Tag: Rangayana Raghu

  • ಪ್ರಣಂ ದೇವರಾಜ್, ಖುಷಿ ರವಿ ನಟನೆಯ ‘S/o ಮುತ್ತಣ್ಣ’ನಿಗೆ ಕುಂಬಳಕಾಯಿ ಪ್ರಾಪ್ತಿ

    ಪ್ರಣಂ ದೇವರಾಜ್, ಖುಷಿ ರವಿ ನಟನೆಯ ‘S/o ಮುತ್ತಣ್ಣ’ನಿಗೆ ಕುಂಬಳಕಾಯಿ ಪ್ರಾಪ್ತಿ

    ದೇವರಾಜ್ ಕಿರಿಯ ಮಗ ಪ್ರಣಂ ದೇವರಾಜ್ ನಟನೆಯ ‘ಸನ್ ಆಫ್ ಮುತ್ತಣ್ಣ’ ಸಿನಿಮಾ ಪೂರ್ಣಗೊಂಡಿದೆ. ಈ ಚಿತ್ರಕ್ಕೆ ಕುಂಬಳಕಾಯಿ ಪ್ರಾಪ್ತಿಯಾಗಿದೆ. ಸಿನಿಮಾ ಸೆಟ್ಟೇರಿದ ಜಾಗದಲ್ಲಿ ಕುಂಬಳಕಾಯಿ ಹೊಡೆಯಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿತ್ತು. ಅದರಂತೆ ಬೆಂಗಳೂರಿನ ಬಂಡೆ ಮಾಕಾಳಮ್ಮ ದೇವಸ್ಥಾನದಲ್ಲಿ ಕೊನೆಯ ಹಂತದ ಶೂಟಿಂಗ್ ಮಾಡಿ ಕುಂಬಳಕಾಯಿ ಹೊಡೆಯಲಾಗಿದೆ. ಈ ಸಂದರ್ಭದಲ್ಲಿ ಇಡೀ ಚಿತ್ರತಂಡ ಭಾಗಿಯಾಗಿ ಸಿನಿಮಾ ಕುರಿತು ಮಾಹಿತಿ ಹಂಚಿಕೊಂಡಿದೆ.

    ನಟ ಪ್ರಣಂ ದೇವರಾಜ್ (Pranam Devaraj) ಮಾತನಾಡಿ, ಇವತ್ತು ಖುಷಿಯೂ ಇದೆ. ಬೇಜಾರು ಇದೆ. ಖುಷಿ ಏನಕ್ಕೆ ಅಂದರೆ ನನ್ನ ಸಿನಿಮಾದ ಶೂಟಿಂಗ್ ಮುಕ್ತಾಯಗೊಂಡಿದೆ. ಬೇಜಾರು ಏನಕ್ಕೆ ಅಂದರೆ ನಾಳೆಯಿಂದ ಇವರು ಯಾರು ಸಿಗಲ್ಲ ಅಂತಾ. ಈ ಜರ್ನಿ ಖುಷಿ ಜೊತೆಗೆ ಎಮೋಷನಲ್ ಆಗಿಯೂ ಇತ್ತು. ಟೆನ್ಷನ್ ಕೂಡ ಇತ್ತು. ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ಅಪ್ಪ ಮತ್ತು ಮಗನ ಬಾಂಧವ್ಯದ ಕಥೆ ಇದು. ನಮ್ಮ ಅಪ್ಪ ಮತ್ತು ಮಗನ ಬಾಂಧವ್ಯ ಹೇಗಿದೆ ಅಂತ ಗೊತ್ತಿದೆ, ರಘು ಸರ್ ಸೆಟ್‌ನಲ್ಲಿ ನನಗೆ ತಂದೆ ತರ ಇದ್ದರು. ಇವರಿಂದ ಸಾಕಷ್ಟು ಕಲಿತಿದ್ದೇನೆ. ಖುಷಿ ರವಿ ಅದ್ಭುತ ನಟಿ. ಸಾಕಷ್ಟು ಜನ ಕಲಾವಿದರು ಚಿತ್ರದಲ್ಲಿದ್ದಾರೆ. ಪುರಾತನ ಫಿಲ್ಮಂಸ್ ಈ ರೀತಿ ಅವಕಾಶ ಕೊಟ್ಟಿರುವುದಕ್ಕೆ ಧನ್ಯವಾದ ಎಂದರು.

    ನಾಯಕಿ ಖುಷಿ ರವಿ (Kushee Ravi) ಮಾತನಾಡಿ, ಶೂಟ್ ಮುಗಿಸಿ, ದೃಷ್ಟಿ ತೆಗೆದು ಕುಂಬಳಕಾಯಿ ಹೊಡೆಯೋದನ್ನು ನೋಡಿದ್ದೇವೆ. ಆದರೆ ಪುರಾತನ ಫಿಲ್ಮಂಸ್ ಅದ್ಧೂರಿಯಾಗಿ ಶೂಟಿಂಗ್ ಮುಗಿಸಿದೆ. 49 ದಿನ ಜರ್ನಿಯಲ್ಲಿಯೂ ಯಾವುದೇ ರೀತಿ ಕೊರತೆ ಇಲ್ಲದ ರೀತಿ ನೋಡಿಕೊಂಡಿದ್ದಾರೆ. ಹರೀಶ್ ಸರ್‌ಗೆ ಧನ್ಯವಾದ. ನಿರ್ದೇಶಕ ಶ್ರೀಕಾಂತ್ ಸರ್ ತುಂಬಾ ಕ್ಲಾರಿಟಿ ಇದೆ. ಈ ಜನರೇಷನ್‌ಗೆ ಅಪ್ಪ-ಮಗ, ಅಪ್ಪ-ಮಗಳು, ಸ್ನೇಹ ಎಲ್ಲಾ ಎಮೋಷನ್ ಸಿನಿಮಾದಲ್ಲಿ ತೋರಿಸಿದ್ದಾರೆ. ಸಾಂಗ್ ಸಚಿನ್ ಬಸ್ರೂರ್ ಅದ್ಭುತವಾಗಿ ಕಂಪೋಸ್ ಮಾಡಿದ್ದಾರೆ. ಧನು ಮಾಸ್ಟರ್ ಅದ್ಭುತವಾಗಿ ನನ್ನ ಕೈಯಿಂದ ಡ್ಯಾನ್ಸ್ ಮಾಡಿಸಿದ್ದಾರೆ. ಕೃಷ್ಣಣ್ಣ ನಮ್ಮನ್ನು ತುಂಬಾ ಚೆನ್ನಾಗಿ ಕ್ಯಾಪ್ಟರ್ ಮಾಡಿದ್ದಾರೆ ಎಂದರು.

    ನಿರ್ದೇಶಕ ಶ್ರೀಕಾಂತ್ ಮಾತನಾಡಿ, ಬಂಡಿ ಮಹಾಕಾಳಿ ದೇಗುಲದಲ್ಲಿ ಸಿನಿಮಾ ಶುರು ಮಾಡಿದ್ವಿ. ಹಾಗಾಗಿ ನಿರ್ಮಾಪಕರು ಇಲ್ಲಿಯೇ ಕುಂಬಳಕಾಯಿ ಹೊಡೆಯಬೇಕು ಎಂಬ ಆಸೆ ವ್ಯಕ್ತಪಡಿಸಿದ್ದರು. ಅದಕ್ಕಾಗಿ ಇಲ್ಲಿಯೇ ಕುಂಬಳಕಾಯಿ ಹೊಡೆದಿದ್ದೇವೆ. 49 ದಿನ ಶೂಟಿಂಗ್ ನಡೆಸಲಾಗಿದೆ. ವಾರಣಾಸಿ, ಬೆಂಗಳೂರಿನಲ್ಲಿ ನಡೆಸಲಾಗಿದೆ ಎಂದರು.

    ‘ಸನ್ ಆಫ್ ಮುತ್ತಣ್ಣ’ ಸಿನಿಮಾವನ್ನು ಶ್ರೀಕಾಂತ್ ಹುಣ್ಸೂರ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಮೂಲಕ ಶ್ರೀಕಾಂತ್, ಈ ಸಿನಿಮಾದ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಪ್ರಣಂ ದೇವರಾಜ್ ನಾಯಕನಾಗಿ ನಟಿಸಿದ್ದು, ಖುಷಿ ರವಿ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ರಂಗಾಯಣ ರಘು, ಸುಚೇಂದ್ರ ಪ್ರಸಾದ್, ಗಿರಿ ಶಿವಣ್ಣ, ತಬಲ ನಾಣಿ, ಶ್ರೀನಿವಾಸ್ ಪ್ರಭು, ಸುಧಾ ಬೆಳವಾಡಿ, ಅರುಣ್ ಚಕ್ರವರ್ತಿ ಸೇರಿದಂತೆ ಅನೇಕರು ನಟಿಸಿದ್ದಾರೆ.

    ಶೀರ್ಷಿಕೆಯೇ ಹೇಳುತ್ತಿರುವಂತೆ ಈ ಸಿನಿಮಾ ಅಪ್ಪ-ಮಗನ ಬಾಂಧವ್ಯದ ಕಥೆ. ಪುರಾತನ ಫಿಲ್ಮಂಸ್ ಬ್ಯಾನರ್ ಅಡಯಲ್ಲಿ ದಿವ್ಯಾ ನಿರ್ಮಾಣ ಮಾಡುತ್ತಿದ್ದಾರೆ. ‘ಸನ್ ಆಫ್ ಮುತ್ತಣ್ಣ’ ಸಿನಿಮಾಕ್ಕೆ ಸ್ಕೇಟಿಂಗ್ ಕೃಷ್ಣ ಛಾಯಾಗ್ರಹಣ ಮಾಡುತ್ತಿದ್ದಾರೆ. ಹರೀಶ್ ಕೊಮ್ಮೆ ಸಂಕಲನ ಮಾಡಿದ್ದಾರೆ, ಸಚಿನ್ ಬಸ್ರೂರ್ ಸಂಗೀತ ನಿರ್ದೇಶನ ಮಾಡುತ್ತಿರುವುದು ವಿಶೇಷ.

  • ದರ್ಶನ್ ಘಟನೆ ಬಗ್ಗೆ ಮಾರ್ಮಿಕವಾಗಿ ಮಾತನಾಡಿದ ರಂಗಾಯಣ ರಘು

    ದರ್ಶನ್ ಘಟನೆ ಬಗ್ಗೆ ಮಾರ್ಮಿಕವಾಗಿ ಮಾತನಾಡಿದ ರಂಗಾಯಣ ರಘು

    ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣದಲ್ಲಿ ಆರೋಪಿಯಾಗಿ ದರ್ಶನ್ ಅರೆಸ್ಟ್ ಆಗಿದ್ದಾರೆ. ದರ್ಶನ್ (Darshan) ಪ್ರಕರಣದ ಬಗ್ಗೆ ಈಗಾಗಲೇ ಸುದೀಪ್, ಶಿವಣ್ಣ, ಸಂಜನಾ ಗಲ್ರಾನಿ, ಸ್ಪೂರ್ತಿ ವಿಶ್ವಾಸ್ ಸೇರಿದಂತೆ ಅನೇಕರು ಮಾತನಾಡಿದ್ದಾರೆ. ಇದೀಗ ರಂಗಾಯಣ ರಘು ಮಾರ್ಮಿಕವಾಗಿ ದರ್ಶನ್ ಘಟನೆ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ:ಕ್ರೂರತ್ವ ಇರುವ ವ್ಯಕ್ತಿತ್ವ ಅವರದಲ್ಲ: ದರ್ಶನ್‌ ಪ್ರಕರಣದ ಬಗ್ಗೆ ಸ್ಪೂರ್ತಿ ವಿಶ್ವಾಸ್ ರಿಯಾಕ್ಷನ್

    ‘ಸನ್ ಆಫ್ ಮುತ್ತಣ್ಣ’ ಚಿತ್ರದ ಸುದ್ದಿಗೋಷ್ಠಿಯೊಂದರಲ್ಲಿ ರಂಗಾಯಣ ರಘು ಮಾತನಾಡಿ, ಮಾಕಾಳಮ್ಮ ತಾಯಿ ನಿನ್ನ ಆಶೀರ್ವಾದ ಚಿತ್ರರಂಗದ ಮೇಲಿರಲಿ. ಕನ್ನಡ ಚಿತ್ರರಂಗ ಈಗ ಸಂಕಷ್ಟದಲ್ಲಿದೆ ತಾಯಿ ಬಂಡೆ ಮಾಕಾಳಮ್ಮ ಎಂದಿದ್ದಾರೆ. ಇವೆಲ್ಲ ತೊಳೆದುಕೊಂಡು ಹೋಗಬೇಕು ಹಾಗೆ ಮಾಡಮ್ಮ ಎಂದು ಶಕ್ತಿ ದೇವತೆ ಬಂಡೆ ಮಾಕಾಳಮ್ಮ ಬಳಿ ರಂಗಾಯಣ ರಘು ಮನವಿ ಮಾಡಿದ್ದಾರೆ. ಇದನ್ನೂ ಓದಿ:ಖ್ಯಾತ ಗಾಯಕಿ ಉಷಾ ಉತ್ತುಪ್ ಪತಿ ಹೃದಯಾಘಾತದಿಂದ ನಿಧನ

    ಅಂದಹಾಗೆ, ದೇವರಾಜ್ ಪುತ್ರ ಪ್ರಣಮ್ ನಟನೆಯ ‘ಸನ್ ಆಫ್ ಮುತ್ತಣ್ಣ’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಪ್ರಣಮ್ ಜೊತೆ ಪ್ರಮುಖ ಪಾತ್ರದಲ್ಲಿ ರಂಗಾಯಣ ರಘು ನಟಿಸಿದ್ದಾರೆ. ಚಿತ್ರಕ್ಕೆ ‘ದಿಯಾ’ ಖ್ಯಾತಿಯ ಖುಷಿ ರವಿ ನಾಯಕಿಯಾಗಿದ್ದಾರೆ.

  • ಒಟಿಟಿಯಲ್ಲಿ ‘ಶಾಖಾಹಾರಿ’ ಅಬ್ಬರ : 10 ಮಿಲಿಯನ್ ಗೂ ಹೆಚ್ಚು  ಸ್ಟ್ರೀಮಿಂಗ್

    ಒಟಿಟಿಯಲ್ಲಿ ‘ಶಾಖಾಹಾರಿ’ ಅಬ್ಬರ : 10 ಮಿಲಿಯನ್ ಗೂ ಹೆಚ್ಚು ಸ್ಟ್ರೀಮಿಂಗ್

    ನ್ನಡ ಚಿತ್ರರಂಗದಲ್ಲಿ ಭಿನ್ನ-ವಿಭಿನ್ನ ಪ್ರಯತ್ನಗಳು ನಡೆಯುತ್ತಿವೆ. ಹೊಸಬರ ಜೊತೆಗೆ ಅನುಭವಿ ತಾರಾಬಳಗ ಕೈ ಜೋಡಿಸಿದಾಗ ಒಂದೊಳ್ಳೆ ಅದ್ಭುತ ಸಿನಿಮಾ ಹೊರಹೊಮ್ಮಲಿದೆ ಎಂಬುದಕ್ಕೆ ಶಾಖಾಹಾರಿ (Shakahaari) ಚಿತ್ರ ತಾಜಾ ಉದಾಹರಣೆ..ತನ್ನ ಗಟ್ಟಿ ಕಂಟೆಂಟ್ ನಿಂದಲೇ ಭಾರೀ ಸದ್ದು ಮಾಡಿದ್ದ ಈ ಚಿತ್ರವೀಗ ಅಮೇಜಾನ್ ಪ್ರೈಮ್ ನಲ್ಲಿ ಅಪಾರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಶಾಖಾಹಾರಿ ನೋಡಿದವರೆಲ್ಲಾ ಇಂತಹ ಸಿನಿಮಾವನ್ನು ಥಿಯೇಟರ್ ನಲ್ಲಿ ಮಿಸ್ ಮಾಡಿಕೊಂಡ್ವಲ್ಲಾ ಅಂತಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

    ಫೆಬ್ರವರಿ 16ರಂದು ಬೆಳ್ಳಿಪರದೆಗೆ ಎಂಟ್ರಿ ಕೊಟ್ಟಿದ್ದ ಶಾಖಾಹಾರಿ ಸಿನಿಮಾವೀಗ ಮೂರು ತಿಂಗಳ ಬಳಿಕ ಒಟಿಟಿಗೆ ಲಗ್ಗೆ ಇಟ್ಟಿದೆ. ಶುಕ್ರವಾರದಿಂದ ಅಮೇಜಾನ್ ಪ್ರೈಮ್ ನಲ್ಲಿ ಸ್ಕ್ರೀಮ್ ಆಗಿರುವ ಈ ಚಿತ್ರವನ್ನು ನೋಡಿದವರೆಲ್ಲಾ ವಾವ್ ಇಂತಹ ಪ್ರಯತ್ನಗಳು ಮಾಲಿವುಡ್ ನಲ್ಲಿ ಮಾತ್ರವಲ್ಲ ನಮ್ಮಲ್ಲಿಯೂ ನಡೆಯುತ್ತವೆ. ಅದಕ್ಕೆ ಪ್ರೇಕ್ಷಕಪ್ರಭು ಬೆನ್ನುತಟ್ಟಬೇಕಷ್ಟೇ..ಚಿತ್ರಮಂದಿರದಲ್ಲಿ ದಕ್ಕದ ಪ್ರೀತಿ ಶಾಖಾಹಾರಿ ಚಿತ್ರಕ್ಕೆ ಒಟಿಟಿಯಲ್ಲಿ ದೊರೆಯುತ್ತಿದೆ. ಅಮೇಜಾನ್ ಪ್ರೈಮ್ ಗೆ ಎಂಟ್ರಿ ಕೊಟ್ಟ  ಬರೀ 4 ದಿನದಲ್ಲಿ 10 ಮಿಲಿಯನ್ ನಿಮಿಷಗಳ ಸ್ಟ್ರೀಮಿಂಗ್ ಕಂಡಿರುವ ಸಿನಿಮಾ.. ಎಲ್ಲಾ ಜಾಲತಾಣಗಳಲ್ಲು ಬಹಳಷ್ಟು ಜನ ದಿನೇ ದಿನೇ ಮೆಚ್ಚುಗೆ ವ್ಯಕ್ತಪಡಿಸುತ್ತ ಇರುವುದು ಗಮನಾರ್ಹ..

    ನೀನಾಸಂ ಸತೀಶ್ ಶಾಖಾಹಾರಿ ಸಿನಿಮಾವನ್ನು ಬಾಯ್ ತುಂಬಾ ಹೊಗಳಿದ್ದಾರೆ. ಯಾವ ನೀರಿಕ್ಷೆಯು ಇಲ್ಲದೆ ಸುಮ್ಮನೆ ಸಿನಿಮಾ ನೋಡುತ್ತಾ ಹೋದಾಗ,ಸಿನಿಮಾ ನಮ್ಮನ್ನು ಒಳಗೆ ಸೆಳೆದೊಯ್ಯುತ್ತದೆ,ಸುಳಿಯಂತೆ. ಪ್ರಾಮಾಣಿಕವಾದ, ಯಾರನ್ನೂ ಮೆಚ್ಚಿಸಲು ಅಲ್ಲದೆ ತಮ್ಮಷ್ಟಕ್ಕೆ ತಂಡ ಧ್ಯಾನಿಸಿದೆ.ಸಿನಿಮಾ ಬರೀ ನಿರ್ದೇಶಕ,ಅಥವಾ ನಟರಲ್ಲದೆ ಸಮೂಹದ ಕೆಲಸ ಎಂಬುದನ್ನು ಮತ್ತೆ ಸಾಬೀತು ಮಾಡಿದೆ.ಗೆಳೆಯ ಗೋಪಿ ವಾವ್! ರಘು ಅಣ್ಣ ನಮ್ಮ ಹೆಮ್ಮೆ! ನಿರ್ದೇಶಕ ಸಂದೀಪ್ ,ಮತ್ತು ಛಾಯಾಗ್ರಹಣ, ಸಂಗೀತ ಎಲ್ಲವೂ ಅದ್ಭುತ.ನೋಡಲೇಬೇಕಾದ ನಮ್ಮ ಚಿತ್ರ ಎಂದು ಟ್ವೀಟ್ ಮಾಡಿದ್ದಾರೆ. ನಟ ಪೃಥ್ವಿ ಅಂಬಾರ್ ಕೂಡ ಚಿತ್ರವನ್ನು ನೋಡಿ ಮನಸಾರೆ ಕೊಂಡಾಡಿದ್ದಾರೆ. ಶಾಖಾಹಾರಿ ಬಿಡುಗಡೆ ಸಮಯದಲ್ಲಿ ನನ್ನ ಚಿತ್ರ ಬಿಡುಗಡೆಯಾಗಿತ್ತು. ಹೀಗಾಗಿ ಇಂತಹ ಒಳ್ಳೆ ಸಿನಿಮಾವನ್ನು ಮಿಸ್ ಮಾಡಿಕೊಂಡಿದ್ದೇನೆ. ಅದಕ್ಕಾಗಿ ನನಗೆ ಬೇಸರವಿದೆ. ಚಿತ್ರದ ಕಥೆ, ಟ್ವಿಸ್ಟ್, ಕ್ಲೈಮ್ಯಾಕ್ಸ್ ಎಲ್ಲವೂ ಅದ್ಭುತ. ರಂಗಾಯಣ ರಘು ಸರ್ ಹಾಗೂ ಗೋಪಾಲ್ ದೇಶಪಾಂಡೇ ಸರ್ ಅಭಿನಯ ಸೂಪರ್ ಎಂದಿದ್ದಾರೆ.

    ಸಂದೀಪ್ ಸುಂಕದ್ ನಿರ್ದೇಶನದ ‘ಶಾಖಾಹಾರಿ’ ಸಿನಿಮಾದ ಸೂತ್ರಧಾರಿ. ಕನ್ನಡ ಚಿತ್ರರಂಗದ ಹಿರಿಯ ನಟ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಪೊಲೀಸ್ ಅಧಿಕಾರಿಯಾಗಿ ಗೋಪಾಲಕೃಷ್ಣ ದೇಶಪಾಂಡೆ ಅತ್ಯದ್ಬುತವಾಗಿ ನಟಿಸಿದ್ದರು. ಉಳಿದಂತೆ ವಿನಯ್, ನಿಧಿ ಹೆಗಡೆ, ಸುಜಯ್ ಶಾಸ್ತ್ರೀ, ಹರಿಣಿ ಹಾಗೂ ಕಾನ್‌ಸ್ಟೇಬಲ್ ಮಮತಕ್ಕನ ಪಾತ್ರಧಾರಿಯಾಗಿ ಪ್ರತಿಭಾ ನಾಯಕ್ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಕೀಲಂಬಿ ಮೀಡಿಯಾ ಲ್ಯಾಬ್ ಬ್ಯಾನರ್ ನಡಿ ರಾಜೇಶ್ ಕೀಲಾಂಬಿ, ರಂಜಿನಿ ಪ್ರಸನ್ನ ಶಾಖಾಹಾರಿಗೆ ಬಂಡವಾಳ ಹೂಡಿದ್ದಾರೆ.

    ಶಿವಮೊಗ್ಗದ ತೀರ್ಥಹಳ್ಳಿಯ ಹಳ್ಳಿಯೊಂದರಲ್ಲಿ ನಡೆಯುವ ರೋಚಕ ಕಥೆಯೇ ಶಾಖಾಹಾರಿ. ಸಿನಿಮಾದಲ್ಲಿ ಮಾಸ್ತಿಕಟ್ಟೆ ಸುಬ್ರಮಣ್ಯ ಅಲಿಯಾಸ್ ಸುಬ್ಬಣ್ಣ (ರಂಗಾಯಣ ರಘು)ಗೆ ಹಿಂದೆ-ಮುಂದೆ ಯಾರೂ ಇರುವುದಿಲ್ಲ. ಹೋಟೆಲ್ ಮಾಲೀಕನಾಗಿರುವ ಸುಬ್ಬಣ್ಣ, ಬಾಣಸಿಗನಾಗಿಯೂ ಕೆಲಸ ಮಾಡಿಕೊಂಡಿರುತ್ತಾರೆ. ಇವರದ್ದು ಶುದ್ಧ ಶಾಕಾಹಾರಿ ಹೋಟೆಲ್… ಹೀಗಿರುವಾಗ, ಅಲ್ಲಿ ನಡೆಯುವ ಕೆಲ ಘಟನೆಗಳಿಂದ ಸುಬ್ಬಣ್ಣನ ಹೋಟೆಲ್ ಹೇಗೆ ‘ಶಾಖಾ’ಹಾರಿ ಆಗುತ್ತೆ ಎಂಬುದೆ ರೋಚಕ ವಿಷಯ

  • ‘ಉತ್ತರಕಾಂಡ’ ಚಿತ್ರಕ್ಕಾಗಿ ಬಂಡೆ ಕಾಕಾನಾದ ರಂಗಾಯಣ ರಘು

    ‘ಉತ್ತರಕಾಂಡ’ ಚಿತ್ರಕ್ಕಾಗಿ ಬಂಡೆ ಕಾಕಾನಾದ ರಂಗಾಯಣ ರಘು

    ಗಾಗಲೇ ಎಲ್ಲೆಡೆ ಸಂಚಲನ ಮೂಡಿಸಿರುವ ಬಹು ನಿರೀಕ್ಷಿತ ‘ಉತ್ತರಕಾಂಡ’ ಚಿತ್ರದಲ್ಲಿ ಅಭಿನಯಾಸುರ ರಂಗಾಯಣ ರಘು (Rangayana Raghu) ನಟಿಸಲಿದ್ದಾರೆ. ಬಂಡೆ ಕಾಕಾ (Bandekaka) ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ಖ್ಯಾತ ನಿರ್ದೇಶಕ ಯೋಗರಾಜ್ ಭಟ್ (Yogaraj Bhat) ಕೂಡ ಉತ್ತರಾಕಾಂಡದಲ್ಲಿ(Uttarkanda) ನಟಿಸಲಿದ್ದಾರೆ‌. ಪಾಟೀಲ್ ಎಂಬ  ಪಾತ್ರಕ್ಕಾಗಿ ಬಣ್ಣ ಹಚ್ಚಲಿದ್ದಾರೆ. ನಿರ್ದೇಶಕರಾಗಿ ಆಕ್ಷನ್ ಕಟ್ ಹೇಳುತ್ತಿದ್ದ ಭಟ್ಟರು,‌ಇದೀಗ ವಿಭಿನ್ನವಾಗಿ ಆಕ್ಷನ್ ಕಟ್ ಹೇಳಿಸಿಕೊಳ್ಳಲಿದ್ದಾರೆ‌. ಭಟ್ಟರು ಪಾತ್ರ ಮಾಡುವುದು ಹೊಸದೇನೂ ಅಲ್ಲ. ಅವರಿಗೆ ಉತ್ತರ ಕರ್ನಾಟಕ ಭಾಷೆ  ಚೆನ್ನಾಗಿಯೇ ಬರುತ್ತದೆ.

    ಮೊನ್ನೆಯಷ್ಟೇ ನಟ ದೂದ್ ಪೇಡಾ ದಿಗಂತ್ (Diganth) ಉತ್ತರಕಾಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮಿರ್ಚಿ ಮಲ್ಲಿಗೆ ಎಂಬ ಪಾತ್ರದಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಪೋಸ್ಟರ್ ನಲ್ಲಿನ ಅವರ ಖಡಕ್ ಲುಕ್ ಮೂಲಕ ಕುತೂಹಲ ಕೆರಳಿಸಿದ್ದಾರೆ.

    ಈ ಸಿನಿಮಾದಲ್ಲಿ ಚೈತ್ರಾ ಆಚಾರ್ಯ್ (Chaitra Acharya)  ಕೂಡ ನಟಿಸುತ್ತಿದ್ದಾರೆ. ಚೈತ್ರ ಆಚಾರ್ ಉತ್ತರಕಾಂಡ ತಾರಾಬಳಗಕ್ಕೆ ಸೇರ್ಪಡೆ ಆಗಿದ್ದು, ಇಂದು ಚಿತ್ರೀಕರಣದಲ್ಲೂ ಪಾಲ್ಗೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಅವರು ಲಚ್ಚಿ (Lacchi) ಎಂಬ ಒಂದು ಮುಖ್ಯ ಪಾತ್ರಕ್ಕಾಗಿ ಬಣ್ಣ ಹಚ್ಚಲಿದ್ದಾರೆ.

     

    ಉತ್ತರಕಾಂಡ ರೋಹಿತ್ ಪದಕಿ ನಿರ್ದೇಶನದ ಒಂದು ಆಕ್ಷನ್ ಡ್ರಾಮಾ ಚಿತ್ರವಾಗಿದ್ದು, ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಡಾ ಶಿವರಾಜ್ ಕುಮಾರ್ ಮತ್ತು ನಟರಾಕ್ಷಸ ಡಾಲಿ‌ ಧನಂಜಯ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವನ್ನು ಕಾರ್ತಿಕ್ ಗೌಡ ಮತ್ತು ಯೋಗಿ‌ ಜಿ ರಾಜ್ ಕೆ.ಆರ್.ಜಿ.ಸ್ಟೂಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಿದ್ದಾರೆ.

  • ರಂಗಾಯಣ ರಘುಗೆ ‘ಅಭಿನಯಾಸುರ’ ಬಿರುದು

    ರಂಗಾಯಣ ರಘುಗೆ ‘ಅಭಿನಯಾಸುರ’ ಬಿರುದು

    ನ್ನಡದ ಹೆಸರಾಂತ ನಟ ರಂಗಾಯಣ ರಘು ಅವರಿಗೆ ಹೊಸ ಬಿರುದು ನೀಡಿ ಗೌರವಿಸಿದ್ದಾರೆ ಶಾಖಾಹಾರಿ ಚಿತ್ರತಂಡ. ಸಿನಿಮಾದ ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಹಾಗೂ ನಿರ್ದೇಶಕ ಸುಕ್ಕ ಸೂರಿ ವಿಶೇಷ ಅಥಿಯಾಗಿ ಆಗಮಿಸಿ ರಂಗಾಯಣ ರಘು ಅವರಿಗೆ ಅಭಿನಯಾಸುರು ಎಂಬ ಬಿರುದು ನೀಡಿ ಗೌರವಿಸಿತು. ಇಲ್ಲಿವರೆಗೂ ಯಾವುದೇ ಚಿತ್ರತಂಡ ಅವರಿಗೆ ಈ ರೀತಿ ಬಿರುದು ಕೊಟ್ಟಿರಲಿಲ್ಲ. ಇದೇ ಮೊದಲ ಬಾರಿಗೆ  ಅವರ ಕಲಾಸೇವೆ ಚಿತ್ರತಂಡ ಈ ರೀತಿ ಗೌರವ ಸೂಚಿಸಿದೆ.

    ಇದೇ ವೇಳೆ ಮಾತನಾಡಿದ ನಿರ್ದೇಶಕ ದುನಿಯಾ ಸೂರಿ ಮಾತನಾಡಿ, ನಾನು ಈ ರೀತಿ ಮೈಕ್ ಹಿಡಿದು ಮಾತನಾಡುತ್ತಿದ್ದೇನೆ. ನನ್ನ ನಿರ್ದೇಶಕ ಅಂತಾ ಕರೆಯುತ್ತಾರೆ ಎಂದರೆ. ಈ ಹಿಂದೆ ನಾವು ಯೋಗರಾಜ್ ಮಣಿ ಅಂತಾ ಸಿನಿಮಾ ಮಾಡಬೇಕಾದರೆ ರಘು ಸರ್ ಸಿಕ್ತಾರೆ. ನಮಗೆ ಅಲ್ಲಿಂದ ದೊಡ್ಮನೆ ಹುಡುಗ ಸಿನಿಮಾದವರೆಗೂ ಜೊತೆಯಲಿ ಇದ್ದರು. ಈ ನಡುವೆ ಅಣ್ಣ ಮಾಡುವ ಪಾತ್ರ ಇಲ್ಲ ಎಂದು ಬಿಟ್ಟುಕೊಡುತ್ತೇವೆ. ನಾನು ಒಂದು ವಿಷಯ ತೆಗೆದುಕೊಂಡು ಹೋದರೆ ಅದಕ್ಕೊಂದು ಹಿನ್ನೆಲೆ ಹೇಳಿ ಗಟ್ಟಿ ಮಾಡುತ್ತಾರೆ. ಯೋಗರಾಜ್, ಸರ್ ನಮಗೆ ಗುರು. ಅನುಭವ ಹೇಳ್ತಾರೆ, ಹೆದರಬೇಡ ಅಂತಾರೇ. ನಾನು ಆಕ್ಷನ್ ಕಟ್ ಹೇಳಬಹುದು. ನಾನು ಇಂದು ಏನಾದ್ರೂ ಮಾಡಿದ್ದೇನೆ ಎಂದರೆ ಅದರಲ್ಲಿ ರಘು ಸರ್ ದ್ದೂ ದೊಡ್ಡ ಪಾಲು. ನಮ್ಮ ಬರವಣಿಗೆಯನ್ನು ಸ್ಕ್ರೀನ್ ಗೆ ತರುವುದು ಇದೆಯಲ್ಲ. ಅದಕ್ಕೆ ಕಲಾವಿದ ಜೀವ ತುಂಬಬೇಕು. ನನಗೆ ಅನಿಸುತ್ತದೆ ನಾವು ರಘು ಸರ್ ಅವರನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲವೇನೋ? ಅನಿಸುತ್ತೆ ಎಂದರು.

     

    ರಂಗಾಯಣ ರಘು ಮಾತನಾಡಿ, ನನ್ನ ಒಟ್ಟು ಜೀವನದಲ್ಲಿ ನನಗೆ ತುಂಬಾ ಅಮೂಲ್ಯ ನೆನಪು ಕೊಟ್ಟಂತಹವರು ಸೂರಿ ಅವರು ಹಾಗೂ ಅಶ್ವಿನಿ ಮೇಡಂ. ನಾನು ಇಂಡಸ್ಟ್ರಿಗೆ ಬಂದು ಸುಮಾರು 35 ವರ್ಷವಾಯ್ತು. ನಾನು ಒಂದ ಸಿನಿಮಾಗೋಸ್ಕರ ಬಂದವನು. 94 ರಿಂದ 2001ರವೆಗೆ ನಾನು ಮಾಡಿದ ಸಿನಿಮಾಗಳ ಬಗ್ಗೆ ಊರಲೆಲ್ಲಾ ಹಾಗೇ ಮಾಡಿದ್ದೇನೆ. ಹೀಗೆ ಮಾಡಿದ್ದೇನೆ  ಹೇಳಿಕೊಂಡು ಬರುತ್ತಿದ್ದೆ. ರಂಗಾಯಣದ ಬಗ್ಗೆ ನಾನು ಎಷ್ಟು ನೆನಪು ಮಾಡಿಕೊಂಡರೇ ಸಾಲದು. ನನ್ನದು 350 ಸಿನಿಮಾವಾಗಿದೆ. ಈ ರೀತಿ ಪಾತ್ರ ಮಾಡಬೇಕು ಎಂದು ನಾನು ಯೋಚಿಸಿಲ್ಲ ಅಪ್ಪು ಸರ್ ಋಣ ಜಾಸ್ತಿ ಇದೆ, ಮೇಡಂ ಬಂದಿರುವುದು ಅಷ್ಟೇ ಖುಷಿಯಾಗುತ್ತಿದೆ. ನಮಗೆ ದೊಡ್ಮನೆಯಿಂದ ದೊಡ್ಡ ಆಶೀರ್ವಾದ  ಸಿಕ್ಕಿದೆ. ಇಡೀ ಇಂಡಸ್ಟ್ರೀಯ ಎಲ್ಲಾ ನಟರ ಜೊತೆ ಮಾಡಿದ್ದೇನೆ. ಹೊಸಬರ ಜೊತೆಯೂ ಮಾಡಿದ್ದೇನೆ. ಹೊಸಬರು ಮತ್ತಷ್ಟು ಬರಲಿ ಎಂದರು.

  • ‘ಶಾಖಾಹಾರಿ’ ಫಸ್ಟ್ ಲುಕ್ ರಿಲೀಸ್- ಹೇಗಿದೆ ರಂಗಾಯಣ ರಘು ಲುಕ್?

    ‘ಶಾಖಾಹಾರಿ’ ಫಸ್ಟ್ ಲುಕ್ ರಿಲೀಸ್- ಹೇಗಿದೆ ರಂಗಾಯಣ ರಘು ಲುಕ್?

    ನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ರಂಗಾಯಣ ರಘು (Rangayana Raghu) ಮುಖ್ಯಭೂಮಿಕೆಯ  ‘ಶಾಖಾಹಾರಿ’ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ. ಈ ಹಿಂದೆ ಯೋಗರಾಜ್ ಭಟ್ ಅವರು ಟೈಟಲ್ ಪೋಸ್ಟರ್ ಅನಾವರಣ ಮಾಡಿದ್ದರು. ಇದೀಗ ‘ಶಾಖಾಹಾರಿ’ ಸಿನಿಮಾದ ರಂಗಾಯಣ ರಘು ಅವರ ಲುಕ್ ಬಿಡುಗಡೆ ಮಾಡಲಾಗಿದ್ದು, ಸಿನಿರಸಿಕರಲ್ಲಿ ಕೌತುಕ ಮೂಡಿಸಿದೆ.

    ಸಂದೀಪ್ ಸುಂಕದ ‘ಶಾಖಾಹಾರಿ’ ಸಿನಿಮಾದ ಸೂತ್ರಧಾರ. ಈಗಾಗಲೇ ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿರುವ ಅವರಿಗೆ ಇದು ಚೊಚ್ಚಲ ಸಿನಿಮಾ. ಸಹ-ನಿರ್ದೇಶಕರಾಗಿ, ಬರಹಗಾರರಾಗಿ ಅನುಭವ ಪಡೆದಿರುವ ಸಂದೀಪ್, ‘ಶಾಖಾಹಾರಿ’ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಇದನ್ನೂ ಓದಿ:ಬೋಲ್ಡ್ ಫೋಟೋ ಹಾಕಿ, ಹನಿಮೂನ್ ಫೋಟೋ ಅಲ್ಲ ಎಂದು ಸ್ಪಷ್ಟನೆ ನೀಡಿದ ಪರಿಣಿತಿ

    ಮಲೆನಾಡಿನ ತೀರ್ಥಹಳ್ಳಿಯ ಒಂದು ಊರಿನಲ್ಲಿ ನಡೆಯುವ ಒಂದಷ್ಟು ನಿಗೂಢ ಘಟನೆಗಳ ಸುತ್ತಮುತ್ತ ಈ ಸಿನಿಮಾದ ಕಥೆ ಸಾಗುತ್ತದೆ. ಹೋಟೆಲ್‌ನಲ್ಲಿ ಅಡುಗೆ ಮಾಡುವ ಭಟ್ಟನಾಗಿ ರಂಗಾಯಣ ರಘು ಅವರು ಕಾಣಿಸಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ನಟಿಸಿದ್ದಾರೆ. ಸುಜಯ್ ಶಾಸ್ತ್ರಿ ಕೂಡ ಈ ಸಿನಿಮಾದ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪ್ರತಿಮಾ ನಾಯಕ್, ಹರಿಣಿ, ವಿನಯ್ ಯು.ಜೆ, ಶ್ರೀಹರ್ಷ ಗೋಭಟ್ಟ, ನಿಧಿ ಹೆಗ್ಡೆ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.

    ರಾಜೇಶ್ ಕೀಳಂಬಿ ಮತ್ತು ರಂಜಿನಿ ಪ್ರಸನ್ನ ಅವರು ಜೊತೆಗೂಡಿ ‘ಕೀಳಂಬಿ ಮೀಡಿಯಾ ಲ್ಯಾಬ್’ ಸಂಸ್ಥೆಯ ಮೂಲಕ ‘ಶಾಖಾಹಾರಿ’ (Shakahari) ಸಿನಿಮಾ ನಿರ್ಮಾಣ ಮಾಡಿದ್ದು, ವಿಶ್ವಜಿತ್ ರಾವ್ ಛಾಯಾಗ್ರಹಣ, ಶಶಾಂಕ್ ನಾರಾಯಣ ಸಂಕಲನ, ಮಯೂರ್ ಅಂಬೆಕಲ್ಲು ಸಂಗೀತ ಚಿತ್ರಕ್ಕಿದೆ. ಆಶಿಕ್ ಕುಸುಗೊಳ್ಳಿ ಅವರು ಗ್ರೇಡಿಂಗ್ ಮಾಡುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಸದ್ಯಕ್ಕೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಪೂರ್ತಿ ಮಲೆನಾಡಿನಲ್ಲೇ ಚಿತ್ರೀಕರಣ ಆಗಿರುವ ‘ಶಾಖಾಹಾರಿ’ ಸಿನಿಮಾದಲ್ಲಿ ಮಲೆನಾಡಿನ ಅನೇಕರು ಕೆಲಸ ಮಾಡಿದ್ದಾರೆ ಎಂಬುದು ವಿಶೇಷ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಧನ್ವೀರ್ ಹುಟ್ಟುಹಬ್ಬಕ್ಕೆ  ಹೊಸಚಿತ್ರದ ಘೋಷಣೆ: ರಘುಕುಮಾರ್ ನಿರ್ದೇಶಕ

    ಧನ್ವೀರ್ ಹುಟ್ಟುಹಬ್ಬಕ್ಕೆ ಹೊಸಚಿತ್ರದ ಘೋಷಣೆ: ರಘುಕುಮಾರ್ ನಿರ್ದೇಶಕ

    ರುನಾಡ ಶೋಕ್ದಾರ್ ಅಂತ ಹೆಸರುವಾಸಿ ಆಗಿರುವ ಧನ್ವೀರ್ (Dhanveer ) ನಾಯಕರಾಗಿ ನಟಿಸುತ್ತಿರುವ ನೂತನ ಚಿತ್ರ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಘೋಷಣೆಯಾಗಿದೆ‌‌‌. ಇದು ಧನ್ವೀರ್ ನಾಯಕರಾಗಿ ನಟಿಸುತ್ತಿರುವ ಐದನೇ ಸಿನಿಮಾ.   ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಯುವ ನಿರ್ದೇಶಕ ರಘುಕುಮಾರ್ ಓ ಆರ್ (Raghukumar) ನಿರ್ದೇಶಿಸುತ್ತಿದ್ದಾರೆ. ಕಥೆಯನ್ನು ನಿರ್ದೇಶಕರೆ ಬರೆದಿದ್ದಾರೆ. ಇದು ರಘುಕುಮಾರ್ ನಿರ್ದೇಶನದ  ಚೊಚ್ಚಲ ಚಿತ್ರ.

    ಈ ಚಿತ್ರ ‘ಸಮೃದ್ಧಿ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿದೆ.  ರಘುಕುಮಾರ್ ಅವರು ಒಳ್ಳೆಯ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಇದರಲ್ಲಿ ರಂಗಾಯಣ ರಘು (Rangayana Raghu), ರವಿಶಂಕರ್, ತಬಲನಾಣಿ, ಸಾಧುಕೋಕಿಲ ಇನ್ನಿತರ ಕಲಾವಿದರು ನಟಿಸುತ್ತಿದ್ದಾರೆ. ಶೀಘ್ರದಲ್ಲೇ ಚಿತ್ರೀಕರಣ ಶುರು ಮಾಡುತ್ತೇವೆ ಎಂದು ಸಮೃದ್ಧಿ ಫಿಲಂಸ್ ನಿರ್ಮಾಣ ಸಂಸ್ಥೆ ತಿಳಿಸಿದೆ. ಇದನ್ನೂ ಓದಿ:ಕೈಯಲ್ಲಿ ಎದೆಮುಚ್ಚಿಕೊಂಡು ಸೋನು ಪೋಸ್- ಮತ್ಸ್ಯ ಕನ್ಯೆ ಅಂದ್ರು ಫ್ಯಾನ್ಸ್‌‌

    ನಿರ್ದೇಶಕ ರಘುಕುಮಾರ್ ಓ ಆರ್ ಕೆಲವು ವರ್ಷಗಳಿಂದ ಚಿತ್ರರಂಗದಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. ಇವರು ‘ಕೋಟಿಗೊಬ್ಬ 3’ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ನಿರ್ವಹಿಸಿದ್ದಾರೆ. ಮತ್ತು ‘ದಿ ಬೆಲ್’ ಎಂಬ ಕಿರುಚಿತ್ರ ನಿರ್ಮಿಸಿ ನಿರ್ದೇಶಿಸಿದ್ದಾರೆ. ದಿ ಬೆಲ್ ಕಿರುಚಿತ್ರ ಪಿ ಆರ್ ಕೆ ಆಡಿಯೋ ಯೂಟ್ಯೂಬ್ ಅಲ್ಲಿ ಬಿಡುಗಡೆ ಆಗಿದ್ದು ಒಳ್ಳೆಯ ಪ್ರಶಂಸೆ ಗಳಿಸಿಕೊಂಡು ಶಾರ್ಟ್ ಫಿಲ್ಮ್ ಫೆಸ್ಟಿವಲ್ಸ್ ಅಲ್ಲಿ ತುಂಬಾನೇ ಮೆಚ್ಚುಗೆ ಪಡೆದು ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.

     

    ಚಿತ್ರದ ತಾಂತ್ರಿಕವರ್ಗ ಅದ್ಭುತವಾಗಿದ್ದು ಛಾಯಾಗ್ರಾಹಕರಾಗಿ ಕಾರ್ತಿಕ್ ಎಸ್  ಹಿನ್ನೆಲೆ ಸಂಗೀತ ಜುಡಾ ಸ್ಯಾಂಡಿ, ಶಬ್ದ ವಿನ್ಯಾಸ ರಾಜನ್ ಹಾಗೂ ಸಂಕಲನ ಉಮೇಶ್ ಆರ್ ಬಿ ಮಾಡುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 7ಸ್ಟಾರ್ ಸುಲ್ತಾನನ ‘ಕುರುಬಾನಿ’ ಕೊಡದಿರಲಿ ತೀರ್ಮಾನ : ‘ಟಗರು ಪಲ್ಯ’ ಚಿತ್ರತಂಡದ ಒತ್ತಾಯಕ್ಕೆ ಮಣಿದ ಮಾಲೀಕ

    7ಸ್ಟಾರ್ ಸುಲ್ತಾನನ ‘ಕುರುಬಾನಿ’ ಕೊಡದಿರಲಿ ತೀರ್ಮಾನ : ‘ಟಗರು ಪಲ್ಯ’ ಚಿತ್ರತಂಡದ ಒತ್ತಾಯಕ್ಕೆ ಮಣಿದ ಮಾಲೀಕ

    ಡಾಲಿ ಧನಂಜಯ್ (Dali Dhananjay) ತಮ್ಮದೇ ಡಾಲಿ ಪಿಕ್ಚರ್ಸ್ ನಡಿ ನಿರ್ಮಿಸುತ್ತಿರುವ, ನಾಗಭೂಷಣ್ ಹಾಗೂ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ನಟಿಸುತ್ತಿರುವ ಸಿನಿಮಾ ಟಗರು ಪಲ್ಯ (Tagalu Palya). ಉಮೇಶ್ ಕೆ ಕೃಪ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಈ ಚಿತ್ರದಲ್ಲಿ ಅನೇಕ ಟಗರು ಕಾಳಗದಲ್ಲಿ ಗೆದ್ದು ಬೀಗಿರುವ 7 ಸ್ಟಾರ್ ಸುಲ್ತಾನ ಹೆಸರಿನ ಟಗರನ್ನು ಬಕ್ರೀದ್ (Bakreed) ಹಬ್ಬಕ್ಕೆ ಕುರುಬಾನಿ (Kurubani) ಕೊಡಲು ಮಾಲೀಕ ತೀರ್ಮಾನಿಸಿದ್ದರು. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಯಾವುದೇ ಕಾರಣಕ್ಕೂ 7 ಸ್ಟಾರ್ ಸುಲ್ತಾನನ್ನು ಕುರುಬಾನಿ ಕೊಡಬಾರದು ಎಂಬ ದೊಡ್ಡ ಅಭಿಯಾನವೇ ಶುರುವಾಗಿತ್ತು. ಈ ಬಗ್ಗೆ ಟಗರು ಪಲ್ಯ ಚಿತ್ರತಂಡ ಮಾಲೀಕರಿಗೆ ಕುರುಬಾನಿ ಕೊಡದಂತೆ ಸಲಹೆ ನೀಡಿತ್ತು. ಅಭಿಮಾನಿಗಳು ಹಾಗೂ ಚಿತ್ರತಂಡದ ಮನವಿಗೆ ಪ್ರತಿಫಲ ಸಿಕ್ಕಿದ್ದು, 7 ಸ್ಟಾರ್ ಸುಲ್ತಾನನ್ನು ಕುರುಬಾನಿ ಕೊಡದಿರಲು ಮಾಲೀಕರು ತೀರ್ಮಾನ ನಡೆಸಿದ್ದಾರೆ.

    ಬಾಗಲಕೋಟೆ ತಾಲೂಕಿನ ಸುತಗುಂಡಾರ ಗ್ರಾಮದ‌ ಮಾಲೀಕ ಯುನೀಸ್ ಗಡೇದ್ ಬಕ್ರೀದ್ ಹಬ್ಬಕ್ಕೆ ಕುರ್ಬಾನಿ ಕೊಡಲೆಂದೇ ಎರಡೂವರೆ ವರ್ಷದ ಹಿಂದೆ 7 ಸ್ಟಾರ್ ಸುಲ್ತಾನ್ ಟಗರನ್ನು 1 ಲಕ್ಷ 88 ಸಾವಿರದ ಐನೂರು ರೂ ಗೆ ಖರೀದಿಸಿದ್ದರು. ಆದ್ರೆ ಕುರ್ಬಾನಿಗೂ ಮುನ್ನ ಟಗರನ್ನು ಕಾಳಗಕ್ಕೆ ಇಳಿಸಲಾಗಿದ್ದು ಟಗರು ಅನೇಕ ಬಹುಮಾನಗಳನ್ನು ತನ್ನದಾಗಿಸಿಕೊಂಡಿದೆ.

    ಇಲ್ಲಿಯವರೆಗೆ 34 ಕಣಗಳಲ್ಲಿ ಪ್ರಥಮ ಬಹುಮಾನ ಗಳಿಸಿದ್ದು ಸುಮಾರು 20 ಲಕ್ಷದಷ್ಟು ಹಣ, ಬೆಳ್ಳಿ, ಬಂಗಾರ, ಬೈಕ್ ಗಳನ್ನ ಗೆದ್ದು ಬೀಗಿದೆ. ಹೀಗಾಗಿ ಮಾಲೀಕ ಯುನೀಸ್ ಈ ಟಗರಿಗೆ 7 ಸ್ಟಾರ್ ಸುಲ್ತಾನ್ ಎಂದು ಹೆಸರಿಟ್ಟರು. ಆದ್ರೆ ಅಂದುಕೊಂಡಂತೆ ಈ ಬಾರಿಯ ಬಕ್ರೀದ್ ಹಬ್ಬಕ್ಕೆ ಈ ಟಗರನ್ನ ಕುರ್ಬಾನಿ ನೀಡಲು ನಿರ್ಧರಿಸಿದ್ದರು. ಸಾಧಕ ಟಗರನ್ನು ಕುರ್ಬಾನಿ‌ ಮಾಡದಂತೆ ಅಭಿಮಾನಿಗಳಿಂದ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರುವಾಗಿತ್ತು. ಹೀಗಾಗಿ ಅಭಿಮಾನಿಗಳ ಒತ್ತಾಸೆಗೆ‌ ಮಣಿದು 7 ಸ್ಟಾರ್ ಸುಲ್ತಾನನ ಕುರ್ಬಾನಿ ಕೊಡದಿರಲು ಯುನೀಸ್ ನಿರ್ಧರಿಸಿದ್ದಾರೆ.

    ಯಾವಾಗ ರಿಲೀಸ್ ‘ಟಗರು ಪಲ್ಯ’?

    ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲೆಂದು ಹಾಗೂ ಕಂಟೆಂಟ್ ಆಧಾರಿತ ಚಿತ್ರ ನಿರ್ಮಿಸಲು ಧನಂಜಯ್ ಪ್ರಾರಂಭಿಸುವ ಡಾಲಿ ಪಿಕ್ಚರ್ಸ್ ನಿರ್ಮಾಣ ಸಂಸ್ಥೆಯ‌ ಮೂರನೇ ಕೊಡುಗೆ ಟಗರು ಪಲ್ಯ. ಇಕ್ಕಟ್, ಬಡವ ರಾಸ್ಕಲ್ ಸಿನಿಮಾಗಳ ಖ್ಯಾತಿಯ ನಾಗಭೂಷಣ್ (Nagabhushan) ನಾಯಕನಾಗಿ ನಟಿಸುತ್ತಿದ್ದು, ಇವರಿಗೆ ಜೋಡಿ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ನಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ.

     

    ಮಂಡ್ಯ ಹಳ್ಳಿಗಳಲ್ಲಿ ನಡೆಯುವ ಆಚರಣೆ ಸುತ್ತಾ ಇಡೀ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ತಾರಾ, ಶರತ್ ಲೋಹಿತಾಶ್ವ, ರಂಗಾಯಣ ರಘು (Rangayana Raghu) ಸೇರಿದಂತೆ ದೊಡ್ಡತಾರಾಬಳಗವಿರುವ ಟಗರು ಪಲ್ಯ ಸಿನಿಮಾಗೆ ವಾಸುಕಿ ವೈಭವ್ ಟ್ಯೂನ್ ಹಾಕಿದ್ದು, ಎಸ್ ಕೆ. ರಾವ್ ಕ್ಯಾಮೆರಾ ಹಿಡಿದಿದ್ದಾರೆ. ಸದ್ಯ ಶೂಟಿಂಗ್ ಮುಗಿಸಿರುವ ಚಿತ್ರ‌ತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಏಪ್ರಿಲ್ 7ಕ್ಕೆ ರಂಗಾಯಣ ರಘು ನಟನೆಯ ‘ಅಜ್ಞಾತವಾಸಿ’ ಟೀಸರ್ ರಿಲೀಸ್

    ಏಪ್ರಿಲ್ 7ಕ್ಕೆ ರಂಗಾಯಣ ರಘು ನಟನೆಯ ‘ಅಜ್ಞಾತವಾಸಿ’ ಟೀಸರ್ ರಿಲೀಸ್

    ಗುಲ್ಟು ಖ್ಯಾತಿಯ ನಿರ್ದೇಶಕ ಜನಾರ್ದನ್ ಚಿಕ್ಕಣ್ಣ (Janardhan Chikkanna) ಹಾಗೂ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಖ್ಯಾತಿಯ ನಿರ್ದೇಶಕ ಹೇಮಂತ್ ರಾವ್ (Hemanth Rao) ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ‘ಅಜ್ಞಾತವಾಸಿ’ (Ajnathavasi) ಸಿನಿಮಾದ ಟೀಸರ್ (Teaser) ಇದೇ ಏಪ್ರಿಲ್ 7ರಂದು ರಿಲೀಸ್ ಆಗಲಿದೆ. ಜನಾರ್ದನ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಹೇಮಂತ್ ಕುಮಾರ್ ನಿರ್ಮಾಣ ಮಾಡಿದ್ದಾರೆ. ಈ ಕಾರಣದಿಂದಾಗಿಯೇ ಸಿನಿಮಾ ಕುತೂಹಲ ಮೂಡಿಸಿದೆ.

    ಈ ಸಿನಿಮಾದಲ್ಲಿ ರಂಗಾಯಣ ರಘು (Rangayana Raghu) ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿದ್ದು, ರಂಗಾಯಣ ರಘು ಅವರೊಂದಿಗೆ ನಟಿ ಪಾವನ ಗೌಡ ಹಾಗೂ ಸಿದ್ದು ಮೂಲಿಮನಿ ತಾರಾಗಣದಲ್ಲಿ ಇದ್ದಾರೆ. ರಂಗಾಯಣ ರಘು   ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರೆ,  ಸಿದ್ದು ಮೂಲಿಮನಿ ಹಾಗೂ ಪಾವನ ಗೌಡ ಅವರ ಪಾತ್ರವೂ ವಿಶೇಷವಾಗಿದೆಯಂತೆ. ಇದನ್ನೂ ಓದಿ:‘ವೀರಂ’ ಮೂಲಕ ವಿಷ್ಣುವರ್ಧನ್ ಅಭಿಮಾನಿಯಾದ ಪ್ರಜ್ವಲ್ ದೇವರಾಜ್

    ಈ ಕುರಿತು ಮಾತನಾಡಿದ ಜನಾರ್ದನ್ ಚಿಕ್ಕಣ್ಣ, ‘ನನ್ನ ಗುರುಗಳಾದ ಕೃಷ್ಣರಾಜ್ ಅವರು ಕಥೆ ಬರೆದಿದ್ದಾರೆ. 1997 ರಲ್ಲಿ ಮಲೆನಾಡಿನಲ್ಲಿ ನಡೆದ ಕೊಲೆಯೊಂದರ ಸುತ್ತ ಈ ಕಥೆ ಹೆಣೆಯಲಾಗಿದೆ. ಅವರು ಕಥೆ ಹೇಳಿದ ರೀತಿ ತುಂಬಾ ಹಿಡಿಸಿತು.  ನನಗೆ ತಿಳಿದ ಹಾಗೆ ಇದೊಂದು ಕನ್ನಡದಲ್ಲಿ ಈವರೆಗೂ ಬಂದಿರದ ಮರ್ಡರ್ ಮಿಸ್ಟರಿ ಅನ್ನಬಹುದು. ಆನಂತರ ಹೇಮಂತ್ ರಾವ್ ಅವರನ್ನು ಭೇಟಿಯಾಗಿ ಕಥೆ ಹೇಳಿದಾಗ ಕೇವಲ ಅರ್ಧಗಂಟೆಯಲ್ಲಿ ನಿರ್ಮಾಣಕ್ಕೆ ಒಪ್ಪಿಕೊಂಡರು.  ಅದ್ವೈತ ಛಾಯಾಗ್ರಹಕರಾಗಿ ಹಾಗೂ ಚರಣ್ ರಾಜ್ ಸಂಗೀತ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ’ ಎನ್ನುತ್ತಾರೆ.

  • ‘ಕೈಲಾಸ’ ಸಾಂಗ್ ಬಿಡುಗಡೆ ಮಾಡಿದ ಕಾಶಿಯ ನಾಗಸಾಧು

    ‘ಕೈಲಾಸ’ ಸಾಂಗ್ ಬಿಡುಗಡೆ ಮಾಡಿದ ಕಾಶಿಯ ನಾಗಸಾಧು

    ‘ರಂಗಸಮುದ್ರ’ ಸಿನಿಮಾ ಈಗ ಮತ್ತೊಂದು ವಿಶೇಷ ರೀತಿಯಲ್ಲಿ ಸಿನಿಮಾ ಪ್ರಮೋಷನ್ ಮಾಡಿದೆ. ದೊಡ್ಡ ದೊಡ್ಡ ಕಾರ್ಯಕ್ರಮ ಮಾಡಿ ಆಡೀಯೋ ಬಿಡುಗಡೆ ಮಾಡುವುದು ಈಗಿನ ಸಿನಿಮಾ ತಂಡಗಳ ಟ್ರೆಂಡ್. ಆದರೆ ಅದನ್ನು ಹೊರತು ಪಡಿಸಿ ಹೀಗೂ ಬಿಡುಗಡೆ ಮಾಡಬಹುದು  ಎಂದು ಪವಿತ್ರ ಕ್ಷೇತ್ರ ಕಾಶಿಗೆ ತೆರಳಿ ಸಾಂಗ್ ಗೆ ಹೊಂದಿಕೊಂಡಂತಿರುವ ಒಬ್ಬ ನಾಗಸಾಧುಗಳ ಬಳಿ ಬಿಡುಗಡೆ ಮಾಡಿಸಿದೆ.

    ದೇಶದ ಹೆಸರಾಂತ ಗಾಯಕ ಕೈಲಾಶ್ ಕೇರ್ ಕನ್ನಡದಿಂದ ಹಿಂದಿಗೆ ಸ್ವತಃ ತಾವೇ ಸಾಹಿತ್ಯ ಬರೆದುಕೊಂಡು ತುಂಬಾ ಇಷ್ಟ ಪಟ್ಟು ಹಾಡಿರುವುದು ಲಿರಿಕಲ್ ಸಾಂಗ್ ನ ವಿಡಿಯೋದಲ್ಲಿ ಕಾಣಬಹುದಾಗಿದೆ. ಕನ್ನಡ ಸಿನಿರಂಗದಲ್ಲಿ ತನ್ನದೆ ಆದ ಛಾಪು ಮೂಡಿಸಿರುವ ರಂಗಾಯಣ ರಘು ಈ ಹಿಂದೆ ಕಾಮಿಡಿ ನಟನೆಯ ಮೂಲಕ ಕನ್ನಡಿಗರ ಮನಸ್ಸು ಗೆದ್ದಿದ್ದರು. ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ವಿಭಿನ್ನ ಹಾಗು ವಿಶಿಷ್ಟ ಪಾತ್ರದಲ್ಲಿ ಅವರು ಪ್ರೇಕ್ಷಕರನ್ನು ಎದುರುಗೊಳ್ಳಲಿದ್ದಾರೆ. ಇದನ್ನೂ ಓದಿಸಾನ್ಯ ಜೊತೆ ರೂಪೇಶ್ ಶೆಟ್ಟಿ ಮೀಟಿಂಗ್:‌ ಮದುವೆ ಬಗ್ಗೆ ನೆಟ್ಟಿಗರಿಂದ ಪ್ರಶ್ನೆಗಳ ಸುರಿಮಳೆ

                   

    ಕನ್ನಡ ಸಿನಿಮಾದಲ್ಲಿ ಮೊದಲ ಬಾರಿಗೆ ಸಂಪೂರ್ಣ ಭಂಡಾರವನ್ನೇ ಉಪಯೋಗಿಸಿ ಚಿತ್ರೀಕರಿಸಿದ ಮೊದಲ ಸಾಂಗ್ ಇದಾಗಿದ್ದು, ಹಾಡು ಅತ್ಯಂತ ಕಲರ್ ಫುಲ್ ಆಗಿ ಮೂಡಿಬಂದಿದೆ. ಈ ಹಾಡನ್ನು ಚಿತ್ರೀಕರಿಸಲು ಬೇಕಾದ ಸ್ಥಳ ಹಾಗು ಹೊಂದಿಕೊಳ್ಳುವ ಜನ ಬೇಕಿತ್ತು. ಹಾಗಾಗಿ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಹುಲಿಜಯಂತಿ ಊರನ್ನು ಆಯ್ಕೆ ಮಾಡಿಕೊಂಡು, ಅಲ್ಲಿನ ಮಾಳಿಂಗರಾಯ ಸ್ವಾಮಿ ಜಾತ್ರೆಗೆ ಬರುವ ಸರಿಸುಮಾರು 15 ಲಕ್ಷ ಜನರು ಮಧ್ಯೆ ಹಾಡನ್ನು ಸೆರೆ ಹಿಡಿದಿದ್ದಾರೆ ನಿರ್ದೇಶಕ ರಾಜಕುಮಾರ್ ಅಸ್ಕಿ ಹಾಗು ಕೋರಿಯೋಗ್ರಫರ್ ಬಿ. ಧನಂಜಯ್.

    ಹೊಯ್ಸಳ ಕೊಣನೂರು ಈ ಚಿತ್ರದ ನಿರ್ಮಾಪಕರು. ಹೊಸಬರನ್ನೆ ಒಳಗೊಂಡಿರುವ ಈ ಚಿತ್ರತಂಡಕ್ಕೆ ಬೆನ್ನೆಲುಬಾಗಿದ್ದಾರೆ. ರಂಗಸಮುದ್ರ ಚಿತ್ರದಲ್ಲಿ 5 ಹಾಡುಗಳಿದ್ದು ಕೈಲಾಶ್ ಖೇರ್, ಬಾಹುಬಲಿ ಖ್ಯಾತಿಯ ಎಮ್ ಎಮ್ ಕೀರವಾಣಿ, ವಿಜಯ್ ಪ್ರಕಾಶ್, ಸಂಚಿತ್ ಹೆಗ್ಡೆ ಹಾಗು ದೇಸಿ ಮೋಹನ್ ಧ್ವನಿಯಾಗಿದ್ದಾರೆ. ಈ 5 ಗೀತೆಗಳಿಗೂ ಸಾಹಿತ್ಯ ಬರೆದಿರುವ ವಾಗೀಶ್ ಚನ್ನಗಿರಿ ತನ್ನ ಮೊದಲ ಸಾಹಿತ್ಯಕ್ಕೆ ಅತ್ಯುನ್ನತ ಗಾಯಕರು ಧ್ವನಿಗೂಡಿರುವುದು ನನಗೊಂದು ಗರ್ವ ಮತ್ತು ಹೆಮ್ಮೆ ಎನ್ನುತ್ತಾರೆ. ದೇಸಿಮೋಹನ್ ಈ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡಿದ್ದು, ಮುಖ್ಯಭೂಮಿಕೆಯಲ್ಲಿ ರಂಗಾಯಣ ರಘು, ಸಂಪತ್ ರಾಜ್, ದಿವ್ಯಾಗೌಡ, ಮೋಹನ್ ಜುನೇಜಾ, ಗುರುರಾಜ್ ಹೊಸಕೋಟೆ ಸೇರಿದಂತೆ ಮುಂತಾದವರಿದ್ದಾರೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k