‘ಲಾಪತಾ ಲೇಡಿಸ್’ (Laapataa Ladies) ಬೆನ್ನಲ್ಲೇ ಬಾಲಿವುಡ್ ನಟ ರಣ್‌ದೀಪ್ ಹೂಡಾ (Randeep Hooda) ನಟಿಸಿ, ನಿರ್ದೇಶಿಸಿರುವ ‘ಸ್ವಾತಂತ್ರ‍್ಯ ವೀರ್ ಸಾವರ್ಕರ್’ ಚಿತ್ರವು ಅಧಿಕೃತವಾಗಿ 2025ರ (Oscar 2025) ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ. ಇದನ್ನೂ ಓದಿ:ಹಿಂದಿ ಬಿಗ್ ಬಾಸ್‌ಗೆ ಎಂಟ್ರಿ ಕೊಡ್ತಾರಾ ಮಹೇಶ್ ಬಾಬು ಸಂಬಂಧಿ?
View this post on Instagram
ಆಮೀರ್ ಖಾನ್ ನಿರ್ಮಾಣದ ‘ಲಾಪತಾ ಲೇಡಿಸ್’ ಚಿತ್ರ ಆಸ್ಕರ್ ಆಯ್ಕೆಯಾದ ಬೆನ್ನಲ್ಲೇ ಈಗ ಈ ಸಿನಿಮಾ ಆಸ್ಕರ್ 2025ಕ್ಕೆ ಅಧಿಕೃತವಾಗಿ ಪ್ರವೇಶ ಪಡೆದಿದೆ. ಈ ಜೀವನಚರಿತ್ರೆಯಾಧಾರಿತ ಸಿನಿಮಾವೂ ಸ್ವಾತಂತ್ರ‍್ಯ ಹೋರಾಟಗಾರ ವಿನಾಯಕ ದಾಮೋದರ ಸಾವರ್ಕರ್ ಅವರ ಜೀವನಗಾಥೆಯನ್ನು ಹೊಂದಿದೆ. ಈ ಸಿನಿಮಾದಲ್ಲಿ ರಣ್‌ದೀಪ್ ಹೂಡಾ ಜೊತೆ ಬಾಲಿವುಡ್ ನಟಿ ಅಂಕಿತಾ ಲೋಖಂಡೆ (Ankitha Lokhande) ನಟಿಸಿದ್ದರು. ಈ ಚಿತ್ರ ಕಳೆದ ವರ್ಷ 2024ರಲ್ಲಿ ತೆರೆಕಂಡಿತ್ತು.
ಈ ಸಿನಿಮಾವೀಗ ಆಸ್ಕರ್‌ಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರು ಚಿತ್ರದ ನಿರ್ಮಾಪಕ ಸಂದೀಪ್ ಈ ಖುಷಿಯ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಂತಸದ ಜೊತೆ ಹೆಮ್ಮೆ ಹಾಗೂ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ಗೌರವ ಹಾಗೂ ವಿನಮ್ರತೆ, ನಮ್ಮ ಸಿನಿಮಾ ‘ಸ್ವಾತಂತ್ರ‍್ಯ ವೀರ್ ಸಾವರ್ಕರ್’ ಅಧಿಕೃತವಾಗಿ ಆಸ್ಕರ್‌ಗೆ ಆಯ್ಕೆಯಾಗಿದೆ. ಈ ಚಿತ್ರವನ್ನು ಗುರುತಿಸಿದ ‘Film Federation Of India’ ತಂಡಕ್ಕೆ ಧನ್ಯವಾದಗಳು. ನಮ್ಮನ್ನು ಬೆಂಬಲಿಸಿದವರಿಗೂ ಧನ್ಯವಾದಗಳು ಎಂದಿದ್ದಾರೆ.










ಮಗನ ಆರೈಕೆಯ ನಡುವೆಯೂ ಸಿನಿಮಾ ಬಗ್ಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ಹೊಸ ಚಿತ್ರದ ಟ್ರೈಲರ್ ಮೂಲಕ ನಟಿ ಸದ್ದು ಮಾಡ್ತಿದ್ದಾರೆ. ‘ತೇರಾ ಕ್ಯಾ ಹೋಗಾ ಲವ್ಲಿ’ (Tera Kya Hoga Lovely) ಎಂಬ ಸಿನಿಮಾದಲ್ಲಿ ನಟಿ ಇಲಿಯಾನಾ ನಾಯಕಿಯಾಗಿ ನಟಿಸಿದ್ದಾರೆ.
ಇಲಿಯಾನಾ, ಕರಣ್ ಕುಂದ್ರಾ, ರಣದೀಪ್ ಹೂಡಾ (Randeep Hooda) ನಟನೆಯ ‘ತೇರಾ ಕ್ಯಾ ಹೋಗಾ ಲವ್ಲಿ’ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಟ್ರೈಲರ್‌ನಲ್ಲಿ ಮುಖದ ಬಣ್ಣ ಮತ್ತು ವರದಕ್ಷಿಣೆಯ ವಿಚಾರವಾಗಿ ಸಮಾಜ ನೋಡುವ ರೀತಿಯ ಬಗ್ಗೆ ತೋರಿಸಲಾಗಿದೆ. ಸದ್ಯ ರಿಲೀಸ್ ಆಗಿರುವ ಟ್ರೈಲರ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದು, ಸಿನಿಮಾ ಕುರಿತು ಅಭಿಮಾನಿಗಳಿಗೆ ಹೆಚ್ಚಿನ ನಿರೀಕ್ಷೆ ಮೂಡಿಸಿದೆ.
ಬಲ್ವಿಂದರ್ ಸಿಂಗ್ ಜಂಜುವಾ ನಿರ್ದೇಶನದ ಸಿನಿಮಾದಲ್ಲಿ ಇಲಿಯಾನಾ ಪಾತ್ರ ಭಿನ್ನವಾಗಿದ್ದು, ಮಧ್ಯಮ ಕುಟುಂಬದ ಹುಡುಗಿಯಾಗಿರುವ ನಾಯಕಿ ಇಲಿಯಾನಾ ಮದುವೆ ಸಂದರ್ಭದಲ್ಲಿ ಏನೆಲ್ಲ ಕಷ್ಟಗಳನ್ನು ಎದುರಿಸುತ್ತಾರೆ. ಬ್ಯೂಟಿ ಬಗ್ಗೆ ಸಮಾಜದ ನಡೆಯೇನು ಎಂಬುದನ್ನು ತೋರಿಸುವ ವಿಭಿನ್ನ ಸಿನಿಮಾ ಇದಾಗಿದೆ. ಇದನ್ನೂ ಓದಿ:
ಇಲಿಯಾನಾ ಜೊತೆ ಮೊದಲ ಬಾರಿಗೆ ತೆರೆಹಂಚಿಕೊಂಡಿರುವ ರಣದೀಪ್ ಹೂಡಾ ಪೊಲೀಸ್ ಆಫೀಸರ್ ಪಾತ್ರದಲ್ಲಿ ನಟಿಸಿದ್ದಾರೆ. ‘ತೇರಾ ಕ್ಯಾ ಹೋಗಾ ಲವ್ಲಿ’ ಚಿತ್ರವು ಮಹಿಳಾ ದಿನಾಚರಣೆ ಮಾರ್ಚ್ 8ರಂದು ರಿಲೀಸ್ ಆಗುತ್ತಿದೆ. ಮುದ್ದು ಮಗನ ಆಗಮನದ ನಂತರ ರಿಲೀಸ್ ಆಗ್ತಿರುವ ಈ ಚಿತ್ರದ ಬಗ್ಗೆ ಇಲಿಯಾನಾಗೆ ಹೆಚ್ಚಿನ ನಿರೀಕ್ಷೆಯಿದೆ.
ಕನ್ನಡದ ಹುಡುಗ- ಹುಡುಗಿ ನಟಿ ಇಲಿಯಾನಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದರು. ಆಗಸ್ಟ್ 1ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ವಿಚಾರವನ್ನ ತಡವಾಗಿ ರಿವೀಲ್ ಮಾಡಿದ್ದರು. ಕೋವಾ ಫೀನಕ್ಸ್ ಡೋಲನ್ ಎಂದು ಮಗುವಿಗೆ ಹೆಸರನ್ನು ಇಟ್ಟಿದ್ದರು. ಪದಗಳಲ್ಲಿ ನಮ್ಮ ಸಂತಸವನ್ನು ಹೇಳಿಕೊಳ್ಳಲು ಆಗುತ್ತಿಲ್ಲ. ಈ ಪ್ರಪಂಚಕ್ಕೆ ನಮ್ಮ ಮಗುವಿನ ಆಗಮನವಾಗಿದೆ. ಅವನಿಗೆ ಸ್ವಾಗತ ಎಂದು ಸಂಭ್ರಮದಿಂದ ನಟಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು.













