Tag: ranji karnataka

  • ಪೂಜಾರ ಭರ್ಜರಿ ದ್ವಿಶತಕ- ಸಂಕಷ್ಟದಲ್ಲಿ ಕರ್ನಾಟಕ

    ಪೂಜಾರ ಭರ್ಜರಿ ದ್ವಿಶತಕ- ಸಂಕಷ್ಟದಲ್ಲಿ ಕರ್ನಾಟಕ

    ರಾಜ್‍ಕೋಟ್ : ಭಾರತದ ಟೆಸ್ಟ್ ತಂಡದ ಆಟಗಾರ ಚೇತೇಶ್ವರ್ ಪೂಜಾರ ಭರ್ಜರಿ ದ್ವಿಶತಕದಿಂದಾಗಿ ಕರ್ನಾಟಕ ವಿರುದ್ಧದ ರಣಜಿ ಪಂದ್ಯದಲ್ಲಿ ಸೌರಾಷ್ಟ್ರ ಬೃಹತ್ ಮೊತ್ತ ಕಲೆಹಾಕಿದೆ. ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿರುವ ಸೌರಾಷ್ಟ್ರ ಗೆಲುವಿನ ಕಡೆ ಮುಖ ಮಾಡಿದೆ. ಸೌರಾಷ್ಟ್ರದ ಬೃಹತ್ ಮೊತ್ತ ಬೆನ್ನತ್ತಿರುವ ಕರ್ನಾಟಕ ಸಂಕಷ್ಟಕ್ಕೆ ಸಿಲುಕಿದೆ.

    ರಾಜ್ ಕೋಟ್ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲ ದಿನದ ಅಂತ್ಯಕ್ಕೆ 162 ರನ್ ಗಳಿಸಿದ್ದ ಪೂಜಾರ ಎರಡನೇ ದಿನ ಕೂಡಾ ಭರ್ಜರಿ ಬ್ಯಾಟಿಂಗ್ ನಡೆಸಿದ್ರು. ಕರ್ನಾಟಕ ತಂಡದ ಬೌಲರ್ ಗಳಿಗೆ ಬೆವರಿಳಿಸಿ ದ್ವಿಶತಕ (248) ಬಾರಿಸಿದ್ರು. ಪೂಜಾರಿಗೆ ಸಾಥ್ ನೀಡಿದ್ದ ಶೆಲ್ಡನ್ ಜಾಕ್ಸನ್ ಕೂಡಾ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮಾಡಿ ಶತಕ(161) ಸಿಡಿಸಿದ್ರು. ಇಬ್ಬರು ಆಟಗಾರರ ಪ್ರದರ್ಶನದಿಂದ ಸೌರಾಷ್ಟ್ರ ಮೊದಲ ಇನ್ನಿಂಗ್ಸ್ ನ್ನ 581 ಗೆ ಡಿಕ್ಲೈರ್ ಮಾಡಿಕೊಳ್ತು. ಭಾರತದ ಪರ ಪ್ರವೀಣ್, ಪವನ್, ಸುಚೀತ್ ತಲಾ ಎರಡು ವಿಕೆಟ್ ಪಡೆದ್ರು.

    ಮೊಲದ ಇನ್ನಿಂಗ್ಸ್ ಪ್ರಾರಂಭ ಮಾಡಿರುವ ಕರ್ನಾಟಕ ಆರಂಭಿಕ ಆಘಾತ ಅನುಭವಿಸಿದೆ. ಇನ್ನಿಂಗ್ಸ್ ನ ಮೊದಲ ಎಸೆತದಲ್ಲೆ ದೇವದತ್ ಔಟಾದ್ರು. ಎರಡನೇ ದಿನದ ಅಂತ್ಯಕ್ಕೆ ಕರ್ನಾಟಕ ಒಂದು ವಿಕೆಟ್ ಕಳೆದುಕೊಂಡು 13 ರನ್ ಗಳಿಸಿದೆ. ಆರ್. ಸಮರ್ಥ ಮತ್ತು ರೋಹನ್ ಕದಂ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

    ಸ್ಕೋರ್:
    ಸೌರಾಷ್ಟ್ರ ಮೊದಲ ಇನ್ನಿಂಗ್ಸ್ 581/7
    ಪೂಜಾರ-248
    ಜಾಕ್ಸನ್ – 161

    ಪ್ರವೀಣ್ – 80-2
    ಸುಚೀತ್ – 129-2

    ಕರ್ನಾಟಕ ಮೊದಲ ಇನ್ನಿಂಗ್ಸ್ – 13/1
    ಆರ್.ಸಮರ್ಥ -6*
    ರೋಹನ್ ಕದಂ – 7*

  • ಕರ್ನಾಟಕ ರಣಜಿ ಆಟಗಾರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ರೌಡಿ ನಲಪಾಡ್!

    ಕರ್ನಾಟಕ ರಣಜಿ ಆಟಗಾರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ರೌಡಿ ನಲಪಾಡ್!

    ಬೆಂಗಳೂರು: ರಣಜಿ ಕ್ರಿಕೆಟ್ ಆಟಗಾರನಿಗೂ ಶಾಂತಿ ನಗರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ರೌಡಿ ನಲಪಾಡ್ ಹಲ್ಲೆ ಮಾಡಿರುವ ವಿಚಾರ ಈಗ ಬೆಳಕಿಗೆ ಬಂದಿದೆ.  ಇದನ್ನೂ ಓದಿ: ರಾಜಿ ಸಂಧಾನಕ್ಕೆ ಮಲ್ಯ ಆಸ್ಪತ್ರೆಗೆ ಬಂದ ಶಾಸಕ ಹ್ಯಾರಿಸ್

    ಸ್ಟಾರ್ ಹೋಟೆಲ್ ಒಂದರಲ್ಲಿ ಪಾರ್ಟಿ ನಡೆಯುತ್ತಿದ್ದಾಗ ಯರ್ ಬಾಟಲ್ ನಲ್ಲಿ ರಣಜಿ ಆಟಗಾರನೊಬ್ಬನಿಗೆ ನಲಪಾಡ್ ಮಾರಣಾಂತಿಕ ಹಲ್ಲೆ ನಡೆಸಿದ್ದ. ಆರು ತಿಂಗಳ ಹಿಂದೆ ಈ ಘಟನೆ ನಡೆದಿದ್ದು ಆಟಗಾರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ದೂರನ್ನು ನೀಡಿರಲಿಲ್ಲ. ಇದನ್ನೂ ಓದಿ:  ವಿಪಕ್ಷಗಳು, ಮಾಧ್ಯಮದ ಮೇಲೆ ಗೂಬೆ ಕೂರಿಸಿದ ರೌಡಿ ನಲಪಾಡ್

    ಈಗ ಸ್ಟಾರ್ ಹೋಟೆಲ್ ಒಂದರ ಮ್ಯಾನೇಜರ್ ಈ ವಿಚಾರವನ್ನು ಬಹಿರಂಗ ಪಡಿಸಿದ ಕಾರಣ ಸುದ್ದಿಯಾಗಿದೆ. ಈ ಸುದ್ದಿ ಪ್ರಕಟವಾದ ಬಳಿಕ ಕರ್ನಾಟಕ ರಣಜಿ ತಂಡ ಸಿದ್ದರಾಮಯ್ಯನವರಿಗೆ ಟ್ವೀಟ್ ಮಾಡಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲು ಕೇಳಿಕೊಂಡಿದೆ. ನಮ್ಮ ರಾಜ್ಯದ ಆಟಗಾರರು ನಮ್ಮ ಕನ್ನಡನಾಡಿನ ಹೆಮ್ಮೆಯ ಪ್ರತಿನಿಧಿಗಳು. ಭಾರತದ ಮಟ್ಟದ್ದಲ್ಲಿ ನಮ್ಮ ನಾಡ ಕೀರ್ತಿಯನ್ನು ಬೆಳಗಿರುವವರು. ದಯವಿಟ್ಟು ಈ ಹಿಂಸೆಗೆ ಅಂತ್ಯ ಹಾಡಿ ಎಂದು ಟ್ವೀಟ್ ಮಾಡಿ ಮಾನವಿ ಮಾಡಿಕೊಂಡಿದೆ. ಇದನ್ನೂ ಓದಿ:ಜೈಲಿಗೆ ಹೋದ ಎರಡೇ ದಿನಕ್ಕೆ ನಲಪಾಡ್ ಕೈಗೆ ಸಿಕ್ತು ಮೊಬೈಲ್ ಫೋನ್!

    https://www.youtube.com/watch?v=rByoOC1wzSk

    https://www.youtube.com/watch?v=RtMFKdQtfME