Tag: Ranebennur

  • ಗೃಹಪ್ರವೇಶದಲ್ಲಿ ಊಟ ಮಾಡಿದ 30 ಜನ ಅಸ್ವಸ್ಥ

    ಗೃಹಪ್ರವೇಶದಲ್ಲಿ ಊಟ ಮಾಡಿದ 30 ಜನ ಅಸ್ವಸ್ಥ

    ಹಾವೇರಿ: ಗೃಹಪ್ರವೇಶ ಕಾರ್ಯಕ್ರಮದಲ್ಲಿ ಊಟ ಮಾಡಿದ 30ಕ್ಕೂ ಅಧಿಕ ಜನ ಅಸ್ವಸ್ಥಗೊಂಡ ಘಟನೆ ರಾಣೇಬೆನ್ನೂರಿನ (Ranebennur) ತಿಮ್ಮೇನಹಳ್ಳಿಯಲ್ಲಿ ನಡೆದಿದೆ.

    ಗ್ರಾಮದ ಶೇಖಪ್ಪ ಎಂಬುವವರ ಮನೆಯ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಅಸ್ವಸ್ಥಗೊಂಡ ಜನರನ್ನು ಕೂಡಲೇ ರಾಣೇಬೆನ್ನೂರಿನ ಸರ್ಕಾರಿ ಆಸ್ಪತ್ರೆಗೆ (Hospital) ದಾಖಲಿಸಲಾಗಿದೆ. ಕೆಲವರು ಚೇತರಿಸಿಕೊಂಡಿದ್ದಾರೆ. ಇನ್ನೂ ಕೆಲವರಲ್ಲಿ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು, ಚಿಕಿತ್ಸೆ ಮುಂದುವರೆಸಲಾಗುತ್ತಿದೆ. ಇದನ್ನೂ ಓದಿ: ಮುಸ್ಲಿಂ ವಿದ್ಯಾರ್ಥಿ ಕೆನ್ನೆಗೆ ಕಪಾಳಮೋಕ್ಷ – ಎಲ್ಲವನ್ನೂ ವೀಡಿಯೋ ಮಾಡಿದ್ರೆ ಶಿಕ್ಷಕರು ಪಾಠ ಕಲಿಸೋದು ಹೇಗೆ: ಶಿಕ್ಷಕಿ ಪ್ರಶ್ನೆ

    ಅಸ್ವಸ್ಥಗೊಂಡವರಲ್ಲಿ ಕೆಲವರಿಗೆ ಜ್ವರ, ಕೆಲವು ಜನರಿಗೆ ವಾಂತಿಯಾಗಿದೆ. ಘಟನೆಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಊಟದಲ್ಲಿ ಏನಾದರೂ ಬಿದ್ದಿರಬಹುದು ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಕುಟುಂಬದ ಸದಸ್ಯರನ್ನು ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ಎರಡೂವರೆ ಗಂಟೆಯಲ್ಲಿ 9 ಎಕರೆ ಜಮೀನು ಹದ: ಜೋಡೆತ್ತುಗಳಿಗೆ ಮೆಚ್ಚುಗೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಡಿಪೋ ಆವರಣದಲ್ಲಿ ನೇಣಿಗೆ ಶರಣಾದ ಸಾರಿಗೆ ನೌಕರ

    ಡಿಪೋ ಆವರಣದಲ್ಲಿ ನೇಣಿಗೆ ಶರಣಾದ ಸಾರಿಗೆ ನೌಕರ

    ಹಾವೇರಿ: ಬಸ್ ಡಿಪೋದ (Bus Depot) ಆವರಣದಲ್ಲಿಯೇ ಸಾರಿಗೆ ನೌಕರ (Transport Employee) ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ (Suicide) ಶರಣಾದ ಘಟನೆ ಹಾವೇರಿ (Haveri) ಜಿಲ್ಲೆ ರಾಣೇಬೆನ್ನೂರಿನ (Ranebennur) ಬಸ್ ಡಿಪೋದಲ್ಲಿ ನಡೆದಿದೆ.

    ಆತ್ಮಹತ್ಯೆಗೆ ಶರಣಾದ ಚಾಲಕ ಕಂ ನಿರ್ವಾಹಕನನ್ನ ಮಲ್ಲಿಕಾರ್ಜುನ ಬಡಿಗೇರ (49) ಎಂದು ಗುರುತಿಸಲಾಗಿದೆ. ಮೂಲತಃ ವಿಜಯಪುರ (Vijayapura) ಜಿಲ್ಲೆ ಮುದ್ದೇಬಿಹಾಳ ತಾಲೂಕು ದಾವಳಗಿ ಗ್ರಾಮದ ನಿವಾಸಿಯಾಗಿದ್ದ ಇವರು, ಕಳೆದ ಹತ್ತು ವರ್ಷದಿಂದ ಹಾವೇರಿ ಜಿಲ್ಲೆ ರಾಣೇಬೆನ್ನೂರು ಡಿಪೋದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಇದನ್ನೂ ಓದಿ: ಎಲ್ಲಾ ರೀತಿಯಲ್ಲೂ ಬಳಸಿಕೊಂಡು ಮದುವೆ ನಿರಾಕರಣೆ- ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ ದುರ್ಮರಣ

    ಕಳೆದ ಎರಡು ವರ್ಷಗಳ ಹಿಂದೆ ಹೃದಯ ಆಪರೇಷನ್ ಸಹ ಆಗಿತ್ತು. ಕಳೆದ ಒಂದು ವಾರದಿಂದ ಕರ್ತವ್ಯಕ್ಕೆ ಗೈರು ಹಾಜರಾಗಿದ್ದರು ಎನ್ನಲಾಗಿದೆ. ಆದರೆ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಹಲಗೇರಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಹಲಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: 20ರ ಯುವಕನಿಗೆ ಚಾಕು ಇರಿತ- ಪೊಲೀಸರ ಮುಂದೆ ಮೃತನ ತಾಯಿ ಹೇಳಿದ್ದೇನು?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟಿಪ್ಪರ್, ಕಾರು ಮಧ್ಯೆ ಭೀಕರ ಅಪಘಾತ – ಇಬ್ಬರು ಸಾವು, ಇಬ್ಬರಿಗೆ ಗಂಭೀರ ಗಾಯ

    ಟಿಪ್ಪರ್, ಕಾರು ಮಧ್ಯೆ ಭೀಕರ ಅಪಘಾತ – ಇಬ್ಬರು ಸಾವು, ಇಬ್ಬರಿಗೆ ಗಂಭೀರ ಗಾಯ

    ಹಾವೇರಿ: ಟಿಪ್ಪರ್ ಮತ್ತು ಕಾರಿನ ನಡುವೆ ಭೀಕರ ಅಪಘಾತ (Accident) ಉಂಟಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪಿದ್ದು, ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಹಾವೇರಿಯಲ್ಲಿ (Haveri) ನಡೆದಿದೆ.

    ಜಿಲ್ಲೆಯ ರಾಣೇಬೆನ್ನೂರು (Ranebennur) ತಾಲೂಕಿನ ಅಂಕಸಾಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಮಾಲತೇಶ ಕುಂದ್ರಳ್ಳಿ (21), ಮಾಲತೇಶ (24) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಾಣೇಬೆನ್ನೂರಿನ ಲಲಿತಾ ಪಾಟೀಲ ಹಾಗೂ ನಾಗರಾಜ್ ಎಂಬವರಿಗೆ ಗಂಭೀರ ಗಾಯಗಳಾಗಿದ್ದು, ದಾವಣಗೆರೆಯ (Davanagere) ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಎಣ್ಣೆ ಹೊಡಿಯೋ ವಿಚಾರಕ್ಕೆ ಗಲಾಟೆ- ಬಾರ್ ಕ್ಯಾಶಿಯರ್ ಹತ್ಯೆ

    ತಡರಾತ್ರಿ ಅಪಘಾತ ನಡೆದಿದ್ದು, ರಾಣೇಬೆನ್ನೂರು ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ

  • ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ ಆರ್. ಶಂಕರ್

    ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ ಆರ್. ಶಂಕರ್

    ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ (BJP) ಟಿಕೆಟ್ ತಪ್ಪಿದ ಬೆನ್ನಲ್ಲೇ ರಾಣಿಬೆನ್ನೂರು (Ranebennur) ಕ್ಷೇತ್ರದ ಆಕಾಂಕ್ಷಿಯಾಗಿದ್ದ ಆರ್. ಶಂಕರ್ (R Shankar) ಅವರು ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

    ಬಿಜೆಪಿಯಲ್ಲಿ (BJP) ಟಿಕೆಟ್ ಭಿನ್ನಮತ ಸ್ಫೋಟ ಬೆನ್ನಲ್ಲೇ ಆರ್. ಶಂಕರ್ ಅವರು ಬೆಂಬಲಿಗರೊಂದಿಗೆ ಬುಧವಾರ ವಿಧಾನಸೌಧಕ್ಕೆ (Vidhana Soudha) ಆಗಮಿಸಿ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ಈ ವೇಳೆ ಹೊರಟ್ಟಿ (Basavaraj Horatti) ರಾಜೀನಾಮೆಯನ್ನು ಅಂಗೀಕರಿಸಿದರು.

    ರಾಜೀನಾಮೆಗೂ ಮುಂಚಿತವಾಗಿ ಮಾತನಾಡಿದ್ದ ಅವರು, ಈ ಬಾರಿಯ ಚುನಾವಣೆಗೆ ಸ್ಪರ್ಧಿಸುವುದಂತು ಖಚಿತ. ಆದರೆ ಯಾವ ಪಕ್ಷವೋ ಅಥವಾ ಪಕ್ಷೇತರವಾಗಿ ಸ್ಪರ್ಧಿಸಬೇಕೋ ಎನ್ನುವುದನ್ನು ಇನ್ನೂ ನಿರ್ಧರಿಸಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಮಗಳು ಬಿಜೆಪಿ ಸೇರಿದ್ದು ಎದೆಗೆ ಚೂರಿ ಇರಿದಂತಾಗಿದೆ – ಕಾಗೋಡು ತಿಮ್ಮಪ್ಪ

    ಇದೇ ವೇಳೆ ಬಿಜೆಪಿ ವಿರುದ್ಧ ಕಿಡಿಕಾರಿದ ಅವರು, ನನ್ನನ್ನ ಪಕ್ಷಕ್ಕೆ ಕರೆದುಕೊಂಡ ಹೋದವರು ಯಾರು ಈಗ ಮಾತಾನಾಡ್ತಿಲ್ಲ. ಕಮಿಷನ್, ಜೂಜು, ಆರೋಪ ಇರೋವವರಿಗೆ ಟಿಕೆಟ್ ಕೊಟ್ಟಿದ್ದಾರೆ. ಸರ್ಕಾರ ಬರೋಕೆ ಕಾರಣವಾದವನು ನಾನು. ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಅನ್ನೋ ಸಂದರ್ಭದಲ್ಲಿ ಕೆಲಸ ಮಾಡಿದವನು ನಾನು. ಆದರೆ ಈ ರೀತಿ ನಡೆಸಿಕೊಂಡದ್ದು ಸರಿಯಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಹಾಸನದಲ್ಲಿ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್‌ ಕೊಡ್ತೀನಿ ಅಂದ್ರೂ ಓಕೆ – ರೇವಣ್ಣ

  • ಎಂಗೇಜ್ಮೆಂಟ್ ಆಗಿದ್ದವಳಿಂದಲೇ ಹತ್ಯೆಗೆ ಯತ್ನ- ಪ್ರಾಣಾಪಾಯದಿಂದ ಯುವಕ ಪಾರು

    ಹಾವೇರಿ: ಭಾವಿ ಪತ್ನಿ ಆಗಬೇಕಿದ್ದವಳೇ ಚಾಕುವಿನಿಂದ ಕತ್ತು ಕೊಯ್ದು ಯುವಕನ ಹತ್ಯೆ (Murder) ಮಾಡಲು ಯತ್ನಿಸಿದ ಘಟನೆ ಹಾವೇರಿಯಲ್ಲಿ (Haveri) ನಡೆದಿದೆ.

    ಹರಪನಹಳ್ಳಿ ತಾಲೂಕಿನ ಮೈದೂರ ಗ್ರಾಮದ ನಿವಾಸಿ ದೇವೇಂದ್ರಗೌಡ ಮಂಡಗಟ್ಟಿ (30) ಹಲ್ಲೆಗೊಳಗಾದ ಯುವಕ. ಪ್ರಥಮ ಪಿಯುಸಿ ಪರೀಕ್ಷೆ ಮುಗಿಸಿದ್ದ 17 ವರ್ಷದಾಕೆಗೆ ದೇವೇಂದ್ರಗೌಡನ ಜೊತೆಗೆ ವಿವಾಹ ನಿಶ್ಚಿತಾರ್ಥ (Engagement) ಮಾಡಲಾಗಿತ್ತು. ಏಪ್ರಿಲ್ 6 ರಂದು ಆಕೆಯ ಬರ್ತ್‌ಡೇ (Birthday) ಇದ್ದಿದ್ದರಿಂದ ಡ್ರೆಸ್ ಹಾಗೂ ಗಿಫ್ಟ್ ಕೊಡಿಸಬೇಕು ಎಂದು ಬಂದಿದ್ದ ಭಾವಿ ಪತಿಗೆ ಚಾಕುವಿನಿಂದ ಕುತ್ತಿಗೆ ಕೊಯ್ದು ಹತ್ಯೆಗೆ ಯತ್ನಿಸಿದ್ದಾಳೆ. ಹತ್ಯೆಗೆ ಯತ್ನಿಸಿದಾಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಪತಿ ಚಾಕ್ಲೇಟ್ ತಂದು ಕೊಟ್ಟಿಲ್ಲವೆಂದು ಪತ್ನಿ ಆತ್ಮಹತ್ಯೆ 

    ದೇವೇಂದ್ರಗೌಡ ಹಾಗೂ ಹುಡುಗಿ ಬರ್ತ್‌ಡೇ ದಿನ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಮನೆಯಿಂದ ತೆರಳಿದ್ದರು. ನಂತರ ಯುವಕ ಆಕೆಯನ್ನು ರಾಣೇಬೆನ್ನೂರು (Ranebennur) ನಗರದ ಹೊರವಲಯದಲ್ಲಿರುವ ಸ್ವರ್ಣ ಪಾರ್ಕಿಗೆ ಕರೆದುಕೊಂಡು ಹೋಗಿದ್ದ. ಈ ಸಂದರ್ಭ ಹುಡುಗಿ ಆತನ ಕುತ್ತಿಗೆ ಸೀಳಿ ಅಲ್ಲಿಂದ ಪರಾರಿಯಾಗಿದ್ದಾಳೆ. ಪಾರ್ಕಿನಲ್ಲಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಯುವಕನನ್ನು ನೋಡಿದ ದಾರಿಹೋಕರು ತಕ್ಷಣವೇ ಪೊಲೀಸರು ಹಾಗೂ ಅಂಬುಲೆನ್ಸ್‌ಗೆ ತಿಳಿಸಿ ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಂಬುಲೆನ್ಸ್ ಸಿಬ್ಬಂದಿ ಸಿದ್ದು ಎಂಬವರು ಗಾಯಾಳುವಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ (Davangere) ಆಸ್ಪತ್ರೆಗೆ ದಾಖಲಿಸಿದರು. ಇದನ್ನೂ ಓದಿ: ಅಪ್ರಾಪ್ತೆಯ ಅತ್ಯಾಚಾರ- ಕೃತ್ಯದ ವೇಳೆ ಬಳಸಿದ್ದ ಶರ್ಟ್ ಬಣ್ಣದಿಂದ ಆರೋಪಿ ಅರೆಸ್ಟ್

    ಅದೃಷ್ಟವಶಾತ್ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದು, ಯುವಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ. ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ ನಂತರ ಹಲಗೇರಿ ಠಾಣೆ ಪೊಲೀಸರು ಯುವಕನ ಕತ್ತು ಕೊಯ್ದವಳಿಗಾಗಿ ಹುಡುಕಾಟ ನಡೆಸಿದರು. ಕಾರ್ಯಾಚರಣೆ ನಡೆಸಿದ ಕೆಲವೇ ಗಂಟೆಗಳಲ್ಲಿ ಆಕೆಯನ್ನು ಪತ್ತೆಹಚ್ಚಿ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ ಬಳಿಕ ನಿಜಾಂಶ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಕತ್ತು ಹಿಸುಕಿ ಮಗಳನ್ನೇ ಕೊಲೆಗೈದ ತಂದೆ ಅರೆಸ್ಟ್

  • ರಾಜಕೀಯವಾಗಿ ಬೆಳೆಯಬಾರದೆಂದು ನನ್ನ ಮೇಲೆ ದಾಳಿ: ಎಂಎಲ್‌ಸಿ ಆರ್.ಶಂಕರ್

    ರಾಜಕೀಯವಾಗಿ ಬೆಳೆಯಬಾರದೆಂದು ನನ್ನ ಮೇಲೆ ದಾಳಿ: ಎಂಎಲ್‌ಸಿ ಆರ್.ಶಂಕರ್

    ಹಾವೇರಿ: ಚುನಾವಣೆಯಲ್ಲಿ (Election) ಟಿಕೆಟ್ ಕೊಡದಿದ್ದರೆ ನೂರಕ್ಕೆ ಲಕ್ಷ ಪರ್ಸೆಂಟ್ ಪಕ್ಷೇತರನಾಗಿ ಸ್ಪರ್ಧೆ ಮಾಡುವುದು ಖಚಿತ ಎಂದು ವಿಧಾನ ಪರಿಷತ್ ಸದಸ್ಯ (MLC) ಆರ್.ಶಂಕರ್ (R.Shankar)) ಹೇಳಿದರು.

    ವಾಣಿಜ್ಯ ತೆರಿಗೆ ಇಲಾಖೆಯ (Commercial Tax Department) ದಾಳಿ ಪ್ರಕರಣದ ಕುರಿತು ಹಾವೇರಿ (Haveri) ಜಿಲ್ಲೆ ರಾಣೆಬೆನ್ನೂರಿನಲ್ಲಿರುವ (Ranebennur) ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಣಿಜ್ಯ ತೆರಿಗೆ ಇಲಾಖೆಯವರು ಕಾನೂನಿನ ರೀತಿಯಲ್ಲಿ ಪರೀಕ್ಷೆ ಮಾಡಲಿ. ಅದಕ್ಕೆ ಯಾವುದೇ ಅಭ್ಯಂತರವಿಲ್ಲ. ಆದರೆ ಇವರು ಏಕಾಏಕಿ ದಾಳಿ ಮಾಡಿದ್ದಾರೆ. ರಾಣೆಬೆನ್ನೂರಿಗೆ ಕಾಲು ಇಟ್ಟಾಗಿನಿಂದ ದಾನ ಧರ್ಮವನ್ನು ಮಾಡಿದ್ದೇನೆ. ನಾನು ದುಡಿದ ಆದಾಯದಲ್ಲಿ ಒಂದು ಭಾಗವನ್ನು ದಾನ ಧರ್ಮಕ್ಕಾಗಿ ಮೀಸಲಿಟ್ಟಿದ್ದೇನೆ. ಇದು ಹಿಂದಿನಿಂದಲೂ ಮಾಡುತ್ತಿದ್ದೇನೆ. ಅದು ಬಿಟ್ಟು ಚುನಾವಣೆ ಇದೆ ಎಂದು ಜನರಿಗೆ ಕೊಡುತ್ತಿಲ್ಲ. ಇಲ್ಲಿ ಹಗಲು ದರೋಡೆ ನಡೆದಿದೆ. ಅದರ ಬಗ್ಗೆ ಯಾರಿಗೂ ಕಣ್ಣು ಕಾಣುತ್ತಿಲ್ಲ. ರಾಜಕೀಯದಲ್ಲಿ (Politics) ಆರ್.ಶಂಕರ್ ಬೆಳೆಯಲೇಬಾರದು ಎಂಬ ಉದ್ದೇಶದಿಂದ ಈ ರೀತಿಯಾಗಿ ಮುಗಿಸಲು ಮುಂದಾಗಿದ್ದಾರೆ. ವಾಣಿಜ್ಯ ಇಲಾಖೆಯವರು ದಾಖಲೆಗಳನ್ನು ಕೇಳಿದ್ದಾರೆ. ಅದನ್ನು ನೀಡಿದ್ದೇನೆ. ಇದರ ಹಿಂದೆ ರಾಜಕೀಯ ವಿರೋಧಿಗಳ ಪಿತೂರಿಯಿದೆ ಎಂದರು. ಇದನ್ನೂ ಓದಿ: ಶಾಸಕ ಅಭಯ್ ಪಾಟೀಲ್‍ರಿಂದ ಶಾಲಾ ಮಕ್ಕಳಿಗೆ ಐಸ್‍ಕ್ರೀಂ ವಿತರಣೆ  

    ನಾನು ನನ್ನ ಹಣದಲ್ಲಿ ದಾನ ಮಾಡುತ್ತಿದ್ದೇನೆ. ಈ ಕುರಿತು ಯಾವ ದೇವರ ಮೇಲಾದರೂ ಪ್ರಮಾಣ ಮಾಡಲು ಸಿದ್ಧನಿದ್ದೇನೆ. ಕೆಲವರಿಗೆ ರಾಜಕೀಯವೆಂದರೆ ಮೃಷ್ಠಾನ್ನವಾಗಿದೆ. ಆದರೆ ನನಗೆ ರಾಜಕೀಯ ಎಂಬುದು ಸೇವೆ. ಬಿಜೆಪಿ (BJP) ಪಕ್ಷಕ್ಕೆ ಬಂದವರಿಗೆ ಅತಿಥಿ ಸತ್ಕಾರ ಮಾಡಿದರು. ನಮಗೆ ಉಪವಾಸ ಕೆಡವಿದರು. ಇದಕ್ಕೆ ನಾನು ಕಣ್ಣೀರು ಹಾಕಿದ್ದೇನೆ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮುಷ್ಕರಕ್ಕೂ ಮೊದಲೇ ಜಯ – KPTCL, ESCOM ನೌಕರರ ವೇತನ ಹೆಚ್ಚಳ

    ಇನ್ನೂ ಕಾಲ ಮಿಂಚಿಲ್ಲ. ನಮ್ಮನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳಿ. ನಾನು ಚುನಾವಣೆಗೆ ನಿಲ್ಲುವುದಿಲ್ಲ ಎಂದು ಪ್ರಚಾರ ಮಾಡಿದರು. ಮನುಷ್ಯನಿಗೆ ಎಷ್ಟು ಅನ್ಯಾಯ ಮಾಡುವುದು? ಹಂತ ಹಂತದಲ್ಲಿ ಚುಚ್ಚಿ ನನ್ನನ್ನು ಮಾನಸಿಕವಾಗಿ ಕೊಲೆ ಮಾಡಿದ್ದಾರೆ. ಇವರ ಜೊತೆ ಹೋಗಿದ್ದಕ್ಕೆ ಅನರ್ಹ ಎಂದು ಪಟ್ಟ ಕಟ್ಟಿದರು ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಆಣೆ-ಪ್ರಮಾಣದ ಪಾಲಿಟಿಕ್ಸ್ ; ಕರ್ಪೂರ ಹಚ್ಚಿ ಪ್ರಮಾಣ ಮಾಡಿದ ಮಾಗಡಿ ಶಾಸಕರ ಪತ್ನಿ  

    ನನ್ನ ತಾಲೂಕಿನ ಜನತೆ ನನ್ನ ಬಲ. ನನಗೆ ಯಾವುದೇ ವೀಕ್ನೆಸ್ ಇಲ್ಲ. ನಾನು ಬಹಳ ಮುಕ್ತತೆ ಹಾಗೂ ತಾಳ್ಮೆಯಿಂದ ಇದ್ದೇನೆ. ನಮ್ಮಿಂದ ಸರ್ಕಾರ ಬಂದಿದೆ ಎನ್ನುವ ಮಾನವೀಯತೆ ಇದ್ದರೆ ಒಂದು ತಿಂಗಳು ಕಾಯುತ್ತೇನೆ. ನಾನು ದುಡ್ಡು ತೆಗೆದುಕೊಂಡು ಬಿಜೆಪಿಗೆ ಹೋಗಿದ್ದೇನೆ ಎಂದವರು ಬರಲಿ. ನನಗೆ ಹಣ ಕೊಟ್ಟವರೂ ಬರಲಿ. ಬಂದು ಧರ್ಮಸ್ಥಳ (Dharmasthala) ಮಂಜುನಾಥನ ಮೇಲೆ ಆಣೆ ಮಾಡಲಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: 10 ಕ್ಷೇತ್ರಗಳಿಂದ ನನಗೆ ಆಹ್ವಾನ, ರಾಜ್ಯ ರಾಜಕಾರಣದಲ್ಲಿ ಆಸಕ್ತಿ ಇಲ್ಲ: ಡಿ.ಕೆ.ಸುರೇಶ್

    ನನಗೆ ಯಾರು ಟಿಕೆಟ್ ಕೊಟ್ಟರೂ ಪರವಾಗಿಲ್ಲ. ಕೆಂಪೇಗೌಡರು ಕೆರೆ ಕಟ್ಟಿಸಿ ಸೊಸೆಯನ್ನು ಬಲಿ ಕೊಟ್ಟಹಾಗೆ ನನ್ನನ್ನು ಬಲಿ ಕೊಟ್ಟಿದ್ದಾರೆ. ಇದರಲ್ಲಿ ಸ್ಥಳೀಯ ಶಾಸಕರು ಸೇರಿದಂತೆ ಎಲ್ಲಾ ರಾಜಕೀಯ ವಿರೋಧಿಗಳ ಪಿತೂರಿ ಇದೆ. ಟಿಕೆಟ್ ಕೊಟ್ಟರೆ ಪಕ್ಷದಿಂದ, ಇಲ್ಲವಾದರೆ ನನ್ನ ಕ್ಷೇತ್ರದ ಜನರಂತೆ ಪಕ್ಷೇತರನಾಗಿ ಸರ್ಧೆ ಮಾಡುವುದು ಖಚಿತ ಎಂದರು. ಇದನ್ನೂ ಓದಿ: ವಕೀಲ, ಮಹಿಳೆ ಮಧ್ಯೆ ಬೀದಿ ಕಾಳಗ

  • ಎಂಎಲ್‍ಸಿ ಆರ್.ಶಂಕರ್ ಮನೆ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ -ಸಾರ್ವಜನಿಕರಿಗೆ ಹಂಚಲು ತಂದಿದ್ದ ಸೀರೆಗಳು ಪತ್ತೆ

    ಎಂಎಲ್‍ಸಿ ಆರ್.ಶಂಕರ್ ಮನೆ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ -ಸಾರ್ವಜನಿಕರಿಗೆ ಹಂಚಲು ತಂದಿದ್ದ ಸೀರೆಗಳು ಪತ್ತೆ

    ಹಾವೇರಿ: ವಿಧಾನಪರಿಷತ್ ಸದಸ್ಯ (MLC) ಆರ್.ಶಂಕರ್ ಅವರ ರಾಣೇಬೆನ್ನೂರಿನ (Ranebennur) ಬೀರಲಿಂಗೇಶ್ವರ ನಗರದ ಮನೆ ಮೇಲೆ ಮಂಗಳವಾರ ತಡರಾತ್ರಿ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು (Commercial Tax Department Officers) ದಾಳಿ ನಡೆಸಿದ್ದಾರೆ.

    ದಾಳಿಯ ವೇಳೆ ಗೃಹ ಕಚೇರಿಯ ಸಭಾಂಗಣದಲ್ಲಿ ಸಾರ್ವಜನಿಕರಿಗೆ ಹಂಚಲು ತಂದಿದ್ದ ವಸ್ತುಗಳು ಪತ್ತೆಯಾಗಿವೆ. ಶಂಕರ್ ಅವರ ಚಿತ್ರ ಇರುವ ಸೀರೆ ಬಾಕ್ಸ್, ತಟ್ಟೆ, ಲೋಟಾ, ಶಾಲಾ ಹಾಗೂ ಪದವಿ ಕಾಲೇಜು (College) ಮಕ್ಕಳಿಗೆ ಹಂಚಲು ತಂದಿದ್ದ ಸ್ಕೂಲ್ ಬ್ಯಾಗ್‍ಗಳನ್ನು (School bag) ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಇದನ್ನೂ ಓದಿ: ಸಹಜ ಸ್ಥಿತಿಗೆ ಮರಳಿದ ದಶಪಥ ಹೈವೇ ಟೋಲ್

    ಹಾವೇರಿ ಉಪವಿಭಾಗಧಿಕಾರಿ ದಾಖಲೆ ಪತ್ರ, ಬಿಲ್ ಮತ್ತು ಸ್ಟಾಕ್ ಚೆಕ್‍ಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಶಂಕರ್, ಯಾರದ್ದೋ ಕುಮ್ಮಕ್ಕಿನಿಂದ ಈ ದಾಳಿ ನಡೆದಿದೆ. ನಾನು ದುಡಿದ ಹಣವನ್ನು ಸಮಾಜ ಸೇವೆಗೆ (Social service) ಬಳಕೆ ಮಾಡುತ್ತಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಗುರುವಾರ ರಾಜ್ಯಾದ್ಯಂತ 60 ಸಾವಿರ KPTCL ನೌಕರರಿಂದ ಮುಷ್ಕರ

  • ಬೆಳ್ಳಿ, ಬಂಗಾರ ಪದಕ ಗೆದ್ದುಕೊಟ್ಟಿದ್ದ `ಮೈಸೂರು ಹುಲಿ-193′ ಖ್ಯಾತಿಯ ಕೊಬ್ಬರಿ ಹೋರಿ ಸಾವು

    ಬೆಳ್ಳಿ, ಬಂಗಾರ ಪದಕ ಗೆದ್ದುಕೊಟ್ಟಿದ್ದ `ಮೈಸೂರು ಹುಲಿ-193′ ಖ್ಯಾತಿಯ ಕೊಬ್ಬರಿ ಹೋರಿ ಸಾವು

    ಹಾವೇರಿ: ನಾಡ ಪ್ರಸಿದ್ಧಿ ಕೊಬ್ಬರಿ ಹೋರಿ (Kobbari Hori) ಸ್ಪರ್ಧೆಯಲ್ಲಿ ಹೆಸರು ಮಾಡಿ ಬೆಳ್ಳಿ, ಬಂಗಾರ ಪದಕ ಬಹುಮಾನವಾಗಿ ಗೆದ್ದು ತಂದುಕೊಟ್ಟಿದ್ದ `ಮೈಸೂರು ಹುಲಿ-193′ (Mysuru Huli 193) ಖ್ಯಾತಿಯ ಹೋರಿ ಅನಾರೋಗ್ಯದಿಂದ ಸಾವನ್ನಪ್ಪಿದೆ.

    ಹಾವೇರಿ (Haveri) ಜಿಲ್ಲೆ ರಾಣೇಬೆನ್ನೂರು (Ranebennur) ನಗರದ ಕುರುಬಗೇರಿ ಓಣಿಯಲ್ಲಿ ಕೊಬ್ಬರಿ ಹೋರಿ ಸಾವನ್ನಪ್ಪಿದ್ದು, ಸಾವಿರಾರು ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿದೆ. ಮನೆಯ ಮಾಲೀಕರು ಹೋರಿಯನ್ನ ಅಪ್ಪಿಕೊಂಡು ಕಣ್ಣೀರು ಹಾಕಿದ್ದಾರೆ. ಈ ಹೋರಿ ರೈತ (Farmer) ನಾಗಪ್ಪ ಗೂಳಣ್ಣನವರ್ ಎಂಬವರಿಗೆ ಸೇರಿದೆ. ಇದನ್ನೂ ಓದಿ: ಇರಾನ್‌ನಲ್ಲಿ ಪ್ರಬಲ ಭೂಕಂಪ – 7 ಮಂದಿ ಸಾವು, 400ಕ್ಕೂ ಹೆಚ್ಚು ಜನರಿಗೆ ಗಾಯ

    13 ವರ್ಷಗಳಿಂದ ಕೊಬ್ಬರಿ ಹೋರಿ ಸ್ಪರ್ಧೆಯಲ್ಲಿ ಸೊಲಿಲ್ಲದ ಸರದಾರನಾಗಿದ್ದ `ಮೈಸೂರು ಹುಲಿ 193′ ಕೊಬ್ಬರಿ ಹೋರಿಯ ಸ್ಪರ್ಧೆಯಲ್ಲಿ ಬಂಗಾರ, ಬೆಳ್ಳಿ, ಬೈಕ್ ಸೇರಿದಂತೆ ಹಲವಾರು ಬಹುಮಾನಗಳನ್ನು ಗೆದ್ದುಕೊಟ್ಟಿತ್ತು. ಅಲ್ಲದೇ `ಪೀಪಿ ಹೋರಿ’ ಎಂದೂ ಹೆಸರು ಮಾಡಿತ್ತು. ಇದನ್ನೂ ಓದಿ: `ಬಾ ನಲ್ಲೆ ಮಧುಚಂದ್ರಕೆ’ ಸಿನಿಮಾ ಶೈಲಿಯಲ್ಲಿ ಪತ್ನಿ ಕೊಲೆ – ಆರೋಪಿ ಪತಿಯಿಂದ ರೋಚಕ ರಹಸ್ಯ ಬಯಲು

    ಭಾನುವಾರ (ಜ.29) ಮಧ್ಯಾಹ್ನ 1:30ರ ವೇಳೆ ನಗರದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಿ, ಹಿಂದೂ ವಿಧಿವಿಧಾನಗಳ ಮೂಲಕ ಕೊಬ್ಬರಿ ಹೋರಿ ಅಂತ್ಯಕ್ರಿಯೆ ನಡೆಯಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಾಣಿಬೆನ್ನೂರಿನಲ್ಲಿ ಗಣೇಶನ ದಶಾವತಾರ ರೂಪ – ತಿಂಗಳುಪೂರ್ತಿ ಭಕ್ತರಿಗೆ ದರ್ಶನ ಭಾಗ್ಯ

    ರಾಣಿಬೆನ್ನೂರಿನಲ್ಲಿ ಗಣೇಶನ ದಶಾವತಾರ ರೂಪ – ತಿಂಗಳುಪೂರ್ತಿ ಭಕ್ತರಿಗೆ ದರ್ಶನ ಭಾಗ್ಯ

    ಹಾವೇರಿ: ರಾಣೆಬೆನ್ನೂರಿನ ವಂದೇ ಮಾತರಂ ಸೇವಾ ಸಂಸ್ಥೆಯು ಈ ಬಾರಿ ಗಣೇಶ ಹಬ್ಬದ ಪ್ರಯುಕ್ತ ಇಲ್ಲಿನ ನಗರಸಭೆ ಮೈದಾನದಲ್ಲಿ ವಿಘ್ನೇಶ್ವರನ ದಶಾವತಾರ ಮೂರ್ತಿಯನ್ನು ಪ್ರತಿಷ್ಠಾಪಿಸುವ ಮೂಲಕ ಅದ್ಧೂರಿ ಗಣೇಶೋತ್ಸವ ಆಚರಣೆ ಮಾಡುತ್ತಿದೆ.

    ಕಳೆದ 14 ವರ್ಷಗಳಿಂದ ವಂದೇ ಮಾತರಂ ಸೇವಾ ಸಂಸ್ಥೆ ಅಧ್ಯಕ್ಷ ಪ್ರಕಾಶ್ ಬುರಡಿಕಟ್ಟಿ ನೇತೃತ್ವದಲ್ಲಿ ಪ್ರತಿ ವರ್ಷವು ಒಂದಲ್ಲ ಒಂದು ವಿಶೇಷ ಸಂದೇಶದೊಂದಿಗೆ ಗಣೇಶ ಮೂರ್ತಿಯನ್ನ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಅಂತೆಯೇ ಈ ಬಾರಿ ಇಂದಿನ ಪೀಳಿಗೆಗೆ ಹಾಗೂ ಸಮಾಜಕ್ಕೆ ಹಿಂದೂ ಧರ್ಮ, ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದೆ. ಇದನ್ನೂ ಓದಿ: ಮಡಿವಾಳೇಶ್ವರ ಬಸವಸಿದ್ಧಲಿಂಗ ಸ್ವಾಮೀಜಿ ನೇಣಿಗೆ ಶರಣು

    ಗಣೇಶನ ದಶಾವತಾರ ದರ್ಶನಕ್ಕೆ ಪ್ರತಿ ದಿನ ಸಂಜೆ 6 ಗಂಟೆಯಿಂದ ರಾತ್ರಿ 10:30ರ ವರೆಗೆ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: ಮುಸ್ಲಿಂ ಮಹಿಳೆಯನ್ನು ಮದುವೆ ಆಗಲು ನಿರ್ದೇಶಕ ಮಹೇಶ್ ಭಟ್ ಮತಾಂತರಗೊಂಡಿದ್ದಾರೆ ಎಂದು ಕಂಗನಾ ಆರೋಪ

    ಈ ಕುರಿತು ಮಾತನಾಡಿರುವ ವಂದೇ ಮಾತರಂ ಸಂಸ್ಥೆಯ ಅಧ್ಯಕ್ಷ ಪ್ರಕಾಶ್‌ ಎಸ್.ಬುರಡಿಕಟ್ಟಿ, ರಾಣಿಬೆನ್ನೂರಿನ ಇಂದ್ರಕುಮಾರ್ ಮತ್ತು ಹರ್ಷ ಅವರ ಸಂಗಡಿಗರಿಂದ ನಗರಸಭೆ ಕ್ರೀಡಾಂಗಣದಲ್ಲಿ ದಶಾವತಾರ ರೂಪದ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. 29 ದಿನಗಳ ಕಾಲ ಗಣಪತಿಯ ಸಾರ್ವಜನಿಕ ದರ್ಶನಕ್ಕಾಗಿ ಅವಕಾಶ ಕಲ್ಪಿಸಿದ್ದು, ಸೆಪ್ಟಂಬರ್‌ 28ರಂದು ನಗರದಲ್ಲಿ ಶೋಭಾಯಾತ್ರೆಯ ಮೂಲಕ ವಿಸರ್ಜನೆ ಮಾಡಲಾಗುವುದು ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಶಾಲಾ ಶಿಕ್ಷಕನಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ

    ಶಾಲಾ ಶಿಕ್ಷಕನಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ

    – ಶಿಕ್ಷಕನ ವಿರುದ್ಧ ಗ್ರಾಮಸ್ಥರು ಆಕ್ರೋಶ

    ಹಾವೇರಿ: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆ ಶಿಕ್ಷಕನ ವಿರುದ್ಧ ವಿದ್ಯಾರ್ಥಿನಿಯ ಪೋಷಕರು ಮತ್ತು ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದಲ್ಲಿ ನಡೆದಿದೆ.

    ದೇವರಗುಡ್ಡ ಗ್ರಾಮದ ಮಾಲತೇಶ್ ಪ್ರೌಢಶಾಲೆ ಶಿಕ್ಷಕ ಮಲ್ಲಪ್ಪ ತಳವಾರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಲ್ಲಪ್ಪ ಆನ್‍ಲೈನ್ ಕ್ಲಾಸ್ ನಡೆಯುತ್ತಿರಬೇಕಾದರೆ 10ನೇ ತರಗತಿ ವಿದ್ಯಾರ್ಥಿನಿಯ ಫೋನ್ ನಂಬರ್ ಅನ್ನು ತೆಗೆದುಕೊಂಡಿದ್ದಾನೆ. ನಂತರ ಆಕೆಗೆ ಅಶ್ಲೀಲ ಮೆಸೇಜ್ ಗಳನ್ನ ಕಳಿಸಿ, ಲೈಂಗಿಕ ಕಿರುಕುಳ ನೀಡಲು ಪ್ರಾರಂಭಿಸಿದ್ದಾನೆ. ಈ ಹಿನ್ನೆಲೆ ವಿದ್ಯಾರ್ಥಿನಿಯ ಕುಟುಂಬ ಮಲ್ಲಪ್ಪನ ವಿರುದ್ಧ ದೂರು ನೀಡಿದ್ದು, ಆತನನ್ನು ಶಾಲೆಯಿಂದ ಅಮಾನತು ಮಾಡಲಾಗಿದೆ. ಇದನ್ನೂ ಓದಿ: ಇಸ್ರೋ ಖಾಸಗೀಕರಣ – ಬೆಂಗಳೂರಿನ ಕಛೇರಿ ಗುಜರಾತ್‍ಗೆ ವರ್ಗಾವಣೆ ಖಂಡಿಸಿ ಪ್ರತಿಭಟನೆ

    ಶಿಕ್ಷಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿನಿಯ ಪೋಷಕರು ಆಗ್ರಹಿಸಿದ್ದಾರೆ. ಸ್ಥಳಕ್ಕೆ ರಾಣೆಬೆನ್ನೂರು ಗ್ರಾಮೀಣ ಠಾಣೆ ಪಿಎಸ್‍ಐ ವಸಂತ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.