Tag: Ranvit Shetty

  • ಗೋವುಗಳ ಜೊತೆ ಮಗನ ಹುಟ್ಟುಹಬ್ಬ ಆಚರಿಸಿದ ‘ಕಾಂತಾರ’ ಹೀರೋ ರಿಷಬ್ ಶೆಟ್ಟಿ

    ಗೋವುಗಳ ಜೊತೆ ಮಗನ ಹುಟ್ಟುಹಬ್ಬ ಆಚರಿಸಿದ ‘ಕಾಂತಾರ’ ಹೀರೋ ರಿಷಬ್ ಶೆಟ್ಟಿ

    ‘ಕಾಂತಾರ’ (Kantara) ಸೂಪರ್ ಸಕ್ಸಸ್ ನಂತರ ‘ಕಾಂತಾರ’ ಪಾರ್ಟ್ 2 ಸಿನಿಮಾದ ಸಿದ್ಧತೆಯಲ್ಲಿ ರಿಷಬ್ ಶೆಟ್ಟಿ (Rishab Shetty) ಬ್ಯುಸಿಯಾಗಿದ್ದಾರೆ. ಈ ನಡುವೆ ಮುದ್ದು ಮಗ ರಣ್ವೀತ್ ಶೆಟ್ಟಿ ಹುಟ್ಟುಹಬ್ಬವನ್ನ ಗೋಶಾಲೆಯಲ್ಲಿ ರಿಷಬ್ ದಂಪತಿ ಆಚರಿಸಿದ್ದಾರೆ. ಮಗನ ಬರ್ತ್‌ಡೇ (Birthday) ಹೇಗಿತ್ತು ಎಂದು ಈ ಕುರಿತ ವೀಡಿಯೋ ಕೂಡ ಹಂಚಿಕೊಂಡಿದ್ದಾರೆ.

    ‘ರಿಕ್ಕಿ’ (Ricky Film) ಸಿನಿಮಾ ಫಸ್ಟ್ ಡೇ ಶೋನಲ್ಲಿ ಪ್ರಗತಿ ಶೆಟ್ಟಿ (Pragathi Shetty) ಅವರ ಪರಿಚಯವಾಗಿತ್ತು. ಆ ಪರಿಚಯ ಪ್ರೀತಿಗೆ ತಿರುಗಿ, ಗುರುಹಿರಿಯರ ಸಮ್ಮತಿಯ ಮೇರೆಗೆ 2017ರಲ್ಲಿ ಕುಂದಾಪುರದಲ್ಲಿ ಮದುವೆಯಾದರು. ರಣ್ವೀತ್ ಮತ್ತು ರಾಧ್ಯ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಇತ್ತೀಚಿಗೆ ಮುದ್ದು ಮಗಳು ರಾಧ್ಯ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದರು. ಇದನ್ನೂ ಓದಿ:ಸಮಂತಾ ಫ್ಲಾಪ್‌ ಕ್ವೀನ್‌, ಆಕೆಗೆ ಮಾರ್ಕೆಟ್‌ ಇಲ್ಲ- ವಿಮರ್ಶಕನ ವಿವಾದಾತ್ಮಕ ಟ್ವೀಟ್‌

    ರಿಷಬ್ ದಂಪತಿಯ ಮೊದಲ ಮಗ ರಣ್ವೀತ್ ನಾಲ್ಕು ವರ್ಷಗಳು ಪೂರೈಸಿದ್ದು, ಬರ್ತ್‌ಡೇ  ವೀಡಿಯೋವನ್ನ ನಟ ಶೇರ್ ಮಾಡಿದ್ದಾರೆ. ಗೋವುಗಳ ಜೊತೆ ರಣ್ವೀತ್ ತುಂಟಾಟ ಹೇಗಿತ್ತು ಎಂದು ವೀಡಿಯೋದಲ್ಲಿ ನೋಡಬಹುದಾಗಿದೆ. ಈಗ ಮಗನ ಬರ್ತ್‌ಡೇಯನ್ನ ಮಗನ ಇಷ್ಟದಂತೆ ಗೋವುಗಳ ಜೊತೆ ಆಚರಿಸಿದ್ದಾರೆ.

    ರಿಷಬ್ ನಟನೆ, ನಿರ್ದೇಶನದ ‘ಕಾಂತಾರ’ ಪಾರ್ಟ್ 2 ಬಗ್ಗೆ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಿನಿಮಾಗಾಗಿ ಎದುರು ನೋಡ್ತಿದ್ದಾರೆ.

  • ರಿಷಬ್ ಮಗನಿಗೆ ಕೂಸುಮರಿ ಮಾಡಿದ ʻಕಾಂತಾರʼ ನಟಿ ಸಪ್ತಮಿ

    ರಿಷಬ್ ಮಗನಿಗೆ ಕೂಸುಮರಿ ಮಾಡಿದ ʻಕಾಂತಾರʼ ನಟಿ ಸಪ್ತಮಿ

    ಸ್ಯಾಂಡಲ್‌ವುಡ್‌ನ (Sandalwood) ಮೂಗುತಿ ಸುಂದರಿ ಸಪ್ತಮಿ ಗೌಡ (Saptami Gowda) ಮತ್ತೆ ಸುದ್ದಿಯಲ್ಲಿದ್ದಾರೆ. `ಕಾಂತಾರ’ (Kantara Film) ಸೂಪರ್ ಸಕ್ಸಸ್ ನಂತರ ನಾಯಕಿ ಸಪ್ತಮಿ, ರಿಷಬ್ ಶೆಟ್ಟಿ (Rishab Shetty) ಮಗನನ್ನು ಕೂಸುಮರಿ ಮಾಡಿ ಮುದ್ದಾಡಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

     

    View this post on Instagram

     

    A post shared by Sapthami Gowda ???? (@sapthami_gowda)

    `ಕಾಂತಾರ’ ಸಿನಿಮಾ ಮೂಲಕ ಪ್ಯಾನ್ ಸ್ಟಾರ್ ನಟಿ ಆಗಿ ಮಿರ ಮಿರ ಅಂತಾ ಮಿಂಚ್ತಿರುವ ಸಪ್ತಮಿ ಗೌಡ ಇದೀಗ ರಿಷಬ್ ಮಗ ರಣ್ವಿತ್ ಶೆಟ್ಟಿನ (Ranvit Shetty) ಭೇಟಿ ಆಗಿದ್ದಾರೆ. ಕೂಸುಮರಿ ಮಾಡಿ ರಿಷಬ್ ಮಗನ ಜೊತೆ ಒಂದೊಳ್ಳೆಯ ಸಮಯ ಕಳೆದಿದ್ದಾರೆ. ರಣ್ವಿತ್‌ಗೆ ಕೂಸುಮರಿ ಮಾಡ್ತಾ ಮುದ್ದಾಡಿದ್ದಾರೆ. ಈ ಫೋಟೋಗಳು ಇದೀಗ ಅಭಿಮಾನಿಗಳ ಗಮನ ಸೆಳೆದಿದೆ. ಇದನ್ನೂ ಓದಿ: ಬಿಗ್ ಬಾಸ್ ವೇದಿಕೆಯಲ್ಲಿ ಸಾನ್ಯಗೆ ಖಡಕ್ ಉತ್ತರ ಕೊಟ್ಟ ಕಿಚ್ಚ

    ತಮ್ಮ ಪೋಸ್ಟ್‌ಗೆ ಫನ್ ಡೇ ಔಟ್ ಫಾರ್ ಚಿನ್ನೀಸ್ ಎಂದು ಬರೆದುಕೊಂಡಿದ್ದಾರೆ. ಹಚ್ಚ ಹಸಿರಿನ ಪ್ರದೇಶದಲ್ಲಿ ಸಪ್ತಮಿ ಮತ್ತು ರಣ್ವಿತ್ ಎಂಜಾಯ್ ಮಾಡ್ತಿದ್ದಾರೆ. ಇದು ಚಿಕು-ಚಿನ್ನು ಸ್ಟೋರಿ, ಚಿಕ್ಕು- ಚಿನ್ನಿಗೆ ದೃಷ್ಟಿ ತಾಕಿಸಬೇಡಿ ಪ್ಲೀಸ್ ಎಂದು ನಟಿ ಅಡಿಬರಹ ನೀಡಿದ್ದಾರೆ.

     

    View this post on Instagram

     

    A post shared by Sapthami Gowda ???? (@sapthami_gowda)

    ಇನ್ನೂ `ಕಾಂತಾರ’ ಸಕ್ಸಸ್ ನಂತರ ನಟಿ ಸಪ್ತಮಿ ಗೌಡ ಇದೀಗ ಅಭಿಷೇಕ್ ಅಂಬರೀಶ್ (Abhishek Ambreesh) ನಟನೆಯ `ಕಾಳಿ’ (Kali) ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಅಂಬಿ ಪುತ್ರನಿಗೆ ಜೋಡಿಯಾಗಿ ನಟಿಸಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಶೆಟ್ರು ಮನೇಲಿ ‘ವರ್ಕ್ ಫ್ರಂ ಹೋಂ’ ಬಲು ಜೋರು – ಎಲ್ಲಾ ಕೊರೊನಾ ಮಹಿಮೆ

    ಶೆಟ್ರು ಮನೇಲಿ ‘ವರ್ಕ್ ಫ್ರಂ ಹೋಂ’ ಬಲು ಜೋರು – ಎಲ್ಲಾ ಕೊರೊನಾ ಮಹಿಮೆ

    ಬೆಂಗಳೂರು: ಕೊರೊನಾ ವೈರಸ್ ಪರಿಣಾಮ ಬಹುತೇಕ ಮಂದಿ ‘ವರ್ಕ್ ಫ್ರಂ ಹೋಂ’ ಮೊರೆ ಹೋಗಿದ್ದಾರೆ. ಹೀಗಾಗಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಮನೆಯಲ್ಲೂ ಕೂಡ ‘ವರ್ಕ್ ಫ್ರಂ ಹೋಂ’ ಬಲು ಜೋರಾಗಿದ್ದು, ಮಗನೊಂದಿಗೆ ಸಮಯ ಕಳೆಯೋದ್ರಲ್ಲಿ ಶೆಟ್ರು ಫುಲ್ ಬ್ಯುಸಿಯಾಗಿದ್ದಾರೆ.

    ಹೌದು. ಹೆಚ್ಚಾಗಿ ಸಿನಿಮಾ ಕೆಲಸದಲ್ಲಿ ಬ್ಯುಸಿ ಇರುತ್ತಿದ್ದ ರಿಷಬ್ ಅವರಿಗೆ ಸದ್ಯ ಕೊರೊನಾ ಎಫೆಕ್ಟ್ ನಿಂದ ಕೊಂಚ ಬ್ರೇಕ್ ಸಿಕ್ಕಿದೆ. ಆದ್ದರಿಂದ ತಮ್ಮ ಹುಟ್ಟೂರಿನಲ್ಲಿ ಕುಟುಂಬದ ಜೊತೆ ರಿಷಬ್ ಖುಷಿಯಿಂದ ಸಮಯ ಕಳೆಯುತ್ತಿದ್ದು, ತಮ್ಮ ಮಗ ರಣ್ವಿತ್‍ಗೆ ಸ್ನಾನ ಮಾಡಿಸುವ ಮುನ್ನ ಎಣ್ಣೆ ಹಚ್ಚುತ್ತಿರುವ ಕ್ಯೂಟ್ ಫೋಟೋವೊಂದನ್ನು ರಿಷಬ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

    https://twitter.com/shetty_rishab/status/1240672139495108613

    ‘ಊರೂರೇ ಖಾಲಿಯಾಗಿದೆ, ಆಫೀಸ್ ಬೀಗ ಹಾಕಿದೆ, ಸಿನಿಮಾದಿಂದ ಚಿಕ್ಕ ಬ್ರೇಕ್ ಸಿಕ್ಕಿದೆ. ಎಲ್ಲಾ ಆತಂಕಗಳನ್ನ ಹಿಂದೆ ಬಿಟ್ಟು ಹುಟ್ಟೂರಲ್ಲಿ, ನಾನು ಬೆಳೆದಿದ್ ಮನೇಲಿ, ಮಗರಾಯನಿಗೆ ಮಜ್ಜನ ನೀಡೋ ನೆಮ್ಮದಿನೇ ಬೇರೆ. ಒಟ್ಟಾರೆ ಎಲ್ಲರ ತರ ನಮ್ದೂ `ವರ್ಕ್ ಫ್ರಂ ಹೋಂ’ ಜೋರಾಗ್ ನಡೀತಿದೆ’ ಎಂದು ಬರೆದು ಮಗನಿಗೆ ಎಣ್ಣೆ ಹಚ್ಚುತ್ತಿರುವ ಫೋಟೋವನ್ನು ರಿಷಬ್ ಟ್ವೀಟ್ ಮಾಡಿದ್ದಾರೆ.

    https://twitter.com/rakshitshetty/status/1240653722989899776

    ಈ ಟ್ವೀಟ್ ನೋಡಿದ ನೆಟ್ಟಿಗರು ಅಪ್ಪ, ಮಗನ ಕ್ಯೂಟ್ ಫೋಟೋಗೆ ಫಿದಾ ಆಗಿದ್ದಾರೆ. ಕೆಲವರು ತಮಾಷೆಯಾಗಿ ಕಮೆಂಟ್ ಮಾಡಿದರೆ, ಇನ್ನೂ ಕೆಲವರು ಕಮೆಂಟ್‍ನಲ್ಲೇ ಅಪ್ಪ, ಮಗನ ಕ್ಯೂಟ್ ಫೋಟೋ ಬಗ್ಗೆ ಕವನ ಬರೆದಿದ್ದಾರೆ. ಇತ್ತ ಗೆಳೆಯನ ಟ್ವೀಟ್ ನೋಡಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕೂಡ ಒಂದು ಕವನ ಬರೆದು ಟ್ವೀಟ್ ಮಾಡಿದ್ದಾರೆ.

    ‘ರಿಷಬ್ ಇದು ನಿನಗಾಗಿ, ನನ್ನ ಮುಗ್ಧತೆಯ ಅರಿವು ನನಗಿಲ್ಲ. ನನ್ನ ಹೆತ್ತವನೊಮ್ಮೆ ನೋಡು, ಅವನ ಮುಗ್ಧತೆಯಲ್ಲವೆ ನನಗೆಲ್ಲ’ ಎಂದು ಕವನ ಹೆಣೆದು ರಿಷಬ್ ಹಾಗೂ ರಣ್ವಿತ್‍ನ ಮುದ್ದಾದ ಫೋಟೋವನ್ನು ರಕ್ಷಿತ್ ವರ್ಣಿಸಿದ್ದಾರೆ.

    ರಿಷಬ್, ರಣ್ವಿತ್ ಫೋಟೋಗೆ ಅನೇಕರು ಕಮೆಂಟ್ ಮಾಡಿದ್ದಾರೆ. ಮಗನಿಗೆ ಸ್ನಾನ ಮಾಡಿಸೋದ್ರಲ್ಲಿ ತಂದೆಗೆ ಸಿಗೋ ಖುಷಿನೇ ಬೇರೆ, ಮಗ ದೊಡ್ಡವನಾದ ಮೇಲೆ ನಿಮ್ಮ ಮೇಲೆ ಮಾನನಷ್ಟ ಕೇಸ್ ಹಾಕದಿದ್ದರೆ ಸಾಕು ಎಂದು ನೆಟ್ಟಿಗರೊಬ್ಬರು ರಿಷಬ್ ಕಾಲೆಳೆದಿದ್ದಾರೆ. ಇನ್ನೊಬ್ಬರು ಕಮೆಂಟ್‍ನಲ್ಲಿ, ಕೊರೊನಾ ತಂದ ಸೌಭಾಗ್ಯ ಈಗ. ರಿಷಬ್ ಅಣ್ಣನ ಪುತ್ರಮಜ್ಜನ ಯಾಗ. ವಕ್ ಫ್ರಂ ಹೋಮ್ ಲೋಕ ಕಲ್ಯಾಣಕ್ಕೆ. ಗೋ ಬ್ಯಾಕ್ ಟು ಹೋಮ್ ನೆಮ್ಮದಿಯ ತಾಣಕ್ಕೆ ಎಂದು ಕವನ ಬರೆದಿದ್ದಾರೆ. ಮತ್ತೊಬ್ಬರು ಕಮೆಂಟ್‍ನಲ್ಲಿ ಶೆಟ್ರೆ ನೀವು ನಿಜವಾದ ಸುಖ ಅನುಭವಿಸುತ್ತಿದ್ದೀರಿ, ಈ ಅವಕಾಶ ಕಲ್ಪಿಸಿಕೊಟ್ಟ ಕೊರೊನಾಗೆ ಥ್ಯಾಂಕ್ಸ್ ಹೇಳಿ ಎಂದಿದ್ದಾರೆ.

    ಒಟ್ಟಾರೆ ಕೊರೊನಾ ಭೀತಿಗೆ ಬ್ಯುಸಿ ಶೂಟಿಂಗ್ ಕೆಲಸದಿಂದ ರೆಸ್ಟ್ ಪಡೆದಿರುವ ರಿಷಬ್ ಮಾತ್ರ ಮನೆಯಲ್ಲಿ ಕುಟುಂಬದ ಜೊತೆ ಖುಷಿಯಾಗಿ ಕಾಲ ಕಳೆಯುತ್ತಿದ್ದಾರೆ. ಅಪ್ಪ, ಮಗನ ಈ ಕ್ಯೂಟ್ ಫೋಟೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.