Tag: Rani Mukerji

  • ಪ್ರಶಸ್ತಿ ಸ್ವೀಕರಿಸಲು ಬಂದಿದ್ದ ರಾಣಿ ಮುಖರ್ಜಿ ಕತ್ತಲ್ಲಿ ಮಗಳ ಹೆಸರಿನ ಚೈನ್‌

    ಪ್ರಶಸ್ತಿ ಸ್ವೀಕರಿಸಲು ಬಂದಿದ್ದ ರಾಣಿ ಮುಖರ್ಜಿ ಕತ್ತಲ್ಲಿ ಮಗಳ ಹೆಸರಿನ ಚೈನ್‌

    71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮಂಗಳವಾರ ಜರುಗಿತ್ತು. ಈ ವೇಳೆ ಅತ್ಯುತ್ತಮ ನಟಿ ಎಂದು ರಾಷ್ಟ್ರ ಪ್ರಶಸ್ತಿ ಪಡೆದ ರಾಣಿ ಮುಖರ್ಜಿ ತಮ್ಮ ಸರಳ ಉಡುಗೆಯಲ್ಲಿ ಭಾರಿ ಗಮನ ಸೆಳೆದಿದ್ದಾರೆ. `ಮಿಸಸ್ ಚಟರ್ಜಿ ವರ್ಸಸ್ ನಾರ್ವೆ’ ಚಿತ್ರದ ಅಭಿನಯಕ್ಕೆ ರಾಣಿ ಮುಖರ್ಜಿ ಪ್ರಶಸ್ತಿ ಸ್ವೀಕರಿಸುವ ವೇಳೆ ಕಂದು ಬಣ್ಣದ ಸವ್ಯಸಾಚಿ ಡಿಸೈನರ್ ಸೀರೆಯನ್ನು ಧರಿಸಿದ್ದರು. ಕತ್ತಲ್ಲಿ ಮುತ್ತಿನ ಚಾಕರ್ ಧರಿಸಿದ್ದ ರಾಣಿ ಜೊತೆಗೆ ಸಣ್ಣದೊಂದು ಬಂಗಾರದ ಚೈನ್ ಕೂಡ ಧರಿಸಿದ್ದರು. ಇದೇ ಚೈನ್ ಇದೀಗ ಭಾರೀ ಚರ್ಚೆಗೀಡಾಗಿದೆ.

    ರಾಣಿ ಧರಿಸಿದ್ದ ಬಂಗಾರದ ಸಿಂಪಲ್ ಚೈನ್‌ನಲ್ಲಿ ಸಣ್ಣ ಅಕ್ಷರಗಳ ಜೋಡಣೆ ಕಾಣುತ್ತದೆ. ಅಕ್ಷರಳನ್ನ ಪೂರ್ತಿ ಜೋಡಿಸಿದಾಗ `ಅಧಿರಾ’ ಎಂದು ಹೆಸರು ಕಾಣುತ್ತೆ. ಇದು ರಾಣಿ ಮುಖರ್ಜಿ ಮಗಳ ಹೆಸರು. ಬೇರೆ ಯಾವ ಕಾರ್ಯಕ್ರಮದಲ್ಲಾದ್ರೂ ಈ ಚೈನ್ ಧರಿಸಬಹುದಿತ್ತು. ಆದರೆ ಇದೇ ಕಾರ್ಯಕ್ರಮಕ್ಕೆ ರಾಣಿ ಈ ವಿಶೇಷ ಡಿಸೈನರ್ ಚೈನ್ ಧರಿಸಿರುವುದಕ್ಕೆ ಕಾರಣವಿದೆ.ಇದನ್ನೂ ಓದಿ: ಭೈರಪ್ಪನವರ ಬದುಕು ಕೊನೆಯಿಲ್ಲದ ʻಯಾನʼ – ನಟ ಅನಂತನಾಗ್‌ ಭಾವುಕ

    ಮಗಳು ಅಧಿರಾ ಜನಿಸಿದ ಬಳಿಕ ಮಿಸಸ್ ಚಟರ್ಜಿ ವರ್ಸಸ್ ನಾರ್ವೆ ಚಿತ್ರದಲ್ಲಿ ನಟಿಸುವ ರಾಣಿ ಮುಖರ್ಜಿ ಚಿತ್ರದಲ್ಲಿ ತಾಯಿ ಮಕ್ಕಳಿಗಾಗಿ ಸರ್ವತ್ಯಾಗಕ್ಕೂ ಸಿದ್ಧವಾಗುವ ಮನೋಜ್ಞ ಪಾತ್ರದಲ್ಲಿ ಅಭಿನಯಿಸಿದ್ದಾರೆ. ತಾಯಿ ಮಗುವಿನ ಸಂಬಂಧವೇ ಮಿಸಸ್ ಚಟರ್ಜಿ ವರ್ಸಸ್ ನಾರ್ವೇ ಸಿನಿಮಾದ ಹೈಲೈಟ್. ಚಿತ್ರದಲ್ಲಿ ರಾಣಿ ದೆಬಿಕಾ ಚಟರ್ಜಿ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ನಟಿಸಿದ್ದಾರೆ. ಹಿಂದೆಲ್ಲಾ ಗ್ಲಾಮರ್ ಪಾತ್ರದಲ್ಲಷ್ಟೇ ಹೆಸರು ಮಾಡಿದ್ದರು. ಇದೀಗ ಮಗಳು ಜನಿಸಿದ ಬಳಿಕ ತಾಯ್ತನದ ಮಹತ್ವ, ತ್ಯಾಗದ ಪ್ರತಿಫಲ ಪಾತ್ರದ ರೂಪವಾಗಿ ಬಂದಿದೆ ಅನ್ನೋದನ್ನ ರಾಣಿ ಹಿಂದೆ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಅದೇ ಪಾತ್ರಕ್ಕೀಗ ರಾಷ್ಟ್ರಪ್ರಶಸ್ತಿ ಬಂದಿದೆ. ಪ್ರಶಸ್ತಿಯನ್ನ ಪರೋಕ್ಷವಾಗಿ ಮಗಳು ಅಧಿರಾಗೆ ಅಮ್ಮ ರಾಣಿ ಮುಖರ್ಜಿ ಪ್ರೆಸೆಂಟ್ ಮಾಡಿದ್ದಾರೆ ಎನ್ನುವುದೇ ವಿಶೇಷ.

  • ʻಕಿಂಗ್’ ಜೊತೆ ಮತ್ತೆ ಒಂದಾಗಲಿದ್ದಾರೆ ರಾಣಿ ಮುಖರ್ಜಿ!

    ʻಕಿಂಗ್’ ಜೊತೆ ಮತ್ತೆ ಒಂದಾಗಲಿದ್ದಾರೆ ರಾಣಿ ಮುಖರ್ಜಿ!

    – ಶಾರೂಖ್ ಪುತ್ರಿ ಸುಹಾನಾ ಅಮ್ಮನ ಪಾತ್ರದಲ್ಲಿ ‘ರಾಣಿʼ

    2000ರ ದಶಕದಲ್ಲಿ ಚಲ್ತೇ ಚಲ್ತೇ, ಕುಚ್ ಕುಚ್ ಹೋತಾ ಹೈ, ಕಭಿ ಅಲ್ವಿದಾ ನಾ ಕೆಹನಾ, ಕಭಿ ಖುಷಿ ಕಭಿ ಗಮ್ ಸೇರಿದಂತೆ ಸಾಲುಸಾಲು ಹಿಟ್‌ ಚಿತ್ರಗಳನ್ನು ಕೊಟ್ಟಿದ್ದ ರಾಣಿ ಮುಖರ್ಜಿ (Rani Mukerji) ಮತ್ತು ಶಾರೂಖ್ ಖಾನ್ (Shah Rukh Khan) ಜೋಡಿ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.

    ಸದ್ಯ ಶಾರೂಖ್ ಖಾನ್, ಸಿದ್ಧಾರ್ಥ್ ಆನಂದ್ ನಿರ್ದೇಶನದ ʻಕಿಂಗ್‌ʼ (King) ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ರಾಣಿ ಮುಖರ್ಜಿ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ, ಸುಹಾನಾ ಖಾನ್ (Suhana Khan) ಅವರ ತಾಯಿಯ ಪಾತ್ರಕ್ಕೆ ರಾಣಿ ಮುಖರ್ಜಿಯವರನ್ನು ಆಯ್ಕೆ ಮಾಡಲಾಗಿದೆ. ವಿಶೇಷವೆಂದರೆ ಕೇವಲ 5 ದಿನಗಳು ಮಾತ್ರ ಅವರು ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕಾನ್ ಫೆಸ್ಟಿವಲ್‌ನಲ್ಲಿ ಕನ್ನಡತಿ- ಅಮ್ಮನ ಸೀರೆ ಗೌನ್ ಮಾಡಿದ ದಿಶಾ ಮದನ್

    ʻಕಿಂಗ್‌ʼ ಚಿತ್ರದಲ್ಲಿ ಅಭಿಷೇಕ್ ಬಚ್ಚನ್, ಜಾಕಿ ಶ್ರಾಫ್, ಜೈದೀಪ್ ಅಹ್ಲಾವತ್, ಅಭಯ್ ವರ್ಮಾ ಮತ್ತು ಅರ್ಷದ್ ವಾರ್ಸಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಮೇ 20 ರಿಂದ ಮುಂಬೈನಲ್ಲಿ ಆರಂಭವಾಗಲಿದೆ. ನಂತರ ಯುರೋಪ್‌ನಲ್ಲಿ ಚಿತ್ರೀಕರಣ ನಡೆಯಲಿದೆ. 2026 ರ ಅಕ್ಟೋಬರ್ – ಡಿಸೆಂಬರ್ ನಡುವೆ ಈ ಚಿತ್ರ ರಿಲೀಸ್‌ ಆಗುವ ನಿರೀಕ್ಷೆಯಿದೆ.

    ರಾಣಿ ಮುಖರ್ಜಿ ಪ್ರಸ್ತುತ ಮರ್ದಾನಿ 3 ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನೂ ಶಾರೂಖ್‌ ಖಾನ್‌ 2023 ರಲ್ಲಿ ಪಠಾಣ್, ಜವಾನ್ ಮತ್ತು ಡುಂಕಿಯಂತಹ ಮೂರು ಬ್ಲಾಕ್‌ಬಸ್ಟರ್‌ ಚಿತ್ರಗಳನ್ನು ನೀಡಿದ್ದರು. ಇದನ್ನೂ ಓದಿ: ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಚಿತ್ರದ ರಿಲೀಸ್ ಡೇಟ್ ಅನೌನ್ಸ್

  • ನನ್ನ ಪತಿಗೆ ಬೈಯುತ್ತೇನೆ, ಶಾಪನೂ ಹಾಕ್ತೀನಿ: ರಾಣಿ ಮುಖರ್ಜಿ

    ನನ್ನ ಪತಿಗೆ ಬೈಯುತ್ತೇನೆ, ಶಾಪನೂ ಹಾಕ್ತೀನಿ: ರಾಣಿ ಮುಖರ್ಜಿ

    ಮುಂಬೈ: ಬಾಲಿವುಡ್ ನಟಿ ರಾಣಿ ಮುಖರ್ಜಿ ಹೆಣ್ಣು ಮಗುವಿನ ತಾಯಿಯಾದ ಬಳಿಕ ಸಿನಿಮಾ ಇಂಡಸ್ಟ್ರಿಗೆ ‘ಹಿಚ್ಕಿ’ ಸಿನಿಮಾದ ಮೂಲಕ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಈಗಾಗಲೇ ವಿಭಿನ್ನವಾದ ಕಥೆ ಹೊಂದಿರುವ ಹಿಚ್ಕಿ ಎಲ್ಲರನ್ನು ಸೆಳೆಯುವಲ್ಲಿ ಕ್ಲಿಕ್ ಆಗಿದೆ.

    ಸಿನಿಮಾದ ಪ್ರಮೋಶನ್ ಗಾಗಿ ನೇಹಾ ಧುಪಿಯಾ ಚಾಟ್ ಶೋದಲ್ಲಿ ರಾಣಿ ಮುಖರ್ಜಿ ಭಾಗಿಯಾಗಿದ್ದ ವೇಳೆ, ತಮ್ಮ ಖಾಸಗಿ ಜೀವನದ ಬಗ್ಗೆಯೂ ಮಾತನಾಡಿದರು. ಮಗಳು ಅಧಿರಾ, ಪತಿ ಆದಿತ್ಯ ಚೋಪ್ರಾ ಬಗೆಗಿನ ಮಾತುಗಳನ್ನು ಚಾಟ್ ಶೋದಲ್ಲಿ ಹಂಚಿಕೊಂಡರು.

     

     

    ನಿರೂಪಕಿ ನೇಹಾ ಧುಪಿಯಾ ನೀವು ನಿಮ್ಮ ಪತಿಗೆ ಬೈಯುತ್ತೀರಾ ಎಂದು ಪ್ರಶ್ನೆ ಕೇಳಿದ್ರು. ಹೌದು, ನನ್ನ ಪತಿಗೆ ನಾನು ಪ್ರತಿದಿನ ಬೈಯುತ್ತೇನೆ ಮತ್ತು ಶಾಪವನ್ನು ಹಾಕುತ್ತೇನೆ. ಆದ್ರೆ ಇದೆಲ್ಲವನ್ನೂ ಪ್ರೀತಿಯಿಂದ ಮಾಡುತ್ತೇನೆ, ವಿನಃ ಕೋಪದಿಂದಲ್ಲ. ನಾನು ಯಾರನ್ನು ಹೆಚ್ಚಾಗಿ ಪ್ರೀತಿಸುತ್ತೇನೋ ಅವರನ್ನು ನಾನು ಯಾವಾಗಲೂ ಬೈಯುತ್ತಿರುತ್ತೇನೆ. ನನಗೆ ಇಷ್ಟವಾದವರೊಂದಿಗೆ ಯಾವಾಗಲೂ ನಾನು ತರ್ಲೆ ಮಾಡುತ್ತಾ ಇರುತ್ತೇನೆ ಎಂದು ಉತ್ತರಿಸಿದ್ದಾರೆ.

    ಹಿಚ್ಕಿ ಸಿನಿಮಾ ಮಾರ್ಚ್ 18ರಂದು ದೇಶಾದ್ಯಂತ ತೆರೆಕಾಣಲಿದೆ. ಸಿದ್ದಾರ್ಥ ಮಲ್ಹೋತ್ರಾ ನಿರ್ದೇಶನದಲ್ಲಿ ಸಿನಿಮಾ ಮೂಡಿಬಂದಿದ್ದು, ಮನೀಶ್ ಶರ್ಮಾ ಹಾಗೂ ಆದಿತ್ಯಾ ಚೋಪ್ರಾ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ. ಯೂಟ್ಯೂಬ್ ನಲ್ಲಿ ‘ಹಿಚ್ಕಿ’ ಸಿನಿಮಾದ ಟ್ರೇಲರ್ 1 ಕೋಟಿಗೂ ಅಧಿಕ ಬಾರಿ ವೀಕ್ಷಣೆಯಾಗಿದೆ.