Tag: Rangasamudra

  • ಸಿಎಂ ತವರಿನಲ್ಲೂ ವಕ್ಫ್ ಬೋರ್ಡ್ ಜಾದೂ; 2020 ರಲ್ಲಿ ಹಿಂದೂ ಜಾಗ, 2024 ರಲ್ಲಿ ವಕ್ಫ್‌ ಆಸ್ತಿ!

    ಸಿಎಂ ತವರಿನಲ್ಲೂ ವಕ್ಫ್ ಬೋರ್ಡ್ ಜಾದೂ; 2020 ರಲ್ಲಿ ಹಿಂದೂ ಜಾಗ, 2024 ರಲ್ಲಿ ವಕ್ಫ್‌ ಆಸ್ತಿ!

    ಮೈಸೂರು: ಸಿಎಂ ಸ್ವಕ್ಷೇತ್ರದಲ್ಲಿ ಸ್ಮಶಾನದ ಜಾಗದ ಮೇಲೆ ವಕ್ಫ್ ಕಣ್ಣು ಬಿದ್ದಿದೆ. ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ವರುಣಾ ಕ್ಷೇತ್ರ ವ್ಯಾಪ್ತಿಯ ರಂಗಸಮುದ್ರ ಗ್ರಾಮದ ಸರ್ವೇ ನಂಬರ್ 257ರ ಜಮೀನು ವಕ್ಫ್ ಆಸ್ತಿ ಎಂದು ನಮೂದಾಗಿದೆ.

    ಮುಸ್ಲಿಮರ ಖಬ್ರಸ್ಥಾನ ಎಂದು ಇತ್ತೀಚಿನ ದಾಖಲೆಗಳಲ್ಲಿ ಉಲ್ಲೇಖವಾಗಿದೆ. ಈ ಮೊದಲು ಅಂದರೆ 2019-20 ರ ಪಹಣಿಯಲ್ಲಿ ಕಪನಯ್ಯತೋಪು ಎಂದು ನಮೂದಿಸಲಾಗಿತ್ತು. ಅಲ್ಲದೇ ಹಿಂದೂ ಸಮುದಾಯದ ರುದ್ರಭೂಮಿಯಾಗಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಹಿಂದೂ ಸಮುದಾಯದ ಪುರಾತನ ಸಮಾಧಿಗಳು ಇಲ್ಲಿವೆ.

    ಸದರಿ ಜಾಗದ ಈಗಿನ ಪಹಣಿಯಲ್ಲಿ ಸುನ್ನಿವಕ್ಫ್ ಆಸ್ತಿ ಎಂದು ನಮೂದಿಸಲಾಗಿದೆ. ಕಾವೇರಿ ನದಿ ತೀರದಿಂದ ಕೇವಲ 200 ಮೀಟರ್ ಅಂತರದಲ್ಲಿರುವ ಜಾಗ ಇದ್ದಾಗಿದ್ದು, ರಂಗಸಮುದ್ರ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಘಟಕವೂ ಇದೇ ಸ್ಥಳದಲ್ಲಿದೆ. ಈ ಜಾಗವನ್ನು ಏಕಾಏಕಿ ವಕ್ಫ್ ಆಸ್ತಿ ಎಂದು ನಮೂದಿಸಿರುವುದಕ್ಕೆ ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ರಂಗಸಮುದ್ರ ಚಿತ್ರಕ್ಕೆ ಎಂ.ಎಂ. ಕೀರವಾಣಿ ಸಾಥ್

    ರಂಗಸಮುದ್ರ ಚಿತ್ರಕ್ಕೆ ಎಂ.ಎಂ. ಕೀರವಾಣಿ ಸಾಥ್

    ಹೊಸ ವರ್ಷದ ಮೊದಲ ಮಾಸದಂದು ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ರೆಟ್ರೋ ಮೂವಿ ರಂಗಸಮುದ್ರ  (Rangasamudra) ಬಿಡುಗಡೆಗೆ ಸಿದ್ದವಾಗಿದೆ. ಈಗಾಗಲೆ ಚಿತ್ರದ ಮೂರು ಹಾಡುಗಳು ಜಂಕಾರ್ ಮ್ಯೂಸಿಕ್ ಯುಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಗೊಂಡು ಸಂಗೀತ ಪ್ರಿಯರ ಮನಸ್ಸು ಗೆದ್ದಿವೆ. ಈಗ ಭಾರತದ ಮುಂಚೂಣಿಯಲ್ಲಿರುವ ಮ್ಯೂಸಿಕ್ ಡೈರೆಕ್ಟರ್, ಪದ್ಮಶ್ರೀ, ರಾಷ್ಟ್ರ ಪ್ರಶಸ್ತಿ ಹಾಗೂ ವಿಶ್ವದ ಅತ್ಯಂತ ಪ್ರಮುಖ ಪ್ರಶಸ್ತಿಯಾದ ಆಸ್ಕರ್ ವಿಜೇತ ಬಾಹುಬಲಿ ಹಾಗೂ ಆರ್.ಆರ್.ಆರ್ ಚಿತ್ರಗಳ ಸಂಗೀತ ಮಾಂತ್ರಿಕ ನಿರ್ದೇಶಕ ಎಮ್.ಎಮ್ ಕೀರವಾಣಿ (MM Keeravani) ಅವರಿಂದ ಚಿತ್ರದಲ್ಲಿ ತಿರುವು ಪಡೆಯುವ ಅದ್ಭುತ ಗೀತೆಯೊಂದನ್ನು ಹಾಡಿಸಿ ಗೀತೆಯನ್ನು ಬಿಡುಗಡೆಗೆಗೊಳಿಸಿದೆ.

    ಹೌದು ಭಾರತದ ಎಮ್.ಎಮ್ ಕೀರವಾಣಿಯವರು ಹಲವು ದಶಕಗಳ‌ ನಂತರ “ರಂಗಸಮುದ್ರ” ಚಿತ್ರದ ಮೂಲಕ ಕನ್ನಡಕ್ಕೆ ಮರಳಿ ಗೀತೆಯೊಂದಕ್ಕೆ ದನಿಯಾಗಿರುವುದು  ಚಿತ್ರತಂಡಕ್ಕೆ ಆತ್ಮವಿಶ್ವಾಸ ಹೆಚ್ಚಿಸಿದಂತಾಗಿದೆ.  ಅರ್ಥಾತ್ ಬಾಹುಬಲಿ ಸಂಗೀತ ಮಾಂತ್ರಿಕನ ಬಲ ಸಿಕ್ಕಾಂತಾಗಿದೆ ಎನ್ನುವುದು ಈಗಾಗಲೆ ಗಾಂಧಿನಗರದಲ್ಲಿ ಪ್ರಸ್ತುತ ಪರಸ್ಪರ ಪಿಸುಮಾತಗುತ್ತಿರುವ ಸುದ್ದಿ. ರಂಗಸಮುದ್ರ ಚಿತ್ರದ ನಿರ್ದೇಶಕ ರಾಜ್ ಕುಮಾರ್ ಅಸ್ಕಿ , ಸಾಹಿತಿ ವಾಗೀಶ್ ಚನ್ನಗಿರಿ ಹಾಗೂ ಸಂಗೀತ ನಿರ್ದೇಶಕ ದೇಸಿ ಮೋಹನ್ ರವರು ಈ ಒಂದು ಗೀತೆಗೆ ಎಮ್ ಎಮ್ ಕೀರಾವಣಿಯವರೆ ದನಿಯಾಗಬೇಕು ಎಂದು ಚಿತ್ರದ ನಿರ್ಮಾಪಕ ಹೊಯ್ಸಳ ಕೊಣನೂರು ಅವರ ಬಳಿ  ಹೇಳಿಕೊಂಡಿದ್ದರಂತೆ. ಚಿತ್ರತಂಡದ ಆಸೆಯಂತೆ ನಿರ್ಮಾಪಕರು ಕೀರವಾಣಿ ಅವರನ್ನು ಸಂಪರ್ಕಿಸಿದಾಗ ಪ್ರೀತಿಯಿಂದ ಹೈದಾರಬಾದ್ ಗೆ ಆಹ್ವಾನಿಸಿದರು ಎಂದಿದ್ದಾರೆ.

    ಸಾಂಗ್ ಅನ್ನು ಒಮ್ಮೆ ಕೇಳಿದ ನಂತರ, ನಾನು ಸೀನಿಯರ್ ಎಂಬುದನ್ನು ಬದಿಗಿಟ್ಟು , ಚಿತ್ರದ ಕಥೆ ಹೇಳಿ ಎಂದು ನಗುತ್ತ ಡೈರೆಕ್ಟರ್ ಗೆ ಹೇಳಿದ್ದಾರೆ ಕಥೆ ಕೇಳಿದ 5 ನಿಮಿಷಕ್ಕೆ ಹಾಡಲು ಒಪ್ಪಿದರು ಎನ್ನುತ್ತಾರೆ ನಿರ್ದೇಶಕ ರಾಜಕುಮಾರ್ ಅಸ್ಕಿ. ಇನ್ನು ಹಾಡಲು ಸಿದ್ದರಾಗುವಾಗ ಗೀತೆಯನ್ನು ಕನ್ನಡದಲ್ಲೆ ಬರೆದುಕೊಂಡು, ಬಹಳ‌ ಸುಮಧುರ ವಾಗಿ ಹಾಡಿ ಕನ್ನಡ ಭಾಷೆ ಮೇಲಿರುವ ಅಭಿಮಾನವನ್ನು ಸಾಬೀತುಪಡಿಸಿರುವುದು ಹೆಮ್ಮೆಯ ಸಂಗತಿ. ಸರಿಸುಮಾರು ಅರ್ಧ ದಿನ ಚಿತ್ರತಂಡದೊಂದಿಗೆ ಮಾತನಾಡುತ್ತ ಕುಳಿತ ಎಮ್ ಎಮ್ ಕೀರವಾಣಿಯವರು, ಅವರ ಮತ್ತು ಕನ್ನಡ ನಂಟು ಹಾಗೂ ಬೆಂಗಳೂರಿನಲ್ಲಿ ಒಂದು ಚಿಕ್ಕ ರೂಮಿನಲ್ಲಿ ವಾಸ ಮಾಡುತ್ತಿದ್ದದ್ದು, ಚಾಮುಂಡೇಶ್ವರಿ ಸ್ಟುಡಿಯೋ ಇಂದ ತನ್ನ ಸಿನಿಪಯಣ ಶುರುವಾಗಿದ್ದು. ನನ್ನ ಆಪ್ತ ಸ್ನೇಹಿತ ದೊಡ್ಡಣ್ಣ ಎನ್ನುತ್ತಾ ಹಲವಾರು ವಿಷಯಗಳನ್ನು ಹಂಚಿಕೊಂಡಿದ್ದಾರೆ.

    ಚಿತ್ರದ ಶೂಟಿಂಗ್ ಬಗ್ಗೆ ಮಾತನಾಡುತ್ತಾ ಅಪ್ಪುರವರು ನಟಿಸಬೇಕಿದ್ದ ಸಿನಿಮಾ ರಂಗಸಮುದ್ರ ಎಂದು ತಿಳಿದಾಗ ಭಾವುಕರಾಗಿ, ಅಪ್ಪು ಒಬ್ಬ ಅಜಾತಶತ್ರು ಈಗ ನಕ್ಷತ್ರವಾಗಿ ಮಿನುಗುತ್ತಿದ್ದಾರೆ, ಒಬ್ಬರು ಸತ್ತರೆ ಶತ್ರುಗು ಕೂಡ ಕಣ್ಣಿರು ಬರಬೇಕು ಅದರಂತೆಯೆ ಈ ಸಾಂಗ್ ನೋಡಿದ ಮೇಲೆ ಎಂತಹ ಕಲ್ಲು ಮನಸ್ಸು ಕೂಡ ಕರಗುತ್ತೆ ಎಂದಿದ್ದಾರೆ. ಚಿತ್ರವನ್ನು ನಿರ್ಮಾಣ ಮಾಡಿದ ಹೊಯ್ಸಳರವರ ಹೆಗಲ ಮೇಲೆ ಕೈ ಹಾಕಿ ಆಭಯ ನೀಡುವುದರ ಜೊತೆಗೆ, ಕಥೆ ರಚಿಸಿದ ಡೈರೆಕ್ಟರ್ ರಾಜ್ ಕುಮಾರ್ ಅಸ್ಕಿ ಮತ್ತು ಅತ್ಯುತ್ತಮ ಸಾಹಿತ್ಯ ನೀಡಿರುವ ವಾಗೀಶ್ ಚನ್ನಗಿರಿ ಅವರ ಬೆನ್ನು ತಟ್ಟಿ ರಾಜಮೌಳಿಯೊಂದಿಗೆ ನಿಮ್ಮ ಸಿನಿಮಾ ನೋಡುತ್ತೇನೆ ಎಂದು, ಅತಿಥಿಗಳಿಗೆ ಅವರೇ ಎಲ್ಲಾ ರೀತಿಯಲ್ಲೂ ಸತ್ಕರಿಸಿ ಬೀಳ್ಕೊಟ್ಟರು ಎನ್ನುತ್ತಾರೆ ಚಿತ್ರತಂಡದವರು…

    ರಂಗಸಮುದ್ರ ರಾಘವೇಂದ್ರ ರಾಜ್ ಕುಮಾರ್, ರಂಗಾಯಣ ರಘು, ಸಂಪತ್ ರಾಜ್,ದಿವಂಗತ ಮೋಹನ್ ಜುನೇಜಾ, ಮೂಗು ಸುರೇಶ್, ಗುರುರಾಜ್ ಹೊಸಕೋಟೆ,,ಉಗ್ರಂ ಮಂಜು,, ಕಾರ್ತಿಕ್ ರಾವ್, ದಿವ್ಯ ಗೌಡ,,ಮಹೇಂದ್ರ, ಸ್ಕಂದ ಅವರ ತಾರಾ ಬಳಗವನ್ನು ಹೊಂದಿದೆ. ಚಿತ್ರದಲ್ಲಿ‌ರುವ 4 ಗೀತೆಗಳಿಗೆ ಖ್ಯಾತ ಗಾಯಕರಾದ ಕೈಲಾಶ್ ಖೇರ್,  ವಿಜಯ್ ಪ್ರಕಾಶ್, ಸಂಜಿತ್ ಹೆಗ್ಡೆ,ದೇಸಿ ಮೋಹನ್ ಅವರು ದನಿಯಾಗಿದ್ದರೆ, ಚಿತ್ರದಲ್ಲಿ ಎರಡು ಬಿಟ್ ಗಳಿಗೆ ನವೀನ್ ಸಜ್ಜು ರವರು ದನಿಯಾಗಿದ್ದಾರೆ.

  • ‘ಹೋಗತ್ಲಾಗ’ ಎಂದ ಪ್ರೇಮಲೋಕದ ದೊರೆ ಹಂಸಲೇಖ

    ‘ಹೋಗತ್ಲಾಗ’ ಎಂದ ಪ್ರೇಮಲೋಕದ ದೊರೆ ಹಂಸಲೇಖ

    ಸಂಕ್ರಾಂತಿ ಹಬ್ಬದಂದು ಬಿಡುಗಡೆ ಮಾಡಿದ್ದಂತಹ ಈ ಚಿತ್ರದ ಕೈಲಾಶ್ ಖೇರ್ ಹಾಡಿರುವ ‘ಕೈಲಾಸ ಭೂಮಿಗಿಳಿದು’ ಲಿರಿಕಲ್ ಸಾಂಗ್ ಸ್ಯಾಂಡಲ್ವುಡ್ ಅಲ್ಲಿ ಇಂದಿಗು ಸದ್ದು ಮಾಡುತ್ತಲೇ ಇದೆ. ಈ ವರ್ಷ ಚಂದನವನದಲ್ಲಿ ತನ್ನದೇ ಆದಂತಹ ಛಾಪು ಮೂಡಿಸಿಕೊಂಡು ಗಾಂಧಿನಗರ ತುಂಬೆಲ್ಲಾ “ಮೌತ್ ಟಾಕ್” ಆಗಿರುವ ಈ ರೆಟ್ರೋ ಕಥೆಯಾಧರಿತ ‘ರಂಗಸಮುದ್ರ’ ಚಿತ್ರದ ಎರಡನೆಯ ಲಿರಿಕಲ್ ವಿಡೀಯೋ ಸಾಂಗ್ ಪ್ರೇಮಿಗಳ ದಿನದಂದು  ಬಿಡುಗಡೆಗೆ ಸಿದ್ದವಾಗಿದೆ.

    ವಿಶೇಷವೇನೆಂದರೆ ಕನ್ನಡದ ಪ್ರೇಮಕವಿ ಎಂದೆ ಮನೆ ಮನದಲ್ಲು ಇಂದಿಗೂ ಅಚ್ಚುಳಿದಿರುವ ನಾದಬ್ರಹ್ಮ “ಹಂಸಲೇಖ” ಅವರು ಈ ಚಿತ್ರದ ‘ಹೋಗತ್ಲಾಗ’ ಎಂಬಾ ಕಾಮಿಡಿ ಪ್ರೇಮಗೀತೆಯನ್ನು ಬಿಡುಗಡೆ ಮಾಡಿದ್ದಾರೆ.’ದೇಸಿ ಮ್ಯೂಸಿಕ್ ಕಾಲೇಜ್’ ಹಂಸಲೇಖರ ಕನಸಿನ ಕೂಸು. ಅದು ಈಗ ಹೆಮ್ಮರವಾಗಿ ಬೆಳೆದಿರುವುದು ಸತ್ಯ ಸಂಗತಿ. ಈ ಶಾಲೆಯ ವಿಧ್ಯಾರ್ಥಿಗಳು ಇನ್ನು ಮುಂದೆ ಹಂಸಲೇಖರ ಹೆಸರನ್ನು ಗಗನದೆತ್ತರಕ್ಕೆ ಬೆಳೆಸಬಲ್ಲ ಉತ್ತರಾಧಿಕಾರಿಗಳು ಎಂಬುದು ಹಂಸಲೇಖ ಅವರು ನಿಷ್ಕಲ್ಮಷವಾಗಿ ಹೆಮ್ಮೆ ಇಂದ ಹೇಳುವ ಮಾತು. ಇದೇ ‘ದೇಸಿ’ ಕಾಲೇಜಿನ ವಿಧ್ಯಾರ್ಥಿಗಳು ಈ ಚಿತ್ರಕ್ಕೆ ಜೀವ ತುಂಬಿರುವವರು. ಇದನ್ನೂ ಓದಿ:`ಬಿಗ್ ಬಾಸ್’ ಖ್ಯಾತಿಯ ಅಕ್ಷತಾ ಕುಕ್ಕಿ ಮದುವೆ ಡೇಟ್ ಫಿಕ್ಸ್

    ಈ ಚಿತ್ರದ ನಿರ್ದೇಶಕ ರಾಜ್ ಕುಮಾರ್ ಅಸ್ಕಿ, ಸಂಗೀತ ನಿರ್ದೇಶಕ ದೇಸಿ ಮೋಹನ್, ಮತ್ತು ಈ ಚಿತ್ರದ ಎಲ್ಲಾ ಹಾಡುಗಳ ಸಾಹಿತಿ ವಾಗೀಶ್ ಚನ್ನಗಿರಿ ಇದೇ ಹಂಸಲೇಖರ ಪ್ರಿಯ ಶಿಷ್ಯರು ಎಂಬುದು ಮತ್ತೊಂದು ವಿಶೇಷ. ಹಾಸನ ಹಾಗು ಕರ್ನಾಟಕದ ಹಲವು ಭಾಗಗಳಲ್ಲಿ ಸಾಮಾಜಿಕವಾಗಿ ರಾಜಕೀಯವಾಗಿ ತನ್ನದೆ ಆದ ಪ್ರತಿಷ್ಠೆ ಹಾಗು ಅಭಿಮಾನಿ ಬಳಗ ಹೊಂದಿರುವ ಹೊಯ್ಸಳ ಕೊಣನೂರು, ಈ ಚಿತ್ರಕ್ಕೆ ಬಂಡವಾಳ ಹೂಡಿರುವ ನಿರ್ಮಾಪಕ. ಕಥೆ ಮನಸ್ಸಿಗೆ ಹತ್ತಿರವಾಗಿರುವ ಕಾರಣಕ್ಕೆ ಈ ಸಿನಿಮಾ ನಿರ್ಮಾಣ ಮಾಡಲು ಒಪ್ಪಿದೆ ಚಿತ್ರ ತೆರೆ ಮೇಲೆ ಬಂದಾಗ ನನ್ನೊಬ್ಬನಿಗಲ್ಲಾ ಪ್ರತಿಯೊಬ್ಬ ವೀಕ್ಷಕರಿಗೂ ಇಷ್ಟವಾಗುತ್ತದೆ ಎನ್ನುತ್ತಾರೆ ನಿರ್ಮಾಪಕ ಹೊಯ್ಸಳ ಕೊಣನೂರು.

    ಬಿಡುಗಡೆಗೊಂಡಿರುವ ಈ ಉತ್ತರ ಕರ್ನಾಟಕ ಭಾಷೆಯ ರೀತಿಯ ‘ಹೋಗತ್ಲಾಗ’ ಲಿರಿಕಲ್ ಸಾಂಗ್ ಅನ್ನು ಚಿತ್ರದ  ಸಂಗೀತ ನಿರ್ದೇಶಕ ದೇಸಿ ಮೋಹನ್ ಅವರೇ ಹಾಡಿದ್ದಾರೆ. ಚಿತ್ರದ ಮುಖ್ಯ ಭೂಮಿಕೆಯಲ್ಲಿ   ರಂಗಾಯಣ ರಘು, ಸಂಪತ್ ರಾಜ್, ಗುರುರಾಜ್ ಹೊಸಕೋಟೆ,(ದಿ) ಮೋಹನ್ ಜುನೇಜಾ, ಉಗ್ರಂ ಮಂಜು, ಕಾರ್ತಿಕ್ ರಾವ್, ಮೂಗು ಸುರೇಶ್, ದಿವ್ಯ ಗೌಡ, ಸ್ಕಂದ, ಮಹೇಂದ್ರ ಕಾಣಸಿಗಲಿದ್ದಾರೆ. ಪುನೀತ್ ರಾಜ್ ಕುಮಾರ್ ಅವರು ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಲು ಒಪ್ಪಿದ್ದರು ಎಂಬುದು ಈ ಹಿಂದೆ ಎಲ್ಲಾ ಮಾದ್ಯಮಗಳಲ್ಲಿ ಪ್ರಸಾರವಾಗಿದ್ದು ಇತಿಹಾಸ. ಆದರೆ ಅದೇ ಪಾತ್ರವನ್ನು ರಾಘವೇಂದ್ರ ರಾಜ್ ಕುಮಾರ್ ಅವರು ನಿರ್ವಹಿಸಿರುವುದು ಖುಷಿಯ ಸಂಗತಿ ಎನ್ನುತ್ತದೆ ಇಡೀ ಚಿತ್ರತಂಡ. ಹೊಸಬರಾದರೂ ಕೂಡ ಸ್ಯಾಂಡಲ್ವುಡ್ ಅಲ್ಲಿ ತನ್ನದೇ ಆದ ಹವಾ ಸೃಷ್ಟಿಸಲು ಹೊರಟಿರುವ ರಂಗಸಮುದ್ರ ಚಿತ್ರತಂಡಕ್ಕೆ ಶುಭವಾಗಲಿ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ‘ಕೈಲಾಸ’ ಸಾಂಗ್ ಬಿಡುಗಡೆ ಮಾಡಿದ ಕಾಶಿಯ ನಾಗಸಾಧು

    ‘ಕೈಲಾಸ’ ಸಾಂಗ್ ಬಿಡುಗಡೆ ಮಾಡಿದ ಕಾಶಿಯ ನಾಗಸಾಧು

    ‘ರಂಗಸಮುದ್ರ’ ಸಿನಿಮಾ ಈಗ ಮತ್ತೊಂದು ವಿಶೇಷ ರೀತಿಯಲ್ಲಿ ಸಿನಿಮಾ ಪ್ರಮೋಷನ್ ಮಾಡಿದೆ. ದೊಡ್ಡ ದೊಡ್ಡ ಕಾರ್ಯಕ್ರಮ ಮಾಡಿ ಆಡೀಯೋ ಬಿಡುಗಡೆ ಮಾಡುವುದು ಈಗಿನ ಸಿನಿಮಾ ತಂಡಗಳ ಟ್ರೆಂಡ್. ಆದರೆ ಅದನ್ನು ಹೊರತು ಪಡಿಸಿ ಹೀಗೂ ಬಿಡುಗಡೆ ಮಾಡಬಹುದು  ಎಂದು ಪವಿತ್ರ ಕ್ಷೇತ್ರ ಕಾಶಿಗೆ ತೆರಳಿ ಸಾಂಗ್ ಗೆ ಹೊಂದಿಕೊಂಡಂತಿರುವ ಒಬ್ಬ ನಾಗಸಾಧುಗಳ ಬಳಿ ಬಿಡುಗಡೆ ಮಾಡಿಸಿದೆ.

    ದೇಶದ ಹೆಸರಾಂತ ಗಾಯಕ ಕೈಲಾಶ್ ಕೇರ್ ಕನ್ನಡದಿಂದ ಹಿಂದಿಗೆ ಸ್ವತಃ ತಾವೇ ಸಾಹಿತ್ಯ ಬರೆದುಕೊಂಡು ತುಂಬಾ ಇಷ್ಟ ಪಟ್ಟು ಹಾಡಿರುವುದು ಲಿರಿಕಲ್ ಸಾಂಗ್ ನ ವಿಡಿಯೋದಲ್ಲಿ ಕಾಣಬಹುದಾಗಿದೆ. ಕನ್ನಡ ಸಿನಿರಂಗದಲ್ಲಿ ತನ್ನದೆ ಆದ ಛಾಪು ಮೂಡಿಸಿರುವ ರಂಗಾಯಣ ರಘು ಈ ಹಿಂದೆ ಕಾಮಿಡಿ ನಟನೆಯ ಮೂಲಕ ಕನ್ನಡಿಗರ ಮನಸ್ಸು ಗೆದ್ದಿದ್ದರು. ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ವಿಭಿನ್ನ ಹಾಗು ವಿಶಿಷ್ಟ ಪಾತ್ರದಲ್ಲಿ ಅವರು ಪ್ರೇಕ್ಷಕರನ್ನು ಎದುರುಗೊಳ್ಳಲಿದ್ದಾರೆ. ಇದನ್ನೂ ಓದಿಸಾನ್ಯ ಜೊತೆ ರೂಪೇಶ್ ಶೆಟ್ಟಿ ಮೀಟಿಂಗ್:‌ ಮದುವೆ ಬಗ್ಗೆ ನೆಟ್ಟಿಗರಿಂದ ಪ್ರಶ್ನೆಗಳ ಸುರಿಮಳೆ

                   

    ಕನ್ನಡ ಸಿನಿಮಾದಲ್ಲಿ ಮೊದಲ ಬಾರಿಗೆ ಸಂಪೂರ್ಣ ಭಂಡಾರವನ್ನೇ ಉಪಯೋಗಿಸಿ ಚಿತ್ರೀಕರಿಸಿದ ಮೊದಲ ಸಾಂಗ್ ಇದಾಗಿದ್ದು, ಹಾಡು ಅತ್ಯಂತ ಕಲರ್ ಫುಲ್ ಆಗಿ ಮೂಡಿಬಂದಿದೆ. ಈ ಹಾಡನ್ನು ಚಿತ್ರೀಕರಿಸಲು ಬೇಕಾದ ಸ್ಥಳ ಹಾಗು ಹೊಂದಿಕೊಳ್ಳುವ ಜನ ಬೇಕಿತ್ತು. ಹಾಗಾಗಿ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಹುಲಿಜಯಂತಿ ಊರನ್ನು ಆಯ್ಕೆ ಮಾಡಿಕೊಂಡು, ಅಲ್ಲಿನ ಮಾಳಿಂಗರಾಯ ಸ್ವಾಮಿ ಜಾತ್ರೆಗೆ ಬರುವ ಸರಿಸುಮಾರು 15 ಲಕ್ಷ ಜನರು ಮಧ್ಯೆ ಹಾಡನ್ನು ಸೆರೆ ಹಿಡಿದಿದ್ದಾರೆ ನಿರ್ದೇಶಕ ರಾಜಕುಮಾರ್ ಅಸ್ಕಿ ಹಾಗು ಕೋರಿಯೋಗ್ರಫರ್ ಬಿ. ಧನಂಜಯ್.

    ಹೊಯ್ಸಳ ಕೊಣನೂರು ಈ ಚಿತ್ರದ ನಿರ್ಮಾಪಕರು. ಹೊಸಬರನ್ನೆ ಒಳಗೊಂಡಿರುವ ಈ ಚಿತ್ರತಂಡಕ್ಕೆ ಬೆನ್ನೆಲುಬಾಗಿದ್ದಾರೆ. ರಂಗಸಮುದ್ರ ಚಿತ್ರದಲ್ಲಿ 5 ಹಾಡುಗಳಿದ್ದು ಕೈಲಾಶ್ ಖೇರ್, ಬಾಹುಬಲಿ ಖ್ಯಾತಿಯ ಎಮ್ ಎಮ್ ಕೀರವಾಣಿ, ವಿಜಯ್ ಪ್ರಕಾಶ್, ಸಂಚಿತ್ ಹೆಗ್ಡೆ ಹಾಗು ದೇಸಿ ಮೋಹನ್ ಧ್ವನಿಯಾಗಿದ್ದಾರೆ. ಈ 5 ಗೀತೆಗಳಿಗೂ ಸಾಹಿತ್ಯ ಬರೆದಿರುವ ವಾಗೀಶ್ ಚನ್ನಗಿರಿ ತನ್ನ ಮೊದಲ ಸಾಹಿತ್ಯಕ್ಕೆ ಅತ್ಯುನ್ನತ ಗಾಯಕರು ಧ್ವನಿಗೂಡಿರುವುದು ನನಗೊಂದು ಗರ್ವ ಮತ್ತು ಹೆಮ್ಮೆ ಎನ್ನುತ್ತಾರೆ. ದೇಸಿಮೋಹನ್ ಈ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡಿದ್ದು, ಮುಖ್ಯಭೂಮಿಕೆಯಲ್ಲಿ ರಂಗಾಯಣ ರಘು, ಸಂಪತ್ ರಾಜ್, ದಿವ್ಯಾಗೌಡ, ಮೋಹನ್ ಜುನೇಜಾ, ಗುರುರಾಜ್ ಹೊಸಕೋಟೆ ಸೇರಿದಂತೆ ಮುಂತಾದವರಿದ್ದಾರೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k