Tag: Range Rover Car

  • ಹೊಸ ಐಷಾರಾಮಿ ಕಾರು ಖರೀದಿಸಿದ ‘ಕೆಜಿಎಫ್’ ಸ್ಟಾರ್ ಯಶ್

    ಹೊಸ ಐಷಾರಾಮಿ ಕಾರು ಖರೀದಿಸಿದ ‘ಕೆಜಿಎಫ್’ ಸ್ಟಾರ್ ಯಶ್

    ಕೆಜಿಎಫ್, ಕೆಜಿಎಫ್ 2 (KGF 2) ಸಿನಿಮಾ ಸಕ್ಸಸ್ ನಂತರ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದಿದ್ದಾರೆ. ಕನ್ನಡದ ಸಿನಿಮಾಗಳಿಗೆ ಸೀಮಿತವಾಗದೇ ದೇಶದ ಎಲ್ಲೆಡೆ ಸಂಚಲನ ಮೂಡಿಸಿದ್ದಾರೆ. ಇದೀಗ ಯಶ್ (Yash) ಮನೆಗೆ ಹೊಸ ಕಾರು ಎಂಟ್ರಿ ಕೊಟ್ಟಿದೆ. ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಸಿನಿಮಾದ ಸಕ್ಸಸ್ ಬಳಿಕ ಐಷಾರಾಮಿ ಕಾರೊಂದನ್ನ ಖರೀದಿಸಿದ್ದಾರೆ.

    ನ್ಯಾಷನಲ್ ಸ್ಟಾರ್ ಯಶ್ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಕಪ್ಪು ಬಣ್ಣದ ರೇಂಜ್ ರೋವರ್ (Range Rover Car) ಸ್ಪೆಷಲ್ ಎಡಿಷನ್ ಕಾರನ್ನ ಕೊಂಡುಕೊಂಡಿದ್ದಾರೆ. ಈ ಮೂಲಕ ಯಶ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.

    ಪೂಜೆಯ ಬಳಿಕ ಪತ್ನಿ ರಾಧಿಕಾ (Radhika Pandit) ಮತ್ತು ಮಕ್ಕಳ ಜೊತೆ ಕಾರಿನಲ್ಲಿ ಯಶ್ ಸುತ್ತಾಡಿದ್ದಾರೆ. ಬಳಿಕ ಮಕ್ಕಳೊಂದಿಗೆ ಕಾರಿನ ಜೊತೆ ಯಶ್ ದಂಪತಿ ಪೋಸ್ ನೀಡಿದ್ದಾರೆ. ಯಶ್ ಬ್ರೌನ್ ಬಣ್ಣದ ಪ್ಯಾಂಟ್, ಕಪ್ಪು ಬಣ್ಣದ ಟೀ ಶರ್ಟ್ ಧರಿಸಿದ್ದರೆ, ನಟಿ ರಾಧಿಕಾ ಲೈಟ್ ಬಣ್ಣದ ಟಾಪ್ ಧರಿಸಿದ್ದಾರೆ.

    ರಾಕಿಭಾಯ್ ಖರೀದಿಸಿರುವ ಕಾರು ರೇಂಜ್ ರೋವರ್‌ಗೆ 5 ಕೋಟಿ ರೂ. ಬೆಲೆಯದಾಗಿದೆ. ಎಲ್ಲಾ ಸೌಕರ್ಯಗಳಿರುವ ಐಷಾರಾಮಿ ಕಾರುಗಳಲ್ಲಿ ಒಂದಾಗಿದೆ. ದುಬಾರಿ ಕಾರಿನ ಜೊತೆಯಿರುವ ಯಶ್ ದಂಪತಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಈ ವಿಚಾರಕ್ಕೆ ನಟನೆಗೆ ಗುಡ್ ಬೈ ಹೇಳ್ತಾರಾ ‌’ಮಗಧೀರ’ ನಟಿ ಕಾಜಲ್?‌

    ಇನ್ನೂ ಯಶ್ ನಟನೆಯ ಮುಂದಿನ ಸಿನಿಮಾ ಬಗ್ಗೆ ಯಾವುದು ಅಪ್‌ಡೇಟ್ ಸಿಗದೇ ಫ್ಯಾನ್ಸ್ ಕಂಗಲಾಗಿದ್ದಾರೆ. ರಾಕಿ ಭಾಯ್ 19ನೇ ಚಿತ್ರಕ್ಕಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಸ್ವತಃ ಯಶ್ ಅನೌನ್ಸ್ ಮಾಡುವವರೆಗೂ ಕಾದುನೋಡಬೇಕಿದೆ.

  • ಕುಡಿದ ಮತ್ತಿನಲ್ಲಿ ರೇಂಜ್‍ರೋವರ್ ಚಾಲನೆ – ನಿಂತಿದ್ದ ವ್ಯಕ್ತಿ ಸಾವು

    ಕುಡಿದ ಮತ್ತಿನಲ್ಲಿ ರೇಂಜ್‍ರೋವರ್ ಚಾಲನೆ – ನಿಂತಿದ್ದ ವ್ಯಕ್ತಿ ಸಾವು

    ಮಂಡ್ಯ: ಚಾಲಕನೋರ್ವ ಕುಡಿದ ಮತ್ತಿನಲ್ಲಿ ರೇಂಜ್‍ರೋವರ್ ಕಾರನ್ನು ಚಲಿಸುವ ವೇಳೆ, ರಸ್ತೆ ಬದಿಯಲ್ಲಿ ನಿಂತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕಸಲಗೆರೆ ಗ್ರಾಮದ ಬಳಿ ಜರುಗಿದೆ.

    ಕಸಲಗೆರೆ ಗ್ರಾಮದ ನಿವಾಸಿ ಚಂದಣ್ಣ (50) ಮೃತ ವ್ಯಕ್ತಿ. ಅದೇ ಗ್ರಾಮದ ಬಸವರಾಜು ಎಂಬಾತ ಬೆಂಗಳೂರಿನಲ್ಲಿ ವಾಸವಾಗಿದ್ದು, ಕೆಲಸದ ನಿಮಿತ್ತ ಬೇರೆಯವರ ರೇಂಜ್‍ರೋವರ್ ಕಾರನ್ನು ಕಸಲಗೆರೆಗೆ ಬರುತ್ತಿರುವ ವೇಳೆ ಈ ದುರ್ಘಟನೆ ನಡೆದಿದೆ. ಇದನ್ನೂ ಓದಿ:  ಶೌಚಾಲಯ ಬಳಕೆಗೆ ಗಲಾಟೆ-9 ಮಂದಿ ಪೊಲೀಸ್ ವಶಕ್ಕೆ

    ಬಸವರಾಜು ಬೆಂಗಳೂರಿನಿಂದ ಕಸಲಗೆರೆಗೆ ಬರುವ ವೇಳೆ ಮಾರ್ಗ ಮಧ್ಯದಲ್ಲಿ ಮದ್ಯಪಾನ ಸೇವನೆ ಮಾಡಿ ಕಾರನ್ನು ಚಲಾಯಿಸಿಕೊಂಡು ಬಂದಿದ್ದಾನೆ. ಈ ವೇಳೆ ಗ್ರಾಮದ ರಸ್ತೆ ಬದಿಯಲ್ಲಿ ಚಂದ್ರಣ್ಣ ನಿಂತಿದ್ದ ವೇಳೆ, ಬಸವರಾಜುಗೆ ಕುಡಿದ ಮತ್ತಿನಲ್ಲಿ ಕಾರು ನಿಯಂತ್ರಣಕ್ಕೆ ಸಿಗದೇ ಚಂದ್ರಣ್ಣನಿಗೆ ಡಿಕ್ಕಿ ಹೊಡೆದಿದ್ದಾನೆ. ಕಾರಿನ ವೇಗ ಹೆಚ್ಚಿದ್ದ ಕಾರಣ ಚಂದ್ರಣ್ಣ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ:  ಹೈದಾರಾಬಾದ್‍ಗೆ ಬೇಡವಾದ ಡೇವಿಡ್ ವಾರ್ನರ್

    ಈ ಕಾರು ಬೆಂಗಳೂರಿನ ದಕ್ಷಿಣ ಕ್ಷೇತ್ರದ ಜೆಡಿಎಸ್ ಮುಖಂಡ ಪ್ರಭಾಕರ್ ರೆಡ್ಡಿ ಅವರದ್ದು ಎನ್ನಲಾಗುತ್ತಿದ್ದು, ಈ ಬಗ್ಗೆ ಇನ್ನೂ ಪೊಲೀಸರು ಖಚಿತ ಪಡಿಸಿಲ್ಲ. ಸದ್ಯ ಚಾಲಕ ಬಸವರಾಜುನನ್ನು ವಶಕ್ಕೆ ಪಡೆದಿರುವ ನಾಗಮಂಗಲ ಗ್ರಾಮಾಂತರ ಪೊಲೀಸರು, ಈ ಕುರಿತು ಪ್ರಕರಣ ದಾಖಲಿಸಿಕೊಂಡು ಮತ್ತಷ್ಟು ತನಿಖೆ ನಡೆಸುತ್ತಿದ್ದಾರೆ.

  • ಅದೃಷ್ಟದ ಕಾರು ಬದಲಾಯಿಸಿದ ಸಿಎಂ ಎಚ್‍ಡಿಕೆ

    ಅದೃಷ್ಟದ ಕಾರು ಬದಲಾಯಿಸಿದ ಸಿಎಂ ಎಚ್‍ಡಿಕೆ

    ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ತಮ್ಮ ಅದೃಷ್ಟದ ಕಾರು ಬದಲಾಯಿಸಿ ಹೊಸ ಕಾರಿನಲ್ಲಿ ಓಡಾಡುತ್ತಿದ್ದಾರೆ.

    ಹೌದು. ಇತ್ತೀಚೆಗೆ ಸಿಎಂ ಅವರ ರೇಂಜ್ ರೋವರ್ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಾರನ್ನು ದುರಸ್ಥಿಗೆ ಕಳುಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಕಳೆದ ಮೂರು ದಿನಗಳಿಂದ ಹೊಸ ಕಾರಿನಲ್ಲೇ ಓಡಾಟ ನಡೆಸುತ್ತಿದ್ದಾರೆ.

    ಹೊಸ ಕಾರು ಯಾವುದು?
    8 ತಿಂಗಳ ಹಿಂದೆ ಖರೀದಿಸಿರುವ ಲೆಕ್ಸಸ್ ಕಾರಿನಲ್ಲಿ ಮುಖ್ಯಮಂತ್ರಿಯವರು ಸಂಚರಿಸುತ್ತಿದ್ದಾರೆ. ಜಪಾನ್ ನಿಂದ ಇಂಡಿಯಾಕ್ಕೆ ಬಂದ ಮೊದಲ ಕಾರು ಇದಾಗಿದೆ. ಈ ಕಾರನ್ನು ಎಂಎಲ್‍ಸಿ ಫಾರೂಕ್ ಅವರು ಖರೀದಿಸಿದ್ದಾರೆ. ಇದೀಗ ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಿಎಂ ಅವರು ತಮ್ಮ ಅದೃಷ್ಟದ ಕಾರು ಬದಲಿಸಿ ಈ ಕಾರಿನಲ್ಲಿ ಸಂಚಾರ ಮಾಡುತ್ತಿದ್ದಾರೆ.

    ಕಾರಿನಲ್ಲಿ ಆಕಸ್ಮಿಕ ಬೆಂಕಿ:
    ಕಳೆದ ಬುಧವಾರ ಮಧ್ಯರಾತ್ರಿ ಶ್ರೀರಂಗಪಟ್ಟಣದ ಪೀಹಳ್ಳಿ ಸಮೀಪ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಇದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿತ್ತು. ಇದನ್ನು ಗಮನಿಸಿದ ಆಪ್ತ ಸಿಬ್ಬಂದಿ ತಕ್ಷಣ ಸಿಎಂ ಅವರನ್ನು ಕೆಳಗಿಳಿಸಿದ್ದಾರೆ. ಅದೃಷ್ಟವಶಾತ್ ಅಪಾಯದಿಂದ ಕುಮಾರಸ್ವಾಮಿ ಪಾರಾಗಿದ್ದರು.

    ತಾನಿದ್ದ ರೇಂಜ್ ರೋವರ್ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಸಿಎಂ ಕುಮಾರಸ್ವಾಮಿ ಬೇರೊಂದು ಕಾರಿನಲ್ಲಿ ಕೆಆರ್ ಎಸ್‍ಗೆ ತೆರಳಿದ್ದರು. ಸಿಎಂ ಕುಮಾರಸ್ವಾಮಿ ಆಗಮಿಸಿದ್ದಕ್ಕೆ ಜನತೆ ಪಟಾಕಿ ಸಿಡಿಸಿದ್ದರು. ಆ ಪಟಾಕಿ ಕಿಡಿಯಿಂದ ರೇಂಜ್‍ರೋವರ್ ನಲ್ಲಿ ಬೆಂಕಿ ಕಾಣಿಸಿಕೊಳ್ತಾ? ಅಥವಾ ರೇಂಜ್‍ರೋವರ್ ನಲ್ಲಿ ತಾಂತ್ರಿಕ ದೋಷ ಇತ್ತ ಎಂಬ ಅನುಮಾನ ಮೂಡಿತ್ತು.

  • ಕೇಂದ್ರ ಸಚಿವರ ಮಗ ಎಂದು ಹೇಳಿ ಶಾಸಕರ ರೇಂಜ್ ರೋವರ್ ಕಾರ್ ಪಡೆಯಲು ಬಂದವ ಅರೆಸ್ಟ್

    ಕೇಂದ್ರ ಸಚಿವರ ಮಗ ಎಂದು ಹೇಳಿ ಶಾಸಕರ ರೇಂಜ್ ರೋವರ್ ಕಾರ್ ಪಡೆಯಲು ಬಂದವ ಅರೆಸ್ಟ್

    ಬಳ್ಳಾರಿ: ಕೇಂದ್ರ ವಿಮಾನಯಾನ ಖಾತೆ ಸಚಿವರ ಮಗ ಅಂತಾ ಹೇಳಿಕೊಂಡು ಶಾಸಕರಿಗೆ ವಂಚಿಸಲು ಯತ್ನಿಸಿದ್ದ 6 ಮಂದಿಯನ್ನು ಬಳ್ಳಾರಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

    ಹೊಸಪೇಟೆ ಶಾಸಕ ಆನಂದಸಿಂಗ್ ಅವರ ರೇಂಜ್ ರೋವರ್ ಕಾರು ಪಡೆದು ಪರಾರಿಯಾಗಲು ಯತ್ನಿಸಿದ ರಾಬಿನ್ ಮತ್ತು ಆತನ ಗ್ಯಾಂಗ್ ನ್ನು ಪೊಲೀಸರು ಬಂಧಿಸಿದ್ದಾರೆ. ಶಾಸಕರು ನೀಡಿದ ದೂರಿನ ಮೇರೆಗೆ ರಾಬಿನ್ ಓಡಿಸುತ್ತಿದ್ದ ಸಂಸದ ಅನ್ನೋ ಸ್ಟಿಕ್ಕರ್ ಅಂಟಿಕೊಂಡು ಸೈರನ್ ಹಾಕಿದ್ದ ಇನ್ನೋವಾ ಕಾರನ್ನೂ ಜಪ್ತಿ ಮಾಡಿದ್ದಾರೆ.

    ಇದೇ ರಾಬಿನ್ ಈ ಹಿಂದೆ ಸಿಂಧನೂರ ಶಾಸಕ ಹಂಪನಗೌಡ ಬಾರ್ದಲಿಗೆ ಆಂಧ್ರ ಡಿಸಿಎಂ ಮಗನೆಂದು ಪರಿಚಯ ಮಾಡಿಕೊಂಡಿದ್ದನು ಎಂದು ತಿಳಿದುಬಂದಿದೆ. ಶಾಸಕದ್ವಯರಿಗೆ ಮೋಸ ಮಾಡಲು ಯತ್ನಿಸುತ್ತಿದ್ದ ಭೂಪ ಈಗ ಜೈಲು ಸೇರಿದ್ದಾನೆ.