Tag: ranchi

  • ಗನ್ ಬಿಟ್ಟು ಚಾಕ್ ಪೀಸ್ ಹಿಡಿದು ಪಾಠ ಮಾಡಿದ ಯೋಧರು!

    ಗನ್ ಬಿಟ್ಟು ಚಾಕ್ ಪೀಸ್ ಹಿಡಿದು ಪಾಠ ಮಾಡಿದ ಯೋಧರು!

    ರಾಂಚಿ: ರಾಜ್ಯವ್ಯಾಪಿ ಪ್ರತಿಭಟನೆಯಲ್ಲಿ ಶಿಕ್ಷಕರು ತೊಡಗಿದ್ದರಿಂದ ಜಾರ್ಖಂಡ್ ರಾಜ್ಯದ ರಾಮಘಡ ಜಿಲ್ಲೆಯ ಶಾಲೆಯಲ್ಲಿ ಯೋಧರು ಶಸ್ತ್ರಾಸ್ತ್ರವನ್ನು ಬಿಟ್ಟು ಮಕ್ಕಳಿಗೆ ಪಾಠ ಹೇಳಿಕೊಟ್ಟಿದ್ದಾರೆ.

    ಹೌದು, ದೇಶವನ್ನು ಕಾಯುವ ಯೋಧರು ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಬಲ್ಲ ನೈಪುಣ್ಯತೆಯನ್ನು ಹೊಂದಿರುತ್ತಾರೆನ್ನುವುದು ಮತ್ತೊಮ್ಮೆ ಸಾಭೀತಾಗಿದೆ.

    ಜಾರ್ಖಂಡ್‍ನ ನಕ್ಸಲ್ ಪೀಡಿತ ಜಿಲ್ಲೆಗಳಲ್ಲಿ ಒಂದಾದ ರಾಮಘಡ ಜಿಲ್ಲೆಯಲ್ಲಿ ಶಿಕ್ಷಕರು ರಾಜ್ಯವ್ಯಾಪಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಶಿಕ್ಷಕರ ಅಭಾವವನ್ನು ತಪ್ಪಿಸಲು ಸ್ವತಃ ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್‌ಪಿಎಫ್)ಯ ಯೋಧರು ತಮ್ಮ ಗನ್‍ಗಳನ್ನು ಬಿಟ್ಟು, ಮಕ್ಕಳಿಗಾಗಿ ಚಾಕ್ ಪೀಸ್ ಹಿಡಿದಿದ್ದಾರೆ. ಅಲ್ಲದೇ ಶಾಲೆಗಳಲ್ಲಿ ಮಕ್ಕಳಿಗೆ ಪಾಠವನ್ನು ಮಾಡಿದ್ದಾರೆ. ಈ ಮೂಲಕ ದೇಶವನ್ನು ನಿರ್ಮಿಸುವ ಎಲ್ಲಾ ಕೆಲಸಗಳಲ್ಲಿ ಸಮರ್ಥರಿದ್ದೇವೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ರಾಜ್ಕೀಯಾ ಕೃತ್ ಮಧ್ಯ ವಿದ್ಯಾಲಯದ ಪ್ರಾಂಶುಪಾಲ ರಾಮ್ ಸರಣ್ ಯಾದವ್, ಶಿಕ್ಷಕರ ಪ್ರತಿಭಟನೆಯ ಸಮಯದಲ್ಲಿ ನಮಗೆ ನಿರಂತರವಾಗಿ ತರಗತಿಗಳನ್ನು ನಡೆಸಲು ನಾವು ತುಂಬಾ ಕಷ್ಟಪಟ್ಟಿದ್ದೇವು. ಈ ವೇಳೆ ಸಿಆರ್‍ಪಿಎಫ್‍ನ 26ನೇ ಬೆಟಾಲಿಯನ್ ಯೋಧರು ಈ ಕಾರ್ಯಕ್ಕೆ ತೊಡಗಿಕೊಂಡು, ತರಗತಿಗಳು ಮೊದಲಿನಂತೆ ನಡೆಯಲು ಸಹಕರಿಸಿದ್ದಾರೆಂದು ಹೇಳಿದ್ದಾರೆ.

    ಸಿಆರ್‌ಪಿಎಫ್ ಯೋಧರು ಜಾರ್ಖಂಡ್ ರಾಜ್ಯದ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ನಿರಂತರವಾಗಿ ಕಣ್ಗಾವಲನ್ನು ಇಟ್ಟಿದ್ದರೂ, ಇದರ ಮಧ್ಯೆಯೇ ಮಕ್ಕಳಿಗೆ ಬೋಧನೆ ಮಾಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ದೇಶದ ಯಾವುದೇ ಕಠಿಣ ಪರಿಸ್ಥಿತಿಗಳಲ್ಲಿ ಮೊದಲು ನೆನಪಿಗೆ ಬರುವುದೇ ನಮ್ಮ ಯೋಧರು. ಪ್ರವಾಹ, ಚಂಡಮಾರುತ, ಭೂಕಂಪ ಸೇರಿದಂತೆ ಯಾವುದೇ ಪ್ರಕೃತಿ ವಿಕೋಪಗಳಲ್ಲಿ ಸದಾ ಮುನ್ನುಗ್ಗಿ ಜನರ ರಕ್ಷಣೆಗೆ ತಮ್ಮ ಪ್ರಾಣವನ್ನೇ ಮುಡುಪಾಗಿಡುತ್ತಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆರಗಿದ 11 ಮಂದಿ ಕಾಮುಕರು!

    ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆರಗಿದ 11 ಮಂದಿ ಕಾಮುಕರು!

    ರಾಂಚಿ: ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ 11 ಮಂದಿ ಕಾಮುಕರು ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.

    ಜಾರ್ಖಂಡ್ ನ ಲೋಹರ್ದಾಗಾ ಜಿಲ್ಲೆಯಲ್ಲಿ ಈ ಘಟನೆ ಆಗಸ್ಟ್ 16 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬಂಧಿತ ಆರೋಪಿಗಳು 18 ಮತ್ತು 28 ವಯಸ್ಸಿನರಾಗಿದ್ದು, ಹಿರಿ ಹರ್ರಾ ಟೋಲಿ ಪ್ರದೇಶದಲ್ಲಿ ದಾಳಿ ಮಾಡಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಉಪ ಅಧೀಕ್ಷಕ ಆಶಿಶ್ ಕುಮಾರ್ ಮಹ್ಲಿ ಹೇಳಿದ್ದಾರೆ.

    ನಡೆದಿದ್ದೇನು?
    ಆಗಸ್ಟ್ 16 ರಂದು ಇಬ್ಬರು ಬಾಲಕಿಯರು ಪಕ್ಕದ ಮನೆಯ ಮಹಿಳೆ ಜೊತೆ ಬೈಕ್ ನಲ್ಲಿ ತೆರಳುತ್ತಿದ್ದರು. ದಾರಿ ಮಧ್ಯೆ ಅಂದರೆ ಹಿರಿ ಹೆರ್ರ ಟೋಪಿ ರೈಲ್ವೇ ಪ್ರದೇಶದಲ್ಲಿ ಬೈಕ್ ಕೆಟ್ಟು ನಿಂತು ಹೋಗಿದೆ. ಈ ವೇಳೆ ಬಾಲಕಿಯೊಬ್ಬಳು ಸ್ನೇಹಿತನಿಗೆ ಕರೆ ಮಾಡಿ ಸಹಾಯ ಮಾಡುವಂತೆ ಕೇಳಿದ್ದಾಳೆ. ಆದರೆ ಸ್ನೇಹಿತ ಸಹಾಯಕ್ಕೆ ಬದಲು 11 ಮಂದಿಯನ್ನು ಸ್ಥಳಕ್ಕೆ ಕಳುಹಿಸಿದ್ದಾನೆ.

    ಸ್ಥಳಕ್ಕೆ ಬಂದ ಆರೋಪಿಗಳು ಮಹಿಳೆಯ ಮೇಲೆ ಹಲ್ಲೆ ಮಾಡಿ ಬೆದರಿಸಿ ಅಲ್ಲಿಂದ ಓಡಿಸಿದ್ದಾರೆ. ಬಳಿಕ ಇಬ್ಬರು ಬಾಲಕಿಯರನ್ನು ಪ್ರತ್ಯೇಕ ಸ್ಥಳಕ್ಕೆ ಕರೆದುಕೊಂಡು ಹೋಗಿ 11 ಮಂದಿ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದಾರೆ. ಆರೋಪಿಗಳು ಅತ್ಯಾಚಾರ ಎಸಗಿದ್ದಲ್ಲದೆ ಅವರ ಬಳಿಯಿದ್ದ ಮೊಬೈಲ್ ಫೋನ್ ಗಳನ್ನು ಸಹ ಕಸಿದುಕೊಂಡು ಪರಾರಿಯಾಗಿದ್ದಾರೆ ಎಂದು ಡಿಸಿಪಿ ಹೇಳಿದ್ದಾರೆ.

    ಸದ್ಯಕ್ಕೆ ಇಬ್ಬರು ಬಾಲಕಿಯರ ಹೇಳಿಕೆಯ ಆಧಾರದ ಮೇರೆಗೆ ಸರ್ದಾರ್ ಪೊಲೀಸ್ ಠಾಣೆಯಲ್ಲಿ 11 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಒಂದೇ ಕುಟುಂಬದ 7 ಮಂದಿ ಆತ್ಮಹತ್ಯೆಗೆ ಶರಣು

    ಒಂದೇ ಕುಟುಂಬದ 7 ಮಂದಿ ಆತ್ಮಹತ್ಯೆಗೆ ಶರಣು

    ರಾಂಚಿ: ದೆಹಲಿಯ ಬುರಾರಿಯಲ್ಲಿ ಒಂದೇ ಕುಟುಂಬದ 11 ಮಂದಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡ ಬಳಿಕ ಮತ್ತೊಂದು ಅಘಾತಕಾರಿ ಆತ್ಮಹತ್ಯೆ ಘಟನೆ ವರದಿಯಾಗಿದೆ. ರಾಂಚಿಯ ಒಂದೇ ಕುಟುಂಬದ 7 ಮಂದಿ ಸಾಮೂಹಿಕವಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಘಟನೆ ನಡೆದಿದ್ದು, ಸಾಮೂಹಿಕ ಆತ್ಮಹತ್ಯೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆ ವೇಳೆ ಎಲ್ಲರೂ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ತಿಳಿದು ಬಂದಿದೆ. ಆದರೆ ಈ ಕುರಿತು ಸಂಪೂರ್ಣ ತನಿಖೆ ಬಳಿಕ ಸಾವಿಗೆ ನಿಖರ ಕಾರಣ ತಿಳಿಯುತ್ತದೆ ಎಂದು ಪೊಲೀಸರು ತಿಳಿಸಿದ್ದಾಗಿ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

    ಪತಿ ದೀಪಕ್ ಝಾ (40), ಪತ್ನಿ ಸೋನಿ ಝಾ, ರೂಪೇಶ್ ಝಾ, ಪುತ್ರಿ ದೃಷ್ಟಿ(7), ಕಿರಿಯ ಪುತ್ರ ಗಂಜು ಹಾಗೂ ದೀಪಕ್ ಝಾ ತಂದೆ, ತಾಯಿ ಮೃತದೇಹಗಳು ಸಹ ಮನೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಈ ಘಟನೆಗೂ ಒಂದು ತಿಂಗಳ ಮುನ್ನ 6 ಮಂದಿಯ ಕುಟುಂಬವೊಂದು ಜಾರ್ಖಂಡ್‍ನ ಹಜಾರಿಬಾಗ್ ಆಪಾರ್ಟ್ ಮೆಂಟ್‍ವೊಂದರಲ್ಲಿ ಸಾಮೂಹಿಕ ಆತ್ಮಹತ್ಯೆಗೆ ಶರಣಾಗಿತ್ತು. ಈ ವೇಳೆ ತನಿಖೆ ನಡೆಸಿದ ಪೊಲೀಸರು ಕುಟುಂಬದ ಸಾಮೂಹಿಕ ಆತ್ಮಹತ್ಯೆಗೆ ಆರ್ಥಿಕ ಸಮಸ್ಯೆಯೇ ಕಾರಣ ಎಂದು ಸ್ಪಷ್ಟನೆ ನೀಡಿದ್ದರು.

  • ಅತೀ ಹೆಚ್ಚು ತೆರಿಗೆ ಪಾವತಿಸಿದ ಹೆಗ್ಗಳಿಕೆಗೆ ಪಾತ್ರರಾದ್ರು ಧೋನಿ

    ಅತೀ ಹೆಚ್ಚು ತೆರಿಗೆ ಪಾವತಿಸಿದ ಹೆಗ್ಗಳಿಕೆಗೆ ಪಾತ್ರರಾದ್ರು ಧೋನಿ

    ರಾಂಚಿ: ಕ್ರಿಕೆಟ್ ಜಗತ್ತಿನಲ್ಲಿ ಒಂದಿಲ್ಲೊಂದು ಸಾಧನೆ ಮಾಡುತ್ತಾ ಮುಂದುವರಿದಿರುವ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ.

    ಹೌದು, ಮಹೇಂದ್ರ ಸಿಂಗ್ ಧೋನಿಯವರು ಮತ್ತೊಂದು ದಾಖಲೆಯನ್ನು ನಿರ್ಮಿಸಿದ್ದಾರೆ. ಆದರೆ ಅದು ಕ್ರಿಕೆಟ್ ನಲ್ಲಿ ಅಲ್ಲ. ಧೋನಿಯವರು 2017-18ರ ಆದಾಯ ತೆರಿಗೆ ಮೌಲ್ಯಮಾಪನ ವರ್ಷದಲ್ಲಿ ಅತೀ ಹೆಚ್ಚು ತೆರಿಗೆ ಪಾವತಿಸಿದ್ದಾರೆ. ಈ ಮೂಲಕ ಜಾರ್ಖಂಡ್ ರಾಜ್ಯದಲ್ಲಿಯೇ ವೈಯಕ್ತಿಕವಾಗಿ ಅತೀ ಹೆಚ್ಚು ತೆರಿಗೆ ಪಾವತಿ ಮಾಡಿದ ತೆರಿಗೆದಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

    ಪ್ರಸಕ್ತ ವರ್ಷ ಧೋನಿಯವರು ಬರೋಬ್ಬರಿ 12.17 ಕೋಟಿ ರೂಪಾಯಿಯನ್ನು ತೆರಿಗೆ ಪಾವತಿ ಮಾಡಿದ್ದಾರೆ. ಕ್ರಿಕೆಟ್ ಹಾಗೂ ಜಾಹೀರಾತುಗಳಿಂದ ಸಾಕಷ್ಟು ಆದಾಯ ಹೊಂದಿರುವ ಅವರು ಅತೀ ಹೆಚ್ಚು ತೆರಿಗೆ ಪಾವತಿಸುವ ಮೂಲಕ ದೇಶಾದ್ಯಂತ ಭಾರೀ ಸುದ್ದಿಯಲ್ಲಿದ್ದಾರೆ. ಇದನ್ನೂ ಓದಿ: ಧೋನಿಯ ಒಂದು ದಿನದ ಜಾಹೀರಾತು ಸಂಭಾವನೆ ಎಷ್ಟು?

    ಧೋನಿಯವರು 2016-17ರ ಸಾಲಿನಲ್ಲಿ 10.93 ಕೋಟಿ ರೂಪಾಯಿಯನ್ನು ಪಾವತಿಸಿದ್ದರು. ಆದರೆ ಈ ಬಾರಿ 12.17 ಕೋಟಿ ರೂಪಾಯಿ ಪಾವತಿಸುವ ಮೂಲಕ ಕಳೆದ ಬಾರಿಗಿಂತ 1.24 ಕೋಟಿ ರೂಪಾಯಿ ತೆರಿಗೆ ಪಾವತಿ ಮಾಡಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಧೋನಿ ಆದಾಯ ಎಷ್ಟಿದೆ?

  • ಹೂಹಾರ ಹಾಕಿ ಆರೋಪಿಗಳನ್ನು ಸ್ವಾಗತಿಸಿದ್ದ ಮಗನ ವಿರುದ್ಧ ಮಾಜಿ ಕೇಂದ್ರ ಸಚಿವ ಗರಂ!

    ಹೂಹಾರ ಹಾಕಿ ಆರೋಪಿಗಳನ್ನು ಸ್ವಾಗತಿಸಿದ್ದ ಮಗನ ವಿರುದ್ಧ ಮಾಜಿ ಕೇಂದ್ರ ಸಚಿವ ಗರಂ!

    ರಾಂಚಿ: ಗೋ ರಕ್ಷಣೆಯ ಹೆಸರಿನಲ್ಲಿ ಕೊಲೆಗೈದ 7 ಆರೋಪಿಗಳಿಗೆ ಹೂಹಾರ ಹಾಕಿ ಆಕ್ರೋಶಕ್ಕೆ ಒಳಗಾಗಿದ್ದ ಜಯಂತ್ ಸಿನ್ಹಾ ವಿರುದ್ಧ ಇದೀಗ ತಂದೆ, ಮಾಜಿ ಕೇಂದ್ರ ಸಚಿವ ಯಶ್ವಂತ್ ಸಿನ್ಹಾ ಗರಂ ಆಗಿದ್ದಾರೆ.

    ಈ ಕುರಿತು ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ ಸಿನ್ಹಾ, ಮಗನ ಈ ಕಾರ್ಯವನ್ನು ಯಾವುದೇ ಕಾರಣಕ್ಕೂ ನಾನು ಒಪ್ಪಲು ಸಿದ್ಧನಿಲ್ಲ. ಈ ಹಿಂದೆ ನಾನು ಒಬ್ಬ ನಾಲಾಯಕ್ ಮಗನ ಅಪ್ಪನಾಗಿದ್ದೆ. ಆದ್ರೆ ಇದೀಗ ಪಾತ್ರಗಳು ಬದಲಾಗಿವೆ. ಇದು ಟ್ವಿಟ್ಟರ್ ಮಹಿಮೆ ಅಂತ ಹೇಳೋ ಮೂಲಕ ಮಗನ ವಿರುದ್ಧ ಕೆಂಡಾಮಂಡಲಾಗಿದ್ದಾರೆ.

    ಏನಿದು ಘಟನೆ?:
    ಕಳೆದ ವರ್ಷ ಜೂನ್ ತಿಂಗಳಲ್ಲಿ ಜಾರ್ಖಂಡ್ ನ ರಾಮ್ ಗ್ರಹ್ ನಲ್ಲಿ 55 ವರ್ಷದ ವ್ಯಕ್ತಿಯೊಬ್ಬರು ದನದ ಮಾಂಸವನ್ನು ಸಾಗಾಟ ಮಾಡುತ್ತಿದ್ದಾರೆಂದು ಆರೋಪಿಸಿ ಅವರನ್ನ ಕಾರಿನಿಂದ ಎಳೆದು ಹಲ್ಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಬಿಜೆಪಿ ಮುಖಂಡ ಸೇರಿ 11 ಮಂದಿ ಜೈಲು ಪಾಲಾಗಿದ್ದರು. ಇದೀಗ ಒಂದು ವರ್ಷದ ನಂತರ ಜೂನ್ 29ರಂದು ಜಾರ್ಖಂಡ್ ಹೈಕೋರ್ಟ್ 8 ಆರೋಪಿಗಳ ಜೀವಾವಧಿ ಶಿಕ್ಷೆಯನ್ನು ರದ್ದುಗೊಳಿಸಿತ್ತು.ಹೀಗಾಗಿ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾದ ಇವರೆಲ್ಲರೂ ರಾಂಚಿಯಲ್ಲಿರೋ ಜಯಂತ್ ಸಿನ್ಹಾ ಅವರ ನಿವಾಸಕ್ಕೆ ಭೇಟಿ ಕೊಟ್ಟಿದ್ದರು. ಈ ವೇಳೆ ಸಚಿವರು ಎಲ್ಲರನ್ನೂ ಹಾರ ಹಾಕಿ ಸ್ವಾಗತಿಸಿದ್ದಾರೆ.

    ಈ ಕುರಿತ ಭಾವಚಿತ್ರಗಳು ಇದೀಗ ವೈರಲ್ ಆಗಿದ್ದು, ಇದೀಗ ಮಗ ಜಯಂತ್ ಸಿನ್ಹಾ ವಿರುದ್ಧ ತಂದೆ ಯಶ್ವಂತ್ ಸಿಂಗ್ ಕಿಡಿಕಾರಿದ್ದಾರೆ.

  • ಶಿಕ್ಷಕಿಯನ್ನ ಕೊಲೆ ಮಾಡಿ, ತಲೆಯನ್ನ ಹಿಡಿದುಕೊಂಡೇ 2ಗಂಟೆ, 5ಕಿ.ಮೀ ಓಡಿದ!

    ಶಿಕ್ಷಕಿಯನ್ನ ಕೊಲೆ ಮಾಡಿ, ತಲೆಯನ್ನ ಹಿಡಿದುಕೊಂಡೇ 2ಗಂಟೆ, 5ಕಿ.ಮೀ ಓಡಿದ!

    ರಾಂಚಿ: ಮಾನಸಿಕ ಅಸ್ವಸ್ಥನೊಬ್ಬ ಶಿಕ್ಷಕಿಯನ್ನು ಕೊಲೆ ಮಾಡಿ, ಪೊಲೀಸರು ಹಾಗೂ ಜನರಿಂದ ತಪ್ಪಿಸಿಕೊಳ್ಳಲು ಕತ್ತರಿಸಿದ ತಲೆಯನ್ನು ಹಿಡಿದುಕೊಂಡು ಸುಮಾರು 5 ಕಿ.ಮೀ. ಓಡಿರುವ ಘಟನೆ ಜಾರ್ಖಂಡ್ ನ ಸೆರೈಕೆಲಾ- ಖಾರ್ಸ್ವಾನ್ ಜಿಲ್ಲೆಯಲ್ಲಿ ನಡೆದಿದೆ.

    ಆರೋಪಿಯನ್ನು 26 ವರ್ಷದ ಹರಿ ಹೆಂಬ್ರಾಮ್ ಎಂದು ಗುರುತಿಸಲಾಗಿದೆ. 30 ವರ್ಷದ ಸುಕ್ರ ಹೆಸಾ ಮೃತ ಶಿಕ್ಷಕಿ. ಸುಕ್ರ ಹೆಸಾ ಅವರು ಖಪ್ರಸಾಯಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.

    ನಡೆದಿದ್ದೇನು?:
    ಆರೋಪಿ ಹರಿ ಶಾಲೆಯ ಹತ್ತಿರದಲ್ಲಿ ಒಬ್ಬನೇ ವಾಸವಾಗಿದ್ದನು. ಮಂಗಳವಾರ ಮಧ್ಯಾಹ್ನ ಊಟದ ಸಮಯದಲ್ಲಿ ಶಿಕ್ಷಕಿಯು ವಿದ್ಯಾರ್ಥಿಗಳಿಗೆ ಊಟ ಬಡಿಸುವ ವೇಳೆ ಹರಿ ಏಕಾಏಕಿ ದಾಳಿ ಮಾಡಿ ಕತ್ತಿಯಿಂದ ಅವರ ತಲೆಯನ್ನು ಕಡಿದು ಕೊಲೆ ಮಾಡಿದ್ದಾನೆ. ನಂತರ ಸ್ಥಳೀಯರು ಹಾಗೂ ಪೊಲೀಸರು ಸ್ಥಳಕ್ಕೆ ಬಂದಾಗ ಅವರಿಂದ ತಪ್ಪಿಸಿಕೊಳ್ಳಲು ಶಿಕ್ಷಕಿಯ ತಲೆ ಹಿಡಿದುಕೊಂಡು ಕಾಡಿನೊಳಗೆ ಓಡಿಹೋಗಿದ್ದ ಎಂದು ಸೆರೈಕೆಲಾ ಉಪ-ವಿಭಾಗಿಯ ಪೊಲೀಸ್ ಅಧಿಕಾರಿ (ಎಸ್‍ಡಿಪಿಓ) ಅವಿನಾಶ್ ಕುಮಾರ್ ಹೇಳಿದ್ದಾರೆ.

    ಆರೋಪಿಯನ್ನು ಪೊಲೀಸರು ಬೆನ್ನೆಟ್ಟಿ ಹೋಗಿದ್ದು, ಸತತ ಎರಡು ಗಂಟೆಗಳ ಕಾಲ ಕಾಡಿನಲ್ಲಿ ಹುಡುಕಾಡಿದ ನಂತರ ಆರೋಪಿ ಹರಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಸ್ಥಳೀಯರು ಹರಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಜನರಿಂದ ಆತನನ್ನು ಕಾಪಾಡಿ ಬಂಧಿಸುವ ಸಂದರ್ಭದಲ್ಲಿ ಸೆರೈಕೆಲಾ ಪೊಲೀಸ್ ಅಧಿಕಾರಿ ರಣವಿಜಯ್ ಸಿಂಗ್ ಸೇರಿ ನಾಲ್ಕು ಪೊಲೀಸ್ ಪೇದೆಗಳು ಗಾಯಗೊಂಡಿದ್ದಾರೆ ಎಂದು ಎಸ್‍ಡಿಪಿಓ ಹೇಳಿದ್ದಾರೆ.

    ಇನ್ನು ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಸ್ಥಳದಲ್ಲಿ ಆರೋಪಿಯು ಶಿಕ್ಷಕಿಯನ್ನು ಕೊಲೆ ಮಾಡಿ, ಮೃತದೇಹದ ತಲೆಯನ್ನು ಕೈಯಲ್ಲಿ ಹಿಡಿದು ಕುಳಿತ್ತಿದ್ದನು. ಅವನ ಸುತ್ತ ಸ್ಥಳೀಯರು ನಿಂತಿದ್ದರು. ಆದರೆ ಆರೋಪಿ ಬಳಿ 2 ಕತ್ತಿ ಇದ್ದಿದ್ದರಿಂದ ಯಾರು ಕೂಡ ಆರೋಪಿಯ ಬಳಿ ಹೋಗಲು ಪ್ರಯತ್ನಿಸಲಿಲ್ಲ. ಪೊಲೀಸರು ಹರಿಯನ್ನು ಘಟನಾ ಸ್ಥಳದಲ್ಲೇ ಬಂಧಿಸಲು ಪ್ರಯತ್ನಿಸಿದರೂ ಸ್ಥಳದಲ್ಲಿ ಬಹಳ ಜನರು ನೆರೆದಿದ್ದ ಕಾರಣಕ್ಕೆ ಬಂಧಿಸಲು ಸಾಧ್ಯವಾಗಲಿಲ್ಲ ಎಂದು ಆಧಿಕಾರಿ ರಣವಿಜಯ್ ಸಿಂಗ್ ತಿಳಿಸಿದ್ದಾರೆ.

    ಸ್ಥಳೀಯರು ಹರಿಯನ್ನು ಕಲ್ಲಿನಿಂದ ಹೊಡೆಯಲು ಆರಂಭಿಸಿದಾಗ ಆತ ಶಾಲೆಯಿಂದ ಸುಮಾರು 5 ಕಿ.ಮೀ ದೂರದ ಹೆಸೆಲ್ ಎಂಬ ಹಳ್ಳಿಯ ಕಾಡಿಗೆ ತಪ್ಪಿಸಿಕೊಂಡು ಓಡಿಹೋಗಿದ್ದ. ನಂತರ ಪೊಲೀಸರು ಕಷ್ಟಪಟ್ಟು ಆರೋಪಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿ ಸಿಂಗ್ ಅವರು ತಿಳಿಸಿದರು.

    ಈ ಘಟನೆಯಿಂದ ಆರೋಪಿ ಹರಿ ಗಾಯಗೊಂಡಿದ್ದು, ಆತನನ್ನು ಸದಾರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚುವರಿ ಚಿಕಿತ್ಸೆಗಾಗಿ ಜೆಮೆಶೆಡ್‍ಪುರ ಎಂಜಿಎಂ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಆರೋಪಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಶಾಲೆಯ ಆಡಳಿತ ಸಿಬ್ಬಂದಿ ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

  • ಮಹಿಳೆಯರನ್ನು ಕಿಡ್ನಾಪ್ ಮಾಡಿ ಗ್ಯಾಂಗ್‍ರೇಪ್‍ಗೈದು ಬಲವಂತವಾಗಿ ಮೂತ್ರ ಕುಡಿಸಿದ ಕಾಮುಕರು!

    ಮಹಿಳೆಯರನ್ನು ಕಿಡ್ನಾಪ್ ಮಾಡಿ ಗ್ಯಾಂಗ್‍ರೇಪ್‍ಗೈದು ಬಲವಂತವಾಗಿ ಮೂತ್ರ ಕುಡಿಸಿದ ಕಾಮುಕರು!

    ರಾಂಚಿ: ಬೀದಿ ನಾಟಕ ಪ್ರದರ್ಶನ ನೀಡುತ್ತಿದ್ದ ವೇಳೆ ಐವರು ಸರ್ಕಾರೇತರ ಸಂಸ್ಥೆಯೊಂದರ ಮಹಿಳಾ ಸದಸ್ಯರನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದ ಕಾಮುಕರು ಅವರಿಗೆ ಬಲವಂತವಾಗಿ ಮೂತ್ರ ಕುಡಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಜಾರ್ಖಂಡ್ ನ ಖುಂಠಿ ಜಿಲ್ಲೆಯ ಶಾಲೆಯೊಂದರಲ್ಲಿ ಬೀದಿ ನಾಟಕ ಪ್ರದರ್ಶನ ನೀಡುತ್ತಿದ್ದ ವೇಳೆ 20 ರಿಂದ 35 ವರ್ಷದ ಐವರು ಮಹಿಳೆಯರನ್ನು ಅಪಹರಿಸಿ ಅವರ ಮೆಲೆ ಸಾಮೂಹಿಕ ಅತ್ಯಾಚಾರವನ್ನು ನಡೆಸಿದ್ದ ಆರು ದುಷ್ಕರ್ಮಿಗಳನ್ನು ಈಗಾಗಲೇ ಗುರುತಿಸಲಾಗಿದೆ. ಈ 6 ಜನರ ಪೈಕಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇದು ಕಾಮತೃಪ್ತಿಗಾಗಿ ನಡೆಸಿದ ಕೃತ್ಯವಲ್ಲ. ಸರ್ಕಾರ ವಿರೋಧಿ ಸ್ವಯಂ ಆಡಳಿತ ಚಳುವಳಿಯಾಗಿರುವ `ಪಥಾಲಗಡಿ’ ಗುಂಪಿನವರ ಕೃತ್ಯವಾಗಿದೆ. ಇವರ ವಿರುದ್ಧ ಜನಜಾಗೃತಿ ಮೂಡಿಸಲು ಸ್ಥಳೀಯ ಅಧಿಕಾರಿಗಳು ಇಂತಹ ಬೀದಿ ನಾಟಕ ಗುಂಪುಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇದು ಅವರಿಗೆ ಪಾಠ ಕಲಿಸಲು ಪಥಾಲಗಡಿ ಚಳುವಳಿಯ ಬೆಂಬಲಿಗರು ನಡೆಸಿರುವ ಕೃತ್ಯವಾಗಿದೆ ಎಂದು ಪೊಲೀಸ್ ಅಧಿಕಾರಿ ಮಲಿಕ್ ಹೇಳಿದ್ದಾರೆ.

    ಈ ಪ್ರಕರಣದ ಸಂಬಂಧ ಆರೋಪಿಗಳ ಜೊತೆ ಸಂಪರ್ಕ ಹೊಂದಿದ್ದ ಕಾರಣಕ್ಕೆ ಶಾಲೆಯ ಮುಖ್ಯಸ್ಥ ಕ್ರೈಸ್ತ ಪಾದ್ರಿ ಅಲ್ಫೊನ್ಸೊನನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಇಬ್ಬರು ಆರೋಪಿಗಳು ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಸರ್ಕಾರವನ್ನು ವಿರೋಧಿಸಿ ಸ್ವಯಂ ಆಡಳಿತ ಚಳುವಳಿಗಾರರ ‘ಪಥಾಲಗಡಿ’ ಗುಂಪು ಈಗಲೂ ಜಾರ್ಖಂಡ್ ನ ಆದಿವಾಸಿ ಪ್ರದೇಶಗಳಲ್ಲಿ ಸ್ಥಳೀಯ ಆಡಳಿತವನ್ನು ನಡೆಸುತ್ತಿವೆ. ಇವು ಸರಕಾರವನ್ನು ವಿರೋಧಿಸಿ ಸ್ವಯಂ ಅಧಿಕಾರವನ್ನು ನಡೆಸುತ್ತವೆ. ಆದರೆ ಎನ್ ಜಿಓ ಕಾರ್ಯಕರ್ತೆಯರು ಬೀದಿ ನಾಟಕಗಳ ಮೂಲಕ ಜನರಲ್ಲಿ ಈ ಪಥಾಲಗಡಿ ಗುಂಪಿನ ವಿರುದ್ಧ ಜನಜಾಗ್ರತಿ ಅಭಿಯಾನ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಪಥಾಲಗಡಿ ಗುಂಪಿನ ಕೆಲ ದುಷ್ಕರ್ಮಿಗಳು ಶಸ್ತ್ರಾಸ್ರಗಳೊಂದಿಗೆ ಬಂದು ಐವರು ಮಹಿಳೆಯರನ್ನು ಅಪಹರಿಸಿದ್ದರು. ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಮೂರು ಗಂಟೆಗಳ ನಂತರ ಬಿಡುಗಡೆ ಮಾಡಿದ್ದರು.

  • ಜನರಿಗೆ ಜಾಗೃತಿ ಮೂಡಿಸ್ತಿದ್ದಾಗ 5 ಎನ್‍ಜಿಒ ಕಾರ್ಯಕರ್ತೆಯರನ್ನು ಕಿಡ್ನಾಪ್‍ಗೈದು ಗ್ಯಾಂಗ್‍ರೇಪ್!

    ಜನರಿಗೆ ಜಾಗೃತಿ ಮೂಡಿಸ್ತಿದ್ದಾಗ 5 ಎನ್‍ಜಿಒ ಕಾರ್ಯಕರ್ತೆಯರನ್ನು ಕಿಡ್ನಾಪ್‍ಗೈದು ಗ್ಯಾಂಗ್‍ರೇಪ್!

    ಸಾಂದರ್ಭಿಕ ಚಿತ್ರ

    ರಾಂಚಿ: ಮಾನವ ಕಳ್ಳಸಾಗಾಣಿಕೆ ವಿರೋಧಿಸಿ ಜಾಗೃತಿ ಮೂಡಿಸುತ್ತಿದ್ದ ಐವರು ಸರ್ಕಾರೇತರ ಸಂಸ್ಥೆಯ(ಎನ್‍ಜಿಒ) ಕಾರ್ಯಕರ್ತೆಯರನ್ನು ಅಪಹರಿಸಿ ಸಾಮೂಹಿಕವಾಗಿ ಅತ್ಯಾಚಾರಗೈದ ಘಟನೆ ಜಾರ್ಖಂಡ್ ರಾಜ್ಯದ ಖುಂತಿ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯಲ್ಲಿ ಮಾನವ ಕಳ್ಳಸಾಗಾಣಿಕೆ ವಿರೋಧಿಸಿ ಎನ್‍ಜಿಒ ಕಾರ್ಯಕರ್ತೆಯರು ಬೀದಿ ನಾಟಕದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರು. ಕೊಚಾಂಗ್ ಬ್ಲಾಕ್ ನ ಮಿಶನ್ ಶಾಲೆಯೊಂದರ ಆವರಣದಲ್ಲಿ ಬೀದಿ ನಾಟಕ ಮಾಡುತ್ತಿದ್ದರು. ಅಷ್ಟರಲ್ಲಿ ವಾಹನವೊಂದರಲ್ಲಿ ಬಂದ ಶಸ್ತ್ರಧಾರಿ ವ್ಯಕ್ತಿಗಳು ಕಾರ್ಯಕರ್ತೆಯರನ್ನು ಅಪಹರಿಸಿದ್ದಾರೆ ಎಂದು ರಾಂಚಿ ಡಿಐಜಿ ಎಚ್. ವಲಿ ಹೋಮ್ಕಾರ್ ತಿಳಿಸಿದ್ದಾರೆ

    ಮಹಿಳೆಯರನ್ನು ಬಲವಂತವಾಗಿ ಕಾರಿನಲ್ಲಿ ಬಂದು ಅಪಹರಿಸಿದ ಕಾಮುಕರು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಮೂರು ಗಂಟೆಗಳ ನಂತರ ಅವರನ್ನು ಬಿಡುಗಡೆ ಮಾಡಿದ್ದಾರೆ. ಈ ಕೃತ್ಯ ಪಥಲ್ ಗಡಿ ಬೆಂಬಲಿಗರದ್ದೇ ಎಂದು ಹೇಳಲಾಗಿದೆ.

    ಯುವತಿಯರನ್ನು ಅತ್ಯಾಚಾರಗೈದಿರುವ ಕಿರಾತಕರು ಅದನ್ನು ವಿಡಿಯೊ ಚಿತ್ರೀಕರಣ ಮಾಡಿದ್ದು, ಒಂದು ವೇಳೆ ಪೊಲೀಸರಿಗೆ ದೂರು ನೀಡಿದರೆ ವಿಡಿಯೊವನ್ನು ವೈರಲ್ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾರೆ. ಕಾಮುಕರ ಬೆದರಿಕೆಗೆ ಹೆದರಿದ ಮಹಿಳೆಯರು ಪೊಲೀಸರಿಗೆ ದೂರು ನೀಡಿರಲಿಲ್ಲ. ಆದರೆ ಮೂಲಗಳನ್ನು ಪೊಲೀಸರಿಗೆ ಈ ಕೃತ್ಯದ ಬಗ್ಗೆ ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

    ಈ ರೀತಿಯಾದ ಯಾವುದೇ ವಿಡಿಯೊ ಕಂಡುಬಂದಲ್ಲಿ ತಕ್ಷಣ ಪೊಲೀಸರ ಗಮನಕ್ಕೆ ತನ್ನಿ. ಈಗಾಗಲೇ ಕಾಮುಕರ ಪತ್ತೆಗೆ ಪ್ರತ್ಯೇಕ ತಂಡಗಳನ್ನು ನಿಯೋಜಿಸಲಾಗಿದೆ. ಆ ಗುಂಪಿನ ಕೆಲವರ ಗುರುತು ಕೂಡ ಪತ್ತೆಯಾಗಿದೆ. ಈ ಕುರಿತು ಹಲವೆಡೆ ತೀವ್ರ ಶೋಧ ನಡೆದಿದೆ ಎಂದು ಡಿಐಜಿ ಎಚ್. ವಲಿ ಹೋಮ್ಕಾರ್ ತಿಳಿಸಿದ್ದಾರೆ.

    ಪಥಲ್ ಗಡಿ ಎಂದರೇನು:
    ಜಖಾರ್ಂಂಡ್ ಬುಡಕಟ್ಟು ಜನಾಂಗಗಳು ಹೆಚ್ಚು ವಾಸವಾಗಿರುವ ಕಡೆ ಈ ಸಮುದಾಯದ ಪ್ರಾಬಲ್ಯ ಹೊಂದಿರುತ್ತದೆ. ಪ್ರಾಬಲ್ಯ ಹೊಂದಿದವರಿಗೆ ಪಥಲ್ ಗಡಿ ಎಂದು ಕರೆಯಲಾಗುತ್ತದೆ. ಪೊಲೀಸರಿಗೆ ಅಥವಾ ಸರ್ಕಾರಿ ಅಧಿಕಾರಿಗಳಿಗೆ ಈ ಗ್ರಾಮಗಳಿಗೆ ಪ್ರವೇಶ ಇರುವುದಿಲ್ಲ. ಪಥಲ್ ಗಡಿಯವರಿಂದ ಅನುಮತಿ ಸಿಕ್ಕಿದರೆ ಮಾತ್ರ ಈ ಗ್ರಾಮಗಳ ಪ್ರವೇಶ ಮಾಡಬಹುದಾಗಿದೆ.

  • ಮನೆಯಲ್ಲಿ ಯಾರೂ ಇಲ್ಲದಾಗ ಕಾಟ ಕೊಡುತ್ತಿದ್ದ ಕಾಮುಕ ಮಾವ- ಸಾಕ್ಷಿಗಾಗಿ ವಿಡಿಯೋ ಮಾಡಿದ ಸೊಸೆ

    ಮನೆಯಲ್ಲಿ ಯಾರೂ ಇಲ್ಲದಾಗ ಕಾಟ ಕೊಡುತ್ತಿದ್ದ ಕಾಮುಕ ಮಾವ- ಸಾಕ್ಷಿಗಾಗಿ ವಿಡಿಯೋ ಮಾಡಿದ ಸೊಸೆ

    ರಾಂಚಿ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಸೊಸೆಗೆ ಕಾಟ ಕೊಡುತ್ತಿದ್ದ ಕಾಮುಕ ಮಾವ ಈಗ ಪೊಲೀಸರು ಅತಿಥಿಯಾಗಿದ್ದಾನೆ.

    ಈ ಘಟನೆ ಜಾಖಂಡ್ ನ ಜಮ್ಶೆಡ್‍ಪುರದಲ್ಲಿ ನಡೆದಿದೆ. ಆರೋಪಿ ಮಾವ ಮನೆಯಲ್ಲಿ ಯಾರೂ ಇಲ್ಲದ ವೇಳೆ ಸೊಸೆಗೆ ಕಾಟ ಕೊಡುತ್ತಿದ್ದನು. ಇದನ್ನು ಸೊಸೆ ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿ ಠಾಣೆಗೆ ದೂರು ನೀಡಿದ್ದಾರೆ. ಸಂತ್ರಸ್ತೆ 2014 ರಲ್ಲಿ ಮದುವೆಯಾಗಿ ಛತ್ತೀಸ್‍ಗಢದ ಗಂಡನ ಮನೆಯಲ್ಲಿ ವಾಸಿಸುತ್ತಿದ್ದರು. ಆಕೆಯ ಮಾವ ಸೊಸೆ ಬಂದಾಗಿನಿಂದ ಲೈಂಗಿಕ ದೌರ್ಜನ್ಯವೆಸಗುತ್ತಿದ್ದನು. ಈ ಬಗ್ಗೆ ಸಂತ್ರಸ್ತೆ ಅತ್ತೆ ಬಳಿ ಹೇಳಿಕೊಂಡಿದ್ದರು. ಆದರೆ ಅತ್ತೆ ಇದನ್ನು ನಂಬಿರಲಿಲ್ಲ ಎಂದು ವರದಿಯಾಗಿದೆ.

    ಹೀಗಾಗಿ ಮಾವ ಎಸಗುತ್ತಿದ್ದ ದೌರ್ಜನ್ಯವನ್ನು ಮೊಬೈಲ್ ನಲ್ಲಿ ಸೊಸೆ ರೆಕಾರ್ಡ್ ಮಾಡಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸೊಸೆಯನ್ನು ಮಾವ ಹಿಂಬದಿಯಿಂದ ಹಿಡಿದು ತಬ್ಬಿಕೊಂಡಿದ್ದಾನೆ. ಅಷ್ಟೇ ಅಲ್ಲದೇ ಬಲವಂತವಾಗಿ ಆಕೆಗೆ ಮತ್ತಿಟ್ಟಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

    ವಿಡಿಯೋವನ್ನು ಸಾಕ್ಷಿಯಾಗಿ ಇಟ್ಟುಕೊಂಡು ಸಂತ್ರಸ್ತೆ ತನ್ನ ಪೋಷಕರ ಜೊತೆ ಹೋಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿಂದೆ ಮಹಿಳೆಯ ಪೋಷಕರು ಕಾಮುಕ ಮಾವನ ಬಗ್ಗೆ ದೂರು ನೀಡಿದ್ದರೂ ಮಾನ ಹೋಗುವ ಭೀತಿಯಿಂದ ಸುಮ್ಮನಾಗಿದ್ದರು. ಮಾ. 3ರಂದು ಮಹಿಳೆಯೇ ಖುದ್ದು ಠಾಣೆಗೆ ದೂರು ನೀಡಿದ್ದರೂ ಕಾಮಕನನ್ನು ಬಂಧಿಸಿರಲಿಲ್ಲ. ಇದರಿಂದ ರೋಸಿ ಹೋಗಿದ್ದ ಸೊಸೆ ಕೊನೆಗೆ ಕ್ಯಾಮೆರಾ ಇಟ್ಟು ಕಾಮುಕ ಮಾವನ ಬಣ್ಣ ಬಯಲು ಮಾಡಿದ್ದಾರೆ.

    ಸ್ಯದ್ಯಕ್ಕೆ ಆರೋಪಿ ಮಾವನ ವಿರುದ್ಧ ಟೆಲ್ಕಾ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.

  • ಬಾಯ್ ಫ್ರೆಂಡ್ ಜೊತೆ ವಾಕಿಂಗ್ ಹೋಗ್ತಿದ್ದಾಗ ಪೊದೆಗೆ ಎಳೆದುಕೊಂಡು ಹೋಗಿ 8 ಯುವಕರಿಂದ ಗ್ಯಾಂಗ್‍ರೇಪ್

    ಬಾಯ್ ಫ್ರೆಂಡ್ ಜೊತೆ ವಾಕಿಂಗ್ ಹೋಗ್ತಿದ್ದಾಗ ಪೊದೆಗೆ ಎಳೆದುಕೊಂಡು ಹೋಗಿ 8 ಯುವಕರಿಂದ ಗ್ಯಾಂಗ್‍ರೇಪ್

    ರಾಂಚಿ: ಪದವಿ ವಿದ್ಯಾರ್ಥಿನಿಯೊಬ್ಬರು ತನ್ನ ಗೆಳೆಯನ ಜೊತೆ ವಾಕಿಂಗ್ ಮಾಡುತ್ತಿದ್ದಾಗ ಎಂಟು ಮಂದಿ ಯುವಕರ ತಂಡವೊಂದು ಸಾಮೂಹಿಕ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಜಾರ್ಖಂಡ್ ರಾಜ್ಯದ ರಾಂಚಿಯಲ್ಲಿ ನಡೆದಿದೆ.

    ಭಾನುವಾರ ರಾತ್ರಿ ರಾಂಚಿಯ ಧ್ರುವ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಈ ಕೃತ್ಯಕ್ಕೆ ಸಂಬಂಧಿಸಿದಂತೆ ಎಂಟು ಜನ ಆರೋಪಿಗಳಲ್ಲಿ ಏಳು ಆರೋಪಿಗಳನ್ನು ಬಂಧಿಸಲಾಗಿದೆ. ಎಂಟನೆಯ ಆರೋಪಿ ತಲೆ ಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ನಡೆದಿದ್ದೇನು?
    ಸಂತ್ರಸ್ತೆ ಧ್ರುವ ಪ್ರದೇಶದಲ್ಲಿ ತನ್ನ ಗೆಳೆಯನೊಂದಿಗೆ ಭಾನುವಾರ ರಾತ್ರಿ ಸುಮಾರು 10.30 ರ ವೇಳೆಗೆ ವಾಕಿಂಗ್ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಇಬ್ಬರು ಯುವಕರು ಬಂದಿದ್ದಾರೆ. ನಂತರ ಆರೋಪಿಗಳು ಅವರನ್ನು ತಡೆದು ಸಂತ್ರಸ್ತೆಯನ್ನು ಹಿಡಿದುಕೊಂಡು ಆಕೆಯ ಗೆಳೆಯನಿಗೆ ಥಳಿಸಿದ್ದಾರೆ. ಬಳಿಕ ಸಂತ್ರಸ್ತೆಯನ್ನು ಅಲ್ಲೇ ಸಮೀಪದ ಪೊದೆಯೊಳಗೆ ಕರೆದಕೊಂಡು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕೃತ್ಯದ ಬಳಿಕ ಆರೋಪಿಗಳು ಆಕೆಯನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ. ನಂತರ ಕೆಲವು ಮಹಿಳೆಯರು ಆಕೆಯನ್ನು ನೋಡಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಪೊಲೀಸ್ ಠಾಣೆಯಲ್ಲಿ ನಡೆದ ಘಟನೆಯ ಬಗ್ಗೆ ವಿವರಿಸಿ ದೂರು ನೀಡಿದ್ದಾರೆ. ಸಂತ್ರಸ್ತೆ ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಮತ್ತೊಬ್ಬನಿಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ.

    ಸಂತ್ರಸ್ತೆ ಪದವೀಧರೆ ವಿದ್ಯಾರ್ಥಿನಿಯಾಗಿದ್ದು, ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿದ್ದಾರೆ.