Tag: Randeep

  • ಕೊರೊನಾದಿಂದ ಮೃತಪಟ್ಟವರ ಶವ ಸಂಸ್ಕಾರಕ್ಕೆ ಚಿತಾಗಾರ ಮೀಸಲು – ಅಂತ್ಯಕ್ರಿಯೆಯ ವೆಚ್ಚ ಭರಿಸಲಿರೋ ಬಿಬಿಎಂಪಿ

    ಕೊರೊನಾದಿಂದ ಮೃತಪಟ್ಟವರ ಶವ ಸಂಸ್ಕಾರಕ್ಕೆ ಚಿತಾಗಾರ ಮೀಸಲು – ಅಂತ್ಯಕ್ರಿಯೆಯ ವೆಚ್ಚ ಭರಿಸಲಿರೋ ಬಿಬಿಎಂಪಿ

    ಬೆಂಗಳೂರು: ಕೊರೊನಾದಿಂದ ಮತ್ತು ನಾನ್ ಕೋವಿಡ್‍ನಿಂದ ಮೃತಪಟ್ಟವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿತ್ತು. ಇದರಿಂದ ನಗರದಲ್ಲಿರುವ ಚಿತಾಗಾರದ ಬಳಿ ಜನರು, ಅಂಬುಲೆನ್ಸ್ ಸಾಲಾಗಿ ನಿಲ್ಲುತ್ತಿದ್ದವು. ಇದರಿಂದ ಬಿಬಿಎಂಪಿ ಕೋವಿಡ್‍ನಿಂದ ಮೃತಪಟ್ಟ ವ್ಯಕ್ತಿಗಳ ಶವಸಂಸ್ಕಾರಕ್ಕೆ ವಿದ್ಯುತ್ ಚಿತಾಗಾರಗಳನ್ನು ಮೀಸಲು ಮಾಡಿದೆ.

    ಬಿಬಿಎಂಪಿ ವಿಶೇಷ ಆಯುಕ್ತ ರಣದೀಪ್ ಈ ಆದೇಶ ಹೊರಡಿಸಿದ್ದು, ಇಂದಿನಿಂದಲೇ ಆದೇಶ ಜಾರಿಯಾಗಲಿದೆ ಎಂದು ತಿಳಿಸಿದ್ದಾರೆ. ವಿದ್ಯುತ್ ಚಿತಾಗಾರಗಳ ಮೀಸಲು ಜೊತೆಗೆ ಕೋವಿಡ್‍ನಿಂದ ಮೃತಪಟ್ಟವರ ಉಚಿತ ಶವ ಸಂಸ್ಕಾರಕ್ಕೂ ಬಿಬಿಎಂಪಿ ಆಯುಕ್ತ ಆದೇಶ ನೀಡಿದ್ದಾರೆ.

    ಆರ್.ಆರ್.ನಗರದ ಕೆಂಗೇರಿ ಚಿತಾಗಾರ, ಯಲಹಂಕದ ಮೇಡಿ ಅಗ್ರಹಾರ ಚಿತಾಗಾರ, ಬೊಮ್ಮನಹಳ್ಳಿ ಕಡ್ಲು ಚಿತಾಗಾರ ಮತ್ತು ಮಹಾದೇವಪುರ ಪುತ್ತೂರು ಚಿತಾಗಾರ ಈ ನಾಲ್ಕು ವಿದ್ಯುತ್ ಚಿತಾಗಾರಗಳನ್ನು ನಗರದಲ್ಲಿ ಬಿಬಿಎಂಪಿ ಮೀಸಲಿಟ್ಟಿದೆ. ಸಾಮಾನ್ಯ ಸಾವು ಹಾಗೂ ಕೊರೊನಾದಿಂದ ಮೃತಪಟ್ಟವರ ಶವ ಸಂಸ್ಕಾರದಿಂದ ಸಾಲು ಹೆಚ್ಚಾಗುತ್ತಿತ್ತು. ಹೀಗಾಗಿ ವಿದ್ಯುತ್ ಚಿತಾಗಾರಗಳಲ್ಲಿ ಆಗುತ್ತಿದ್ದ ಒತ್ತಡ ಕಡಿಮೆಗೊಳಿಸಲು ಚಿತಾಗಾರಗಳ ಮೀಸಲು ಮಾಡಲಾಗಿದೆ ಎಂದು ರಣದೀಪ್ ತಿಳಿಸಿದ್ದಾರೆ.

    ಇನ್ನೂ ಶವ ಸಂಸ್ಕಾರಕ್ಕೆ ನೀಡಲಾಗುವ ಪ್ರೋತ್ಸಾಹ ಧನವನ್ನು ಕೂಡ ಬಿಬಿಎಂಪಿ ಭರಿಸಲಿದೆ. ಸ್ಥಳೀಯವಾಗಿ ಚಟ್ಟ, ಮಡಕೆ, ದಹನ ಪ್ರಕ್ರಿಯೆಗೆ ಆಗುವ ಎಲ್ಲ ವೆಚ್ಚವನ್ನು ಬಿಬಿಎಂಪಿ ಭರಿಸಲಿದೆ. ಅಲ್ಲದೇ ಬಿಬಿಎಂಪಿ ಕೋವಿಡ್‍ನಿಂದ ಮೃತಪಟ್ಟವರ ಶವ ಸಂಸ್ಕಾರಕ್ಕೆ ದರ ನಿಗದಿ ಮಾಡಲಾಗಿದೆ.

    ದಹನ ಶುಲ್ಕ 250, ಚಟ್ಟ 900, ಬೂದಿ ಪಾತ್ರೆ 100, ದಹನ ಕ್ರಿಯೆ ಸಿಬ್ಬಂದಿ ಪ್ರೋತ್ಸಾಹ ದರ 500 ರೂಪಾಯಿಯನ್ನು ನಿಗದಿ ಮಾಡಲಾಗಿದೆ. ಒಟ್ಟಾರೆ ಪ್ರತಿ ಶವ ಸಂಸ್ಕಾರಕ್ಕೆ ಒಟ್ಟು 1,750 ರೂಪಾಯಿಯನ್ನು ಬಿಬಿಎಂಪಿ ಭರಿಸಲಿದೆ. ಈ ಆದೇಶ ಇಂದಿನಿಂದಲೇ ಜಾರಿಯಾಗಲಿದೆ ಎಂದು ವಿಶೇಷ ಆಯುಕ್ತ ರಣದೀಪ್ ಆದೇಶ ಹೊರಡಿಸಿದ್ದಾರೆ.

  • ಡಿಪ್‍ವೀರ್ ಮದ್ವೆಗೆ ಬರೋವರಿಗೆ ಷರತ್ತುಗಳು ಅನ್ವಯ!

    ಡಿಪ್‍ವೀರ್ ಮದ್ವೆಗೆ ಬರೋವರಿಗೆ ಷರತ್ತುಗಳು ಅನ್ವಯ!

    – ಇಟಲಿಯಲ್ಲಿ ದೀಪಿಕಾ ಮದ್ವೆ ಸಿದ್ಧತೆ
    – ಅತಿಥಿಗಳಿಗೆ ತಯಾರಾಗಲಿದೆ ವಿಶೇಷ ಆಹಾರ

    ಮುಂಬೈ: ಇದೇ ಬುಧವಾರ ಮತ್ತು ಗುರುವಾರ ಕನ್ನಡತಿ ದೀಪಿಕಾ ಪಡುಕೋಣೆ ಮದುವೆ ಪಂಜಾಬಿ ಚೆಲುವನ ಜೊತೆ ನಡೆಯಲಿದೆ. ಈಗಾಗಲೇ ಎರಡು ಕುಟುಂಬಗಳು ಇಟಲಿಯ ಕೋಮೋ ನಗರ ತಲುಪಿವೆ. ಕೋಮೋ ನಗರದಲ್ಲಿ ರೆಸಾರ್ಟ್ ನಲ್ಲಿ ಮದುವೆಯ ಸಿದ್ಧತೆಗಳು ಆರಂಭವಾಗಿವೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

    ದೀಪಿಕಾ ಮತ್ತು ರಣ್‍ವೀರ್ ಮದುವೆ ನೋಡಲು ದೇಶಾದ್ಯಂತ ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಮದುವೆ ಪೂರ್ವ ಶಾಸ್ತ್ರಗಳನ್ನು ಮುಗಿಸಿಕೊಂಡಿರುವ ಜೋಡಿ ಬುಧವಾರ ಸಾಂಸಾರಿಕ ಜೀವನ ಪ್ರವೇಶಿಸಲಿದ್ದಾರೆ. ರಣ್‍ವೀರ್ ಪಂಜಾಬಿ ಸಂಪ್ರದಾಯಸ್ಥ ಕುಟುಂಬದವರಾಗಿದ್ದರೆ, ದೀಪಿಕಾ ದಕ್ಷಿಣ ಭಾರತದ ಅಪ್ಪಟ ಕನ್ನಡತಿ. ಹೀಗಾಗಿ ಮದುವೆ ಕಾರ್ಯಕ್ರಮ ಎರಡು ಸಂಪ್ರದಾಯದಂತೆ ನಡೆಯಲಿದೆ. ದೀಪಿಕಾ ಮೊದಲು ಪಂಜಾಬಿ ವಧುವಿನ ಲುಕ್ ನಲ್ಲಿ ಕಾಣಿಸಿಕೊಂಡ್ರೆ, ನಂತರ ಕನ್ನಡದ ಕೊಂಕಣಿ ಸಂಪ್ರದಾಯ ಉಡುಪಿನಲ್ಲಿ ಮಿಂಚಲಿದ್ದಾರೆ.

    ಸ್ಪೆಶಲ್ ಡಿಶ್:
    ಮದುವೆಗೆ ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಜನರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಎರಡು ಬಗೆಯ ಆಹಾರ ಖಾದ್ಯಗಳನ್ನು ಸಿದ್ಧಪಡಿಸಲಾಗುತ್ತಿದೆ. ಮದುವೆಯಲ್ಲಿ ಬಗೆ ಬಗೆಯ ರೈಸ್ ಡಿಶಸ್ ಜೊತೆ ಪಂಜಾಬಿ ಊಟವು ಮೆನುವಿನಲ್ಲಿದೆ. ಈ ಎಲ್ಲ ಆಹಾರದ ಜೊತೆಗೆ ಇಟಾಲಿಯನ್ ಮತ್ತು ಕಾಂಟಿನೆಟಲ್ ಆಹಾರವು ಮೆನುವಿನಲ್ಲಿ ಇರಲಿದೆ. ವಿದೇಶಿ ಆಹಾರ ಸಿದ್ಧಪಡಿಸಲು ಸ್ವಿಟ್ಜಲ್ರ್ಯಾಂಡ್ ಬಾಣಸಿಗರನ್ನು ರೆಸ್ಟೋರೆಂಟ್ ಸಿಬ್ಬಂದಿ ನೇಮಕ ಮಾಡಿದ್ದಾರೆ.

    ಏನದು ಷರತ್ತು?
    ದೀಪಿಕಾ ಮತ್ತು ರಣ್‍ವೀರ್ ಸಿಂಗ್ ಮದುವೆಯಲ್ಲಿ ಕೇವಲ ಆಪ್ತರು ಭಾಗಿಯಾಗಲಿದ್ದಾರೆ. ಕೆಲ ಬಾಲಿವುಡ್ ತಾರೆಗಳು ಸೇರಿದಂತೆ ಎರಡು ಕುಟುಂಬಸ್ಥರು ಮದುವೆಯಲ್ಲಿ ಹಾಜರಾಗಲಿದ್ದಾರೆ. ಒಟ್ಟಾರೆಯಾಗಿ 200ಕ್ಕಿಂತ ಕಡಿಮೆ ಜನರಿಗೆ ಮಾತ್ರ ಆಹ್ವಾನಿಸಲಾಗಿದೆ. ಮದುವೆ ವೇಳೆ ಅತಿಥಿಗಳಿಗೆ ಮೊಬೈಲ್ ಫೋನ್ ತರದಂತೆ ಕುಟುಂಬಸ್ಥರು ಷರತ್ತು ವಿಧಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಮದುವೆ ಬಳಿಕ ಜೋಡಿ ಮುಂಬೈ ಅಥವಾ ಬೆಂಗಳೂರಿನಲ್ಲಿ ವಿಶೇಷ ಔತಣಕೂಟವನ್ನು ಏರ್ಪಡಿಸಲಿದೆ.

    ರಾಮ್‍ಲೀಲಾ ಸಿನಿಮಾ ಮೂಲಕ ತೆರೆಯ ಮೇಲೆ ಒಂದಾದ ಈ ಜೋಡಿ ಮೂರು ಸೂಪರ್ ಹಿಟ್ ಚಿತ್ರಗಳನ್ನು ನೀಡಿದೆ. ರಾಮ್‍ಲೀಲಾ ಚಿತ್ರದ ಬಳಿಕ ಇಬ್ಬರು ಪ್ರೇಮ ಪಾಶದಲ್ಲಿ ಸಿಲುಕಿದ್ದರು. ಆದ್ರೆ ಎಂದು ನಾವಿಬ್ಬರು ಒಳ್ಳೆಯ ಗೆಳೆಯರು ಎಂದು ಮಾತ್ರ ಈ ಜೋಡಿ ಹೇಳಿಕೊಂಡಿತ್ತು. ಮದುವೆ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದರು. ಇತ್ತೀಚೆಗೆ ಮದುವೆ ಪೂರ್ವದ ಶಾಸ್ತ್ರದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    https://www.youtube.com/watch?v=G-TXSoWvxVk

    https://www.youtube.com/watch?v=Ee3lRmxv38E

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಹುಣಸೂರು ಹನುಮ ಜಯಂತಿ ಪ್ರಕರಣ: ಪರಿಸ್ಥಿತಿ ನಿಯಂತ್ರಣಕ್ಕೆ ಕನಿಷ್ಠ ಬಲ ಪ್ರಯೋಗವಾಯ್ತು ಎಂದು ಡಿಸಿ ಸ್ಪಷ್ಟನೆ

    ಹುಣಸೂರು ಹನುಮ ಜಯಂತಿ ಪ್ರಕರಣ: ಪರಿಸ್ಥಿತಿ ನಿಯಂತ್ರಣಕ್ಕೆ ಕನಿಷ್ಠ ಬಲ ಪ್ರಯೋಗವಾಯ್ತು ಎಂದು ಡಿಸಿ ಸ್ಪಷ್ಟನೆ

    ಮೈಸೂರು: ಹುಣಸೂರಿನಲ್ಲಿ ಹನುಮ ಜಯಂತಿ ವೇಳೆ ಗಲಭೆ ನಡೆದ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾಡಳಿತ ಘಟನೆ ಕುರಿತು ಸ್ಪಷ್ಟೀಕರಣ ನೀಡಿದೆ.

    ಜಿಲ್ಲಾಧಿಕಾರಿ ಡಿ.ರಂದೀಪ್ ಇಡೀ ಘಟನೆಯ ಸಂಪೂರ್ಣ ವಿವರ ನೀಡಿದ್ದು, ಜಯಂತಿ ಆಚರಣೆಯ ಸಂದರ್ಭದಲ್ಲಿ ತೆಗೆದುಕೊಂಡ ಕ್ರಮಗಳ ಮಾಹಿತಿ ಬಹಿರಂಗಪಡಿಸಿದ್ದಾರೆ. ಜಿಲ್ಲಾಡಳಿತ ಹಾಗೂ ಗೃಹ ಕಾರ್ಯದರ್ಶಿಗಳ ನಡುವಿನ ಪತ್ರವ್ಯವಹಾರದ ಮಾಹಿತಿಯೂ ಬಹಿರಂಗವಾಗಿದೆ.

    ಮೆರವಣಿಗೆಗೆ ಅವಕಾಶವೇ ನೀಡಿಲ್ಲ ಅಂತ ಆರೋಪ ಮಾಡೋದು ಸರಿಯಲ್ಲ. ಎಲ್ಲವೂ ಕಾನೂನಿನ ರೀತಿಯಲ್ಲೆ ನಡೆದಿದೆ. ಆದ್ರೆ ಹನುಮ ಜಯಂತಿ ವೇಳೆ ನಿಗದಿತ ಸ್ಥಳದಿಂದ ನಿಗದಿತ ಸಮಯಕ್ಕೆ ಮೆರವಣಿಗೆ ಹೊರಟಿಲ್ಲ. ಪರಿಣಾಮ ಸ್ಥಳದಲ್ಲಿ ಹೆಚ್ಚಿನ ಜನ ಸೇರುವಂತಾಯಿತು. ಪರಿಸ್ಥಿತಿ ನಿಯಂತ್ರಣಕ್ಕೆ ಅಲ್ಲಿನ ಉಪವಿಭಾಗಾಧಿಕರಿಗಳು ಪೊಲೀಸರಿಗೆ ಮನವಿ ಮಾಡಿದ್ದಾರೆ. ಆಗ ಪೊಲೀಸರು ಕನಿಷ್ಠ ಬಲಪ್ರಯೋಗಿಸಿ ಗುಂಪು ಚದುರಿಸಿದ್ದಾರೆ. ಈ ಎಲ್ಲಾ ಕ್ರಮಗಳನ್ನ ಸಾರ್ವಜನಿಕ ಹಿತಾಸಕ್ತಿಯಿಂದ ತೆಗೆದುಕೊಳ್ಳಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಡಿ. ರಂದೀಪ್ ಸ್ಪಷ್ಟೀಕರಣ ನೀಡಿದ್ದಾರೆ.

    ಈದ್ ಮಿಲಾದ್, ಹನುಮಜಯಂತಿ ಮೆರವಣಿಗೆಗೆ ತೆಗೆದುಕೊಂಡಿದ್ದ ಕ್ರಮಗಳ ಬಗ್ಗೆ ಜಿಲ್ಲಾಡಳಿತ ಮೂರು ದಾಖಲೆಗಳನ್ನ ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ. ನಂತರ ಹನುಮಜಯಂತಿ ವಿಚಾರವಾಗಿ ಮೇಲ್ಮನವಿ ಸಲ್ಲಿಕೆ ಹಾಗೂ ಅದಕ್ಕೆ ಗೃಹಕಾರ್ಯದರ್ಶಿಗಳಿಂದ ಬಂದ ಉತ್ತರದ ಮಾಹಿತಿಯನ್ನೂ ಬಿಡುಗಡೆ ಮಾಡಿದ್ದು, ದಾಖಲೆಗಳ ಸಮೇತ ಜಿಲ್ಲಾಡಳಿತ ಸ್ಪಷ್ಟೀಕರಣ ನೀಡಿದೆ.