ರಾಂಚಿ: ಜಾರ್ಖಂಡ್‌ನಲ್ಲಿ (Jharkhand) ಮೊದಲ ಹಂತದ ಚುನಾವಣೆ ಶಾಂತಿಯುತವಾಗಿ ಮುಗಿದಿದೆ. 43 ಮತಕ್ಷೇತ್ರಗಳಲ್ಲಿ ಶೇ. 67ಕ್ಕೂ ಹೆಚ್ಚು ಮತದಾನ ನಡೆದಿದೆ. ವಯನಾಡು ಲೋಕಸಭೆ ಕ್ಷೇತ್ರಕ್ಕೂ ಉಪಚುನಾವಣೆ ನಡೆದಿದೆ.
ಶೇ.65ರಷ್ಟು ಮಂದಿ ಮತ ಚಲಾಯಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಇಲ್ಲಿ ಶೇ.74ರಷ್ಟು ಮತದಾನವಾಗಿತ್ತು. ಮತದಾನದ ವೇಳೆ ಪ್ರವಾಹ, ಭೂಕುಸಿತದಿಂದ ಚದುರಿಹೋಗಿದ್ದವರ ಮರು ಸಂಗಮ ಆಗಿದೆ. ತಮ್ಮವರನ್ನು ಕಳೆದುಕೊಂಡಿದ್ದ ಜನ, ಮತಗಟ್ಟೆಗಳಲ್ಲಿ ಸಂಬಂಧಿಗಳು, ಆಪ್ತರನ್ನು ಕಂಡು ಭಾವುಕರಾದರು. ಹಳೆಯ ದಿನಗಳನ್ನು ಮೆಲುಕು ಹಾಕಿದರು. ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧೆ ಮಾಡಿರುವ ಪ್ರಿಯಾಂಕಾ ವಾದ್ರಾ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಚುನಾವಣೆಗಳ (Election) ಫಲಿತಾಂಶ ನ.23ರಂದು ಹೊರಬೀಳಲಿದೆ. ಇದನ್ನೂ ಓದಿ: ನೋಂದಣಿಗೂ ಮುನ್ನವೇ ಶುಲ್ಕ ಪಾವತಿ; ಸಿಎಂ ವಿರುದ್ಧ ಮತ್ತೊಂದು ದಾಖಲೆ ರಿಲೀಸ್!
ರಾಜಸ್ಥಾನದ ಡಿಯೋನಿ ಉಪಚುನಾವಣೆ ವೇಳೆ ಪಕ್ಷೇತರ ಅಭ್ಯರ್ಥಿ ನರೇಶ್ ಮೀನಾ, ಚುನಾವಣಾಧಿಕಾರಿ ಕಪಾಳಕ್ಕೆ ಭಾರಿಸಿದ್ದಾರೆ. ಈ ಮಧ್ಯೆ, ಮಹಾರಾಷ್ಟ್ರ (Maharashtra) ಚುನಾವಣೆ ವೇಳೆಯೇ ಡಿಸಿಎಂ ಅಜಿತ್ ಪವಾರ್‌ಗೆ ಸುಪ್ರೀಂಕೋರ್ಟ್ ಶಾಕ್ ನೀಡಿದೆ. ಎನ್‌ಸಿಪಿ ಸಂಸ್ಥಾಪಕ ಶರದ್ ಪವಾರ್ ಫೋಟೋವನ್ನು ಪ್ರಚಾರದಲ್ಲಿ ಬಳಸಿಕೊಳ್ಳದಂತೆ ಸೂಚಿಸಿದೆ. ಸ್ವಂತ ಕಾಲಲ್ಲಿ ನಿಲ್ಲೋದನ್ನು ಕಲಿಯಿರಿ ಎಂದು ಅಜಿತ್ ಪವಾರ್‌ಗೆ ಚಾಟಿ ಬೀಸಿದೆ. ಇದನ್ನೂ ಓದಿ: ಬಿಡಿಗಾಸು ಅನುದಾನ ಬಿಡುಗಡೆ ಮಾಡದೆ ಹಗರಣದ ಆರೋಪ ಮಾಡುವುದರಲ್ಲಿ ಅರ್ಥವಿಲ್ಲ: ಸುನಿಲ್ ಕುಮಾರ್ ತಿರುಗೇಟು
ರಾಂಚಿ: ಜಾರ್ಖಂಡ್‌ನ (Jharkhand) ಕೆಲವು ಭಾಗಗಳಲ್ಲಿ ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ 4.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಹಿರಿಯ ಹವಾಮಾನ ತಜ್ಞ ಉಪೇಂದ್ರ ಶ್ರೀವಾಸ್ತವ ತಿಳಿಸಿದ್ದಾರೆ.
ರಾಂಚಿಯಿಂದ (Ranchi) ಸುಮಾರು 35 ಕಿಮೀ ದೂರದಲ್ಲಿರುವ ಖುಂತಿ ಜಿಲ್ಲೆಯಲ್ಲಿ ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಭೂಕಂಪನ ಸಂಭವಿಸಿದ್ದು, ಅದರ ಆಳವು ಐದು ಕಿ.ಮೀಗಳಷ್ಟಿತ್ತು ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ವರದಿ ತಿಳಿಸಿದೆ. ಇದನ್ನೂ ಓದಿ: ಒಂದು ಚುನಾವಣೆಗೆ ಸಲಹೆ ನೀಡಲು 100 ಕೋಟಿ ಪಡೆಯುತ್ತೇನೆ: ಪ್ರಶಾಂತ್ ಕಿಶೋರ್
– ಒಟ್ಟು 660 ಕೋಟಿ ಮೌಲ್ಯದ ವಿವಿಧ ಯೋಜನೆಗಳಿಗೆ ಹಸಿರು ನಿಶಾನೆ
ನವದೆಹಲಿ: ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಭಾನುವಾರ ಒಂದೇ ದಿನ ಸುಮಾರು 660 ಕೋಟಿ ರೂ. ಮೌಲ್ಯದ ವಿವಿಧ ಯೋಜನೆಗಳಿಗೆ ಚಾಲನೆ ನೀಡುತ್ತಿದ್ದಾರೆ. ಈಗಾಗಲೇ ರಾಂಚಿಯಲ್ಲಿ ಜಾರ್ಖಂಡ್, ಒಡಿಶಾ, ಬಿಹಾರ ಮತ್ತು ಉತ್ತರ ಪ್ರದೇಶ ಸಂಪರ್ಕಿಸುವ 6 ವಂದೇ ಭಾರತ್ ರೈಲುಗಳಿಗೆ (Vande Bharat Trains) ವರ್ಚುವಲ್ ಚಾಲನೆ ನೀಡಿದ್ದಾರೆ.
#WATCH | Ganjam: Odisha CM Mohan Charan Majhi attended the virtual flagging-off ceremony by PM Narendra Modi, of the Brahmapur-Tatanagar Vande Bharat Express at Brahmapur railway station.
ಇದರೊಂದಿಗೆ ದೇಶದ ಮೊದಲ ʻವಂದೇ ಮೆಟ್ರೋʼ ರೈಲು (Vande Metro Train) ಸೇವೆಗೆ ಗುಜರಾತ್‌ನಲ್ಲಿ ಹಸಿರು ನಿಶಾನೆ ತೋರಲಿದ್ದಾರೆ. ಪಶ್ಚಿಮ ರೈಲ್ವೆಯ ಅಹಮದಾಬಾದ್ ವಿಭಾಗವು ಈ ವಾರದ ಆರಂಭದಲ್ಲಿ ಯಶಸ್ವಿಯಾಗಿ ಪ್ರಾಯೋಗಿಕ ಚಾಲನೆ ನಡೆಸಿತ್ತು.
ಇದರ ಉಪಯೋಗ ಏನು?
* ವಂದೇ ಮೆಟ್ರೋ ಸೇವೆಯು ಭುಜ್ (ಕಚ್ ಜಿಲ್ಲೆಯಲ್ಲಿದೆ) ನಿಂದ ಅಹಮದಾಬಾದ್‌ನೊಂದಿಗೆ ಸಂಪರ್ಕಿಸುತ್ತದೆ.
* 360 ಕಿಮೀ ದೂರವನ್ನ 5 ಗಂಟೆ 45 ನಿಮಿಷಗಳಲ್ಲಿ ಕ್ರಮಿಸಲಿದೆ.
* ಈ ರೈಲು ಗರಿಷ್ಠ 110 ಕಿಮೀ ವೇಗದಲ್ಲಿ ಚಲಿಸುತ್ತದೆ. ಅಂಜಾರ್, ಗಾಂಧಿಧಾಮ್, ಭಚೌ, ಸಮಖಿಯಾಲಿ, ಹಲ್ವಾಡ್, ಧ್ರಂಗಾಧ್ರಾ, ವಿರಾಮ್ಗಮ್, ಚಂದ್ಲೋಡಿಯಾ, ಸಬರಮತಿ ಮತ್ತು ಕಲುಪುರ್ (ಅಹಮದಾಬಾದ್ ನಿಲ್ದಾಣ) ನಿಲ್ದಾಣಗಳಲ್ಲಿ ಸ್ಟಾಪ್ ಇರಲಿದೆ.
* ಈ ರೈಲು ವಾರದಲ್ಲಿ 6 ದಿನಗಳು ಕಾರ್ಯನಿರ್ವಹಿಸುತ್ತದೆ. ಶನಿವಾರ ಭುಜ್ ನಿಂದ ಭಾನುವಾರ ಅಹಮದಾಬಾದ್‌ನಿಂದ ಸೇವೆ ಸ್ಥಗಿತಗೊಳಿಸಲಾಗುತ್ತದೆ.
ವಂದೇ ಮೆಟ್ರೋ ಸಮಯ ಹೇಗಿದೆ?
* ಭುಜ್‌ನಿಂದ ನಿರ್ಗಮನ: ಬೆಳಗ್ಗೆ 5:05 ಗಂಟೆ, ಅಹಮದಾಬಾದ್‌ಗೆ ಆಗಮನ: ಬೆಳಗ್ಗೆ 10:50 ಗಂಟೆ
* ಅಹಮದಾಬಾದ್‌ನಿಂದ ನಿರ್ಗಮನ: ಸಂಜೆ 5:30, ಭುಜ್‌ಗೆ ಆಗಮನ: ರಾತ್ರಿ 11:20 ಗಂಟೆ
ವಂದೇ ಮೆಟ್ರೋ ವಿಶೇಷತೆಗಳೇನು?
* 1,150 ಆಸನಗಳನ್ನು ಹೊಂದಿರುವುದಲ್ಲದೇ 2,058 ನಿಂತು ಪ್ರಯಾಣಿಸಬಹುದಾಗಿದೆ. ಕುಳಿತುಕೊಳ್ಳಲು ಮೃದು ಸೋಫಾಗಳನ್ನ ಅಳವಡಿಸಲಾಗಿದೆ.
* ಮೆಟ್ರೋ ಸಂಪೂರ್ಣ ಹವಾನಿಯಂತ್ರಿತವಾಗಿದೆ (ಎ.ಸಿ.)
* ಇದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನೇ ಹೋಲುತ್ತದೆಯಾದರೂ, ಉಪನಗರದ ಮೆಟ್ರೋ ವ್ಯವಸ್ಥೆಗಳ ವೈಶಿಷ್ಟ್ಯತೆಯನ್ನು ಒಳಗೊಂಡಿದೆ.
* ಎರಡೂ ತುದಿಗಳಲ್ಲಿ ಎಂಜಿನ್ ಮತ್ತು ಎರಡೂ ಬದಿಗಳಲ್ಲಿ ಸ್ವಯಂಚಾಲಿತ ಸ್ಲೈಡಿಂಗ್ ಬಾಗಿಲುಗಳನ್ನು ಒಳಗೊಂಡಿದೆ
* ಸಂಪೂರ್ಣ ಬುಕ್ಕಿಂಗ್ ಇಲ್ಲ, ಟಿಕೆಟ್ ಖರೀದಿಸಲು ಅವಕಾಶವಿದೆ.
* ವಂದೇ ಮೆಟ್ರೋ ಟಿಕೆಟ್ ದರ ಹೇಗೆ?
* ಕನಿಷ್ಠ ಟಿಕೆಟ್ ದರವು 30 ರೂ. ನಿಂದ ಪ್ರಾರಂಭವಾಗುತ್ತದೆ, GST ಸೇರಿದಂತೆ, ನಿಖರವಾದ ದರಗಳನ್ನು ಇನ್ನೂ ದೃಢೀಕರಿಸಲಾಗಿಲ್ಲ.
* ಭುಜ್‌ನಿಂದ ಅಹಮದಾಬಾದ್‌ಗೆ ಏಕಮುಖ ಪ್ರಯಾಣಕ್ಕೆ ಜಿಎಸ್‌ಟಿ ಹೊರತುಪಡಿಸಿ 430 ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
ಪ್ರಧಾನಿ ಕಾಯ್ರಕ್ರಮದ ವೇಳೆ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಜಾರ್ಖಂಡ್ ರಾಜ್ಯಪಾಲ ಸಂತೋಷ್ ಕುಮಾರ್ ಗಂಗ್ವಾರ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಹೊಸ ವಂದೇ ಭಾರತ್ ರೈಲುಗಳು ಟಾಟಾನಗರ-ಪಾಟ್ನಾ, ಬ್ರಹ್ಮಪುರ-ಟಾಟಾನಗರ, ರೂರ್ಕೆಲಾ-ಹೌರಾ, ದಿಯೋಘರ್-ವಾರಣಾಸಿ, ಭಾಗಲ್ಪುರ್-ಹೌರಾ ಮತ್ತು ಗಯಾ-ಹೌರಾ ಮಾರ್ಗಗಳಲ್ಲಿ ಚಲಿಸುತ್ತವೆ.
ಅಲ್ಲದೇ 20,000 ಪ್ರಧಾನ ಮಂತ್ರಿ ಆವಾಸ್ ಯೋಜನೆ- ಗ್ರಾಮೀಣ (PMAY-G) ಫಲಾನುಭವಿಗಳಿಗೆ ಮಂಜೂರಾತಿ ಪತ್ರಗಳನ್ನು ಮೋದಿ ವಿತರಿಸಲಿದ್ದಾರೆ. ಅವರು 46,000 ಫಲಾನುಭವಿಗಳ ಗೃಹ ಪ್ರವೇಶ ಆಚರಣೆಯಲ್ಲಿ ಭಾಗವಹಿಸಲಿದ್ದಾರೆ.
ನವದೆಹಲಿ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಅನಾರೋಗ್ಯದ ಕಾರಣ ಇಂದು (ಭಾನುವಾರ) ಮಧ್ಯಪ್ರದೇಶ ಮತ್ತು ಜಾರ್ಖಂಡ್‌ನಲ್ಲಿ ಆಯೋಜಿಸಲಾಗಿದ್ದ ಚುನಾವಣಾ ರ‍್ಯಾಲಿಗೆ ಗೈರಾಗಿದ್ದಾರೆ.
श्री राहुल गांधी आज सतना और रांची में चुनाव प्रचार के लिए पूरी तरह से तैयार थे, जहां INDIA की रैली हो रही है। लेकिन वह अचानक बीमार हो गए हैं और फिलहाल नई दिल्ली से बाहर नहीं जा सकते हैं। कांग्रेस अध्यक्ष श्री मल्लिकार्जुन खरगे जी अवश्य सतना में जनसभा को संबोधित करने के बाद रांची…
ರಾಹುಲ್ ಗಾಂಧಿ ಅವರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಅವರು ದೆಹಲಿಯಿಂದ ಹೊರಡಲು ಸಾಧ್ಯವಾಗಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸತ್ನಾದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ ನಂತರ ರಾಂಚಿ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಎಕ್ಸ್ ಖಾತೆಯಲ್ಲಿ ಜೈರಾಮ್ ರಮೇಶ್ ಬರೆದುಕೊಂಡಿದ್ದಾರೆ.
ಸೋನಿಯಾ ಗಾಂಧಿ, ಪಕ್ಷದ ಸಂಸದ ರಾಹುಲ್ ಗಾಂಧಿ, ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಮತ್ತು ಅವರ ಪತ್ನಿ ಕಲ್ಪನಾ ಸೊರೆನ್ ಸೇರಿದಂತೆ ಇಂಡಿಯಾ ಒಕ್ಕೂಟದ ನಾಯಕರ ಪೋಸ್ಟರ್‌ಗಳನ್ನು ರಾಂಚಿಯಲ್ಲಿ ಮೆಗಾ ರ‍್ಯಾಲಿಗೂ ಮುನ್ನ ಹಾಕಲಾಗಿತ್ತು. ಇದನ್ನೂ ಓದಿ: Madhya Pradesh : ಮಹಿಳೆ ಮೇಲೆ 1 ತಿಂಗಳ ಕಾಲ ರೇಪ್ – ಜೆಸಿಬಿಯಿಂದ ಆರೋಪಿಯ ಮನೆ ಧ್ವಂಸ
ಖರ್ಗೆ ಅಲ್ಲದೇ, ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್, ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಮತ್ತು ಹೇಮಂತ್ ಸೊರೆನ್ ಅವರ ಪತ್ನಿ ಕಲ್ಪನಾ ರಾಂಚಿಯಲ್ಲಿ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎನ್ನಲಾಗಿತ್ತು.
ರಾಂಚಿ: ಭಾರತ ಮತ್ತು ಇಂಗ್ಲೆಂಡ್ (Ind vs Eng) ನಡುವೆ ಇದೇ ಫೆಬ್ರವರಿ 23 ರಿಂದ 27ರ ವರೆಗೆ ನಡೆಯಲಿರುವ 4ನೇ ಟೆಸ್ಟ್ ಪಂದ್ಯಕ್ಕೆ ಬ್ಯಾಟಿಂಗ್ ಪಿಲ್ಲರ್ ಕೆ.ಎಲ್ ರಾಹುಲ್ (KL Rahul) ಟೀಂ ಇಂಡಿಯಾಕ್ಕೆ ಕಂಬ್ಯಾಕ್ ಮಾಡಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಫೆಬ್ರವರಿ 23 ರಂದು ರಾಂಚಿಯಲ್ಲಿರುವ JSCA ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಅಂದು ಬೆಳಗ್ಗೆ 9:30 ರಿಂದ ಅರಂಭವಾಗಲಿದೆ. ಗಾಯದ ಸಮಸ್ಯೆಯಿಂದಾಗಿ ಕಳೆದ ಮೂರು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದ ಕೆ.ಎಲ್ ರಾಹುಲ್, ಸಂಪೂರ್ಣ ಗುಣಮುಖರಾಗಿದ್ದಾರೆ. ಈ ಹಿನ್ನೆಲೆಯಲ್ಲಿ 4ನೇ ಪಂದ್ಯದಲ್ಲಿ ಟೀಂ ಇಂಡಿಯಾ (Team India) ಪರ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗಿದೆ.
ಈ ಬಗ್ಗೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಸಹ ಸುಳಿವು ಕೊಟ್ಟಿದ್ದಾರೆ. ಇಂಗ್ಲೆಂಡ್ ವಿರುದ್ಧ 3ನೇ ಟೆಸ್ಟ್ ಪಂದ್ಯದ ಗೆಲುವಿನ ಬಳಿಕ ಪೋಸ್ಟ್ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ರೋಹಿತ್, ರಾಹುಲ್ ಸಂಪೂರ್ಣ ಗುಣಮುಖರಾದಂತೆ ತೋರುತ್ತದೆ ಅಂತ ಹೇಳಿದ್ದಾರೆ. ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ ಆರ್ಭಟ – ಸಿಕ್ಸರ್‌ನಿಂದಲೇ ಪಾಕ್ ದಿಗ್ಗಜನ ದಾಖಲೆ ಸರಿಗಟ್ಟಿದ ಯಶಸ್ವಿ!
ರಾಹುಲ್‌ಗೆ ಏನಾಗಿತ್ತು?
ವಿರಾಟ್ ಕೊಹ್ಲಿ (Virat Kohli) ಅವರ ಅನುಪಸ್ಥಿಯಿಂದಾಗಿ ಟೀಂ ಇಂಡಿಯಾಕ್ಕೆ ಅಗ್ರ ಕ್ರಮಾಂಕದ ಬ್ಯಾಟಿಂಗ್ ಬಲದ ಅಗತ್ಯವಿತ್ತು. ಅದಕ್ಕಾಗಿ ಕೊಹ್ಲಿ ಅವರ ಬದಲಿಗೆ ರಾಹುಲ್ ಅವರನ್ನು ಕಣಕ್ಕಿಳಿಸಲಾಗಿತ್ತು. ಆದ್ರೆ ಹೈದರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ವೇಳೆ ಬಲತೋಡೆಯ ಸ್ನಾಯು ಸೆಳೆತದಿಂದ ರಾಹುಲ್ ಮೂರು ಪಂದ್ಯಗಳಿಂದ ಹೊರಗುಳಿಯುವಂತಾಗಿತ್ತು. ಕೆ.ಎಲ್ ರಾಹುಲ್ ಬದಲಿಗೆ ದೇವದತ್ ಪಡಿಕಲ್ ಅವರಿಗೆ ಅವಕಾಶ ನೀಡಲಾಗಿದ್ದರೂ, ಕ್ರೀಸ್‌ಗಿಳಿಯುವ ಅವಕಾಶ ಸಿಗಲಿಲ್ಲ.
ಮೂರನೇ ಟೆಸ್ಟ್ ಪಂದ್ಯಕ್ಕೆ ಆಯ್ಕೆ ಮಾಡಲು ಕಳೆದ ವಾರ ಕೆ.ಎಲ್ ರಾಹುಲ್ ಹಾಗೂ ಆಲ್‌ರೌಂಡರ್ ರವೀಂದ್ರ ಜಡೇಜಾ (Ravindra Jadeja) ಅವರನ್ನು ಫಿಟ್‌ನೆಸ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಜಡೇಜಾ ಪಾಲ್ಗೊಳ್ಳುವಿಕೆಗೆ ಬಿಸಿಸಿಐ ಗ್ರೀನ್ ಸಿಗ್ನಲ್ ನೀಡಿ, ಫಿಟ್‌ನೆಸ್ ಸಾಬೀತುಪಡಿಸುವಲ್ಲಿ ವಿಫಲರಾದ ಕೆ.ಎಲ್ ರಾಹುಲ್ ಅವರನ್ನು ಪಂದ್ಯದಿಂದ ಹೊರಗಿಡಲಾಗಿತ್ತು. ರಾಹುಲ್ 90% ಫಿಟ್ ಆಗಿದ್ದಾರೆ, ಇನ್ನೂ ಒಂದು ವಾರಗಳ ಕಾಲ ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಇರಲಿದ್ದಾರೆ ಎಂದು ಬಿಸಿಸಿಐ ತಿಳಿಸಿತ್ತು. ಸದ್ಯ ರಾಹುಲ್ ಸಂಪೂರ್ಣ ಫಿಟ್ ಆಗಿದ್ದು, ರಾಂಚಿಯಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಆಂಗ್ಲರನ್ನು ಹುರಿದು ಮುಕ್ಕಿದ ಭಾರತ; ಟಾಪ್-10 ಪಟ್ಟಿಯಲ್ಲಿ ಟೀಂ ಇಂಡಿಯಾಕ್ಕೆ ಎಷ್ಟನೇ ಸ್ಥಾನ?
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಎರಡರಲ್ಲಿ ಮತ್ತು ಇಂಗ್ಲೆಂಡ್ ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಭಾರತದ ಸರಣಿ ಗೆಲುವಿಗೆ ಇನ್ನೊಂದು ಗೆಲುವು ಬೇಕಿದೆ. ಆದ್ರೆ ಇಂಗ್ಲೆಂಡ್ ಗೆಲುವಿಗೆ ಉಳಿದ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಲೇಬೇಕಿದೆ. 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವು ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರೀಡಾಂಗಣದಲ್ಲಿ ಮಾರ್ಚ್ 7 ರಿಂದ ಮಾರ್ಚ್ 11ರ ವರೆಗೆ ನಡೆಯಲಿದೆ. ಇದನ್ನೂ ಓದಿ: ಟೀಂ ಇಂಡಿಯಾಗೆ 434 ರನ್‌ಗಳ ದಾಖಲೆ ಜಯ – ಭಾರತದ ಟಾಪ್-5 ಟೆಸ್ಟ್ ಲಿಸ್ಟ್!
ಬೆಂಗಳೂರು: ಕಲ್ಲಿದ್ದಲು ಗಣಿ ಹರಾಜಿಗಾಗಿ (Coal Mine Auction) ಹೂಡಿಕೆದಾರರನ್ನು ಸೆಳೆಯಲು ಕೇಂದ್ರ ಸರ್ಕಾರ ಜನವರಿ 16ರಂದು ರಾಂಚಿಯಲ್ಲಿ (Ranchi) ರೋಡ್ ಶೋ (Road Show) ನಡೆಸಲಿದೆ.
ಕಲ್ಲಿದ್ದಲು ಗಣಿಗಳ ವಾಣಿಜ್ಯ ಹರಾಜಿನಲ್ಲಿ 8 ಸುತ್ತುಗಳ ವಾಣಿಜ್ಯ ಹರಾಜುಗಳ ಅಡಿಯಲ್ಲಿ 39 ಕಲ್ಲಿದ್ದಲು ಗಣಿಗಳನ್ನು ಮತ್ತು 9ನೆಯ ಅಡಿಯಲ್ಲಿ 31 ಕಲ್ಲಿದ್ದಲು ಗಣಿಗಳನ್ನು ಮಾರಾಟ ಮಾಡಲು ಸರ್ಕಾರ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಈ 70 ಕಲ್ಲಿದ್ದಲು ಗಣಿಗಳು ಕಲ್ಲಿದ್ದಲು ಹೊಂದಿರುವ ರಾಜ್ಯಗಳಾದ ಬಿಹಾರ, ಛತ್ತೀಸ್‌ಗಢ, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ತೆಲಂಗಾಣ ಮತ್ತು ಪಶ್ಚಿಮ ಬಂಗಾಳದಿಂದ ಬಂದಿವೆ. ಇದನ್ನೂ ಓದಿ: ಟ್ರಾಫಿಕ್ ರೂಲ್ಸ್ ಪಾಲಿಸದವರಿಗೆ ಚಿತ್ರಗುಪ್ತನ ಲೆಕ್ಕ, ಯಮನ ಪಾಠ!
ಈ ಗಣಿಗಳಲ್ಲಿ 27 ಸಂಪೂರ್ಣವಾಗಿ ಪರಿಶೋಧಿತವಾಗಿವೆ ಮತ್ತು 43 ಭಾಗಶಃ ಪರಿಶೋಧಿಸಲ್ಪಟ್ಟಿವೆ. ಏಳು ಕೋಕಿಂಗ್ ಕಲ್ಲಿದ್ದಲು ಗಣಿಗಳಾಗಿವೆ. ಆದರೆ ಉಳಿದವುಗಳು ಅಲ್ಲ ಎಂದು ಕೇಂದ್ರ ಗಣಿ ಸಚಿವಾಲಯ ಹೇಳಿದೆ. ಇದನ್ನೂ ಓದಿ: ಸೋಮವಾರ ವಿಶೇಷ ವಿಸ್ಮಯಕ್ಕೆ ಸಾಕ್ಷಿಯಾಗಲಿದೆ ಗವಿಗಂಗಾಧರೇಶ್ವರ ದೇಗುಲ
ಸಮಗ್ರ ಚರ್ಚೆಯ ನಂತರ ಗಣಿಗಳನ್ನು ಮತ್ತು ಗಣಿ ಹರಾಜು ಪ್ರಕ್ರಿಯೆ ಅಂತಿಮಗೊಳಿಸಲಾಗಿದೆ ಮತ್ತು ಸಂರಕ್ಷಿತ ಪ್ರದೇಶಗಳು, ವನ್ಯಜೀವಿ ಅಭಯಾರಣ್ಯಗಳು, ನಿರ್ಣಾಯಕ ಆವಾಸ ಸ್ಥಾನಗಳು, ಶೇ.40ಕ್ಕಿಂತ ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿರುವ ಮತ್ತು ಹೆಚ್ಚು ನಿರ್ಮಿಸಲಾದ ಪ್ರದೇಶವನ್ನು ಹೊರಗಿಡಲಾಗಿದೆ ಎಂದು ಕೇಂದ್ರ ಗಣಿ ಸಚಿವಲಯ ತಿಳಿಸಿದೆ. ಇದನ್ನೂ ಓದಿ: ರಾಮಮಂದಿರಕ್ಕೆ ಹೋಗಿ ಪಾಪ ತೊಳೆದುಕೊಂಡು ಬನ್ನಿ – ಸಿದ್ದರಾಮಯ್ಯಗೆ ಈಶ್ವರಪ್ಪ ಟಾಂಗ್
ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ಮುಂಬೈನಿಂದ ರಾಂಚಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ದೇವಾನಂದ್ ತಿವಾರಿ ರಕ್ತ ವಾಂತಿ ಮಾಡಿಕೊಂಡರು. ವಿಮಾನ ತುರ್ತು ಭೂಸ್ಪರ್ಶದ ನಂತರ ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ನಾಗ್ಪುರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
62 ವಯಸ್ಸಿನ ಈ ವ್ಯಕ್ತಿ ಕ್ಷಯರೋಗದಿಂದ ಬಳಲುತ್ತಿದ್ದರು. ಅಗತ್ಯ ವೈದ್ಯಕೀಯ ವಿಧಾನಗಳು ಮತ್ತು ಕ್ಲಿಯರೆನ್ಸ್ ನಂತರ ವಿಮಾನವು ನಾಗ್ಪುರ ಮತ್ತು ರಾಂಚಿಗೆ ತನ್ನ ಪ್ರಯಾಣವನ್ನು ಯಶಸ್ವಿಯಾಗಿ ಪುನರಾರಂಭಿಸಿತು. ಇದನ್ನೂ ಓದಿ: ಬುಧವಾರ ಆಗದಿದ್ರೆ ಆ.27ಕ್ಕೆ ಚಂದ್ರಯಾನ-3 ಲ್ಯಾಂಡಿಂಗ್
ತಮಿಳುನಾಡು ಮೂಲದ ಜಾರ್ಖಂಡ್ (Jharkhand) ರಾಜ್ಯಪಾಲ ಸಿ.ಪಿ ರಾಧಾಕೃಷ್ಣನ್ ಅವರನ್ನು ರಜನಿಕಾಂತ್ ಭೇಟಿ ಮಾಡಿದ್ದಾರೆ. ಹಿಮಾಲಯ ಪ್ರವಾಸದಲ್ಲಿದ್ದ ರಜನಿಕಾಂತ್, ಆ ಪ್ರವಾಸವನ್ನು ಮುಗಿಸಿಕೊಂಡು ರಾಂಚಿಯಲ್ಲಿ ರಾಧಾಕೃಷ್ಣನ್ (Radhakrishnan) ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿಯ ಫೋಟೋಗಳನ್ನು ರಾಜ್ಯಪಾಲರು (Governor) ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ರಾಧಾಕೃಷ್ಣನ್ ಮತ್ತು ರಜನಿಕಾಂತ್ ಸ್ನೇಹಿತರು. ಹಾಗಾಗಿ ಇದೊಂದು ಸೌಜನ್ಯದ ಭೇಟಿ ಎಂದು ಸ್ವತಃ ರಾಜ್ಯಪಾಲರೇ ಹೇಳಿಕೊಂಡಿದ್ದಾರೆ. ಭಾರತದ ಶ್ರೇಷ್ಠ ನಟ, ಆತ್ಮೀಯ ಸ್ನೇಹಿತ ಮತ್ತು ಮಹಾನ್ ಮಾನವತಾವಾದಿ ರಜನಿಕಾಂತ್ ಅವರು ರಾಂಚಿಗೆ (Ranchi) ಭೇಟಿ ನೀಡಿದ್ದರು. ರಾಜಭವನಕ್ಕೆ ಅವರನ್ನು ಸ್ವಾಗತಿಸಿ ಭೇಟಿ ಮಾಡಿದೆ ಎಂದು ಬರೆದುಕೊಂಡಿದ್ದಾರೆ.
ರಜನಿಕಾಂತ್(Rajanikanth)- ಶಿವಣ್ಣ (Shivarajkumar) ಕಾಂಬೋ ಸಿನಿಮಾ ‘ಜೈಲರ್’ (Jailer) ರಿಲೀಸ್ ಆಗಿ ಬಿಡುಗಡೆಯ ದಿನದಿಂದಲೂ ಭರ್ಜರಿ ರೆಸ್ಪಾನ್ಸ್ ಪಡೆಯುತ್ತಿದೆ. ಆಗಸ್ಟ್ 10 ರಿಲೀಸ್ ಆಗಿ ಮೊದಲ ದಿನದಿಂದ ಈವರೆಗೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ‘ಬೀಸ್ಟ್’ ಸಿನಿಮಾದಿಂದ ಕೈ ಸುಟ್ಟುಕೊಂಡಿದ್ದ ನೆಲ್ಸನ್ ದಿಲೀಪ್ ಕುಮಾರ್ ಅವರು ಈ ಚಿತ್ರದಿಂದ ಯಶಸ್ಸು ಸಿಕ್ಕಿದೆ.
ಕೆಲ ವರ್ಷಗಳ ನಂತರ ತಲೈವಾ ‘ಜೈಲರ್’ (Jailer) ಮೂಲಕ ದರ್ಶನ ನೀಡಿದ್ದಾರೆ. ಚಿತ್ರದಲ್ಲಿ ಸಿಂಪಲ್ ಕಾಮನ್ ಮ್ಯಾನ್ ಮುತ್ತುವೇಲ್ ಆಗಿ ಕಾಣಿಸಿಕೊಳ್ಳುವ ತಲೈವಾ, ದ್ವಿತೀಯಾರ್ಧದಲ್ಲಿ ಟೈಗರ್ ಮುತ್ತುವೇಲ್ ಪಾಂಡಿಯನ್ ಆಗಿ ಮಾಸ್ ಅವತಾರದಲ್ಲಿ ಅಬ್ಬರಿಸಿದ್ದಾರೆ.
ದೇವರ ಮನೆಯಲ್ಲಿ ಪೂಜೆ ಮಾಡುತ್ತಾ ಎಂಟ್ರಿ ನೀಡುವ ಮುತ್ತುವೇಲ್ ಬಹಳ ಸಿಂಪಲ್ ವ್ಯಕ್ತಿ. ಮಡದಿ, ಮಗ, ಸೊಸೆ- ಮೊಮ್ಮಗನ ಜತೆ ಸರಳ ಸುಖ ಸಂಸಾರ ನಡೆಸುವ ಕಾಮನ್ ಮ್ಯಾನ್. ಮುತ್ತುವೇಲ್ ಮಗ ಅರ್ಜುನ್ ಪೊಲೀಸ್ ಅಧಿಕಾರಿಯಾಗಿದ್ದು, ಪ್ರಕರಣವೊಂದನ್ನು ಭೇದಿಸಲು ಹೋಗಿ ಕಣ್ಮರೆಯಾಗ್ತಾನೆ. ಹೀಗೆ ಕಣ್ಮರೆಯಾಗುವ ಮಗನನ್ನು ಹುಡುಕಲು ನಾಯಕ ಮುತ್ತುವೇಲ್ ಮುಂದಾಗಲಿದ್ದು, ಯಾವ ರೀತಿ ಸೇಡು ತೀರಿಸಿಕೊಳ್ಳಲಿದ್ದಾನೆ ಎಂಬುವುದೇ ಚಿತ್ರದ ಕಥೆಯಾಗಿದೆ.
ರಾಂಚಿ: ಜಾರ್ಖಂಡ್‍ನ (Jharkhand) ಸುವರ್ಣರೇಖಾ ರೈಲ್ವೆ ಸೇತುವೆಯ ಕಬ್ಬಿಣದ ಪಿಲ್ಲರ್‌ನಿಂದ ಬೋಲ್ಟ್‌ಗಳು ಹಾಗೂ ನಟ್‍ಗಳನ್ನು ಕಿಡಿಗೇಡಿಗಳು ಕಳಚಿರುವುದು ಪತ್ತೆಯಾಗಿದೆ. ಹತಿಯಾ-ರೂರ್ಕೆಲಾ ರೈಲು ಮಾರ್ಗದ (Railway) ಸೇತುವೆಯ ಬೋಲ್ಟ್‌ಗಳನ್ನು ತೆಗೆದಿರುವುದನ್ನು ಸಿಬ್ಬಂದಿ ಪತ್ತೆ ಮಾಡಿದ್ದಾರೆ.
ಕೂಡಲೇ ಇದನ್ನು ಸರಿಪಡಿಸಿದ್ದು, ಇದರಿಂದ ದೊಡ್ಡ ರೈಲು ಅಪಘಾತ ತಪ್ಪಿದಂತಾಗಿದೆ. ಈ ಮಾರ್ಗದ ಬೇರೆ ಎಲ್ಲಾದರೂ ಇದೇ ರೀತಿಯ ಕೃತ್ಯ ಎಸಗಿರುವ ಬಗ್ಗೆ ಶೋಧ ಕಾರ್ಯ ನಡೆಸಲಾಗುತ್ತಿದೆ. ಈ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತ: ಸಿಬಿಐನಿಂದ ಮೂವರು ಅರೆಸ್ಟ್
ಎಫ್‍ಐಆರ್‌ನಲ್ಲಿ ಕೆಲ ಕಿಡಿಗೇಡಿಗಳು ಸೇತುವೆಯ ಮೇಲಿನ ಕಬ್ಬಿಣದ ಪಿಲ್ಲರ್‌ನಿಂದ ಮೂರು ನಟ್‍ಗಳನ್ನು ತೆಗೆದಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಈ ರೈಲು ಸೇತುವೆಯು ಧುರ್ವಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿದೆ. ಇತ್ತೀಚೆಗೆ ಒಡಿಶಾದಲ್ಲಿ ನಡೆದ ಭೀಕರ ದುರಂತ ಮರೆಯುವ ಮುನ್ನವೇ, ಇಂತಹ ಪ್ರಕರಣ ನಡೆದಿರುವುದು ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ಅಚ್ಚರಿಯಾದ್ರೂ ಸತ್ಯ- ಅದಾನಿಗೆ ಸೇರಿದ 6 ಸಾವಿರ ಕೆ.ಜಿಯ ಸೇತುವೆ ಕಳ್ಳತನ!
ಬಾಲಿವುಡ್ ನಟಿ ಅಮೀಶಾ ಪಟೇಲ್ (Ameesha Patel) ಶನಿವಾರ ರಾಂಚಿ ಸಿವಿಲ್ ಕೋರ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಚೆಕ್ ಬೌನ್ಸ್ (Cheque bounce case) ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅವರು ರಾಂಚಿ (Ranchi) ಸಿವಿಲ್ ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ.
ನಿರ್ಮಾಪಕ ಅಜಯ್ ಕುಮಾರ್ ಸಿಂಗ್ (Ajay Kumar Singh) ಅವರು ಈ ಹಿಂದೆ ದೇಸಿ ಮ್ಯಾಜಿಕ್ ಹೆಸರಿನಲ್ಲಿ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದರು. ಈ ಸಂದರ್ಭದಲ್ಲಿ ಸಿನಿಮಾದಲ್ಲಿ ನಟಿಸಲು ಅಮೀಶಾ ಪಟೇಲ್ ಅವರಿಗೆ 2.5 ಕೋಟಿ ರೂಪಾಯಿಯನ್ನು ನೀಡಿದ್ದರು. ಆದರೆ, ಅಮೀಶಾ ಆ ಸಿನಿಮಾದಲ್ಲಿ ನಟಿಸಲಿಲ್ಲ. ಹಾಗಾಗಿ ಹಣವನ್ನು ವಾಪಸ್ಸು ನೀಡುವಂತೆ ತಿಳಿಸಿದ್ದರು. ಚೆಕ್ ಕೊಟ್ಟು ಬೌನ್ಸ್ ಮಾಡಿದ್ದರು ಅಮೀಶಾ. ಇದನ್ನೂ ಓದಿ:ಸುದೀಪ್ ಬಗ್ಗೆ ಬೇಸರ ಹೊರಹಾಕಿದ ಸಚಿವ ಕೆ.ಎನ್.ರಾಜಣ್ಣ
ಹಣ ಕೊಡದೇ ಸತಾಯಿಸುತ್ತಿದ್ದ ಅಮೀಶಾಗೆ ಬುದ್ದಿ ಕಲಿಸಲೆಂದು ಅಜಯ್ ಕುಮಾರ್ 2018ರಲ್ಲಿ ವಂಚನೆ ಪ್ರಕರಣವನ್ನು ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟಿಗೆ (Court) ಹಾಜರಾಗುವಂತೆ ನಟಿಗೆ ಕೋರ್ಟ್ ಸಮನ್ಸ್ ಜಾರಿ ಮಾಡಿತ್ತು. ಆದರೂ ಅಮೀಶಾ ಪಟೇಲ್ ಕೋರ್ಟಿಗೆ ಹಾಜರಾಗಿರಲಿಲ್ಲ ಎಂದು ಹೇಳಲಾಗುತ್ತಿದೆ.
ಈ ಬಾರಿ ಕೋರ್ಟ್ ಅವರಿಗೆ ವಾರೆಂಟ್ ಜಾರಿ ಮಾಡಿತ್ತು. ವಾರೆಂಟ್ ಜಾರಿಯಾದ ಹಿನ್ನೆಲೆಯಲ್ಲಿ ಅಮೀಶಾ ಪಟೇಲ್ ಶನಿವಾರ ಕೋರ್ಟಿಗೆ ಹಾಜರಾಗಿದ್ದರು.