Tag: rani elizabeth

  • ಬ್ರಿಟನ್ ರಾಣಿ ಎಲಿಜಬೆತ್ ಶಕೆ ಅಂತ್ಯ – ಲಕ್ಷಾಂತರ ಮಂದಿ ಸಮಕ್ಷಮದಲ್ಲಿ ಅಂತಿಮ ಯಾತ್ರೆ

    ಬ್ರಿಟನ್ ರಾಣಿ ಎಲಿಜಬೆತ್ ಶಕೆ ಅಂತ್ಯ – ಲಕ್ಷಾಂತರ ಮಂದಿ ಸಮಕ್ಷಮದಲ್ಲಿ ಅಂತಿಮ ಯಾತ್ರೆ

    ಲಂಡನ್: ಬ್ರಿಟನ್ (Britain) ರಾಣಿ ಎಲಿಜಬೆತ್ (Elizabeth 11) ಶಕೆ ಇದೀಗ ಅದ್ಧೂರಿಯಾಗಿ ಮುಗಿಯುತ್ತಿದೆ. ಬೆಳಗ್ಗೆ ಆರೂವರೆಯಿಂದ ಸುದೀರ್ಘವಾಗಿ ನಡೆಯುತ್ತಿರುವ ಅಂತ್ಯಕ್ರಿಯೆಯ ಅಂತಿಮ ವಿಧಾನಗಳು ಲಕ್ಷಾಂತರ ಜನರ ಸಮ್ಮುಖದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರುತ್ತಿವೆ. ಭಾರತದ ಕಾಲಮಾನ ಮಧ್ಯರಾತ್ರಿ 12 ಗಂಟೆ ಹೊತ್ತಿಗೆ ಅಂತ್ಯಸಂಸ್ಕಾರ (Funeral) ದ ಪ್ರಕ್ರಿಯೆಗಳು ಮುಗಿಯಲಿವೆ.

    1964ರಲ್ಲಿ ವಿನ್‍ಸ್ಟನ್ ಚರ್ಚಿಲ್ (Winston Churchill) ಅಂತ್ಯಕ್ರಿಯೆಯನ್ನು ಇಷ್ಟು ದೊಡ್ಡ ಮಟ್ಟದಲ್ಲಿ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಗಿತ್ತು. ಇದಾದ ನಂತರ ಬ್ರಿಟನ್‍ನಲ್ಲಿ ಇಂತಹ ಕಾರ್ಯಕ್ರಮ ನಡೆದಿರೋದು ಇದೇ ಮೊದಲು. ಬೆಳಗ್ಗೆ ವೆಸ್ಟ್ ಮಿನಿಸ್ಟರ್ ಹಾಲ್‍ (Wet Minister Hall) ನಿಂದ ವೆಸ್ಟ್ ಮಿನಿಸ್ಟರ್ ಅಬೆ ಚರ್ಚ್‍ಗೆ ರಾಣಿ ಎಲಿಜಬೆತ್ ಪಾರ್ಥಿವ ಶರೀರವನ್ನು ರಾಯಲ್ ನೇವಿಯ ಸ್ಟೇಟ್ ಗನ್ ಕ್ಯಾರೇಜ್‍ನಲ್ಲಿ ಕೊಂಡೊಯ್ಯಲಾಯಿತು. ಮಾರ್ಗಮಧ್ಯೆ ಪಾರ್ಲಿಮೆಂಟ್ ವೃತ್ತದಲ್ಲಿ ಗಾರ್ಡ್ ಆಫ್ ಹಾನರ್ ಸಲ್ಲಿಸಲಾಯ್ತು. ನಂತರ ವೆಸ್ಟ್ ಮಿನಿಸ್ಟರ್ ಅಬೆಯಲ್ಲಿ ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು.

    ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu), ಅಮೆರಿಕಾ ಅಧ್ಯಕ್ಷ ಜೋ ಬೈಡನ್ (Joe Biden) ಸೇರಿ ವಿಶ್ವದ 2ಸಾವಿರ ಗಣ್ಯರು ರಾಣಿ ಎಲಿಜಬೆತ್‍ಗೆ ಅಂತಿಮ ನಮನ ಸಲ್ಲಿಸಿದ್ರು. 2 ನಿಮಿಷ ಇಡೀ ದೇಶ ಮೌನಾಚರಣೆ ಮೂಲಕ ಗೌರವ ಸಲ್ಲಿಸಿತು. ರಾಣಿ ಎಲಿಜಬೆತ್ 96 ವರ್ಷ ಬದುಕಿದ್ದಕ್ಕೆ ದ್ಯೋತಕವಾಗಿ 96 ಬಾರಿ ಗಂಟೆ ಮೊಳಗಿಸಲಾಯಿತು. ಅಲ್ಲಿಂದ ರಾಣಿಯ ಅಂತಿಮ ಯಾತ್ರೆ ವೆಲ್ಲಿಂಗ್ಟನ್ ಆರ್ಚ್, ನಂತರ ವಿಂಡ್ಸರ್ ಕ್ಯಾಸೆಲ್‍ವರೆಗೆ ಶಾಸ್ತ್ರೋಕ್ತವಾಗಿ ನಡೀತು. ಇದನ್ನೂ ಓದಿ: ಮಹಿಳಾ ಪೇದೆ ಹತ್ಯೆ ಪ್ರಕರಣ – ಠಾಣೆಯಲ್ಲೇ ಇದ್ಳು ಹಂತಕಿ!

    ನಂತರ ಮತ್ತೊಂದು ಸೇವೆಗಾಗಿ ರಾಣಿ ಪಾರ್ಥಿವ ಶರೀರವನ್ನು ಸೇಂಟ್ ಜಾರ್ಜ್ ಚರ್ಚ್‍ಗೆ ಕೊಂಡೊಯ್ಯಲಾಯಿತು. ಇಲ್ಲಿಯೇ ಕೊಹಿನೂರ್ ವಜ್ರ (Kohinoor Diamond) ಸಹಿತ ಕಿರೀಟ ಮತ್ತಿತರ ರಾಜಸತ್ತೆಯ ಲಾಂಛನಗಳನ್ನು ತೆಗೆಯುವ ಪ್ರಕ್ರಿಯೆ ನಡೀತು. ಇನ್ನು ಕೆಲವೇ ಹೊತ್ತಲ್ಲಿ ವೆಸ್ಟ್ ಮಿನಿಸ್ಟರ್ ಡೀನ್ ಡೇವಿಡ್ ಹೋಯಲ್‍ನಲ್ಲಿ ರಾಣಿ ಅಂತ್ಯಕ್ರಿಯೆ ಕೆಲವೇ ಕುಟುಂಬ ಸದಸ್ಯರ ಸಮ್ಮುಖದಲ್ಲಿ ನಡೆಯಲಿದೆ. ಕಳೆದ ವರ್ಷ ಸಾವನ್ನಪ್ಪಿದ್ದ ಪತಿ ಪ್ರಿನ್ಸ್ ಫಿಲಿಪ್ ಸಮಾಧಿ ಪಕ್ಕದಲ್ಲಿಯೇ ರಾಣಿಯ ಅಂತ್ಯಕ್ರಿಯೆ ನಡೆಯಲಿದೆ. ಸೆಪ್ಟೆಂಬರ್ 8ರಂದು 96 ವರ್ಷದ ರಾಣಿ ಎಲಿಜಬೆತ್ ಇಹಲೋಕ ತ್ಯಜಿಸಿದ್ರು.

    Live Tv
    [brid partner=56869869 player=32851 video=960834 autoplay=true]

  • ಬ್ರಿಟನ್ ರಾಣಿಯ ಕಿರೀಟದಲ್ಲಿದ್ದ ಕೊಹಿನೂರು ವಜ್ರದ ಮೂಲ ಯಾದಗಿರಿ!

    ಬ್ರಿಟನ್ ರಾಣಿಯ ಕಿರೀಟದಲ್ಲಿದ್ದ ಕೊಹಿನೂರು ವಜ್ರದ ಮೂಲ ಯಾದಗಿರಿ!

    ಯಾದಗಿರಿ: ಬ್ರಿಟನ್ (Britain) ರಾಣಿ ಎಲಿಜಬೆತ್ ನಿಧನದ ನಂತರ, ಅವರು ಧರಿಸುತ್ತಿದ್ದ ಕೊಹಿನೂರು ವಜ್ರದ ಕಿರೀಟದ ಕುರಿತು ಚರ್ಚೆ ಜೋರಾಗಿದೆ. ಎಲಿಜಬೆತ್ ರಾಣಿ ಧರಿಸುತ್ತಿದ್ದ ಕಿರೀಟದಲ್ಲಿದ್ದ ವಜ್ರ, ಇದು ಭಾರರತದದ್ದು ಎನ್ನುವುದು ಮತ್ತೆ ಮುನ್ನಲೆಗೆ ಬಂದಿದೆ. ಆದರೆ ಇದು ಕೃಷ್ಣಾನದಿ ತೀರದಲ್ಲಿ ದೊರೆತ ಡೈಮೆಂಡ್ ಆಗಿದ್ದು, ಕರ್ನಾಟಕದ ಸ್ವತ್ತು ಎನ್ನಲಾಗಿದೆ.

    ಬ್ರಿಟನ್ ರಾಣಿ 2ನೇ ಎಲಿಜಬೆತ್ (Rani Elizabeth) ನಿಧನ ನಂತರ ರಾಣಿಯ ಕಿರೀಟದಲ್ಲಿದ್ದ ಕೊಹಿನೂರು ವಜ್ರ (Kohinuru Diamond) ದ ಮೂಲ ಮತ್ತೆ ಮುನ್ನೆಲೆಗೆ ಬಂದಿದೆ. ಈ ವಜ್ರ ಭಾರತದ್ದು, ಅದರಲ್ಲೂ ಕರ್ನಾಟಕದ ಯಾದಗಿರಿ (Yadagiri) ಯಲ್ಲಿ ಸಿಕ್ಕಿದ್ದು ಅನ್ನಲು ಕೆಲವೊಂದು ದಾಖಲೆಗಳು ಸಿಕ್ಕಿವೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕೊಳ್ಳುರು ಗ್ರಾಮದ ಹೊರ ಭಾಗದಲ್ಲಿ ಹರಿಯುತ ಕೃಷ್ಣಾ ನದಿ (Krishna River) ತೀರದಲ್ಲಿ ಸಿಕ್ಕಿತೆನ್ನಲಾಗ್ತಿದೆ.

    ವಜ್ರ ಸಿಕ್ಕ ಸ್ಥಳವೆಂದು ಸುರಪುರ ಇತಿಹಾಸ ಸಂಶೋಧನಾ ಕೇಂದ್ರದಿಂದ ನಾಮಫಲಕ ಹಾಕಲಾಗಿದೆ. ಡೈಮಂಡ್ ಸಿಕ್ಕ ಸ್ಥಳದಲ್ಲಿ ಮರಳು ಗಣಿಗಾರಿಕೆ ಕೂಡ ನಿಷೇಧ ಮಾಡಲಾಗಿದೆ. ಆದರೆ ವಜ್ರ ದೊರೆತ ಸ್ಥಳವು ಈಗ ಹಾಳುಕೊಂಪೆಯಾಗಿದೆ. ವಿಶ್ವ ಖ್ಯಾತಿ ಹೊಂದಿದ್ದ ವಜ್ರ ತರುವಲ್ಲಿ ವಿಫಲವಾಗಿರುವುದಕ್ಕೆ ಇತಿಹಾಸಕಾರ ಭಾಸ್ಕರ ರಾವ್ (Bhaskar Rao) ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬ್ರಿಟನ್ ರಾಣಿ ಎಲಿಜಬೆತ್-2 ಇನ್ನಿಲ್ಲ

    1799ರಲ್ಲಿ ಬ್ರಿಟಿಷ್ ಕ್ಯಾಪ್ಟನ್ ಲಾರೆನ್ಸ್ ಪಂಜಾಬ್ (Punjab) ಗೆದ್ದ ನಂತರ ಖಜಾನೆಯಲ್ಲಿದ್ದ ವಜ್ರವು ಬ್ರಿಟಿಷ್‍ರು ದೋಚಿ ಕೊಂಡು ಹೋಗಿರುತ್ತಾರೆ. ಅದನ್ನೇ ರಾಣಿ ವಿಕ್ಟೋರಿಯಾ ಬ್ರೂಚ್‍ (Victoria Brooch) ರವರು ಕಿರೀಟದಲ್ಲಿ ಧರಿಸುತ್ತಾರೆ. ಆದರೆ ಮಹಿಳೆಯರು ಮಾತ್ರ ಕೊಹಿನೂರ್ ವಜ್ರವನ್ನ ಧರಿಸಬೇಕೆಂದು ಆದೇಶ ಮಾಡಿದ್ದ ಹಿನ್ನೆಲೆ, ನಂತರ ಬಂದ ರಾಣಿ ಎಲಿಜಬೆತ್ ಕೊಹಿನೂರು ವಜ್ರ ಕಿರೀಟ ಧರಿಸುತ್ತಾರೆ. ಇದೀಗ 2ನೇ ಎಲಿಜಬೆತ್ ನಿಧನ ನಂತರ ಕೊಹಿನೂರು ವಜ್ರದ ಬಗ್ಗೆ ಸಾಕಷ್ಟು ಚರ್ಚೆ ಆಗ್ತಿದೆ.

    ಈ ವಜ್ರವು ಯಾದಗಿರಿ ಜಿಲ್ಲೆಗೆ ಸೇರಿದ್ದು ಎಂದು ಸಂಸದ ಜಿ.ಸಿ.ಚಂದ್ರಶೇಖರ ಜಾಲತಾಣದಲ್ಲಿ ಪೊಸ್ಟ್ ಮಾಡಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಈ ಬಗ್ಗೆ ಗಮನ ಹರಿಸಿ ನಮ್ಮ ಸ್ವತ್ತನ್ನು ನಮ್ಮ ದೇಶಕ್ಕೆ ತರುವ ಪ್ರಯತ್ನ ಮಾಡ್ಬೇಕು ಎನ್ನಲಾಗ್ತಿದೆ. ಆದರೆ ವಿಶ್ವ ಖ್ಯಾತಿ ಹೊಂದಿದ್ದ ಡೈಮಂಡ್ ವಿಚಾರವಾಗಿ ಮತ್ತೊಂದೆಡೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಕೊಲ್ಲೂರಿನಲ್ಲಿ ಸಿಕ್ಕಿದ್ದು ಅಂತಾ ವೆಬ್‍ಸೈಟ್‍ಗಳಲ್ಲಿ ಸ್ವಲ್ಪ ಗೊಂದಲ ಸೃಷ್ಟಿಸುತ್ತಿವೆ. ಅದೇನೇ ಇರಲಿ ಕೊಹಿನೂರ್ ವಜ್ರ ಕರ್ನಾಟಕದ್ದೇ ಎನ್ನುವುಕ್ಕೆ ರಾಜ್ಯದಲ್ಲಿ ಸಾಕಷ್ಟು ಪುರಾವೆಗಳು ಇವೆ.

    ಒಟ್ಟಿನಲ್ಲಿ ಇದೀಗ ಪ್ರಧಾನಿ ನರೇಂದ್ರ ಮೋದಿ (Narenra Modi) ಅವರು ಕೊಹಿನೂರು ವಜ್ರವನ್ನು ಭಾರತಕ್ಕೆ ಮರಳಿ ತರಲು ಪ್ರಯತ್ನ ಮಾಡುತ್ತಾರಾ ಎಂಬ ಪ್ರಶ್ನೆ ಕಾಡುತ್ತಿವೆ.

    Live Tv
    [brid partner=56869869 player=32851 video=960834 autoplay=true]