Tag: Ranveer

  • 36 ವರ್ಷದ ಕನಸನ್ನ ನನಸು ಮಾಡಿಕೊಂಡ ಕಿಚ್ಚ

    36 ವರ್ಷದ ಕನಸನ್ನ ನನಸು ಮಾಡಿಕೊಂಡ ಕಿಚ್ಚ

    ಬೆಂಗಳೂರು: ಚಂದನವನದ ಸೂಪರ್ ಸ್ಟಾರ್ ಕಿಚ್ಚ ಸುದೀಪ್ ತಮ್ಮ 36 ವರ್ಷದ ಕನಸನ್ನು ಇಂದು ನನಸು ಮಾಡಿಕೊಂಡಿದ್ದಾರೆ.

    ಎಲ್ಲರಿಗೂ ತಿಳಿದಿರುವಂತೆ ಸುದೀಪ್ ಅವರಿಗೆ ಕ್ರಿಕೆಟ್ ಎಂದರೆ ತುಂಬಾ ಇಷ್ಟ. ಅದರಲ್ಲಿಯೂ ಕ್ರಿಕೆಟ್ ನಲ್ಲಿ ಕಪಿಲ್ ದೇವ್ ಎಂದರೆ ಅವರಿಗೆ ಬಹಳ ಅಚ್ಚುಮೆಚ್ಚು ಎಂದು ಅವರೇ ಹೇಳಿಕೊಂಡಿದ್ದಾರೆ. ಈ ಬಗ್ಗೆ ಕಿಚ್ಚ ಇನ್‍ಸ್ಟಾಗ್ರಾಮ್ ನಲ್ಲಿ ಕಪಿಲ್ ಅವರ ಜೊತೆ ಫೋಟೋವನ್ನು ಕ್ಲಿಕಿಸಿಕೊಂಡು ಆ ಫೋಟೋವನ್ನು ಶೇರ್ ಮಾಡಿದ್ದು, ನಾನು ಸುಮಾರು 36 ವರ್ಷಗಳಿಂದ ಕಾಯುತ್ತಿದ್ದ ಚಿತ್ರವಿದು. ನನ್ನ ಕನಸನ್ನು ನನಸು ಮಾಡಿದ್ದಕ್ಕೆ ಧನ್ಯವಾದ ಕಪಿಲ್ ಸರ್. ನೀವು ನಮ್ರತೆಯ ಪ್ರತಿರೂಪ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ನಾನು ಅತ್ತಾಗ ಕಪಿಲ್‍ದೇವ್ ಕಣ್ಣನ್ನು ಒರೆಸಿ ಎತ್ತಿಕೊಂಡಿದ್ದರು: ಸುದೀಪ್

     

    View this post on Instagram

     

    A post shared by KicchaSudeepa (@kichchasudeepa)

    ಈ ಫೋಟೋ ನೋಡಿದ ಇವರ ಅಭಿಮಾನಿಗಳು ಸಖತ್ ಖುಷಿಯಾಗಿದ್ದು, ನೀವು ನಮ್ಮ ಹೆಮ್ಮೆ ಎಂದು ಬರೆದು ಕಾಮೆಂಟ್ ಮಾಡುತ್ತಿದ್ದಾರೆ.

    ರಣವೀರ್ ನಟನೆಯ ’86’ ಸಿನಿಮಾ ಕನ್ನಡದಲ್ಲಿ ಬಿಡುಗಡೆಯಾಗುತ್ತಿದ್ದು, ಈ ಸಿನಿಮಾವನ್ನು ಕನ್ನಡದಲ್ಲಿ ಕಿಚ್ಚ ವಿತರಿಸುತ್ತಿದ್ದಾರೆ. ಈ ಹಿನ್ನೆಲೆ ನಿನ್ನೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನು ನಡೆಸಲಾಯಿತು. ಈ ವೇಳೆ ಕಪಿಲ್ ಕುರಿತು ಮಾತನಾಡಿದ ಸುದೀಪ್, ತುಂಬಾ ವರ್ಷಗಳ ಹಿಂದೆ ನಾನು 87-88 ರಲ್ಲಿ ವೆಸ್ಟ್ ಇಂಡಿಸ್ ಜೊತೆ ಆಡುವಾಗ ಕಪಿಲ್ ಸರ್ ನೋಡೋಕೆ ಹೋಗಿದ್ದೆ. ಅಲ್ಲಿ ಅವರ ಜೊತೆ ಫೋಟೋ ಕೇಳಿದೆ. ಆದ್ರೆ ನನ್ನ ಬ್ಯಾಡ್ ಲಕ್ ಕ್ಯಾಮೆರಾ ವರ್ಕ್ ಆಗಿಲ್ಲ. ಆಗ ನಾನು ಅಳ್ತಾ ಇದ್ದೆ. ಅವಾಗ ನನ್ನ ಕಣ್ಣನ್ನು ಒರೆಸಿ ನನ್ನನ್ನು ಎತ್ತುಕೊಂಡಿದ್ದರು. ಆದರೆ ಈಗ ಇವರ ಸಿನಿಮಾ ವಿತರಣೆ ಮಾಡುವ ಭಾಗ್ಯ ನನಗೆ ಸಿಕ್ಕಿದೆ ಎಂದು ಭಾವುಕರಾಗಿದ್ದರು.

    ನನಗೆ ಕಪಿಲ್ ತುಂಬಾ ಇಷ್ಟ. ಆ ದಿನ ನನಗೆ ತುಂಬಾ ವಿಶೇಷ, ನನಗೆ ಅವರು ಹೀರೋ ಆದವರು. ತುಂಬಾ ವರ್ಷ ಅವರ ಜೊತೆ ಫೋಟೋಗಾಗಿ ತುಂಬಾ ವೇಟ್ ಮಾಡಿದ್ದೀನಿ. ನಾನು ಪ್ರೀತಿ ಮಾಡುವ ಗೇಮ್, ಆಡೋಕೆ ಸಿಕ್ಕಿರೋ ಗೇಮ್ ಕ್ರಿಕೆಟ್. ಕನ್ನಡಕ್ಕೆ 83 ಸಿನಿಮಾ ಅರ್ಪಿಸುತ್ತಿರುವುದಕ್ಕೆ ನನಗೆ ಖುಷಿಯಾಗಿದೆ ಎಂದಿದ್ದರು. ಇದನ್ನೂ ಓದಿ: ಮತ್ತೊಮ್ಮೆ ನಾವು ಕ್ಯೂಟ್ ಜೋಡಿಗಳು ಎಂದು ತೋರಿಸಿಕೊಟ್ಟ ಯಶ್, ರಾಧಿಕಾ

    ಈ ಸುದ್ದಿಗೋಷ್ಠಿಗೆ ಕಪಿಲ್ ಅವರು ಬಂದಿದ್ದು, ಅವರ ಜೊತೆ ಫೋಟೋ ತೆಗೆಸಿಕೊಂಡು ಕಿಚ್ಚ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ.

  • ನಾನು ಅತ್ತಾಗ ಕಪಿಲ್‍ದೇವ್ ಕಣ್ಣನ್ನು ಒರೆಸಿ ಎತ್ತಿಕೊಂಡಿದ್ದರು: ಸುದೀಪ್

    ನಾನು ಅತ್ತಾಗ ಕಪಿಲ್‍ದೇವ್ ಕಣ್ಣನ್ನು ಒರೆಸಿ ಎತ್ತಿಕೊಂಡಿದ್ದರು: ಸುದೀಪ್

    ಬೆಂಗಳೂರು: ’83’ ಸಿನಿಮಾ ನಮ್ಮೊಂದಿಗೆ ಒಂದು ರೀತಿಯ ಭಾವನೆಯನ್ನು ಹೊಂದಿದೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ

    ಕನ್ನಡದಲ್ಲಿ ’83’ ಸಿನಿಮಾ ಬಿಡುಗಡೆಯಾಗುವ ಹಿನ್ನೆಲೆ ಈ ಸಿನಿಮಾವನ್ನು ಕನ್ನಡದಲ್ಲಿ ಕಿಚ್ಚ ವಿತರಸುತ್ತಿದ್ದು, ಇಂದು ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಇದನ್ನೂ ಓದಿ: ಮತ್ತೊಮ್ಮೆ ನಾವು ಕ್ಯೂಟ್ ಜೋಡಿಗಳು ಎಂದು ತೋರಿಸಿಕೊಟ್ಟ ಯಶ್, ರಾಧಿಕಾ

    ಈ ವೇಳೆ ಕಪಿಲ್ ಅವರನ್ನು ನೆನೆದ ಸುದೀಪ್, ತುಂಬಾ ವರ್ಷಗಳ ಹಿಂದೆ ನಾನು ಅಂದ್ರೆ 87-88 ರಲ್ಲಿ ವೆಸ್ಟ್ ಇಂಡಿಸ್ ಜೊತೆ ಆಡುವಾಗ ಕಪಿಲ್ ಸರ್ ನೋಡೋಕೆ ಹೋಗಿದ್ದೆ. ಅಲ್ಲಿ ಅವರ ಜೊತೆ ಫೋಟೋ ಕೇಳಿದೆ. ಆದ್ರೆ ನನ್ನ ಬ್ಯಾಡ್ ಲಕ್ ಕ್ಯಾಮೆರಾ ವರ್ಕ್ ಆಗಿಲ್ಲ. ಆಗ ನಾನು ಆಳ್ತಾ ಇದೆ. ಅವಾಗ ನನ್ನ ಕಣ್ಣನ್ನು ಒರೆಸಿ ನನ್ನನ್ನು ಎತ್ತಿಕೊಂಡಿದ್ದರು. ಆದರೆ ಈಗ ಇವರ ಸಿನಿಮಾ ವಿತರಣೆ ಮಾಡುವ ಭಾಗ್ಯ ಸಿಕ್ಕಿದೆ ಎಂದು ಭಾವುಕರಾದರು.

    ನನಗೆ ಕಪಿಲ್ ತುಂಬಾ ಇಷ್ಟ. ಆ ದಿನ ನನಗೆ ತುಂಬಾ ವಿಶೇಷ, ನನಗೆ ಅವರು ಹೀರೋ ಆದವರು. ತುಂಬಾ ವರ್ಷ ಅವರ ಜೊತೆ ಫೋಟೋಗಾಗಿ ತುಂಬಾ ವೇಟ್ ಮಾಡಿದ್ದೀನಿ. ನಾನು ಪ್ರೀತಿ ಮಾಡುವ ಗೇಮ್, ಆಡೋಕೆ ಸಿಕ್ಕಿರೋ ಗೇಮ್ ಕ್ರಿಕೆಟ್. ಕನ್ನಡಕ್ಕೆ 83 ಸಿನಿಮಾ ಅರ್ಪಿಸುತ್ತಿರುವುದಕ್ಕೆ ನನಗೆ ಖುಷಿಯಾಗಿದೆ ಎಂದರು.

    83 ಸಿನಿಮಾದ ಟ್ರೇಲರ್ ನೋಡಿದ ಪ್ರತಿಯೊಬ್ಬರ ಮನಸ್ಸು ಬದಲಾಗುತ್ತೆ. ಬಾರಿ ಕ್ರಿಕೆಟ್ ನೋಡುವವರು ಮಾತ್ರವಲ್ಲ ಎಲ್ಲರೂ ಇದನ್ನು ಇಷ್ಟ ಪಡುತ್ತಾರೆ. ರಣವೀರ್ ನಟನೆ ಮಾತ್ರ ಅದ್ಭುತವಾಗಿ ಮೂಡಿಬಂದಿದೆ. ಅವರು ಹೇಗೆ ಇದಕ್ಕೆ ಕೆಲಸ ಮಾಡಿದ್ದಾರೆ ಎಂಬುದು ಈ ಟ್ರೇಲರ್ ನೋಡಿದರೆ ತಿಳಿಯುತ್ತೆ. ಅವರು ಇಲ್ಲಿ ಒಂದು ಡೈಲಾಗ್ ಹೇಳಿದ್ದಾರೆ ಎಂದು ರಣವೀರ್ ಅವರನ್ನು ಮತ್ತೊಮ್ಮೆ ಈ ಸಿನಿಮಾದ ಡೈಲಾಗ್ ಹೇಳಿ ಎಂದು ಕೇಳಿದರು.

    ಮೊದಲು ಸಿನಿಮಾ ಎಂದರೆ ಸಿನಿಮಾ ಅಷ್ಟೇ. ಆದರೆ ಈ ಸಿನಿಮಾ ಒಂದು ರೀತಿಯ ಭಾವನೆಯನ್ನು ಹೊಂದಿದೆ. ನಾವು 83 ಅಲ್ಲಿ ಕ್ರಿಕೆಟ್ ನಡೆಯಬೇಕಾದರೆ ಚಿಕ್ಕವರಾಗಿದ್ದೆವು. ನಮಗೂ ಕ್ರಿಕೆಟ್ ಎಂದರೆ ಏನು ಎಂದು ಗೊತ್ತಿತ್ತು. ಆದರೆ ಆಗ ನಮ್ಮ ಭಾಷೆಯಲ್ಲಿ ಕ್ರಿಕೆಟ್ ಇರಲಿಲ್ಲ. ನಮಗೆ ಆ ಭಾಷೆ ಅರ್ಥವಾಗುತ್ತಿರಲಿಲ್ಲ. ಆದರೆ ಈ ಬಗ್ಗೆ ನಮಗೆ ಕಾಲೇಜಿಗೆ ಬಂದಾಗ ತಿಳಿಯಿತು ಎಂದರು. ಇದನ್ನೂ ಓದಿ: ಆಲಿಯಾ ವಿರುದ್ಧ FIR ದಾಖಲಿಸಲು ಮುಂದಾದ ಮುಂಬೈ ಪಾಲಿಕೆ

    ನಮಗೆ ಆಟದ ಹಿಂದೆ ಏನಾಗಿತ್ತು ಎಂದು ಗೊತ್ತಿಲ್ಲ. ಆದರೆ ಆ ಪಂದ್ಯದಲ್ಲಿ ಭಾರತ ತಂಡ ಗೆದ್ದಿತ್ತು ಎಂದು ಅಷ್ಟೇ ಗೊತ್ತು. ಅದಕ್ಕೆ ಅವರು ಎಷ್ಟು ಕಷ್ಟ ಪಡುತ್ತಿದ್ದರು ಎಂಬುದು ನಮಗೆ ತಿಳಿದಿಲ್ಲ. ಆದರೆ ಈಗ ಇವರೆಲ್ಲರ ಕಷ್ಟದಿಂದ ನಮ್ಮ ಕ್ರಿಕೆಟ್ ತಂಡ ವರ್ಷಕ್ಕೆ ಕೋಟಿ ರೂ. ದುಡಿಯುತ್ತಾರೆ. ಅದಕ್ಕೆಲ್ಲ ಇವರ ಪ್ರತಿಫಲ, ಶ್ರಮವೇ ಕಾರಣ ಎಂದು ವೇದಿಕೆ ಮೇಲಿದ್ದ ಗಣ್ಯರನ್ನು ಅಭಿನಂದಿಸಿದರು.

    ಈ ಸಿನಿಮಾ ಬಾರಿ ಒಂದು ವಲ್ಡ್ ಕಪ್ ನ ಸ್ಟೋರಿಯಲ್ಲ. ಬದಲಿಗೆ ಇಡೀ ಭಾರತದ ಕ್ರಿಕೆಟ್ ತಂಡದ ಗುರಿಯೇ ಬದಲಾದ ಒಂದು ಕಥೆಯಾಗಿದೆ. ಅದನ್ನೆಲ್ಲ ಮಾಡಿದವರು ಈ ಗಣ್ಯರು. ನಾವು ಅದನ್ನೆಲ್ಲ ನೋಡಿಲ್ಲ, ಏಕೆಂದರೆ ನಾವು ಅಲ್ಲಿ ಇರಲಿಲ್ಲ. ಇವತ್ತು ನಮ್ಮ ಕ್ರಿಕೆಟ್ ತಂಡ ಅನುಭವಿಸುತ್ತಿರುವ ಸವಲತ್ತು ಎಲ್ಲ ಇವರ ಪ್ರತಿಫಲ ಎಂದು ಪ್ರಶಂಸಿದರು.

    ಈ ವೇಳೆ ರಣವೀರ್ ಬಗ್ಗೆ ಮಾತನಾಡಿದ ಅವರು, 83ರ ವಿಶ್ವಕಪ್ ಸಮಯದಲ್ಲಿ ಯಾರು ಇರಲಿಲ್ಲ. ಆದರೆ ಅದನ್ನು ಮತ್ತೆ ಈ ಸಿನಿಮಾ ಮೂಲಕ ತೋರಿಸಿದ್ದಾರೆ. ಅವರು ನಮ್ಮ ದೇಶಕ್ಕಾಗಿ ಎಷ್ಟು ಕಷ್ಟ ಪಟ್ಟರು ಎಂದು ತಿಳಿಸುವುಕ್ಕಾಗಿ ಈ ಸಿನಿಮಾವನ್ನು ತೆರೆ ಮೇಲೆ ತರಲಾಗಿದೆ. ಈ ಸಿನಿಮಾ ನಮ್ಮ ಭಾರತೀಯರು ಹೆಮ್ಮೆ ಪಡುವಂತಹ ಸಿನಿಮಾವಾಗಿದೆ ಎಂದು ಖುಷಿಪಟ್ಟರು. ಈ ಸಿನಿಮಾ ಮೂಲಕ 83 ಕ್ರಿಕೆಟ್ ಸಮಯದಲ್ಲಿ ಏನು ನಡೆದಿತ್ತು ಎಂಬುದು ನಮ್ಮ ಮುಂದೆ ಬರುತ್ತೆ. ಅದು ರಣವೀರ್ ಕ್ರಿಕೆಟರ್ ಆಗಿ ನಮ್ಮ ಮುಂದೆ ಬರುತ್ತಾರೆ. ಸಿನಿಮಾ ಮುಗಿಯುವಾಗ ರಣವೀರ್ ನಮ್ಮ ಕಣ್ಣಮುಂದೆ ಇರುತ್ತಾರೆ. ಅದಕ್ಕೆ ಇವರು ತುಂಬಾ ಶ್ರಮ ಪಟ್ಟು ಕೆಲಸ ಮಾಡಿದ್ದಾರೆಸ ಎಂದು ಅವರ ಶ್ರಮದ ಬಗ್ಗೆ ವಿವರಿಸಿದರು.

  • ಮಮ್ಮಿ ಆಗ್ತಿದ್ದಾರಾ ಪದ್ಮಾವತಿ – ಆಸ್ಪತ್ರೆಗೆ ಬಂದ ದೀಪ್‍ವೀರ್

    ಮಮ್ಮಿ ಆಗ್ತಿದ್ದಾರಾ ಪದ್ಮಾವತಿ – ಆಸ್ಪತ್ರೆಗೆ ಬಂದ ದೀಪ್‍ವೀರ್

    ಮುಂಬೈ: ಬಾಲಿವುಡ್ ಸಿನಿಮಾಗಳಲ್ಲಿ ಹಿಟ್ ಜೋಡಿ ಅನ್ನಿಸಿಕೊಂಡು ನಿಜ ಜೀವನದಲ್ಲಿಯೂ ಸಪ್ತಪದಿ ತುಳಿದು ರಣ್‍ವೀರ್ ಹಾಗೂ ದೀಪಿಕಾ ಪಡುಕೋಣೆ ಸುಖವಾಗಿ ಸಂಸಾರ ಮಾಡುತ್ತಿದ್ದಾರೆ. ಇದೀಗ ದೀಪಿಕಾ ಪಡುಕೋಣೆ ಪ್ರೆಗ್ನೆಂಟ್ ಆಗಿದ್ದಾರೆ ಎಂಬ ಸುದ್ದಿ ಬಿ-ಟೌನ್‍ನಲ್ಲಿ ಹರಿದಾಡುತ್ತಿದೆ.

    ಹೌದು, ದೀಪಿಕಾ ಪಡುಕೋಣೆ ಹಾಗೂ ರಣ್‍ವೀರ್ ಸಿಂಗ್ ಇಬ್ಬರು ಮುಂಬೈನ ಹಿಂದುಜಾ ಆಸ್ಪತ್ರೆಗೆ ಗುಟ್ಟಾಗಿ ಭೇಟಿ ನೀಡಿದ್ದಾರೆ. ಈ ವೇಳೆ ಕ್ಯಾಮೆರಾ ಕಣ್ಣಿಗೆ ಬಿದ್ದಿರುವ ದೀಪಿಕಾ ಹಾಗೂ ರಣ್‍ವೀರ್ ಆಸ್ಪತ್ರೆಯ ಆವರಣದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹೀಗಾಗಿ ಅಭಿಮಾನಿಗಳಲ್ಲಿ ದೀಪಿಕಾ ಪಡುಕೋಣೆ ಪ್ರೆಗ್ನೆಂಟ್ ಆಗಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಕೆಲವರು ದೀಪಿಕಾ ಪ್ರೆಗ್ನೆಂಟ್ ಆಗಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದರೆ, ಮತ್ತೆ ಕೆಲವರು ಅನಾರೋಗ್ಯದ ಕಾರಣದಿಂದಲೂ ದೀಪಿಕಾ ಆಸ್ಪತ್ರೆಗೆ ಭೇಟಿ ನೀಡಿರಬಹುದು ಎಂದು ಹೇಳುತ್ತಿದ್ದಾರೆ.

    ಒಟ್ಟಾರೆ ದೀಪಿಕಾ ಹಾಗೂ ರಣ್‍ವೀರ್ ಆಸ್ಪತ್ರೆಗೆ ಗುಟ್ಟಾಗಿ ಭೇಟಿ ನೀಡಿದ್ದು, ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಹಿಂದೆ ಕೂಡ ಹಲವಾರು ಬಾರಿ ದೀಪಿಕಾ ಪ್ರೆಗ್ನೆಂಟ್, ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ರಾಮಲೀಲಾ ಸಿನಿಮಾದಲ್ಲಿ ದೀಪಿಕಾ ಹಾಗೂ ರಣ್‍ವೀರ್ ಒಟ್ಟಿಗೆ ಅಭಿನಯಿಸಿದ್ದರು. ಈ ಸಿನಿಮಾ ಬಾಲಿವುಡ್ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವುದರ ಜೊತೆಗೆ ಇಬ್ಬರಿಗೂ ದೊಡ್ಡ ಮಟ್ಟದಲ್ಲಿ ಹಿಟ್ ತಂದು ಕೊಟ್ಟಿತ್ತು. ನಂತರ ಬಂದ ಬಾಜೀರಾವ್ ಮಸ್ತಾನಿ ಹಾಗೂ ಪದ್ಮಾವತ್ ಸಿನಿಮಾ ಕೂಡ ಬಾಲಿವುಡ್‍ನಲ್ಲಿ ಸಕ್ಸಸ್ ಕಂಡಿತ್ತು. ಇದನ್ನೂ ಓದಿ:ಶುಭಾ ಕೊಟ್ಟ ಟಾಸ್ಕ್ ಸೋತಿರುವುದಾಗಿ ಒಪ್ಪಿದ ಬಿಗ್‍ಬಾಸ್

     

    View this post on Instagram

     

    A post shared by Viral Bhayani (@viralbhayani)

  • ಮಂಡಿಯೂರಿ ಅಜ್ಜಿಗೆ ರೋಸ್ ಜೊತೆ ಕಿಸ್ ಕೊಟ್ಟ ರಣ್‍ವೀರ್ – ವಿಡಿಯೋ ವೈರಲ್

    ಮಂಡಿಯೂರಿ ಅಜ್ಜಿಗೆ ರೋಸ್ ಜೊತೆ ಕಿಸ್ ಕೊಟ್ಟ ರಣ್‍ವೀರ್ – ವಿಡಿಯೋ ವೈರಲ್

    ಲಂಡನ್: ಬಾಲಿವುಡ್ ನಟ ರಣ್‍ವೀರ್ ಸಿಂಗ್ ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಹೀಗಾಗಿ ರಣ್‍ವೀರ್ ತಾವು ಹೋದ ಕಡೆಯಲ್ಲಿ ಅಭಿಮಾನಿಗಳ ಜೊತೆ ಪ್ರೀತಿಯಿಂದ ಮಾತನಾಡುತ್ತಾರೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ವೃದ್ಧೆ ಅಭಿಮಾನಿಯೊಬ್ಬರನ್ನು ಪ್ರೀತಿಯಿಂದ ಮಾತನಾಡಿಸಿ ಅವರಿಗೆ ರೋಸ್ ಜೊತೆಗೆ ಕಿಸ್ ಕೊಟ್ಟಿದ್ದಾರೆ.

    ನಟ ರಣ್‍ವೀರ್ ಸಿಂಗ್ ವೃದ್ಧೆ ಅಭಿಮಾನಿಗೆ ಗೌರವ ಕೊಟ್ಟು ಮಾತನಾಡಿಸಿದ ವಿಡಿಯೋವನ್ನು ಅಭಿಮಾನಿಗಳು ರೆಕಾರ್ಡ್ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದೀಗ ಆ ವಿಡಿಯೋ ವೈರಲ್ ಆಗುತ್ತಿದೆ. ನಟ ರಣ್‍ವೀರ್ ಸಿಂಗ್ ಸದ್ಯಕ್ಕೆ `83′ ಸಿನಿಮಾವನ್ನು ಮಾಡುತ್ತಿದ್ದು, ಈ ಸಿನಿಮಾ ಶೂಟಿಂಗ್ ಲಂಡನ್‍ನಲ್ಲಿ ನಡೆಯುತ್ತಿದೆ. ಇದಕ್ಕಾಗಿ ರಣ್‍ವೀರ್ ಲಂಡನ್ ಪ್ರವಾಸದಲ್ಲಿದ್ದಾರೆ.

    ಸಿನಿಮಾದ ಕೆಲವು ಪ್ರಮುಖ ದೃಶ್ಯವನ್ನು ಲಂಡನ್‍ನ ಸೌತ್‍ಹಾಲ್‍ನಲ್ಲಿ ಶೂಟ್ ಮಾಡಲಾಗಿದೆ. ಇದೇ ವೇಳೆ ರಣ್‍ವೀರ್ ಅಲ್ಲಿಗೆ ಬರುತ್ತಿರುವ ಮಾಹಿತಿ ತಿಳಿದುಕೊಂಡು ಅಪಾರ ಅಭಿಮಾನಿಗಳು ಅಲ್ಲಿ ಜಮಾಯಿಸಿದ್ದರು. ರಣ್‍ವೀರ್ ಬರುತ್ತಿದ್ದಂತೆ ಅಭಿಮಾನಿಗಳು ಬ್ಯಾಂಡ್‍ಗಳನ್ನು ಸ್ಥಳಕ್ಕೆ ತರಿಸಿ ಸ್ಥಳದಲ್ಲಿ ಹಬ್ಬದ ವಾತಾವರಣವನ್ನೇ ಕ್ರಿಯೇಟ್ ಮಾಡಿದ್ದರು.

    ಅಭಿಮಾನಿಗಳ ಅಪಾರ ಅಭಿಮಾನಕ್ಕೆ ಸೋತು ರಣ್‍ವೀರ್ ಕೂಡ ಬ್ಯಾಂಡ್ ಮ್ಯೂಸಿಕ್‍ಗೆ ಸ್ಟೆಪ್ ಹಾಕಿದ್ದಾರೆ. ನಂತರ ಅಲ್ಲಿದ್ದ ಮಕ್ಕಳು, ಯುವಕ-ಯುವತಿಯರು ಮತ್ತು ಹಿರಿಯರು ಸೇರಿದಂತೆ ಎಲ್ಲರಿಗೂ ಕೈ ಬೀಸಿ ಹಾಯ್ ಹೇಳಿದ್ದಾರೆ. ಇದೇ ವೇಳೆ ಅಭಿಮಾನಿಯೊಬ್ಬರು ರೋಸ್ ಕೊಟ್ಟಿದ್ದಾರೆ. ಆ ರೋಸ್ ತೆಗೆದುಕೊಂಡು ಎಲ್ಲರ ಕೈ ಕುಲುಕುತ್ತಿದ್ದರು.

    ಆಗ ರಣ್‍ವೀರ್ ಸುಮಾರು 70 ವರ್ಷದ ಅಜ್ಜಿಯೊಬ್ಬರನ್ನು ನೋಡಿದ್ದಾರೆ. ಅವರು ವ್ಹೀಲ್ ಚೇರ್ ಮೇಲೆ ಸ್ಟಿಕ್ ಹಿಡಿದು ಕುಳಿತುಕೊಂಡಿದ್ದರು. ಅವರ ಮುಂದೆ ರಣ್‍ವೀರ್ ಮಂಡಿಯೂರಿ ರೋಸ್ ಕೊಟ್ಟು ಪ್ರೀತಿಯಿಂದ ಮಾತನಾಡಿಸಿದರು. ಆಗ ಅಜ್ಜಿ ಸಂತಸಗೊಂಡು ರಣ್‍ವೀರ್ ಕೆನ್ನೆಗೆ ಮುತ್ತು ಕೊಟ್ಟರು. ನಂತರ ರಣ್‍ವೀರ್ ಕೂಡ ಅಜ್ಜಿ ಕೈಗೆ ಕಿಸ್ ಕೊಟ್ಟು ಪ್ರೀತಿಯಿಂದ ಮಾತನಾಡಿಸಿದ್ದಾರೆ. ಸದ್ಯ ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

    https://twitter.com/RanveerSinghtbt/status/1157723474611384321

  • ಇನಿಯನ ಬರ್ತ್ ಡೇಯಲ್ಲಿ ದೀಪಿಕಾ ಧೂಮ್ ದಮಾಲ್ ಡ್ಯಾನ್ಸ್

    ಇನಿಯನ ಬರ್ತ್ ಡೇಯಲ್ಲಿ ದೀಪಿಕಾ ಧೂಮ್ ದಮಾಲ್ ಡ್ಯಾನ್ಸ್

    ಮುಂಬೈ: ಜುಲೈ 6 ರಂದು ಬಾಲಿವುಡ್ ನಟ ರಣ್‍ವೀರ್ ಸಿಂಗ್ ಹುಟ್ಟುಹಬ್ಬವಿತ್ತು. ಅವರ ಬರ್ತ್ ಡೇ ಶುಭಾಶಯವನ್ನು ನಟಿ ದೀಪಿಕಾ ಪಡುಕೋಣೆ ಅವರು ವಿಶೇಷವಾಗಿ ತಿಳಿಸಿದ್ದಾರೆ.

    ರೋಹಿತ್ ಶೆಟ್ಟಿ ಅವರ ಬಹುನಿರೀಕ್ಷಿತ ಸಿನಿಮಾವಾದ `ಸಿಂಬಾ’ ಶೂಟಿಂಗ್ ಸೆಟ್ ನಲ್ಲಿ ರಣ್‍ವೀರ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ರಣ್ ವೀರ್ ಗೆ ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರವೇ ಹರಿದು ಬಂದಿತ್ತು.

    ಗಣ್ಯ ವ್ಯಕ್ತಿಗಳು, ನಟ-ನಟಿಯರು ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯವನ್ನು ತಿಳಿಸಿದ್ದರು. ಆಲಿಯಾ ಭಟ್, ಅನಿಲ್ ಕಪೂರ್ ಮತ್ತು ಜೋಯಾ ಅಖ್ತರ್ ಅವರು ವಿಭಿನ್ನ ರೀತಿಯಲ್ಲಿ ಬರ್ತ್ ಡೇ ಶುಭಾಶಯವನ್ನು ತಿಳಿಸಿದ್ದರು.

    ದೀಪಿಕಾ ಸಿಂಬಾ ಸಿನಿಮಾ ಸೆಟ್‍ಗೆ ತೆರಳಿ ತನ್ನ ಇನಿಯನಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ ಎನ್ನಲಾಗಿದೆ. ಬರ್ತ್ ಡೇ ಪಾರ್ಟಿಯಲ್ಲಿ ದೀಪಿಕಾ ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

    ರಾಮ್‍ಲೀಲಾ ಚಿತ್ರದಲ್ಲಿ ಒಂದಾದ ದೀಪಿಕಾ ಮತ್ತು ರಣ್‍ವೀರ್ ಸಿಂಗ್ ಪ್ರೇಮ ಪಾಶದಲ್ಲಿ ಸಿಲುಕಿದ್ದರು. ಇದಾದ ಬಳಿಕ ಬಾಜೀರಾವ್ ಮಸ್ತಾನಿ ಮತ್ತು ಪದ್ಮಾವತ್ ಎಂಬ ಸೂಪರ್ ಹಿಟ್ ಸಿನಿಮಾ ನೀಡಿರುವ ಯಂಗ್ ಜೋಡಿ ಇದೇ ವರ್ಷ ನವೆಂಬರ್ ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ ಎಂದು ಹೇಳಲಾಗುತ್ತಿದೆ. ಮದುವೆ ಸಂಬಂಧಿಸಿದಂತೆ ಈವರೆಗೂ ದೀಪಿಕಾ ಮತ್ತು ರಣ್‍ವೀರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    https://www.instagram.com/p/Bk5VmCQHYR0/?taken-by=deepikapadukoneforever