Tag: Ranganathittu Bird Sanctuary

  • ರಂಗನತಿಟ್ಟಿನಲ್ಲಿ ಬೋಟಿಂಗ್ ಬಂದ್

    ರಂಗನತಿಟ್ಟಿನಲ್ಲಿ ಬೋಟಿಂಗ್ ಬಂದ್

    ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆ ಕೆಆರ್‌ಎಸ್ ಡ್ಯಾಂಗೆ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಡ್ಯಾಂನಿಂದ 11,633 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದ್ದು, ಇದರಿಂದ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟು ಪಕ್ಷಿಧಾಮದ ನಡುಗಡ್ಡೆಗಳು ಮುಳುಗಡೆಯ ಅಂಚಿಗೆ ಬಂದಿವೆ.

    ನಡುಗಡ್ಡೆಗಳು ಮುಳುಗಡೆಯ ಅಂಚಿಗೆ ಬಂದಿರುವ ಕಾರಣ ರಂಗನತಿಟ್ಟು ಪಕ್ಷಿಧಾಮದಲ್ಲಿ ಭಾನುವಾರದಿಂದ ಪ್ರವಾಸಿಗರಿಗೆ ಬೋಟಿಂಗ್ ಅನ್ನು ರದ್ದು ಮಾಡಲಾಗಿದೆ. ಇದೇ ರೀತಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಮುಂದುವರಿದ ಸಂದರ್ಭದಲ್ಲಿ ಕೆಆರ್‌ಎಸ್ ಡ್ಯಾಂನಿಂದ ಮತ್ತಷ್ಟು ನೀರನ್ನು ನದಿಗೆ ಬಿಡಲಾಗುತ್ತದೆ. ಇದರಿಂದ ರಂಗನತಿಟ್ಟು ಪಕ್ಷಿಧಾಮ ಪ್ರವಾಹಕ್ಕೆ ತುತ್ತಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಹಾವೇರಿಯಲ್ಲಿ ಚೆಂಡು ಹೂ, ಕಬ್ಬು, ತೊಗರಿ ನೀರುಪಾಲು- ಕಳಸದಲ್ಲಿ ಕೊಚ್ಚಿ ಹೋದ ತಡೆಗೋಡೆ

    ಕಳೆದ 2 ವರ್ಷಗಳ ಹಿಂದೆ ಕೆಆರ್‌ಎಸ್ ಡ್ಯಾಂನಿಂದ 1 ಲಕ್ಷ ಕ್ಯೂಸೆಕ್ ನೀರನ್ನು ಹರಿಬಿಟ್ಟಿದ್ದ ಪರಿಣಾಮ ರಂಗನತಿಟ್ಟು ಪಕ್ಷಿಧಾಮದ ಬಹುತೇಕ ನಡುಗಡ್ಡೆಗಳು ನಾಶವಾಗಿದ್ದವು. ಇದರಿಂದ ಅಲ್ಲಿದ್ದ ಪಕ್ಷಿ ಸಂಕುಲ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದವು. ಇದೀಗ ಕಾವೇರಿ ಜಲಾನಯನ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾದರೆ, ಕೆಆರ್‌ಎಸ್ ಡ್ಯಾಂನಿಂದ ಅಪಾರ ಪ್ರಮಾಣದಲ್ಲಿ ನದಿಗೆ ನೀರು ಬಿಡುಗಡೆ ಮಾಡಲಾಗುತ್ತದೆ. ಇದರಿಂದ ರಂಗನತಿಟ್ಟು ಮುಳುಗಡೆಯಾಗುವ ಸಾಧ್ಯತೆ ಇದೆ. ಇದನ್ನೂ ಓದಿ: 2 ವಾರಗಳ ಮಳೆಗೆ ದಕ್ಷಿಣ ಕನ್ನಡ ತತ್ತರ – ಫಲ್ಗುಣಿ ಅಬ್ಬರಕ್ಕೆ ಇಡೀ ಗ್ರಾಮವೇ ಆಪೋಷನ

    Live Tv
    [brid partner=56869869 player=32851 video=960834 autoplay=true]

  • ರಂಗನತಿಟ್ಟಿಗೆ ತಟ್ಟಿದ ಕಾವೇರಿ ಮಹಾಪ್ರವಾಹ – 17 ದ್ವೀಪಗಳು ಸಂಪೂರ್ಣ ನಾಶ

    ರಂಗನತಿಟ್ಟಿಗೆ ತಟ್ಟಿದ ಕಾವೇರಿ ಮಹಾಪ್ರವಾಹ – 17 ದ್ವೀಪಗಳು ಸಂಪೂರ್ಣ ನಾಶ

    ಮಂಡ್ಯ: ಪ್ರವಾಹದಿಂದ ಹಲವು ಮಂದಿ ತಮ್ಮ ಅಪಾರ ಪ್ರಮಾಣದ ಆಸ್ತಿಪಾಸ್ತಿಯ ಜೊತೆಗೆ ತಮ್ಮ ಬದುಕನ್ನು ಕೂಡ ಕಳೆದುಕೊಂಡಿದ್ದಾರೆ. ಈ ಪ್ರವಾಹದಿಂದ ಮನುಷ್ಯರು ಮಾತ್ರ ಬದುಕನ್ನು ಕಳೆದುಕೊಂಡಿಲ್ಲ ಮೂಕ ಪಕ್ಷಿಗಳು ತಮ್ಮ ಸಂತಾನದ ಜೊತೆಗೆ ತಮ್ಮ ಗೂಡನ್ನು ಕಳೆದುಕೊಂಡು ಪರದಾಡುತ್ತಿವೆ.

    ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ರಂಗನತಿಟ್ಟು ಪಕ್ಷಿಧಾಮ, ದೇಶ ಅಲ್ಲದೇ ವಿದೇಶಿ ಪಕ್ಷಿಗಳಿಗೂ ಆಶ್ರಯ ನೀಡುತ್ತಿರುವ ಸುಂದರವಾದ ತಾಣ. ಇಲ್ಲಿಗೆ ದೇಶಿ ಹಾಗೂ ವಿದೇಶಿ ಪಕ್ಷಿಗಳು ಬಂದು ತಮ್ಮ ಸಂತಾನವನ್ನು ವೃದ್ಧಿ ಮಾಡಿಕೊಳ್ಳುವುದರ ಜೊತೆಗೆ ತಮ್ಮ ಬದುಕನ್ನು ಕಟ್ಟಿಕೊಂಡು ತಮ್ಮ ತಮ್ಮ ಪ್ರದೇಶಗಳಿಗೆ ತೆರಳುತ್ತಿದ್ದವು. ಆದರೆ ಕಳೆದ 20 ದಿನಗಳ ಹಿಂದೆ ಬಂದ ಪ್ರವಾಹದಿಂದ ರಂಗನತಿಟ್ಟಿನಲ್ಲಿದ್ದ, 23 ಐಲ್ಯಾಂಡ್‍ಗಳ ಪೈಕಿ 17 ಐಲ್ಯಾಂಡ್‍ಗಳು ಸಂಪೂರ್ಣವಾಗಿ ನಾಶವಾಗಿವೆ. ಇದರಿಂದ ಐಲ್ಯಾಂಡ್‍ನಲ್ಲಿ ಗೂಡು ಕಟ್ಟಿಕೊಂಡು ವಾಸ ಮಾಡುತ್ತಿದ್ದ ಪಕ್ಷಿಗಳು ಗೂಡು ಸೇರಿದಂತೆ ಗೂಡಿನಲ್ಲಿದ್ದ ಮೊಟ್ಟೆ ಹಾಗೂ ಮರಿಗಳನ್ನು ಕಳೆದುಕೊಂಡು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

    ರಂಗನತಿಟ್ಟಿನಲ್ಲಿದ್ದ ಐಲ್ಯಾಂಡ್‍ಗಳಲ್ಲಿ ಪಕ್ಷಿಗಳ ಸಂತಾನೋತ್ಪತ್ತಿಗೆ ಬೇಕಾದ ಎಲ್ಲಾ ರೀತಿಯ ಸೌಲಭ್ಯವನ್ನು ಕೃತಕವಾಗಿ ಅರಣ್ಯ ಇಲಾಖೆ ನಿರ್ಮಾಣ ಮಾಡಿತ್ತು. ಆದರೆ 20 ದಿನಗಳ ಹಿಂದೆ ಕೆಆರ್‍ಎಸ್ ಜಲಾಶಯದಿಂದ ಒಂದೂವರೆ ಲಕ್ಷ ಕ್ಯೂಸೆಕ್‍ಗೂ ಅಧಿಕ ಪ್ರಮಾಣದಲ್ಲಿ ನೀರು ಬಿಟ್ಟಿದ್ದ ಪರಿಣಾಮ ಪ್ರವಾಹ ಬಂದು 17 ಐಲ್ಯಾಂಡ್‍ಗಳು ನಾಶವಾಗಿವೆ. ಇದರಿಂದ ಎರಡು ಕೋಟಿಗೂ ಅಧಿಕ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಈ ಪ್ರವಾಹದಿಂದ ಆರ್ಥಿಕವಾಗಿ ನಷ್ಟವಲ್ಲ, ಪ್ರಕೃತಿಯ ಸೌಂದರ್ಯದ ಜೊತೆ ಪಕ್ಷಿಗಳ ಬದುಕು ಕೂಡ ಬೀದಿಗೆ ಬಿದ್ದಿದೆ. ಇದೀಗ ಆ ಇಲ್ಲಿರುವ ಪಕ್ಷಿಗಳು ತಮ್ಮ ಬದುಕು ಕಟ್ಟಿಕೊಳ್ಳಲು ಇದೀಗ ರಂಗನತಿಟ್ಟಿನಲ್ಲಿ ಪರದಾಡುತ್ತಿವೆ. ಇನ್ನೇನೂ ಎರಡು ತಿಂಗಳು ಕಳೆದರೆ ಇನ್ನೂ ಅಪಾರ ಪ್ರಮಾಣದಲ್ಲಿ ಪಕ್ಷಿಗಳು ಸಂತಾನೋತ್ಪತ್ತಿಗೆ ಬರಲಿವೆ. ಅಷ್ಟರಲ್ಲಿ ನಾಶವಾಗಿರುವ ಐಲ್ಯಾಂಡ್‍ಗಳ ದುರಸ್ಥಿ ಮಾಡಬೇಕು ಎನ್ನುವುದು ಪಕ್ಷಿ ಪ್ರೇಮಿಗಳ ಆಶಯವಾಗಿದೆ.