Tag: rank

  • ವಿಟಿಯು ಇಂಜಿನಿಯರಿಂಗ್‌ ಪರೀಕ್ಷೆ – ಸುಚಿತಾ ಮಡಿವಾಳಗೆ ಮೊದಲ ರ‍್ಯಾಂಕ್‌ ಜೊತೆಗೆ ಚಿನ್ನದ ಪದಕ

    ವಿಟಿಯು ಇಂಜಿನಿಯರಿಂಗ್‌ ಪರೀಕ್ಷೆ – ಸುಚಿತಾ ಮಡಿವಾಳಗೆ ಮೊದಲ ರ‍್ಯಾಂಕ್‌ ಜೊತೆಗೆ ಚಿನ್ನದ ಪದಕ

    ಮಂಗಳೂರು: ವಿಟಿಯು ಇಂಜಿನಿಯರಿಂಗ್ ಪರೀಕ್ಷೆಯಲ್ಲಿ (VTU Engineering Exam) ಸುಚಿತಾ ಮಡಿವಾಳ (Suchita Madiwala) ಅವರು ಡಾಟಾ ಸೈನ್ಸ್‌ನ ಪ್ರಥಮ ಬ್ಯಾಚ್‌ಗೆ ರಾಜ್ಯಕ್ಕೆ ಮೊದಲ ರ‍್ಯಾಂಕ್‌ ಜೊತೆಗೆ ಚಿನ್ನದ ಪದಕ ಪಡೆದಿದ್ದಾರೆ.

    ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ಮಹಾ ವಿದ್ಯಾಲಯ ನಡೆಸಿದ 2024-25 ನೇ ಸಾಲಿನ ಪರೀಕ್ಷೆಯಲ್ಲಿ ಪುತ್ತೂರು (Putturu) ವಿವೇಕಾನಂದ ಎಂಜಿನಿಯರಿಂಗ್ ಕಾಲೇಜ್ ಅಂಡ್ ಟೆಕ್ನಾಲಜಿ (Vivekananda Engineering College) ಫೈನಲ್ ಇಯರ್ ಬಿಇ ಕಂಪ್ಯೂಟರ್ ಸೈನ್ಸ್ (ಡೇಟಾ ಸೈನ್ಸ್) ವಿಭಾಗದಲ್ಲಿ 9.60 cgpa ಅಂಕಗಳೊಂದಿಗೆ ಉತ್ತಮ ಅಂಕಗಳನ್ನು ಪಡೆದು ರಾಜ್ಯಕ್ಕೆ ಮೊದಲ ರ‍್ಯಾಂಕ್‌ ಜೊತೆಗೆ ಚಿನ್ನದ ಪದಕ ಪಡೆದಿರುತ್ತಾರೆ. ಇದನ್ನೂ ಓದಿ: 46 ರೂ. ಆಗಿದ್ರೂ 50 ರೂ. ಟಿಕೆಟ್‌ – ಭಾರೀ ಟೀಕೆ ಬೆನ್ನಲ್ಲೇ KSRTC ಆದೇಶ ರದ್ದು

    ದಿ.ರಮೇಶ ಮಡಿವಾಳ ಹಾಗೂ ಮೋಹಿನಿಯವರ ಮಗಳಾದ ಇವರು ಗ್ರಾಮೀಣ ಪ್ರದೇಶದಿಂದ ಬಂದವರಾದರೂ ಶಿಕ್ಷಣದ ಜೊತೆಗೆ ಇತರ ಚಟುವಟಿಕೆಗಳಲ್ಲೂ ತನ್ನನ್ನು ತಾನು ತೊಡಗಿಸಿಕೊಂಡು ಅಣ್ಣನ ಸಹಾಯ, ತಾಯಿಯ ಪ್ರೋತ್ಸಾಹದಿಂದ ಇಂತಹ ಸಾಧನೆ ಮಾಡಿರುವುದು ಹೆಮ್ಮೆಯ ವಿಚಾರವಾಗಿದೆ.

    ಪ್ರತೀ ಹಂತದ ಮಾಸಿಕ, ವಾರ್ಷಿಕ ಪರೀಕ್ಷೆಯಲ್ಲೂ ಉತ್ತಮ ಅಂಕಗಳನ್ನು ಗಳಿಸುತ್ತಾ ಬರುತ್ತಿದ್ದ ಸುಚಿತಾ ಅಂತಿಮ ವರ್ಷದ ಪರೀಕ್ಷೆಯಲ್ಲೂ ಉತ್ತಮ ಅಂಕಗಳನ್ನು ಪಡೆದು ಮೊದಲ ಸ್ಥಾನ ಪಡೆದಿರುವುದು ಪ್ರಾಧ್ಯಾಪಕರಿಗೂ ಜೊತೆಗೆ ಹೆತ್ತವರಿಗೂ ಸಂತಸವನ್ನು ಉಂಟು ಮಾಡಿದೆ. ಇದನ್ನೂ ಓದಿ: PublicTV Explainer: ಹೃದಯ ಭಾರ.. ಇರಲಿ ಎಚ್ಚರ! ಹೃದಯಾಘಾತಕ್ಕೆ ಯುವಕರೇ ಹೆಚ್ಚು ಬಲಿ ಯಾಕೆ?

    ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಆಡಳಿತ ಮಂಡಳಿಯ ಅಧ್ಯಕ್ಷರು ಸಂಚಾಲಕರು ನಿರ್ದೇಶಕರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಮಹೇಶ್ ಪ್ರಸನ್ನ ಕೆ ಅವರ ಮುಂದಾಳತ್ವದಲ್ಲಿ ಡೇಟಾ ಸೈನ್ಸ್ ವಿಭಾಗದ ಮುಖ್ಯಸ್ಥೆ ಪ್ರೊ ರೂಪ ಜಿಕೆ ಹಾಗೂ ಪ್ರಾಧ್ಯಾಪಕರ ಸಮರ್ಥ ಮಾರ್ಗದರ್ಶನದಲ್ಲಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿ ಇವರನ್ನು ಅಭಿನಂದಿಸಿದ್ದಾರೆ.

  • ರಾಯಚೂರಿಗೆ ದೇಶದಲ್ಲೇ ನಂ.1 ರ‍್ಯಾಂಕ್: ಕೇಂದ್ರದ ನೀತಿ ಆಯೋಗದಿಂದ 10 ಕೋಟಿ ರೂ. ಬಹುಮಾನ

    ರಾಯಚೂರಿಗೆ ದೇಶದಲ್ಲೇ ನಂ.1 ರ‍್ಯಾಂಕ್: ಕೇಂದ್ರದ ನೀತಿ ಆಯೋಗದಿಂದ 10 ಕೋಟಿ ರೂ. ಬಹುಮಾನ

    ರಾಯಚೂರು: ಇಡೀ ದೇಶದಲ್ಲಿ ಜಿಲ್ಲೆ ಈಗ ನಂಬರ್ ಒನ್ ಆಗಿದೆ. ಅಖಿಲ ಭಾರತ ಮಹತ್ವಾಕಾಂಕ್ಷೆಯ ಜಿಲ್ಲಾ ಡೆಲ್ಟಾ ಶ್ರೇಯಾಂಕ ಪ್ರಕಟವಾಗಿದ್ದು, ಕೇಂದ್ರದ ನೀತಿ ಆಯೋಗದ ಸಮೀಕ್ಷೆಯಲ್ಲಿ ಜಿಲ್ಲೆಗೆ ಫಸ್ಟ್ ರ‍್ಯಾಂಕ್ ನೀಡಲಾಗಿದೆ. ಸಮಗ್ರ ಸಾಧನೆಯಲ್ಲಿ ಜಿಲ್ಲೆಗೆ 1ನೇ ರ‍್ಯಾಂಕ್ ಬಂದಿದೆ.

    10 ಕೋಟಿ ರೂ. ವಿಶೇಷ ಬಹುಮಾನಕ್ಕೂ ರಾಯಚೂರು (Raichur) ಜಿಲ್ಲೆ ಅರ್ಹತೆ ಪಡೆದಿದೆ. ಕೃಷಿ, ಶಿಕ್ಷಣ, ಮೂಲ ಸೌಕರ್ಯ, ಆರೋಗ್ಯ, ಆರ್ಥಿಕ ಸೇರ್ಪಡೆ ಹಾಗೂ ಕೌಶಲ್ಯ ಅಭಿವೃದ್ಧಿ ಸೇರಿ ಜಿಲ್ಲೆಯ ಸ್ಥಿತಿಗತಿಗಳ ವಾಸ್ತವ ವರದಿಗಳ ಪರಿಶೀಲನೆ ನಡೆಸಿ ನೀತಿ ಆಯೋಗ ರ‍್ಯಾಂಕ್ ನೀಡಿದೆ. ದೇಶದ ಒಟ್ಟು 115 ಮಹತ್ವಾಕಾಂಕ್ಷೆ ಜಿಲ್ಲೆಗಳಲ್ಲಿ ರಾಯಚೂರಿಗೆ ಮೊದಲ ಸ್ಥಾನ ಬಂದಿದೆ. ಇದನ್ನೂ ಓದಿ: ಮಂಗಳೂರಿನಲ್ಲಿ ಡ್ರಗ್ಸ್ ಚಾಕ್ಲೇಟ್ ದಂಧೆ- FSL ವರದಿ ಬೆನ್ನಲ್ಲೇ ಇಬ್ಬರ ಬಂಧನ

    ಶಿಕ್ಷಣ ಹಾಗೂ ಕೃಷಿಯಲ್ಲಿ ಈ ಮೊದಲು ಮೊದಲ ರ‍್ಯಾಂಕ್ ಪಡೆದಿದ್ದ ಜಿಲ್ಲೆ ಜೂನ್ ತಿಂಗಳ ಸಮೀಕ್ಷೆಯಲ್ಲಿ ಸಮಗ್ರ ಸಾಧನೆಯಲ್ಲಿ 1ನೇ ರ್ಯಾಂಕ್ ಪಡೆದಿದೆ. ಕೇಂದ್ರ ಸರ್ಕಾರ ಹಾಗೂ ನೀತಿ ಆಯೋಗದಿಂದ ಹೆಚ್ಚುವರಿ ಅನುದಾನ ಪಡೆಯಲಿದೆ. ಜಿಲ್ಲೆ ಮೊದಲ ರ್ಯಾಂಕ್ ಪಡೆದಿದ್ದಕ್ಕೆ ಸಂತಸ ವ್ಯಕ್ತಪಡಿಸಿರುವ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ್ ಸಿಬ್ಬಂದಿ ಕಾರ್ಯವೈಖರಿ ಶ್ಲಾಘಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಂಪಿ ಬೀದಿ ಬದಿ ವ್ಯಾಪಾರಿಯ ಮಗ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ 3ನೇ ರ‍್ಯಾಂಕ್

    ಹಂಪಿ ಬೀದಿ ಬದಿ ವ್ಯಾಪಾರಿಯ ಮಗ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ 3ನೇ ರ‍್ಯಾಂಕ್

    ವಿಜಯನಗರ: ವಿಶ್ವ ಪ್ರಸಿದ್ಧ ಹಂಪಿಯ (Hampi) ಬೀದಿ ಬದಿ ಟೀ ಅಂಗಡಿ ಇಟ್ಟು ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ದಂಪತಿಯ ಮಗ ಈಗ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ (Mechanical Engineering) 3ನೇ ರ‍್ಯಾಂಕ್ ಗಿಟ್ಟಿಸಿಕೊಂಡು ಪೋಷಕರಿಗೆ ಹೆಮ್ಮೆ ತಂದುಕೊಟ್ಟಿದ್ದಾರೆ.

    ದಿನನಿತ್ಯ ಬದುಕನ್ನು ಕಟ್ಟಿಕೊಳ್ಳಲು ವಿಶ್ವ ಪ್ರಸಿದ್ಧ ಹಂಪಿಯಲ್ಲಿ ವಿರೂಪಾಕ್ಷೇಶ್ವರ ದೇವಸ್ಥಾನದ ಪಕ್ಕದ ತುಂಗಭದ್ರಾ ನದಿ ದಂಡೆಯ ಮೇಲೆ ಟೀ ಮತ್ತು ಟಿಫನ್ ವ್ಯಾಪಾರವನ್ನು ಮಾಡುತ್ತಿರುವ ಪದ್ಮಾವತಿ ಹಾಗೂ ನರಸರಾಜರವರ ಮಗನಾದ ಪವನ್ ಕುಮಾರ್ 2022-23ನೇ ಶೈಕ್ಷಣಿಕ ಸಾಲಿನ ಎಂಜಿನಿಯರಿಂಗ್ ಪರೀಕ್ಷೆಯಲ್ಲಿ ಒಟ್ಟು 9.46 ಸಿಜಿಪಿಎ ಅಂಕ ಪಡೆದು ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಮಹಾವಿದ್ಯಾಲಯಕ್ಕೆ 3ನೇ ರ‍್ಯಾಂಕ್ ಪಡೆದಿದ್ದಾರೆ. ಇದನ್ನೂ ಓದಿ: ಗ್ರಾಮ ಪಂಚಾಯತಿ ಅಧ್ಯಕ್ಷ ಚುನಾವಣೆ: ಟೂರ್ ಕಳಿಸಿದ ಆಕಾಂಕ್ಷಿಗೆ ಕೈ ಕೊಟ್ಟ ಸದಸ್ಯರು

    ಬಡತನದಲ್ಲಿ ಅರಳಿದ ಪ್ರತಿಭೆ, ತಂದೆ ತಾಯಿ ದಿನನಿತ್ಯ ಬೀದಿ ಬದಿಯಲ್ಲಿ ವ್ಯಾಪಾರವನ್ನು ಮಾಡಿಕೊಂಡು ಕಷ್ಟಪಟ್ಟು ಮಗನನ್ನು ಹೊಸಪೇಟೆಯ ಪ್ರೌಢದೇವರಾಯ ಮಹಾವಿದ್ಯಾಲಯಕ್ಕೆ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿಗೆ ಸೇರಿಸಿದ್ದರು. ಮಗ ಅತ್ಯಂತ ಕಷ್ಟಪಟ್ಟು ವಿದ್ಯಾಭ್ಯಾಸವನ್ನು ಮಾಡಿ, ನಿರಂತರ ಕಠಿಣ ಪರಿಶ್ರಮದ ಫಲವಾಗಿ ಇಂದು 3ನೇ ರ‍್ಯಾಂಕ್ ಬಂದು ಪೋಷಕರಿಗೆ ಹೆಮ್ಮೆ ತಂದುಕೊಟ್ಟಿದ್ದಾರೆ.  ಇದನ್ನೂ ಓದಿ: 5 ಡಜನ್‍ಗೂ ಹೆಚ್ಚು ಇನ್ಸ್‌ಪೆಕ್ಟರ್‌ ವರ್ಗಾವಣೆಗೆ ತಡೆ – ಆದೇಶಕ್ಕೆ ದಿಢೀರ್‌ ತಡೆ ಹಿಡಿದಿದ್ದು ಯಾಕೆ?

    ತನ್ನ ಸಾಧನೆ ಮೂಲಕ ಪವನ್ ಕುಮಾರ್ ಪೋಷಕರಿಗೆ ಸಂತೋಷ ತಂದುಕೊಟ್ಟಿದ್ದು ಮಾತ್ರವಲ್ಲದೇ ಹಂಪಿ ಹಾಗೂ ವಿಜಯನಗರ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿಇಟಿ ರ್‍ಯಾಂಕ್ ರದ್ದು- ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಲು ಸರ್ಕಾರ ನಿರ್ಧಾರ

    ಸಿಇಟಿ ರ್‍ಯಾಂಕ್ ರದ್ದು- ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಲು ಸರ್ಕಾರ ನಿರ್ಧಾರ

    ಬೆಂಗಳೂರು: ಸಿಇಟಿ ರ್‍ಯಾಂಕ್ ರದ್ದುಪಡಿಸಿದ ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.

    ಇಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ತಮ್ಮ ನಿವಾಸದಲ್ಲಿ ಕೆಇಎ ಅಧಿಕಾರಿಗಳು, ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಕಾನೂನು ತಜ್ಞರ ಜೊತೆ ಸಭೆ ನಡೆಸಿ ಚರ್ಚೆ ನಡೆಸಿದರು. ಸಭೆಯಲ್ಲಿ ಏಕ ಸದಸ್ಯ ಪೀಠದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿರ್ಧಾರ ಮಾಡಲಾಯ್ತು. ಇದನ್ನೂ ಓದಿ: ಹೈಕೋರ್ಟ್‌ನಿಂದ ಸಿಇಟಿ ರ‍್ಯಾಂಕ್‌ ರದ್ದು- ಮೇಲ್ಮನವಿ ಸಲ್ಲಿಸುತ್ತಾ ಸರ್ಕಾರ?

    ಸಭೆ ಬಳಿಕ ಮಾತನಾಡಿದ ಸಚಿವ ಅಶ್ವಥ್ ನಾರಾಯಣ, ಎಂದೂ ಆಗದ ರೀತಿ ಈ ಬಾರಿ ಸವಾಲು ನಾವು ನೋಡ್ತಿದ್ದೇವೆ. 25 ಸಾವಿರ ರಿಪೀಟರ್ಸ್ ವಿದ್ಯಾರ್ಥಿಗಳು ಈ ಬಾರಿ ಸಿಇಟಿ ಪರೀಕ್ಷೆ ಬರೆದಿದ್ದಾರೆ. ಹೊಸ ವಿದ್ಯಾರ್ಥಿಗಳಿಗೆ ಇದರಿಂದ ಅನ್ಯಾಯ ಆಗದಂತೆ ನಾವು ನಿರ್ಧಾರ ಮಾಡಿದ್ವಿ. ಆದರೆ ಹೈಕೋರ್ಟ್ ರ್‍ಯಾಂಕ್ ರದ್ದು ಮಾಡಿದೆ. ಹೈಕೋರ್ಟ್ ಆದೇಶದ ತೀರ್ಪಿನಿಂದ 1.5 ಲಕ್ಷ ಹೊಸ ವಿದ್ಯಾರ್ಥಿಗಳಿಗೆ ಅನ್ಯಾಯ ಆಗಲಿದೆ. ಹೀಗಾಗಿ ಹೈಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ತೀರ್ಮಾನ ಮಾಡಲಾಗಿದೆ ಎಂದರು.  ಇದನ್ನೂ ಓದಿ: ಸಮವಸ್ತ್ರ ನಿರ್ಧಾರ ಶಿಕ್ಷಣ ಹಕ್ಕು ಉಲ್ಲಂಘನೆಯಲ್ಲ – ಹಿಜಬ್ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಅಭಿಪ್ರಾಯ

    ಸಮಸ್ಯೆ ಬಗೆಹರಿಸಲು ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸುತ್ತೇವೆ. ಇಂದು ಅಥವಾ ನಾಳೆ ಎಲ್ಲಾ ಸಿದ್ಧತೆಗಳನ್ನ ಮಾಡಿಕೊಂಡು, ದ್ವಿ-ಸದಸ್ಯ ಪೀಠಕ್ಕೆ ಹೋಗುತ್ತೇವೆ. ಕಾನೂನು ತಜ್ಞರ ಜೊತೆ ಚರ್ಚೆ ಮಾಡಿದ್ದೇವೆ. ಯಾರಿಗೂ ಅನ್ಯಾಯ ಆಗದಂತೆ ಕ್ರಮಕ್ಕೆ ಮುಂದಾಗುತ್ತೇವೆ. ಎಲ್ಲವು ಸಮಯದ ಒಳಗೆ ಮುಗಿಸುತ್ತೇವೆ. ವಿದ್ಯಾರ್ಥಿಗಳಿಗೆ ಒಳ್ಳೆಯದು ಮಾಡಲು ನಾವು ಸಿದ್ದರಿದ್ದೇವೆ. ರಿಪೀಟರ್ಸ್ ವಿದ್ಯಾರ್ಥಿಗಳ ಮೇಲೆ ನಮಗೇನು ಕೋಪ ಇಲ್ಲ. ಟೆಕ್ನಕಲ್ ವಿಷಯದಿಂದ ಹೊಸ ವಿದ್ಯಾರ್ಥಿಗಳಿಗೆ ಅನ್ಯಾಯ ಆಗಲಿದೆ. ಎಲ್ಲರಿಗೂ ನ್ಯಾಯ ಕೊಡುವ ಕೆಲಸ ಮಾಡಲು ಕ್ರಮ ತಗೋತೀವಿ ಅಂತ ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

  • ರಾಜ್ಯಕ್ಕೆ 2ನೇ ರ‍್ಯಾಂಕ್ ಪಡೆದ ವಿದ್ಯಾರ್ಥಿನಿಗೆ ಆಧಾರ್ ಕಾರ್ಡ್ ಸಮಸ್ಯೆ!

    ರಾಜ್ಯಕ್ಕೆ 2ನೇ ರ‍್ಯಾಂಕ್ ಪಡೆದ ವಿದ್ಯಾರ್ಥಿನಿಗೆ ಆಧಾರ್ ಕಾರ್ಡ್ ಸಮಸ್ಯೆ!

    ರಾಯಚೂರು: ಎಸ್‌ಎಸ್‌ಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 2ನೇ ರ‍್ಯಾಂಕ್ ಪಡೆದ ಸಿಂಧನೂರಿನ ವಿದ್ಯಾರ್ಥಿನಿ ಬಸವಲೀಲಾ ಆಧಾರ್ ಕಾರ್ಡ್ ಇಲ್ಲದೆ ಮುಂದಿನ ಶಿಕ್ಷಣಕ್ಕೆ ಸಮಸ್ಯೆ ಎದುರಿಸುತ್ತಿದ್ದಾಳೆ.

    2016 ರಿಂದಲೂ ಅರ್ಜಿ ಹಾಕಿ ಅಲೆದಾಡಿ ಸುಸ್ತಾಗಿರುವ ಪ್ರತಿಭಾವಂತ ವಿದ್ಯಾರ್ಥಿನಿ ಬಸವಲೀಲಾ ಇದುವರೆಗೆ 11 ಬಾರಿ ಅರ್ಜಿ ಹಾಕಿದ್ದಾಳೆ. ಆದರೂ ಇಲ್ಲಿಯವೆಗೆ ಆಧಾರ್ ಕಾರ್ಡ್ ಸಿಕ್ಕಿಲ್ಲ. ಇದನ್ನೂ ಓದಿ: ಅವಳಿ ಮಕ್ಕಳೊಂದಿಗೆ ಅಣ್ಣಮ್ಮ ದೇವಸ್ಥಾನಕ್ಕೆ ನಟಿ ಅಮೂಲ್ಯ ಭೇಟಿ

    ಬಡತನದ ಕುಟುಂಬದ ವಿದ್ಯಾರ್ಥಿನಿಗೆ ಯಾವುದೇ ಸೌಲಭ್ಯಗಳು ಇಲ್ಲದಿದ್ದರೂ ಸರ್ಕಾರಿ ಶಾಲೆಯಲ್ಲೇ ಓದಿ 625 ಕ್ಕೆ 624 ಅಂಕಗಳನ್ನು ಪಡೆದು ರಾಜ್ಯಕ್ಕೆ ದ್ವಿತೀಯ ಹಾಗೂ ಜಿಲ್ಲೆಗೆ ಪ್ರಥಮ ರ‍್ಯಾಂಕ್ ತಂದಿದ್ದಾಳೆ. ಕುಟುಂಬದ ಕಷ್ಟದ ಮಧ್ಯೆಯೂ ಆಧಾರ್ ಕಾರ್ಡ್ ಇಲ್ಲದೆ ವಿದ್ಯಾರ್ಥಿನಿ ಇದುವರೆಗೆ ಸ್ಕಾಲರ್ಶಿಪ್ ನಿಂದಲೂ ವಂಚಿತಳಾಗಿದ್ದಾಳೆ. ಇದನ್ನೂ ಓದಿ: ತರಗತಿ, ಗ್ರಂಥಾಲಯಕ್ಕೂ ಹಿಜಬ್ ಧರಿಸಿ ಬರುವಂತಿಲ್ಲ- ವಿವಾದದ ಬಳಿಕ ಮಂಗಳೂರು ವಿವಿ ಖಡಕ್ ಆದೇಶ

    ಮುಂದಿನ ವಿದ್ಯಾಭ್ಯಾಸಕ್ಕೆ ಆಧಾರ್ ಕಾರ್ಡ್ ಅವಶ್ಯಕತೆ ಇದ್ದು, ಈ ಹಿನ್ನೆಲೆ ವಿದ್ಯಾರ್ಥಿನಿ ಈಗ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ನಾನಾ ಕಾರಣಗಳಿಗೆ ಆಧಾರ್ ಕಾರ್ಡ್ ನೀಡಲು ಸಿಬ್ಬಂದಿ ವಿಳಂಬ ಮಾಡುತ್ತಿದ್ದಾರೆ. ಮಸ್ಕಿ, ಸಿಂಧನೂರಿಗೆ ತೆರಳಿ ಅರ್ಜಿ ಹಾಕಿದರೂ ತಾಂತ್ರಿಕ ಸಮಸ್ಯೆ ಕಾರಣಕ್ಕೆ ಇದುವರೆಗೂ ಆಧಾರ್ ಕಾರ್ಡ್ ಬಂದಿಲ್ಲ. ಆಧಾರ್ ಕಾರ್ಡ್ ಇಲ್ಲದೆ ಪರದಾಡುತ್ತಿರುವ ವಿದ್ಯಾರ್ಥಿನಿ ಬಸವಲೀಲಾ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾಳೆ.

  • ಯುಪಿಎಸ್‍ಸಿ ಅಂತಿಮ ಫಲಿತಾಂಶ ಪ್ರಕಟ- ರಾಜ್ಯದ 18 ಮಂದಿ ಉತ್ತೀರ್ಣ

    ಯುಪಿಎಸ್‍ಸಿ ಅಂತಿಮ ಫಲಿತಾಂಶ ಪ್ರಕಟ- ರಾಜ್ಯದ 18 ಮಂದಿ ಉತ್ತೀರ್ಣ

    – ಶುಭಂ ಕುಮಾರ್ ಟಾಪರ್
    – 77ನೇ ರ‍್ಯಾಂಕ್ ಪಡೆದು ಅಕ್ಷಯ್ ಸಿಂಹ ರಾಜ್ಯಕ್ಕೆ ಪ್ರಥಮ

    ನವದೆಹಲಿ: ಯುಪಿಎಸ್‍ಸಿ 2020ರ ಅಂತಿಮ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದ 18 ಮಂದಿ ಉತ್ತೀರ್ಣರಾಗಿದ್ದಾರೆ. ಪರೀಕ್ಷೆಯಲ್ಲಿ ಒಟ್ಟು 836 ಮಂದಿ ಪಾಸ್ ಆಗಿದ್ದಾರೆ.

    ಶುಭಂ ಕುಮಾರ್ ಮೊದಲ ರ‍್ಯಾಂಕ್ ಪಡೆದಿದ್ದು, ಇವರು ಐಐಟಿ ಬಾಂಬೆಯಿಂದ ಬಿ.ಟೆಕ್ (ಸಿವಿಲ್ ಎಂಜಿನಿಯರಿಂಗ್) ಪದವಿ ಪಡೆದಿದ್ದಾರೆ. ಜಾಗೃತಿ ಅವಸ್ಥಿ 2ನೇ ರ‍್ಯಾಂಕ್ ಪಡೆದಿದ್ದು, ಮಹಿಳೆಯರಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಜಾಗೃತಿ ಅವಸ್ಥಿ ಅವರು ಎಲೆಕ್ಟ್ರಿಕ್ ಎಂಜಿನಿಯರ್ ಪದವಿ ಪಡೆದಿದ್ದಾರೆ. ಭೂಪಾಲ್‍ನ ಮನೀತ್ ಮೂಲದವರಾಗಿದ್ದಾರೆ. ಅಂಕಿತ್ ಜೈನ್ 3ನೇ ರ‍್ಯಾಂಕ್ ಗಳಿಸಿದ್ದಾರೆ. ಇದನ್ನೂ ಓದಿ: ಟಿ20 ವಿಶ್ವಕಪ್ ಗೆದ್ದ ಇತಿಹಾಸಕ್ಕೆ ಇಂದಿಗೆ 14 ವರ್ಷ

    ಒಟ್ಟು 836 ಮಂದಿ ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಐಎಎಸ್ ಹುದ್ದೆಗೆ 180, ಐಪಿಎಸ್ ಹುದ್ದೆಗೆ 200, ಐಎಫ್‍ಎಸ್ ಗೆ 36, ಕೇಂದ್ರೀಯ ಸೇವೆ ಗ್ರೂಪ್ ಎ ಹುದ್ದೆಗೆ 302 ಮತ್ತು ಗ್ರೂಪ್ ಬಿಗೆ 118 ಮಂದಿ ಆಯ್ಕೆಯಾಗಿದ್ದಾರೆ. ಟಾಪ್ 25 ಸ್ಥಾನಗಳಲ್ಲಿ 13 ಮಂದಿ ಪುರುಷರು ಮತ್ತು 12 ಮಹಿಳೆಯರು ಇದ್ದಾರೆ. ಇದನ್ನೂ ಓದಿ: ಅ. 1ರಿಂದ ಥಿಯೇಟರ್‌ಗಳು ಹೌಸ್‍ಫುಲ್- ಕಂಡೀಷನ್ಸ್ ಅಪ್ಲೈ

    ರಾಜ್ಯದ 18 ಮಂದಿ ಉತ್ತೀರ್ಣ
    ಯುಪಿಎಸ್‍ಸಿ ಪರೀಕ್ಷೆಯಲ್ಲಿ ಕರ್ನಾಟಕದ 18 ಮಂದಿ ಉತ್ತೀರ್ಣರಾಗಿದ್ದಾರೆ. ಅಕ್ಷಯ್ ಸಿಂಹ 77ನೇ ರ‍್ಯಾಂಕ್ ಪಡೆಯುವ ಮೂಲಕ ಕರ್ನಾಟಕದ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ. ಅಕ್ಷಯ್ ಸಿಂಹ ಮೂಲತಃ ಮಂಡ್ಯದವರು, ಹುಟ್ಟಿ ಬೆಳೆದಿದ್ದು ಬೆಂಗಳೂರು. ಇಂಡಿಯಾ ಫಾರ್ ಐಎಎಸ್ ಅಕಾಡೆಮಿಯಲ್ಲಿ ತರಬೇತಿ ಪಡೆದು ಕರ್ನಾಟಕಕ್ಕೆ ಮೊದಲ ಸ್ಥಾನ ಪಡೆಯುವ ಮೂಲಕ ಅಕ್ಷಯ್ ಸಿಂಹ ಹೆಮ್ಮೆಗೆ ಪಾತ್ರರಾಗಿದ್ದಾರೆ.

    ಉಳಿದಂತೆ ಕನಕಪುರದ ಯತೀಶ್.ಆರ್ 115ನೇ ರ‍್ಯಾಂಕ್, ಮೈಸೂರಿನ ಪ್ರಿಯಾಂಕ.ಕೆ.ಎಂ. 121ನೇ ರ‍್ಯಾಂಕ್, ಮೈಸೂರಿನ ನಿಶ್ಚಯ್.ಆರ್ 130ನೇ ರ‍್ಯಾಂಕ್ ಪಡೆದಿದ್ದಾರೆ. ಸಿರಿವೆನ್ನಲ 204, ಬೆಂಗಳೂರಿನ ಅನಿರುಧ್ 252, ಸೂರಜ್ 255,  ನೇತ್ರ ಮೇಟಿ 326, ಮೇಘ ಜೈನ್ 354, ಪ್ರಜ್ವಲ್ 367, ಸಾಗರ್.ಎ.ವಾಡಿ 385, ನಾಗರಗೋಜೆ ಶುಭಂ 453, ಶಕೀರ್ ಅಹಮದ್ 583, ಪ್ರಮೋದ್ ಆರಾಧ್ಯ 601, ಸೌರಭ್.ಕೆ 725ನೇ ರ‍್ಯಾಂಕ್ ಪಡೆದಿದ್ದಾರೆ.

  • ಸಿಇಟಿ ಫಲಿತಾಂಶ ಪ್ರಕಟ – ಐದು ವಿಭಾಗದಲ್ಲೂ ಮೈಸೂರಿನ ಮೇಘನ್‍ಗೆ ಫಸ್ಟ್ ರ್‍ಯಾಂಕ್

    ಸಿಇಟಿ ಫಲಿತಾಂಶ ಪ್ರಕಟ – ಐದು ವಿಭಾಗದಲ್ಲೂ ಮೈಸೂರಿನ ಮೇಘನ್‍ಗೆ ಫಸ್ಟ್ ರ್‍ಯಾಂಕ್

    – ಈ ವರ್ಷ 6 ಗ್ರೇಸ್ ಮಾರ್ಕ್ಸ್

    ಬೆಂಗಳೂರು: ಇಂದು ರಾಜ್ಯದಲ್ಲಿ ಸಿಇಟಿ ಫಲಿತಾಂಶ ಪ್ರಕಟಗೊಂಡಿದೆ. ಅಗ್ರಿಕಲ್ಚರ್, ಎಂಜಿನಿಯರಿಂಗ್ ಸೇರಿ ಎಲ್ಲಾ 5 ವಿಭಾಗದಲ್ಲೂ ಮೈಸೂರಿನ ಮೇಘನ್ ಪ್ರಥಮ ರ್‍ಯಾಂಕ್ ಪಡೆದಿದ್ದಾರೆ.

    2021ನೇ ಸಾಲಿನ ಸಿಇಟಿ ಫಲಿತಾಂಶವನ್ನು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಅವರು ಪ್ರಕಟಿಸಿದರು. ಕೆಇಎ ಕಾರ್ಯ ನಿರ್ವಾಹಕ ನಿರ್ದೇಶಕಿ ರಮ್ಯ ಉಪಸ್ಥಿತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು. ಇದನ್ನೂ ಓದಿ: ಸಣ್ಣ ಮಳೆಗೆ ನದಿಯಂತಾದ ಬೆಂಗಳೂರು ರಸ್ತೆ

    ಈ ವರ್ಷ 6 ಗ್ರೇಸ್ ಮಾರ್ಕ್ಸ್ ನೀಡಲಾಗಿದ್ದು, ಗಣಿತ 3 ಅಂಕ ಮತ್ತು ಭೌತಶಾಸ್ತ್ರ 3 ಗ್ರೇಸ್ ಮಾರ್ಕ್ಸ್ ನೀಡಲಾಗಿದೆ. ಮುಂದಿನ ವರ್ಷದ ವ್ಯಾಸಂಗಕ್ಕೆ ಸಿಇಟಿ ಫಲಿತಾಂಶವನ್ನು ಆಧರಿಸಿ ಮೂಲ ದಾಖಲಾಗಿ ಪರಿಶೀಲನೆಗೆ ಪ್ರತಿ ಜಿಲ್ಲಾ ಕೇಂದ್ರದಲ್ಲಿ ಸೌಲಭ್ಯ ಕೇಂದ್ರ ಪ್ರಾರಂಭವಾಗಲಿದ್ದು, ಸೆಪ್ಟೆಂಬರ್ 30 ರಿಂದ ದಾಖಲಾತಿ ಪರಿಶೀಲನೆ ಪ್ರಾರಂಭಿಸಲಾಗುವುದು. ಅಭ್ಯರ್ಥಿಗಳು ಹತ್ತಿರದ ಕೇಂದ್ರಕ್ಕೆ ಹೋಗಿ ದಾಖಲಾತಿ ನೀಡಬೇಕು ಎಂದು ಮಾಹಿತಿ ಹಂಚಿಕೊಂಡರು.

    ಮೈಸೂರಿನ ಮೇಘನ್, ಎಂಜಿನಿಯರಿಂಗ್, ಅಗ್ರಿಕಲ್ಚರ್, ಯೋಗ ಮತ್ತು ನ್ಯಾಚುರೋಪತಿ, ಪಶು ಸಂಗೋಪನೆ, ಕೃಷಿ, ಬಿ. ಫಾರ್ಮ್, ಐದು ವಿಭಾಗದಲ್ಲೂ ಪ್ರಥಮ ರ್‍ಯಾಂಕ್ ಪಡೆದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ನ ಹಲವು ಶಾಸಕರು ಬಿಜೆಪಿಗೆ ಬರ್ತಾರೆ: ಬಿಎಸ್‍ವೈ

    ಎಂಜಿನಿಯರಿಂಗ್‍ನಲ್ಲಿ ಪ್ರೇಮಾಂಕುರ್ ಚಕ್ರಬರ್ತಿ ಬೆಂಗಳೂರು ಪಡೆದರೆ, ಯೋಗ- ನ್ಯಾಚಿರೋಪತಿಯಲ್ಲಿ ವರುಣ್ ಆದಿತ್ಯಾ ಬೆಂಗಳೂರು, ಕೃಷಿಯಲ್ಲಿ ರೀಥಮ್ ಮಂಗಳೂರು, ಪಶು ಸಂಗೋಪನೆಯಲ್ಲಿ ವರುಣ್ ಅದಿತ್ಯಾ ಬೆಂಗಳೂರು ಮತ್ತು ಬಿ. ಫಾರ್ಮ್‍ನಲ್ಲಿ ಪ್ರೇಮಾಂಕುರ್ ಚಕ್ರಬರ್ತಿ ಬೆಂಗಳೂರು ದ್ವೀತಿಯ ರ್‍ಯಾಂಕ್ ಪಡೆದಿದ್ದಾರೆ.

    ಆಗಸ್ಟ್ 28 ರಿಂದ 30 ರವರೆಗೆ ಪರೀಕ್ಷೆ ನಡೆದಿತ್ತು. ಈ ಬಾರಿ 2,01,834 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ರು. 1,93,447 ಅಭ್ಯರ್ಥಿಗಳು ಪರೀಕ್ಷೆ ಹಾಜರಾಗಿದ್ದರು. 12 ಕೋವಿಡ್ ವಿದ್ಯಾರ್ಥಿಗಳು ಕೂಡ ಪರೀಕ್ಷೆ ಬರೆದಿದ್ದರು. ಎಂಜಿನಿಯರ್ 1,83,231 ವಿದ್ಯಾರ್ಥಿಗಳಿಗೆ ರ್‍ಯಾಂಕ್ ಬಂದರೆ, ಕೃಷಿಯಲ್ಲಿ 1,52,518 ವಿದ್ಯಾರ್ಥಿಗಳು, ಪಶು ಸಂಗೋಪನೆಯಲ್ಲಿ 1,55,770 ವಿದ್ಯಾರ್ಥಿಗಳು, ಯೋಗ- ನ್ಯಾಚೋರೋಪತಿಯಲ್ಲಿ 1,55,910 ವಿದ್ಯಾರ್ಥಿಗಳು ಮತ್ತು ಬಿ ಫಾರ್ಮ್, ಪಾರ್ಮ್ ಡಿಯಲ್ಲಿ- 1,86,638 ರ್‍ಯಾಂಕ್ ಬಂದಿದೆ.

    ಎಂಜಿನಿಯರ್
    1. ಮೇಘನ್ (ಮೈಸೂರು)
    2. ಪ್ರೇಮಾಂಕುರ್ ಚಕ್ರಬರ್ತಿ( ಬೆಂಗಳೂರು)
    3. ಬಿ.ಡಿ.ಅನುರುದ್( ಬೆಂಗಳೂರು)

    ಬಿಎನ್‍ವೈಎಸ್ ರಾಂಕ್
    1. ಮೇಘನ್( ಮೈಸೂರು)
    2. ವರುಣ್ ಆದಿತ್ಯಾ( ಬೆಂಗಳೂರು)
    3. ರೀಥಮ್( ಮಂಗಳೂರು)

    ಬಿಎಸ್ಸಿ- ಕೃಷಿ
    1. ಮೇಘನ್ – ಮೈಸೂರು
    2. ರೀಥಮ್- ಮಂಗಳೂರು
    3. ಆದಿತ್ಯಾ ಪ್ರಭಾಸ್- ಬೆಂಗಳೂರು

    ಬಿ.ವಿ.ಎಸ್.ಸಿ(ಪಶು ಸಂಗೋಪನೆ)
    1. ಮೇಘನ್- ಮೈಸೂರು
    2. ವರುಣ್ ಅದಿತ್ಯಾ-ಬೆಂಗಳೂರು
    3. ರೀಥಮ್- ಮಂಗಳೂರು

    ಬಿ ಫಾರ್ಮ್
    1. ಮೇಘನ್- ಮೈಸೂರು
    2. ಪ್ರೇಮಾಂಕುರ್ ಚಕ್ರಬರ್ತಿ- ಬೆಂಗಳೂರು
    3. ಬಿ.ಎಸ್. ಅನುರುದ್ – ಬೆಂಗಳೂರು

    60 ಕ್ಕೆ 55 ಕ್ಕೂ ಹೆಚ್ಚು ಅಂಕ ಪಡೆದವರು:
    ಭೌತಶಾಸ್ತ್ರ – 26
    ರಸಾಯನಶಾಸ್ತ್ರ- 217
    ಗಣಿತ – 199
    ಜೀವಶಾಸ್ತ್ರ- 5,235

    60 ಕ್ಕೆ 60 ಅಂಕ ಪಡೆದವರು:
    ಭೌತಶಾಸ್ತ್ರ -0
    ರಸಾಯನಶಾಸ್ತ್ರ-3
    ಗಣಿತ – 6
    ಜೀವಶಾಸ್ತ್ರ- 50

    ಪರೀಕ್ಷೆ ಬರೆದವರು ವಿವರ:
    ಒಟ್ಟು ಪರೀಕ್ಷೆ ಬರೆದವರು – 1,93,447
    ಹುಡುಗರು – 95,462
    ಹುಡುಗಿಯರು – 97,985

  • ಒಲಿಪಿಯಾಡ್‌ ವಿಜೇತ, ಓದಿನಲ್ಲಿ ರ‍್ಯಾಂಕ್‌ – ಎಂಜಿನಿಯರಿಂಗ್‌ ಶಿಕ್ಷಣಕ್ಕೆ ಗುಡ್‌ಬೈ ಹೇಳಿದ್ದ ʼಧೋನಿʼ

    ಒಲಿಪಿಯಾಡ್‌ ವಿಜೇತ, ಓದಿನಲ್ಲಿ ರ‍್ಯಾಂಕ್‌ – ಎಂಜಿನಿಯರಿಂಗ್‌ ಶಿಕ್ಷಣಕ್ಕೆ ಗುಡ್‌ಬೈ ಹೇಳಿದ್ದ ʼಧೋನಿʼ

    ಮುಂಬೈ: ನಟನೆಯಲ್ಲೂ ಮಿಂಚಿದ್ದ ಸುಶಾಂತ್‌ ಸಿಂಗ್‌ ರಜಪೂತ್‌ ಅಧ್ಯಯನದಲ್ಲೂ ಮುಂದಿದ್ದರು. ರ‍್ಯಾಂಕ್ ವಿದ್ಯಾರ್ಥಿಯಾಗಿದ್ದ ಇವರು ಎಂಜಿನಿಯರಿಂಗ್‌ ಓದಿದ್ದರು.

    1986ರ ಜನವರಿ 21ರಂದು ಬಿಹಾರ ಪಾಟ್ನಾದಲ್ಲಿ ಜನಿಸಿದ್ದ ಸುಶಾಂತ್‌ ರಾಷ್ಟ್ರಮಟ್ಟದ ಫಿಸಿಕ್ಸ್‌ ಒಲಿಂಪಿಯಾಡ್‌ನಲ್ಲಿ ಭಾಗವಹಿಸಿ ಬಹುಮಾನ ಗೆದ್ದಿದ್ದರು. 2003ರ ದೆಹಲಿ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಪರೀಕ್ಷೆಯಲ್ಲಿ 7ನೇ ರ‍್ಯಾಂಕ್‌ ಪಡೆದಿದ್ದರು. ಬಳಿಕ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಪದವಿ ಓದಿದ್ದರು. ಈ ವೇಳೆ ಓದಿನ ಕಡೆ ಹೆಚ್ಚು ಒಲವು ನೀಡದ ಪರಿಣಾಮ ಹಲವು ವಿಷಯಗಳಲ್ಲಿ ಅನುತ್ತೀರ್ಣಗೊಂಡಿದ್ದರು. 4 ವರ್ಷದ ಎಂಜಿಯರಿಂಗ್‌ ಪದವಿಯಲ್ಲಿ ಸುಶಾಂತ್‌ ಮೂರು ವರ್ಷ ಮಾತ್ರ ಓದಿ ಅರ್ಧದಲ್ಲೇ ಶಿಕ್ಷಣ ಗುಡ್‌ಬೈ ಹೇಳಿ ಕಲಾ ಜೀವನದತ್ತ ಮುಖ ಮಾಡಿದರು.


    ಎಂಜಿನಿಯರಿಂಗ್‌ ಓದುತ್ತಿರುವಾಗಲೇ ನೃತ್ಯ ತರಗತಿಗೆ ಸೇರಿ ನೃತ್ಯಪಟುವಾಗಿ ಗುರುತಿಸಿಕೊಂಡಿದ್ದರು. 51ನೇ ಫಿಲ್ಮ್‌ಫೇರ್‌ ಪ್ರಶಸ್ತಿ ಕಾರ್ಯಕ್ರಮದಲ್ಲಿ ನೃತ್ಯ ಮಾಡಿದ್ದ ಸುಶಾಂತ್‌ 2006ರ ಕಾಮನ್‌ವೇಲ್ತ್‌ ಗೇಮ್ಸ್‌ ಉದ್ಘಾಟನಾ ಸಮಾರಂಭದ ವೇಳೆ ನೃತ್ಯ ಪ್ರದರ್ಶನ ನೀಡಿದ್ದರು.

    2009ರಲ್ಲಿ ಪವಿತ್ರ ರಿಸ್ತಾ ಸಿನಿಮಾಕ್ಕಾಗಿ ಇಂಡಿಯನ್‌ ಟೆಲಿವಿಷನ್‌ ಅಕಾಡೆಮಿ ಪ್ರಶಸ್ತಿ, 2010ರಲ್ಲಿ ಬೆಸ್ಟ್‌ ಸ್ಟಾರ್‌ ಎಂಟರ್‌ಟೈನ್ಮೆಂಟ್‌ ಪ್ರಶಸ್ತಿ ಸಿಕ್ಕಿತ್ತು. ಎಂಎಸ್‌ ಧೋನಿ ಅನ್‌ಟೋಲ್ಡ್‌ ಸ್ಟೋರಿ ಸಿನಿಮಾದ ಅಭಿನಯಕ್ಕಾಗಿ 2017ರಲ್ಲಿ ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ ನಡೆದ ಇಂಡಿಯನ್‌ ಫಿಲ್ಮ್‌ ಫೆಸ್ಟಿವಲ್‌ ಕಾರ್ಯಕ್ರಮದಲ್ಲಿ ಉತ್ತಮ ನಟ ಪ್ರಶಸ್ತಿಯನ್ನು ಗೆದ್ದಿದ್ದರು.

     

    ಓದಿನಲ್ಲೂ, ನಟನೆಯಲ್ಲೂ ಮುಂದಿದ್ದ ಸುಶಾಂತ್ ಸಿಂಗ್ ರಜಪೂತ್ (34) ಆತ್ಮಹತ್ಯೆಗೆ ಶರಣಾಗಿದ್ದು ಯಾಕೆ ಎನ್ನುವುದು ಇನ್ನೂ ನಿಗೂಢವಾಗಿದೆ. ಮುಂಬೈ ಬಾಂದ್ರಾ ನಿವಾಸದಲ್ಲಿ ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ವರದಿಯಾಗಿದೆ.

    ಖಾಸಗಿ ವಾಹಿನಿಯ ಪವಿತ್ರ ರಿಶ್ತಾ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದ ಸುಶಾಂತ್, ಕೈ ಪೋ ಚೇ ಸಿನಿಮಾ ಮೂಲಕ ಬಾಲಿವುಡ್ ಪ್ರವೇಶಿಸಿದ್ದರು. ತದನಂತರ ಬಿಡುಗಡೆಯಾಗಿದ್ದ ‘ಶುದ್ಧ್ ದೇಶಿ ರೊಮ್ಯಾನ್ಸ್’ ಸಿನಿಮಾದ ನಟನೆ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಜೀವನಾಧರಿತ ಚಿತ್ರ ಸುಶಾಂತ್ ಸಿಂಗ್ ದೊಡ್ಡ ಮಟ್ಟದ ಬ್ರೇಕ್ ನೀಡಿತ್ತು.

  • ಐಎಎಸ್‍ನಲ್ಲಿ ಬಳ್ಳಾರಿ ಯುವತಿ ರಾಜ್ಯಕ್ಕೆ 14ನೇ ರ್‍ಯಾಂಕ್!

    ಐಎಎಸ್‍ನಲ್ಲಿ ಬಳ್ಳಾರಿ ಯುವತಿ ರಾಜ್ಯಕ್ಕೆ 14ನೇ ರ್‍ಯಾಂಕ್!

    ಬಳ್ಳಾರಿ: ಜಿಲ್ಲಾಧಿಕಾರಿಯೊಬ್ಬರು ಬಡವರಿಗೆ ಸೂರನ್ನು ಕಲ್ಪಿಸಿರುವುದನ್ನು ನೋಡಿ ಪ್ರೇರಣೆಗೊಂಡು ತಾನು ಕೂಡ ಜಿಲ್ಲಾಧಿಕಾರಿಯಾಗಬೇಕೆನ್ನುವ ಮಹದಾಸೆ ಹೊತ್ತ ಬಳ್ಳಾರಿಯ ಯುವತಿ ಇದೀಗ ಯುಪಿಎಸ್‍ಸಿ(ಕೇಂದ್ರ ಲೋಕಸ ಸೇವಾ ಆಯೋಗ) ಪರೀಕ್ಷೆಯಲ್ಲಿ ರಾಜ್ಯಕ್ಕೆ 14ನೇ ರ್‍ಯಾಂಕ್ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.

    ಬಳ್ಳಾರಿ ತಾಲೂಕಿನ ಸಂಗನಕಲ್ ನಿವಾಸಿ ವೆಂಕಟರಮಣಪ್ಪ ಮತ್ತು ಸುಮಾ ದಂಪತಿಯ ಮಗಳಾದ ಅಶ್ವಿಜಾ ಈ ಸಾಧನೆ ಮಾಡಿದ ಯುವತಿ. ಲೋಕೋಪಯೋಗಿ ಇಲಾಖೆಯಲ್ಲಿ ಎಂಜಿನಿಯರ್ ಆಗಿರುವ ತಂದೆಯೊಂದಿಗೆ ಕೆಲ ವರ್ಷಗಳ ಹಿಂದೆ ಬಳ್ಳಾರಿ ತಾಲೂಕಿನ ಗುಡಾರ ನಗರಕ್ಕೆ ಹೋದಾಗ ಅಂದಿನ ಬಳ್ಳಾರಿ ಜಿಲ್ಲಾಧಿಕಾರಿ ಜಾವೀದ್ ಆಖ್ತರ್ ಗೂಡಾರ ನಗರ ನಿವಾಸಿಗಳಿಗೆ 200 ಮನೆಗಳನ್ನು ನಿರ್ಮಿಸಿದ್ದರಂತೆ. ಅದನ್ನು ನೋಡಿ ಪ್ರೇರಣೆಗೊಂಡ ಅಶ್ವಿಜಾ, ತಾನೂ ಜಿಲ್ಲಾಧಿಕಾರಿಯಾಗಿ ಬಡವರ ಸೇವೆ ಮಾಡಬೇಕೆನ್ನುವ ಮಹದಾಸೆ ಹೊಂದಿದ್ದರು. ಇದನ್ನೂ ಓದಿ: ಯುಪಿಎಸ್‍ಸಿ ಫಲಿತಾಂಶ ಪ್ರಕಟ: ರಾಹುಲ್ ಶರಣಪ್ಪ ರಾಜ್ಯಕ್ಕೆ ಟಾಪ್

    ಅಂದಿನಿಂದಲೇ ಓದಿನ ಬಗ್ಗೆ ಹೆಚ್ಚಿನ ಗಮನ ಹರಿಸಿದ ಅಶ್ವಿಜಾ, ಬಳ್ಳಾರಿಯಲ್ಲಿ ಪಿಯುಸಿವರೆಗೆ ವ್ಯಾಸಂಗ ಮುಗಿಸಿ 2014-15ನೇ ಸಾಲಲ್ಲಿ ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದ್ರು. ನಂತರ ನಿರಂತರ ಅಧ್ಯಯನ ಮಾಡುವ ಮೂಲಕ ಇದೀಗ ಯುಪಿಎಸ್‍ಸಿ ಯಲ್ಲಿ ರಾಜ್ಯಕ್ಕೆ 14ನೇ ಮತ್ತು ಒಟ್ಟಾರೆ 423ನೇ ರ್‍ಯಾಂಕ್ ಪಡೆದು ಬಳ್ಳಾರಿಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

    ಯುಗಾದಿ ಹಬ್ಬದ ದಿನವೇ ಪರೀಕ್ಷೆ ಫಲಿತಾಂಶ ಬಂದಿರುವುದು ಅಶ್ವೀಜಾ ಕುಟಂಬದಲ್ಲಿ ಡಬಲ್ ಖುಷಿ ಮನೆ ಮಾಡಿತ್ತು.

    https://www.youtube.com/watch?v=6uU5qe5L5LU

  • ಶಿಥಿಲಾವಸ್ಥೆಯಲ್ಲಿದ್ದ ಟ್ಯಾಂಕ್ ಕುಸಿದು ಓರ್ವನ ದುರ್ಮರಣ

    ಶಿಥಿಲಾವಸ್ಥೆಯಲ್ಲಿದ್ದ ಟ್ಯಾಂಕ್ ಕುಸಿದು ಓರ್ವನ ದುರ್ಮರಣ

    ಮಡಿಕೇರಿ: ಹಳೇ ಓವರ್ ಹೆಡ್ ಟ್ಯಾಂಕ್ ಅನ್ನು ನೆಲಸಮಗೊಳಿಸುತ್ತಿದ್ದ ಸಂದರ್ಭ ಕಾರ್ಮಿಕರೊಬ್ಬರು ಅದರ ಅಡಿಗೆ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಪಿರಿಯಪಟ್ಟಣ ತಾಲೂಕು ತೆಲಗಿನಕುಪ್ಪೆ ಬೋರೆ ಎಂಬಲ್ಲಿ ನಡೆದಿದೆ.

    ಬೈಲುಕುಪ್ಪೆಯ ಹಳೆಯೂರು ಗ್ರಾಮದ ಸರ್ದಾರ್ (50) ಮೃತಪಟ್ಟ ದುರ್ದೈವಿ. ತೆಲಗಿನಕುಪ್ಪೆ ಬೋರೆಯಲ್ಲಿ ಹಳೇಯ ಓವರ್ ಹೆಡ್ ಟ್ಯಾಂಕನ್ನು, ಸರ್ದಾರ್ ಸೇರಿದಂತೆ ಐವರು ನೆಲಸಮಗೊಳಿಸುತ್ತಿದ್ದರು. ಈ ವೇಳೆ ಏಕಾಏಕಿ ಟ್ಯಾಂಕರ್ ಸರ್ದಾರ್ ಅವರ ಮೇಲೆಯೇ ಬಿದ್ದಿದೆ. ಪರಿಣಾಮ ಸ್ಥಳದಲ್ಲೇ ಸರ್ದಾರ್ ಮೃತಪಟ್ಟಿದ್ದಾರೆ. ಅದೃಷ್ಟವಶಾತ್ ಇನ್ನುಳಿದ ನಾಲ್ಕು ಮಂದಿ ಕಾರ್ಮಿಕರು ಅಪಾಯದಿಂದ ಪಾರಾಗಿದ್ದಾರೆ.

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಜೆಸಿಬಿ ಸಹಾಯದಿಂದ ಮೃತದೇಹವನ್ನು ಟ್ಯಾಂಕರ್ ಅಡಿಯಿಂದ ಹೊರತೆಗೆದಿದ್ದಾರೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

    ಘಟನೆ ಸಂಬಂಧ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv