ ಶಫಿ ಅಹ್ಮದ್ ಅವರ ಸಂಬಂಧಿ ಚಿನ್ನದ ವ್ಯಾಪಾರಿಗೆ ತಲುಪಿದೆ ಎನ್ನಲಾಗಿದೆ. ಇದು ರನ್ಯಾ ರಾವ್‌ಗೂ (Ranya Rao) ನಂಟಿದೆಯಾ ಎಂಬ ಆಯಾಮದಲ್ಲಿ ಇಡಿ ಅಧಿಕಾರಿಗಳು ತನಿಖೆ ಶುರುಮಾಡಿದ್ದಾರೆ. ಇದನ್ನೂ ಓದಿ: ಆಲಿಕಲ್ಲು ಹೊಡೆತಕ್ಕೆ ವಿಮಾನದ ಮುಂಭಾಗ ಹಾನಿ – ಶ್ರೀನಗರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಎಮರ್ಜೆನ್ಸಿ

    ಕೇವಲ ಎಚ್.ಎಮ್.ಎಸ್ ಕಾಲೇಜು ಒಂದೇ ಅಲ್ಲ, ನಗರದ ಪ್ರತಿಷ್ಠಿತ ಬಂಡಿಮನೆ ಕಲ್ಯಾಣಮಂಟಪವನ್ನೂ ಪರಮೇಶ್ವರ್ ಖರೀಸಿದ್ದಾರೆ ಎನ್ನಲಾಗಿದೆ. ಹಾಗೆಯೇ ಎಸ್ ಮಾಲನ್ನೂ ಖರೀದಿ ಮಾಡುವ ಬಗ್ಗೆ ಪ್ರಕ್ರಿಯೆ ನಡೆಯುತ್ತಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಖಲೆಗಳನ್ನು ಕಲೆ ಹಾಕುತ್ತಿದ್ದಾರೆ. ಇದರ ಜೊತೆ ಮೆಡಿಕಲ್ ಸೀಟ್ ಬ್ಲಾಕಿಂಗ್ ದಂಧೆ ಕೂಡ ಸಿದ್ದಾರ್ಥ ಮೆಡಿಕಲ್ ಕಾಲೇಜಿನಲ್ಲಿ ನಡೆಯುತ್ತಿದೆ ಎಂಬ ಆರೋಪದ ಆಯಾಮದಲ್ಲೂ ಶೋಧ ನಡೆದಿದೆ. ಇದನ್ನೂ ಓದಿ: ಆಂಧ್ರಕ್ಕೆ 4 ಕುಮ್ಕಿ ಆನೆಗಳನ್ನು ಹಸ್ತಾಂತರಿಸಿದ ಕರ್ನಾಟಕ

    ತುಮಕೂರಿನ ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳ ಜೊತೆ ನೆಲಮಂಗಲ ತಾಲೂಕಿನ ಸಿದ್ದಾರ್ಥ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ ಮೇಲೆಯೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸತತ 14 ಗಂಟೆಗಳ ಕಾಲ 7 ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ. ರಾತ್ರಿ ಕೂಡ ಎರಡೂ ಕಡೆಗಳಲ್ಲಿ ಶೋಧ ನಡೆದಿದೆ. ಇಂದು ಮುಂಜಾನೆ 6 ಗಂಟೆಯಿಂದಲೇ ಇಡಿ ಅಧಿಕಾರಿಗಳು ದಾಖಲೆ ಪರಿಶೀಲನೆಯಲ್ಲಿ ತೊಡಗಿದ್ದಾರೆ.. ಇದನ್ನೂ ಓದಿ: ರಾಜ್ಯದ ಪ್ರಭಾರ ಡಿಜಿ & ಐಜಿಪಿಯಾಗಿ ಎಂ.ಎ.ಸಲೀಂ ನೇಮಕ