Tag: rani

  • ಕಿರಣ್ ರಾಜ್ ಹುಟ್ಟುಹಬ್ಬಕ್ಕೆ ‘ರಾನಿ’ ಸಿನಿಮಾದ ಸಾಂಗ್ ಗಿಫ್ಟ್

    ಕಿರಣ್ ರಾಜ್ ಹುಟ್ಟುಹಬ್ಬಕ್ಕೆ ‘ರಾನಿ’ ಸಿನಿಮಾದ ಸಾಂಗ್ ಗಿಫ್ಟ್

    ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ತಮ್ಮದೇ ಆದ ಛಾಪು ಮೂಡಿಸಿರುವ ಕಿರಣ್ ರಾಜ್ (, Kiran Raj) ಅವರಿಗೆ ಹುಟ್ಟುಹಬ್ಬದ ಸಂಭ್ರಮ.  ಕಿರಣ್ ರಾಜ್ ನಾಯಕನಾಗಿ ನಟಿಸಿರುವ “ರಾನಿ” (Rani) ಚಿತ್ರತಂಡ ಹಾಡೊಂದನ್ನು ಉಡುಗೊರೆ ನೀಡುವ ಮೂಲಕ ಹುಟ್ಟುಹಬ್ಬದ ಶುಭಾಶಯ ಕೋರಿದೆ. ಪ್ರಮೋದ್ ಮರವಂತೆ ಅವರು ಬರೆದು, ಮಣಿಕಾಂತ್ ಕದ್ರಿ ಸಂಗೀತ ಸಂಯೋಜಿಸಿರುವ ‘ಹವಮಾನವೆ ಸುಂದರ ಸುಂದರ’ ಎಂಬ ಹಾಡು   ಟಿ-ಸೀರೀಸ್‍ನ ಯೂಟ್ಯೂಬ್‍ ಚಾನಲ್‍ನಲ್ಲಿ ಬಿಡುಗಡೆಯಾಗಿದೆ.

    ಹುಟ್ಟುಹಬ್ಬ ಹಾಗು ಹಾಡು ಬಿಡುಗಡೆ  ಸಂದರ್ಭದಲ್ಲಿ ಮಾತನಾಡಿದ ಕಿರಣ್‍ ರಾಜ್‍, ‘ಒಂದು ಹಂತದಲ್ಲಿ ನನಗೆ ಜೀವನದಲ್ಲಿ ಮುಂದೇನು ಎಂಬ ಪ್ರಶ್ನೆ ಎದುರಾಯಿತು. ಆಗ ನನಗೆ, “ರಾನಿ” ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕರು ಸಿಕ್ಕರು. ನನಗೂ ಈ ಚಿತ್ರದ ಕಥೆ ಇಷ್ಟವಾಯಿತು. ಚಿತ್ರದ ಕಥೆ ಕಾಲ್ಪನಿಕವಾದರೂ, ಪ್ರತಿಯೊಬ್ಬರಿಗೂ ನನ್ನ ಪಾತ್ರ ಹತ್ತಿರವಾಗುತ್ತದೆ‌. ಹೆವಿ ಬಜೆಟ್ ನ ಚಿತ್ರವಿದು. ಕೆಲವರು ನನ್ನ ಸಿನಿಮಾಗೆ ಯಾಕೆ ಇಷ್ಟೊಂದು ಖರ್ಚು ಮಾಡುತ್ತಿದ್ದೀರಾ? ಎಂದು ನಿರ್ಮಾಪಕರನ್ನು ಕೇಳಿರಬಹುದು. ಆದರೆ ನಮ್ಮ ನಿರ್ಮಾಪಕರು ವ್ಯಕ್ತಿಗಿಂತ ವ್ಯಕ್ತಿತ್ವಕ್ಕೆ ಬೆಲೆ ಕೊಡುವವರು. ಹಾಗಾಗಿ, ಹಣಕಾಸಿನ ವಿಚಾರಕ್ಕಿಂತ ಒಳ್ಳೆಯ ಸಿನಿಮಾ ಮಾಡಿದ್ದಾರೆ’ ಎಂದರು.

    ‘ಇದು ಆ್ಯಕ್ಷನ್‍ ಚಿತ್ರವಾದರೂ, ಪಕ್ಕಾ ಕೌಟುಂಬಿಕ ಚಿತ್ರ. ಈ ಹಿಂದೆ ನೀವು ನೋಡಿರದ ಕಿರಣ್ ರಾಜ್ ಅವರನ್ನು “ರಾನಿ” ಚಿತ್ರದಲ್ಲಿ ನೋಡಬಹುದು‌. ಆರು ಆಕ್ಷನ್ ಸನ್ನಿವೇಶಗಳಿದೆ. ಸೆಂಟಿಮೆಂಟ್‍ ಸಹ ಸ್ವಲ್ಪ ಹೆಚ್ಚಾಗಿಯೇ ಇದೆ. ಆರು ಫೈಟ್‍ಗಳಿಗೂ ವಿನೋದ್‍ ಮಾಸ್ಟರ್ ಅವರೆ ಸಾಹಸ ನಿರ್ದೇಶನ ಮಾಡಿದ್ದಾರೆ. ಆರಂಭದಿಂದಲೂ ಸದ್ದು ಮಾಡುತ್ತಿರುವ “ರಾನಿ” ಆಗಸ್ಟ್ 30ಕ್ಕೆ ತೆರೆಗೆ ಬರಲಿದೆ ಎಂದು ನಿರ್ದೇಶಕ ಗುರುತೇಜ್ ಶೆಟ್ಟಿ ತಿಳಿಸಿದರು.

    ಚಿತ್ರತಂಡದ ಸಹಕಾರದಿಂದ ಚಿತ್ರ ಉತ್ತಮವಾಗಿ ಬಂದಿದೆ. ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ ಎಂದರು ನಿರ್ಮಾಪಕರಾದ ಚಂದ್ರಕಾಂತ್ ಪೂಜಾರಿ ಹಾಗೂ ಉಮೇಶ್ ಹೆಗ್ಡೆ. “ಹವಮಾನ” ಹಾಡು ಹುಟ್ಟಿದ ಬಗ್ಗೆ ಪ್ರಮೋದ್ ಮರವಂತೆ ಹೇಳಿದರು‌. ಸಂಗೀತದ ಕುರಿತು ಮಣಿಕಂತ್ ಕದ್ರಿ ವಿವರಿಸಿದರು. ನಟಿಯರಾದ ಸಮೀಕ್ಷಾ, ರಾಧ್ಯ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಸ್ಥಿರ ಛಾಯಾಗ್ರಾಹಕರಾಗಿದ್ದ ರಾಘವೇಂದ್ರ ಬಿ ಕೋಲಾರ ಈ ಚಿತ್ರದ ಮೂಲಕ  ಛಾಯಾಗ್ರಾಹಕರಾಗಿದ್ದಾರೆ.

  • ಜಾನಪದ ಶೈಲಿ ಹಾಡಿನ ಮೂಲಕ ಮೋಡಿ ಮಾಡಿದ ಕಿರಣ್ ರಾಜ್

    ಜಾನಪದ ಶೈಲಿ ಹಾಡಿನ ಮೂಲಕ ಮೋಡಿ ಮಾಡಿದ ಕಿರಣ್ ರಾಜ್

    ಕಿರಣ್ ರಾಜ್ (Kiran Raj) ನಾಯಕನಾಗಿ ನಟಿಸಿರುವ ‘ರಾನಿ’ (Rani) ಚಿತ್ರ ಪೊಸ್ಟರ್ ಹಾಗೂ ಟೀಸರ್  ಮೂಲಕ ಈಗಾಗಲೇ ಸದ್ದು ಮಾಡಿದೆ. ಮಹಾಶಿವರಾತ್ರಿಯ ದಿನದಂದು  ರಾನಿ ಚಿತ್ರದ  ಕೋಲೆ ಕೋಲೆ ಎನ್ನುವ ಜಾನಪದ ಶೈಲಿಯ ಮಾಸ್ ಹಾಡು ಟಿ ಸಿರೀಸ್ ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆಯಾಗಿ ಪಡ್ಡೆ ಹುಡುಗರ ಮನಸ್ಸು ಗೆದ್ದಿದೆ. ಈಗಾಗಲೇ ಒಂದು ಮಿಲಿಯನ್ ಜನರು ಈ ಹಾಡನ್ನು  ವೀಕ್ಷಿಸಿದ್ದಾರೆ.

    ಪ್ರಾರಂಭದಿಂದಲೂ ವಿಭಿನ್ನವಾಗಿ ಪ್ರಚಾರ ಮಾಡುತ್ತಿರುವ ರಾನಿ ತಂಡ ಈ ಬಾರಿ ಶಿವರಾತ್ರಿ ಹಬ್ಬದ ಪ್ರಯುಕ್ತ ಚಿತ್ರದ ನಾಯಕ ನಟ ಕಿರಣ್ ರಾಜ್ ಪ್ರಪಂಚದಲ್ಲಿ ಅತೀ ಎತ್ತರದಲ್ಲಿರುವ ಶಿವನ ಮಂದಿರ ಉತ್ತರಕಾಂಡದ ತುಂಗ್ ನಾಥ್ ದೇವಸ್ಥಾನಕ್ಕೆ ಹೋಗಿ ಅಭಿಮಾನಿಗಳಿಗೆ ಶುಭಕೋರಿದ್ದಾರೆ. ಸದಾ ಒಂದಲ್ಲೊಂದು ಸಾಹಸ ಚಟುವಟಿಕೆಯಲ್ಲಿರುವ ಕಿರಣ್ ರಾಜ್ “ರಾನಿ”ಚಿತ್ರಕ್ಕಾಗಿ ಸ್ಕೈಡೈವಿಂಗ್ ಹಾಗೂ  ಪ್ಯಾರಾಗ್ಲೈಡಿಂಗ್ ಮಾಡಿ ಗಮನ ಸೆಳೆದ್ದಿದ್ದರು.

    ‘ನಾನು ನಿರ್ದೇಶಕರ ನಟನಾಗಬೇಕು , ನಿರ್ದೇಶಕ ಬರೆಯುವ ಪಾತ್ರಕ್ಕೆ ನ್ಯಾಯ ಕೊಡುವುದು ಪ್ರತಿಯೊಬ್ಬ ನಟನ ಕರ್ತವ್ಯ. ಆ ಕಾರಣದಿಂದ ನಾನು ಸದಾ ಕಲಿಯುತ್ತಿರುತ್ತೆನೆ. “ರಾನಿ ” ಒಂದು ಕ್ಲಾಸಿಕ್ ಸಿನಿಮಾ. ಇದೊಂದು ಫ್ಯಾಮಿಲಿ ಆಕ್ಷನ್ ಸಿನಿಮಾ ಎಂದರರೂ ತಪ್ಪಾಗಲಾರದು. ಕಾಮಿಡಿ, ಲವ್, ಆಕ್ಷನ್ ಫ್ಯಾಮಿಲಿ ಡ್ರಾಮಾ ಎಲ್ಲವು ಒಂದೇ ಸಿನಿಮಾದಲ್ಲಿ ಸಿಕ್ಕಿರುದು ನನ್ನ ಭಾಗ್ಯ. ಈಗ ಮೊದಲ ಹಾಡು ಬಿಡುಗಡೆಯಾಗಿ ಹಿಟ್ ಆಗಿದೆ ಜನರ ಪ್ರತಿಕ್ರಿಯೆ ನೋಡಿ ಕೆಲಸ ಮಾಡುವ ಜೋಶ್ ಇನ್ನಷ್ಟು ಬಂದಿದೆ ಎನ್ನುತ್ತಾರೆ ಕಿರಣ್ ರಾಜ್.

    ರಾನಿ ಚಿತ್ರದ ಮೊದಲ ಪ್ರತಿ ಸಿದ್ದವಾಗಿದ್ದು ಚಿತ್ರ ಬಿಡುಗಡೆಯ ದಿನಾಂಕ ಸದ್ಯದಲ್ಲೇ ಹೇಳಲಿದ್ದೇವೆ ಎನ್ನುತ್ತಾರೆ  ನಿರ್ದೇಶಕ ಗುರುತೇಜ್ ಶೆಟ್ಟಿ. ರಾನಿ ಸ್ಟಾರ್ ಕ್ರಿಯೇಷನ್ ಬ್ಯಾನರ್ ನ ಮೊದಲ ಚಿತ್ರವಾಗಿದ್ದು ಉಮೇಶ ಹೆಗ್ಡೆ ಚಂದ್ರಕಾಂತ್ ಪೂಜಾರಿ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ  ಸಮಿಕ್ಷಾ, ರಾಧ್ಯ, ಅಪೂರ್ವ ಮೂವರು ನಾಯಕಿಯರಿದ್ದಾರೆ. ಉಳಿದಂತೆ ರವಿ ಶಂಕರ, ಮೈಕೋ ನಾಗರಾಜ್, ಗಿರೀಶ್ ಹೆಗ್ಡೆ, ಸೂರ್ಯ ಕುಂದಾಪುರ, ಧರ್ಮಣ್ಣ ಕಡೂರ್,ಧರ್ಮೇಂದ್ರ ಆರಸ್, ಪ್ರಥ್ವಿ ರಾಜ್,ಅರ್ಜುನ್ ಪಾಳೇಗಾರ, ಉಗ್ರಂ ಮಂಜು,ಯಶ್ ಶೆಟ್ಟಿ, ಶ್ರೀಧರ್, ಅನಿಲ್ ಯಾದವ್,ಚೇತನ್ ದುರ್ಗ,ಸುಜಯ್ ಶಾಸ್ತ್ರೀ, ಮಠ ಗುರುಪ್ರಸಾದ್ ಇತರ ದೊಡ್ಡ ಕಲಾವಿದರೆ ದಂಡೆ ಇದೆ.ಕದ್ರಿ ಮಣಿಕಾಂತ್ ಸಂಗೀತ ನಿರ್ದೇಶನ ಪ್ರಮೋದ ಮರವಂತೆ ಗೀತರಚನೆ ಹಾಗೂ ಸಚಿನ್ ಬಸ್ರೂರ್ ಹಿನ್ನೆಲೆ ಸಂಗೀತ,  ರಾಘವೇಂದ್ರ ಬಿ ಕೋಲಾರ ಛಾಯಾಗ್ರಾಹಣ,  ಉಮೇಶ ಆರ್  ಬಿ ಸಂಕಲನ ಹಾಗೂ ಸತೀಶ್ ಅವರವ ಕಲಾ ನಿರ್ದೇಶನ ರಾನಿ ಚಿತ್ರಕ್ಕಿದೆ.

  • ವಿಷ್ಣುವರ್ಧನ್ ಸ್ಮಾರಕದಲ್ಲಿ ‘ರಾನಿ’ ಚಿತ್ರದ ಶೂಟಿಂಗ್ ಮುಕ್ತಾಯ

    ವಿಷ್ಣುವರ್ಧನ್ ಸ್ಮಾರಕದಲ್ಲಿ ‘ರಾನಿ’ ಚಿತ್ರದ ಶೂಟಿಂಗ್ ಮುಕ್ತಾಯ

    ಗುರುತೇಜ್ ಶೆಟ್ಟಿ (Gurtej Shetty) ನಿರ್ದೇಶನದ, ಕಿರಣ್ ರಾಜ್ (Kiran Raj) ನಾಯಕನಾಗಿ ನಟಿಸಿರುವ ‘ರಾನಿ’ (Rani) ಚಿತ್ರದ ಕೊನೆ ಹಂತದ ಚಿತ್ರಿಕರಣ ಮುಗಿಸಿದೆ.  ಮೈಸೂರಿನ ವಿಷ್ಣುವರ್ಧನ್ ಸ್ಮಾರಕದಲ್ಲಿ ರವಿಶಂಕರ್, ಮಠ ಗುರುಪ್ರಸಾದ್, ಯಶ್ ಶೆಟ್ಟಿ, ಸೂರ್ಯ ಕುಂದಾಪುರ, ಧರ್ಮಣ್ಣ ಕಡೂರ್ ಅವರ ಕೊನೆಯ ಹತ್ತು ದಿನದ ಚಿತ್ರೀಕರಣ ಮಾಡಿ ಮುಗಿಸಿದೆ.

    ಸ್ಟಾರ್ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ಚಂದ್ರಕಾಂತ್ ಪೂಜಾರಿ ಉಮೇಶ ಹೆಗ್ಡೆ ನಿರ್ಮಿಸುತ್ತಿರುವ ಮೊದಲ ಚಿತ್ರ ಇದಾಗಿದೆ. ಈಗಾಗಲೇ ಪೊಸ್ಟರ್, ಟೀಸರ್ ನಿಂದ ಚಿತ್ರ ಪ್ರೇಕ್ಷಕರಲ್ಲಿ ಬಾರಿ ನಿರೀಕ್ಷೆ ಹುಟ್ಟಿಸಿದೆ. ಚಿತ್ರದಲ್ಲಿ ಮೂವರು ನಾಯಕಿಯರಿದ್ದು ರಾಧ್ಯ, ಸಮಿಕ್ಷಾ ಮತ್ತು ಅಪೂರ್ವ ಅಭಿನಯಿಸಿದ್ದಾರೆ.  ಮೈಕೋ ನಾಗರಾಜ್, ಉಗ್ರಂ ಮಂಜು, ಉಗ್ರಂ ರವಿ, ಸುಜಯ್ ಶಾಸ್ತ್ರಿ, ಗಿರೀಶ್ ಹೆಗ್ಡೆ, ಬಿ ಸುರೇಶ, ಶ್ರೀಧರ್, ಧರ್ಮೇಂದ್ರ ಆರಸ್, ಚೇತನ್ ದುರ್ಗ, ಅನಿಲ್ ಯಾದವ್, ಪ್ರಥ್ವಿ ರಾಜ್, ಅರ್ಜುನ್, ಕರಿ ಸುಬ್ಬು ಮುಂತಾದ ಹೆಸರಾಂತ ಕಲಾವಿದ ಚಿತ್ರದಲ್ಲಿ ಅಭಿನಯಿಸಿದ್ದಾರೆ.

     

    ರಾಘವೇಂದ್ರ ಬಿ ಕೋಲಾರ ಛಾಯಾಗ್ರಹಣ, ಸತೀಶ್ ಕಲಾ ನಿರ್ದೇಶನ, ಉಮೇಶ ಸಂಕಲನ,  ಮಣಿಕಾಂತ್ ಕದ್ರಿ ಸಂಗೀತ ಹಾಗೂ ಪ್ರಮೋದ ಮರವಂತೆ ಗೀತರಚನೆ,  ವಿನೋದ್ ಸಾಹಸ ಧನಂಜಯ ಅವರ ನೃತ್ಯ ನಿರ್ದೇಶನವಿದೆ. “ರಾನಿ” ಗೆ ಸಚಿನ್ ಬಸ್ರೂರ್ ಹಿನ್ನಲೆ ಸಂಗೀತವಿದ್ದು ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ನೆಡೆಯುತ್ತಿದೆ. ಸದ್ಯದಲ್ಲೇ ಚಿತ್ರದ ಬಿಡುಗಡೆಯ ದಿನಾಂಕ ಪ್ರಕಟಿಸಲಿದೆ ಚಿತ್ರತಂಡ.

  • ಚಂದ್ರನ ಅಂಗಳಕ್ಕೆ ಚಂದ್ರಯಾನ 3: ಅದೇ ವೇಳೆಗೆ ‘ರಾನಿ’ ಟೀಸರ್ ರಿಲೀಸ್

    ಚಂದ್ರನ ಅಂಗಳಕ್ಕೆ ಚಂದ್ರಯಾನ 3: ಅದೇ ವೇಳೆಗೆ ‘ರಾನಿ’ ಟೀಸರ್ ರಿಲೀಸ್

    ಗಸ್ಟ್  23ರ ರಂದು ಸಂಜೆ 6 ಗಂಟೆ 4 ನಿಮಿಷಕ್ಕೆ ದೇಶದ ಹೆಮ್ಮೆಯ ‘ಚಂದ್ರಯಾನ 3’ (Chandrayaan 3) ಉಪಗ್ರಹ ಚಂದ್ರನ ಅಂಗಳವನ್ನು ತಲುಪಲಿದೆ ಎಂದು ISRO ವಿಜ್ಞಾನಿಗಳು  ಈಗಾಗಲೇ ತಿಳಿಸಿದ್ದಾರೆ. ಅದೇ ಸಮಯಕ್ಕೆ ಸರಿಯಾಗಿ ಕಿರಣ್ ರಾಜ್ (Kiran Raj) ನಾಯಕರಾಗಿ ನಟಿಸಿರುವ ‘ರಾನಿ’ (Rani) ಚಿತ್ರದ ಹಿಂದಿ ಟೀಸರ್  (Hindi Teaser) ರಿಲೀಸ್ ಮಾಡಲು ಹೊರಟಿದೆ ಚಿತ್ರತಂಡ. ಈ ಮೂಲಕ ನಾವು ISRO ವಿಜ್ಞಾನಿಗಳಿಗೆ ಶುಭ ಕೋರುತ್ತಿದ್ದೇವೆ ಎಂದು ಚಿತ್ರತಂಡ ತಿಳಿಸಿದೆ.

    ಈಗಾಗಲೇ 1 ನಿಮಿಷ 35 ಸೆಕೆಂಡ್ ಅವಧಿಯ ಕನ್ನಡ ಟೀಸರ್ ಬಿಡುಗಡೆಯಾಗಿ ಪ್ರೇಕ್ಷಕರಲ್ಲಿ ಚಿತ್ರದ ಬಗ್ಗೆ ನಿರೀಕ್ಷೆ ಹುಟ್ಟಿಸಿದೆ. ಈಗ 2 ನಿಮಿಷ 22 ಸೆಕೆಂಡ್ ನ ಹಿಂದಿ ಟೀಸರ್ ಬಿಡುಗಡೆಯಾಗುತ್ತಿದೆ. ಈ ಮೂಲಕ ಚಿತ್ರದ ಕಥೆಯ ಬಗ್ಗೆ ಇನ್ನಷ್ಟು ಮಾಹಿತಿ ಬಿಟ್ಟುಕೊಡುತ್ತಿದ್ದೇವೆ ಹಾಗೂ ಹಿಂದಿ ಪ್ರಾದೇಶಿಕತೆಗೆ ತಕ್ಕಂತೆ ಟೀಸರ್ ಕಟ್ಸ್ ಇರುತ್ತದೆ ಎನ್ನುತ್ತಾರೆ ನಿರ್ದೇಶಕ ಗುರುತೇಜ್ ಶೆಟ್ಟಿ.

    ಕಿರಣ್ ರಾಜ್ ಈ ಸಿನಿಮಾದಲ್ಲಿ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದರೆ ಅಪೂರ್ವ, ರಾಧ್ಯ, ಸಮೀಕ್ಷಾ ಮೂವರು ನಾಯಕಿಯರಿದ್ದಾರೆ. ಸ್ಟಾರ್ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಚೊಚ್ಚಲ ಚಿತ್ರ  ಇದಾಗಿದ್ದು, ಚಂದ್ರಕಾಂತ್ ಪೂಜಾರಿ ಹಾಗೂ ಉಮೇಶ ಹೆಗ್ಡೆ ನಿರ್ಮಿಸಿದ್ದಾರೆ. ಇದನ್ನೂ ಓದಿ:ಪತ್ನಿ ರಾಖಿ ಸಾವಂತ್ ವಿರುದ್ಧ ಗುಡುಗಿದ ಮೈಸೂರು ಹುಡುಗ ಆದಿಲ್

    ರವಿ ಶಂಕರ್, ಮೈಕೋ ನಾಗರಾಜ್, ಮಂಡ್ಯ ರಮೇಶ್, ಗಿರೀಶ್ ಹೆಗ್ಡೆ, B ಸುರೇಶ, ಸೂರ್ಯ ಕುಂದಾಪುರ, ಧರ್ಮಣ್ಣ, ಉಗ್ರಂ ಮಂಜು, ಉಗ್ರಂ ರವಿ, ಮನಮೋಹನ್ ರೈ, ಅನಿಲ್ ಯಾದವ್, ಪ್ರಥ್ವಿ, ಧರ್ಮೇಂದ್ರ ಅರಸ್, ಸುಜಯ್ ಶಾಸ್ತ್ರಿ ಅನೇಕ ಹೆಸರಾಂತ ಕಲಾವಿದರು ಚಿತ್ರದಲ್ಲಿದ್ದಾರೆ.

    ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ, ಪ್ರಮೋದ್ ಮರವಂತೆ ಗೀತರಚನೆ, ಸಚಿನ್ ಬಸ್ರೂರ್ ಹಿನ್ನೆಲೆ ಸಂಗೀತ,  ರಾಘವೇಂದ್ರ ಕೋಲಾರ ಛಾಯಾಗ್ರಾಹಣ ಉಮೇಶ R B ಸಂಕಲನ ಹಾಗೂ ಸತೀಶ್ ಅವರ ಕಲಾ ನಿರ್ದೇಶನ ರಾನಿ ಚಿತ್ರಕ್ಕಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಿರಣ್ ರಾಜ್ ಹುಟ್ಟುಹಬ್ಬಕ್ಕೆ ‘ರಾನಿ’ ಸಿನಿಮಾದ ಟೀಸರ್ ಔಟ್

    ಕಿರಣ್ ರಾಜ್ ಹುಟ್ಟುಹಬ್ಬಕ್ಕೆ ‘ರಾನಿ’ ಸಿನಿಮಾದ ಟೀಸರ್ ಔಟ್

    ಕಿರುತೆರೆಯ ಜನಪ್ರಿಯ ನಟ ಕಿರಣ್ ರಾಜ್ (Kiran Raj) ಈಗ ಹಿರಿತೆರೆಯಲ್ಲೂ ಬೇಡಿಕೆ ನಟ. ಪ್ರಸ್ತುತ ಕಿರಣ್ ರಾಜ್ ಅಭಿನಯದ ರಾನಿ (Rani) ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಕಿರಣ್ ರಾಜ್ ಹುಟ್ಟುಹಬ್ಬದಂದು (Birthday) ಬಿಡುಗಡೆಯಾಗಿರುವ ಈ ಟೀಸರ್ ಸಾಕಷ್ಟು ವೀಕ್ಷಣೆಯಾಗಿ, ನೋಡುಗರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಮಾಗಡಿ ರಸ್ತೆಯ ವಿಕ್ಟರಿ ಸಿನಿಮಾದಲ್ಲಿ ಅದ್ದೂರಿಯಾಗಿ ಟೀಸರ್ (Teaser) ಬಿಡುಗಡೆ ಸಮಾರಂಭ ಹಾಗೂ ಕಿರಣ್ ರಾಜ್ ಹುಟ್ಟುಹಬ್ಬ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ನೆರವೇರಿತು.

    ಅಭಿಮಾನಿಗಳ ಪ್ರೀತಿಗೆ ಮನ ತುಂಬಿ ಬಂದಿದೆ ಎಂದು ಮಾತು ಪ್ರಾರಂಭಿಸಿದ ಕಿರಣ್ ರಾಜ್, ‘ನಿಮ್ಮೆಲ್ಲರ ಅಭಿಮಾನಕ್ಕೆ ನಾನು ಚಿರ ಋಣಿ. ರಾನಿ ಚಿತ್ರ ಅದ್ದೂರಿಯಾಗಿ ಮೂಡಿಬಂದಿದೆ. ಗುರುತೇಜ್ ಶೆಟ್ಟಿ (Gurutej Shetty) ವಿಭಿನ್ನ ಕಥೆ ಮಾಡಿದ್ದಾರೆ. ನಿರ್ಮಾಪಕರು ಯಾವುದೇ ಕೊರತೆ ಇಲ್ಲದೆ ನಿರ್ಮಾಣ ಮಾಡಿದ್ದಾರೆ. ಸಹ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯವೈಖರಿ ತುಂಬಾ ಚೆನ್ನಾಗಿದೆ’ ಎಂದರು.

    ನಾನು ಚಿತ್ರರಂಗದಿಂದ ದೂರ ಉಳಿದಿದ್ದ ಸಮಯದಲ್ಲಿ ಮಿತ್ರ ಗಿರೀಶ್ ಹೆಗಡೆ, ನಿರ್ಮಾಪಕ ಉಮೇಶ್ ಹೆಗಡೆ ಅವರನ್ನು ಪರಿಚಯಿಸಿದರು. ಉಮೇಶ್ ಹೆಗಡೆ ಹಾಗೂ ಚಂದ್ರಕಾಂತ್ ಪೂಜಾರಿ ಅವರು ಈ ಚಿತ್ರದ ಕಥೆ ಕೇಳಿ ನಿರ್ಮಾಣಕ್ಕೆ ಮುಂದಾದರು. ನಾಯಕ ಕಿರಣ್ ರಾಜ್ ಬಗ್ಗೆ ಎಷ್ಟು ಹೇಳಿದರೂ ಕಡಿಮೆ. ಅವರು ಈ ಚಿತ್ರಕ್ಕಾಗಿ ಸಾಕಷ್ಟು ಶ್ರಮ ಪಟ್ಟಿದ್ದಾರೆ. ನಟನೆಗಷ್ಟೇ ಸೀಮಿತವಾಗದೆ, ನನ್ನ ಜೊತೆ ಪ್ರತಿಯೊಂದು ಕೆಲಸದಲ್ಲೂ ಭಾಗಿಯಾಗಿದ್ದಾರೆ. ಮಣಿಕಾಂತ್ ಕದ್ರಿ ಚಿತ್ರಕ್ಕೆ ಸಂಗೀತ ನೀಡಿರುವುದಷ್ಟೇ ಅಲ್ಲದೇ, ಟೀಸರ್ ಗೆ ಧ್ವನಿ ಸಹ ನೀಡಿದ್ದಾರೆ. ರಾಘವೇಂದ್ರ ಬಿ ಕೋಲಾರ್ ಛಾಯಾಗ್ರಹಣ, ಸತೀಶ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ‌. ಚಿತ್ರೀಕರಣ ಮುಕ್ತಾಯವಾಗಿದೆ.

    ನಿರ್ಮಾಣದ ಬಗ್ಗೆ ಚಂದ್ರಕಾಂತ್ ಪೂಜಾರಿ – ಉಮೇಶ್ ಹೆಗಡೆ, ಹಾಡುಗಳ ಬಗ್ಗೆ ಮಣಿಕಾಂತ್ ಕದ್ರಿ ಹಾಗೂ ತಮ್ಮ ಪಾತ್ರದ ಬಗ್ಗೆ ನಾಯಕಿಯರಾದ ಸಮೀಕ್ಷ, ಅಪೂರ್ವ, ರಾಧ್ಯ ಮಾತನಾಡಿದರು. ಛಾಯಾಗ್ರಾಹಕ ರಾಘವೇಂದ್ರ ಬಿ ಕೋಲಾರ್ ಸೇರಿದಂತೆ ಅನೇಕ ತಂತ್ರಜ್ಞರು ಹಾಗೂ ಕಲಾವಿದರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಿರಣ್ ರಾಜ್ ಹುಟ್ಟುಹಬ್ಬಕ್ಕೆ ‘ರಾನಿ’ ಟೀಸರ್

    ಕಿರಣ್ ರಾಜ್ ಹುಟ್ಟುಹಬ್ಬಕ್ಕೆ ‘ರಾನಿ’ ಟೀಸರ್

    ಟೈಟಲ್ ಹಾಗೂ ಪೋಸ್ಟರ್ ನಿಂದ ಸಿನಿ ಪ್ರೇಕ್ಷರಲ್ಲಿ ಕುತೂಹಲ ಹುಟ್ಟಿಸಿದ ‘ರಾನಿ’ (Rani) ಸಿನಿಮಾದ ಟೀಸರ್ (Teaser) ನಾಯಕ ನಟ ಕಿರಣ್ ರಾಜ್ (Kiran Raj) ಹುಟ್ಟುಹಬ್ಬದ ದಿನ ಜುಲೈ 5 ರಂದು ಬಿಡುಗಡೆಯಾಗುತ್ತಿದೆ. ರಾನಿ  ಚಿತ್ರದ​ ನಾಯಕ ಕಿರಣ್ ರಾಜ್ ದುಬೈಗೆ ಹೋಗಿ 13 ಸಾವಿರ  ಅಡಿ ಎತ್ತರದಿಂದ ಸ್ಕೈ ಡೈವ್ ಮಾಡಿ ರಾನಿ ಚಿತ್ರದ ಟೈಟಲ್ ಅನಾವರಣಗೊಳಿಸಿದ್ದರು. ಅವರ ಈ ಸಾಹಸಕ್ಕೆ ಇಡೀ ಚಿತ್ರರಂಗವೆ ಮೆಚ್ಚುಗೆ ವ್ಯಕ್ತಪಡಿಸಿತ್ತು. ನಂತರ ಬಿಡುಗಡೆಯಾದ ಪೋಸ್ಟರ್ ಚಿತ್ರದ ಮೇಲಿನ ಕುತೂಹಲ ಇನ್ನಷ್ಟು ಹೆಚ್ಚಿಸಿತ್ತು.

    ಈ ಬಾರಿ ಗಟ್ಟಿ ಕಥೆಯೊಂದಿಗೆ ಆಕ್ಷನ್-ಕಮರ್ಷಿಯಲ್ ಸಿನಿಮಾ ಮಾಡಿದ್ದೇನೆ ಎನ್ನುವ ನಿರ್ದೇಶಕ ಗುರುತೇಜ್ ಶೆಟ್ಟಿ (Gurutej Shetty),  ಇದೊಂದು ಗ್ಯಾಂಗ್ ಸ್ಟರ್ ಸಿನಿಮಾ ಆದರೂ ಕುಟುಂಬ ಸಮೇತ ನೋಡುವಂತಹ ಭಾವನಾತ್ಮಕ ವಿಷಯಗಳು ಚಿತ್ರದಲ್ಲಿದೆ ಎನ್ನುತ್ತಾರೆ. ಇದನ್ನೂ ಓದಿ:ಕಾಸ್ಟಿಂಗ್ ಕೌಚ್ ಬಗ್ಗೆ ಕಿಡಿಕಾರಿದ ನಟ ರಾಜೀವ್ ಖಂಡೇಲ್ವಾಲ್

    ರವಿಶಂಕರ್ ಮೈಕೋ ನಾಗರಾಜ್ ,ಉಗ್ರಂ ರವಿ , ಉಗ್ರಂ ಮಂಜು, ಬಿ. ಸುರೇಶ , ಮಂಡ್ಯ ರಮೇಶ್, ಸುಜಯ್ ಶಾಸ್ತ್ರಿ, ಸೂರ್ಯ ಕುಂದಾಪುರ, ಧರ್ಮಣ್ಣ ಕಡೂರು, ಗಿರೀಶ್ ಹೆಗ್ಡೆ ಹೀಗೆ ಮುಂತಾದ ದೊಡ್ಡ ಕಲಾವಿದರ ದಂಡೇ ಈ ಚಿತ್ರದಲ್ಲಿದೆ.

     

    ಸಮೀಕ್ಷಾ, ಅಪೂರ್ವ, ರಾದ್ಯಾ ಮೂವರು ಈ ಚಿತ್ರದ ನಾಯಕಿಯರು. ಮೂವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಘವೇಂದ್ರ ಬಿ.ಕೋಲಾರ್ ಛಾಯಾಗ್ರಹಣ, ಮಣಿಕಾಂತ್ ಕದ್ರಿ ಸಂಗೀತ ನಿರ್ದೆಶನ​​ವಿರುವ ಈ ಚಿತ್ರಕ್ಕೆ ಸಚಿನ್ ಬಸ್ರೂರ್ ಹಿನ್ನಲೆ ಸಂಗೀತ ನೀಡುತ್ತಿದ್ದಾರೆ. ಸ್ಟಾರ್ ಕ್ರಿಯೇಷನ್ ಬ್ಯಾನರ್ ಅಡಿಯಲ್ಲಿ ಚಂದ್ರಕಾಂತ್ ಪೂಜಾರಿ, ಉಮೇಶ್ ಹೆಗ್ಡೆ ನಿರ್ಮಿಸುತ್ತಿರುವ ಚೊಚ್ಚಲ ಚಿತ್ರವಿದು. ಇದೆ ವರ್ಷ ಡಿಸೆಂಬರ್ ನಲ್ಲಿ ಚಿತ್ರ ಬಿಡುಗಡೆ ಮಾಡುವ​ ಯೋಜನೆಯಲ್ಲಿದ್ದಾರೆ ನಿರ್ಮಾಪಕರು.

  • ‘ರಾನಿ’ ಸಿನಿಮಾ ಸೆಟ್ ನಲ್ಲಿ ನಿರ್ದೇಶಕರ ಹುಟ್ಟುಹಬ್ಬ

    ‘ರಾನಿ’ ಸಿನಿಮಾ ಸೆಟ್ ನಲ್ಲಿ ನಿರ್ದೇಶಕರ ಹುಟ್ಟುಹಬ್ಬ

    ಚಿತ್ರದ ಟೈಟಲ್ ಹಾಗೂ ಪೋಸ್ಟರ್ ನಿಂದ ಪ್ರೇಕ್ಷಕರ ಗಮನ ಸೆಳೆದ ಬಹು ನಿರೀಕ್ಷಿತ ‘ರಾನಿ’ (Rani) ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗಿದೆ.  ಕಿರಣ್ ರಾಜ್ (Kiran Raj) ಈ ಚಿತ್ರದ ನಾಯಕರಾಗಿ ನಟಿಸುತ್ತಿದ್ದಾರೆ. ಗುರುತೇಜ್ ಶೆಟ್ಟಿ (Gurutej Shetty) ಈ ಚಿತ್ರದ ನಿರ್ದೇಶಕರು. ಇತ್ತೀಚೆಗೆ ನಿರ್ದೇಶಕ ಗುರುತೇಜ್ ಶೆಟ್ಟಿ ಅವರ ಹುಟ್ಟುಹಬ್ಬವನ್ನು (Birthday) ಚಿತ್ರತಂಡದ ಸದಸ್ಯರು ಚಿತ್ರೀಕರಣದ ಸೆಟ್ ನಲ್ಲಿ ಅದ್ದೂರಿಯಾಗಿ ಆಚರಿಸಿದರು.

    ನಿರ್ದೇಶಕ ಗುರುತೇಜ್ ಶೆಟ್ಟಿ ಚಿತ್ರತಂಡ ರೆಡಿ ಮಾಡಿದ್ದ ಐವತ್ತು ಕೇಜಿ ಕೇಕ್ ಕಟ್ ಮಾಡಿ ಸಂಭ್ರಮಿಸಿದರು.  ಸ್ಟಾರ್ ಕ್ರಿಯೇಷನ್ಸ್ ನಿರ್ಮಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಶೇಕಡಾ 90 ರಷ್ಟು ಮುಕ್ತಾಯವಾಗಿದೆ.  ಬಹು ತಾರಾಗಣದ ಚಿತ್ರ ಇದಾಗಿದ್ದು,‌ ಸದ್ಯದಲ್ಲೇ  ಟೀಸರ್ ಬಿಡುಗಡೆಯಾಗಲಿದೆ.  ಇದನ್ನೂ ಓದಿ:ಮುದ್ದು ಮಗಳ ಜೊತೆಗಿನ ಚೆಂದದ ವೀಡಿಯೋ ಹಂಚಿಕೊಂಡ ಧ್ರುವ ಸರ್ಜಾ

    ರವಿಶಂಕರ್, ಮೈಕೋ ನಾಗರಾಜ್, ನಾಗತಿ ಹಳ್ಳಿ ಚಂದ್ರಶೇಖರ್, ಬಿ ಸುರೇಶ, ಉಗ್ರಂ ಮಂಜು, ಉಗ್ರಂ ರವಿ, ಧರ್ಮಣ್ಣ, ಸೂರ್ಯ ಕುಂದಾಪುರ, ಗಿರೀಶ್ ಹೆಗ್ಡೆ, ಪೃಥ್ವಿರಾಜ್‌, ಯಶ್ ಶೆಟ್ಟಿ, ಉಮೇಶ್, ಸುಜಯ್ ಶಾಸ್ತ್ರಿ, ಲಕ್ಷ್ಮಿ ಸಿದ್ದಯ್ಯ, ಸಂದೀಪ್ ಮಲಾನಿ, ಅನಿಲ್, ಧರ್ಮೆಂದ್ರ ಆರಸ್, ಮನಮೋಹನ್ ರೈ ಮುಂತಾದವರ ತಾರಾಬಳಗ ಚಿತ್ರಕ್ಕಿದೆ‌.

  • ‘ರಾನಿ’ ಚಿತ್ರದಲ್ಲಿ ಕಿರಣ್ ರಾಜ್ ಗೆ ಮಾಸ್ ಲುಕ್

    ‘ರಾನಿ’ ಚಿತ್ರದಲ್ಲಿ ಕಿರಣ್ ರಾಜ್ ಗೆ ಮಾಸ್ ಲುಕ್

    ಸ್ಟಾರ್ ಕ್ರಿಯೇಷನ್ಸ್ ಮೂಲಕ ಚಂದ್ರಕಾಂತ್ ಪೂಜಾರಿ, ಉಮೇಶ್ ಹೆಗ್ಡೆ ಅವರು ನಿರ್ಮಿಸಿರುವ,  ಗುರುತೇಜ್ ಶೆಟ್ಟಿ (Gurtej Shetty) ಕಥೆ  ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಹಾಗೂ ಕಿರಣ್ ರಾಜ್ (Kiran Raj) ನಾಯಕರಾಗಿ ನಟಿಸುತ್ತಿರುವ ‘ರಾನಿ’ (Rani) ಚಿತ್ರದ ಪೋಸ್ಟರ್ (Poster) ಯಗಾದಿ ಹಬ್ಬಕ್ಕೆ ಬಿಡುಗಡೆಯಾಗಿದೆ. ನಾಯಕ ಕಿರಣ್ ರಾಜ್ ಮಾಸ್ ಲುಕ್ ನಲ್ಲಿ (Mass Look) ಕಾಣಿಸಿಕೊಂಡಿದ್ದಾರೆ.

    ಕಿರಣ್ ರಾಜ್ 13,000 ಅಡಿ ಎತ್ತರದಿಂದ ಜಿಗಿದು ಟೈಟಲ್ ಬಿಡುಗಡೆ ಮಾಡಿ ಚಿತ್ರರಂಗ ಹಾಗೂ ಪ್ರೇಕ್ಷಕರಿಂದ  ಪ್ರಶಂಸೆ ಪಡೆದುಕೊಂಡಿದ್ದರು.  ಈಗ ಬಿಡುಗಡೆಯಾಗಿರುವ ಮಾಸ್ ಲುಕ್ ಪೋಸ್ಟರ್ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ಕಿರಣ್ ರಾಜ್ ಚಿತ್ರದಲ್ಲಿ ಭರ್ಜರಿ ಫೈಟ್ಸ್  ಮಾಡಿದಾರಂತೆ, ಚಿತ್ರದಲ್ಲಿ 6 ಸಾಹಸ ಸನ್ನಿವೇಶಗಳಿದೆ‌. ‘ರಾನಿ’ ಚಿತ್ರಕ್ಕಾಗಿ 7 ಸೆಟ್ ಗಳನ್ನು ಹಾಕಲಾಗಿದೆ‌.  5 ಸೆಟ್ ಗಳಲ್ಲಿ ಚಿತ್ರಿಕರಣ ಈಗಾಗಲೇ ಮುಗಿದಿದೆ. ಇದನ್ನೂ ಓದಿ: ಮಗಳ ನಟನೆ ಬಗ್ಗೆ ತಂದೆ-ತಾಯಿಗೆ ಖುಷಿ ಇದ್ಯಾ? ಅಸಲಿ ವಿಚಾರ ಬಿಚ್ಚಿಟ್ಟ ರಶ್ಮಿಕಾ ಮಂದಣ್ಣ

    ಈಗಾಗಲೇ ಶೇಕಡಾ 60 ರಷ್ಟು ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ.   ರವಿಶಂಕರ್, ಮೈಕೋ ನಾಗರಾಜ್, ನಾಗತಿ ಹಳ್ಳಿ ಚಂದ್ರಶೇಖರ್, ಬಿ ಸುರೇಶ, ಉಗ್ರಂ ಮಂಜು, ಉಗ್ರಂ ರವಿ, ಧರ್ಮಣ್ಣ, ಸೂರ್ಯ ಕುಂದಾಪುರ, ಗಿರೀಶ್ ಹೆಗ್ಡೆ, ಪೃಥ್ವಿರಾಜ್‌, ಯಶ್ ಶೆಟ್ಟಿ, ಉಮೇಶ್, ಸುಜಯ್ ಶಾಸ್ತ್ರಿ, ಲಕ್ಷ್ಮಿ ಸಿದ್ದಯ್ಯ, ಸಂದೀಪ್ ಮಲಾನಿ, ಅನಿಲ್, ಧರ್ಮೆಂದ್ರ ಆರಸ್, ಮನಮೋಹನ್ ರೈ ಮುಂತಾದವರ ತಾರಾಬಳಗ ಚಿತ್ರಕ್ಕಿದೆ‌.

     ‘ಸಿಂಗಾರ ಸಿರಿಯೆ’ ಹಾಡು ಬರೆದಿರುವ ಪ್ರಮೋದ್ ಮರವಂತೆ ಈ ಚಿತ್ರದ ನಾಲ್ಕು ಹಾಡುಗಳನ್ನು ಬರೆದಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ.  ಸೂಕ್ಷ್ಮ ಕಥೆಯುಳ್ಳ,   ಪಕ್ಕ ಆಕ್ಷನ್ ಚಿತ್ರ ಇದಾಗಿದ್ದು, ಎಲ್ಲಾ ರಾಜ್ಯದಲ್ಲೂ ಕನ್ನಡದಲ್ಲೇ ಬಿಡುಗಡೆ ಯಾಗಲಿದೆ.  ಡಿಸೆಂಬರ್ ನಲ್ಲಿ ಚಿತ್ರ ತೆರೆಗೆ ಬರಲಿದೆ. ಚಿತ್ರದಲ್ಲಿ ಮೂವರು ನಾಯಕಿಯರಿದ್ದಾರೆ. ಮುಂದಿನ ದಿನಗಳಲ್ಲಿ ನಾಯಕಿಯರು ಯಾರು ಎಂಬುದನ್ನು  ತಿಳಿಸುತ್ತೇವೆ ಎನ್ನುತ್ತಾರೆ ನಿರ್ದೇಶಕ ಗುರುತೇಜ್ ಶೆಟ್ಟಿ.

  • ಅಶ್ಲೀಲ ವಿಡಿಯೋ ಆರೋಪ: ನಟಿ ರಾಣಿ ಮೇಲೆ ಮಾನನಷ್ಟ ಮೊಕದ್ದಮೆ ಎಂದ ಡಿಂಗ್ರಿ

    ಅಶ್ಲೀಲ ವಿಡಿಯೋ ಆರೋಪ: ನಟಿ ರಾಣಿ ಮೇಲೆ ಮಾನನಷ್ಟ ಮೊಕದ್ದಮೆ ಎಂದ ಡಿಂಗ್ರಿ

    ನ್ನಡ ಪೋಷಕ ಕಲಾವಿದರ ಸಂಘದ ಅಧ್ಯಕ್ಷ ಡಿಂಗ್ರಿ ನಾಗರಾಜ್ ಹಾಗೂ ಪ್ರಧಾನ ಕಾರ್ಯದರ್ಶಿ ಆಡುಗೋಡಿ ಶ್ರೀನಿವಾಸ್ ಮೇಲೆ ನಟಿ ರಾಣಿ ಗುರುತರ ಆರೋಪಗಳನ್ನು ಮಾಡಿದ್ದರು. ಸಂಘದಲ್ಲಿ ಹಣದ ದುರುಪಯೋಗ ಮತ್ತು ಪ್ರಧಾನ ಕಾರ್ಯದರ್ಶಿ ಆಡುಗೋಡಿ ಶ್ರೀನಿವಾಸ್, ಮಹಿಳೆಗೆ ಅಶ್ಲೀಲ ವಿಡಿಯೋ ಕಳುಹಿಸುತ್ತಾರೆ ಎನ್ನುವುದು ರಾಣಿ ಆರೋಪವಾಗಿತ್ತು. ರಾಣಿ ಅವರ ಆರೋಪಕ್ಕೆ ಅಧ್ಯಕ್ಷ ಡಿಂಗ್ರಿ ನಾಗರಾಜ್ ಪ್ರತಿಕ್ರಿಯೆ ನೀಡಿದ್ದಾರೆ. ರಾಣಿ ಆರೋಪ ಎಲ್ಲವೂ ನಿರಾಧಾರ ಎಂದು ತಿಳಿಸಿದ್ದಾರೆ.

    ‘ರಾಣಿ ವಿರುದ್ದ ಮಾನನಷ್ಟ ಮೊಕದ್ದಮೆ ಹಾಕ್ತಿವಿ. ಪೋಷಕ ಕಲಾವಿದರ ಸಂಘದ ಹಣ ದುರುಪಯೋಗ ಮಾಡಿಲ್ಲ. ಅವರು ಸಂಘದ ಆವರಣದಲ್ಲಿ ವೈಯಕ್ತಿಕ ಕಾರಣಕ್ಕಾಗಿ ಗಲಾಟೆ ಶುರು ಮಾಡಿದ್ರು. ಹಾಗಾಗಿ ಅವರನ್ನು ಸಂಘದಿಂದ ಉಚ್ಚಾಟನೆ ಮಾಡಿದ್ದೇವೆ. ಈಗ ನಾವು ಕಾರ್ಯಕ್ರಮ ಮಾಡ್ತಿದ್ದಿವಿ. ಅದನ್ನು ವಿರೋಧಿಸೋಕೆ ಈ ರೀತಿ ಆರೋಪ ಮಾಡಿದ್ದಾರೆ. ಅಶ್ಲೀಲ ವಿಡಿಯೋ ಕಳಿಸಿರೋದು ಸುಳ್ಳು ಮಾಹಿತಿ. ನಾವೇ ರಾಣಿ ಮೇಲೆ ಮಾನನಷ್ಟ ಮೊಕದ್ದಮೆ ಹಾಕ್ತೀವಿ’ ಎಂದಿದ್ದಾರೆ ಡಿಂಗ್ರಿ ನಾಗರಾಜ್. ಇದನ್ನೂ ಓದಿ:`ಕಾಂತಾರ’ ಮುಂದೆ ಬೆದರಿದ ಬಾಲಿವುಡ್: ಥಿಯೇಟರ್‌ಗೆ `ಗುಡ್ ಬೈ’ ಹೇಳಿದ ರಶ್ಮಿಕಾ ಚಿತ್ರ

    ಕರ್ನಾಟಕ ಪೋಷಕ ಕಲಾವಿದರ ಸಂಘದ ಭಿನ್ನಾಭಿಪ್ರಾಯ ಇದೀಗ ಬೀದಿಗೆ ಬಂದಿದೆ. ಪೋಷಕ ಕಲಾವಿದರ ಸಂಘದ ಅಧ್ಯಕ್ಷ ಮತ್ತು ಕಾರ್ಯದರ್ಶಿಯ ನಡೆಗೆ ಸಿನಿಮಾ ಹಾಗೂ ಕಿರುತೆರೆ ನಟಿ ರಾಣಿ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಹಣಕಾಸಿನ ಅವ್ಯವಹಾರದ ಜೊತೆ ಮಹಿಳೆಯರಿಗೆ ಸಂಘದಲ್ಲಿರುವವರು ಅಶ್ಲೀಲ ವಿಡಿಯೋಗಳನ್ನು ಕಳುಹಿಸುತ್ತಿದ್ದರು ಎಂದು ಗುರುತರ ಆರೋಪ ಮಾಡಿದ್ದಾರೆ.

    ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಟಿ ರಾಣಿ, ‘ ಸಂಘದ ಅಧ್ಯಕ್ಷ ಡಿಂಗ್ರಿ ನಾಗರಾಜ್ ಮತ್ತು ಪ್ರಧಾನ ಕಾರ್ಯದರ್ಶಿ ಆಡುಗೋಡಿ ಶ್ರೀನಿವಾಸ್ ಮೇಲೆ ಆರೋಪ ಮಾಡಿದ್ದು, ತಮ್ಮದು ಪೋಷಕ ಕಲಾವಿದರ ಸಂಘದ ಮೇಲೆ ಆರೋಪ ಮಾಡುವುದಿಲ್ಲ’  ಎಂದಿದ್ದಾರೆ. ಮಹಿಳೆಯರನ್ನು ಅಗೌರವದಿಂದ ಇವರು ನಡೆಸಿಕೊಳ್ಳುತ್ತಾರೆ. ಅದರಲ್ಲೂ ಸಂಘದ ಕಾರ್ಯದರ್ಶಿಗಳೇ ಸಂಘದಲ್ಲಿ ಇರುವಂತಹ ಮಹಿಳೆಯರಿಗೆ ಅಶ್ಲೀಲ ವಿಡಿಯೋ ಕಳುಹಿಸುತ್ತಾರೆ ಎಂದು ಆರೋಪ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪೋಷಕ ಕಲಾವಿದರ ಸಂಘದ ಕಾರ್ಯದರ್ಶಿ ಅಶ್ಲೀಲ ವಿಡಿಯೋ ಕಳಿಸ್ತಾರೆ : ನಟಿ ರಾಣಿ ಆರೋಪ

    ಪೋಷಕ ಕಲಾವಿದರ ಸಂಘದ ಕಾರ್ಯದರ್ಶಿ ಅಶ್ಲೀಲ ವಿಡಿಯೋ ಕಳಿಸ್ತಾರೆ : ನಟಿ ರಾಣಿ ಆರೋಪ

    ರ್ನಾಟಕ ಪೋಷಕ ಕಲಾವಿದರ ಸಂಘದ ಭಿನ್ನಾಭಿಪ್ರಾಯ ಇದೀಗ ಬೀದಿಗೆ ಬಂದಿದೆ. ಪೋಷಕ ಕಲಾವಿದರ ಸಂಘದ ಅಧ್ಯಕ್ಷ ಮತ್ತು ಕಾರ್ಯದರ್ಶಿಯ ನಡೆಗೆ ಸಿನಿಮಾ ಹಾಗೂ ಕಿರುತೆರೆ ನಟಿ ರಾಣಿ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಹಣಕಾಸಿನ ಅವ್ಯವಹಾರದ ಜೊತೆ ಮಹಿಳೆಯರಿಗೆ ಸಂಘದಲ್ಲಿರುವವರು ಅಶ್ಲೀಲ ವಿಡಿಯೋಗಳನ್ನು ಕಳುಹಿಸುತ್ತಿದ್ದರು ಎಂದು ಗುರುತರ ಆರೋಪ ಮಾಡಿದ್ದಾರೆ.

    ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಟಿ ರಾಣಿ, ‘ ಸಂಘದ ಅಧ್ಯಕ್ಷ ಡಿಂಗ್ರಿ ನಾಗರಾಜ್ ಮತ್ತು ಪ್ರಧಾನ ಕಾರ್ಯದರ್ಶಿ ಆಡುಗೋಡಿ ಶ್ರೀನಿವಾಸ್ ಮೇಲೆ ಆರೋಪ ಮಾಡಿದ್ದು, ತಮ್ಮದು ಪೋಷಕ ಕಲಾವಿದರ ಸಂಘದ ಮೇಲೆ ಆರೋಪ ಮಾಡುವುದಿಲ್ಲ’  ಎಂದಿದ್ದಾರೆ. ಮಹಿಳೆಯರನ್ನು ಅಗೌರವದಿಂದ ಇವರು ನಡೆಸಿಕೊಳ್ಳುತ್ತಾರೆ. ಅದರಲ್ಲೂ ಸಂಘದ ಕಾರ್ಯದರ್ಶಿಗಳೇ ಸಂಘದಲ್ಲಿ ಇರುವಂತಹ ಮಹಿಳೆಯರಿಗೆ ಅಶ್ಲೀಲ ವಿಡಿಯೋ ಕಳುಹಿಸುತ್ತಾರೆ ಎಂದು ಆರೋಪ ಮಾಡಿದ್ದಾರೆ.

    ‘ನಾನು ಈ ಸಂಘದಲ್ಲಿ 15 ವರ್ಷಗಳಿಂದ ಇದ್ದೇನೆ. ಚುನಾವಣೆಯಲ್ಲಿ ಗೆದ್ದು ಉಪಾಧ್ಯಕ್ಷೆ ಆಗಿದ್ದೇನೆ. ಸಂಘದ ಚಟುವಟಿಕೆಗಳಲ್ಲಿ ಭಾಗಿ ಆಗಲು ಬಿಡುತ್ತಿಲ್ಲ. ಸಂಘದ ಲೆಕ್ಕಾಚಾರ ಕೇಳಿದರೆ, ನಮಗೆ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಾರೆ. ಅವರವರೇ ಸೇರಿಕೊಂಡು ಕೆಲಸ ಮಾಡಿಕೊಳ್ಳುತ್ತಾರೆ. ಪ್ರತಿಭಟಿಸಿದರೆ ಕೊಳಕು ಭಾಷೆ ಬಳಸುತ್ತಾರೆ. ಸುಮ್ಮನೆ ಇರದೇ ಇದ್ದರೆ ರಾಜಿನಾಮೆ ಕೊಟ್ಟು ಹೋಗಿ ಎಂದು ಹೆದರಿಸುತ್ತಾರೆ’ ಎನ್ನುತ್ತಾರೆ ರಾಣಿ.

    ಸಂಘದ ಕಾರ್ಯದರ್ಶಿ ಬಗ್ಗೆಯೇ ಹೆಚ್ಚು ಮಾತನಾಡಿರುವ ರಾಣಿ, ‘ಮಹಿಳೆಯರಿಗೆ ಅಗೌರವ ತೋರೋ ರೀತಿಯಲ್ಲಿ ಅವರು ಮಾತಾಡಿದ್ದಾರೆ. ಕೆಲವೊಮ್ಮೆ ಅಶ್ಲೀಲ ವಿಡಿಯೋ ಕಳಿಸ್ತಿದ್ರು. ಆ ವಿಚಾರವಾಗಿ ಗಲಾಟೆಯೂ ಆಗಿದೆ. ಸಭೆಯಲ್ಲಿ ದೊಡ್ಡ ಚರ್ಚೆಯಾಗಿ ಸಮಾಧಾನ ಮಾಡಿದರು. ಹಣಕಾಸಿನ ದುರುಪಯೋಗದ ಬಗ್ಗೆ ಕೇಳೀದಾಗ ಅವಾಚ್ಯ ಶಬ್ದಗಳಿಂದ  ನಿಂದನೆ ಮಾಡಿದರು. ಉಪಾಧ್ಯಕ್ಷೆ ಸ್ಥಾನದಿಂದ ಏಕಾಏಕಿ ನನ್ನನ್ನು ಉಚ್ಚಾಟನೆ ಮಾಡಿದ್ದಾರೆ. ಹೀಗಾಗಿ ನ್ಯಾಯ ಸಿಗಬೇಕು ಅಂತ ಹೋರಾಟ ಮಾಡ್ತಿದ್ದಿನಿ’ ಎಂದಿದ್ದಾರೆ ರಾಣಿ.

    Live Tv
    [brid partner=56869869 player=32851 video=960834 autoplay=true]