Tag: Ranji Trophy

  • ರಣಜಿ ಪಂದ್ಯ: ಮೊದಲ ದಿನದಾಟದ ಅಂತ್ಯಕ್ಕೆ ಗೋವಾ ವಿರುದ್ಧ ಕರ್ನಾಟಕಕ್ಕೆ 5 ವಿಕೆಟ್ ನಷ್ಟಕ್ಕೆ 222 ರನ್

    ರಣಜಿ ಪಂದ್ಯ: ಮೊದಲ ದಿನದಾಟದ ಅಂತ್ಯಕ್ಕೆ ಗೋವಾ ವಿರುದ್ಧ ಕರ್ನಾಟಕಕ್ಕೆ 5 ವಿಕೆಟ್ ನಷ್ಟಕ್ಕೆ 222 ರನ್

    ಶಿವಮೊಗ್ಗ: ನವಲೆಯ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗೋವಾ ತಂಡದ ವಿರುದ್ಧ ಕರ್ನಾಟಕ ತಂಡವು ಮೊದಲ ದಿನದಾಟದ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ​222 ರನ್​ ಗಳಿಸಿದೆ.

    ಮಳೆಯಿಂದಾಗಿ ಪಂದ್ಯ ತಡವಾಗಿ ಪ್ರಾರಂಭವಾಯಿತು. ಟಾಸ್ ಗೆದ್ದ ಗೋವಾ ಮೊದಲು ಬೌಲಿಂಗ್ ಆಯ್ದುಕೊಂಡಿತು. ಮಳೆಯಿಂದ ಒದ್ದೆಯಾದ ಪಿಚ್​​ನ ಲಾಭ ಪಡೆದ ಗೋವಾ ಬೌಲರ್​ಗಳು ಕರ್ನಾಟಕದ ಬ್ಯಾಟರ್​ಗಳನ್ನು ಕಾಡಿದರು. 65 ರನ್​​ಗಳಿಗೆ 4 ವಿಕೆಟ್ ಕಳೆದುಕೊಂಡ ಕರ್ನಾಟಕ ಬ್ಯಾಟಿಂಗ್​ ವೈಫಲ್ಯ ಅನುಭವಿಸಿತು. ಆರಂಭಿಕರಾದ ನಿಖಿನ್ ಜೋಸೆ ಹಾಗೂ ನಾಯಕ ಮಾಯಂಕ್ ಅರ್ಗವಾಲ್ ಜೋಡಿ ನಿಧಾನಗತಿಯಲ್ಲಿ ಬರುತ್ತಿದ್ದ ಚೆಂಡನ್ನು ಎದುರಿಸಲು ಪರದಾಡಿದರು. ಕ್ರಿಕೆಟ್​ ದೇವರು ಸಚಿನ್ ತೆಂಡೂಲ್ಕರ್​ ಅವರ ಪುತ್ರ ಅರ್ಜುನ್ ತೆಂಡೂಲ್ಕರ್​ 3 ವಿಕೆಟ್​ ಪಡೆದು ವಿಜೃಂಭಿಸಿದರು. ನಿಖಿನ್​ (3), ಕೃಷ್ಣನ್​ ಶ್ರೀಜಿತ್​ (0), ಉತ್ತಮವಾಗಿ ಆಡುತ್ತಿದ್ದ ಅಭಿನವ್​ ಮನೋಹರ್​ ಅವರನ್ನು ಪೆವಿಲಿಯನ್​ಗೆ ಕಳುಹಿಸಿದರು.

    ಒಂದೆಡೆ ವಿಕೆಟ್​ ಉರುಳುತ್ತಿದ್ದರೂ, ನೆಲಕಚ್ಚಿ ಆಡಿದ ನಾಯಕ ಮಾಯಾಂಕ್ ಅರ್ಗವಾಲ್ 69 ಎಸೆತಗಳಲ್ಲಿ 28 ರನ್ ಗಳಿಸಿದ್ದಾಗ ವಾಸುಕಿ ಕೌಶಿಕ್​ ಅವರಿಗೆ ವಿಕೆಟ್ ಒಪ್ಪಿಸಿದರು. ಐದನೇ ಕ್ರಮಾಂಕದಲ್ಲಿ ಆಡಲು ಬಂದ ಸಮರನ್ ರವಿಚಂದ್ರನ್​ 3 ರನ್ ಗಳಿಸುವಷ್ಟರಲ್ಲಿ ಸುಸ್ತಾದರು.

    ಶತಕದತ್ತ ಕರುಣ್​ ನಾಯರ್: ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ವೈಫಲ್ಯ ಕಂಡು ಹೊರಬಿದ್ದಿರುವ ಕರುಣ್ ನಾಯರ್ ದೇಶೀ ಟೂರ್ನಿಗಳಲ್ಲಿ ತಮ್ಮ ಅದ್ಭುತ ಪ್ರದರ್ಶನವನ್ನು ಮುಂದುವರಿಸಿದರು. 138 ಎಸೆತಗಳಲ್ಲಿ 86 ರನ್ ಗಳಿಸಿದ್ದಾರೆ. ಶ್ರೇಯಸ್ ಗೋಪಾಲ್ 48 ರನ್​ ಗಳಿಸಿದ್ದು, ಇಬ್ಬರೂ ನಾಳೆಗೆ ಕ್ರೀಸ್​ ಕಾಯ್ದುಕೊಂಡಿದ್ದಾರೆ. ಶ್ರೇಯಸ್ ಗೋಪಾಲ್ ಹಾಗೂ ಕರುಣ್ ನಾಯರ್ 94 ರನ್​​ಗಳ ಜೊತೆಯಾಟದಿಂದ ತಂಡವು ದಿಢೀರ್ ಕುಸಿತದಿಂದ ಚೇತರಿಸಿಕೊಂಡು, ದಿನದಾಂತ್ಯಕ್ಕೆ 222 ರನ್ ಗಳಿಸಿತು. ಗೋವಾ ಪರವಾಗಿ ಅರ್ಜುನ್ ತೆಂಡೊಲ್ಕರ್ 17 ಓವರ್​ ಎಸೆದು 3 ವಿಕೆಟ್ ಪಡೆದರೆ, ಕೌಶಿಕ್ 18 ಓವರ್​ಗಳಲ್ಲಿ 24 ರನ್ ನೀಡಿ 2 ವಿಕೆಟ್ ಪಡೆದರು.

    ರಾತ್ರಿ ಮಳೆ ಬೀಳದೇ ಹೋದರೆ ನಾಳೆ ಕರ್ನಾಟಕ ತಂಡವು ರನ್ ಗಳಿಸಲು ಉತ್ತಮವಾದ ಅವಕಾಶ ಸಿಗುವ ಸಾಧ್ಯತೆಗಳಿವೆ. ಮೊದಲ ದಿನದಲ್ಲಿ 69 ಓವರ್​ಗಳು ಮಾತ್ರ ಎಸೆಯಲು ಸಾಧ್ಯವಾಯಿತು. ಮಳೆಯಿಂದಾಗಿ ಪಂದ್ಯವು ನಿಗದಿತ ಅವಧಿಗಿಂತ ತಡವಾಗಿ ಆರಂಭವಾಯಿತು.

  • Ranji Trophy | 74 ವರ್ಷಗಳ ಬಳಿಕ ಮೈಲುಗಲ್ಲು – ಹೆಲ್ಮೆಟ್‌ನಿಂದ ರಣಜಿ ಫೈನಲ್‌ ತಲುಪಿದ ಕೇರಳ!

    Ranji Trophy | 74 ವರ್ಷಗಳ ಬಳಿಕ ಮೈಲುಗಲ್ಲು – ಹೆಲ್ಮೆಟ್‌ನಿಂದ ರಣಜಿ ಫೈನಲ್‌ ತಲುಪಿದ ಕೇರಳ!

    – 2 ರನ್‌ ಹಿನ್ನಡೆಯಿಂದ ಗುಜರಾತ್‌ಗೆ ನಿರಾಸೆ – ಸೆಮಿಸ್‌ ಪಂದ್ಯ ಡ್ರಾನಲ್ಲಿ ಅಂತ್ಯ

    ಅಹಮದಾಬಾದ್: ರಣಜಿ ಟ್ರೋಫಿ (Ranji Trophy) ಸೆಮಿ ಫೈನಲ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 2 ರನ್‌ಗಳ ಮುನ್ನಡೆ ಸಾಧಿಸಿದ ಕೇರಳ ತಂಡ (Kerala Team) 74 ವರ್ಷಗಳ ನಂತರ ಫೈನಲ್‌ ತಲುಪಿದ ಸಾಧನೆ ಮಾಡಿದೆ. ಕೊನೇ ಕ್ಷಣದಲ್ಲಿ ಹೆಲ್ಮೆಟ್‌ ಸಹಾಯದಿಂದ ಸಿಕ್ಕ ಕ್ಯಾಚ್‌ ಕೇರಳ ತಂಡವನ್ನು ಫೈನಲ್‌ ತಲುಪುವಂತೆ ಮಾಡಿದೆ. ಆದ್ರೆ 2 ರನ್‌ಗಳ ಹಿನ್ನಡೆಯಿಂದಾಗಿ ಗುಜರಾತ್‌ ತಂಡದ (Gujarat team) ಫೈನಲ್‌ ಕನಸು ಭಗ್ನವಾಗಿದೆ.

    ಇನ್ನಿಂಗ್ಸ್‌ ಕೊನೆಯಲ್ಲಿ ಏನಾಯ್ತು?
    ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ಸೆಮಿ ಫೈನಲ್‌ ಪಂದ್ಯ ನಡೆಯಿತು. ಮೊದಲ ಇನ್ನಿಂಗ್ಸ್‌ನಲ್ಲಿ ಕೇರಳ ತಂಡ 187 ಓವರ್‌ಗಳಲ್ಲಿ 457 ರನ್ ಗಳಿಸಿತ್ತು. 174.3 ಓವರ್‌ಗಳಲ್ಲಿ 455 ರನ್‌ ಗಳಿಸಿದ್ದ ಗುಜರಾತ್‌ 9 ವಿಕೆಟ್‌ ಕಳೆದುಕೊಂಡಿತ್ತು. ಆದ್ರೆ ಇನ್ನಿಂಗ್ಸ್‌ ಮುನ್ನಡೆ ಕಾಯ್ದುಕೊಳ್ಳಲು ಕೇವಲ 2 ರನ್‌ ಬೇಕಿತ್ತು. ಇತ್ತ ಆದಿತ್ಯ ಸರ್ವತೇ ಬೌಲಿಂಗ್‌ನಲ್ಲಿದ್ದರೆ, ಬ್ಯಾಟರ್‌ ಅರ್ಜಾನ್ ನಾಗ್ವಾಸ್ವಾಲ್ಲಾ ಕ್ರೀಸ್‌ನಲ್ಲಿದ್ದರು. 175ನೇ ಓವರ್‌ನ 4ನೇ ಎಸೆತವನ್ನು ಬೌಂಡರಿ ಬಾರಿಸಲು ಅರ್ಜಾನ್‌ ಯತ್ನಿಸಿದರು. ಈ ವೇಳೆ ಮುಂಭಾಗದಲ್ಲಿದ್ದ ಶಾರ್ಟ್‌ ಲೆಗ್‌ ಫೀಲ್ಡರ್‌ನ ಹೆಲ್ಮೆಟ್‌ಗೆ ಬಡಿದ ಚಂಡು ನೇರವಾಗಿ ಸ್ಲಿಪ್‌ ಫೀಲ್ಡರ್‌ ಕೈ ಸೇರಿತು. ಅಂತಿಮವಾಗಿ ಗುಜರಾತ್‌ 174.4 ಓವರ್‌ಗಳಲ್ಲಿ ಆಲೌಟ್‌ ಆಗಿ ಫೈನಲ್‌ನಿಂದ ಹೊರಗುಳಿಯಿತು.

    ಸೆಮಿಸ್‌ನ 5ನೇ ದಿನವಾದ ಇಂದು ಉಭಯ ತಂಡಗಳಿಗೆ 2ನೇ ಇನ್ನಿಂಗ್ಸ್ ಬಾಕಿಯಿತ್ತು. ತನ್ನ ಸರದಿಯ 2ನೇ ಇನ್ನಿಂಗ್ಸ್‌ ಆರಂಭಿಸಿದ ಕೇರಳ ದಿನದ ಅಂತ್ಯಕ್ಕೆ 46 ಓವರ್‌ಗಳಲ್ಲಿ 4 ವಿಕೆಟ್‌ಗೆ 114 ರನ್‌ ಗಳಿಸಿತ್ತು. ಗುಜರಾತ್‌ಗೆ ಬ್ಯಾಟಿಂಗ್‌ ಮಾಡಲು ಅವಕಾಶ ಸಿಗದೇ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು. ಹಾಗಾಗಿ ಮೊದಲ ಇನ್ನಿಂಗ್ಸ್‌ನಲ್ಲಿ 2 ರನ್‌ಗಳ ಮುನ್ನಡೆ ಸಾಧಿಸಿದ ಕೇರಳ ತಂಡ ರಣಜಿ ಫೈನಲ್‌ ಪ್ರವೇಶಿಸಿತು.

    ಸೆಮಿಸ್‌ ಫಲಿತಾಂಶ ನಿರ್ಧಾರವಾಗಿದ್ದು ಹೇಗೆ?
    ಸಹಜವಾಗಿ ರೌಂಡ್ ರಾಬಿನ್ (ಲೀಗ್ ಸುತ್ತಿನ ಪಂದ್ಯ) ಪಂದ್ಯಗಳು 4 ದಿನ ನಡೆಯುತ್ತದೆ. ನಾಕೌಟ್ ಪಂದ್ಯಗಳು ಮಾತ್ರ ಟೆಸ್ಟ್ ಕ್ರಿಕೆಟ್‌ನಂತೆ 5 ದಿನ ಇರಲಿದೆ. ನಾಕೌಟ್ ಪಂದ್ಯದಲ್ಲಿ ಫಲಿತಾಂಶ ಹೊರಬೀಳದಿದ್ದರೆ, ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದ ತಂಡವನ್ನು ವಿಜಯಿ ಎಂದು ಘೋಷಣೆ ಮಾಡಲಾಗುತ್ತದೆ. ಹಾಗೆಯೇ ಮೊದಲ ಇನ್ನಿಂಗ್ಸ್‌ನಲ್ಲಿ 2 ರನ್ ಮುನ್ನಡೆ ಸಾಧಿಸಿದ ಕೇರಳ ತಂಡ ಫೈನಲ್ ತಲುಪಲಿದೆ.

  • ರಣಜಿ ಟ್ರೋಫಿಯಲ್ಲೂ ಕೊಹ್ಲಿಯದ್ದು ಅದೇ ಕಥೆ – 6 ರನ್‌ಗೆ ಔಟಾಗ್ತಿದ್ದಂತೆ ಮೈದಾನದಿಂದ ಹೊರಟ ಫ್ಯಾನ್ಸ್‌

    ರಣಜಿ ಟ್ರೋಫಿಯಲ್ಲೂ ಕೊಹ್ಲಿಯದ್ದು ಅದೇ ಕಥೆ – 6 ರನ್‌ಗೆ ಔಟಾಗ್ತಿದ್ದಂತೆ ಮೈದಾನದಿಂದ ಹೊರಟ ಫ್ಯಾನ್ಸ್‌

    ನವದೆಹಲಿ: ಸುಮಾರು 12 ವರ್ಷಗಳ ನಂತರ ರಣಜಿ ಟ್ರೋಫಿ ಪಂದ್ಯದಲ್ಲಿ (Ranji Trophy Match) ಕಾಣಿಸಿಕೊಂಡು ಸಾವಿರಾರೂ ಪ್ರೇಕ್ಷಕರ ಆರ್ಷಣೆಯಾಗಿದ್ದ ರನ್‌ ಮಿಷಿನ್‌ ವಿರಾಟ್‌ ಕೊಹ್ಲಿ (Virat Kohli), ರೈಲ್ವೇಸ್‌ ವಿರುದ್ಧ ಪಂದ್ಯದಲ್ಲಿ ಕೇವಲ 6 ರನ್‌ ಗಳಿಸುವ ಮೂಲಕ ನಿರಾಸೆ ಮೂಡಿಸಿದ್ರು.

    ರೈಲ್ವೇಸ್‌ ವಿರುದ್ಧ 2ನೇ ದಿನದಾಟದಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ದೈತ್ಯ ಆಟಗಾರ, 15 ಎಸೆತಗಳನ್ನು ಎದುರಿಸಿ 1 ಫೋರ್‌ ಸಹಿತ ಕೇವಲ 6 ರನ್‌ಗಳಿಗೆ ಹಿಮಾಂಶು ಸಾಂಗ್ವಾನ್‌ಗೆ (Himanshu Sangwan) ವಿಕೆಟ್‌ ಒಪ್ಪಿಸಿ ಮೈದಾನ ತೊರೆದರು. ಕೊಹ್ಲಿ ಡಗ್‌ಔಟ್‌ನತ್ತ ಧಾವಿಸುತ್ತಿದ್ದಂತೆಯೇ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರು ಗೊಣಗುತ್ತಲೇ ಕ್ರೀಡಾಂಗಣದಿಂದ ಹೊರ ನಡೆದರು.

    ಫಾರ್ಮ್ ಸ್ಥಿರತೆ ಕಾಯ್ದುಕೊಳ್ಳಲು ಹೆಣಗಾಡುತ್ತಿರುವ ಕೊಹ್ಲಿ, ಬಿಸಿಸಿಐ ಸೂಚನೆ ಮೇರೆಗೆ ದಶಕದ ನಂತರ ರಣಜಿ ಆಡಲು ನಿರ್ಧರಿಸಿದ್ದರು. ದೇಶೀಯ ಪಂದ್ಯದಲ್ಲಿ ಅವರ ಆಟವನ್ನು ಕಣ್ತುಂಬಿಸಿಕೊಳ್ಳಲು ಸಾವಿರಾರು ಪ್ರೇಕ್ಷಕರು ಎದುರು ನೋಡುತ್ತಿದರು. ಆದರೆ ಕೊಹ್ಲಿ ಎಲ್ಲದಕ್ಕೂ ತಣ್ಣಿರೆರೆಚಿದರು. ಇದನ್ನೂ ಓದಿ: ಟಿಕ್‌ಟಾಕ್ ವೀಡಿಯೋ ಮಾಡಿದ್ದಕ್ಕೆ ಪಾಕಿಸ್ತಾನದಲ್ಲಿ 15 ವರ್ಷದ ಪುತ್ರಿಯನ್ನೇ ಗುಂಡಿಕ್ಕಿ ಕೊಂದ ಅಪ್ಪ

    ವಿಡಿಯೋ ಸಿಕ್ಕಾಪಟ್ಟೆ ವೈರಲ್‌:
    ದಿಗ್ಗಜ ಕ್ರಿಕೆಟಿಗನನ್ನು ಯುವ ಆಟಗಾರ ಹಿಮಾಂಶು ಸಾಂಗ್ವಾನ್‌ ಔಟ್‌ ಮಾಡಿದ ವೀಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ಸಾಂಗ್ವಾನ್‌ ವೇಗದ ದಾಳಿಗೆ ವಿಕೆಟ್‌ ಚಿಂದಿಯಾಗಿರುವುದು ಕೊಹ್ಲಿ ಅಭಿಮಾನಿಗಳಿಗೂ ನಿದ್ದೆಗೆಡಿಸಿದೆ. ಇದನ್ನೂ ಓದಿ: ದೇಸಿ ಗರ್ಲ್ ಈಗ ದುಬಾರಿ- ರಾಜಮೌಳಿ ಚಿತ್ರಕ್ಕೆ ಪ್ರಿಯಾಂಕಾ ಚೋಪ್ರಾ ಸಂಭಾವನೆ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ

    ಹಿಮಾಂಶು ಸಾಂಗ್ವಾನ್‌ ಯಾರು?
    ರೈಲ್ವೆಸ್‌ ತಂಡದ ಹಿಮಾಂಶು ಸಾಂಗ್ವಾನ್‌ ಬಲಗೈ ಮಧ್ಯಮ ವೇಗಿ ಮತ್ತು. ದೆಹಲಿಯವರೇ ಆಗಿರುವ ಸಾಂಗ್ವಾನ್‌ 2019ರ ಸೆಪ್ಟೆಂಬರ್‌ನಲ್ಲಿ ಲಿಸ್ಟ್‌-ಎ ದೇಸಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. 2019-20ರ ವಿಜಯ್‌ ಹಜಾರೆ ಟ್ರೋಫಿಯಲ್ಲಿ ರೈಲ್ವೆಸ್‌ ತಂಡದ ಪರವಾಗಿ ಗುರುತಿಸಿಕೊಂಡರು. ನಂತರ 2019-20ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ತಮ್ಮ T20 ಚೊಚ್ಚಲ ಪಂದ್ಯವನ್ನಾಡಿದ ಸಾಂಗ್ವಾನ್‌, 2019ರ ಡಿಸೆಂಬರ್‌ನಲ್ಲಿ ರೈಲ್ವೇಸ್‌ಗಾಗಿ ರಣಜಿ ಟ್ರೋಫಿಯಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ ಪ್ರವೇಶಿಸಿದರು.

  • 4 ರನ್‌ ಗಳಿಸಿ ವೈಭವ್‌ ವಿಶೇಷ ಸಾಧನೆ – 13ರ ಬಾಲಕನಿಗೆ ಹಿರಿಯ ಕ್ರಿಕೆಟಿಗರಿಂದ ಮೆಚ್ಚುಗೆ

    4 ರನ್‌ ಗಳಿಸಿ ವೈಭವ್‌ ವಿಶೇಷ ಸಾಧನೆ – 13ರ ಬಾಲಕನಿಗೆ ಹಿರಿಯ ಕ್ರಿಕೆಟಿಗರಿಂದ ಮೆಚ್ಚುಗೆ

    ಭೋಪಾಲ್‌: ಇತ್ತೀಚೆಗೆ ನಡೆದ ಐಪಿಎಲ್‌ ಮೆಗಾ ಹರಾಜಿನಲ್ಲಿ 1.10 ಕೋಟಿ ರೂ.ಗೆ ಬಿಕರಿಯಾಗಿ ಇತಿಹಾಸ ಸೃಷ್ಟಿಸಿದ 13 ವರ್ಷದ ವೈಭವ್ ಸೂರ್ಯವಂಶಿ (Vaibhav Suryavanshi) ಇದೀಗ ಮತ್ತೊಂದು ವಿಶೇಷ ಸಾಧನೆ ಮಾಡಿದ್ದಾರೆ.

    ಅತ್ಯಂತ ಕಿರಿಯ ವಯಸ್ಸಿನಲ್ಲೇ ವಿಜಯ್‌ ಹಜಾರೆ ಟ್ರೋಫಿ‌ (ದೇಶೀಯ ಏಕದಿನ ಪಂದ್ಯ) ಪಂದ್ಯವನ್ನಾಡಿದ ವಿಶೇಷ ಸಾಧನೆಗೆ ಪಾತ್ರರಾದರು. 1999-2000 ಇಸವಿಯ ಋತುವಿನಲ್ಲಿ ಅಲಿ ಅಕ್ಬರ್‌ 14 ವರ್ಷ, 51 ದಿನಗಳ ವಯಸ್ಸಿನವರಾಗಿದ್ದಾಗ ವಿದರ್ಭ ಪರವಾಗಿ ಪಂದ್ಯವನ್ನಾಡಿದ್ದರು. ಈ ಮೂಲಕ ವಿಜಯ್‌ ಹಜಾರೆ ಟ್ರೋಫಿಗೆ (Vijay Hazare Trophy) ಪದಾರ್ಪಣೆ ಮಾಡಿದ್ದ ಅತ್ಯಂತ ಕಿರಿಯ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದರು. ಆದರೀಗ ವೈಭವ್‌ ಸೂರ್ಯವಂಶಿ 13 ವರ್ಷ, 269 ದಿನಗಳಿದ್ದಾಗ ದೇಶಿಯ ಕ್ರಿಕೆಟ್‌ ಟ್ರೋಫಿಯನ್ನಾಡಿ ಗಮನ ಸೆಳೆದಿದ್ದಾರೆ.

    ಶನಿವಾರ ಬಿಹಾರ ತಂಡದ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಮಧ್ಯಪ್ರದೇಶ (Madhya Pradesh) ತಂಡದ ಪರ ಆಡಿದ್ದಾರೆ. ವೈಭವ್‌ ಸೂರ್ಯವಂಶಿ ಆರಂಭಿಕನಾಗಿ ಕಣಕ್ಕಿಳಿದು ಕೇವಲ 4 ರನ್‌ ಗಳಿಸಿ ಔಟಾಗಿದ್ದಾರೆ. ಮೊದಲು ಬ್ಯಾಟಿಂಗ್‌ ಮಾಡಿದ್ದ ಬಿಹಾರ ತಂಡ 46.4 ಓವರ್‌ಗಳಲ್ಲಿ 196 ರನ್‌ಗಳಿಗೆ ಆಲೌಟ್‌ ಆಗಿತ್ತು. ಈ ಗುರಿ ಬೆನ್ನಟ್ಟಿದ್ದ ಮಧ್ಯಪ್ರದೇಶ ತಂಡ ಕೇವಲ 25.1 ಓವರ್‌ಗಳಲ್ಲೇ 197 ರನ್‌ ಗಳಿಸಿ ಗೆಲುವು ಸಾಧಿಸಿತು. ಇದನ್ನೂ ಓದಿ: ಕೊನೆಯ ದಿನವೂ ಮಳೆಯಾಟ – ಗಬ್ಬಾ ಟೆಸ್ಟ್‌ ಡ್ರಾನಲ್ಲಿ ಅಂತ್ಯ; WTC ಫೈನಲ್‌ ರೇಸ್‌ನಲ್ಲಿ ಉಳಿದ ಭಾರತ

    5ನೇ ವಯಸ್ಸಿನಲ್ಲೇ ಕ್ರಿಕೆಟ್ ಅಭ್ಯಾಸ ಶುರು ಮಾಡಿದ್ದ ವೈಭವ್, 12ನೇ ವಯಸ್ಸಿಗೆ ಪ್ರಥಮ ದರ್ಜೆ ಪಂದ್ಯವಾಡಿದ್ದರು. ಈಗಾಗಲೇ ರಣಜಿ ಟ್ರೋಫಿ, ಹೇಮಂತ್ ಟ್ರೋಫಿ, ಕೂಚ್ ಬಿಹಾರ್ ಟ್ರೋಫಿ ಮತ್ತು ವಿನೂ ಮಂಕಡ್ ಟೂರ್ನಿಗಳಲ್ಲಿ ಆಡಿದ್ದಾರೆ. 13ನೇ ವಯಸ್ಸಿನೊಳಗೆ ಭಾರತ ಅಂಡರ್-19 ತಂಡದಲ್ಲೂ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ ಹೈಬ್ರಿಡ್ ಮಾಡೆಲ್‌ನಲ್ಲೇ ಆಟ – ತಟಸ್ಥ ತಾಣಗಳಲ್ಲಿ ಭಾರತದ ಪಂದ್ಯಗಳ ಆಯೋಜನೆ: ಖಚಿತಪಡಿಸಿದ ICC

    2023 ರಲ್ಲಿ ರಣಜಿ ಟೂರ್ನಿಗೆ ಪದಾರ್ಪಣೆ ಮಾಡಿದ್ದ ಸೂರ್ಯವಂಶಿ, ಆ ಬಳಿಕ ಬಿಹಾರ ಕ್ರಿಕೆಟ್ ಸಂಸ್ಥೆ ಆಯೋಜಿಸಿದ್ದ ರಣಧೀರ್ ವರ್ಮಾ ಅಂಡರ್ 19 ಏಕದಿನ ಟೂರ್ನಿಯಲ್ಲಿ ಕಣಕ್ಕಿಳಿದಿದ್ದರು. ಈ ಪಂದ್ಯದಲ್ಲಿ ತ್ರಿಶತಕ ಸಿಡಿಸುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಖ್ಯಾತಿಗೆ ಪಾತ್ರರಾಗಿದ್ದರು. ಕಳೆದ ತಿಂಗಳು ಆಸ್ಟ್ರೇಲಿಯಾದ ಅಂಡರ್-19 ತಂಡದ ವಿರುದ್ಧ 64 ಎಸೆತಗಳಲ್ಲಿ 104 ರನ್ ಸಿಡಿಸಿ ಮಿಂಚಿದ್ದರು. ಈ ವೇಳೆ ಅವರು ಕೇವಲ 58 ಎಸೆತಗಳಲ್ಲಿ ಶತಕ ಪೂರೈಸಿ, ಅಂಡರ್-19 ಟೆಸ್ಟ್‌ನಲ್ಲಿ ಅತಿ ವೇಗದ ಶತಕ ಸಿಡಿಸಿದ ಭಾರತೀಯ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದ್ದಾರೆ.

    ಸೂರ್ಯವಂಶಿ ಈವರೆಗೆ ಒಟ್ಟು 49 ಶತಕಗಳನ್ನು ಸಿಡಿಸಿದ್ದಾರೆ. ಇದರಿಂದಲೇ ವೈಭವ್ ಹೆಸರು ಐಪಿಎಲ್‌ ಮೆಗಾ ಹರಾಜು ಪಟ್ಟಿಯಲ್ಲೂ ಕಾಣಿಸಿಕೊಂಡಿತ್ತು. ಬಳಿಕ 1.10 ಕೋಟಿ ರೂ.ಗಳಿಗೆ ವೈಭವ್‌ ರಾಜಸ್ಥಾನ್‌ ರಾಯಲ್ಸ್‌ ತಂಡದ ಪಾಲಾಗಿದ್ದಾರೆ. ಇದೀಗ ಹಾರ್ದಿಕ್‌ ಪಾಂಡ್ಯ, ಅಕ್ಷರ್‌ ಪಟೇಲ್‌, ಶ್ರೇಯಸ್‌ ಅಯ್ಯರ್‌ ಸೇರಿದಂತೆ ರಾಷ್ಟ್ರೀಯ ತಂಡದ ಆಟಗಾರರು ಇರುವ ವಿಜಯ್‌ ಹಜಾರೆ ಟ್ರೋಫಿಯಲ್ಲಿ ವೈಭವ್‌ ಸಹ ಆಡುತ್ತಿರುವುದು ವಿಶೇಷ.  ಇದನ್ನೂ ಓದಿ: ವಿಶ್ವ ಚೆಸ್ ಚಾಂಪಿಯನ್ ಗುಕೇಶ್‌ಗೆ ತಮಿಳುನಾಡು ಸರ್ಕಾರದಿಂದ ಸನ್ಮಾನ – 5 ಕೋಟಿ ರೂ. ಬಹುಮಾನ!

  • Ranji Trophy: ಇನ್ನಿಂಗ್ಸ್‌ನ ಎಲ್ಲಾ 10 ವಿಕೆಟ್‌ ಕಿತ್ತು ದಾಖಲೆ ಬರೆದ ಅಂಶುಲ್‌ ಕಾಂಬೋಜ್‌

    Ranji Trophy: ಇನ್ನಿಂಗ್ಸ್‌ನ ಎಲ್ಲಾ 10 ವಿಕೆಟ್‌ ಕಿತ್ತು ದಾಖಲೆ ಬರೆದ ಅಂಶುಲ್‌ ಕಾಂಬೋಜ್‌

    ಮುಂಬೈ: ರಣಜಿ ಟ್ರೋಫಿ ಇತಿಹಾಸದಲ್ಲಿ 39 ವರ್ಷಗಳ ಬಳಿಕ ಹರಿಯಾಣದ ವೇಗಿ ಅಂಶುಲ್‌ ಕಾಂಬೋಜ್‌ ದಾಖಲೆಯೊಂದನ್ನು ಬರೆದಿದ್ದಾರೆ. ಇನ್ನಿಂಗ್ಸ್‌ವೊಂದರಲ್ಲಿ ಎಲ್ಲಾ 10 ವಿಕೆಟ್‌ಗಳನ್ನು ಪಡೆದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಶುಕ್ರವಾರ ಲಾಹ್ಲಿಯ ಚೌಧರಿ ಬನ್ಸಿ ಲಾಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಹರಿಯಾಣ ಮತ್ತು ಕೇರಳ ನಡುವಿನ ಪಂದ್ಯದಲ್ಲಿ ಈ ಗಮನಾರ್ಹ ಸಾಧನೆಯನ್ನು ಮಾಡಿದ್ದಾರೆ.‌

    ಪಂದ್ಯಾವಳಿಯ ಇತಿಹಾಸದಲ್ಲಿ ಈ ಅಪರೂಪದ ಮೈಲಿಗಲ್ಲನ್ನು ಸಾಧಿಸಿದ ಮೂರನೇ ಬೌಲರ್ ಕಾಂಬೋಜ್. ಇವರ ಬೌಲಿಂಗ್‌ ದಾಳಿಯು ಕೇರಳವನ್ನು ಮೊದಲ ಇನ್ನಿಂಗ್ಸ್‌ನಲ್ಲಿ 291 ರನ್‌ಗಳಿಗೆ ಕಟ್ಟಿಹಾಕಿತು. ಇನ್ನಿಂಗ್ಸ್‌ನಲ್ಲಿ 30.1 ಓವರ್‌ಗಳಲ್ಲಿ 49 ರನ್‌ ನೀಡಿದ ಕಾಂಬೋಜ್‌ 10 ವಿಕೆಟ್‌ ಕಬಳಿಸಿ ದಾಖಲೆ ಬರೆದಿದ್ದಾರೆ.

    ಇತ್ತೀಚೆಗೆ ಮುಕ್ತಾಯಗೊಂಡ ಋತುವಿನಲ್ಲಿ ಮೂರು ಪಂದ್ಯಗಳಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆದಿದ್ದ ಕಾಂಬೋಜ್, ಈ ಅಸಾಮಾನ್ಯ ಪ್ರದರ್ಶನದ ಮೂಲಕ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದರು.

    ರಣಜಿ ಟ್ರೋಪಿಯಲ್ಲಿ 1956-57ರಲ್ಲಿ ಅಸ್ಸಾಂ ವಿರುದ್ಧ ಬಂಗಾಳದ ಪ್ರೇಮಾಂಗ್ಸು ಚಟರ್ಜಿ (10/20) ಮತ್ತು 1985-86ರಲ್ಲಿ ವಿದರ್ಭ ವಿರುದ್ಧ ರಾಜಸ್ಥಾನದ ಪ್ರದೀಪ್ ಸುಂದರಂ (10/78)‌ ಈ ಸಾಧನೆ ಮಾಡಿದ್ದರು.

    10 ವಿಕೆಟ್ ಪಡೆದ ಭಾರತೀಯ ಬೌಲರ್‌ಗಳ ಪಟ್ಟಿ
    10/20 – ಪ್ರೇಮಾಂಗ್ಶು ಚಟರ್ಜಿ – ಬಂಗಾಳ ವಿರುದ್ಧ ಅಸ್ಸಾಂ (1956-57) – ರಣಜಿ ಟ್ರೋಫಿ
    10/46 – ಡೆಬಾಸಿಸ್ ಮೊಹಾಂತಿ – ಪೂರ್ವ ವಲಯ v ದಕ್ಷಿಣ ವಲಯ (2000-01) – ದುಲೀಪ್ ಟ್ರೋಫಿ
    10/49 – ಅಂಶುಲ್ ಕಾಂಬೋಜ್ – ಹರಿಯಾಣ v ಕೇರಳ (2024-25)
    10-74 – ಅನಿಲ್ ಕುಂಬ್ಳೆ – ಭಾರತ v ಪಾಕಿಸ್ತಾನ (1999) – ಕೋಟ್ಲಾ – ಟೆಸ್ಟ್ ಪಂದ್ಯ
    10/78 – ಪ್ರದೀಪ್ ಸುಂದರಂ – ರಾಜಸ್ಥಾನ ವಿರುದ್ಧ ವಿದರ್ಭ (1985-86) – ರಣಜಿ ಟ್ರೋಫಿ
    10/78 – ಸುಭಾಷ್ ಗುಪ್ತೆ – ಬಾಂಬೆ v ಪಾಕಿಸ್ತಾನ ಕಂಬೈನ್ಡ್ ಸರ್ವಿಸಸ್ ಮತ್ತು ಬಹವಲ್ಪುರ್ XI (1954-55)

  • ಟೀಂ ಇಂಡಿಯಾ ಸ್ಟಾರ್‌ ಸರ್ಫರಾಜ್‌ ಖಾನ್‌ ಸಹೋದರನಿಗೆ ಆಕ್ಸಿಡೆಂಟ್

    ಟೀಂ ಇಂಡಿಯಾ ಸ್ಟಾರ್‌ ಸರ್ಫರಾಜ್‌ ಖಾನ್‌ ಸಹೋದರನಿಗೆ ಆಕ್ಸಿಡೆಂಟ್

    ಲಕ್ನೋ: ಟೀಂ ಇಂಡಿಯಾ ಕ್ರಿಕೆಟಿಗ ಸರ್ಫರಾಜ್‌ ಖಾನ್‌ ಅವರ ಸಹೋದರ ಮುಶೀರ್‌ ಖಾನ್‌ (Musheer Khan) ಅವರು ಉತ್ತರ ಪ್ರದೇಶದಲ್ಲಿ ರಸ್ತೆ ಅಪಘಾತಕ್ಕೀಡಾಗಿ (Road Accident) ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

    ಮುಂಬೈ ಮೂಲದ ಆಟಗಾರನಾದ ಮುಶೀರ್‌ ಖಾನ್‌ ಇರಾನಿ ಕಪ್‌ ಟೈ (Irani Cup tie) ಪರವಾಗಿ ಆಡಲು ಕಾನ್ಪುರದಿಂದ ಲಕ್ನೋಗೆ ತನ್ನ ಕೋಚ್‌ ಆಗಿರುವ ತಂದೆ ನೌಶಾದ್‌ ಖಾನ್‌ ಅವರೊಂದಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ರಸ್ತೆ ಅಪಘಾತಕ್ಕೀಡಾಗಿ ಮೂಳೆ ಮುರಿತಕ್ಕೆ ಒಳಗಾಗಿದ್ದಾರೆಂದು ತಿಳಿದುಬಂದಿದೆ. ಇದನ್ನೂ ಓದಿ: IPL 2025 Auction: ಮೆಗಾ ಹರಾಜಿಗೂ ಮುನ್ನ ಬಿಸಿಸಿಐನಿಂದ ಆಗುತ್ತಾ ಪ್ರಮುಖ ಬದಲಾವಣೆ?

    ಪ್ರತಿಭಾನ್ವಿತ ರಣಜಿ ಪ್ಲೇಯರ್‌ ಆಗಿರುವ 19 ವರ್ಷದ ಮುಶೀರ್‌ ಖಾನ್‌ ಈವರೆಗೆ 9 ಪ್ರಥಮದರ್ಜೆ ಪಂದ್ಯಗಳನ್ನಾಡಿದ್ದಾರೆ. ಇತ್ತೀಚೆಗೆ ದುಲೀಪ್‌ ಟ್ರೋಫಿಯಲ್ಲಿ ಭಾರತ – ಎ (India-A) ತಂಡದ ವಿರುದ್ಧ 181 ರನ್ ಗಳಿಸಿ ಮಿಂಚಿದ್ದರು. ಇದನ್ನೂ ಓದಿ: ಭಾರತ-ಬಾಂಗ್ಲಾ 2ನೇ ಟೆಸ್ಟ್ ಪಂದ್ಯಕ್ಕೆ ಮಳೆ ಕಾಟ – ಮೊದಲ ದಿನದಂತ್ಯಕ್ಕೆ ಬಾಂಗ್ಲಾದೇಶ 107ಕ್ಕೆ 3 ವಿಕೆಟ್‌

    ಮುಂದಿನ ಅಕ್ಟೋಬರ್‌ 1 ರಿಂದ 5ರ ವರೆಗೆ ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ರೆಸ್ಟ್ ಆಫ್ ಇಂಡಿಯಾ ವಿರುದ್ಧ ಮುಂಬೈನ ಇರಾನಿ ಕಪ್ ಟೈ ವಿರುದ್ಧ ರಣಜಿ (Ranji Trophy) ನಡೆಯಲಿದೆ. ಅಪಘಾತಕ್ಕೀಡಾಗಿರುವ ಮುಶೀರ್‌ ಆರಂಭಿಕ ಪಂದ್ಯಗಳನ್ನು ಕಳೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ಮತ್ತೊಂದು ವರದಿಯ ಪ್ರಕಾರ, ಕುತ್ತಿಗೆಗೆ ಭಾಗಕ್ಕೆ ಗಾಯವಾಗಿರುವುದರಿಂದ ಮೂರು ತಿಂಗಳ ಕಾಲ ಹೊರಗುಳಿಯುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಇದನ್ನೂ ಓದಿ: IPL 2025 | ಮುಂಬೈ, ಆರ್‌ಸಿಬಿಗೆ ಬಿಗ್‌ ಶಾಕ್‌ – ದೈತ್ಯ ಆಟಗಾರರನ್ನೇ ಹೊರದಬ್ಬಿದ ಫ್ರಾಂಚೈಸಿ

  • Ranji Trophy: ರೈಲ್ವೇಸ್ ವಿರುದ್ಧ ಕರ್ನಾಟಕಕ್ಕೆ ಒಂದು ವಿಕೆಟ್ ರೋಚಕ ಜಯ

    Ranji Trophy: ರೈಲ್ವೇಸ್ ವಿರುದ್ಧ ಕರ್ನಾಟಕಕ್ಕೆ ಒಂದು ವಿಕೆಟ್ ರೋಚಕ ಜಯ

    ಸೂರತ್: ಇಲ್ಲಿ ನಡೆದ ರಣಜಿ ಟ್ರೋಫಿ ಪಂದ್ಯದಲ್ಲಿ (Ranji Trophy) ಅನುಭವಿ ಬ್ಯಾಟರ್ ಮನೀಶ್ ಪಾಂಡೆ (Manish Pandey ) ಅವರ ಅರ್ಧಶತಕದ ನೆರವಿನಿಂದ ಕರ್ನಾಟಕ ತಂಡವು (Karnataka Team) ರೈಲ್ವೇಸ್ ವಿರುದ್ಧ 1 ವಿಕೆಟ್ ರೋಚಕ ಗೆಲುವು ಸಾಧಿಸಿದೆ.

    226 ರನ್ ಗೆಲುವಿನ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ ಒಂದು ಹಂತದಲ್ಲಿ 214ಕ್ಕೆ ಒಂಬತ್ತು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಕೊನೆಯ ವಿಕೆಟ್‍ಗೆ ಗೆಲುವಿಗೆ 12 ರನ್‍ಗಳು ಬೇಕಾಗಿತ್ತು. ಈ ವೇಳೆ ಹೋರಾಟ ನಡೆಸಿದ ಪಾಂಡೆ ತಂಡಕ್ಕೆ ಗೆಲುವು ತಂದುಕೊಟ್ಟರು. ಇದನ್ನೂ ಓದಿ: IND vs ENG Test: 11 ತಿಂಗಳ ಬಳಿಕ ಟೆಸ್ಟ್‌ನಲ್ಲಿ ಶತಕ ಸಿಡಿಸಿದ ಶುಭಮನ್ ಗಿಲ್

    ಮನೀಶ್ ಪಾಂಡೆ 121 ಎಸೆತಗಳಲ್ಲಿ 67 ರನ್ ಗಳಿಸಿ (6 ಬೌಂಡರಿ, 1 ಸಿಕ್ಸರ್) ಅಜೇಯರಾಗಿ ಉಳಿದರು. ಕಡೆಯದಾಗಿ ಕಣಕ್ಕಿಳಿದ ವಾಸುಕಿ ಕೌಶಿಕ್ ಎರಡು ಎಸೆತಗಳಲ್ಲಿ ಅಜೇಯ 1 ರನ್ ಗಳಿಸಿದರು. ರವಿಕುಮಾರ್ ಸಮರ್ಥ್ (35), ಅನೀಶ್ ಕೆವಿ (34), ಶ್ರೀನಿವಾಸ ಶರತ್ (23) ಹಾಗೂ ವಿಜಯಕುಮಾರ್ ವೈಶಾಖ (38) ತಂಡಕ್ಕೆ ಉತ್ತಮ ಮೊತ್ತ ನೀಡಿದರು.

    ಎರಡೂ ಇನ್ನಿಂಗ್ಸ್‌ಗಳಿಂದ ತಲಾ ಐದು ವಿಕೆಟ್ ಸೇರಿ ಪಂದ್ಯದಲ್ಲಿ ಒಟ್ಟು 10 ವಿಕೆಟ್ ಗಳಿಸಿದ ರೈಲ್ವೇಸ್ ತಂಡದ ಸ್ಪಿನ್ನರ್ ಆಕಾಶ್ ಪಾಂಡೆ ಹೋರಾಟ ಫಲಿಸಲಿಲ್ಲ. ರೈಲ್ವೇಸ್‍ನ 155 ರನ್‍ಗಳ ಗುರಿ ಬೆನ್ನಟ್ಟಿದ ಕರ್ನಾಟಕ ಮೊದಲ ಇನಿಂಗ್ಸ್‍ನಲ್ಲಿ 174 ರನ್ ಗಳಿಸಿತ್ತು. ಬಳಿಕ ವಿಜಯಕುಮಾರ್ ವೈಶಾಖ (67ಕ್ಕೆ 5 ವಿಕೆಟ್) ದಾಳಿಗೆ ತತ್ತರಿಸಿದ್ದ ರೈಲ್ವೇಸ್ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ 244ಕ್ಕೆ ಆಲೌಟ್ ಆಗಿತ್ತು. ಇದನ್ನೂ ಓದಿ: ಪಬ್ಲಿಕ್‌ ಟಿವಿ ವಾರ್ಷಿಕೋತ್ಸವ – ಪಬ್ಲಿಕ್ ಹುಡುಗರು ಚಾಂಪಿಯನ್ಸ್‌

  • ರಣಜಿಯಲ್ಲಿ ಬ್ಯಾಟಿಂಗ್ ಅಬ್ಬರ- ಮನೀಷ್ ದ್ವಿಶತಕ ಮಿಂಚಿಂಗ್, ಸೂರ್ಯನಿಗೆ ಶತಕ ಮಿಸ್ಸಿಂಗ್

    ರಣಜಿಯಲ್ಲಿ ಬ್ಯಾಟಿಂಗ್ ಅಬ್ಬರ- ಮನೀಷ್ ದ್ವಿಶತಕ ಮಿಂಚಿಂಗ್, ಸೂರ್ಯನಿಗೆ ಶತಕ ಮಿಸ್ಸಿಂಗ್

    ಮುಂಬೈ/ಪಣಜಿ: ಟೀಂ ಇಂಡಿಯಾದ ಆಟಗಾರ ಮನೀಷ್ ಪಾಂಡೆ (Manish Pandey) ತನ್ನ ಕೆರಿಯರ್‌ನ 100ನೇ ಪ್ರಥಮ ದರ್ಜೆ ಪಂದ್ಯದಲ್ಲಿ ಭರ್ಜರಿ ದ್ವಿಶತಕ ಬಾರಿಸಿ ಮಿಂಚಿದ್ದಾರೆ. ಸೌರಾಷ್ಟ್ರ ವಿರುದ್ಧ ಇನ್ನಿಂಗ್ಸ್‌ನಲ್ಲಿರುವ ಸೂರ್ಯಕುಮಾರ್ ಯಾದವ್ (Suryakumar Yadav) ಟೀಂ ಇಂಡಿಯಾ ಟಿ20 ಉಪನಾಯಕನಾದ ಮೊದಲ ಪಂದ್ಯದಲ್ಲಿ ಶತಕ ವಂಚಿತರಾಗಿದ್ದಾರೆ.

    ಗೋವಾ ವಿರುದ್ಧದ ರಣಜಿ ಟ್ರೋಫಿ (Ranji Trophy) ಕ್ರಿಕೆಟ್ (Cricket) ಪಂದ್ಯದ 2ನೇ ದಿನದಾಟದಲ್ಲಿ ಅಬ್ಬರಿಸಿದ ಮನೀಷ್ ಪಾಂಡೆ ಔಟಾಗದೆ 208 ರನ್ ಚಚ್ಚಿದ್ದಾರೆ. 14 ಬೌಂಡರಿ ಹಾಗೂ 11 ಸಿಕ್ಸರ್‌ಗಳು ಇದರಲ್ಲಿ ಸೇರಿವೆ. ಈ ಮೂಲಕ ಕರ್ನಾಟಕ ತಂಡವನ್ನು ಬೃಹತ್ ಮೊತ್ತಕ್ಕೆ ಕೊಂಡೊಯ್ದಿದ್ದಾರೆ. ಇನ್ನೂ ಕನ್ನಡಿಗ ಮಯಾಂಕ್ ಅಗರ್ವಾಲ್ ಬಳಗ 7 ವಿಕೆಟ್ ನಷ್ಟಕ್ಕೆ 603 ರನ್ ಗಳಿಸಿ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಬುಧವಾರದ ಆಟದ ಅಂತ್ಯಕ್ಕೆ ಗೋವಾ ಮೊದಲ ಇನಿಂಗ್ಸ್‌ನಲ್ಲಿ  3 ವಿಕೆಟ್‌ಗೆ 146 ರನ್ ಗಳಿಸಿ, 457 ರನ್‌ಗಳ ಬೃಹತ್ ಹಿನ್ನಡೆ ಕಾಯ್ದುಕೊಂಡಿದೆ.

    ಕರ್ನಾಟಕ ತಂಡ (Team India) 3 ವಿಕೆಟ್‌ಗೆ 294 ರನ್‌ಗಳಿಂದ 2ನೇ ದಿನದಾಟ ಮುಂದುವರಿಸಿತ್ತು. ಮೊದಲ ದಿನ ಎಂಟು ರನ್‌ಗಳೊಂದಿಗೆ ಅಜೇಯರಾಗುಳಿದಿದ್ದ ಪಾಂಡೆ, 2ನೇ ದಿನ ಭರ್ತಿ 200 ರನ್ ಕಲೆಹಾಕಿದರು. ಇದನ್ನೂ ಓದಿ: ಟಿ20ಗೆ ಪಾಂಡ್ಯ ನಾಯಕ, ಸೂರ್ಯ ಉಪನಾಯಕ – ಟೀಂ ಇಂಡಿಯಾದಲ್ಲಿ ಪಂತ್‍ಗಿಲ್ಲ ಸ್ಥಾನ

    ಇನ್ನೊಂದೆಡೆ ಟೀಂ ಇಂಡಿಯಾದ (Team India) T20 ಉಪನಾಯಕನಾಗಿ ಕಣಕ್ಕಿಳಿರುವ ಸೂರ್ಯಕುಮಾರ್ ಯಾದವ್ ಸದ್ಯ ರಣಜಿ ಟ್ರೋಫಿಯಲ್ಲಿ ಅಬ್ಬರಿಸುತ್ತಿದ್ದಾರೆ. ರಣಜಿಯಲ್ಲೂ ಅದ್ಭುತ ಫಾರ್ಮ್ ಕಾಯ್ದುಕೊಂಡಿರುವ ಸೂರ್ಯಕುಮಾರ್ ಸೌರಾಷ್ಟ್ರ ವಿರುದ್ಧದ ಮೊದಲ ಇನ್ನಿಂಗ್ಸ್‌ನಲ್ಲಿ 107 ಎಸೆತಗಳಿಗೆ 95 ರನ್‌ಗಳಿಸಿ ಔಟಾಗುವ ಮೂಲಕ ಶತಕ ವಂಚಿತರಾಗಿದ್ದಾರೆ. ಇದರಲ್ಲಿ 14 ಬೌಂಡರಿ ಹಾಗೂ 1 ಸಿಕ್ಸರ್ ಸೇರಿವೆ. ಇದನ್ನೂ ಓದಿ: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿ ಹಲವರಿಗೆ T20 ಯಿಂದ ಬ್ರೇಕ್?

    ಇಂದು ಸೌರಾಷ್ಟ್ರ ವಿರುದ್ಧ ಮುಂಬೈ 2ನೇ ಇನ್ನಿಂಗ್ಸ್ ಮುಂದುವರಿಸಿದ್ದು, 16 ಓವರ್‌ಗಳಲ್ಲಿ 70 ರನ್‌ಗಳಿಗೆ ಒಂದು ವಿಕೆಟ್ ಕಳೆದುಕೊಂಡಿದೆ. ಪೃಥ್ವಿ ಶಾ 41 ರನ್ (59 ಎಸೆತ, 6 ಬೌಂಡರಿ) ಗಳಿಸಿದ್ರೆ, ಸೂರ್ಯಕುಮಾರ್ 20 ರನ್ (25 ಎಸೆತ, 3 ಬೌಂಡರಿ) ಗಳಿಸಿ (1 ಗಂಟೆ ಸಮಯಕ್ಕೆ) ಕ್ರೀಸ್‌ನಲ್ಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಶತಕ ಸಿಡಿಸಿ ಅಪ್ಪನಂತೆ ಸಂಭ್ರಮಿಸಿದ ಅರ್ಜುನ್ ತೆಂಡೂಲ್ಕರ್

    ಶತಕ ಸಿಡಿಸಿ ಅಪ್ಪನಂತೆ ಸಂಭ್ರಮಿಸಿದ ಅರ್ಜುನ್ ತೆಂಡೂಲ್ಕರ್

    ಪಣಜಿ: ರಾಜಸ್ಥಾನ (Rajasthan) ವಿರುದ್ಧದ ರಣಜಿ ಪಂದ್ಯದಲ್ಲಿ (Ranji Trophy) ಗೋವಾ (Goa) ಪರ ತನ್ನ ಮೊದಲ ಪಂದ್ಯವಾಡುತ್ತಿರುವ ಅರ್ಜುನ್ ತೆಂಡೂಲ್ಕರ್ (Arjun Tendulkar) ತನ್ನ ಅಪ್ಪ ಸಚಿನ್ ತೆಂಡೂಲ್ಕರ್ (Sachin Tendulkar) ಶತಕ ಸಿಡಿಸಿದ ಬಳಿಕ ಸಂಭ್ರಮಿಸುತ್ತಿದ್ದಂತೆ ಸಂಭ್ರಮಿಸಿದ್ದಾರೆ.

     

     

    ಅರ್ಜುನ್ ತೆಂಡೂಲ್ಕರ್ ಈ ಹಿಂದೆ ಮುಂಬೈ (Mumbai) ಪರ ಆಡುತ್ತಿದ್ದರು. ಈ ಬಾರಿ ರಣಜಿ ಪಂದ್ಯದಲ್ಲಿ ಗೋವಾ ಪರ ಆಡುತ್ತಿದ್ದಾರೆ. ಪ್ರಸ್ತುತ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಅರ್ಜುನ್ ತೆಂಡೂಲ್ಕರ್ 120 ರನ್ (207 ಎಸೆತ, 16 ಬೌಂಡರಿ, 2 ಸಿಕ್ಸ್) ಶತಕ ಬಾರಿಸಿದರು. ಇದು ಅರ್ಜುನ್ ತೆಂಡೂಲ್ಕರ್ ಗೋವಾ ಪರ ಆಡಿದ ಮೊದಲ ರಣಜಿ ಪಂದ್ಯವಾಗಿದೆ. ಶತಕ ಸಿಡಿಸುತ್ತಿದ್ದಂತೆ ಅರ್ಜುನ್ ತೆಂಡೂಲ್ಕರ್ ತಮ್ಮ ತಂದೆ ಸಚಿನ್ ತೆಂಡೂಲ್ಕರ್ ಶತಕ ಸಿಡಿಸಿದ ಬಳಿಕ ಬ್ಯಾಟ್ ಮೇಲೆತ್ತಿ ಆಕಾಶ ನೋಡುವಂತೆ ತಾವು ಕೂಡ ಸಂಭ್ರಮಿಸಿದರು. ಇದನ್ನೂ ಓದಿ: ತಂದೆಯ ಸಾಧನೆ ಸರಿಗಟ್ಟಿದ ಮಗ – ಮೊದಲ ರಣಜಿ ಪಂದ್ಯದಲ್ಲೇ ಅರ್ಜುನ್‌ ತೆಂಡೂಲ್ಕರ್‌ ಶತಕ

    15 ವರ್ಷದಲ್ಲೇ ರಣಜಿ ಕ್ಯಾಪ್ ಧರಿಸಿದ್ದ ಸಚಿನ್ 1988ರಲ್ಲಿ ತಮ್ಮ ಮೊದಲ ರಣಜಿ ಪಂದ್ಯದಲ್ಲಿ ಗುಜರಾತ್ ವಿರುದ್ಧ ಅಜೇಯ 100 ರನ್ ಹೊಡೆದಿದ್ದರು. ಇದೀಗ 23 ವರ್ಷದ ಅರ್ಜುನ್ ತೆಂಡೂಲ್ಕರ್ ರಣಜಿ ಪಂದ್ಯದಲ್ಲಿ ಶತಕ ಸಿಡಿಸಿ ತಂದೆಯ ಹಾದಿಯಲ್ಲಿ ಸಾಗುತ್ತಿದ್ದಾರೆ. ಇದನ್ನೂ ಓದಿ: ಡಿ.18ರ ಫೈನಲ್‌ ನನ್ನ ಕೊನೆಯ ವಿಶ್ವಕಪ್‌ ಪಂದ್ಯ – ನಿವೃತ್ತಿ ಖಚಿತಪಡಿಸಿದ ಮೆಸ್ಸಿ

    https://twitter.com/Cric_GRH/status/1603057187139772416

    ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ ಫೀಲ್ಡಿಂಗ್ ಆಯ್ದುಕೊಂಡಿತು. ಗೋವಾ ಮೊದಲು ಬ್ಯಾಟಿಂಗ್ ಮಾಡಿ ಸುಯಶ್ ಪ್ರಭುದೇಸಾಯಿ 202 ರನ್ (416 ಎಸೆತ, 29 ಬೌಂಡರಿ), ಅರ್ಜುನ್ ತೆಂಡೂಲ್ಕರ್ 120 ರನ್ ಮತ್ತು ಸ್ನೇಹಲ್ ಸುಹಾಸ್ ಕೌಠಂಕರ್ 59 (104 ಎಸೆತ, 7 ಬೌಂಡರಿ, 1 ಸಿಕ್ಸ್) ರನ್ ನೆರವಿನಿಂದ 174 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 547 ರನ್ ಬಾರಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ.

    Live Tv
    [brid partner=56869869 player=32851 video=960834 autoplay=true]

  • ಮುಂಬೈ ವಿರುದ್ಧ ಗೆದ್ದು ಚೊಚ್ಚಲ ಬಾರಿ ರಣಜಿ ಟ್ರೋಫಿ ಎತ್ತಿಹಿಡಿದ ಮಧ್ಯಪ್ರದೇಶ

    ಮುಂಬೈ ವಿರುದ್ಧ ಗೆದ್ದು ಚೊಚ್ಚಲ ಬಾರಿ ರಣಜಿ ಟ್ರೋಫಿ ಎತ್ತಿಹಿಡಿದ ಮಧ್ಯಪ್ರದೇಶ

    ಬೆಂಗಳೂರು: ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ 41 ಬಾರಿ ರಣಜಿ ಟ್ರೋಫಿ ಗೆದ್ದು ದಾಖಲೆ ಬರೆದಿರುವ ಮುಂಬೈ ವಿರುದ್ಧ ಮಧ್ಯಪ್ರದೇಶ 6 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿ ಚೊಚ್ಚಲ ಬಾರಿಗೆ ರಣಜಿ ಟ್ರೋಫಿ ಗೆದ್ದು ಸಂಭ್ರಮಿಸಿದೆ.

    4ನೇ ದಿನದಾಟದಲ್ಲಿ ಮುಂಬೈ ತಂಡ ನೀಡಿದ 108 ರನ್‍ಗಳ ಗೆಲುವಿನ ಗುರಿ ಬೆನ್ನಟ್ಟಿದ ಮಧ್ಯಪ್ರದೇಶ 29.5 ಓವರ್‌ಗಳ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 108 ರನ್ ಸಿಡಿಸಿ 6 ವಿಕೆಟ್‍ಗಳ ಗೆಲುವು ದಾಖಲಿಸಿತು. ಈ ಮೂಲಕ ರಣಜಿ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರಶಸ್ತಿಗೆ ಮುತ್ತಿಕ್ಕಿದೆ. ಇದನ್ನೂ ಓದಿ: ರೋಹಿತ್ ಶರ್ಮಾಗೆ ಕೊರೊನಾ ಪಾಸಿಟಿವ್ – ಕ್ಯಾನ್ಸಲ್ ಆಗುತ್ತಾ ಟೆಸ್ಟ್ ಪಂದ್ಯ?

    ಮಧ್ಯಪ್ರದೇಶ ಪರ ಹಿಮಾಂಶು ಮಂತ್ರಿ 37 ರನ್ (55 ಎಸೆತ, 3 ಬೌಂಡರಿ), ಶುಭಂ ಶರ್ಮಾ 30 ರನ್ (75 ಎಸೆತ, 1 ಬೌಂಡರಿ, 1 ಸಿಕ್ಸ್) ಮತ್ತು ರಜತ್ ಪಾಟಿದಾರ್ ಅಜೇಯ 30 ರನ್ (37 ಎಸೆತ, 4 ಬೌಂಡರಿ) ಬಾರಿಸಿ ಮಧ್ಯಪ್ರದೇಶಕ್ಕೆ ಗೆಲುವಿನ ಉಡುಗೊರೆ ನೀಡಿದರು.

    ಸಂಕ್ಷಿಪ್ತ ಸ್ಕೋರ್:
    ಮುಂಬೈ: ಪ್ರಥಮ ಇನ್ನಿಂಗ್ಸ್ – 374 ರನ್‍ಗೆ ಆಲೌಟ್, ದ್ವಿತೀಯ ಇನ್ನಿಂಗ್ಸ್ – 269 ರನ್‍ಗೆ ಆಲೌಟ್
    ಮಧ್ಯಪ್ರದೇಶ: ಪ್ರಥಮ ಇನ್ನಿಂಗ್ಸ್ 336 ರನ್‍ಗೆ ಆಲೌಟ್, ದ್ವಿತೀಯ ಇನ್ನಿಂಗ್ಸ್ 108ಕ್ಕೆ 4

    Live Tv