Tag: Ranji

  • ಪ್ರತಿಭಾವಂತ ಕ್ರಿಕೆಟರ್ ಸಿದ್ಧಾರ್ಥ್ ಶರ್ಮಾ ನಿಧನ

    ಪ್ರತಿಭಾವಂತ ಕ್ರಿಕೆಟರ್ ಸಿದ್ಧಾರ್ಥ್ ಶರ್ಮಾ ನಿಧನ

    ಶಿಮ್ಲಾ: ಹಿಮಾಚಲಪ್ರದೇಶ (Himachal Pradesh) ರಾಜ್ಯ ತಂಡವನ್ನು ಪ್ರತಿನಿಧಿಸುತ್ತಿದ್ದ 28 ವರ್ಷದ ವೇಗಿ ಸಿದ್ಧಾರ್ಥ್ ಶರ್ಮಾ (Sidharth Sharma) ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ.

    ಹಿಮಾಚಲಪ್ರದೇಶ ತಂಡ ಗುಜರಾತ್ ಪರ ರಣಜಿ (Ranji) ಪಂದ್ಯವಾಡಲು ಪ್ರವಾಸದಲ್ಲಿತ್ತು. ಈ ವೇಳೆ ಸಿದ್ಧಾರ್ಥ್ ಶರ್ಮಾ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದೆ ಕೂಡಲೇ ಗುಜರಾತ್‍ನ ವಡೋದರದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಯಿತು. ಆ ಬಳಿಕ 2 ವಾರಗಳಿಂದ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜ.12 ಮಧ್ಯರಾತ್ರಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ವಿಶ್ವಕಪ್‌ ಹಾಕಿಯಲ್ಲಿ ಭಾರತ ಶುಭಾರಂಭ – ಸ್ಪೇನ್‌ ವಿರುದ್ಧ ಗೆಲುವು

    ಈ ಬಗ್ಗೆ ಹಿಮಾಚಲಪ್ರದೇಶ ರಾಜ್ಯ ಕ್ರಿಕೆಟ್‌ ಮಂಡಳಿ ಮಾಹಿತಿ ಹಂಚಿಕೊಂಡಿದ್ದು, ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಿದ್ಧಾರ್ಥ್ ಮಧ್ಯರಾತ್ರಿ ನಮ್ಮನ್ನು ಬಿಟ್ಟು ಅಗಲಿದ್ದಾರೆ. ಕೆಲದಿನಗಳ ಹಿಂದೆ ಪಂದ್ಯಕ್ಕೂ ಮುನ್ನ ಆರೋಗ್ಯದಲ್ಲಿ ಏರುಪೇರು ಕಂಡು ಬಂದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಬಳಿಕ ಚಿಕಿತ್ಸೆಗೆ ಸ್ಪಂದಿಸುತ್ತಿದ್ದರು. ಇದೀಗ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

    ಸಿಧ್ಧಾರ್ಥ್ ಶರ್ಮಾ 6 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದು, 6 ಲಿಸ್ಟ್ A ಮತ್ತು ಒಂದು ಟಿ20 ಪಂದ್ಯವನ್ನಾಡಿ ಒಟ್ಟು 33 ವಿಕೆಟ್ ಪಡೆದಿದ್ದರು. 2022ರ ಡಿಸೆಂಬರ್‌ನಲ್ಲಿ ಬಂಗಾಳ ವಿರುದ್ಧ 69 ರನ್ ನೀಡಿ 5 ವಿಕೆಟ್ ಪಡೆದು ಸಿಧ್ಧಾರ್ಥ್ ಮಿಂಚಿದ್ದರು. ಇದನ್ನೂ ಓದಿ: ನಾನು ತಂಡದ ಜೊತೆಗಿನ ಕೊನೆಯ ಬಸ್ ಪ್ರಯಾಣವನ್ನು ಮಿಸ್ ಮಾಡಿಕೊಳ್ಳಲ್ಲ – 2019ರಲ್ಲೇ ಧೋನಿ ನಿವೃತ್ತಿ ಹೇಳಿದ್ದರು: ಆರ್.ಶ್ರೀಧರ್

    ಸಿದ್ಧಾರ್ಥ್ ತಂದೆ, ತಾಯಿ ಮತ್ತು ಸಹೋದರನನ್ನು ಅಗಲಿದ್ದಾರೆ. ಈ ಬಗ್ಗೆ ಹಿಮಾಚಲಪ್ರದೇಶ ಸಿಎಂ ಸುಖವಿಂದರ್ ಸಿಂಗ್ (Sukhvinder Singh) ಟ್ವೀಟ್‌ ಮಾಡಿ ಸಂತಾಪ ಸೂಚಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ 49 ಬೌಂಡರಿ ಸಹಿತ 379 ರನ್ – ದಾಖಲೆ ಬರೆದ ಪೃಥ್ವಿ ಶಾ

    ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ 49 ಬೌಂಡರಿ ಸಹಿತ 379 ರನ್ – ದಾಖಲೆ ಬರೆದ ಪೃಥ್ವಿ ಶಾ

    ಗುವಾಹಟಿ: ಮುಂಬೈ (Mumbai) ಮತ್ತು ಅಸ್ಸಾಂ (Assam) ನಡುವಿನ ರಣಜಿ (Ranji) ಪಂದ್ಯದಲ್ಲಿ ತ್ರಿಶತಕ ಸಿಡಿಸಿ ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ ಅತೀ ಹೆಚ್ಚು ರನ್ ಸಿಡಿಸಿದ ಆರಂಭಿಕ ಆಟಗಾರ ಎಂಬ ದಾಖಲೆಯನ್ನು ಮುಂಬೈಕರ್ ಪೃಥ್ವಿ ಶಾ (Prithvi Shaw) ಬರೆದಿದ್ದಾರೆ.

    ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನಸೆಳೆದ 23ರ ಹರೆಯದ ಪೃಥ್ವಿ ಶಾ ಅಸ್ಸಾಂ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಮಿಂಚಿದರು. 2ನೇ ದಿನದಾಟದಲ್ಲಿ ಪೃಥ್ವಿ ಶಾ 379 ರನ್ (383 ಎಸೆತ, 49 ಬೌಂಡರಿ, 4 ಸಿಕ್ಸ್) ಚಚ್ಚಿ ಔಟ್ ಆದರು. ಈ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ ಅತೀ ಹೆಚ್ಚು ರನ್ ಬಾರಿಸಿದ ಆರಂಭಿಕ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದಾರೆ. 2016ರಲ್ಲಿ ಸಮಿತ್ ಗೂಹೆಲ್ ಆರಂಭಿಕರಾಗಿ ಸಿಡಿಸಿದ 359 ರನ್ ದಾಖಲೆಯಾಗಿತ್ತು. ಈ ದಾಖಲೆಯನ್ನು ಪೃಥ್ವಿ ಶಾ ಮುರಿದಿದ್ದಾರೆ. ಇದನ್ನೂ ಓದಿ: ಬೆಂಕಿ ಎಸೆತ ಎಸೆದ ಉಮ್ರಾನ್ ಮಲಿಕ್ – ಗಂಟೆಗೆ 156 ಕಿ.ಮೀ ವೇಗದಲ್ಲಿ ಬೌಲಿಂಗ್ ದಾಖಲೆ

    ಜೊತೆಗೆ ಮುಂಬೈ ಪರ ರಣಜಿ ಪಂದ್ಯದಲ್ಲಿ ಅತೀ ಹೆಚ್ಚು ರನ್ ಸಿಡಿಸಿದ ಆಟಗಾರ ಎಂಬ ನೂತನ ದಾಖಲೆಯನ್ನೂ ಬರೆದಿದ್ದಾರೆ. ಈ ಹಿಂದೆ ಮುಂಬೈ ಪರ ಸಂಜಯ್ ಮಾಂಜ್ರೇಕರ್ 377 ರನ್ ಸಿಡಿಸಿದ್ದು, ಹೆಚ್ಚಿನ ರನ್ ಆಗಿತ್ತು. ಈ ದಾಖಲೆಯನ್ನು ಮುರಿದು ನೂತನ ದಾಖಲೆಯನ್ನು ಪೃಥ್ವಿ ಶಾ ಬರೆದಿದ್ದಾರೆ.

    379 ರನ್ ಬಾರಿಸಿ ಮುನ್ನಗ್ಗುತ್ತಿದ್ದ ಪೃಥ್ವಿ ಶಾರನ್ನು ಕಡೆಗೆ ರಿಯಾನ್ ಪರಾಗ್ ಎಲ್‍ಬಿಡಬ್ಲ್ಯೂ ಬಲೆ ಬೀಳಿಸಿ ಔಟ್ ಮಾಡಿದರು. ಈ ಮೂಲಕ ಪೃಥ್ವಿ ಶಾ 21 ರನ್‍ಗಳ ಅಂತರದಿಂದ 400 ರನ್ ಸಿಡಿಸುವ ಅವಕಾಶ ವಂಚಿತರಾದರು. ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ ಮಹಾರಾಷ್ಟ್ರದ ವಿರುದ್ಧ ಬಿ.ಬಿ ನಿಂಬಾಳ್ಕರ್ 1948-49ರಲ್ಲಿ ಸಿಡಿಸಿದ 443 ರನ್‌ ಭಾರತೀಯ ಆಟಗಾರನ ಅತೀ ಹೆಚ್ಚಿನ ರನ್ ಗಳಿಕೆಯಾಗಿದೆ. ಇದನ್ನೂ ಓದಿ: ಮಂಕಡ್ ರನೌಟ್ ಮಾಡಿದ ಶಮಿ – ಮನವಿ ವಾಪಸ್ ಪಡೆದ ರೋಹಿತ್ ನಡೆಗೆ ಭಾರೀ ಮೆಚ್ಚುಗೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದೆಹಲಿಯಲ್ಲಿ ಮಂದ ಬೆಳಕಿನದ್ದೇ ಆಟ- ಕರ್ನಾಟಕಕ್ಕೆ ಗೆಲುವು ಮರೀಚಿಕೆ

    ದೆಹಲಿಯಲ್ಲಿ ಮಂದ ಬೆಳಕಿನದ್ದೇ ಆಟ- ಕರ್ನಾಟಕಕ್ಕೆ ಗೆಲುವು ಮರೀಚಿಕೆ

    ನವದೆಹಲಿ: ನಾಕೌಟ್ ಹಂತಕ್ಕೆ ತಲುಪಬೇಕಾದರೆ ಗೆಲುವು ಅನಿವಾರ್ಯ ಆಗಿರುವ ಕರ್ನಾಟಕಕ್ಕೆ ದೆಹಲಿಯಲ್ಲಿ ಮಂದ ಬೆಳಕು ಶತ್ರುವಾಗಿದೆ. ಮೊದಲ ದಿನ ಅರ್ಧಕ್ಕೆ ಮೊಟಕುಗೊಂಡಿದ್ದ ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ, ಎರಡನೇ ದಿನವೂ ಮಂದ ಬೆಳಕಿನಿಂದ ಆಟ ಅರ್ಧಕ್ಕೆ ನಿಂತಿದೆ. ಎರಡನೇ ದಿನವೂ ಸಂಪೂರ್ಣ ಓವರ್ ಕಾಣದೆ ಪಂದ್ಯ ಅರ್ಧಕ್ಕೆ ಮೊಟಕುಗೊಂಡಿದ್ದು, ರೈಲ್ವೇಸ್‍ಗೆ ವರದಾನವಾಗಿದೆ.

    ನಿನ್ನೆ ಕೇವಲ 49 ಓವರ್ ಕಂಡಿದ್ದ ಪಂದ್ಯ ಎರಡನೇ ದಿನವಾದ ಇಂದು ಕೂಡಾ ಕ್ರೀಡಾಂಗಣದಲ್ಲಿ ತೇವಾಂಶ ಹಿನ್ನಲೆಯಲ್ಲಿ ತಡವಾಗಿ ಪಂದ್ಯ ಪ್ರಾರಂಭ ಆಯ್ತು. ಇಂದು ಕೂಡಾ ಕೇವಲ 23 ಓವರ್ ಮಾತ್ರ ಬೌಲಿಂಗ್ ಮಾಡಲು ಸಾಧ್ಯವಾಯ್ತು. ನಿನ್ನೆ 98 ರನ್ ಗೆ 6 ವಿಕೆಟ್ ಕಳೆದುಕೊಂಡಿದ್ದ ರೈಲ್ವೇಸ್ ತಂಡ ಇಂದು ಉತ್ತಮ ಬ್ಯಾಟಿಂಗ್ ನಡೆಸಿತು. ಅರಿಂದಮ್ ಘೋಷ್ ಅರ್ಧ ಶತಕದ 50* (155 ಬಾಲ್ 7 ಬೌಂಡರಿ) ಹಾಗೂ ಅವಿನಾಶ್ ಯಾದವ್ ಅರ್ಧ ಶತಕ 62 (143 ಬಾಲ್, 10 ಬೌಂಡರಿ) ನೆರವಿನಿಂದ ಎರಡನೇ ದಿನದ ಅಂತ್ಯಕ್ಕೆ 72 ಓವರ್ ಗೆ 7 ವಿಕೆಟ್ ಕಳೆದುಕೊಂಡು 160 ರನ್ ಗಳಿಸಿದೆ.

    ನಿನ್ನೆ ಕರ್ನಾಟಕದ ಬೌಲರ್ ಗಳು ಉತ್ತಮ ದಾಳಿ ನಡೆಸಿದರು. ಇವತ್ತು 23 ಓವರ್ ಮಾಡಿ ಕೇವಲ ಒಂದು ವಿಕೆಟ್ ಮಾತ್ರ ಪಡೆಯಲು ಸಾಧ್ಯವಾಯಿತು. ಅರಿಂದಮ್ ಘೋಷ್ ಹಾಗೂ ಅವಿನಾಶ್ ಯಾದವ್ ಕರ್ನಾಟಕದ ಬೌಲರ್ ಗಳನ್ನು ಕಾಡಿದರು. ಕರ್ನಾಟಕದ ಪರ ರೋನಿತ್ ಮೋರೆ ಒಂದು ವಿಕೆಟ್ ಮಾತ್ರ ಪಡೆದರು. ಇನ್ನೆರಡು ದಿನ ಮಾತ್ರ ಆಟ ಉಳಿದಿದ್ದು ಈ ಪಂದ್ಯ ಫಲಿತಾಂಶ ಕಾಣೋದು ಡೌಟ್ ಆಗಿದೆ. ಹೀಗಾಗಿ ಕರ್ನಾಟಕಕ್ಕೆ ಇದು ಹಿನ್ನಡೆಯಾಗೋ ಸಾಧ್ಯತೆ ಇದೆ.

  • ರಣಜಿ ಮೊದಲ ದಿನ ಸೌರಾಷ್ಟ್ರ ಮೇಲುಗೈ

    ರಣಜಿ ಮೊದಲ ದಿನ ಸೌರಾಷ್ಟ್ರ ಮೇಲುಗೈ

    ಬೆಂಗಳೂರು: ನೌಕೌಟ್ ಹಂತಕ್ಕೆ ತಲುಪುವ ನಿರೀಕ್ಷೆಯಲ್ಲಿರುವ ಕರ್ನಾಟಕಕ್ಕೆ ಸೌರಾಷ್ಟ್ರ ತಂಡ ಶಾಕ್ ನೀಡಿದೆ.

    ರಾಜ್ ಕೋಟ್ ನಲ್ಲಿ ನಡೆಯುತ್ತಿರೋ ಪಂದ್ಯದಲ್ಲಿ ಸೌರಾಷ್ಟ್ರ ಮೊದಲ ದಿನ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮಾಡಿ ಕರ್ನಾಟಕ ತಂಡಕ್ಕೆ ಆಘಾತ ನೀಡಿದೆ. ಭಾರತ ಟೆಸ್ಟ್ ತಂಡದ ಆಟಗಾರ ಚೇತೇಶ್ವರ ಪೂಜಾರ ಅದ್ಭುತ ಬ್ಯಾಟಿಂಗ್ ನಡೆಸಿ ಸೌರಾಷ್ಟ್ರ ತಂಡ ಮುನ್ನಡೆಗೆ ಕಾರಣರಾದ್ರು.

    ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಸೌರಾಷ್ಟ್ರ ತಂಡಕ್ಕೆ ಪೂಜಾರ ಮತ್ತು ಶೆಲ್ಡನ್ ಜಾಕ್ಸನ್ ಭದ್ರ ಬುನಾದಿ ಹಾಕಿಕೊಟ್ರು. ಸೌರಾಷ್ಟ್ರ ಆರಂಭಿಕ ಆಟಗಾರರು ಬೇಗನೆ ಫೆವಿಲಿನ್ ಕಡೆ ಮುಖ ಮಾಡಿದ್ರು. ಬಳಿಕ ಪೂಜಾರ ಮತ್ತು ಜಾಕ್ಸನ್ ತಂಡಕ್ಕೆ ಆಸರೆಯಾದ್ರು.

    ಭರ್ಜರಿ 266 ರನ್ ಜೊತೆಯಾಟವಾಡಿದ್ದಾರೆ. ಪೂಜಾರ ಅಜೇಯ 162 ರನ್ ಗಳಿಸಿದ್ರೆ ಜಾಕ್ಸನ್ ಅಜೇಯ 99 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಪೂಜಾರ ಹಾಗೂ ಜಾಕ್ಸನ್ ರನ್ನ ಕಟ್ಟಿ ಹಾಕುವಲ್ಲಿ ಕರ್ನಾಟಕರ ಬೌಲರ್ ಗಳು ವಿಫಲರಾದ್ರು.

    ಪೂಜಾರ ಭರ್ಜರಿ 17 ಬೌಂಡರಿ, 1 ಸಿಕ್ಸರ್ ಬಾರಿಸಿ ಕರ್ನಾಟಕದ ಬೌಲರ್ ಗಳನ್ನ ಚೆಂಡಾಡಿದ್ರು. ಕರ್ನಾಟಕದ ಪರ ಸುಚಿತ್ ಎರಡು ವಿಕೆಟ್ ಕಬಳಿಸಿದರು. ಇನ್ನೂ 3 ದಿನ ಆಟ ಬಾಕಿ ಇದ್ದು ಪೂಜಾರ, ಜಾಕ್ಸನ್ ತನ್ನ ಬೇಗ ಔಟ್ ಮಾಡಿದ್ರೆ ಮಾತ್ರ ಕರ್ನಾಟಕ ತಂಡಕ್ಕೆ ಗೆಲುವು ಸಾಧ್ಯ.

  • ರಣಜಿ ವೇಳೆ ಕ್ರಿಕೆಟ್ ಮೈದಾನಕ್ಕೆ ದಿಢೀರ್ ಎಂಟ್ರಿ ಕೊಟ್ಟ ವ್ಯಾಗನ್ ಆರ್ ಕಾರು

    ರಣಜಿ ವೇಳೆ ಕ್ರಿಕೆಟ್ ಮೈದಾನಕ್ಕೆ ದಿಢೀರ್ ಎಂಟ್ರಿ ಕೊಟ್ಟ ವ್ಯಾಗನ್ ಆರ್ ಕಾರು

    ನವದೆಹಲಿ: ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ರಣಜಿ ಪಂದ್ಯ ನಡೆಯುವ ವೇಳೆ ಮೈದಾನದಲ್ಲಿ ಕಾರು ಚಾಲನೆ ಮಾಡಿರುವ ಘಟನೆ ದೆಹಲಿಯ ಏರ್ ಫೋರ್ಸ್ ಕ್ರೀಡಾಂಗಣದಲ್ಲಿ ನಡೆದಿದೆ.

    ದೆಹಲಿ ಹಾಗೂ ಉತ್ತರ ಪ್ರದೇಶದ ನಡುವೆ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದ ಮೂರನೇ ದಿನದಾಟದ ವೇಳೆ ಘಟನೆ ಸಂಭವಿಸಿದ್ದು, ಸಂಜೆ ಸುಮಾರು 4.40 ಸಮಯದಲ್ಲಿ ವ್ಯಾಗನ್ ಆರ್ ಕಾರು ಇದಕ್ಕಿದ್ದಂತೆ ಮೈದಾನವನ್ನು ಪ್ರವೇಶಿಸಿ ಆಟಗಾರರಲ್ಲಿ ಅತಂಕವನ್ನು ಸೃಷ್ಟಿಸಿತ್ತು. ಈ ವೇಳೆ ಟೀಂ ಇಂಡಿಯಾದ ಅಂತರಾಷ್ಟ್ರೀಯ ಆಟಗಾರರಾದ ಗೌತಮ್ ಗಂಭೀರ್, ಇಶಾಂತ್ ಶರ್ಮಾ, ರಿಷಬ್ ಪಂತ್ ಮೈದಾನದಲ್ಲಿದ್ದರು.

    ಕುಡಿದು ಮೈದಾನಕ್ಕೆ ಕಾರು ನುಗ್ಗಿಸಿದ ವ್ಯಕ್ತಿ ಗಿರೀಶ್ ಶರ್ಮಾ ಎಂದು ತಿಳಿದು ಬಂದಿದ್ದು, ಸದ್ಯ ಏರ್ ಫೋರ್ಸ್ ಕ್ರೀಡಾಂಗಣದ ಭದ್ರತಾ ಸಿಬ್ಬಂದಿ ಈತನನ್ನು ದೆಹಲಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

    ಕ್ರೀಡಾಂಗಣದ ಭದ್ರತಾ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಘಟನೆ ಸಂಭವಿಸಿದ್ದು, ಕ್ರೀಡಾಂಗಣಕ್ಕೆ ಕಾರು ಪ್ರವೇಶಿಸಬೇಕಾದರೆ ಪೂರ್ಣ ಪ್ರಮಾಣದಲ್ಲಿ ಪರಿಶೀಲಿಸಲಾಗುತ್ತದೆ. ಆದರೆ ಕುಡಿದು ಚಾಲನೆ ಮಾಡುತ್ತಿದ್ದ ಗಿರೀಶ್ ಶರ್ಮಾ ಕಾರನ್ನು ಪರಿಶೀಲನೆ ನಡೆಸಿರಲಿಲ್ಲ. ಈ ವೇಳೆ ಪಾರ್ಕಿಂಗ್‍ಗೆ ತೆರಳಬೇಕಿದ್ದ ಕಾರು ನೇರ ಮೈದಾನವನ್ನು ಪ್ರವೇಶಿಸಿದೆ.

    ಮೂರನೇ ದಿನದಾಟದ ಅಂತ್ಯದ ವೇಳೆಗೆ ಸುರೇಶ್ ರೈನಾ ನಾಯಕತ್ವದ ಉತ್ತರ ಪ್ರದೇಶ ತಂಡ ಎರಡನೇ ಇನಿಂಗ್ಸ್ ನಲ್ಲಿ 224 ರನ್ ಗಳಿಸಿ 7 ವಿಕೆಟ್ ಕಳೆದುಕೊಂಡಿದ್ದು, 246 ರನ್ ಗಳ ಮುನ್ನಡೆ ಸಾಧಿಸಿದೆ. ಉತ್ತರ ಪ್ರದೇಶ ಪರ ಅಕ್ಷ ದೀಪ್ ನಾಥ್ ಔಟಗಾದೆ 110 ರನ್ ಗಳಿಸಿದ್ದಾರೆ. ಮೊದಲ ಇನಿಂಗ್ಸ್ ನಲ್ಲಿ ಉತ್ತರ ಪ್ರದೇಶ 291 ರನ್ ಗಳಿಸಿತ್ತು.

    ಇನ್ನುಳಿದಂತೆ ದೆಹಲಿ ತಂಡವು ಮೊದಲ ಇನಿಂಗ್ಸ್‍ ನಲ್ಲಿ ಧ್ರುವ ಶೊರೆ(98) ಗಂಭೀರ್(86) ಆಟದ ನೆರವಿನಿಂದ 269 ರನ್ ಗಳಿಸಿತ್ತು.

  • ವಿದೇಶಿ ತಂಡದಲ್ಲಿ ಆಡ್ತೀನಿ ಅಂತಿದ್ದಾರೆ ಶ್ರೀಶಾಂತ್, ಆಗಲ್ಲ ಅಂತಿದೆ ಬಿಸಿಸಿಐ!

    ವಿದೇಶಿ ತಂಡದಲ್ಲಿ ಆಡ್ತೀನಿ ಅಂತಿದ್ದಾರೆ ಶ್ರೀಶಾಂತ್, ಆಗಲ್ಲ ಅಂತಿದೆ ಬಿಸಿಸಿಐ!

    ದುಬೈ: ಟೀಂ ಇಂಡಿಯಾ ಕ್ರಿಕೆಟಿಗ ಶ್ರೀಶಾಂತ್ ಬೇರೆ ರಾಷ್ಟ್ರದ ಪರ ಕ್ರಿಕೆಟ್ ಆಡಲು ಆಸಕ್ತಿ ತೋರಿದ್ದಾರೆ. ಬಿಸಿಸಿಐ ನನಗೆ ಟೀಂ ಇಂಡಿಯಾ ಪರವಾಗಿ ಅವಕಾಶ ನೀಡದಿದ್ದರೆ ನಾನು ಬೇರೆ ರಾಷ್ಟ್ರದ ಪರ ಕ್ರಿಕೆಟ್ ಆಡುತ್ತೇನೆ ಎಂದು ಶ್ರೀಶಾಂತ್ ದುಬೈನಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

    ಆದರೆ ಶ್ರೀಶಾಂತ್ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಸಿಸಿಐ, ಅಜೀವ ನಿಷೇಧಕ್ಕೊಳಗಾಗಿರುವುದರಿಂದ ಶ್ರೀಶಾಂತ್ ಬೇರೆ ಯಾವುದೇ ಕ್ರಿಕೆಟ್ ಅಸೋಸಿಯೇಷನ್ ಪರ ಆಡುವುದು ಸಾಧ್ಯವಿಲ್ಲ ಎಂದು ಹೇಳಿದೆ. ಮೊನ್ನೆಯಷ್ಟೇ ಕೇರಳ ಹೈಕೋರ್ಟ್ ಶ್ರೀಶಾಂತ್ ಮೇಲಿನ ಬಿಸಿಸಿಐ ಅಜೀವ ನಿಷೇಧ ತೆರವಿಗೆ ತಡೆಯಾಜ್ಞೆ ನೀಡಿತ್ತು.

    ನನ್ನ ಮೇಲೆ ಬಿಸಿಸಿಐ ಮಾತ್ರ ನಿಷೇಧ ಹೇರಿದೆಯೇ ವಿನಃ ಐಸಿಸಿ ನಿಷೇಧ ಹೇರಿಲ್ಲ. ಭಾರತದಲ್ಲಿ ಅವಕಾಶ ಸಿಗದಿದ್ದರೆ ನಾನು ಬೇರೆ ದೇಶದ ಪರ ಆಡಬಹುದು. ಸದ್ಯ ನನಗೆ 34 ವರ್ಷ ವಯಸ್ಸಾಗಿದ್ದು ಇನ್ನೂ 6 ವರ್ಷ ಕ್ರಿಕೆಟ್ ಆಡಬಹುದು ಎಂದು ಹೇಳಿದ್ದಾರೆ. ಓರ್ವ ಕ್ರಿಕೆಟ್ ಪ್ರೇಮಿಯಾಗಿ ನಾನು ಕ್ರಿಕೆಟ್ ಆಡುವುದನ್ನು ಇಷ್ಟಪಡುತ್ತೇನೆ. ಬಿಸಿಸಿಐ ಎನ್ನುವುದು ಖಾಸಗಿ ಸಂಸ್ಥೆ. ಇದನ್ನು ನಾವು ಮಾತ್ರ ಟೀಂ ಇಂಡಿಯಾ ಎಂದು ಕರೆಯುತ್ತೇವೆ. ಆದರೆ ವಾಸ್ತವದಲ್ಲಿ ಅದೊಂದು ಖಾಸಗಿ ಸಂಸ್ಥೆ ಎಂದು ಹೇಳಿದ್ದಾರೆ.

    ಕೇರಳ ಪರ ರಣಜಿ ಆಡುವುದು ಬೇರೆಯೇ ವಿಚಾರ. ನನಗೆ ಕೇರಳ ಪರ ರಣಜಿ ಹಾಗೂ ಇರಾನಿ ಟ್ರೋಫಿ ಆಡಬೇಕು ಎಂಬ ಆಸೆಯಿತ್ತು. ಆದರೆ ಇದರ ಬಗ್ಗೆ ಬಿಸಿಸಿಐ ನಿರ್ಧರಿಸಬೇಕು ಎಂದು ಹೇಳಿದರು. ಮೊನ್ನೆ ಬಂದ ಕೇರಳ ಹೈಕೋರ್ಟ್ ತೀರ್ಪಿನಿಂದಾಗಿ ಶ್ರೀಶಾಂತ್ ಗೆ ಈಗ ಕೇರಳ ತಂಡದಲ್ಲಿ ಆಡುವುದು ಸಾಧ್ಯವಿಲ್ಲ. ಜೊತೆಗೆ ಬಿಸಿಸಿಐ ಹಾಗೂ ರಾಜ್ಯ ಕ್ರಿಕೆಟ್ ಸಂಸ್ಥೆಗಳ ಅಡಿ ಬರುವ ಯಾವುದೇ ಜಾಗದಲ್ಲೂ ಪ್ರಾಕ್ಟೀಸ್ ಕೂಡಾ ನಡೆಸುವಂತಿಲ್ಲ.