ಎಲ್ಲಾ ಪರೀಕ್ಷೆಗಳಿಗೆ ತಂದೆಯೇ ಪರೀಕ್ಷಾ ಕೇಂದ್ರದವರೆಗೆ ಹೋಗಿ ಮಕ್ಕಳನ್ನ ಬಿಟ್ಟುಬರುತ್ತಿದ್ದರು. ಆದರೆ ಏಕಾಏಕಿ ಹೃದಯಾಘಾತದಿಂದ ಇಂದು ಬೆಳಗ್ಗೆ ಹನುಮಂತಪ್ಪ ಸಾವನ್ನಪ್ಪಿದ್ದಾರೆ. ವಿದ್ಯಾ ಕುಟುಂಬ ಸದಸ್ಯರು, ಶಿಕ್ಷಣ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.
– ರಾಜ್ಯದಲ್ಲಿ ಲವ್ ಜಿಹಾದ್ ಜಾಲ ಸಕ್ರಿಯವಾಗಿದೆ; ಬೊಮ್ಮಾಯಿ ಕಿಡಿ
ಹಾವೇರಿ: ಹಿಂದೂ ಯುವತಿ ಸ್ವಾತಿ ಹತ್ಯೆ ಪ್ರಕರಣ ದೊಡ್ಡ ಸಂಚಲನ ಸೃಷ್ಟಿಸುತ್ತಲೇ ಪೊಲೀಸರ ತನಿಖೆ ಮತ್ತಷ್ಟು ತೀವ್ರಗೊಂಡಿದೆ. ಕೊಲೆ ಮಾಡಿ ಎಸ್ಕೇಪ್ ಆಗಿರುವ ಮತ್ತಿಬ್ಬರು ಆರೋಪಿಗಳನ್ನ ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೊದಲು ಅಪರಿಚಿತ ಶವ ಸಿಕ್ಕಿರುವುದಾಗಿ ತನಿಖೆ ಆರಂಭಿಸಿದ್ದ ಪೊಲೀಸರಿಗೆ ಅದು ಸ್ವಾಭಾವಿಕ ಸಾವಲ್ಲ ಕೊಲೆ ಎಂದು ಗೊತ್ತಾಗಿದೆ. ಯು.ಡಿ.ಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಹಲಗೇರಿ ಪೊಲೀಸ್ ಠಾಣೆ ಪೊಲೀಸರು ಒಬ್ಬ ಆರೋಪಿಯನ್ನು ಪತ್ತೆ ಮಾಡಿದ್ದರು. ನಯಾಜ್ ಎಂಬ ಮುಸ್ಲಿಂ ಯುವಕನೇ ಸ್ವಾತಿ ಹತ್ಯೆಯ ಪ್ರಮುಖ ಆರೋಪಿಯಾಗಿದ್ದಾನೆ. ಇದನ್ನೂ ಓದಿ: ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿಗೆ ಸಂಪುಟ ಒಪ್ಪಿಗೆ – 1 ಕೋಟಿವರೆಗಿನ ಕಾಮಗಾರಿಗಳಲ್ಲಿ ಮೀಸಲಾತಿ
ಸ್ವಾತಿ ಜೊತೆ ಲವ್‌ನಲ್ಲಿದ್ದ ಎನ್ನಲಾದ ನಯಾಜ್ ಮತ್ತಿಬ್ಬರು ಸ್ನೇಹಿತರ ಜೊತೆ ಸೇರಿ ಸ್ವಾತಿ ಕೊಲೆ ಮಾಡಿದ್ದ. ಸದ್ಯ ನಯಾಜ್‌ನನ್ನು ಬಂಧಿಸಿ ತನಿಖೆ ಆರಂಭಿಸಿದ್ದ ಪೊಲೀಸರು, ಆತನ ಮತ್ತಿಬ್ಬರು ಸ್ನೇಹಿತರಾದ ವಿನಯ್ ಹಾಗೂ ದುರ್ಗಾಚಾರಿ ಪತ್ತೆ ಹಚ್ಚಿ ಬಂಧನ ಮಾಡುವಲ್ಲಿ ಯಶಸ್ವಿಯಾಗಿದರು. ಚಿತ್ರದುರ್ಗದ ಬಳಿ ವಿನಾಯಕ್ ಮತ್ತು ದುರ್ಗಾಚಾರಿಯನ್ನ ಪೊಲೀಸರು ಬಂಧಿಸಿದ್ದರು. ಆದರೀಗ ಈ ಪ್ರಕರಣವು ಹೊಸ ಆಯಾಮ ಪಡೆದುಕೊಂಡಿದೆ. ಇದನ್ನೂ ಓದಿ: ಪಾಕ್ ಮಸೀದಿಯಲ್ಲಿ ಬಾಂಬ್ ಸ್ಫೋಟ – ನಾಲ್ವರಿಗೆ ಗಾಯ
ಈ ಬಗ್ಗೆ ಹಾವೇರಿ ಎಸ್ಪಿ ಭೇಟಿ ಮಾಡಿರುವ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ. ಸ್ವಾತಿ ಹತ್ಯೆ ಲವ್ ಜಿಹಾದ್. ಇದಕ್ಕಾಗಿ ಮುಸ್ಲಿಂ ಯುವಕರಿಗೆ ಟ್ರೇನಿಂಗ್ ಕೊಡುತ್ತಿದ್ದಾರೆ. ದುಡ್ಡು ಬೈಕ್, ಕೊಟ್ಟು ಹಿಂದೂ ಯುವತಿಯರನ್ನು ಪಟಾಯಿಸಲು ತರಬೇತಿ ನೀಡಲಾಗ್ತಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಕೇಂದ್ರದ 2 ಸಾವಿರ ಕೋಟಿ ಕಳೆದುಕೊಂಡರೂ ನಾವು ನಮ್ಮ ಸಿದ್ಧಾಂತದಲ್ಲಿ ರಾಜಿಯಾಗಲ್ಲ: ತಮಿಳುನಾಡು
ಸಂಸದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೂಡಾ ಸ್ವಾತಿ ಹತ್ಯೆ ಕುರಿತು ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ವಾತಿ ಎಂಬ ಯುವತಿಯನ್ನು ವಂಚಿಸಿ ಹತ್ಯೆ ಮಾಡಿರುವ ಘಟನೆ ಖಂಡನೀಯವಾಗಿದೆ. ರಾಜ್ಯದಲ್ಲಿ ಪ್ರೀತಿಯ ಹೆಸರಿನಲ್ಲಿ ಲವ್ ಜಿಹಾದ್ ಜಾಲ ಸಕ್ರಿಯವಾಗಿದ್ದು, ಪೊಲೀಸರ ಭಯ ಇಲ್ಲದಿರುವುದೇ ಇಂತಹ ಪ್ರಕರಣಗಳು ಹೆಚ್ಚಾಗಲು ಕಾರಣ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: 2ನೇ ಏರ್‌ಪೋರ್ಟ್ ನಿರ್ಮಾಣಕ್ಕೆ ತಮಿಳುನಾಡು ಸರ್ಕಾರಕ್ಕೆ ಗ್ರೀನ್ ಸಿಗ್ನಲ್ – ಹೊಸೂರು ಬಳಿ 2 ಸ್ಥಳ ಫೈನಲ್
ರಾಜ್ಯದಲ್ಲಿ @INCKarnataka ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದ್ದು, ವಿಶೇಷವಾಗಿ ಪ್ರೀತಿ ಹೆಸರಿನಲ್ಲಿ ಯುವತಿಯರನ್ನು ವಂಚಿಸಿ ಹತ್ಯೆ ಮಾಡುವ ಹೇಯ ಕೃತ್ಯಗಳು ಹೆಚ್ಚಾಗಿರುವುದು ಅತ್ಯಂತ ಆಘಾತಕಾರಿ.
ಹುಬ್ಬಳ್ಳಿಯಲ್ಲಿ ಕಾಲೇಜು ಯುವತಿ ನೇಹಾ ಹಿರೇಮಠ ಅವಳ ಬರ್ಬರ ಕೊಲೆಯ ನೋವು ಮಾಸುವ ಮುನ್ನ ಈಗ…
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ. ವಿಶೇಷವಾಗಿ ಪ್ರೀತಿ ಹೆಸರಿನಲ್ಲಿ ಯುವತಿಯರನ್ನು ವಂಚಿಸಿ ಹತ್ಯೆ ಮಾಡುವ ಹೇಯ ಕೃತ್ಯಗಳು ಹೆಚ್ಚಾಗಿರುವುದು ಅತ್ಯಂತ ಆಘಾತಕಾರಿ. ಹುಬ್ಬಳ್ಳಿಯಲ್ಲಿ ಕಾಲೇಜು ಯುವತಿ ನೇಹಾ ಹಿರೇಮಠ ಅವಳ ಬರ್ಬರ ಕೊಲೆಯ ನೋವು ಮಾಸುವ ಮುನ್ನ ಈಗ ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಸ್ವಾತಿ ಬ್ಯಾಡಗಿ ಎನ್ನುವ ಯುವತಿಯ ಕೊಲೆಯಾಗಿದ್ದು, ಇದೂ ಕೂಡ ಲವ್ ಜಿಹಾದ್ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ಘಟನೆ ನಡೆದು ಒಂದು ವಾರ ಕಳೆದರೂ ಪ್ರಕರಣದಲ್ಲಿ ಬಂಧಿತನಾಗಿರುವ ನಯಾಜ್ ಎನ್ನುವ ಪ್ರಮುಖ ಆರೋಪಿಯ ರಕ್ಷಣೆಗೆ ದೊಡ್ಡ ಮಟ್ಟದ ಕಸರತ್ತು ನಡೆದಂತೆ ಕಾಣಿಸುತ್ತದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕರ್ನಾಟಕ ರಾಜ್ಯ ಖನಿಜ ಅಭಿವೃದ್ಧಿ ನಿಗಮದಿಂದ 1402 ಕೋಟಿ ರೂ.ಚೆಕ್ ಹಸ್ತಾಂತರ
ಸ್ವಾತಿಯನ್ನು ಪ್ರೀತಿಸುವ ನಾಟಕವಾಡಿ ಅನ್ಯ ಧರ್ಮದವಳೆಂದು ತಿರಸ್ಕರಿಸಿ ತನ್ನ ಧರ್ಮದ ಬೇರೆ ಯುವತಿಯ ಜೊತೆ ಮದುವೆ ಮಾಡಿಕೊಳ್ಳಲು ತೀರ್ಮಾನಿಸಿದ್ದನ್ನು ಪ್ರಶ್ನಿಸಿರುವುದಕ್ಕೆ ಸ್ವಾತಿಯ ಕೊಲೆ ಮಾಡಿದ್ದಾನೆ ಎಂಬ ಮಾಹಿತಿ ಇದೆ. ಪೊಲೀಸರು ಯಾವುದೇ ಒತ್ತಡಕ್ಕೆ ಮಣಿಯದೇ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಮಾಡುವುದರಿಂದ ಮಾತ್ರ ಇಂತಹ ಪ್ರಕರಣಗಳಿಗೆ ತಡೆ ಒಡ್ಡಬಹುದಾಗಿದೆ. ಇದರ ಬಗ್ಗೆ ಪೊಲೀಸರು ನಿಷ್ಠುರವಾಗಿ ಅಪರಾಧಿಗಳನ್ನು ಹಿಡಿದು ಅದರ ಹಿಂದೆ ಇರುವ ಶಕ್ತಿಗಳನ್ನು ಕಡಿವಾಣ ಹಾಕುವುದು ಅತ್ಯಂತ ಅವಶ್ಯ ಎಂದಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿರೋದು ಸಿದ್ದರಾಮಯ್ಯನ ಸರ್ಕಾರ… ನಿಮ್ಮಪ್ಪನ ಸರ್ಕಾರ ಅಲ್ಲ – ಬಿಜೆಪಿ ಕಾರ್ಯಕರ್ತರ ವಿರುದ್ಧ ರೊಚ್ಚಿಗೆದ್ದ ಪ್ರದೀಪ್ ಈಶ್ವರ್
ಆದರೆ, ಇಂತಹ ಪ್ರಕರಣಗಳಲ್ಲಿ ಅಧಿಕಾರಿಗಳು ಗಾಂಭಿರ್ಯತೆಯಿಂದ ತೆಗೆದುಕೊಳ್ಳದೇ ಕೆಲವೇ ದಿನಗಳಲ್ಲಿ ಮರೆತು ಹೋಗುವುದು ಅತ್ಯಂತ ಖಂಡನೀಯ. ಹೆಣ್ಣು ಮಕ್ಕಳ ಕುಟುಂಬ, ಬಂಧುಗಳು ಮತ್ತು ಸಮಾಜ ಅತ್ಯಂತ ನೋವು ಪಡುವ ಈ ಘಟನೆಯಲ್ಲಿ ಮೃತ ಕುಟುಂಬಕ್ಕೆ ರಾಜ್ಯ ಸರ್ಕಾರ ಸೂಕ್ತ ಪರಿಹಾರ ಕೊಡಬೇಕು ಮತ್ತು ನ್ಯಾಯ ದೊರಕಿಸಿ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನೂ ಮಾಜಿ ಸಚಿವ ಬಿಸಿ ಪಾಟೀಲ್ ಅವರು ಮಾಸೂರು ಗ್ರಾಮದ ಮೃತ ಸ್ವಾತಿ ಮನೆಗೆ ಭೇಟಿ ನೀಡಿದರು. ಆಕೆಯ ತಾಯಿಗೆ ಸಾಂತ್ವನ ಹೇಳಿ, ಪ್ರಕರಣದ ಮಾಹಿತಿ ಪಡೆದರು. ಪ್ರಕರಣದಲ್ಲಿ ಯಾರೇ ಭಾಗಿಯಾದರೂ ಬಂಧನ ಮಾಡಿ ಶಿಕ್ಷೆ ಕೊಡಿಸುವಂತೆ ಒತ್ತಾಯ ಮಾಡಿದ್ದಾರೆ. ಇದನ್ನೂ ಓದಿ: ಶಾಸಕರಿಗೆ ಡಿನ್ನರ್ – ಡಿಕೆಶಿ ಜೊತೆ ಮೂವರು ಸಚಿವರು ಮುನಿಸು?
ಮೃತ ಸ್ವಾತಿ ರಾಣೆಬೆನ್ನೂರಿನ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು. ಸ್ವಾತಿಗೆ ಹೋರಿ ಬೆದರಿಸೋ ಸ್ಪರ್ಧೆಯ ಕ್ರೇಜ್ ಇತ್ತು. ಕೊಲೆ ಮಾಡಿದ ನಯಾಜ್, ದುರ್ಗಾಚಾರಿ, ವಿನಯ್ ಕೂಡಾ ಹೋರಿ ಹಬ್ಬದ ಕ್ರೇಜ್ ಇಟ್ಟುಕೊಂಡಿದ್ದರು. ಹೋರಿ ಬೆದರಿಸೋ ಸ್ಪರ್ಧೆಯೊಂದರಲ್ಲಿ ಪರಿಚಯವಾಗಿದ್ದ ಮೂವರ ಜೊತೆ ಸ್ವಾತಿ ಗೆಳೆತನ ಬೆಳೆಸಿಕೊಂಡಿದ್ದಳು. ಈಗ ಮೂವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದು, ಪ್ರಕರಣವು ಸುಖ್ಯಾಂತ ಕಂಡಿದೆ.
– ಸ್ನೇಹಿತರ ಜೊತೆಗೂಡಿ ಪ್ರೇಯಸಿ ಹತ್ಯೆಗೆ ಸ್ಕೆಚ್ ಹಾಕಿದ್ದು ಹೇಗೆ?
ಹಾವೇರಿ: ಇಲ್ಲಿನ ಹಿಂದೂ ಯುವತಿಯ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮದುವೆಗೆ ನಿರಾಕರಿಸಿದ ಯುವಕನನ್ನು ಯುವತಿ ತರಾಟೆಗೆ ತೆಗೆದುಕೊಂಡಿದ್ದಳು. ಇದರಿಂದ ಕೋಪ ಗೊಂಡ ಯುವಕ ಆತನ ಸ್ನೇಹಿತರ ಜೊತೆಗೂಡಿ ಆಕೆಯನ್ನ ಕೊಲೆ ಮಾಡಿರುವುದು ಪೊಲೀಸರ ತನಿಖೆಯಲ್ಲಿ ತಿಳಿದಿದೆ.
ಬದುಕಿ ಬಾಳಬೇಕಿದ್ದ ಯುವತಿ ತುಂಗಭದ್ರಾ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಮೊದಲಿಗೆ ಯುಡಿಆರ್ ದಾಖಲಿಸಿ ತನಿಖೆ ಆರಂಭಿಸಿದ ಪೊಲಿಸರಿಗೆ ಹಂತಕರ ಸುಳಿವು ಸಿಕ್ಕಿದೆ. ಹಾವೇರಿ ಜಿಲ್ಲೆಯಲ್ಲಿ ನಡೆದ ಸ್ವಾತಿ ಎಂಬ ಯುವತಿ ಹತ್ಯೆ ಪ್ರಕರಣ ರಾಜ್ಯದಲ್ಲೇ ದೊಡ್ಡ ಸಂಚಲನ ಮೂಡಿಸಿದೆ. ಇದನ್ನೂ ಓದಿ: ‘ಬ್ರಹ್ಮಾಸ್ತ್ರ’ ಚಿತ್ರದ ನಿರ್ದೇಶಕ ಅಯಾನ್ ತಂದೆ ದೇಬ್ ಮುಖರ್ಜಿ ನಿಧನ
ಏನಿದು ಪ್ರಕರಣ?
ಮಾ. 6ರಂದು ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕು ಪತ್ತೆಪುರ ಬಳಿ ಅಪರಿಚಿತ ಯುವತಿ ಶವ ಪತ್ತೆಯಾಗಿತ್ತು. ಮೊದಲಿಗೆ ಯು.ಡಿ.ಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಹಲಗೇರಿ ಠಾಣೆ ಪೊಲಿಸರು ಯುವತಿ ಶವದ ಮರಣೋತ್ತರ ಪರೀಕ್ಷೆ ಮಾಡಿ ಅಂತ್ಯಸಂಸ್ಕಾರ ಕೂಡಾ ಮಾಡಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಯುವತಿಯನ್ನು ಯಾರೋ ಕೊಲೆ ಮಾಡಿ ತುಂಗಭದ್ರಾ ನದಿಯಲ್ಲಿ ಬಿಸಾಡಿ ಹೋಗಿರೋದು ಗೊತ್ತಾಗಿತ್ತು. ತನಿಖೆ ಆರಂಭಿಸಿದ ಪೊಲೀಸರಿಗೆ ಅದು ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಸ್ವಾತಿ ಎಂಬ ಯುವತಿ ಶವ ಎನ್ನುವುದು ಗೊತ್ತಾಗಿದೆ. ಇದನ್ನೂ ಓದಿ: ಜಿಲ್ಲೆಯಲ್ಲಿ ಆತಂಕ ಹುಟ್ಟಿಸಿದ್ದ ಚಿರತೆ ಸೆರೆ
ಸ್ವಾತಿ ಎಂಬ ಯುವತಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಯಾಜ್ ಹಾಗೂ ವಿನಯ್, ದುರ್ಗಾಚಾರಿ ಎಂಬ ಯುವಕರೇ ಹತ್ಯೆಗೈದವರು ಎಂದು ತನಿಖೆ ವೇಳೆ ಗೊತ್ತಾಗಿದೆ. ಆರೋಪಿ ನಯಾಜ್ ಹಿರೇಕೇರೂರು ತಾಲೂಕು ಹಳೆ ವಿರಾಪುರ ಗ್ರಾಮದವನು. ಕೊಲೆಯಾದ ಸ್ವಾತಿ ಹಾಗೂ ಕೊಲೆ ಮಾಡಿದ ಮೂವರು ಆರೋಪಿಗಳು ಹೋರಿ ಬೆದರಿಸೋ ಸ್ಪರ್ಧೆ ಅಭಿಮಾನಿಗಳಾಗಿದ್ದರು. ಹೋರಿ ಬೆದರಿಸೋ ಸ್ಪರ್ಧೆ ಇದ್ದಲಿಗೆ ಸ್ವಾತಿ ಹಾಜರಾಗ್ತಿದ್ದಳು. ಈ ವೇಳೆ ನಯಾಜ್, ವಿನಯ್, ದುರ್ಗಾಚಾರಿ ನಡುವೆ ಸ್ನೇಹ ಬೆಳೆದಿತ್ತು. ಇದನ್ನೂ ಓದಿ: ಹೋಳಿ ಹುಣ್ಣಿಮೆ – ಶ್ರೀಶೈಲಕ್ಕೆ ಪಾದಯಾತ್ರೆಯ ಮೂಲಕ ತೆರಳುತ್ತಿದ್ದಾರೆ ಭಕ್ತರು
ಬಳಿಕ ಆರೋಪಿ ನಯಾಜ್ ಹಾಗೂ ಸ್ವಾತಿ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ನಯಾಜ್, ಸ್ವಾತಿಯನ್ನು ಬಿಟ್ಟು ತಮ್ಮ ಧರ್ಮದ ಯುವತಿ ಜೊತೆ ಮದುವೆಯಾಗಲು ಬಯಸಿದ್ದ. ಇದರಿಂದ ರೊಚ್ಚಿಗೆದ್ದಿದ್ದ ಸ್ವಾತಿ ನನಗೆ ಮೋಸ ಮಾಡಬೇಡ ಅಂತ ಜಗಳ ಆಡಿದ್ದಳು. ಬಳಿಕ ನಯಾಜ್ ಹಾಗೂ ಸ್ವಾತಿ ನಡುವೆ ಭಿನ್ನಾಭಿಪ್ರಾಯ ಶುರುವಾಗಿತ್ತು. ವಿನಯ್ ಹಾಗೂ ದುರ್ಗಾಚಾರಿಗೆ ಈ ವಿಚಾರವನ್ನು ನಯಾಜ್ ತಿಳಿಸಿದ್ದ. ಸ್ವಾತಿ ಕಾಟ ಹೆಚ್ಚಾಗಿದೆ ಅವಳ ಕಥೆ ಮುಗಿಸಬೇಕು ಎಂದು ಮೂವರೂ ಮಾತಾಡಿಕೊಂಡಿದ್ದರು. ಇದನ್ನೂ ಓದಿ: ಬೆಂಗಳೂರು ಕಸ ಅನ್ನೋದು ಮಾಫಿಯಾ, ಶಾಸಕರೇ ಬ್ಲ್ಯಾಕ್‌ಮೇಲ್ ಮಾಡ್ತಿದ್ದಾರೆ: ಡಿ.ಕೆ ಶಿವಕುಮಾರ್
ಮಾ. 3ರಂದು ಆರೋಪಿಗಳು ಸ್ವಾತಿಗೆ ಫೋನ್ ಮಾಡಿ ಬರ ಹೇಳಿದ್ದರು. ಬಾಡಿಗೆ ಕಾರ್ ಮಾಡಿಕೊಂಡು ಬಂದು ಆಕೆಯನ್ನು ಆರೋಪಿಗಳು ಕಾರಿನಲ್ಲಿ ಕರೆದೊಯ್ದಿದ್ದರು. ರಾಣೇಬೆನ್ನೂರು ಹೊರ ವಲಯದ ಸುವರ್ಣ ಪಾರ್ಕ್ಗೆ ಕರೆದುಕೊಂಡು ಹೋಗಿದ್ದರು. ಬಾಡಿಗೆ ಕಾರಿನಲ್ಲಿ ರಟ್ಟಿಹಳ್ಳಿ ಬಳಿ ಇರುವ ಕಬ್ಬಿಣಕಂತಿ ಮಠದ ಬಳಿ ಪಾಳು ಬಿದ್ದಿರುವ ತರಳಬಾಳು ಶಾಲೆಗೆ ಕರೆದೊಯ್ದು ಕುತ್ತಿಗೆಗೆ ಟವಲ್ ಹಾಕಿ ಉರುಳು ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಬಳಿಕ ಕಾರಿನ ಡಿಕ್ಕಿಯಲ್ಲಿ ಶವ ಸಾಗಿಸಿದ್ದು, ತುಂಗಭದ್ರಾ ನದಿಗೆ ಶವ ಬಿಸಾಡಿದ್ದರು. ಇದನ್ನೂ ಓದಿ: ವ್ಯಕ್ತಿಯ ಬರ್ಬರ ಹತ್ಯೆ – ಜೊತೆಗಿದ್ದ ಪ್ರೇಯಸಿ ಮೇಲೆಯೇ ಅನುಮಾನ
ರಾಣೆಬೆನ್ನೂರು ತಾಲೂಕು ಪತ್ತೆಪುರ ಬಳಿ ಪತ್ತೆಯಾಗಿದ್ದ ಸ್ವಾತಿ ಶವ ಪತ್ತೆಯಾಗುತ್ತಲೇ ಪೊಲೀಸರು ತನಿಖೆ ಶುರು ಮಾಡಿಕೊಂಡಿದ್ದರು. ಆರೋಪಿ ನಯಾಜ್‌ನನ್ನು ಪೊಲೀಸರು ಬಂಧಿಸಿದ್ದು, ವಿನಯ್ ಹಾಗೂ ದುರ್ಗಾಚಾರಿ ಪತ್ತೆಗಾಗಿ ಬಲೆ ಬೀಸಿದ್ದಾರೆ.
ಹಾವೇರಿ: ರಾಣೇಬೆನ್ನೂರಿನ (Ranebennuru) ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಯುವತಿಯ ಹತ್ಯೆಯಾಗಿದ್ದು, ಮೂವರ ಮೇಲೆ ಶಂಕೆ ವ್ಯಕ್ತವಾಗಿದೆ. ಪ್ರಕರಣ ಸಂಬಂಧ ಓರ್ವನನ್ನು ಬಂಧಿಸಲಾಗಿದ್ದು, ಬಂಧಿತನನ್ನು ನಯಾಜ್ ಎಂದು ಗುರುತಿಸಲಾಗಿದೆ.
ಹತ್ಯೆಯಾದ ಯುವತಿಯನ್ನು ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಸ್ವಾತಿ ರಮೇಶ್ ಬ್ಯಾಡಗಿ (22) ಎಂದು ಗುರುತಿಸಲಾಗಿದೆ. ಮಾ.6 ರಂದು ಯುವತಿಯ ಮೃತದೇಹ ರಾಣೇಬೆನ್ನೂರು ತಾಲೂಕಿನ ಪತ್ತೇಪುರ ಗ್ರಾಮದ ತುಂಗಭದ್ರಾ ನದಿ ಬಳಿ ಪತ್ತೆಯಾಗಿತ್ತು. ಮೊದಲು ಅಪರಿಚಿತ ಯುವತಿಯ ಶವ ಎಂದು ಹಲಗೇರಿ ಪೊಲೀಸರು ಘೋಷಿಸಿದ್ದರು. ಬಳಿಕ ವಾರಸುದಾರರು ಯಾರೂ ಇಲ್ಲದ ಹಿನ್ನೆಲೆ, ಮರಣೋತ್ತರ ಪರೀಕ್ಷೆ ನಡೆಸಿ ಕಾನೂನು ಪ್ರಕಾರ ಸ್ವಾತಿ ಶವವನ್ನು ಹೂತು ಹಾಕಲಾಗಿತ್ತು.
ಮರಣೋತ್ತರ ಪರೀಕ್ಷೆ ವೇಳೆ ಸ್ವಾತಿ ಹತ್ಯೆಯಾಗಿರುವುದು ದೃಢಪಟ್ಟಿದೆ. ಬಳಿಕ ತನಿಖೆ ತೀವ್ರಗೊಳಿಸಿದ ಹಲಗೇರಿ ಪೊಲೀಸರು, ಮಾ.3 ರಂದು ಕಾಣೆಯಾಗಿದ್ದ ಯುವತಿಯ ಗುರುತನ್ನು ಪತ್ತೆಹಚ್ಚಿದ್ದರು. ಇನ್ನೂ ಸ್ವಾತಿ ಪೋಷಕರು, ಹಿರೇಕೇರೂರು ಪೊಲೀಸ್ ಠಾಣೆಯಲ್ಲಿ ಆಕೆ ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದರು ಎಂದು ತಿಳಿದು ಬಂದಿದೆ.
ಸ್ವಾತಿ ತಂದೆ ಮೃತಪಟ್ಟಿದ್ದು, ತಾಯಿ ಜೊತೆ ವಾಸವಿದ್ದರು. ಮೂವರ ಮೇಲೆ ಶಂಕೆ ವ್ಯಕ್ತವಾಗಿದ್ದು, ತನಿಖೆಯನ್ನು ಹಲಗೇರಿ ಪೊಲೀಸರು ತೀವ್ರಗೊಳಿಸಿದ್ದಾರೆ. ಹಿಂದೂ ಸಂಘಟನೆಗಳು ಸಾಮಾಜಿಕ ಜಾಲತಾಣದಲ್ಲಿ ಜಸ್ಟೀಸ್ ಫಾರ್ ಸ್ವಾತಿ ಅಭಿಯಾನ ಆರಂಭಿಸಿದ್ದು, ಹಂತಕರನ್ನು ಪತ್ತೆ ಹಚ್ಚಿ, ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ್ದಾರೆ.
ಹಾವೇರಿ/ ಶಿವಮೊಗ್ಗ/ ತುಮಕೂರು/ ಬೆಂಗಳೂರು: ಬೆಂಗಳೂರು (Bengaluru) ಸೇರಿ ರಾಜ್ಯದ ವಿವಿಧೆಡೆ ಬೆಳಗ್ಗೆಯೇ ಲೋಕಾಯುಕ್ತ (Lokayukta) ಅಧಿಕಾರಿಗಳು ಅಧಿಕಾರಿಗಳಿಗೆ ಶಾಕ್ ಕೊಟ್ಟಿದ್ದಾರೆ. ಬೆಂಗಳೂರು, ಹಾವೇರಿ (Haveri), ಶಿವಮೊಗ್ಗ (Shivamogga) ಹಾಗೂ ತುಮಕೂರಿನ (Tumakuru) ಕೆಲವು ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ಬೆಂಗಳೂರಿನಲ್ಲಿ ಎರಡು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಸ್ಕಾಂನ ಟೆಕ್ನಿಕಲ್ ನಿರ್ದೇಶಕ ರಮೇಶ್ ಅವರ ಬಸವೇಶ್ವರ ನಗರದ ಮನೆ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲದೆ ಇಂಡಸ್ಟ್ರೀಸ್ ಆಂಡ್ ಬಾಯ್ಲರ್ ಇಲಾಖೆಯ ಉಪನಿರ್ದೇಶಕ ಟಿವಿ ನಾರಾಯಣಪ್ಪ ಅವರ ಮನೆ ಮೇಲೆ ಸಹ ಲೋಕಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಬ್ಬರೂ ಅಧಿಕಾರಿಗಳು ಆದಾಯಕ್ಕೂ ಮೀರಿ ಆಸ್ತಿ ಗಳಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ. ದಾಳಿ ವೇಳೆ ಮಹತ್ವದ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮಹಿಳೆಯರಿಗೆ ಉಚಿತ ಬಸ್ ಸಂಚಾರ ಭಾಗ್ಯ ಫಿಕ್ಸ್ – ಸಾರಿಗೆ ಇಲಾಖೆ ಲೆಕ್ಕಾಚಾರ ಏನು?
ಹಾವೇರಿಯ ನಿರ್ಮಿತಿ ಕೇಂದ್ರದ ಇಂಜಿನಿಯರ್ ವಾಗೀಶ ಶೆಟ್ಟರ್ ಅವರ ರಾಣೇಬೆನ್ನೂರಿನಲ್ಲಿರುವ (Ranebennuru )ಮನೆ ಮತ್ತು ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ನಿರ್ಮಿತಿ ಕೇಂದ್ರ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಲ್ಲದೆ ಮಹತ್ವದ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ತುಮಕೂರಿನ ಕೆಐಎಡಿಬಿ ಅಧಿಕಾರಿ ನರಸಿಂಹಮೂರ್ತಿಯವರ ಆರ್‍ಟಿ ನಗರದ ಮನೆ ಮೇಲೆ ಲೋಕಾ ದಾಳಿ ನಡೆಸಿದೆ. ಈ ವೇಳೆ ಹಲವಾರು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳ ತಂಡ ಪರಿಶೀಲನೆ ನಡೆಸುತ್ತಿದೆ. ಲೋಕಾಯುಕ್ತ ಡಿಎಸ್‍ಪಿ ಮಂಜುನಾಥ್ ಹಾಗೂ ಹರೀಶ್ ನೇತೃತ್ವದಲ್ಲಿ ದಾಳಿ ನಡೆದಿದೆ.
ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಆರೋಪ ಎದುರಿಸುತ್ತಿರುವ ತುಂಗಾ ಮೇಲ್ದಂಡೆ ಯೋಜನೆಯ ಇಂಜಿನಿಯರ್ ಪ್ರಶಾಂತ್ ಮನೆ ಮೇಲೆ ಸಹ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿರುವ ಅಧಿಕಾರಿಯೊಬ್ಬರ ಮನೆಯ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಲೋಕಾಯುಕ್ತ ಎಸ್‍ಪಿ ವಾಸುದೇವರಾವ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಇದನ್ನೂ ಓದಿ: ಬಿಹಾರದಲ್ಲಿ ಮೋದಿ ದಾಳಿಗೆ ಸಂಚು ಪ್ರಕರಣ – ದಕ್ಷಿಣ ಕನ್ನಡ ಜಿಲ್ಲೆಯ 16 ಕಡೆ ಎನ್‌ಐಎ ದಾಳಿ
ಆರ್ ಶಂಕರ್ ಅವರು ಎಂಎಲ್‍ಸಿ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷೇತರರಾಗಿ ಅದೀಕೃತವಾಗಿ ಕಣಕ್ಕಿಳಿಯಲು ನಿರ್ಧಾರ ಮಾಡಿದ್ದಾರೆ. ನಾಳೆ ಬೆಂಗಳೂರಿನಿಂದ ರಾಣೇಬೆನ್ನೂರಿಗೆ ವಾಪಸ್ ಆಗಲಿದ್ದಾರೆ.
ಹಾವೇರಿ: ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ವಿವಿಧ ಅಧಿಕಾರಿಗಳನ್ನೊಳಗೊಂಡ ತಂಡ ರಾಣೇಬೆನ್ನೂರು ನಗರದ ಆಯ್ದ 18 ಅಂಗಡಿಗಳ ಮೇಲೆ ದಾಳಿ ನಡೆಸಿ ರೂ.2,250 ದಂಡ ವಸೂಲಿ ಮಾಡಿದೆ.
ತಂಬಾಕು ನಿಯಂತ್ರಣ ಕಾಯ್ದೆ-2003ರ ವಿರುದ್ಧವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವ ಮತ್ತು ನೇರ-ಪರೋಕ್ಷವಾಗಿ ತಂಬಾಕು ಜಾಹೀರಾತು ಪ್ರದರ್ಶನ, ಶಾಲಾ-ಕಾಲೇಜು ಆವರಣದ 100 ಮೀಟರ್ ಅಂತರದೊಳಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಅಂಗಡಿ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಅಲ್ಲದೆ ತಂಬಾಕು ನಿಯಂತ್ರಣ ಕಾಯ್ದೆ-2003ರ ಅಡಿಯಲ್ಲಿ ಕಲಂ-4ರಡಿಯಲ್ಲಿ 14 ಪ್ರಕರಣಗಳಲ್ಲಿ 1850 ರೂ. ಹಾಗೂ ಕಲಂ 6ಬಿ ಅಡಿಯಲ್ಲಿ 4 ಪ್ರಕರಣಳಲ್ಲಿ ರೂ.400 ಸೇರಿ 2,250 ರೂ. ದಂಡ ವಸೂಲಿ ಮಾಡಲಾಗಿದೆ.
ದಾಳಿಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಸಲಹೆಗಾರರಾದ ಡಾ.ಸಂತೋಷ್ ವಿ. ದಡ್ಡಿ ಹಾಗೂ ದಾದಾಪೀರ ಹುಲಿಕಟ್ಟಿ, ಮಹೇಶ ಕುಮ್ಮೂರ, ನಾಗರಜ ಕುಡುಪಲಿ, ತಾಲೂಕು ಆರೋಗ್ಯ ಕಚೇರಿ ಸಿಬ್ಬಂದಿ ಹಾಗೂ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಇತತರು ಉಪಸ್ಥಿತರಿದ್ದರು.
ಹಾವೇರಿ: ಜಿಲ್ಲೆಯ ಹಿರೇಕೆರೂರು ಮತ್ತು ರಾಣೆಬೆನ್ನೂರು ಕ್ಷೇತ್ರಗಳಿಗೆ ನಡೆದ ಉಪಚುನಾವಣೆ ಫಲಿತಾಂಶ ನಾಳೆ(ಸೋಮವಾರ) ಪ್ರಕಟಗೊಳ್ಳಲಿದೆ.
ಹಾವೇರಿ ತಾಲೂಕಿನ ದೇವಗಿರಿ ಗ್ರಾಮದಲ್ಲಿರೋ ಸರ್ಕಾರಿ ಎಂಜನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ನಡೆಯಲಿದೆ. ಮತ ಎಣಿಕೆಗೆ ಈಗಾಗಲೇ ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಬೆಳಗ್ಗೆ ಅಭ್ಯರ್ಥಿಗಳು ಅಥವಾ ಅವರ ಏಜೆಂಟ್ ರ ಸಮ್ಮುಖದಲ್ಲಿ ಕೊಠಡಿ ಓಪನ್ ಮಾಡಿ ಮತ ಎಣಿಕೆ ಕಾರ್ಯ ನಡೆಯಲಿದೆ. ಆರಂಭದಲ್ಲಿ ಅಂಚೆ ಮತಗಳನ್ನ ಎಣಿಕೆ ಮಾಡಲಿದ್ದು, ನಂತರದಲ್ಲಿ ಇವಿಎಂಗಳಲ್ಲಿನ ಮತ ಎಣಿಕೆ ನಡೆಯಲಿದೆ. ಇದನ್ನೂ ಓದಿ: ಮತ ಎಣಿಕೆಗೆ ಸಕಲ ಸಿದ್ಧತೆ – ಕೆಆರ್‌ಪೇಟೆಯಲ್ಲಿ 144 ಸೆಕ್ಷನ್ ಜಾರಿ
ಹಿರೇಕೆರೂರು ಕ್ಷೇತ್ರದ ಮತ ಎಣಿಕೆ 17 ರೌಂಡ್ಸ್ ಗಳಲ್ಲಿ ಮತ್ತು ರಾಣೆಬೆನ್ನೂರು ಕ್ಷೇತ್ರದ ಮತ ಎಣಿಕೆ 19 ರೌಂಡ್ಸ್ ಗಳಲ್ಲಿ ನಡೆಯಲಿದೆ. ಮತ ಎಣಿಕೆಗೆ ಪ್ರತಿ ಕೊಠಡಿಯಲ್ಲಿ 14 ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿದೆ. ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಯಾರಿಗೆ ಗೆಲುವು ಅನ್ನೋದು ಸ್ಪಷ್ಟವಾಗಲಿದೆ.
ಹಾವೇರಿ: ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಜನ್ಮದಿನ ಆಚರಿಸಿಕೊಂಡು 20 ದಿನಗಳು ಕಳೆದ್ರೂ ಟ್ರೈಸಿಕಲ್ ವಿತರಣೆ ಮಾಡದೇ ಸುದ್ದಿಯಾಗಿದ್ರು. ಈಗ ಅವರ ಬೆಂಬಲಿಗರು ಮತ್ತೊಂದು ಯಡವಟ್ಟು ಮಾಡಿದ್ದಾರೆ.
ಕೋಳಿವಾಡ ಹುಟ್ಟುಹಬ್ಬ ಮುಗಿದು ಒಂದು ತಿಂಗಳು ಕಳೆದ ನಂತರ ರಾಣೇಬೆನ್ನೂರು ತಾಲೂಕಿನಲ್ಲಿ ಹುಟ್ಟುಹಬ್ಬದ ಸೀರೆಗಳನ್ನ ಹಂಚಿಕೆ ಮಾಡುತ್ತಿದ್ದಾರೆ. ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಊದಗಟ್ಟಿ ಗ್ರಾಮದಲ್ಲಿ ಬೇಕಾಬಿಟ್ಟಿ ಸೀರೆಗಳನ್ನ ಮನೆ ಮುಂದೆ ಎಸೆದು ಹೋಗಿದ್ದಾರೆ. ಇದು ಸ್ಥಳೀಯರ ಅಕ್ರೋಶಕ್ಕೆ ಕಾರಣವಾಗಿದೆ.
ಹುಟ್ಟುಹಬ್ಬ ಮುಗಿದು ಒಂದು ತಿಂಗಳು ಕಳೆದಿದೆ. ಉಳಿದ ಸೀರೆಗಳನ್ನ ಮನೆಯವರ ಕೈಗೆ ನೀಡದೆ ಬಾಗಿಲ ಬಳಿ ಎಸೆದು ಹೋಗಿದ್ದಾರೆ. ಹೀಗೆ ಸೀರೆಯನ್ನ ಎಸೆದು ಸ್ಪೀಕರ್ ಸಾಹೇಬ್ರರಿಗೆ ಅವರ ಬೆಂಬಲಿಗರೇ ಅವಮಾನ ಮಾಡಿದ್ದಾರೆ ಎಂದು ರಾಣೇಬೆನ್ನೂರು ಗ್ರಾಮೀಣ ಠಾಣೆ ಹಾಗೂ ತಹಶೀಲ್ದಾರ್‍ಗೆ ದೂರಿದ್ದಾರೆ. ಹಾಗಾದ್ರೆ ಸೀರೆ ಹಂಚುವ ನೆಪದಲ್ಲಿ ಮುಂಬರುವ ಚುನಾವಣೆಗೆ ಸಿದ್ಧತೆ ನಡೆಸಿದ್ದಾರಾ ಎಂಬ ಪ್ರಶ್ನೆಯೂ ಎದ್ದಿದೆ.