Tag: ranchi

  • ಲಾಲೂ ಪ್ರಸಾದ್ ಯಾದವ್ ಕಿರುಕುಳ ಎದುರಿಸುತ್ತಿದ್ದಾರೆ: ಬಿಜೆಪಿ ವಿರುದ್ಧ ಪ್ರಿಯಾಂಕಾ ವಾಗ್ದಾಳಿ

    ಲಾಲೂ ಪ್ರಸಾದ್ ಯಾದವ್ ಕಿರುಕುಳ ಎದುರಿಸುತ್ತಿದ್ದಾರೆ: ಬಿಜೆಪಿ ವಿರುದ್ಧ ಪ್ರಿಯಾಂಕಾ ವಾಗ್ದಾಳಿ

    ರಾಂಚಿ: ಬಿಜೆಪಿ ಮುಂದೆ ತಲೆ ಬಾಗದವರು ಕಿರುಕುಳ ಎದುರಿಸುತ್ತಾರೆ ಎಂದು ಹೇಳುವ ಮೂಲಕ ಮೇವು ಹಗರಣದಲ್ಲಿ ದೋಷಿಯಾಗಿರುವ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಬೆಂಬಲಕ್ಕೆ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ನಿಂತಿದ್ದಾರೆ.

    ಪ್ರಿಯಾಂಕಾ ಗಾಂಧಿ ಅವರು ಬಿಜೆಪಿ ಎಂಬ ರಾಜಕೀಯ ಬ್ರಾಂಡ್ ಮುಂದೆ ಬಾಗದವರು ಕಿರುಕುಳವನ್ನು ಎದುರಿಸುತ್ತಾರೆ. ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕರಿಗೆ ಅಂತಿಮವಾಗಿ ನ್ಯಾಯ ಸಿಗುತ್ತದೆ ಎಂಬ ಭರವಸೆ ಇದೆ ಎಂದು ತಮ್ಮ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಬಹುಕೋಟಿ ಮೇವು ಹಗರಣ, ಲಾಲೂ ಪ್ರಸಾದ್ ಯಾದವ್‌ ದೋಷಿ – CBI ಕೋರ್ಟ್‌

    ಬಿಜೆಪಿ ಬ್ರಾಂಡ್ ರಾಜಕಾರಣದ ಪ್ರಮುಖ ಅಂಶವೆಂದರೆ, ತಲೆಬಾಗದವರು (ಪಕ್ಷದ ಮುಂದೆ) ಕಿರುಕುಳವನ್ನು ಎದುರಿಸಬೇಕಾಗುತ್ತದೆ. ಲಾಲು ಪ್ರಸಾದ್ ಯಾದವ್ ಅವರು ರಾಜಕೀಯದಲ್ಲಿ ರಾಜಿ ಮಾಡಿಕೊಳ್ಳದ ರೀತಿಯಲ್ಲಿ ದಾಳಿ ನಡೆಸುತ್ತಿದ್ದಾರೆ. ಅವರಿಗೆ ನ್ಯಾಯ ಸಿಗುತ್ತದೆ ಎಂಬ ಭರವಸೆ ನನಗಿದೆ ಎಂದು ತಿಳಿಸಿದ್ದಾರೆ.

    ಮಂಗಳವಾರ ಜಾರ್ಖಂಡ್ ರಾಜಧಾನಿ ರಾಂಚಿಯ ಸಿಬಿಐ ವಿಶೇಷ ನ್ಯಾಯಾಲಯವು ಡೊರಾಂಡಾ ಮೇವು ಹಗರಣದ ಪ್ರಕರಣದಲ್ಲಿ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಕೂಡಾ ದೋಷಿ ಎಂದು ಘೋಷಿಸಿದೆ. ಇದನ್ನೂ ಓದಿ: ಕೋರ್ಟ್ ತೀರ್ಪು ಬರುವವರೆಗೂ ಮಗಳು ಮನೆಯಲ್ಲೇ ಇರಲಿ: ಮಂಡ್ಯ ಪೋಷಕರು

  • ಸಲಿಂಗ ಸಂಗಾತಿ ಜೊತೆಗೆ ವಧು ಎಸ್ಕೇಪ್

    ಸಲಿಂಗ ಸಂಗಾತಿ ಜೊತೆಗೆ ವಧು ಎಸ್ಕೇಪ್

    ರಾಂಚಿ: ಒಲ್ಲದ ಮನಸ್ಸಿನಿಂದ ಮನೆಯವರ ಒತ್ತಾಯಕ್ಕೆ ಮದುವೆ ಮಾಡಿಕೊಂಡಿರುವ ಯುವತಿ ಮರುದಿನವೇ ಸಲಿಂಗ ಸಂಗಾತಿ ಜೊತೆ ಓಡಿ ಹೋಗಿರುವ ಘಟನೆ ಜಾರ್ಖಂಡ್​ನ ಧನ್ಬಾದ್‍ನಲ್ಲಿ ನಡೆದಿದೆ.

    ಕುಟುಂಬಸ್ಥರು ಬಲಂತವಾಗಿ ಯುವತಿಯ ಮದುವೆ ಮಾಡಿದ್ದಾರೆ. ಆದರೆ ಆಕೆ ಮರುದಿನವೇ ಸಲಿಂಗ ಸಂಗಾತಿ ಜೊತೆ ಓಡಿ ಹೋಗಿದ್ದಾಳೆ. ಈ ಜೋಡಿ ತಮಗೆ ರಕ್ಷಣೆ ನೀಡುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇದನ್ನೂ ಓದಿ: ಟ್ರ್ಯಾಕ್ಟರ್‌ಗೆ ಗುದ್ದಿದ ಕಾರ್- ಐದು ಮಂದಿ ಸ್ಥಳದಲ್ಲೇ ಸಾವು

    ಯುವತಿ ವಿವಾಹ ಮಾಡಿಕೊಳ್ಳುವುದಕ್ಕೂ ಮುಂಚಿತವಾಗಿ ಸಲಿಂಗ ಸಂಗಾತಿ ಜೊತೆ ವಾಸವಾಗಿದ್ದಳು. ಇದನ್ನರಿತ ಕುಟುಂಬಸ್ಥರು ಯುವಕನೊಂದಿಗೆ ಬಲವಂತವಾಗಿ ಮದುವೆ ಮಾಡಿಸಿದ್ದಾರೆ. ಈ ಬೆನ್ನಲ್ಲೇ ಆಕೆ ಮದುವೆಯಾದ ಮರುದಿನವೇ ಸಲಿಂಗ ಸಂಗಾತಿ ಜೊತೆಗೆ ಎಸ್ಕೇಪ್ ಆಗಿದ್ದಾಳೆ. ಇಬ್ಬರೂ ಕಳೆದ ಅನೇಕ ವರ್ಷಗಳಿಂದ ಪರಿಚಯವಾಗಿದ್ದು, ಒಬ್ಬರನ್ನೊಬ್ಬರು ಪ್ರೀತಿಸಲು ಶುರು ಮಾಡಿದ್ದರಂತೆ. ಇದನ್ನೂ ಓದಿ: ಕೆಟ್ಟದಾಗಿ ಮುಟ್ಟಿದ್ದಕ್ಕಾಗಿ ಛೀಮಾರಿ ಹಾಕಿದ ಮಹಿಳೆಯನ್ನೇ ಕೊಲ್ಲಲು ಮುಂದಾದ ವ್ಯಕ್ತಿ ಅರೆಸ್ಟ್

    ಕಳೆದ ಡಿಸೆಂಬರ್ ತಿಂಗಳಲ್ಲಿ ನಡೆದ ಪ್ರಕರಣ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.  ಪೊಲೀಸ್ ಠಾಣೆಯಲ್ಲಿ ಯುವತಿ ಗಂಡನೊಂದಿಗೆ ಜೀವನ ನಡೆಸಲು ಸಾಧ್ಯವಿಲ್ಲ, ಸಲಿಂಗ ಸಂಗಾತಿ ಜೊತೆ ಇರುವುದಾಗಿ ಹೇಳಿದ್ದಾಳೆ.

  • ವಜ್ರ ಖಚಿತ ಐಫೋನ್ ಕದ್ದು ವಾಟ್ಸಪ್ ಸ್ಟೇಟಸ್‍ನಲ್ಲಿ ಸಿಕ್ಕಿ ಬಿದ್ರು

    ವಜ್ರ ಖಚಿತ ಐಫೋನ್ ಕದ್ದು ವಾಟ್ಸಪ್ ಸ್ಟೇಟಸ್‍ನಲ್ಲಿ ಸಿಕ್ಕಿ ಬಿದ್ರು

    ರಾಂಚಿ: ಕೋಟಿ ಬೆಲೆ ಬಾಳುವ ಚಿನ್ನ, ವಜ್ರ ಖಚಿತವಾದ ಐಫೋನ್ ಕದ್ದ ಕಳ್ಳರ ಗ್ಯಾಂಗ್ ವಾಟ್ಸಪ್ ಸ್ಟೇಟಸ್‍ ಮೂಲಕವಾಗಿ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.

    ಚಿನ್ನ ಮತ್ತು ವಜ್ರ ಖಚಿತ ಐಫೋನ್ ಪ್ರೋ ಮ್ಯಾಕ್ಸ್ ಫೋನ್ ಕದ್ದಿದ್ದ ಕಳ್ಳರ ಗ್ಯಾಂಗ್ ಅನ್ನು ಪೊಲೀಸರು ಜಾರ್ಖಂಡ್‍ನ ಸಾಹಿಬ್‍ಗಂಜ್‍ನಲ್ಲಿ ಬಂಧಿಸಿದ್ದಾರೆ. ಆದರೆ ಈ ಐನಾತಿ ಕಳ್ಳರು ಸಿಕ್ಕಿ ಬಿದ್ದಿರವ ಕಥೆ ಸಿನಿಮಾ ಸ್ಟೋರಿಯನ್ನು ಮೀರಿಸುವಂತಿದೆ.

    ಕಳ್ಳರ ಗ್ಯಾಂಗ್ ಬೇರೆ ಕಡೆ ಕದ್ದಿದ್ದ ವಿಶೇಷವಾಗಿ ಚಿನ್ನ ಮತ್ತು ವಜ್ರದಿಂದ ತಯಾರಿಸಿದ್ದ ಐಫೋನ್ ಅನ್ನು ಮಾರಾಟ ಮಾಡಲು ಸ್ಥಳೀಯರಿಗೆ ತೋರಿಸಿದ್ದಾರೆ. ಇದನ್ನು ನೋಡಿದವರು ಒಂದು ಕ್ಷಣ ಅಚ್ಚರಿಗೊಂಡಿದ್ದಾರೆ. ಕೆಲ ಯುವಕರು ಮೊಬೈಲ್ ಹಿಡಿದು ಸೆಲ್ಫಿ ತೆಗೆದುಕೊಂಡು ಆ ಫೋಟೋಗಳನ್ನು ವಾಟ್ಸಪ್‌ ಸ್ಟೇಟಸ್‍ನಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ಭಾರಿ ವೈರಲ್ ಆಗುತ್ತಿದ್ದಂತೆ ವಿಷಯ ಪೊಲೀಸರ ಗಮನಕ್ಕೂ ಬಂದಿದೆ. ಕೂಡಲೇ ಎಚ್ಚೆರಿತುಕೊಂಡ ಖಾಕಿ ಪಡೆ ಕಳ್ಳರನ್ನು ಬಂಧಿಸಿ ದುಬಾರಿ ಬೆಲೆಯ ಐಫೋನ್ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಪಕ್ಷದಿಂದ ಸಚಿವನ ಉಚ್ಛಾಟಿಸಿದ ಬಿಜೆಪಿ – ಮತ್ತೆ ‘ಕೈ’ ಹಿಡೀತಾರಾ ಹರಕ್ ಸಿಂಗ್ ರಾವತ್?

    ಈ ಮೊಬೈಲ್ 24 ಕ್ಯಾರೆಟ್‍ನ ಚಿನ್ನದಿಂದ ಮಾಡಲಾಗಿದ್ದು, ಇದರಲ್ಲಿ ಡೈಮಂಡ್ ಕೂಡ ಇದೆ. ಮಾರುಕಟ್ಟೆ ಬೆಲೆ ಸುಮಾರು 4 ಲಕ್ಷ ರೂಪಾಯಿ ಇದೆ. ಕಳ್ಳರನ್ನು ಬಂಧಿಸಿದ್ದೇವೆ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ.

  • ವೇದಿಕೆ ಮೇಲೆಯೇ ಕುಸ್ತಿಪಟುವಿಗೆ ಕಪಾಳಮೋಕ್ಷ ಮಾಡಿದ ಬಿಜೆಪಿ ಸಂಸದ!

    ವೇದಿಕೆ ಮೇಲೆಯೇ ಕುಸ್ತಿಪಟುವಿಗೆ ಕಪಾಳಮೋಕ್ಷ ಮಾಡಿದ ಬಿಜೆಪಿ ಸಂಸದ!

    ರಾಂಚಿ: ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ವೇದಿಕೆ ಮೇಲೆಯೇ ಕುಸ್ತಿಪಟುವಿಗೆ ಬಿಜೆಪಿ ಸಂಸದ ಬ್ರಿಜುಭೂಷಣ್‌ ಶರಣ್‌ ಸಿಂಗ್‌ ಕಪಾಳಮೋಕ್ಷ ಮಾಡಿರುವ ವೀಡಿಯೋ ಎಲ್ಲೆಡೆ ವೈರಲ್‌ ಆಗಿದೆ.

    ಜಾರ್ಖಂಡ್‌ನ ರಾಜಧಾನಿ ರಾಂಚಿಯಲ್ಲಿ ರಾಷ್ಟ್ರೀಯ ಚಾಂಪಿಯನ್ ಶಿಪ್‌ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ವೇಳೆ ಕುಸ್ತಿಪಟು ವೇದಿಕೆ ಮೇಲೆ ಆಗಮಿಸಿದ್ದಾರೆ. ಆಗ ಕುಸ್ತಿಪಟುವಿಗೆ ಬಿಜೆಪಿ ಸಂಸದರು ಕಪಾಳಮೋಕ್ಷ ಮಾಡಿರುವ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ಇದನ್ನೂ ಓದಿ: ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಗೆ ಕನ್ನಡಿಗ ಕೆ.ಎಲ್ ರಾಹುಲ್ ಟೀಂ ಇಂಡಿಯಾದ ಉಪನಾಯಕ?

    15 ವರ್ಷದೊಳಗಿನವರ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ ಶಿಪ್‌ ಕಾರ್ಯಕ್ರಮಕ್ಕೆ ಸಂಸದ ಸಿಂಗ್‌ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

    ವಯಸ್ಸು ಮೀರಿದ್ದ ಕಾರಣ ಕುಸ್ತಿಪಟುವೊಬ್ಬರಿಗೆ ಸ್ಪರ್ಧೆಗೆ ಅವಕಾಶ ನೀಡಿರಲಿಲ್ಲ. ಹೀಗಾಗಿ 15 ವರ್ಷದೊಳಗಿನವರ ಕುಸ್ತಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ತನಗೆ ಅವಕಾಶ ಮಾಡಿಕೊಡುವಂತೆ ಕೇಳಿಕೊಳ್ಳಲು ಸಂಸದರ ಬಳಿಗೆ ಕುಸ್ತಿಪಟು ತೆರಳಿದ್ದಾರೆ. ವೇದಿಕೆ ಮೇಲೆ ಕುಸ್ತಿಪಟು ಆಗಮಿಸುತ್ತಿದ್ದಂತೆ ಕೋಪಗೊಂಡ ಸಂಸದರು ಆತನ ಕಪಾಳಕ್ಕೆ ಹೊಡೆದಿದ್ದಾರೆ. ನಂತರ ಕುಸ್ತಿಪಟು ಮುಜುಗರ ಪಟ್ಟುಕೊಂಡು ವೇದಿಕೆಯಿಂದ ನಿರ್ಗಮಿಸಿದ್ದಾರೆ. ಇದನ್ನೂ ಓದಿ: ಟ್ರಾಫಿಕ್ ಪೊಲೀಸರಿಗೆ ಧನ್ಯವಾದ ತಿಳಿಸಿದ ಸಚಿನ್ ತೆಂಡೂಲ್ಕರ್

  • ‘ಜೈ ಶ್ರೀ ರಾಮ್’ ಹೇಳುವಂತೆ ಒತ್ತಾಯಿಸಿ ಕಾಶ್ಮೀರದ ವ್ಯಾಪಾರಿಗಳ ಮೇಲೆ ಹಲ್ಲೆ

    ‘ಜೈ ಶ್ರೀ ರಾಮ್’ ಹೇಳುವಂತೆ ಒತ್ತಾಯಿಸಿ ಕಾಶ್ಮೀರದ ವ್ಯಾಪಾರಿಗಳ ಮೇಲೆ ಹಲ್ಲೆ

    ರಾಂಚಿ: ಕಾಶ್ಮೀರದ ವ್ಯಾಪಾರಿಗಳನ್ನು ‘ಜೈ ಶ್ರೀ ರಾಮ್’ ಎಂದು ಹೇಳುವಂತೆ ಒತ್ತಾಯಿಸಿ ಹಲ್ಲೆ ಮಾಡಿರುವ ಪ್ರಕರಣ ಜಾರ್ಖಂಡ್ ನಲ್ಲಿ ದಾಖಲಾಗಿದೆ.

    ರಾಂಚಿಯಲ್ಲಿ ಕಾಶ್ಮೀರಿ ವ್ಯಾಪಾರಿಗಳಿಗೆ ‘ಜೈ ಶ್ರೀ ರಾಮ್’ ಮತ್ತು ‘ಪಾಕಿಸ್ತಾನ್ ಮುರ್ದಾಬಾದ್’ ಎಂದು ಹೇಳುವಂತೆ ಒತ್ತಾಯಿಸಿದ ಮೂವರನ್ನು ಬಂಧಿಸಿರುವುದಾಗಿ ಜಾರ್ಖಂಡ್ ಪೊಲೀಸರು ಇಂದು ತಿಳಿಸಿದ್ದಾರೆ. ಇದನ್ನೂ ಓದಿ: ಹಣಕ್ಕಾಗಿ ಬ್ಲ್ಯಾಕ್‍ಮೇಲ್ – ನಕಲಿ ಎಸಿಬಿ ಅಧಿಕಾರಿ ಅರೆಸ್ಟ್

    ನಡೆದಿದ್ದೇನು?
    ಚಳಿಗಾಲದ ಬಟ್ಟೆಗಳನ್ನು ಮಾರಿಕೊಂಡು ಜೀವನ ಸಾಗಿಸುತ್ತಿದ್ದ ಕಾಶ್ಮೀರಿ ವ್ಯಾಪಾರಿಗಳ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಹಲ್ಲೆಗೊಳಗಾದ ವ್ಯಕ್ತಿಯೊಬ್ಬ ಶನಿವಾರ ಪೊಲೀಸರಿಗೆ ದೂರ ನೀಡಿದ್ದಾರೆ. ಈ ದೂರಿನಲ್ಲಿ ರಾಂಚಿಯ ಡೊರಾಂಡಾ ಪ್ರದೇಶದಲ್ಲಿ ನನ್ನ ಮತ್ತು ಇತರ ಕೆಲವು ಕಾಶ್ಮೀರಿ ವ್ಯಾಪರಿಗಳ ಮೇಲೆ 25 ಜನರು ದಾಳಿ ಮಾಡಿದ್ದು, ಜೈ ಶ್ರೀ ರಾಮ್ ಮತ್ತು ಪಾಕಿಸ್ತಾನ ಮುರ್ದಾಬಾದ್ ಎಂದು ಹೇಳುವಂತೆ ಒತ್ತಾಯಿಸಿದರು ಎಂದು ದಾಖಲಿಸಿದ್ದಾರೆ.

    ಕಾಶ್ಮೀರಿ ವ್ಯಾಪಾರಿಗಳು ಘಟನೆಯ ಬಗ್ಗೆ ದೂರು ನೀಡಿರುವ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ನಾವು ಕಾಶ್ಮೀರಿಯಾಗಿರುವುದು ಅಪರಾಧವೇ? ನಾವು ಭಾರತೀಯರಲ್ಲವೇ? ಇವರು ನಮ್ಮ ಜೀವನವನ್ನು ನರಕವಾಗಿಸಿದ್ದು, ಯಾವಾಗಲೂ ‘ಜೈ ಶ್ರೀ ರಾಮ್’, ‘ಪಾಕಿಸ್ತಾನ ಮುರ್ದಾಬಾದ್’ ಎಂದು ಹೇಳುವಂತೆ ಒತ್ತಾಯಿಸುತ್ತಿರುತ್ತಾರೆ. ಅವರು ಹೇಳಿದಂತೆ ನಾವು ಕೇಳಲಿಲ್ಲವೆಂದು ನಮ್ಮ ನಾಲ್ವರನ್ನು ಥಳಿಸಿದ್ದಾರೆ. ನಾವು ಭಾರತೀಯರು ಮತ್ತು ಕಾನೂನು ಎಲ್ಲರಿಗೂ ಸಮಾನವಾಗಿದೆ. ಕಾನೂನಿನಲ್ಲಿ ಯಾವುದೇ ತಾರತಮ್ಯ ಇರಬಾರದು ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ಸಿಎಂ ಹೇಮಂತ್ ಸೊರೆನ್ ಅವರು ಆ ವೀಡಿಯೋವನ್ನು ರೀ-ಟ್ವೀಟ್ ಮಾಡಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆಯನ್ನು ನೀಡಿದರು. ಜಾರ್ಖಂಡ್‍ನಲ್ಲಿ ಧಾರ್ಮಿಕ ದ್ವೇಷ ಮತ್ತು ತಾರತಮ್ಯಕ್ಕೆ ಯಾವುದೇ ಸ್ಥಳವಿಲ್ಲ ಎಂದು ಟ್ವೀಟ್‍ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಶ್ರೀ ಕ್ಷೇತ್ರ ಕೈವಾರದಲ್ಲೊಂದು ಅಪರೂಪದ ಮದುವೆ

    ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸುರೇಂದ್ರ ಕುಮಾರ್ ಝಾ ಈ ಕುರಿತು ಪ್ರತಿಕ್ರಿಯಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಅವರ ವಿರುದ್ಧ ಕ್ರಮವನ್ನು ತೆಗೆದುಕೊಳ್ಳಲಾಗುತ್ತೆ ಎಂದು ತಿಳಿಸಿದ್ದಾರೆ.

  • ಧೋನಿ ಮಾಸ್ ಮೀಸೆಗೆ ಅಭಿಮಾನಿಗಳು ಫಿದಾ

    ಧೋನಿ ಮಾಸ್ ಮೀಸೆಗೆ ಅಭಿಮಾನಿಗಳು ಫಿದಾ

    ರಾಂಚಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಇದೀಗ ಮಾಸ್ ಮೀಸೆಯೊಂದಿಗೆ ಹೊಸ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನು ನೋಡಿದ ಮಾಹಿ ಫ್ಯಾನ್ಸ್ ಫಿದಾ ಆಗಿದ್ದಾರೆ.

    ರಾಂಚಿ ರಾಜಕುಮಾರ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ ಆರಂಭಿಕ ದಿನಗಳಲ್ಲಿ ಅವರ ಉದ್ದನೆಯ ಕೂದಲು ಭಾರೀ ಟ್ರೆಂಡ್ ಸೃಷ್ಟಿಸಿತ್ತು. ಯುವಕರೆಲ್ಲಾ ಮಾಹಿಯಂತೆ ಕೂದಲು ಬೆಳೆಸಿ ಹೊಸ ಸಂಚಲನ ಸೃಷ್ಟಿಸಿದ್ದರು. ಆ ಬಳಿಕ ಧೋನಿ ಹಲವು ರೀತಿಯ ಕೇಶ ವಿನ್ಯಾಸಗಳಲ್ಲಿ ಗಮನ ಸೆಳೆದಿದ್ದರು. ಇದೀಗ ಧೋನಿ ತನ್ನ ಮೀಸೆಯ ಮೂಲಕ ಹೊಸ ಟ್ರೆಂಡ್ ಸೃಷ್ಟಿಸಲು ಹೊರಟಿದ್ದಾರೆ. ಈ ರಗಡ್ ಲುಕ್ ಕಂಡು ಮಾಹಿ ಅಭಿಮಾನಿಗಳು ಫುಲ್ ಖುಷಿ ಆಗಿದ್ದಾರೆ. ಇದನ್ನೂ ಓದಿ: ಅಪ್ಪನಿಗೆ ಮಸಾಜ್ ಮಾಡಿದ ಧೋನಿ ಪುತ್ರಿ ಝೀವಾ: ವಿಡಿಯೋ

    ಧೋನಿ 14ನೇ ಆವೃತ್ತಿಯ ಐಪಿಎಲ್ ಕೊರೋನಾದಿಂದಾಗಿ ಮುಂದೂಡಲ್ಪಟ್ಟ ಮೇಲೆ ತನ್ನ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಅದರಲ್ಲೂ ತನ್ನ ಮುದ್ದಿನ ಮಗಳು ಝೀವಾ ಜೊತೆ ತುಂಟಾಟಗಳನ್ನು ಆಡುವ ಧೋನಿ ಇದೀಗ ಫೋಟೋ ಒಂದರಲ್ಲಿ ಈ ರೀತಿ ಮೀಸೆ ಬಿಟ್ಟು ಫೋಸ್ ನೀಡಿದ್ದಾರೆ. ಮಾಹಿಯ ಈ ಫೋಟೋವನ್ನು ಚೆನ್ನೈ ಸೂಪರ್ ಕಿಂಗ್ ಫ್ರಾಂಚೈಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ. ಇದನ್ನೂ ಓದಿ: ಕುದುರೆ ಜೊತೆ ಧೋನಿ ರೇಸ್

    ಈ ಪೋಸ್ಟ್ ನೋಡಿದ ಅಭಿಮಾನಿಗಳು ಹಲವು ರೀತಿಯ ಕಾಮೆಂಟ್ ಮಾಡುತ್ತಿದ್ದು, ಧೋನಿಗೆ ಈ ಲುಕ್ ಸೂಟ್ ಆಗುತ್ತದೆ ಹೀಗೆ ಇರಲಿ ಎಂದು ಅಭಿಮಾನಿಯೊಬ್ಬರು ಬರೆದುಕೊಂಡರೆ. ಇನ್ನೊಬ್ಬರು ಸಿಂಗಂ ಸ್ಟೈಲ್‍ನಂತಿದೆ ಎಂದಿದ್ದಾರೆ. ಒಟ್ಟಿನಲ್ಲಿ ಧೋನಿ ಕ್ರಿಕೆಟ್‍ನಿಂದ ದೂರ ಉಳಿದಿದ್ದರು ಕೂಡ ತಮ್ಮ ಬೇರೆ ಬೇರೆ ಕಾರ್ಯ ವೈಖರಿಗಳಿಂದ ಆಗಾಗ್ಗೆ ಸುದ್ದಿಯಾಗುತ್ತಿದ್ದಾರೆ.

  • ಕಾಣೆಯಾಗಿದ್ದ ಮಹಿಳೆ ಶವ ಆರು ತುಂಡುಗಳಾಗಿ ಪತ್ತೆ

    ಕಾಣೆಯಾಗಿದ್ದ ಮಹಿಳೆ ಶವ ಆರು ತುಂಡುಗಳಾಗಿ ಪತ್ತೆ

    ರಾಂಚಿ: ನದಿಯ ದಂಡೆಯಲ್ಲಿ ಮಹಿಳೆಯ ಶವವನ್ನು ಆರು ತುಂಡುಗಳಾಗಿ ಕತ್ತರಿಸಿ ಎಸೆದಿರುವ ಘಟನೆ ಜಾಖರ್ಂಡ್‍ನ ಪಕೂರ್ ಜಿಲ್ಲೆಯಲ್ಲಿ ನಡೆದಿದೆ.

    ಮೃತ ಮಹಿಳೆಯನ್ನು ಸೋನಾ ಮರಂಡಿ(45) ಎಂದು ಗುರುತಿಸಲಾಗಿದೆ. ಈಕೆ ಫೆಬ್ರವರಿ 24 ರಿಂದ ಕಾಣೆಯಾಗಿದ್ದಾಳೆ. ಸೋನಾ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಆರು ತುಂಡುಗಳನ್ನಾಗಿ ಮಾಡಿ ಕೊಲೆ ಮಾಡಲಾಗಿದೆ. ಮಹಿಳೆ ದೇಹ ರಕ್ತ ಸಿಕ್ತವಾಗಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

     

    ಕತ್ತರಿಸಿ ಬಿದ್ದಿರುವ ಕಾಲನ್ನು ಗಮನಿಸಿದ ಗ್ರಾಮಸ್ಥರು ಮಾಹಿತಿ ನೀಡಿದ್ದರು. ನಾವು ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದಾಗ ಮಹಿಳೆಯ ತುಂಡು ತುಂಡಾದ ದೇಹ ಪತ್ತೆಯಾಗಿದೆ. ಮಹಿಳೆಯ ಕತ್ತರಿಸಿದ ತಲೆ, ಮುಂಡ, ಕೈ ಮತ್ತು ಕಾಲುಗಳು ಕಂಡುಬಂದಿವೆ ಎಂದು ಪೊಲೀಸ್ ಅಧಿಕಾರಿ ಮನೋಜ್ ಕುಮಾರ್ ತಿಳಿಸಿದ್ದಾರೆ.

    ಮಹಿಳೆಯ ಮಗ ಮನೋಜ್ ಹನ್ಸದ್ ತನ್ನ ತಾಯಿಯ ದೇಹ ಎಂದು ಗುರುತಿಸಿದ್ದಾನೆ. ನನ್ನ ತಾಯಿ ಮಾರ್ಚ್ 3 ರಂದು ಕಾಣೆಯಾಗಿದ್ದಳು ಎಂದು ಹೇಳಿದ್ದಾನೆ. ದೇಹದ ಭಾಗಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಬಗ್ಗೆ ತನಿಖೆ ಆರಂಭಿಸುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ.

  • ಮದ್ವೆಯಾಗುವಂತೆ ಒತ್ತಡ ಹೇರಿದ್ದಕ್ಕೆ ಅಪ್ರಾಪ್ತ ಗರ್ಭಿಣಿಯನ್ನು ಕೊಂದ ಹುಡುಗ..!

    ಮದ್ವೆಯಾಗುವಂತೆ ಒತ್ತಡ ಹೇರಿದ್ದಕ್ಕೆ ಅಪ್ರಾಪ್ತ ಗರ್ಭಿಣಿಯನ್ನು ಕೊಂದ ಹುಡುಗ..!

    ರಾಂಚಿ: 17 ವರ್ಷದ ಗರ್ಭಿಣಿ ಹತ್ಯೆ ಮಾಡಿ ಸಮಾಧಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ  ಜಾರ್ಖಂಡ್ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

    ಮೃತ ಹುಡುಗಿ 18 ವರ್ಷದವನನ್ನು ಪ್ರೀತಿಸುತ್ತಿದ್ದಳು. ಆದರೆ ಗರ್ಭಿಣಿಯಾಗುತ್ತಿದ್ದಂತೆ ಪ್ರೇಮಿ ಮತ್ತು ಆತನ ಸ್ನೇಹಿತನನ್ನು ಹುಸೇನಾಬಾದ್ ಇಬ್ಬರು ಸೇರಿ ಹುಡುಗಿಯನ್ನು ಕೊಂದು ಸಮಾಧಿ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆ ಪ್ರದೇಶದ ಕೊರಿಯಾಡಿ ಗ್ರಾಮದಿಂದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.

    ಗರ್ಭಿಣಿ ನನ್ನನ್ನು ಮದುವೆಯಾಗು ಎಂದು ತನ್ನ ಪ್ರೇಮಿಯನ್ನು ಒತ್ತಾಯಿಸಿದ್ದಾಳೆ. ಆದರೆ ಗರ್ಭಪಾತ ಮಾಡಿಸಲು ಪ್ರೇಮಿ, ನರ್ಸ್ ಒಬ್ಬಳನ್ನು ಸಂಪರ್ಕಿಸಿದ್ದಾನೆ. ಆದರೆ ಆಕೆ 10 ಸಾವಿರ ರೂಪಾಯಿ ಕೇಳಿದ್ದಾಳೆ. ಆ ಹಣವನ್ನು ಹೊಂದಿಸಲು ಸಾಧ್ಯವಾಗದೇ ಕೊಲೆ ಮಾಡಿದ್ದಾನೆ.

    ಫೆಬ್ರವರಿ 21 ರಂದು ಆಕೆಯನ್ನು ಅಪರಿಚಿತ ಸ್ಥಳಕ್ಕೆ ಕರೆದೊಯ್ದದಿದ್ದಾನೆ. ಈ ವೇಳೆ ಆಕೆಯ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ನಂತರ ಸ್ನೇಹಿತನ ಜೊತೆ ಸೇರಿ ಸೋನೆ ನದಿಯ ಬಳಿ ಶವವನ್ನು ಸಮಾಧಿ ಮಾಡಿದ್ದಾನೆ. ಈ ಪ್ರಕರಣ ಕುರಿತಾಗಿ ತನಿಖೆ ನಡೆಸುತ್ತಿರುವ  ಪೊಲೀಸರ ಬಲೆಗೆ ಮೃತ ಹುಡುಗಿಯ ಪ್ರೇಮಿ ಮತ್ತು ಆತನ ಸ್ನೇಹಿತ ಸಿಕ್ಕಿ ಬಿದ್ದಿದ್ದಾರೆ.

  • 17 ಮಂದಿ ಕಾಮುಕರಿಂದ ಪತಿ ಮುಂದೆಯೇ ಪತ್ನಿಯ ಸಾಮೂಹಿಕ ಅತ್ಯಾಚಾರ

    17 ಮಂದಿ ಕಾಮುಕರಿಂದ ಪತಿ ಮುಂದೆಯೇ ಪತ್ನಿಯ ಸಾಮೂಹಿಕ ಅತ್ಯಾಚಾರ

    – ಐದು ಮಕ್ಕಳ ತಾಯಿ ಮೇಲೆ ನೀಚ ಕೃತ್ಯ

    ರಾಂಚಿ: ಪತಿಯ ಮುಂದೆಯೇ 17 ಮಂದಿ ಕಾಮುಕರು ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ವಿಲಕ್ಷಣ ಘಟನೆ ಜಾರ್ಖಂಡ್‍ನಲ್ಲಿ ನಡೆದಿದೆ.

    ಸಂತ್ರಸ್ತೆ 5 ಮಕ್ಕಳ ತಾಯಿ. ಈಕೆ ಸಂಜೆ ವೇಳೆ ತನ್ನ ಪತಿ ಜೊತೆ ಮನೆಗೆ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಮಾರ್ಗ ಮಧ್ಯೆ ಆರೋಪಿಗಳು ದಾರಿ ತಪ್ಪಿಸಿದ್ದಾರೆ. ದಂಪತಿ ದಾರಿ ತಪ್ಪಿದ್ದರಿಂದ ಕಂಗಾಲಾಗಿದ್ದರು. ಇದೇ ವೇಳೆ ಆರೋಪಿಗಳು ಸ್ಥಳಕ್ಕೆ ಬಂದು ಪತಿ ಮೇಲೆ ದಾಳಿ ಮಾಡಿದ್ದಾರೆ. ಇತ್ತ ಮಹಿಳೆಯ ಮೇಲೆ 17 ಮಂದಿ ಕಾಮುಕರು ಸೇರಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ.

    ಈ ವಿಚಾರ ತಿಳಿಯುತ್ತಿದ್ದಂತೆಯೇ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಇನ್ನು ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಜಾರ್ಖಂಡ್‍ನ ಡುಮ್ಕಾ ಜಿಲ್ಲೆಯ ಮಹಿಳೆಯನ್ನು ಅವಳ ಪತಿಯ ಮುಂದೆ 17 ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿಗಳ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ. ಮುಫಾಸಿಲ್ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಡುವ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ನಿವೃತ್ತಿಯ ಬಳಿಕ ಕಡಕ್‍ನಾಥ್ ಕಪ್ಪು ಕೋಳಿ ಸಾಕಾಣಿಕೆಗೆ ಮುಂದಾದ ಧೋನಿ

    ನಿವೃತ್ತಿಯ ಬಳಿಕ ಕಡಕ್‍ನಾಥ್ ಕಪ್ಪು ಕೋಳಿ ಸಾಕಾಣಿಕೆಗೆ ಮುಂದಾದ ಧೋನಿ

    – 2 ಸಾವಿರ ಕೋಳಿ ಮರಿಗಳಿಗೆ ಅರ್ಡರ್

    ರಾಂಚಿ: ಮಧ್ಯಪ್ರದೇಶದ ಬುಡಕಟ್ಟು ಜಿಲ್ಲೆಯ ಕಡಕ್‍ನಾಥ್ ಕಪ್ಪು ಕೋಳಿ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅವರ ಮನಗೆದ್ದಿದ್ದು, ನಿವೃತ್ತಿಯ ಬಳಿಕ ಕುಕ್ಕುಟೋದ್ಯಮ ಆರಂಭಿಸಲು ಧೋನಿ ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಧೋನಿ ಅವರ ಆರ್ಗಾನಿಕ್ ಫಾರ್ಮ್‍ನೊಂದಿಗೆ ರಾಂಚಿಯಲ್ಲಿರುವ ಸಾವಯವ ಕೃಷಿಗೆ ಸಂಬಂಧಿಸಿದ ತಂಡ ಮಧ್ಯಪ್ರದೇಶದ ಜಬುವಾ ಜಿಲ್ಲೆಯ ಕೋಳಿ ಕೃಷಿಕರಿಂದ ಸುಮಾರು 2 ಸಾವಿರ ಕಟಕ್‍ನಾಥ್ ಕೋಳಿ ಮರಿಗಳು ನೀಡುವಂತೆ ಅರ್ಡರ್ ನೀಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಭೋಪಾಲ್‍ನಿಂದ ಸುಮಾರು 350 ಕಿಮೀ ದೂರದಲ್ಲಿರುವ ಜಬುವಾ ಜಿಲ್ಲೆಯ ರೈತ ವಿನೋದ್ ಮೇಧಾ ಅವರಿಗೆ ಡಿಸೆಂಬರ್ 15ರ ವೇಳೆಗೆ ಸುಮಾರು 2 ಸಾವಿರ ಕೋಳಿ ಮರಿಗಳನ್ನು ನೀಡುವಂತೆ ಅರ್ಡರ್ ನೀಡಲಾಗಿದೆ. ಧೋನಿ ಅವರ ತಂಡ ರಾಂಚಿಯಲ್ಲಿ ಈ ಅರ್ಡರ್ ಅನ್ನು ಪಡೆಯಲಿದೆ.

    ಮೂರು ತಿಂಗಳ ಹಿಂದೆ ಧೋನಿ ಫಾರ್ಮ್ ಮ್ಯಾನೇಜರ್ ನಮ್ಮೊಂದಿಗೆ ಕೃಷಿ ವಿಕಾಸ್ ಕೇಂದ್ರದ ಮೂಲಕ ಸಂಪರ್ಕಕ್ಕೆ ಬಂದಿದ್ದರು. ಆ ಬಳಿಕ ಅವರು ನಮ್ಮಿಂದ ಅವರು ಹೆಚ್ಚಿನ ಮಾಹಿತಿ ಪಡೆದುಕೊಂಡು ಸುಮಾರು 2 ಮರಿಗಳಿಗೆ ಅರ್ಡರ್ ನೀಡಿದ್ದಾರೆ. ಇದನ್ನು ನಾನು ಡಿಸೆಂಬರ್ 15ರಂದು ರಾಂಚಿಯಲ್ಲಿ ಅವರಿಗೆ ನೀಡಬೇಕಿದೆ. ಇದಕ್ಕೆ ಅವರು ಈಗಾಗಲೇ ಮುಂಗಡ ಹಣವನ್ನು ಪಾವತಿ ಮಾಡಿದ್ದಾರೆ. ದೇಶದ ಖ್ಯಾತ ಕ್ರಿಕೆಟ್ ಆಟಗಾರನಿಗೆ ಕಡಕ್‍ನಾಥ್ ಕೋಳಿಗಳನ್ನು ಪೂರೈಕೆ ಮಾಡುತ್ತಿರುವುದು ಹೆಮ್ಮೆ ಎನಿಸಿದೆ ಎಂದು ವಿನೋದ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

    ಈ ಕುರಿತ ಮಾಹಿತಿಯನ್ನು ಖಚಿತ ಪಡಿಸಿರುವ ಕೃಷಿ ವಿಕಾಸ್ ಕೇಂದ್ರದ ಕಡಕ್‍ನಾಥ್ ಕೋಳಿ ವಿಭಾಗದ ಉಸ್ತುವಾರಿ ವಿಜ್ಞಾನಿ ಡಾ.ಚಂದನ್ ಕುಮಾರ್ ಅವರು, ರಾಂಚಿಯಲ್ಲಿ ಧೋನಿ ಅವರ ಕೃಷಿ ಜಮೀನನ್ನು ನಿರ್ವಹಿಸುತ್ತಿರುವ ಕುನಾಲ್ ಗೌರವ್ ಅವರು ಕಡಕ್‍ನಾಥ್ ಮರಿಗಳನ್ನು ಪಡೆಯಲು ಸಂಪರ್ಕ ಮಾಡಿದ್ದರು. ಮೊದಲು ಅವರು ರಾಂಚಿಯ ಪಶುವೈದ್ಯಕೀಯ ಕಾಲೇಜಿನ ತಜ್ಞರೊಂದಿಗೆ ಮಾತುಕತೆ ನಡೆಸಿ ಮಾಹಿತಿ ಪಡೆದಿದ್ದರು. ನಾನು ಅದೇ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿರುವ ಕಾರಣ ಕಾಲೇಜಿನ ತಜ್ಞರು ನನ್ನೊಂದಿಗೆ ಸಂಪರ್ಕದಲ್ಲಿದ್ದರು ಎಂದು ವಿವರಿಸಿದ್ದಾರೆ.

    2019ರ ಆಗಸ್ಟ್ ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಣೆ ಮಾಡಿದ್ದ ಧೋನಿ, ರಾಂಚಿಯಲ್ಲಿರುವ ತಮ್ಮ ಜಮೀನಿನಲ್ಲಿ ಸಾವಯವ ಕೃಷಿ ಮಾಡಲು ಮುಂದಾಗಿದ್ದಾರೆ. ಜುಲೈ ತಿಂಗಳಿನಲ್ಲಿಯೂ ಧೋನಿ 43 ಎಕರೆ ಪ್ರದೇಶದಲ್ಲಿ ಸಾವಯವ ಕೃಷಿ ಮಾಡುತ್ತಿದ್ದ ಕೆಲ ಫೋಟೋಗಳು ವೈರಲ್ ಆಗಿದ್ದವು. ಧೋನಿ ಅವರ ಸಾವಯವ ಕೃಷಿ ತಂಡ ದೇಶೀಯ ಸಹೀವಾಲ್ ತಳಿಯ ಹಸು ಮತ್ತು ಬಾತುಕೋಳಿ ಹಾಗೂ ಕೋಳಿ ಸಾಕಾಣಿಕೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಅಂದಹಾಗೇ ಕಡಕ್‍ನಾಥ್ ಕೋಳಿ ಮಧ್ಯಪ್ರದೇಶದ ಬುಡಕಟ್ಟು ಮೂಲದಾಗಿದ್ದು, ಈ ಕೋಳಿಯ ಮಾಂಸ ಹಾಗೂ ಮೊಟ್ಟೆಗೆ ದೇಶಾದ್ಯಂತ ಭಾರೀ ಬೇಡಿಕೆ ಇದೆ. ಈ ಕೋಳಿಯ ಮಾಂಸದಲ್ಲಿ ಕೊಬ್ಬಿನ ಪ್ರಮಾಣ ಕಡಿಮೆ ಇದ್ದು, ಮಧುಮೇಹ ಮತ್ತು ಹೃದಯರೋದ ಖಾಯಿಲೆ ಇರುವ ಮಾಂಸ ಪ್ರಿಯರಿಗೆ ಹೇಳಿ ಮಾಡಿಸಿದ ತಳಿಯಾಗಿದೆ. 2018ರಲ್ಲಿ ಜಬುವಾ ಜಿಲ್ಲೆಯ ಈ ತಳಿಗೆ ಜಿಐ ಟ್ಯಾಗ್ (ಭೌಗೋಳಿಕ ವೈಶಿಷ್ಟ್ಯತೆಯ ಗುರುತು) ಕೂಡ ಲಭಿಸಿದೆ.