Tag: Rani Mukherjee

  • ನನಗೆ ಗರ್ಭಪಾತವಾಗಿತ್ತು, 5 ತಿಂಗಳ ಮಗುವನ್ನು ಕಳೆದುಕೊಂಡೆ ಎಂದು ಕಣ್ಣೀರಿಟ್ಟ ರಾಣಿ ಮುಖರ್ಜಿ

    ನನಗೆ ಗರ್ಭಪಾತವಾಗಿತ್ತು, 5 ತಿಂಗಳ ಮಗುವನ್ನು ಕಳೆದುಕೊಂಡೆ ಎಂದು ಕಣ್ಣೀರಿಟ್ಟ ರಾಣಿ ಮುಖರ್ಜಿ

    ಬಾಲಿವುಡ್ (Bollywood) ನಟಿ ರಾಣಿ ಮುಖರ್ಜಿ (Rani Mukherjee) ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡಿದ್ದಾರೆ. ತನಗೆ ಎರಡನೇ ಬಾರಿ ಗರ್ಭಪಾತವಾಗಿತ್ತು. 5 ತಿಂಗಳ ಮಗುವನ್ನು ಕಳೆದುಕೊಂಡೆ ಎಂದು ನಟಿ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ:ಬೆಂಗಳೂರಿನ ಮಿಂಚುಳ್ಳಿ, ಬಿಕಿನಿಯಲ್ಲಿ ಬಳುಕುವ ಬಳ್ಳಿ ವೈಭವಿ ಜಗದೀಶ್

    ಇತ್ತೀಚೆಗೆ ಮೆಲ್ಬೋರ್ನ್ 2023ರ ಭಾರತೀಯ ಚಲನಚಿತ್ರೋತ್ಸವದಲ್ಲಿ ರಾಣಿ ಮುಖರ್ಜಿ ಭಾಗಿಯಾಗಿದ್ದರು. ಈ ವೇಳೆ ತಮ್ಮ ಗರ್ಭಪಾತದ ಬಗ್ಗೆ ನಟಿ ರಿವೀಲ್ ಮಾಡಿದ್ದಾರೆ. 2020ರಲ್ಲಿ ತಾನು ಎರಡನೇ ಬಾರಿಗೆ ಗರ್ಭಿಣಿಯಾಗಿದ್ದೆ. ಆದರೆ ಐದು ತಿಂಗಳ ಗರ್ಭಾವಸ್ಥೆಯಲ್ಲಿ ನನ್ನ ಮಗುವನ್ನು ಕಳೆದುಕೊಂಡಿದ್ದೇನೆ. ಬಹುಶಃ ನಾನು ಈ ವಿಚಾರವನ್ನು ಇದೇ ಮೊದಲ ಬಾರಿಗೆ ಹೇಳುತ್ತಿದ್ದೇನೆ. ಇಂದಿನ ಜಗತ್ತಿನಲ್ಲಿ ನಿಮ್ಮ ಜೀವನದ ಪ್ರತಿಯೊಂದು ವಿಚಾರವನ್ನು ಸಾರ್ವಜನಿಕವಾಗಿ ಚರ್ಚೆ ಮಾಡುತ್ತಾರೆ. ಸಿನಿಮಾ ಪ್ರಚಾರ ಮಾಡಲು ಕೆಲವರು ವೈಯಕ್ತಿಕ ಅನುಭವದ ಬಗ್ಗೆ ಮಾತನಾಡುತ್ತಾರೆ. ಹೀಗಾಗಿ ನಾನು ಎಲ್ಲೂ ಈ ಬಗ್ಗೆ ಹೇಳಿರಲಿಲ್ಲ. ಇದೀಗ ಮೊದಲ ಬಾರಿಗೆ ಈ ಬಗ್ಗೆ ಮಾತನಾಡುತ್ತಿದ್ದೇನೆ.

    2020 ಅಂದ್ರೆ ಕೋವಿಡ್ ಇರುವ ಸಮಯವಾಗಿತ್ತು. 2020ರ ಕೊನೆಯಲ್ಲಿ ಗರ್ಭಾವಸ್ಥೆಯಲ್ಲಿದ್ದ ನಾನು ಮಗುವನ್ನು ಕಳೆದುಕೊಂಡೆ ಎಂದು ಕಣ್ಣೀರಿಟ್ಟಿದ್ದಾರೆ. ಎರಡನೇ ಮಗುವನ್ನು ಹೊಂದುವ ಕನಸು ಈಡೇರಲಿಲ್ಲ ಎಂದು ನಟಿ ಭಾವುಕರಾಗಿದ್ದಾರೆ.

    ನಿರ್ಮಾಪಕ ಆದಿತ್ಯ ಚೋಪ್ರಾ (Adithya Chopra) ಜೊತೆ ರಾಣಿ ಮುಖರ್ಜಿ 5 ವರ್ಷಗಳಿಂದ ಡೇಟ್ ಮಾಡುತ್ತಿದ್ದರು. 2014ರಲ್ಲಿ ಇಬ್ಬರ ವಿವಾಹವಾಯಿತು. 2015ರಲ್ಲಿ ಮುದ್ದು ಮಗಳಿಗೆ ನಟಿ ಜನ್ಮ ನೀಡಿದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಮ್ಮನ ಪಾತ್ರದಲ್ಲಿ ಬಾಲಿವುಡ್ ನಟಿ ರಾಣಿ ಮುಖರ್ಜಿ

    ಅಮ್ಮನ ಪಾತ್ರದಲ್ಲಿ ಬಾಲಿವುಡ್ ನಟಿ ರಾಣಿ ಮುಖರ್ಜಿ

    ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಮುಂದಿನ ಚಿತ್ರಕ್ಕೆ ಬಾಲಿವುಡ್ ನಟಿ ರಾಣಿ ಮುಖರ್ಜಿ ಅಮ್ಮನಾಗಿ ಆಯ್ಕೆಯಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ನಾಯಕಿಯಾಗಿ ಬಾಲಿವುಡ್ ನಲ್ಲಿ ತಮ್ಮದೇ ಆದ ಹವಾ ಕ್ರಿಯೇಟ್ ಮಾಡಿದ್ದ ಈ ಕೃಷ್ಣಸುಂದರಿ ಇದೀಗ ತೆಲುಗು ಚಿತ್ರೋದ್ಯಮಕ್ಕೆ ಅಮ್ಮನಾಗಿ ಎಂಟ್ರಿ ಕೊಡಲಿದ್ದಾರೆ. ಈಗಾಗಲೇ ನಿರ್ದೇಶಕರು ಪಾತ್ರದ ಬಗ್ಗೆ ಮಾಹಿತಿಯನ್ನೂ ನೀಡಿದ್ದಾರಂತೆ.

    ತ್ರಿವಿಕ್ರಂ ಶ್ರೀನಿವಾಸ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು ಕನ್ನಡದ ನಟಿ ಶ್ರೀಲೀಲಾ ಮತ್ತು ಪೂಜಾ ಹೆಗ್ಡೆ ನಾಯಕಿಯರಾಗಿ ನಟಿಸುತ್ತಿದ್ದಾರೆ. ಹೀಗಾಗಿ ಈ ಸಿನಿಮಾದಲ್ಲಿ ಇಬ್ಬರು ನಾಯಕಿಯರಲ್ಲ, ರಾಣಿ ಮುಖರ್ಜಿಯನ್ನೂ ಸೇರಿಸಿ ಮೂವರು ನಾಯಕಿಯರು ಎಂದು ಗೇಲಿ ಮಾಡಲಾಗುತ್ತಿದೆ. ಬಾಲಿವುಡ್ ನಿಂದ ರಾಣಿ ಮುಖರ್ಜಿ ಎಂಟ್ರಿ ಕೊಡುತ್ತಿದ್ದಂತೆಯೇ ಚಿತ್ರದ ಬಗ್ಗೆ ಮತ್ತಷ್ಟು ನಿರೀಕ್ಷೆ ಹೆಚ್ಚಾಗಿದೆ. ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ನನಗೆ, ನೇಹಾಗೆ ಕಾಂಪಿಟೇಶನ್ ಇತ್ತು: ಅನುಪಮಾ

    ಈಗಾಗಲೇ ಈ ಸಿನಿಮಾದ ಒಂದಷ್ಟು ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಜನವರಿ ಎರಡನೇ ವಾರದಿಂದ ಮುಂದಿನ ಭಾಗದ ಶೂಟಿಂಗ್ ಶುರು ಮಾಡುತ್ತಾರಂತೆ ನಿರ್ದೇಶಕರು. ಈ ವೇಳೆಯಲ್ಲಿ ರಾಣಿ ಮುಖರ್ಜಿ ಅವರು ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಪಾತ್ರಕ್ಕೆ ತನ್ನದೇ ಆದ ಗತ್ತಿನ ಹಿನ್ನೆಲೆ ಇರುವುದರಿಂದ ರಾಣಿಯನ್ನು ಆಯ್ಕೆ ಮಾಡಿಕೊಂಡಿದ್ದಾರಂತೆ ನಿರ್ದೇಶಕರು.

    Live Tv
    [brid partner=56869869 player=32851 video=960834 autoplay=true]

  • ತಂದೆಯಾಗಲಿದ್ದಾರೆ ಸಲ್ಮಾನ್ ಖಾನ್- ಸುಳಿವು ನೀಡಿದ ರಾಣಿ ಮುಖರ್ಜಿ

    ತಂದೆಯಾಗಲಿದ್ದಾರೆ ಸಲ್ಮಾನ್ ಖಾನ್- ಸುಳಿವು ನೀಡಿದ ರಾಣಿ ಮುಖರ್ಜಿ

    ಮುಂಬೈ: ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ತಂದೆ ಆಗಲಿದ್ದಾರೆ ಅನ್ನೋ ಸುಳಿವನ್ನು ನಟಿ ರಾಣಿ ಮುಖರ್ಜಿ ನೀಡಿದ್ದಾರೆ.

    ಖಾಸಗಿ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ನಡೆಸಿಕೊಡುವ ಕಾರ್ಯಕ್ರಮಕ್ಕೆ ರಾಣಿ ಮುಖರ್ಜಿ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ವೇದಿಕೆಯ ಮೇಲೆ ಆಗಮಿಸುತ್ತಿದ್ದಂತೆ ಮುನಿಸಿಕೊಂಡ ರಾಣಿ ಮುಖರ್ಜಿ ನನಗೆ ನೀಡಿದ ಮಾತನ್ನು ನೀವು ಪೂರ್ಣಗೊಳಿಸಿಲ್ಲ ಎಂದರು. ನಾನು ಯಾವ ಮಾತನ್ನು ಪೂರ್ಣಗೊಳಿಸಿಲ್ಲ ಎಂದು ಸಲ್ಮಾನ್ ಕೇಳಿದಾಗ, ಸ್ಕ್ರೀನ್ ಮೇಲೆ ವಿಡಿಯೋ ಪ್ಲೇ ಆಯ್ತು.

    ಸೀಸನ್ 11ರ ಕಾರ್ಯಕ್ರಮದಲ್ಲಿಯೂ ರಾಣಿ ಮುಖರ್ಜಿ ಅದೇ ವೇದಿಕೆಗೆ ಅತಿಥಿಯಾಗಿ ಆಗಮಿಸಿದ್ದರು. ಅಂದು ರಾಣಿ ಮುಖರ್ಜಿ ಮದುವೆ ಆಗದಿದ್ದರೂ ಪರವಾಗಿಲ್ಲ. ಮಕ್ಕಳನ್ನಾದರು ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದರು. ರಾಣಿ ಮಾತಿಗೆ ತಲೆ ಆಡಿಸಿದ್ದ ಸಲ್ಮಾನ್ ಒಪ್ಪಿಗೆ ಸೂಚಿಸಿದ್ದರು. ಈಗ ರಾಣಿ ಮುಖರ್ಜಿ ಮತ್ತೆ ಅದೇ ಪ್ರಶ್ನೆಯನ್ನು ಕೇಳಿ ಸಲ್ಮಾನ್ ಖಾನ್ ಅವರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದರು.

    https://www.instagram.com/p/B5w5Y6RAV0Z/

    ಇಷ್ಟು ಬೇಗ ಮಕ್ಕಳು ಬರಲ್ಲ ಎಂದು ಹೇಳಿ ಸಲ್ಮಾನ್ ಜಾರಿಕೊಂಡರು. ಇಷ್ಟಕ್ಕೆ ಸುಮ್ಮನಾಗದ ರಾಣಿ ಮುಖರ್ಜಿ ಹಾಗಾದ್ರೆ 18 ತಿಂಗಳಲ್ಲಿ ಬರಬಹುದಾ ಎಂದು ನಕ್ಕರು. ಕೊನೆಗೆ ರಾಣಿ ಮುಖರ್ಜಿ ಸುಳ್ಳು ಹೇಳಲ್ಲ ಎಂದು ನನಗೆ ಗೊತ್ತಿದೆ ಎಂದು ತಂದೆಯಾಗುವ ಸುಳಿವನ್ನು ಸಲ್ಮಾನ್ ಖಾನ್ ರಿವೀಲ್ ಮಾಡಿದರು.

  • ಆಮಿರ್ ಖಾನ್ ನಿಂದಾಗಿ ನನ್ನ ಹೃದಯವೇ ಒಡೆದು ಹೋಗಿತ್ತು: ರಾಣಿ ಮುಖರ್ಜಿ

    ಆಮಿರ್ ಖಾನ್ ನಿಂದಾಗಿ ನನ್ನ ಹೃದಯವೇ ಒಡೆದು ಹೋಗಿತ್ತು: ರಾಣಿ ಮುಖರ್ಜಿ

    ಮುಂಬೈ: ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್ ಆಮಿರ್ ಖಾನ್ ನಿಂದಾಗಿ ಹಿಂದೆ ನನ್ನ ಹೃದಯವೇ ಒಡೆದು ಹೋಗಿತ್ತು ಎಂದು ನಟಿ ರಾಣಿ ಮುಖರ್ಜಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

    ಆಮಿರ್ ಖಾನ್ ಜೊತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ರಾಣಿ ಮುಖರ್ಜಿ ಇತ್ತೀಚೆಗೆ ಖಾಸಗಿ ಮಾಧ್ಯಮವೊಂದಕ್ಕೆ ವಿಶೇಷ ಸಂದರ್ಶನ ನೀಡಿದ್ದರು. ಈ ವೇಳೆ ನಾನು ಚಿಕ್ಕವಳಿದ್ದಾಗಿನಿಂದಲೂ ಆಮಿರ್ ಖಾನ್‍ರ ದೊಡ್ಡ ಅಭಿಮಾನಿ. ಆಮಿರ್ ಅಭಿನಯದ ‘ಖಯಾಮತ್ ಸೇ ಖಯಾಮತ್ ತಕ್’ ಚಿತ್ರ ನನ್ನ ಮೆಚ್ಚಿನ ಸಿನಿಮಾ.

    ಆಮಿರ್ ಖಾನ್ ಮತ್ತು ಜೂಹಿ ಚಾವ್ಲಾ ಜೊತೆಯಾಗಿ ‘ಲವ್ ಲವ್ ಲವ್’ ಚಿತ್ರದಲ್ಲಿ ನಟಿಸುತ್ತಿದ್ದರು. ಈ ವೇಳೆ ನಾನು ಆಮಿರ್ ಆಟೋಗ್ರಾಫ್ ಪಡೆದುಕೊಳ್ಳಲು ಶೂಟಿಂಗ್ ಸೆಟ್ ಗೆ ಹೋಗಿದ್ದೆ. ಅಲ್ಲಿ ಚಿತ್ರವೊಂದರ ಆ್ಯಕ್ಷನ್ ಸೀನ್ ಶೂಟ್ ನಡೆಯುತ್ತಿತ್ತು. ಜನರ ಗುಂಪಿನ ನಡುವೆ ನಿಂತಿದ್ದ ನಾನು ಆಟೋಗ್ರಾಫ್ ಪಡೆಯಲು ಕಷ್ಟಪಡುತ್ತಿದ್ದೆ. ನನ್ನ ಬುಕ್ ಮೇಲೆ ಡೀಯರ್ ಆಮಿರ್ ಖಾನ್ ಅಂತಾ ಬರೆದಿದ್ದೆ, ಆದ್ರೆ ಇದನ್ನು ಯಾವುದು ಗಮನಿಸದೇ, ಕೈಗೆ ಸಿಕ್ಕ ಬುಕ್‍ನಲ್ಲಿ ಆಟೋಗ್ರಾಫ್ ಹಾಕಿಕೊಟ್ಟರು. ಈ ವೇಳೆ ನನ್ನನ್ನು ನೋಡದೇ ಆಮಿರ್ ಆಟೋಗ್ರಾಫ್ ಹಾಕಿದ್ದರಿಂದ ಅಂದು ನನ್ನ ಹೃದಯವೇ ಒಡೆದು ಹೋಗಿತ್ತು ಎಂದು ಬಾಲ್ಯದ ದಿನಗಳನ್ನು ನೆನಪು ಮಾಡಿಕೊಂಡರು.

    ಕೆಲವು ವರ್ಷಗಳ ನಂತರ ನಾನು ‘ಗುಲಾಮ್’ ಸಿನಿಮಾದಲ್ಲಿ ನಾನು ಆಮಿರ್ ಜೊತೆ ನಟಿಸುವ ಅವಕಾಶ ಸಿಕ್ಕಾಗ ಹಳೆಯ ಘಟನೆಯನ್ನು ಅವರಿಗೆ ನೆನಪಿಸಿದೆ ಅಂತಾ ಅಂದರು. ಮಂಗಲ ಪಾಂಡೆ, ತಲಾಶ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಮೀರ್ ಖಾನ್ ಮತ್ತು ರಾಣಿ ಮುಖರ್ಜಿ ಜೊತೆಯಾಗಿ ನಟಿಸಿದ್ದಾರೆ.

  • ಬಾಲಿವುಡ್‍ನ ಟಾಪ್ ಐವರು ನಟಿಯರೊಂದಿಗೆ ನಟಿಸಲಿದ್ದಾರೆ ಕಿಂಗ್ ಖಾನ್

    ಬಾಲಿವುಡ್‍ನ ಟಾಪ್ ಐವರು ನಟಿಯರೊಂದಿಗೆ ನಟಿಸಲಿದ್ದಾರೆ ಕಿಂಗ್ ಖಾನ್

    ಮುಂಬೈ: ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ತಮ್ಮ ಮುಂದಿನ ಚಿತ್ರದಲ್ಲಿ ಕಾಜೋಲ್, ಕರಿಶ್ಮಾ ಕಪೂರ್, ಶ್ರೀದೇವಿ, ರಾಣಿ ಮುಖರ್ಜಿ ಮತ್ತು ಆಲಿಯಾ ಭಟ್ ರೊಂದಿಗೆ ತೆರೆಯನ್ನು ಹಂಚಿಕೊಂಡಿದ್ದಾರೆ.

    ಈಗಾಗಲೇ ಎಲ್ಲ ನಟಿಯರೊಂದಿಗೆ ನಟಿಸಿರುವ ಶಾರುಖ್ ಮೊದಲ ಬಾರಿಗೆ ಎಲ್ಲರೊಂದಿಗೆ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆನಂದ್ ಎಲ್ ರೈ ನಿರ್ದೇಶಿಸುತ್ತಿರುವ ಈ ಸಿನಿಮಾದಲ್ಲಿ ಕತ್ರೀನಾ ಕೈಫ್ ಮತ್ತು ಅನುಷ್ಕಾ ಶರ್ಮಾ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಇದೇ ಸಿನಿಮಾದ ಪಾರ್ಟಿ ದೃಶ್ಯವೊಂದರಲ್ಲಿ ಈ ಎಲ್ಲ ನಟಿಯರು ಆಗಮಿಸಿರುತ್ತಾರೆ.

    ಪಾರ್ಟಿ ನಂತರ ಶಾರುಖ್ ಖಾನ್ ಎಲ್ಲ ನಟಿಯರೊಂದಿಗೆ ಕ್ಲಿಕಿಸಿಕೊಂಡಿರುವ ಫೋಟೋಗಳನ್ನು ತಮ್ಮ ಇನ್ ಸ್ಟಾಗ್ರಾಂ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಒಟ್ಟು ಎರಡು ಫೋಟೋಗಳನ್ನು ಅಪ್ಲೋಡ್ ಮಾಡಿರುವ ಶಾರುಖ್ ಒಂದರಲ್ಲಿ ಶ್ರೀದೇವಿ, ಕರಿಶ್ಮಾ ಕಪೂರ್ ಮತ್ತು ಆಲಿಯಾ ಭಟ್ ಇದ್ದಾರೆ. ಮತ್ತೊಂದು ಫೋಟೋದಲ್ಲಿ ರಾಣಿ ಮತ್ತು ಕಾಜೋಲ್ ಜೊತೆಯಾಗಿದ್ದಾರೆ. ಸಿನಿಮಾದಲ್ಲಿ ರಾಣಿ ಮತ್ತು ಕಾಜೋಲ್ ಸಹೋದರಿಯಾಗಿದ್ದರಿಂದ ಬೇರೆ ಶೂಟಿಂಗ್ ಟೈಮ್‍ನಲ್ಲಿ ಬಂದಿದ್ದರಿಂದ ಬೇರೆ ಫೋಟೋ ತೆಗೆಯಲಾಗಿದೆ.

    ವಿಶೇಷ ಅತಿಥಿ ಪಾತ್ರದಲ್ಲಿ ನಟಿಸಲು ಐವರು ನಟಿಯರು ಯಾವುದೇ ಸಂಭಾವನೆಯನ್ನು ಪಡೆದಿಲ್ಲ. ಕೇವಲ ಶಾರುಖ್ ಸ್ನೇಹಕ್ಕಾಗಿ ಬಂದು ನಟಿಸಿದ್ದಾರೆ. ಶೂಟಿಂಗ್ ಬಂದಿದ್ದ ನಟಿಯರಿಗೆ ಶಾರುಖ್ ವೈಯಕ್ತಿಕವಾಗಿ ಬೆಲೆ ಬಾಳುವ ಗಿಫ್ಟ್‍ಗಳನ್ನು ನೀಡಿದ್ದಾರೆ.

    ಈ ಹಿಂದೆ ಶಾರುಖ್ ಖಾನ್ `ಓಂ ಶಾಂತಿ ಓಂ’ ಸಿನಿಮಾದ ಹಾಡೊಂದರಲ್ಲಿ ಇದೇ ರೀತಿಯಾಗಿ ಬಾಲಿವುಡ್‍ನ ಅನೇಕ ಗಣ್ಯ ನಟ-ನಟಿಯರೊಂದಿಗೆ ನಟಿಸಿದ್ದರು. ಓಂ ಶಾಂತಿ ಓಂ ಸಿನಿಮಾದ ಟೈಟಲ್ ಸಾಂಗ್ ಸಿಕ್ಕಾಪಟ್ಟೆ ಹಿಟ್ ಆಗಿತ್ತು.

    https://www.instagram.com/p/BZujV6-jmEJ/?taken-by=iamsrk