Tag: ranchi

  • 2020ಕ್ಕೆ ಸ್ಫೂರ್ತಿದಾಯಕ ವಿಡಿಯೋ ಟ್ವೀಟ್ ಮಾಡಿದ ಸಚಿನ್ – ಧನ್ಯವಾದ ತಿಳಿಸಿದ ಬಾಲಕ

    2020ಕ್ಕೆ ಸ್ಫೂರ್ತಿದಾಯಕ ವಿಡಿಯೋ ಟ್ವೀಟ್ ಮಾಡಿದ ಸಚಿನ್ – ಧನ್ಯವಾದ ತಿಳಿಸಿದ ಬಾಲಕ

    ರಾಂಚಿ: 2020ಕ್ಕೆ ಸ್ವಾಗತ ಕೋರಿರುವ ಟೀಂ ಇಂಡಿಯಾ ಮಾಜಿ ನಾಯಕ ಸಚಿನ್ ತೆಂಡೂಲ್ಕರ್, ಮುಂದಿನ ದಶಕವನ್ನು ಮಕ್ಕಳ ಭವಿಷ್ಯಕ್ಕಾಗಿ ಮೀಸಲಿರುಸವುದಾಗಿ ತಿಳಿಸಿದ್ದಾರೆ. ಅಲ್ಲದೇ ಬಾಲಕನೊಬ್ಬನ ವಿಡಿಯೋ ಟ್ವೀಟ್ ಮಾಡಿ ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ.

    ಸಚಿನ್ ಟ್ವೀಟ್ ಮಾಡಿರುವ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಸದ್ಯ ಈ ವಿಡಿಯೋದಲ್ಲಿರುವ ಬಾಲಕ ಮದ್ದ ರಾಮ್ ಸಚಿನ್ ಅವರಿಗೆ ಧನ್ಯವಾದ ತಿಳಿಸಿದ್ದಾನೆ.

    ಸಚಿನ್ ಪೋಸ್ಟ್ ಮಾಡಿದ್ದ ವಿಡಿಯೋದಲ್ಲಿ 13 ವರ್ಷದ ಮದ್ದ ರಾಮ್ ಎಂಬ ಬಾಲಕ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಾ ರನ್ ಪಡೆಯುತ್ತಿರುವುದನ್ನು ಕಾಣಬಹುದು. ಆದರೆ ಬಾಲಕ ಮದ್ದ ರಾಮ್ ವಿಕಲ ಚೇತನ ಬಾಲಕನಾಗಿದ್ದು, ಆತನ ಜೀವನೋತ್ಸಾಹಕ್ಕೆ ಫಿದಾ ಆಗಿದ್ದ ಸಚಿನ್ ವಿಡಿಯೋ ಟ್ವೀಟ್ ಮಾಡಿದ್ದರು.

    ಬಾಲಕ ಮದ್ದ ರಾಮ್ ಚತ್ತೀಸ್‍ಗಢದ ದಂತೇವಾಡ ಜಿಲ್ಲೆಯ ಕಾಂಟೆಕಲ್ಯಾಣ್ ಎಂಬ ಸಣ್ಣ ಗ್ರಾಮದ ನಿವಾಸಿಯಾಗಿದ್ದು, ಕ್ರಿಕೆಟ್ ಮೇಲೆ ಅಪಾರ ಪ್ರೀತಿಯನ್ನು ಹೊಂದಿದ್ದಾನೆ. ರಾಮ್ ಮಂಡಿಯ ಸಹಾಯದಿಂದಲೇ ತೆವಳುತ್ತಾ ರನ್ ಪಡೆಯುತ್ತಿದ್ದ. ಆ ಬಳಿಕ ಸ್ಟ್ರೈಕ್ ನಲ್ಲಿದ್ದ ಬಾಲಕನಿಗೆ ಮುಂದೇ ಸಾಗಿ ಬ್ಯಾಟ್ ಕೂಡ ನೀಡುತ್ತಿದ್ದ. ಈ ವಿಡಿಯೋ ಹಲವರಿಗೆ ಸ್ಫೂರ್ತಿದಾಯಕವಾಗಿತ್ತು.

    ‘ಈ ಸ್ಫೂರ್ತಿದಾಯಕ ವಿಡಿಯೋದೊಂದಿಗೆ ಹೊಸ ವರ್ಷವನ್ನು ಆರಂಭಿಸಿ. ವಿಡಿಯೋ ನನ್ನ ಮನಸ್ಸನ್ನು ಮಿಡಿಯುವಂತೆ ಮಾಡಿತು. ನಿಮಗೂ ಇದೇ ಅನುಭವವಾಗುತ್ತದೆ’ ಎಂದು ಸಚಿನ್ ತಮ್ಮ ಟ್ವೀಟ್‍ನಲ್ಲಿ ತಿಳಿಸಿದ್ದರು. ಸಚಿನ್ ಅವರ ಈ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿರುವ ಬಾಲಕ ಮದ್ದ ರಾಮ್, ನನ್ನ ಕ್ರಿಕೆಟ್ ದೇವರು ಸಚಿನ್ ಅವರಿಗೆ ಧನ್ಯವಾದ. ಸಚಿನ್ ಎಂದರೇ ನನಗೆ ತುಂಬಾ ಇಷ್ಟ. ನನ್ನ ವಿಡಿಯೋವನ್ನು ಅವರು ಸ್ವತಃ ಹಂಚಿಕೊಂಡಿದ್ದು ಮತ್ತಷ್ಟು ಖುಷಿ ತಂದಿದೆ. ಅವರು ತಮ್ಮ ಗ್ರಾಮಕ್ಕೆ ಬರಬೇಕೆಂದು ಇಚ್ಛಿಸುತ್ತೇನೆ. ನಾನು ಹೆಚ್ಚಿನ ಶಿಕ್ಷಣ ಪಡೆದು ಡಾಕ್ಟರ್ ಆಗಬೇಕೆಂಬ ಆಸೆ ಇದೆ ಎಂದು ತಿಳಿಸಿದ್ದಾನೆ. ವಿಡಿಯೋ ವೈರಲ್ ಆದ ಬಳಿಕ ಸ್ಥಳೀಯ ಶಿಕ್ಷಣ ಇಲಾಖೆಯ ಬ್ಲಾಕ್ ಅಧಿಕಾರಿ ಬಾಲಕನನ್ನು ಭೇಟಿ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ.

  • ಬಿಜೆಪಿಗೆ ಸೋಲು – ಜಾರ್ಖಂಡಿನಲ್ಲಿ ಕಾಂಗ್ರೆಸ್ ಮೈತ್ರಿಗೆ ಗೆಲುವು

    ಬಿಜೆಪಿಗೆ ಸೋಲು – ಜಾರ್ಖಂಡಿನಲ್ಲಿ ಕಾಂಗ್ರೆಸ್ ಮೈತ್ರಿಗೆ ಗೆಲುವು

    ರಾಂಚಿ: ಜಾರ್ಖಂಡ್ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಮಹಾರಾಷ್ಟ್ರ ಬಳಿಕ ಆಡಳಿತ ನಡೆಸುತ್ತಿದ್ದ ಬಿಜೆಪಿಗೆ ಜಾರ್ಖಂಡ್‍ನಲ್ಲೂ ಮುಖಭಂಗವಾಗಿದೆ. 47 ಸ್ಥಾನಗಳನ್ನು ಪಡೆದಿರುವ ಕಾಂಗ್ರೆಸ್ ಮೈತ್ರಿಕೂಟ ಅಧಿಕಾರಕ್ಕೆ ಏರಲಿದೆ.

    ಮಹಾರಾಷ್ಟ್ರದಲ್ಲಿ ಹಲವು ರಾಜಕೀಯ ಬೆಳವಣಿಗೆಗಳ ನಡುವೆಯೂ ಅಧಿಕಾರ ಪಡೆಯಲು ವಿಫಲವಾದ ಬಿಜೆಪಿ, ಜಾರ್ಖಂಡ್‍ನಲ್ಲೂ ನಿರಾಸೆ ಅನುಭವಿಸಿದೆ. ಸದ್ಯದ ಮಾಹಿತಿ ಅನ್ವಯ ಜೆಎಂಎಂ (ಜಾರ್ಖಂಡ್ ಮುಕ್ತಿ ಮೋರ್ಚಾ) 31, ಕಾಂಗ್ರೆಸ್ 15, ಆರ್ ಜೆಡಿ 1 ಮೈತ್ರಿಕೂಟ 47 ಸ್ಥಾನಗಳನ್ನು ಪಡೆದು ಭಾರೀ ವಿಜಯವನ್ನು ಸಾಧಿಸಿದೆ. ಇತ್ತ ಬಿಜೆಪಿ 25 ಸ್ಥಾನ ಪಡೆದು 2ನೇ ಸ್ಥಾನದಲ್ಲಿದ್ದರೆ, ಜೆವಿಎಂ (ಜಾರ್ಖಂಡ್ ವಿಕಾಸ್ ಮೋರ್ಚಾ) 3, ಇತರರು 6 ಸ್ಥಾನ ಪಡೆದಿದ್ದಾರೆ. ಇದರೊಂದಿಗೆ ಒಟ್ಟು 81 ಸ್ಥಾನಗಳಿರುವ ಜಾರ್ಖಂಡ್ ವಿಧಾನಸಭೆಯಲ್ಲಿ ಸರ್ಕಾರ ರಚಿಸಲು ಬೇಕಾದ 42 ಸ್ಥಾನಗಳು ಕಾಂಗ್ರೆಸ್ ಮೈತ್ರಿಕೂಟಕ್ಕೆ ಲಭಿಸಿದೆ.

    ಸದ್ಯ ಕಾಂಗ್ರೆಸ್ ಮೈತ್ರಿಕೂಟ ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ ಲಭ್ಯವಾಗಿರುವುದರಿಂದ ಜೆಎಂಎಂ ಪಕ್ಷ ಮುಖ್ಯಸ್ಥ ಹೇಮಂತ್ ಸೊರೆನ್ ಸಿಎಂ ಆಗಲಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಜೆಎಂಎಂ, ಕಾಂಗ್ರೆಸ್ ಮತ್ತು ಆರ್‍ಜೆಡಿ ಪಕ್ಷಗಳು ಮೈತ್ರಿಕೂಟ ನಡೆಸಿ ಚುನಾವಣೆ ಎದುರಿಸಿದ್ದವು. ಈ ಮೈತ್ರಿ ಸದ್ಯ ಯಶಸ್ವಿಯಾಗಿದ್ದು, ಚುನಾವಣೆಯ ಸಂದರ್ಭದಲ್ಲಿ ಸಿಎಂ ಅಭ್ಯರ್ಥಿ ಎಂದೇ ಬಿಂಬಿಸಲಾಗಿದ್ದ ಹೇಮಂತ್ ಸದ್ಯ 2ನೇ ಅವಧಿಗೆ ಸಿಎಂ ಆಗಲಿದ್ದಾರೆ. ಈ ಹಿಂದೆ 2012 ರಲ್ಲಿ 14 ತಿಂಗಳ ಕಾಲ ಹೇಮಂತ್ ಸಿಎಂ ಆಗಿ ಕಾರ್ಯನಿರ್ವಹಿಸಿದ್ದರು.

    ಈ ಕುರಿತು ಎನ್‍ಸಿಪಿ ಹಾಗೂ ಶಿವಸೇನೆ ಪಕ್ಷಗಳು ಪ್ರತಿಕ್ರಿಯೆ ನೀಡಿದ್ದು, ಈ ಫಲಿತಾಂಶ ಬಿಜೆಪಿಗೆ ಹಿನ್ನಡೆಯಾಗಿದೆ. ಮೈತ್ರಿಕೂಟಕ್ಕೆ ಹೆಚ್ಚಿನ ಬಲ ನೀಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. 2014ರ ಚುನಾವಣೆಯ ಫಲಿತಾಂಶವನ್ನು ಗಮನಿಸುವುದಾದರೆ, ಕಾಂಗ್ರೆಸ್-ಜೆಎಂಎಂ ಮೈತ್ರಿಕೂಟ 25, ಬಿಜೆಪಿ 37, ಜೆವಿಎಂ 8, ಎಜೆಸ್‍ಯು 5 ಮತ್ತು ಇತರೇ 6 ಸ್ಥಾನಗಳನ್ನು ಗೆದ್ದುಕೊಂಡಿತ್ತು.

  • ಜಾರ್ಖಂಡ್‍ನಲ್ಲಿ ಕಮಲಕ್ಕೆ ಹಿನ್ನಡೆ – ಸರ್ಕಾರ ನಮ್ಮದೇ ಎಂದ ಬಿಜೆಪಿ

    ಜಾರ್ಖಂಡ್‍ನಲ್ಲಿ ಕಮಲಕ್ಕೆ ಹಿನ್ನಡೆ – ಸರ್ಕಾರ ನಮ್ಮದೇ ಎಂದ ಬಿಜೆಪಿ

    – ಪಕ್ಷೇತರರಿಗೆ ಡಿಮ್ಯಾಂಡ್ ಸೃಷ್ಟಿ

    ರಾಂಚಿ: ಸಾಕಷ್ಟು ಕುತೂಹಲ ಮೂಡಿಸುತ್ತಿರುವ ಜಾರ್ಖಂಡ್ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಭರದಿಂದ ಸಾಗಿದ್ದು, ಚುನಾವಣೆಯಲ್ಲಿ ಮೈತ್ರಿಕೂಟದೊಂದಿಗೆ ಸ್ಪರ್ಧೆ ನಡೆಸಿದ್ದ ಕಾಂಗ್ರೆಸ್ ಸರಳ ಬಹುಮತದತ್ತ ಸಾಗಿದೆ.

    ಬಿಜೆಪಿ ವಿರುದ್ಧ ಮೈತ್ರಿಕೂಟ ನಡೆಸಿದ್ದ ಜೆಎಂಎಂ (ಜಾರ್ಖಂಡ್ ಮುಕ್ತಿ ಮೋರ್ಚಾ),ಕಾಂಗ್ರೆಸ್, ಆರ್‍ಜೆಡಿ ಮೈತ್ರಿಕೂಟ ಮತ ಎಣಿಕೆ ಕಾರ್ಯದಲ್ಲಿ ಆರಂಭಿಕ ಮುನ್ನಡೆಯನ್ನು ಪಡೆದಿದೆ. ಸದ್ಯದ ಮಾಹಿತಿಯ ಅನ್ವಯ ಜೆಎಂಎಂ-ಕಾಂಗ್ರೆಸ್, ಆರ್‍ಜೆಡಿ ಮೈತ್ರಿಯ 39 ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿಯ 32 ಅಭ್ಯರ್ಥಿಗಳು ಮುನ್ನಡೆ ಪಡೆದಿದ್ದಾರೆ.

    ಉಳಿದಂತೆ ಎಜೆಎಸ್‍ಯು (ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್) ಪಕ್ಷ 3, ಜೆವಿಎಂ (ಜಾರ್ಖಂಡ್ ವಿಕಾಸ್ ಮೋರ್ಚಾ) 3, ಇತರರು 4 ಸ್ಥಾನಗಳಲ್ಲಿ ಮುನ್ನಡೆ ಪಡೆದಿದ್ದಾರೆ. ಒಟ್ಟು 81 ಸ್ಥಾನಗಳಿರುವ ಜಾರ್ಖಂಡ್ ವಿಧಾನಸಭೆಯಲ್ಲಿ ಸರ್ಕಾರಕ್ಕೆ ಬಹುಮತ ಸಾಧಿಸಲು 42 ಸದಸ್ಯರ ಬೆಂಬಲ ಬೇಕಿದೆ.

    ಪ್ರಮುಖವಾಗಿ ಜಾರ್ಖಂಡ್ ಹಾಲಿ ಸಿಎಂ ರಘುವರ್ ದಾಸ್ ಸ್ಪರ್ಧಿಸಿರುವ ಜಮ್‍ಶೇಡ್‍ಪುರ ಪೂರ್ವ ಕ್ಷೇತ್ರದಲ್ಲಿ ಮುನ್ನಡೆಯನ್ನು ಸಾಧಿಸಿದ್ದಾರೆ. ಮತ ಎಣಿಕೆ ಆರಂಭಿಕ ಬೆಳವಣಿಗೆಗಳ ಕುರಿತು ಪ್ರತಿಕ್ರಿಯೆ ನೀಡಿರುವ ರಘುಬರ್ ದಾಸ್, ಆರಂಭಿಕ ಮುನ್ನಡೆಗಳು ಅಂತಿಮವಲ್ಲ. ಇನ್ನು ಹೆಚ್ಚು ಸುತ್ತುಗಳ ಮತ ಎಣಿಕೆ ಕಾರ್ಯ ಬಾಕಿ ಇದ್ದು, ನಾನು ಗೆಲ್ಲುವುದು ಮಾತ್ರವಲ್ಲ ರಾಜ್ಯದಲ್ಲಿ ಬಿಜೆಪಿ ನಾಯಕತ್ವದಲ್ಲಿ ಸರ್ಕಾರವನ್ನು ಮತ್ತೆ ರಚಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    2014ರ ಚುನಾವಣೆಯ ಫಲಿತಾಂಶವನ್ನು ಗಮನಿಸುವುದಾದರೆ, ಕಾಂಗ್ರೆಸ್-ಜೆಎಂಎಂ ಮೈತ್ರಿಕೂಟ 25, ಬಿಜೆಪಿ 37, ಜೆವಿಎಂ 8, ಎಜೆಸ್‍ಯು 5 ಮತ್ತು ಇತರೇ 6 ಸ್ಥಾನಗಳು ಲಭಿಸಿತ್ತು.

  • 60 ವರ್ಷದ ಪತಿಗೆ 35ರ ಮಹಿಳೆ ಜೊತೆ ಮದ್ವೆ ಮಾಡಿಸಿದ ಪತ್ನಿ

    60 ವರ್ಷದ ಪತಿಗೆ 35ರ ಮಹಿಳೆ ಜೊತೆ ಮದ್ವೆ ಮಾಡಿಸಿದ ಪತ್ನಿ

    ರಾಂಚಿ: ಗಂಡು ಮಗುವಿಗಾಗಿ ಪತ್ನಿಯೊಬ್ಬಳು 60 ವರ್ಷದ ಪತಿಗೆ 35ರ ಮಹಿಳೆ ಜೊತೆ ಮದುವೆ ಮಾಡಿಸಿದ ಘಟನೆ ಜಾರ್ಖಂಡ್‍ನ ರಾಜನಗರದಲ್ಲಿ ನಡೆದಿದೆ.

    60 ವರ್ಷದ ಲಾಲ್‍ಮೋಹನ್‍ಗೆ ಗಂಡು ಮಗು ಬೇಕಾಗಿತ್ತು. ಹಾಗಾಗಿ ಅವರ ತಮ್ಮ ಪತ್ನಿಯ ಒಪ್ಪಿಗೆ ಪಡೆದು 35 ವರ್ಷದ ಚೈತಿ ಮಹತೋ ಜೊತೆ ಎರಡನೇ ಮದುವೆ ಆಗಿದ್ದಾರೆ. 30 ವರ್ಷಗಳ ಹಿಂದೆ ಲಾಲ್‍ಮೋಹನ್, ಸರಳಾ ಅವರನ್ನು ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಅದರಲ್ಲಿ ಒಬ್ಬಳಿಗೆ ಮದುವೆಯಾಗಿದೆ.

    ಮೊದಲ ಪತ್ನಿ ಸರಳಾಗೆ ಗಂಡು ಮಗು ಆಗಲಿಲ್ಲ. ಹಾಗಾಗಿ ಲಾಲ್‍ಮೋಹನ್ ಖೀರಿ ನಿವಾಸಿಯಾದ ಚೈತಿ ಮಹರೋಳನ್ನು ಭೀಮ್‍ಖಂಡ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಮದುವೆಯಲ್ಲಿ ಮೊದಲ ಪತ್ನಿ ಸರಳಾ ಸೇರಿದಂತೆ ಇಬ್ಬರ ಕುಟುಂಬಸ್ಥರು ಭಾಗಿಯಾಗಿದ್ದರು.

    ಈ ಬಗ್ಗೆ ಸಮಾಜಸೇವಿ ರಾಮ್‍ರತನ್ ಪ್ರತಿಕ್ರಿಯಿಸಿ, ಇಬ್ಬರ ಕುಟುಂಬಸ್ಥರು ಖುಷಿಯಿಂದ ಈ ಸಂಬಂಧವನ್ನು ಬೆಳೆಸಿದ್ದಾರೆ. ಲಾಲ್‍ಮೋಹನ್ ಅವರಿಗೆ ಗಂಡು ಮಗುವಾಗಲಿಲ್ಲ. ಹಾಗಾಗಿ ಪತಿ-ಪತ್ನಿ ಇಬ್ಬರು ಸೇರಿ ಈ ನಿರ್ಧಾರ ಕೈಗೊಂಡಿದ್ದಾರೆ. ಚೈತಿ ಅವರಿಗೂ ಮದುವೆ ಆಗುತ್ತಿರಲಿಲ್ಲ. ಅವರ ವಯಸ್ಸು ಕೂಡ ಹೆಚ್ಚಾಗುತ್ತಿತ್ತು. ಹಾಗಾಗಿ ಇಬ್ಬರ ಕುಟುಂಬಸ್ಥರು ಸೇರಿ ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದರು.

  • ಕಾನೂನು ವಿದ್ಯಾರ್ಥಿನಿಗೆ ಗನ್ ತೋರಿಸಿ ಗ್ಯಾಂಗ್‍ರೇಪ್ – 12 ಮಂದಿ ಅರೆಸ್ಟ್

    ಕಾನೂನು ವಿದ್ಯಾರ್ಥಿನಿಗೆ ಗನ್ ತೋರಿಸಿ ಗ್ಯಾಂಗ್‍ರೇಪ್ – 12 ಮಂದಿ ಅರೆಸ್ಟ್

    ರಾಂಚಿ: ಜಾರ್ಖಂಡ್‍ನಲ್ಲಿ ಕಾನೂನು ವಿದ್ಯಾರ್ಥಿನಿಗೆ ಗನ್ ತೋರಿಸಿ ಸಾಮೂಹಿಕ ಅತ್ಯಾಚಾರ ಮಾಡಿ, ಪರಾರಿಯಾಗಿದ್ದ 12 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ನವೆಂಬರ್ 26 ರಂದು ಸಂಜೆ 5.30 ಗಂಟೆ ವೇಳೆಗೆ ಈ ಘಟನೆ ನಡೆದಿದೆ. ರಾಂಚಿಯ ಸಂಗ್ರಾಮಪುರದ ಬಳಿ ವಿದ್ಯಾರ್ಥಿನಿ ತನ್ನ ಸ್ನೇಹಿತನ ಜೊತೆ ತೆರೆಳಿದ್ದಳು. ಈ ವೇಳೆ ಆರೋಪಿಗಳ ಗುಂಪು ವಿದ್ಯಾರ್ಥಿನಿ ಹಾಗೂ ಆಕೆಯ ಸ್ನೇಹಿತನನ್ನು ಅಡ್ಡಗಟ್ಟಿದ್ದರು. ಬಳಿಕ ಸ್ನೇಹಿತನನ್ನು ಕೆಲವರು ಹಿಡಿದುಕೊಂಡು ಹಲ್ಲೆ ನಡೆಸಿ, ವಿದ್ಯಾರ್ಥಿನಿಗೆ ಗನ್ ತೋರಿಸಿ ಎಳೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಎಸೆಗಿದ್ದರು. ಇದನ್ನೂ ಓದಿ: ಪಶುವೈದ್ಯೆಯನ್ನ ಗ್ಯಾಂಗ್‍ರೇಪ್ ಮಾಡಿ, ಕೊಲೆ – 25 ಕಿ.ಮೀ ದೂರ ಶವವೊಯ್ದು ಸುಟ್ಟರು

    ಈ ಸಂಬಂಧ ವಿದ್ಯಾರ್ಥಿನಿ ಹಾಗೂ ಆಕೆಯ ಕುಟುಂಬ ಕಾಂಕೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಕುರಿತು ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದರು. ವಿದ್ಯಾರ್ಥಿನಿ ದೂರಿನ ಆಧಾರದ ಮೇಲೆ ಪೊಲೀಸ್ ವರಿಷ್ಠಾಧಿಕಾರಿ(ಗ್ರಾಮೀಣ) ರಿಷಭ್ ಕುಮಾರ್ ಜಾ ನೇತೃತ್ವದಲ್ಲಿ ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಪಾರ್ಟಿ ಮುಗಿಸಿ ಮಲಗಿದ್ದ ಸ್ನೇಹಿತನ ಪತ್ನಿಯನ್ನು ರೇಪ್‍ಗೈದ ಟೆಕ್ಕಿ

    ಐಪಿಸಿ ಸೆಕ್ಷನ್, ಎಸ್‍ಸಿ ಮತ್ತು ಎಸ್‍ಟಿ (ದೌರ್ಜನ್ಯ ತಡೆ) ಕಾಯ್ದೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಒಟ್ಟು 12 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ ಆರೋಪಿಗಳ ಬಳಿಯಿದ್ದ ಕಾರು, ಬೈಕ್, 2 ಗನ್, 8 ಮೊಬೈಲ್ ಫೋನ್ ಹಾಗೂ ಸಂತ್ರಸ್ತೆಯ ಬಳಿ ದೋಚಿದ್ದ ಫೋನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

  • ಆರು ತಿಂಗಳ ಬಳಿಕ ನೆಟ್‍ ಅಭ್ಯಾಸದಲ್ಲಿ ಕಾಣಿಸಿಕೊಂಡ ಧೋನಿ: ವಿಡಿಯೋ

    ಆರು ತಿಂಗಳ ಬಳಿಕ ನೆಟ್‍ ಅಭ್ಯಾಸದಲ್ಲಿ ಕಾಣಿಸಿಕೊಂಡ ಧೋನಿ: ವಿಡಿಯೋ

    ರಾಂಚಿ: ಟೀಂ ಇಂಡಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತವರಿನ ರಾಂಚಿಯ ಜೆಎಸ್‍ಸಿಎ ಕ್ರೀಡಾಂಗಣದಲ್ಲಿ ನೆಟ್ ಅಭ್ಯಾಸ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದಾರೆ.

    2019ರ ವಿಶ್ವಕಪ್ ಟೂರ್ನಿ ನಂತರ ಎಂ.ಎಸ್.ಧೋನಿ ಮೈದಾನದಲ್ಲಿ ಈ ರೀತಿ ಕಾಣಿಸಿದ್ದು ಇದೇ ಮೊದಲು. ಆದರೆ ಧೋನಿ ಮುಂದಿನ ತಿಂಗಳು ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧ ಸೀಮಿತ ಓವರ್‌ಗಳ ಸರಣಿಗೆ ಅಲಭ್ಯವಾಗಲಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಬಿಸಿಸಿಐ ಅಧಿಕಾರಿಯೊಬ್ಬರು, ಎಂ.ಎಸ್.ಧೋನಿ ವೆಸ್ಟ್ ಇಂಡೀಸ್ ಸರಣಿಗೆ ಲಭ್ಯವಿಲ್ಲ ಎಂದು ತಿಳಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಮೊದಲ ಪಂದ್ಯವು ಡಿಸೆಂಬರ್ 6ರಂದು ಮುಂಬೈನಲ್ಲಿ ನಡೆಯಲಿದೆ. ಇದನ್ನೂ ಓದಿ: ಅಪ್ಪನಿಗೆ ಮಸಾಜ್ ಮಾಡಿದ ಧೋನಿ ಪುತ್ರಿ ಝೀವಾ: ವಿಡಿಯೋ

    ಧೋನಿ ತಮ್ಮ ಕೊನೆಯ ಪಂದ್ಯವನ್ನು 2019ರ ಜುಲೈನಲ್ಲಿ ನಡೆದ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‍ನಲ್ಲಿ ನ್ಯೂಜಿಲೆಂಡ್ ವಿರುದ್ಧ ಆಡಿದ್ದರು. ಅಂದಿನಿಂದ ಅವರು ಕ್ರಿಕೆಟ್‍ನಿಂದ ದೂರ ಉಳಿದಿದ್ದರು. ವಿಶ್ವಕಪ್ ಟೂರ್ನಿ ಬಳಿಕ ಟೀಂ ಇಂಡಿಯಾ ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ವಿರುದ್ಧ ಸೀಮಿತ ಓವರ್‌ಗಳ ಸರಣಿ ಆಡಿತು. ಆದರೆ ಧೋನಿ ಈ ಯಾವುದೇ ಸರಣಿಗೆ ತಂಡದಲ್ಲಿ ಸೇರ್ಪಡೆಯಾಗಿಲ್ಲ. ಸುಮಾರು ಆರು ತಿಂಗಳ ನಂತರ, ಧೋನಿ ಮೈದಾನದಲ್ಲಿ ಅಭ್ಯಾಸ ಮಾಡುವುದನ್ನು ನೋಡಿ ಕ್ರಿಕೆಟ್ ಅಭಿಮಾನಿಗಳು ಸಹ ಸಂತೋಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮೋದಿ ನಂತ್ರ ಅತೀ ಹೆಚ್ಚು ಜನ ಮೆಚ್ಚುಗೆ ಪಡೆದ ವ್ಯಕ್ತಿ ಧೋನಿ

    ವಿಶ್ವಕಪ್ ಟೂರ್ನಿ ನಂತರ ಧೋನಿಯ ಭವಿಷ್ಯದ ಬಗ್ಗೆ ಸಾಕಷ್ಟು ಉಹಾಪೋಹಗಳು ಕೇಳಿ ಬಂದಿವೆ. ಧೋನಿ ನಿವೃತ್ತಿಯಂತಹ ವದಂತಿಗಳು ಸಹ ಅನೇಕ ಬಾರಿ ಹರಿದಾಡಿತ್ತು. ಆದರೆ ಧೋನಿ ಮಾತ್ರ ಇದು ಯಾವುದಕ್ಕೂ ಪ್ರತಿಕ್ರಿಯೆ ನೀಡಿಲ್ಲ.  ಇದನ್ನೂ ಓದಿ: ಧೋನಿ ನಿವೃತ್ತಿ ಬಗ್ಗೆ ಸ್ಪಷ್ಟನೆ ನೀಡಿದ ಪತ್ನಿ ಸಾಕ್ಷಿ

    ಧೋನಿ ನೆಟ್‍ನಲ್ಲಿ ಅಭ್ಯಾಸ ಮಾಡುತ್ತಿರುವ ವೀಡಿಯೊವನ್ನು ಹಂಚಿಕೊಂಡ ಅಭಿಮಾನಿಗಳೊಬ್ಬರು, ‘ಎಂಎಸ್ ಧೋನಿ ಅವರ ಸುದೀರ್ಘ ಸಮಯದ ಬಳಿಕ ನೆಟ್ ಅಭ್ಯಾಸ ಮಾಡಿದ್ದಾರೆ. ನೀವು ಅವರನ್ನು ಮತ್ತೆ ಮೈದಾನದಲ್ಲಿ ನೋಡಲು ಕಾಯುತ್ತಿದ್ದರೆ ಇದನ್ನು ರಿಟ್ವೀಟ್ ಮಾಡಿ’ ಎಂದು ಬರೆದಿದ್ದಾರೆ.

  • ಬಾಲ್ಯದ ಗೆಳೆಯರೊಂದಿಗೆ ಧೋನಿ ಎಂಜಾಯ್

    ಬಾಲ್ಯದ ಗೆಳೆಯರೊಂದಿಗೆ ಧೋನಿ ಎಂಜಾಯ್

    – ನಾಗ್ಪುರ ಪಂದ್ಯದಲ್ಲಿ ಧೋನಿ ಜಪ ಮಾಡಿದ ಅಭಿಮಾನಿಗಳು

    ರಾಂಚಿ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ನಿವೃತ್ತಿಯ ನಿರ್ಧಾರ ಕುರಿತ ವರದಿಗಳು ಅಭಿಮಾನಿಗಳಲ್ಲಿ ಗೊಂದಲವನ್ನು ಮೂಡಿಸಿದ್ದು, ಇತ್ತ ಧೋನಿ ಮಾತ್ರ ತವರು ರಾಂಚಿಯಲ್ಲಿ ಬಾಲ್ಯದ ಗೆಳೆಯರೊಂದಿಗೆ ಸಮಯ ಕಳೆಯುತ್ತಿದ್ದಾರೆ.

    ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಬಳಿಕ ಸತತ 4 ತಿಂಗಳಿನಿಂದ ವಿಶ್ರಾಂತಿ ಪಡೆದಿರುವ ಧೋನಿ, ತಮ್ಮ ಕ್ರಿಕೆಟ್ ಭವಿಷ್ಯ ಕುರಿತು ಯಾವುದೇ ಸ್ಪಷ್ಟನೆ ನೀಡಿಲ್ಲ. ಬಿಸಿಸಿಐ ಅಧ್ಯಕ್ಷರಾಗಿ ಗಂಗೂಲಿ ಅಧಿಕಾರ ವಹಿಸಿಕೊಂಡ ಬಳಿಕ ಈ ಕುರಿತು ಸ್ಪಷ್ಟನೆ ಲಭಿಸಲಿದೆ ಎಂಬ ಭಾವನೆಯನ್ನು ಅಭಿಮಾನಿಗಳು ಹೊಂದಿದ್ದರು. ಆದರೆ ನಿವೃತ್ತಿ ಎಂಬುವುದು ಆಟಗಾರರ ವೈಯಕ್ತಿಕ ಅಭಿಪ್ರಾಯ ಎಂದು ಹೇಳುವ ಮೂಲಕ ಗಂಗೂಲಿ ಕೂಡ ಯಾವುದೇ ಸ್ಪಷ್ಟ ತೀರ್ಮಾನ ಕೈಗೊಳ್ಳಲಿಲ್ಲ.

     

    View this post on Instagram

     

    Happy Birthday Chittu Bhaiya ???? #SeemantLohani

    A post shared by MS Dhoni 7781 | Mahi7781 ???????? (@msdhoni.7781) on

    ಅಭಿಮಾನಿಗಳಲ್ಲಿ ಧೋನಿ ಕಮ್ ಬ್ಯಾಕ್ ಕುರಿತ ಗೊಂದಲ ಹೆಚ್ಚಾಗುತ್ತಿದ್ದು, ಆದರೆ ಧೋನಿ ಮಾತ್ರ ತಮ್ಮ ಗೆಳೆಯರೊಂದಿಗೆ ಸಮಯ ಕಳೆಯುತ್ತಿದ್ದಾರೆ. ರಾಂಚಿಗೆ ಸಮೀಪವಿರುವ ಫಾರ್ಮ್ ಹೌಸ್‍ನಲ್ಲಿ ಧೋನಿರ ಬಾಲ್ಯದ ಗೆಳೆಯನ ಹುಟ್ಟುಹಬ್ಬದ ಸಂಭ್ರಮಾಚರಣೆ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೋಗಳಿಗೆ ಪ್ರತಿಕ್ರಿಯೆ ನೀಡಿರುವ ಅಭಿಮಾನಿಗಳು, ನಿವೃತ್ತಿಯ ಕುರಿತು ಎಷ್ಟೇ ಟೀಕೆಗಳು ಕೇಳಿ ಬಂದರು ನೀವು ತಾಳ್ಮೆಯಿಂದ ಇದ್ದೀರಿ. ಈ ನಿಮ್ಮ ಗುಣವೇ ಎಲ್ಲರಿಗೂ ಇಷ್ಟ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಧೋನಿ ಮುಂದಿನ ಟಿ20 ವಿಶ್ವಕಪ್ ಟೂರ್ನಿಗೆ ತಂಡದಲ್ಲಿರುವುದು ಲಾಭವಾಗಲಿದೆ ಎಂದು ಹಲವು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

    https://twitter.com/barainishant/status/1193823683145609216?

    ಇತ್ತ ಭಾನುವಾರ ನಡೆದ ಬಾಂಗ್ಲಾ ದೇಶದ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಮತ್ತೊಮ್ಮೆ ಡಿಆರ್ ಎಸ್ ಮನವಿ ಪಡೆದು ವಿಫಲರಾಗಿದ್ದ ಪರಿಣಾಮ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಟ್ರೋಲ್ ಆಗಿದ್ದಾರೆ. ಅಲ್ಲದೇ ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳು ಧೋನಿ ಧೋನಿ ಎಂದು ಘೋಷಣೆ ಕೂಗಿದ್ದಾರೆ. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    https://twitter.com/8pareek26/status/1193579004768522240

  • ರಾಂಚಿಯಲ್ಲಿ ಟೀಂ ಇಂಡಿಯಾ ಆಟಗಾರರೊಂದಿಗೆ ಧೋನಿ

    ರಾಂಚಿಯಲ್ಲಿ ಟೀಂ ಇಂಡಿಯಾ ಆಟಗಾರರೊಂದಿಗೆ ಧೋನಿ

    ರಾಂಚಿ: ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿರುವ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅವರು ಇಂದು ತವರಿನ ಕ್ರೀಡಾಂಗಣ ರಾಂಚಿಯಲ್ಲಿ ಟೀಂ ಇಂಡಿಯಾ ಆಟಗಾರರನ್ನು ಭೇಟಿ ಮಾಡಿದರು.

    ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ಟೀಂ ಇಂಡಿಯಾ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್‍ನಲ್ಲಿ ನಂ.1 ಪಟ್ಟದಲ್ಲೇ ಮುಂದುವರಿಯಿತು. ಪಂದ್ಯದ ಬಳಿಕ ಧೋನಿ ಅವರು ಟೀಂ ಇಂಡಿಯಾ ಆಟಗಾರರೊಂದಿಗೆ ಡ್ರೆಸ್ಸಿಂಗ್ ರೂಮ್‍ನಲ್ಲಿ ಕಾಣಿಸಿಕೊಂಡರು.

    ಜಾರ್ಖಂಡ್‍ನ ಯುವ ಆಟಗಾರ ನದೀಮ್ ಅವರು ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ್ದರು. ಅಲ್ಲದೇ ಬೌಲಿಂಗ್ ನಲ್ಲಿ 4 ವಿಕೆಟ್ ಪಡೆದು ಮಿಂಚಿದ್ದರು. ಧೋನಿ ತಮ್ಮ ಭೇಟಿ ವೇಳೆ ನದೀಮ್ ಅವರೊಂದಿಗೆ ಚರ್ಚೆ ಮಾಡುತ್ತಿರುವ ಫೋಟೋವನ್ನು ಬಿಸಿಸಿಐ ಹಂಚಿಕೊಂಡಿದೆ. ದಿನದಾಟ ಆರಂಭವಾದ 10 ನಿಮಿಷಗಳಲ್ಲೇ ಉಳಿದ 2 ವಿಕೆಟ್ ಗಳನ್ನು ಪಡೆಯುವ ಮೂಲಕ ಟೀಂ ಇಂಡಿಯಾ ಗೆಲುವು ಪಡೆಯಿತು. ವಿಶೇಷ ಎಂದರೇ ಈ ಎರಡು ವಿಕೆಟ್‍ಗಳನ್ನು ನದೀಮ್ ಪಡೆದು ಮಿಂಚಿದ್ದರು.

    ಬಿಸಿಸಿಐ ಮಾತ್ರವಲ್ಲದೇ ಕೋಚ್ ರವಿಶಾಸ್ತ್ರಿ ಅವರು ಕೂಡ ಧೋನಿ ಅವರೊಂದಿಗೆ ಇರುವ ಫೋಟೋವನ್ನು ಟ್ವೀಟ್ ಮಾಡಿದ್ದು, ಸರಣಿ ಜಯದ ಬಳಿಕ ಭಾರತದ ದಿಗ್ಗಜ ಆಟಗಾರನನ್ನು ತನ್ನ ತವರಿನಲ್ಲಿ ಭೇಟಿ ಮಾಡಿದ್ದು ಸಂತಸ ತಂದಿದೆ ಎಂದು ಹೇಳಿದ್ದಾರೆ. ಪಂದ್ಯದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಿರಾಟ್ ಕೊಹ್ಲಿ, ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಧೋನಿ ಆಟಗಾರರ ಕೊಠಡಿಯಲ್ಲಿ ಇದ್ದಾರೆ. ಬಂದು ಅವರಿಗೆ ಹಾಯ್ ಹೇಳಿ ಎಂದು ನಗೆ ಬೀರಿದರು.

    2014 ರಲ್ಲಿ ಟೆಸ್ಟ್ ಕ್ರಿಕೆಟ್‍ಗೆ ನಿವೃತ್ತಿ ಹೇಳಿದ್ದ ಧೋನಿ, 2019ರ ವಿಶ್ವಕಪ್ ಬಳಿಕ ಕ್ರಿಕೆಟ್‍ನಿಂದ ವಿರಾಮವನ್ನು ಪಡೆದಿದ್ದಾರೆ. ರಾಂಚಿ ಟೆಸ್ಟ್ ಆರಂಭ ದಿನವೇ ಧೋನಿ ಆಟಗಾರರನ್ನು ಭೇಟಿ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ಪಂದ್ಯದ ಮುಕ್ತಾಯದ ಬಳಿಕ ಧೋನಿ ಆಟಗಾರರನ್ನು ಭೇಟಿ ಮಾಡಿ ಸಮಯ ಕಳೆದಿದ್ದಾರೆ.

  • ಡಿ ಕಾಕ್ ಕಾಲಿಗೆ ಬಿದ್ದ ಅಭಿಮಾನಿ – ಕ್ಷಮೆ ಕೇಳಿದ್ದಾನೆ ಎಂದ ನೆಟ್ಟಿಗರು

    ಡಿ ಕಾಕ್ ಕಾಲಿಗೆ ಬಿದ್ದ ಅಭಿಮಾನಿ – ಕ್ಷಮೆ ಕೇಳಿದ್ದಾನೆ ಎಂದ ನೆಟ್ಟಿಗರು

    ರಾಂಚಿ: ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನ ಅಭಿಮಾನಿಯೊಬ್ಬ ದಕ್ಷಿಣ ಆಫ್ರಿಕಾ ಆಟಗಾರ ಕ್ವಿಂಟನ್ ಡಿಕಾಕ್ ಅವರ ಕಾಲಿಗೆ ಬಿದ್ದ ಘಟನೆ ನಡೆದಿದೆ.

    ರಾಂಚಿಯಲ್ಲಿ ನಡೆದ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಮತ್ತು 202 ರನ್ ಗಳ ಅಂತರದಲ್ಲಿ ಪಂದ್ಯವನ್ನು ಗೆಲ್ಲುವುದರೊಂದಿಗೆ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಕೊನೆಯ ಪಂದ್ಯದ ಎರಡನೇ ದಿನವಾದ ಭಾನುವಾರ ಭಾರತೀಯ ಅಭಿಮಾನಿಯೊಬ್ಬ ಡಿಕಾಕ್ ಅವರ ಕಾಲಿಗೆ ಬಿದ್ದಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಟ್ರೋಲ್ ಆಗುತ್ತಿದೆ.

    ಭಾರತದ ಮೊದಲ ಇನ್ನಿಂಗ್ಸ್ ನಲ್ಲಿ ಮೀಡ್ ವಿಕೆಟ್‍ನಲ್ಲಿ ಕ್ಷೇತ್ರ ರಕ್ಷಣೆ ಮಾಡುತ್ತಿದ್ದ ಕ್ವಿಂಟನ್ ಡಿಕಾಕ್ ಅವರ ಕಡೆ ಓಡಿ ಬಂದ ಯುವಕನೋರ್ವ ಅವರ ಕಾಲಿಗೆ ಬೀಳುತ್ತಾನೆ. ಇದನ್ನು ಕಂಡ ಡಿಕಾಕ್ ಆಶ್ಚರ್ಯಚಕಿತಗೊಂಡು ನಿಂತು ಬಿಡುತ್ತಾರೆ. ಆಗ ತಕ್ಷಣ ಬಂದ ಭದ್ರತಾ ಸಿಬ್ಬಂದಿ ಯುವಕನನ್ನು ಎಳೆದುಕೊಂಡು ಹೋಗುತ್ತಾರೆ. ಎಳೆದುಕೊಂಡು ಹೋಗುವಾಗ ಯುವಕ ತನ್ನ ಚಪ್ಪಲಿಯನ್ನು ಅಲ್ಲೇ ಬಿಟ್ಟು ಹೋಗಿರುತ್ತಾನೆ. ಆಗ ಡಿಕಾಕ್ ಆ ಚಪ್ಪಲಿಯನ್ನು ತೆಗೆದುಕೊಂಡು ಹೋಗಿ ಮೈದಾನದ ಆಚೆಗೆ ಎಸೆಯುತ್ತಾರೆ.

    ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಆತ ಡಿಕಾಕ್ ಅವರ ಬಳಿ ಆಶೀರ್ವಾದ ಪಡೆಯಲು ಬಂದಿಲ್ಲ. ಭಾರತಕ್ಕೆ ಕರೆಸಿ 3-0 ಅಂತರದಲ್ಲಿ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ್ದಕ್ಕೆ ಕಾಲಿಗೆ ಬಿದ್ದು ಕ್ಷಮೆ ಕೇಳುತ್ತಿದ್ದಾನೆ ಎಂದು ಕೆಲ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಈ ರೀತಿಯ ದೃಶ್ಯ ನಮಗೆ ಭಾರತದಲ್ಲಿ ಮಾತ್ರ ಸಿಗಲು ಸಾಧ್ಯ ಎಂದು ಮತ್ತೆ ಕೆಲವರು ಕಮೆಂಟ್ ಮಾಡಿದ್ದಾರೆ.

    ಮೂರನೇ ದಿನದಾಟಕ್ಕೆ 46 ಓವರ್ ಗಳಲ್ಲಿ 132 ರನ್‍ಗಳಿಗೆ 8 ವಿಕೆಟ್ ಕಳೆದುಕೊಂಡಿದ್ದ ಆಫ್ರಿಕಾ ಇಂದು ಈ ಮೊತ್ತಕ್ಕೆ 1.5 ಓವರ್ ಗಳಲ್ಲಿ ಕೇವಲ 1 ರನ್ ಸೇರಿಸಿ ಉಳಿದ ಎರಡು ವಿಕೆಟ್ ಕಳೆದುಕೊಂಡಿತು. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‍ನಲ್ಲಿ 240 ಅಂಕಗಳಿಸಿ ಭಾರತ ಮೊದಲ ಸ್ಥಾನದಲ್ಲೇ ಮುಂದುವರಿದಿದೆ.

    ಎರಡನೇ ಇನ್ನಿಂಗ್ಸ್ ನಲ್ಲಿ ಭಾರತದ ಪರ ಶಮಿ 3 ವಿಕೆಟ್ ಪಡೆದರೆ ಉಮೇಶ್ ಯಾದವ್ ಮತ್ತು ನದೀಂ ತಲಾ 2 ವಿಕೆಟ್ ಪಡೆದಿದ್ದಾರೆ. ಜಡೇಜಾ ಮತ್ತು ಅಶ್ವಿನ್ ತಲಾ ಒಂದೊಂದು ವಿಕೆಟ್ ಗಳಿಸಿದ್ದಾರೆ.

  • ಸಿಕ್ಸರ್ ಮೇಲೆ ಸಿಕ್ಸರ್ – ಸಚಿನ್ ದಾಖಲೆ ಸರಿಗಟ್ಟಿದ ಉಮೇಶ್ ಯಾದವ್

    ಸಿಕ್ಸರ್ ಮೇಲೆ ಸಿಕ್ಸರ್ – ಸಚಿನ್ ದಾಖಲೆ ಸರಿಗಟ್ಟಿದ ಉಮೇಶ್ ಯಾದವ್

    ರಾಂಚಿ: ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ, 3ನೇ ಟೆಸ್ಟ್ ಪಂದ್ಯದಲ್ಲಿ ರವೀಂದ್ರ ಜಡೇಜಾ ಅರ್ಧ ಶತಕ ಗಳಿಸಿದರು. 118 ಎಸೆತಗಳಲ್ಲಿ 4 ಬೌಂಡರಿಗಳೊಂದಿಗೆ ಜಡೇಜಾ 51 ರನ್ ಗಳಿಸಿದರು. ಇತ್ತ ಅಂತಿಮ ಹಂತದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಉಮೇಶ್ ಯಾದವ್ 5 ಭರ್ಜರಿ ಸಿಕ್ಸರ್ ನೊಂದಿಗೆ 31 ರನ್ ಗಳಿಸಿ ಔಟಾದರು.

    ಟೀಂ ಇಂಡಿಯಾ ಪರ ರೋಹಿತ್ 212 ರನ್, ರಹಾನೆ 115 ರನ್ ಹಾಗೂ ಜಡೇಜಾರ ಅರ್ಧ ಶತಕ ನೆರವನಿಂದ ತಂಡ ಪಂದ್ಯದಲ್ಲಿ ಮೇಲುಗೈ ಸಾಧಿಸಿತ್ತು. ಜಡೇಜಾ ಔಟಾಗುತ್ತಿದಂತೆ ಆಗಮಿಸಿದ ಉಮೇಶ್ ಯಾದವ್ ಬಿರುಸಿನ ಭರ್ಜರಿ ಬ್ಯಾಟಿಂಗ್ ನಡೆಸಿದರು. 112 ಓವರಿನಲ್ಲಿ ತಾನು ಎದುರಿಸಿದ ಮೊದಲ ಎರಡು ಎಸೆತವನ್ನು ಸಿಕ್ಸರ್ ಗಟ್ಟಿದ ಯಾದವ್, ಆ ಬಳಿಕ 116ನೇ ಓವರಿನ 1, 3, 5ನೇ ಎಸೆತಗಳಲ್ಲಿ ಸಿಕ್ಸರ್ ಸಿಡಿಸಿದರು. ಇದೇ ಓವರಿನ 6ನೇ ಎಸೆತವನ್ನು ಸಿಕ್ಸರ್ ಗಟ್ಟುವ ಯತ್ನದಲ್ಲಿ ಕ್ಯಾಚ್ ನೀಡಿ ಔಟಾದರು.

    ಕೇವಲ 10 ಎಸೆತಗಳಲ್ಲಿ 5 ಸಿಕ್ಸರ್ ಸಿಡಿಸಿ 310 ಸ್ಟ್ರೈಕ್ ನೊಂದಿಗೆ 31 ರನ್ ಗಳಿಸಿ ಔಟಾದರು. ಅಲ್ಲದೇ ಟೆಸ್ಟ್ ಪಂದ್ಯವೊಂದರಲ್ಲಿ ಎದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್ ಗಟ್ಟಿದ ಭಾರತದ 4ನೇ ಆಟಗಾರ ಎನಿಸಿಕೊಂಡರು. ಈ ಹಿಂದೆ ಸಚಿನ್, ಧೋನಿ, ಜಹೀರ್ ಖಾನ್ ಈ ಸಾಧನೆ ಮಾಡಿದ್ದರು. ವಿಶೇಷ ಎಂದರೆ ಉಮೇಶ್ ಮೊದಲ ಎಸೆತ ಮಾತ್ರವಲ್ಲದೇ 2ನೇ ಎಸೆತದಲ್ಲೂ ಸಿಕ್ಸರ್ ಸಿಡಿಸಿದ್ದು, ಟೆಸ್ಟ್ ಕ್ರಿಕೆಟ್‍ನಲ್ಲಿ ಈ ಸಾಧನೆ ಮಾಡಿದ 3ನೇ ಆಟಗಾರ ಎನಿಸಿಕೊಂಡರು. ಈ ಹಿಂದೆ 2013 ರಲ್ಲಿ ಸಚಿನ್ ಹಾಗೂ 1948 ರಲ್ಲಿ ಇಂಗ್ಲೆಂಡ್ ಆಟಗಾರ ಫೋಫಿ ವಿಲಿಯಮ್ಸ್ ಈ ಸಾಧನೆ ಮಾಡಿದ್ದರು.

    ಪಂದ್ಯದಲ್ಲಿ ಟೀಂ ಇಂಡಿಯಾ 9 ವಿಕೆಟ್ ನಷ್ಟಕ್ಕೆ 497 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು. ಆ ಬಳಿಕ ಬ್ಯಾಟಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ 9 ರನ್ ಗಳಿಗೆ ಆರಂಭಿಕ ಆಟಗಾರರಾದ ಡಿಕಾಕ್ ಹಾಗೂ ಎಲ್ಗರ್ ವಿಕೆಟ್ ಕಳೆದು ಸಂಕಷ್ಟಕ್ಕೆ ಸಿಲುಕಿದೆ. ಟೀಂ ಇಂಡಿಯಾ ಪರ ಉಮೇಶ್ ಯಾದವ್ ಮತ್ತು ಶಮಿ ತಲಾ 1 ವಿಕೆಟ್ ಪಡೆದರೆ, ದಕ್ಷಿಣ ಆಫ್ರಿಕಾ ಪರ ಡುಪ್ಲೆಸಿಸ್ 1 ರನ್, ಜುಬೇರ್ ಹಮ್ಜಾ ಶೂನ್ಯ ರನ್ ಗಳಿಸಿ 3ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.