Tag: Randeep surjewala

  • ಕರ್ನಾಟಕದ ಅಸಲಿ ಮುಖ್ಯಮಂತ್ರಿ ನೋಡಲು ಸ್ಕ್ಯಾನ್‌ ಮಾಡಿ: ನಿಖಿಲ್‌ ಕುಮಾರಸ್ವಾಮಿ ಸ್ಕ್ಯಾನರ್‌ನಲ್ಲಿರೋ ಫೋಟೊ ಯಾರದ್ದು?

    ಕರ್ನಾಟಕದ ಅಸಲಿ ಮುಖ್ಯಮಂತ್ರಿ ನೋಡಲು ಸ್ಕ್ಯಾನ್‌ ಮಾಡಿ: ನಿಖಿಲ್‌ ಕುಮಾರಸ್ವಾಮಿ ಸ್ಕ್ಯಾನರ್‌ನಲ್ಲಿರೋ ಫೋಟೊ ಯಾರದ್ದು?

    ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್‌ನಲ್ಲೇ ಸಿಎಂ ಕುರ್ಚಿ ಕದನ ಕುರಿತು ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ (Nikhil Kumaraswamy) ವ್ಯಂಗ್ಯವಾಡಿದ್ದಾರೆ. ಕರ್ನಾಟಕದ ಅಸಲಿ ಮುಖ್ಯಮಂತ್ರಿ ನೋಡಲು ಸ್ಕ್ಯಾನ್‌ ಮಾಡಿ ಎಂದು ‘ಕೈ’ ನಾಯಕರಿಗೆ ಟಾಂಗ್‌ ಕೊಟ್ಟಿದ್ದಾರೆ.

    ನಿಖಿಲ್‌ ಕುಮಾರಸ್ವಾಮಿ ಈ ಕುರಿತು ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಾಕಿದ್ದಾರೆ. ಪೋಸ್ಟ್‌ನಲ್ಲಿ ಸ್ಕ್ಯಾನರ್‌ ಕೂಡ ಹಂಚಿಕೊಂಡಿದ್ದಾರೆ. ಸ್ಕ್ಯಾನ್‌ ಮಾಡಿದರೆ ರಣದೀಪ್‌ ಸುರ್ಜೇವಾಲಾರ ಫೇಸ್‌ಬುಕ್‌ ಖಾತೆ ತೆರೆದುಕೊಳ್ಳುತ್ತದೆ. ಪರೋಕ್ಷವಾಗಿ ‘ಇದು ಸುರ್ಜೇವಾಲ ಸರ್ಕಾರ’ ಎಂದು ನಿಖಿಲ್‌ ತಿವಿದಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಶವಗಳ ಹೂತಿಟ್ಟ ಪ್ರಕರಣ – ಇಂದಿನಿಂದ ಎಸ್‌ಐಟಿ ತನಿಖೆ ಆರಂಭ

    ಎಕ್ಸ್‌ ಖಾತೆಯಲ್ಲೇನಿದೆ?
    ಕರ್ನಾಟಕವು ಕನ್ನಡಿಗ ಸಿಎಂಗೆ ಮತ ಹಾಕಿದೆ. ಆದರೆ, ಹರಿಯಾಣದ ಸೂಪರ್ ಸಿಎಂ ನಮ್ಮನ್ನು ಆಳುತ್ತಿದ್ದಾರೆ!. ಅವರು ಈಗ ಮಂತ್ರಿಗಳೊಂದಿಗೆ ಮಾತ್ರವಲ್ಲ, ಸರ್ಕಾರದ ಅಧಿಕಾರಿಗಳೊಂದಿಗೆ ಸಭೆಗಳನ್ನೂ ನಡೆಸುತ್ತಿದ್ದಾರೆ!!. ಕನ್ನಡಿಗ ಹೆಮ್ಮೆಯ ಸ್ವಯಂಘೋಷಿತ ಚಾಂಪಿಯನ್ ಸಿದ್ದರಾಮಯ್ಯನವರು ರಾಜ್ಯದ ಆಡಳಿತವನ್ನು ಸದ್ದಿಲ್ಲದೆ ಹೊರಗುತ್ತಿಗೆ ನೀಡಿದ್ದಾರೆ. ನಮ್ಮ ಹೆಮ್ಮೆ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ.

    ಸಿಎಂ ಕುರ್ಚಿ ವಿಚಾರವಾಗಿ ಆಡಳಿತಾರೂಢ ಕಾಂಗ್ರೆಸ್‌ ಪಾಳಯದಲ್ಲಿ ಗುದ್ದಾಟ ನಡೆಯುತ್ತಿದೆ. ಡಿ.ಕೆ.ಶಿವಕುಮಾರ್‌ಗೆ ಸಿಎಂ ಸ್ಥಾನ ಸಿಗಬೇಕು ಎಂಬುದು ಅವರ ಆಪ್ತರ ಒತ್ತಾಯವಾಗಿದೆ. ಆದರೆ, ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಸಿಎಂ ಆಗಿ ಮುಂದುವರಿಯುತ್ತಾರೆಂದು ಅವರ ಆಪ್ತರು ತಿರುಗೇಟು ನೀಡುತ್ತಿದ್ದಾರೆ. ಈ ಗದ್ದಲ ಹೈಕಮಾಂಡ್‌ ವರೆಗೂ ತಲುಪಿ, ಕೊನೆಗೆ ರಾಜ್ಯ ಉಸ್ತುವಾರಿ ಸುರ್ಜೇವಾಲ ಅವರು ರಾಜ್ಯಕ್ಕೆ ಬಂದು ಪರಿಸ್ಥಿತಿ ಅವಲೋಕಿಸಿದ್ದಾರೆ. ಇದನ್ನೂ ಓದಿ: ಕಾಂಬೋಡಿಯಾ-ಥೈಲ್ಯಾಂಡ್‌ ಘರ್ಷಣೆ – ಗಡಿ ಪ್ರದೇಶಗಳಿಗೆ ತೆರಳದಂತೆ ಭಾರತೀಯ ಪ್ರಜೆಗಳಿಗೆ ಸಲಹೆ

  • 22 ಸಚಿವರ ಮೀಟಿಂಗ್ ಬೆನ್ನಲ್ಲೇ ಸಿಎಂ-ಡಿಸಿಎಂ ಜೊತೆ ಸುರ್ಜೇವಾಲಾ ಸಭೆ – ಕೆರಳಿದ ಕುತೂಹಲ

    22 ಸಚಿವರ ಮೀಟಿಂಗ್ ಬೆನ್ನಲ್ಲೇ ಸಿಎಂ-ಡಿಸಿಎಂ ಜೊತೆ ಸುರ್ಜೇವಾಲಾ ಸಭೆ – ಕೆರಳಿದ ಕುತೂಹಲ

    ಬೆಂಗಳೂರು: ಶಾಸಕರ ಸರಣಿ ದೂರಿನ ಬೆನ್ನಲ್ಲೇ ರಾಜ್ಯ ಉಸ್ತುವಾರಿ ಸುರ್ಜೇವಾಲಾ (Randeep Surjewala) ಇಂದು ಸಚಿವ ಸಂಪುಟ ಸಚಿವರ ಜೊತೆ ಕೊನೇ ದಿನದ ಸಭೆ ನಡೆಸಿದ್ರು. ಇದಾದ ಬಳಿಕ ಸಿಎಂ – ಡಿಸಿಎಂ ಜೊತೆಗೂ ಸಭೆ ನಡೆಸಿ ಹಲವು ಮಾಹಿತಿಗಳನ್ನ ಸುರ್ಜೇವಾಲಾ ಪಡೆದುಕೊಂಡಿದ್ದಾರೆ.

    ಸಿಎಂ-ಡಿಸಿಎಂ ಜೊತೆ ಸಭೆ ನಡೆಸಿ ಶಾಸಕರು ಹಾಗೂ ಸಚಿವರ ಸಭೆಯ ಸಂಪೂರ್ಣ ಮಾಹಿತಿ ನೀಡಿದರು. ಜೊತೆಗೆ ಶಾಸಕರ ದೂರಿನ ಲಿಖಿತ ಪ್ರತಿ ಹಾಗೂ ಸಚಿವರ ಸಮರ್ಥನೆಯ ಲಿಖಿತ ಅಂಶಗಳ ದಾಖಲೆ ನೀಡಿದರು. ಸಿಎಂ ಡಿಸಿಎಂ ಇಬ್ಬರಿಗೂ ದಾಖಲೆಗಳನ್ನು ‌ನೀಡಿ ಶಾಸಕರು ಹಾಗೂ ಸಚಿವರ ಸಮಸ್ಯೆ ಏನು..? ಏನು ಮಾಡಬೇಕಿದೆ ಎಂಬ ಚರ್ಚೆ ನಡೆಸಿದರು. ಸಿಎಂ ಡಿಸಿಎಂ ಇಬ್ಬರು ಸಂಪೂರ್ಣವಾಗಿ ದಾಖಲೆಗಳನ್ನು ನೋಡಿದ ನಂತರ ಇನ್ನೊಂದು ಸುತ್ತಿನ ಸಭೆ ನಡೆಸಲು ತೀರ್ಮಾನಿಸಿದರು.

    ಇನ್ನೂ ಸುರ್ಜೇವಾಲಾ ಬುಲಾವ್ ನೀಡಿದ್ದ 23 ಸಚಿವರಲ್ಲಿ ಸಚಿವ ಮಹದೇವಪ್ಪ ಹೊರತುಪಡಿಸಿ ಎಲ್ಲರೂ ಹಾಜರಾಗಿದ್ದಾರೆ. ಇಲಾಖೆಗೆ ಸಂಬಂಧಿತ ವಿಚಾರಗಳ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದೇವೆ ಅಂತ ಸಚಿವರು ಹೇಳಿಕೊಂಡಿದ್ದಾರೆ. ಇತ್ತ, ಸಚಿವ ರಾಜಣ್ಣ, ಸುರ್ಜೇವಾಲ ಹಾಗೂ ಸಿಎಂ ಮಾಹಿತಿ ನೀಡಿ ನಿನ್ನೆ ರಾತ್ರಿ ಯುರೋಪ್ ಪ್ರವಾಸ ಕೈಗೊಂಡಿದ್ದಾರೆ.

    ಇನ್ನೊಂದೆಡೆ, ರಾಜೇಂದ್ರ ಪುತ್ರ ರಾಜಣ್ಣ, ಅನುದಾನ ಸುರ್ಜೇವಾಲಾ ಕೊಡ್ತಾರಾ? ಸಿಎಂ ಸಿಎಂ, ಡಿಸಿಎಂ ಕೊಡೋದು ಅಂತ ಟಕ್ಕರ್ ಕೊಟ್ಟಿದ್ದಾರೆ. ಇತ್ತ ಕಲಬುರ್ಗಿಯಲ್ಲಿ ಶಾಸಕ ಬಿ.ಆರ್ ಪಾಟೀಲ್ ಸಚಿವ ಜಮೀರ್ ಹೆಸರು ಹೇಳುತ್ತಿದ್ದಂತೆ ಸಿಡಿಮಿಡಿಗೊಂಡಿದ್ದಾರೆ. ಜಮೀರ್ ಯಾವ ದೊಡ್ಡ ಮನುಷ್ಯ ಎಂದಿದ್ದಾರೆ. ಈ ಬೆಳವಣಿಗೆಗಳ ಮಧ್ಯೆಯೇ, ಕುರ್ಚಿ ಕದನದ ಬಗ್ಗೆ ಮತ್ತೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದು ಹೈಕಮಾಂಡ್ ಏನೂ ನಿರ್ಧಾರ ಮಾಡುತ್ತೋ ನಾನು ಹಾಗೂ ಡಿಕೆಶಿ ಇಬ್ಬರೂ ಪಾಲಿಸುತ್ತೇವೆ ಎಂದಿದ್ದಾರೆ.

    ಇತ್ತ, ಡಿಸಿಎಂ ಡಿಕೆಶಿ ಪರ ಸ್ವಾಮೀಜಿಗಳು ಬ್ಯಾಟಿಂಗ್ ಮುಂದುವರೆಸಿದ್ದಾರೆ. ರಂಭಾಪುರಿ ಶ್ರೀಗಳ ಹೇಳಿಕೆ ಸಮರ್ಥಿಸಿಕೊಂಡ ಶ್ರೀಶೈಲ ಜಗದ್ಗುರುಗಳು, ಹೈಕಮಾಂಡ್ ಮಧ್ಯಸ್ಥಿಕೆಯಲ್ಲಿ ಸರ್ಕಾರ ರಚನೆ ವೇಳೆ ಸಿಎಂ ಸ್ಥಾನ ಕುರಿತು ಒಡಂಬಡಿಕೆ ಆಗಿದ್ರೆ ನೆರವೇರಿಸಲಿ ಎಂದಿದ್ದಾರೆ.

    4-5 ದಿನಗಳಲ್ಲಿ ನಿಗಮ ಮಂಡಳಿಗೆ ನೇಮಕಾತಿ ಪ್ರಕ್ರಿಯೆ ಪೂರ್ಣ
    ನಿಗಮ ಮಂಡಳಿಗೆ 4-5 ದಿನದ ಒಳಗಾಗಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲು ನಿರ್ಧಾರ ಕೈಗೊಳ್ಳಲಾಗಿದೆ. 600ಕ್ಕೂ ಹೆಚ್ಚು ಪ್ರಮುಖ ಕಾರ್ಯಕರ್ತರಿಗೆ ನಿಗಮ ಮಂಡಳಿ ನಿರ್ದೆಶಕರಾಗಿ ನೇಮಕಕ್ಕೆ‌ ನಿರ್ಧಾರ ಮಾಡಲಾಗಿದ್ದು, ನೇರವಾಗಿ ಕಾರ್ಯಕರ್ತರಿಗೆ ನೇಮಕಾತಿ ಆದೇಶ ತಲುಪಿಸಲು ಇಂದಿನ ಸಭೆಯಲ್ಲಿ ತೀರ್ಮಾನಿಸಲಾಗಿದೆ. 32 ನಿಗಮಗಳಿಗೆ ಅಧ್ಯಕ್ಷರ ಆಯ್ಕೆಗೆ ಬಹಿತೇಕ ಸಮ್ಮತಿ ಅಂತಿಮ ಪಟ್ಟಿಗೆ ಮಲ್ಲಿಕಾರ್ಜುನ ಖರ್ಗೆ ಒಪ್ಪಿಗೆ ಪಡೆದು ನೇಮಕಾತಿ ಆದೇಶ ಹೊರಡಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

  • ಸುರ್ಜೇವಾಲಾಗೆ ಡೋಂಟ್ ಕೇರ್ ಅಂದ ಸಚಿವ ರಾಜಣ್ಣ – ಯುರೋಪ್‌ಗೆ ಫ್ಯಾಮಿಲಿ ಟೂರ್

    ಸುರ್ಜೇವಾಲಾಗೆ ಡೋಂಟ್ ಕೇರ್ ಅಂದ ಸಚಿವ ರಾಜಣ್ಣ – ಯುರೋಪ್‌ಗೆ ಫ್ಯಾಮಿಲಿ ಟೂರ್

    ಬೆಂಗಳೂರು: ಕಾಂಗ್ರೆಸ್ (Congress) ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರಿಗೆ ಸಚಿವ ರಾಜಣ್ಣ (KN Rajanna) ಡೋಂಟ್ ಕೇರ್ ಅಂದಿದ್ದು, ನಾನು ಯುರೋಪ್‌ಗೆ ಹೋಗಬೇಕು ಬಂದ ಮೇಲೆ ಸಿಗುತ್ತೇನೆ ಎಂದು ಹೇಳಿದ್ದಾರೆ.ಇದನ್ನೂ ಓದಿ: NCERT 8ನೇ ತರಗತಿ ಪಠ್ಯಪುಸ್ತಕ ಪರಿಷ್ಕರಣೆ – ದೆಹಲಿ ಸುಲ್ತಾನರ ಕ್ರೌರ್ಯ, ಮೊಘಲರ ಅಸಹಿಷ್ಣುತೆ ಉಲ್ಲೇಖ

    ರಣದೀಪ್ ಸುರ್ಜೇವಾಲಾ ಅವರು ರಾಜ್ಯದಲ್ಲಿ ಸರಣಿ ಸಭೆ ನಡೆಸುತ್ತಿದ್ದಾರೆ. ಹೀಗಾಗಿ ಸಹಕಾರ ಸಚಿವ ಕೆಎನ್ ರಾಜಣ್ಣ ಅವರು, ನಾನು ಯುರೋಪ್‌ಗೆ ಹೋಗಬೇಕು, ಪ್ರವಾಸದ ದಿನಾಂಕ ಮೊದಲೇ ನಿಗದಿಯಾಗಿದೆ. ನಿಮ್ಮ ಮೀಟಿಂಗ್ ಇತ್ತೀಚಿಗೆ ಫಿಕ್ಸ್ ಆಗಿದೆ. ಹೀಗಾಗಿ ನಾನು ವಿದೇಶ ಪ್ರವಾಸದಿಂದ ವಾಪಾಸ್ ಬಂದ ಮೇಲೆ ಸುರ್ಜೇವಾಲಾರನ್ನು ಪ್ರತ್ಯೇಕವಾಗಿ ಭೇಟಿ ಮಾಡುತ್ತೇನೆ ಎಂದು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

    ಈ ಕುರಿತು ಮಾಧ್ಯಮದವರೊಂದಿಗೆ ರಾಜಣ್ಣ ಪುತ್ರ ರಾಜೇಂದ್ರ ಮಾತನಾಡಿ, ನಮ್ಮ ತಂದೆ ಅವರು ವಿದೇಶ ಪ್ರವಾಸಕ್ಕೆ ಹೋಗಿದ್ದಾರೆ. ನಮ್ಮ ತಾಯಿ, ಅವರ ಕಸಿನ್ಸ್ ಜೊತೆ ಹೋಗಿದ್ದಾರೆ, ಒಂದೂವರೆ ತಿಂಗಳ ಹಿಂದೆ ನಿಗದಿಯಾಗಿತ್ತು. ಸುರ್ಜೇವಾಲಾ ಅವರ ಗಮನಕ್ಕೆ ತಂದಿದ್ದಾರೆ. ಮೌಖಿಕವಾಗಿ ಮಾತನಾಡಿದ್ದಾರೆ. ವಿದೇಶ ಪ್ರವಾಸದಿಂದ ಬಂದ ಬಳಿಕ ಸುರ್ಜೇವಾಲಾ ಅವರನ್ನ ಭೇಟಿ ಮಾಡುತ್ತಾರೆ. ಪ್ರವಾಸಕ್ಕೆ ಹೋಗುವುದನ್ನ ಸಿಎಂ ಅವರ ಗಮನಕ್ಕೆ ತಂದಿದ್ದಾರೆ ಎಂದು ಸ್ಪಷ್ಟಪಡಿಸಿದರು.ಇದನ್ನೂ ಓದಿ: ನವೀಕರಿಸಬಹುದಾದ ಇಂಧನದಲ್ಲಿ ಭಾರತ ಅದ್ಭುತ ಸಾಧನೆ – ಪ್ರಧಾನಿ ಮೋದಿ ಶ್ಲಾಘನೆ

  • ಸಿಎಂ ಬದಲಾವಣೆ – ನನಗೆ ಡ್ರಾಮಾ ಕಂಪನಿ ಓಪನ್ ಮಾಡೋಕೆ ಇಷ್ಟವಿಲ್ಲ ಎಂದ ಪರಮೇಶ್ವರ್

    ಸಿಎಂ ಬದಲಾವಣೆ – ನನಗೆ ಡ್ರಾಮಾ ಕಂಪನಿ ಓಪನ್ ಮಾಡೋಕೆ ಇಷ್ಟವಿಲ್ಲ ಎಂದ ಪರಮೇಶ್ವರ್

    ಬೆಂಗಳೂರು: ನಾಯಕತ್ವ ಬದಲಾವಣೆ ಡ್ರಾಮಾ ಅಷ್ಟೇ ಎಂದು ಗೃಹಸಚಿವ ಜಿ.ಪರಮೇಶ್ವರ್ (G.Parameshwar) ಹೇಳಿದ್ದಾರೆ.

    ನಾಯಕತ್ವದ ಬದಲಾವಣೆ ಚರ್ಚೆ ವಿಚಾರವಾಗಿ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಮಾಧ್ಯಮಗಳು ವಿಶ್ಲೇಷಣೆ ಮಾಡಿದಂತೆ ಇದೊಂದು ಡ್ರಾಮಾ. ನಿಮ್ಮ ಹೇಳಿಕೆಯನ್ನು ನಾನು ಒಪ್ಪಬೇಕಾಗುತ್ತೆ. ಪದೇ ಪದೇ ಇದರ ಬಗ್ಗೆ ಚರ್ಚೆ ಆಗುವುದು, ಅವರೊಂದು ಹೇಳಿಕೆ ಕೊಡುವುದು ನಾನೊಂದು ಹೇಳೋದು, ಮತ್ತೊಬ್ಬರು ಒಂದು ಹೇಳೋದು ಆಗಬಾರದು ಎಂದಿದ್ದಾರೆ. ಇದನ್ನೂ ಓದಿ: ಡಿಕೆಶಿ ಪರ ಕೆಲ ಶಾಸಕರ ಬೆಂಬಲ ಮಾತ್ರ ಇದೆ, 5 ವರ್ಷವೂ ನಾನೇ ಸಿಎಂ – ಡೆಲ್ಲಿಯಲ್ಲಿ ಸಿಎಂ ಗೂಗ್ಲಿ

    ಆಡಳಿತದಲ್ಲಿ ಯಾವುದೇ ರೀತಿ ತೊಂದರೆ ಇಲ್ಲ. ಮುಖ್ಯಮಂತ್ರಿಗಳು (CM Siddaramaiah) ಆಡಳಿತ ಮಾಡುತ್ತಿದ್ದಾರೆ. ಸುಮ್ಮನೆ ಡ್ರಾಮಾ ಕಂಪನಿ ಓಪನ್ ಮಾಡೋಕೆ ನಂಗೆ ಇಷ್ಟವಿಲ್ಲ ಎಂದಿದ್ದಾರೆ.

    ನಾಯಕತ್ವದ ಬದಲಾವಣೆ ವಿಚಾರದ ಅಭಿಪ್ರಾಯಗಳನ್ನು ಗೌರವಿಸುತ್ತೇವೆ ಎಂಬ ಸುರ್ಜೇವಾಲಾ (Randeep Surjewala) ಹೇಳಿಕೆ ವಿಚಾರವಾಗಿ, ಇದು ನನಗೆ ಗೊತ್ತಿಲ್ಲ. ಒಬ್ಬೊಬ್ಬರು ಒಂದೊಂದು ರೀತಿ ವಿಶ್ಲೇಷಣೆ ಮಾಡ್ತಾರೆ. ನಾನು ಸ್ಮೂತ್ ಆಗೇ ಇರೋದು, ಡ್ರಾಮಾ ಕಂಪನಿ ಓಪನ್ ಮಾಡೋಕೆ ಇಷ್ಟ ಇಲ್ಲ. ಅದನ್ನ ಬಿಟ್ಟುಬಿಡೋಣ, ನಮ್ಮ ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಾರೆ. ಸಂದರ್ಭ ಬಂದಾಗ ತೀರ್ಮಾನ ಮಾಡುತ್ತಾರೆ. ಈಗ ಅಂತ ಸಂದರ್ಭ ಇದೆಯಾ ಅಂತ ನಾನು ಹೇಳೋಕೆ ಹೋಗಲ್ಲ ಎಂದಿದ್ದಾರೆ. ಇದನ್ನೂ ಓದಿ: ರಾಜಕೀಯ ನಿವೃತ್ತಿ ಬಳಿಕ ಕೃಷಿಯಲ್ಲಿ ತೊಡಗಿಕೊಳ್ತೀನಿ: ಅಮಿತ್ ಶಾ‌

  • 5 ವರ್ಷ ಸಿದ್ದರಾಮಯ್ಯನವರೇ ಸಿಎಂ – ಯತೀಂದ್ರ ಬ್ಯಾಟಿಂಗ್‌

    5 ವರ್ಷ ಸಿದ್ದರಾಮಯ್ಯನವರೇ ಸಿಎಂ – ಯತೀಂದ್ರ ಬ್ಯಾಟಿಂಗ್‌

    ಮೈಸೂರು: ನನ್ನ ಪ್ರಕಾರ 5 ವರ್ಷ ಸಿದ್ದರಾಮಯ್ಯನವರೇ ಸಿಎಂ ಆಗಿರುತ್ತಾರೆ ಎಂದು ವಿಧಾನ ಪರಿಷತ್‌ ಸದಸ್ಯ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಹೇಳಿದ್ದಾರೆ.

    ಮೈಸೂರಿನಲ್ಲಿ (Mysuru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಪ್ರಕಾರ 5 ವರ್ಷ ಸಿದ್ದರಾಮಯ್ಯನವರೇ ಸಿಎಂ ಆಗಿರ್ತಾರೆ. ಸಿಎಂ ಬದಲಾವಣೆ ಚರ್ಚೆ ಹೈಕಮಾಂಡ್‌ ಮುಂದೆ ನಡೆದಿಲ್ಲ. ಎಐಸಿಸಿ ಕಾರ್ಯದರ್ಶಿ ಈಗಾಗಲೇ ಇದನ್ನು ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಚೀತಾಗಳ ಉಡುಗೊರೆ ನೀಡಿದ್ದಕ್ಕೆ ಧನ್ಯವಾದ: ನಮೀಬಿಯಾಗೆ ಮೋದಿ ಕೃತಜ್ಞತೆ

    ಇನ್ನೂ ಓಬಿಸಿ ಸಮಿತಿಗೆ ಸಿಎಂ ಆಯ್ಕೆ ಕುರಿತ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾರ್ರಿ ಹೇಳಿದ್ದು ಮುಖ್ಯಮಂತ್ರಿ ಆದವರನ್ನ ಓಬಿಸಿ ಕಮಿಟಿಗೆ ಕಳುಹಿಸಿದ್ರೆ ಪ್ರಮೋಷನ್ನಾ? ಅಂತ ಕೆಂಡಾಮಂಡಲರಾದರು. ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗದ ನಾಯಕ. ದೇಶದಲ್ಲಿರುವ ಹಿಂದುಳಿದ ವರ್ಗಗಳ ನಾಯಕರು ಆ ಕಮಿಟಿಯಲ್ಲಿದ್ದಾರೆ. ಹಾಗಾಗಿ ಅಲ್ಲಿ ಸದಸ್ಯರಾಗಿರುತ್ತಾರೆ. ಅದಕ್ಕೂ ಸಿಎಂ ಬದಲಾವಣೆ ವಿಚಾರಕ್ಕೂ ಸಂಬಂಧ ಕಲ್ಪಿಸುವ ಅಗತ್ಯ ಇಲ್ಲ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಹಳಸಿದ ದಾಲ್‌ ಬಡಿಸಿದ್ದಕ್ಕೆ ಶಾಸಕನಿಂದ ಕ್ಯಾಂಟೀನ್‌ ಸಿಬ್ಬಂದಿ ಮೇಲೆ ಹಲ್ಲೆ – ಕ್ಯಾಂಟೀನ್‌ ಲೈಸೆನ್ಸೇ ರದ್ದು

    ಬಿಜೆಪಿ ಹೇಳೋದನ್ನೆಲ್ಲ ನೀವು ನಂಬಿದ್ರೆ ಆಗಲ್ಲ. ನಮ್ಮ ಸರ್ಕಾರ ಬಂದಾಗಿಂದ ಸರ್ಕಾರ ಬದಲಾಗುತ್ತೆ, ಸಿಎಂ ಬದಲಾಗ್ತಾರೆ ಅಂತಿದ್ದಾರೆ. ನವೆಂಬರ್ ತಿಂಗಳಿಗೆ ನಮ್ಮ ತಂದೆ ಎರಡೂವರೆ ವರ್ಷ ಪೂರೈಕೆ ಮಾಡ್ತಾರೆ. ಹಾಗಾಗಿ ಸಿಎಂ ಆಸೆ ಇಟ್ಟುಕೊಂಡಿರೋರು ಕೇಳ್ತಾರೆ. ಕೇಳೋದ್ರಲ್ಲ ತಪ್ಪಿಲ್ಲ, ತೀರ್ಮಾನ ಮಾಡೋದು ಹೈಕಮಾಂಡ್ ಹಾಗೂ ಶಾಸಕರು. ಸರ್ಕಾರ ಬಂದಾಗಿದ ಈ ಪ್ರಶ್ನೆಗೆ ಉತ್ತರ ಮಾಡುತ್ತಿದ್ದೇನೆ ದಯವಿಟ್ಟು ಆ ಪ್ರಶ್ನೆ ಕೇಳಬೇಡಿ ಅಂತ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಜು.28ರಂದು ಮದ್ದೂರಿಗೆ ಸಿಎಂ – 1,400 ಕೋಟಿ ವೆಚ್ಚದ 75 ಕಾಮಗಾರಿಗಳ ಉದ್ಘಾಟನೆ

    ರಂಭಾಪುರಿ ಶ್ರೀ ಹೇಳಿಕೆಗೆ ತಿರುಗೇಟು
    ಇನ್ನೂ ಉಚಿತ ಭಾಗ್ಯಗಳಿಂದ ಜನ ಸೋಮಾರಿ ಆಗುತ್ತಿದ್ದಾರೆ ಅನ್ನೋ ರಂಭಾಪುರಿ ಶ್ರೀಗಳ ಹೇಳಿಕೆಗೆ ಪ್ರತಿಕ್ರಿಯಿಸಿ, ಇದನ್ನ ಈಗಲ್ಲ, ಕಳೆದಬಾರಿ ಭಾಗ್ಯಗಳನ್ನ ಕೊಟ್ಟಾಗಲೂ ಹೀಗೆ ಹೇಳ್ತಿದ್ರು. ಯಾರೂ ಸೋಮಾರಿಗಳಾಗಲ್ಲ, ಬಡವರು ಹೊಟ್ಟೆ ತುಂಬಾ ಊಟ ಮಾಡಿ ಸೋಮಾರಿ ಆಗೋದಿಲ್ಲ. ಕೇವಲ ಅಕ್ಕಿ ಕೊಟ್ಟ ತಕ್ಷಣ ಎಲ್ಲಾ ಸಿಗುತ್ತಾ? ಜೀವನಕ್ಕಾಗಿ ಅವರೂ ದುಡಿಯುತ್ತಾರೆ. ಇದು ತಲತಲಾಂತರದಿಂದ ಬೇರೊಬ್ಬರ ಕೈಲಿ ದುಡಿಸಿಕೊಂಡು ಸುಖವಾಗಿ ಬಂದಿರೋರು ಹೇಳುವ ಮಾತುಗಳು ಎಂದು ತಿರುಗೇಟು ನೀಡಿದ್ದಾರೆ.

    ಇದೇ ಪ್ರಶ್ನೆಯನ್ನ ಶ್ರೀಮಂತರ ಸಾಲ ಮನ್ನ ಮಾಡುವ ಕೇಂದ್ರ ಸರ್ಕಾರಕ್ಕೆ ಕೇಳಲಿ. ಆವಾಗ ಕೇಳದ ಇವರಿಗೆ ಬಡವರಿಗೆ ಕೊಟ್ಟಾಗೆ ಯಾಕೆ ಕಣ್ಣುರಿ? ಯಾರು ಏನೇ ಟೀಕೆ ಮಾಡಿದ್ರೂ ನಾವು ಕೊಟ್ಟೇ ಕೊಡ್ತೀವಿ ಎಂದು ತಿಳಿಸಿದ್ದಾರೆ.

  • ಪಕ್ಷದಲ್ಲಿ ಯಾರೇ ಶಿಸ್ತು ಉಲ್ಲಂಘಿಸಿದ್ರು ನೋಟಿಸ್ ಕೊಡ್ತೀನಿ – ಡಿಕೆಶಿ

    ಪಕ್ಷದಲ್ಲಿ ಯಾರೇ ಶಿಸ್ತು ಉಲ್ಲಂಘಿಸಿದ್ರು ನೋಟಿಸ್ ಕೊಡ್ತೀನಿ – ಡಿಕೆಶಿ

    ಬೆಂಗಳೂರು: ಪಕ್ಷದ ಶಿಸ್ತು ಯಾರೂ ಉಲ್ಲಂಘನೆ ಮಾಡಬಾರದು. ಯಾರೇ ಉಲ್ಲಂಘಿಸಿದರೂ ನೋಟಿಸ್ ಕೊಡ್ತೀನಿ ಎಂದು (DK Shivakumar)  ಶಾಸಕರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.

    ರಾಮನಗರ ಶಾಸಕ ಇಕ್ಬಾಲ್ ಹುಸೇನ್‌ಗೆ (Iqbal Hussain) ನೋಟಿಸ್ ಜಾರಿ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇಕ್ಬಾಲ್ ಹುಸೇನ್‌ಗೂ ನೋಟಿಸ್ ಕೊಡ್ತೀನಿ, ಬೇರೆ ಅವರಿಗೂ ನೋಟಿಸ್ ಕೊಡಬೇಕಾಗುತ್ತದೆ. ಪಕ್ಷದ ಶಿಸ್ತು ಯಾರೂ ಉಲ್ಲಂಘನೆ ಮಾಡಬಾರದು. ಪಕ್ಷದಲ್ಲಿ ಶಿಸ್ತು ಮುಖ್ಯ. ನಾನು ಯಾರಿಗೂ ನನ್ನ ಹೆಸರು ಹೇಳಿ, ಸಿಎಂ ಮಾಡಿ ಅಂತ ಹೇಳಿಲ್ಲ. ಸಿದ್ದರಾಮಯ್ಯ (CM Siddaramaiah) ಮುಖ್ಯಮಂತ್ರಿ ಇದ್ದಾಗ ಬೇರೆ ಯಾರೂ ಅಪಸ್ವರ ಎತ್ತಬಾರದು ಎಂದು ಎಚ್ಚರಿಕೆ ನೀಡಿದರು.ಇದನ್ನೂ ಓದಿ: ಬಿಗಿಭದ್ರತೆಯೊಂದಿಗೆ ಅಮರನಾಥ ಯಾತ್ರೆಗೆ ಚಾಲನೆ

    ಪಕ್ಷಕ್ಕೆ ಎಲ್ಲರೂ ಕಷ್ಟಪಟ್ಟಿದ್ದಾರೆ. ನನ್ನಂತ ನೂರಾರು ಕಾರ್ಯಕರ್ತರು ಕಷ್ಟಪಟ್ಟಿದ್ದಾರೆ. ನಾನು ಒಬ್ಬನೇ ಕಷ್ಟಪಟ್ಟಿದ್ದೀನಾ? ಸಾವಿರಾರು ಜನ, ಲಕ್ಷಾಂತರ ಜನ ಕಷ್ಟಪಟ್ಟಿದ್ದಾರೆ. ಮೊದಲು ನಾವು ಅವರ ಬಗ್ಗೆ ಯೋಚನೆ ಮಾಡಬೇಕು ಎಂದು ಶಿಸ್ತು ಉಲ್ಲಂಘನೆ ಮಾಡುತ್ತಿರುವ ಶಾಸಕರಿಗೆ ಎಚ್ಚರಿಕೆ ಕೊಟ್ಟು ಸಿಎಂ ಪರ ಬ್ಯಾಟಿಂಗ್ ಮಾಡಿದ್ದಾರೆ.

    ಇದೇ ವೇಳೆ ಶಾಸಕರಿಗೆ ಅಸಮಾಧಾನ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮುಂದಿನ ಚುನಾವಣೆಗೆ ಸಿದ್ಧತೆ ಮಾಡುವ ದೃಷ್ಟಿಯಿಂದ ಸುರ್ಜೇವಾಲಾ (Randeep Surjewala) ಶಾಸಕರ ಸಭೆ ಮಾಡಿದ್ದಾರೆ. ಶಾಸಕರಿಗೆ ಎಲ್ಲೂ ಅಸಮಾಧಾನ ಇರಲಿಲ್ಲ. ಯಾರಿಗೂ ಅಸಮಾಧಾನ ಇಲ್ಲ. ಶಾಸಕರಿಗೆ ಪಕ್ಷ ಮತ್ತು ಸಂಘಟನೆ ವಿಚಾರದಲ್ಲಿ ಜವಾಬ್ದಾರಿ ನಿಗದಿ ಮಾಡುತ್ತಿದ್ದಾರೆ. ಶಾಸಕರು ಏನು ಮಾಡಬೇಕು? ನಾವೇನು ಮಾಡಬೇಕು? ಚುನಾವಣೆಗೆ ಈಗಿನಿಂದಲೇ ಹೇಗೆ ಸಿದ್ಧತೆ ಮಾಡಬೇಕು ಎಂದು ಸೂಚನೆ ಕೊಟ್ಟಿದ್ದಾರೆ ಎಂದು ತಿಳಿಸಿದರು.ಇದನ್ನೂ ಓದಿ: ಕಮಲ್ ಹಾಸನ್ ವಿರುದ್ಧ ಕನಕಪುರ ಕೋರ್ಟ್‌ನಲ್ಲಿ ಖಾಸಗಿ ದೂರು – ಜು.5ಕ್ಕೆ ವಿಚಾರಣೆ

  • ನಾನೂ ಸುರ್ಜೇವಾಲಾ ಭೇಟಿಗೆ ಸಮಯ ಕೇಳಿದ್ದೇನೆ: ಪರಮೇಶ್ವರ್

    ನಾನೂ ಸುರ್ಜೇವಾಲಾ ಭೇಟಿಗೆ ಸಮಯ ಕೇಳಿದ್ದೇನೆ: ಪರಮೇಶ್ವರ್

    ಬೆಂಗಳೂರು: ರಾಜ್ಯಕ್ಕೆ ಬಂದಿರುವ ಕಾಂಗ್ರೆಸ್ (Congress) ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ  (Randeep Surjewala) ಭೇಟಿಗೆ ನಾನು ಸಮಯ ಕೇಳಿದ್ದೇನೆ ಎಂದು ಡಾ.ಜಿ.ಪರಮೇಶ್ವರ್  (G.Parameshwar ) ಹೇಳಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾತಾಡಿದ ಅವರು, ಸುರ್ಜೇವಾಲಾ ಭೇಟಿಗೆ ಸಮಯ ಕೇಳಿದ್ದೇನೆ. ಮಂಗಳವಾರ ಮಧ್ಯಾಹ್ನ ಬರುವಂತೆ ಸುರ್ಜೇವಾಲಾ ತಿಳಿಸಿದ್ದಾರೆ. ಇದೇ ವೇಳೆ, ತಮ್ಮ‌ ಭೇಟಿ ವೈಯಕ್ತಿಕ ಎಂದು ಹೇಳುವ ಮೂಲಕ ಕಾರಣ ತಿಳಿಸಲು ನಿರಾಕರಿಸಿದ್ದಾರೆ. ಇದನ್ನೂ ಓದಿ: ಶ್ರೀರಾಮಸೇನೆ ಕಾರ್ಯಕರ್ತರು ನೈತಿಕ ಪೊಲೀಸ್‌ಗಿರಿ ಮಾಡಲು ಹೋಗಿದ್ದು ತಪ್ಪು – ಪರಮೇಶ್ವರ್

    ಸುರ್ಜೇವಾಲಾರಿಂದ ಶಾಸಕರ ಅಹವಾಲು ವಿಚಾರವಾಗಿ, ಪಕ್ಷ ಸಂಘಟನೆ ಬಗ್ಗೆ ಶಾಸಕರ ಜೊತೆ ಮಾತಾಡಬಹುದು. ಶಾಸಕರಿಗೆ ಬಹಿರಂಗವಾಗಿ ಮಾತಾಡದಂತೆ ಕಟ್ಟುನಿಟ್ಟಾಗಿ ಹೇಳಬಹುದು. ಜಿ.ಪಂ, ತಾ.ಪಂ ಚುನಾವಣೆ ಬರ್ತಿದೆ, ಅದರ ಬಗ್ಗೆ ಮಾತಾಡಬಹುದು. ಪಕ್ಷದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ಆದಾಗ, ಕೆಲವು ಸಂದರ್ಭದಲ್ಲಿ ಹೈಕಮಾಂಡ್ ಮಧ್ಯಪ್ರವೇಶ ಮಾಡ್ತಾರೆ. ರಾಜ್ಯಗಳಲ್ಲಿ ಸಣ್ಣಪುಟ್ಟ ವ್ಯತ್ಯಾಸ ಆದಾಗ ಸರಿಪಡಿಸ್ತಾರೆ. ಹಿಂದೆಯೂ ಬಂದು ಇಲಾಖಾ ಪ್ರಗತಿ ಬಗ್ಗೆ ಹೈಕಮಾಂಡ್‌ನವರು ಬಂದು ಮಾಹಿತಿ ಪಡೀತಿದ್ದರು. ನಮಗೆಲ್ಲ ಮಾರ್ಗದರ್ಶನ ಮಾಡೋದೇ ಹೈಕಮಾಂಡ್ ಎಂದು ತಿಳಿಸಿದ್ದಾರೆ.

    ಸುರ್ಜೇವಾಲಾ ಅವರು ಬಂದರು ಎನ್ನುವ ಕಾರಣಕ್ಕೆ ಸಿಎಂ ಆಡಳಿತದಲ್ಲಿ ಹಿಡಿತ ಕಳ್ಕೊಂಡಿದ್ದಾರೆ ಎಂದು ತಿಳಿದುಕೊಳ್ಳಬಾರದು. ನಮ್ಮ ಆಡಳಿತ ರೀತಿ ವರಿಷ್ಠರಿಗೆ ಗೊತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ದತ್ತಾತ್ರೇಯ ಹೊಸಬಾಳೆ ಮನುಸ್ಮೃತಿ ವ್ಯಕ್ತಿ – ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

  • ನಾನು ಎಲ್ಲಾ ಶಾಸಕರ ಕೈಗೆ ಸಿಕ್ತೇನೆ, ಬೇರೆ ಸಚಿವರ ಬಗ್ಗೆ ಹೇಳಲ್ಲ: ಪರಮೇಶ್ವರ್‌

    ನಾನು ಎಲ್ಲಾ ಶಾಸಕರ ಕೈಗೆ ಸಿಕ್ತೇನೆ, ಬೇರೆ ಸಚಿವರ ಬಗ್ಗೆ ಹೇಳಲ್ಲ: ಪರಮೇಶ್ವರ್‌

    – ಸುರ್ಜೇವಾಲಾ ರಾಜ್ಯಕ್ಕೆ ಬಂದ್ಮೇಲೆ ಶಾಸಕರನ್ನ ಭೇಟಿಯಾಗಬಹುದು

    ಬೆಂಗಳೂರು: ರಾಜ್ಯಕ್ಕೆ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ (Randeep Surjewala) ಆಗಮಿಸುತ್ತಿರೋದು ಯಾಕೆ ಅಂತ ಗೊತ್ತಿಲ್ಲ. ರಾಜ್ಯಕ್ಕೆ ಅವರು ಬಂದ ಮೇಲೆ ಶಾಸಕರ ಜೊತೆ ಮಾತಾಡಬಹುದು ಅಂತ ಸಚಿವ ಪರಮೇಶ್ವರ್ (G Parameshwar) ‌ತಿಳಿಸಿದ್ದಾರೆ.

    ಶಾಸಕರ ಅಸಮಾಧಾನ ಹಿನ್ನೆಲೆ ಸುರ್ಜೇವಾಲ ರಾಜ್ಯಕ್ಕೆ ಆಗಮಿಸುತ್ತಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸುರ್ಜೇವಾಲ ಬರ್ತಿದ್ದಾರೆ ಅಂತ ಕೇಳಿದ್ದೇನೆ. ಅವರು ಮಾಮೂಲಿ ಬರ್ತಾನೇ ಇರ್ತಾರೆ. ಪ್ರಧಾನ ಕಾರ್ಯದರ್ಶಿಯಾಗಿ ಪ್ರತಿ ಬಾರಿ ಬಂದು ಹೋಗ್ತಾರೆ. ಈ ಬಾರಿ ಯಾಕೆ ಬರ್ತಿದ್ದಾರೆ ಗೊತ್ತಿಲ್ಲ. ಸ್ಪೆಷಲ್ ಆಗಿ ಯಾಕೆ ಬರ್ತಿದ್ದಾರೆ ಅಂತ ನನಗೇನು ಮಾಹಿತಿ ಇಲ್ಲ. ಸುರ್ಜೇವಾಲಾ ಬಂದಾಗ ಶಾಸಕರು ಭೇಟಿ ಅಗತ್ಯವಿದ್ದರೇ ಮಾಡಬಹುದು ಎಂದರು. ಇದನ್ನೂ ಓದಿ: ರೈಲ್ವೆ ಹಳಿಯ ಮೇಲೆ ಕಾರು ಚಲಾಯಿಸಿ ಶಾಕ್‌ ಕೊಟ್ಟ ಯುವತಿ; ಬೆಂಗಳೂರು-ಹೈದರಾಬಾದ್‌ ರೈಲು ಸೇವೆ ಸ್ಥಗಿತ

    ರಾಜ್ಯ ಉಸ್ತುವಾರಿ ಸುರ್ಜೇವಾಲಾ ಬದಲಾವಣೆ ಒತ್ತಾಯ ಬಂದಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅದು ಹೈಕಮಾಂಡ್‌ಗೆ ಸಂಬಂಧಿಸಿದ ವಿಷಯ. ಎಐಸಿಸಿಗೆ ಸಂಬಂಧಿಸಿದ ವಿಷಯ ನಾನು ಹೇಗೆ ಮಾತಾಡಲಿ? AICC ಅಧ್ಯಕ್ಷರು, ರಾಹುಲ್ ಗಾಂಧಿ ಇದನ್ನ ತೀರ್ಮಾನ ಮಾಡ್ತಾರೆ. ಯಾವ ರಾಜ್ಯಕ್ಕೆ ಯಾರನ್ನ ಉಸ್ತುವಾರಿ ಮಾಡಬೇಕು ಅಂತ. ರೀಶಫಲ್ ಒಂದೊಂದು ಸಾರಿ ಅಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಾಹ್ಯಾಕಾಶದಲ್ಲಿ ಮೊಳಕೆ ಒಡೆಯಲಿವೆ ಧಾರವಾಡ ಕೃಷಿ ವಿವಿಯ ಮೆಂತೆ, ಹೆಸರು ಕಾಳು!

    ನಾನು ಎಲ್ಲಾ ಶಾಸಕರ ಕೈಗೆ ಸಿಗುತ್ತೇನೆ
    ಸಚಿವರು ಕೈಗೆ ಸಿಗುತ್ತಿಲ್ಲ ಎಂಬ ಶಾಸಕರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಪರಂ, ನಾನು ಎಲ್ಲಾ ಶಾಸಕರ ಕೈಗೆ ಸಿಕ್ಕುತ್ತೇನೆ. ಶಾಸಕರಿಗೆ ಬೇರೆ ಮಂತ್ರಿಗಳು ಸಿಗದೇ ಹೋದರೆ, ಅದಕ್ಕೆ ನಾನು ಪ್ರತಿಕ್ರಿಯೆ ಕೊಡಲ್ಲ ಅಂತ ಹೇಳಿದ್ದಾರೆ.

    ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾನು ಎಲ್ಲರಿಗೂ ಸಿಕ್ತೀನಿ. ಕಚೇರಿಯಲ್ಲಿ, ಮನೆಯಲ್ಲಿ ಸಿಕ್ತೀನಿ. ನನಗೇನು ಸಮಸ್ಯೆ ಇಲ್ಲ. ಬೇರೆ ಸಚಿವರು ಸಿಗೊಲ್ಲ ಅನ್ನೋ ಬಗ್ಗೆ ನಾನು ಹೇಗೆ ಹೇಳಲಿ? ಬೇರೆ ಸಚಿವರ ಬಗ್ಗೆ ನಾನು ಮಾತಾಡೊಲ್ಲ. ಎಂದಿದ್ದಾರೆ. ಇದನ್ನೂ ಓದಿ: ವೀರ ವನಿತೆಯಾದ ರಶ್ಮಿಕಾ ಮಂದಣ್ಣ- ಗೆಸ್‌ ಮಾಡಿದ್ರೆ ನಿಮಗೆ ಸಿಗುತ್ತೆ ಸರ್ಪ್ರೈಸ್ 

    ಸರ್ಕಾರದಲ್ಲಿ ಯಾವುದೇ ಗೊಂದಲಗಳು ಇಲ್ಲ. ಸಿಎಂಗೂ ಶಾಸಕರಿಗೂ ಯಾವುದೇ ಗೊಂದಲ ಇಲ್ಲ. ಕೆಲ ಶಾಸಕರು ತಮ್ಮ ಕ್ಷೇತ್ರದ ಬಗ್ಗೆ ಮಾತಾಡಿದ್ದಾರೆ ಅಷ್ಟೇ ಇದಕ್ಕೆ ಇಡೀ ಸರ್ಕಾರವೇ ಗೊಂದಲ ಅಂತ ಹೇಳೋದು ಸರಿಯಲ್ಲ. ಸಿಎಂ ಅವರು ಇದೆಲ್ಲವನ್ನೂ ನೋಡ್ತಾರೆ ಅಂತ ತಿಳಿಸಿದ್ದಾರೆ.

  • ಬೆಳಗಾವಿಗೆ ಬರುತ್ತಿದ್ದಂತೆ ಡಿಸಿಎಂ ಡಿಕೆಶಿ ಸೈಲೆಂಟ್

    ಬೆಳಗಾವಿಗೆ ಬರುತ್ತಿದ್ದಂತೆ ಡಿಸಿಎಂ ಡಿಕೆಶಿ ಸೈಲೆಂಟ್

    ಬೆಳಗಾವಿ: ಕುಂದಾನಗರಿಗೆ (Belagavi) ಬರುತ್ತಿದ್ದಂತೆ ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಬಹಳ ಸೈಲೆಂಟ್‌ (Silent) ಆದಂತೆ ಕಾಣುತ್ತಿದೆ.

    ಪಕ್ಷದ‌ ಅಂತರಿಕ ಬೆಳವಣಿಗೆಗಳ‌ ಪ್ರಶ್ನೆಗೆ ಡಿಕೆಶಿ ಉತ್ತರ ಕೊಡುತ್ತಿಲ್ಲ. ಏನೇ ಕೇಳಿದರೂ ಸಹ ಪಕ್ಷ ಸಂಘಟನೆ ಮಾತ್ರ ನನ್ನ ಗುರಿ ಎನ್ನುತ್ತಿದ್ದಾರೆ. ಪ್ರಶ್ನೆ ಕೇಳಿದರೆ ರಾಜ್ಯ ಉಸ್ತುವಾರಿ ರಣದೀಪ್‌ ಸುರ್ಜೇವಾಲ‌ ಅವರ ಕಡೆ‌ ಬೊಟ್ಟು ಮಾಡುತ್ತಿದ್ದಾರೆ.

    ಕಾಂಗ್ರೆಸ್‌ ಪಕ್ಷದ ನೂತನ ಶಾಸಕರ‌ ವಿದೇಶಿ ಪ್ರವಾಸದ ಕುರಿತು ಬೆಳಗಾವಿ ‌ಉತ್ತರ ಕ್ಷೇತ್ರದ ಶಾಸಕ ಅಸೀಫ್‌ ಸೇಠ್ ಮಾತನಾಡಿದ್ದರು. ಮಾಧ್ಯಮಗಳು 15ಕ್ಕೂ ಹೆಚ್ಚು ಶಾಸಕರ ವಿದೇಶಿ ಪ್ರವಾಸದ ಬಗ್ಗೆ ಪ್ರಶ್ನೆ ಮಾಡಿದಾಗ ಅದರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಕೋರ್ಟ್‌ನಲ್ಲಿ ತನ್ನದೇ ವಿಡಿಯೋ ನೋಡಿದ ಪ್ರಜ್ವಲ್‌ ರೇವಣ್ಣ

    ನನ್ನದು ಈಗ ಜೈ ಬಾಪು, ‌ಜೈ ಭೀಮ್, ಜೈ ಸಂವಿಧಾನ್ ಮಾತ್ರ. ಪಕ್ಷ ಸಂಘಟನೆ ನನ್ನ‌ಗುರಿ ಎಂದು ಡಿಕೆಶಿ ಹೇಳಿ ಹೊರಟರು.

  • ಡಿಸಿಎಂ ಜೊತೆ ಸಭೆ ನಡೆಸಿದ್ದೇವೆ, ನಮ್ಮಲ್ಲಿ ಯಾವುದೇ ಪ್ರತಿಷ್ಠೆ ಇಲ್ಲ: ಎಂಬಿ ಪಾಟೀಲ್‌

    ಡಿಸಿಎಂ ಜೊತೆ ಸಭೆ ನಡೆಸಿದ್ದೇವೆ, ನಮ್ಮಲ್ಲಿ ಯಾವುದೇ ಪ್ರತಿಷ್ಠೆ ಇಲ್ಲ: ಎಂಬಿ ಪಾಟೀಲ್‌

    ಬೆಂಗಳೂರು: ನಾವು ಡಿಸಿಎಂ ಡಿಕೆ ಶಿವಕುಮಾರ್‌ (Dk Shivakumar) ಜೊತೆ ಸಭೆ ನಡೆಸಿದ್ದೇವೆ. ನಮ್ಮಲ್ಲಿ ಯಾವುದೇ ಪ್ರತಿಷ್ಠೆ ಇಲ್ಲ. ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ (MB Patil) ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು ಬೆಳಗಾವಿ ಅಧಿವೇಶನ ಬಗ್ಗೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಯಾರಲ್ಲೂ ಅಸಮಾಧಾನ ಇಲ್ಲ. ಎಲ್ಲರೂ ಕೂಡ ಪಕ್ಷ, ಸರ್ಕಾರದ ಹಿತದೃಷ್ಟಿಯಲ್ಲಿ ಕೆಲಸ ಮಾಡಬೇಕು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ ಸುರ್ಜೇವಾಲ (Randeep Surjewala) ಹೇಳಿರುವುದಾಗಿ ತಿಳಿಸಿದರು.

    ಬೆಳಗಾವಿ ರಾಜಕೀಯ ಬಗ್ಗೆ ಡಿಕೆಶಿ ಮಾಹಿತಿ ಕೊರತೆ ಇಲ್ಲ. ಪಕ್ಷದ ಎಲ್ಲ ಮಾಹಿತಿ ಅವರ ಬಳಿಯಿದೆ. ಸೋಮವಾರ ಬೆಳಗ್ಗೆ ನಡೆದ ಸರ್ವ ಸದಸ್ಯರ ಸಭೆಗೆ ಕಾರಣಾಂತರಗಳಿಂದ ಪರಮೇಶ್ವರ್‌ ಬರಲು ಸಾಧ್ಯವಾಗಿಲ್ಲ ಎಂದರು.  ಇದನ್ನೂ ಓದಿ: ಕಿಯೋನಿಕ್ಸ್ ವೆಂಡರ್ಸ್ ಆತ್ಮಹತ್ಯೆ ಮಾಡಿಕೊಂಡ್ರೆ ಪ್ರಿಯಾಂಕ್, ಶರತ್ ಬಚ್ಚೇಗೌಡ ಕಾರಣ: ರಾಷ್ಟ್ರಪತಿಗಳಿಗೆ ಪತ್ರ

    ನಮ್ಮಲ್ಲಿ ಹೈ ಕಮಾಂಡ್ ತೀರ್ಮಾನವೇ ಅಂತಿಮ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಚಾರವನ್ನು ಪಕ್ಷ ತೀರ್ಮಾನ ಮಾಡುತ್ತದೆ. ಸಚಿವರ ಬಗ್ಗೆ ಹೈಕಮಾಂಡ್‌ಗೆ ವರದಿ ನೀಡಿದರೆ ತಪ್ಪೇನು? ನಾವು ಕೆಲಸ ಮಾಡಿರುವುದು ಅವರಿಗೂ ಅರ್ಥವಾಗುತ್ತದೆ. ಪಕ್ಷದಲ್ಲಿ ಏನೇ ತೀರ್ಮಾನ ನಡೆದರೂ ಎಐಸಿಸಿ ಅಧ್ಯಕ್ಷರು ಮಾಡುತ್ತಾರೆ ಎಂದು ಹೇಳಿದರು.

    ಹಿಂದಿನ ಸರ್ಕಾರ 32-40 ಸಾವಿರ ಕೋಟಿ ರೂ. ಬಾಕಿಯಿಟ್ಟಿತ್ತು. ಬಾಕಿ ಇರಿಸಿದ ಪರಿಣಾಮ ನಮ್ಮ ಮೇಲೆ ಹೊರೆ ಆಗುತ್ತಿದೆ. ಸಿದ್ದರಾಮಯ್ಯನವರು 16 ಬಜೆಟ್‌ ಮಂಡನೆ ಮಾಡಿದ್ದು ಎಲ್ಲವೂ ಸರಿಯಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಗುತ್ತಿಗೆದಾರರ ಬಾಕಿ ಇರುವ ಎಲ್ಲಾ ಬಿಲ್‌ಗಳನ್ನು ನಾವು ಕ್ಲೀಯರ್‌ ಮಾಡುತ್ತೇವೆ. ಆದರೆ ಅನುಮತಿ ಇಲ್ಲದೇ ಪ್ರಾರಂಭ ಮಾಡಿದ್ದರೆ ಅದಕ್ಕೆ ಸರ್ಕಾರ ಭಾಗಿಯಾಗುವುದಿಲ್ಲ. ಕೆಐಡಿಬಿಯಲ್ಲಿ 960 ಕೋಟಿ ರೂ. ಬಾಕಿಯಿದೆ. ನಮ್ಮ ಇಲಾಖೆಯಲ್ಲಿ ಜಾಸ್ತಿ ಬಾಕಿ ಇಲ್ಲ ಎಂದರು.

    ಜಾತಿ ಜನಗಣತಿಗೆ ನಾನು ಎಂದು ವಿರೋಧ ಮಾಡಿಲ್ಲ. ವರದಿಯಲ್ಲಿ ಏನಿದೆ ನೋಡಿ ಆಮೇಲೆ ನಮ್ಮ ನಿಲುವು ತಿಳಿಸುತ್ತೇವೆ. ನೋಡದೇ ಯಾವುದೇ ಪ್ರತಿಕ್ರಿಯೆ ನೀಡಬಾರದು. ಲಿಂಗಾಯತ ಪಂಗಡ ಕೂಡಿಸಿ ಮಾಡಿ ಅಂತ ನಾನು ಮುಖ್ಯಮಂತ್ರಿಗಳಿಗೆ ಹೇಳಿದ್ದೇನೆ. ಲಿಂಗಾಯತ ಉಪ ಪಂಗಡ ಒಂದಾಗಿ ಸೇರಿಸಿ ಲೆಕ್ಕ ಮಾಡಿದರೆ ಎಲ್ಲರೂ ಆಪ್ತರೇ ಆಗುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.