Tag: Ranbir Kapoor

  • ಭಾರೀ ನಿರೀಕ್ಷೆ ಹುಟ್ಟಿಸಿದ್ದ ‘ಧೂಮ್-4’ಗೆ ನಾಯಕ ಫಿಕ್ಸ್..!

    ಭಾರೀ ನಿರೀಕ್ಷೆ ಹುಟ್ಟಿಸಿದ್ದ ‘ಧೂಮ್-4’ಗೆ ನಾಯಕ ಫಿಕ್ಸ್..!

    ಬಾಲಿವುಡ್ ಅಷ್ಟೇ ಅಲ್ಲ ದೇಶ ವಿದೇಶದಲ್ಲೂ ತೆರೆಕಂಡು ಗಲ್ಲಾಪೆಟ್ಟಿಗೆಯಲ್ಲಿ ಸೌಂಡ್ ಮಾಡಿದ ‘ಧೂಮ್ ಸಿರೀಸ್ ಪಾರ್ಟ್-4’ (Dhoom 4) ಯಾವಾಗ ಅನೌನ್ಸ್ ಆಗುತ್ತೆ, ಸಿನಿಮಾದ ಹೀರೋ ಯಾರಾಗ್ತಾರೆ ಅಂತಾ ಕಾಯ್ತಿದ್ದ ಫ್ಯಾನ್ಸ್ ಸಂಭ್ರಮಪಡುವ ಸುದ್ದಿಯೊಂದು ಸಿಕ್ಕಿದೆ. ಇನ್ನೊಂದು ವಿಶೇಷ ಅಂದರೆ, ನಟ ರಣಬೀರ್ ಕಪೂರ್ (Ranbir Kapoor) ಹುಟ್ಟುಹಬ್ಬದ ದಿನವೇ (ಸೆ.28) ಈ ಗುಡ್‌ ನ್ಯೂಸ್ ಸಿಕ್ಕಿರೋದು ಅಭಿಮಾನಿಗಳಿಗೆ ಡಬಲ್ ಧಮಾಕ.

    ವೆರಿ ಸಕ್ಸಸ್‌ಫುಲ್ ಧೂಮ್ ಸಿರೀಸ್‌ನ ಮುಂದುವರೆದ ಭಾಗ-4 ಸಿನಿಮಾದ ಬಗ್ಗೆ ಇದ್ದ ಕನ್ಫೂಷನ್ಸ್ ಈಗ ಕ್ಲಿಯರ್ ಆಗಿವೆ. ಸಿನಿಮಾದ ನಾಯಕ ರಣಬೀರ್ ಕಪೂರ್ ಅಂತ ಚಿತ್ರತಂಡ ಘೋಷಣೆ ಮಾಡಿದೆ. ಅದ್ರಲ್ಲೂ ಈ ಸಿನಿಮಾ ರಣಬೀರ್ ಕೆರಿಯರ್‌ನ 25ನೇ ಚಿತ್ರ ಅನ್ನೋದು ಮತ್ತೊಂದು ವಿಶೇಷ. ರಣಬೀರ್ ಕಪೂರ್ ಹುಟ್ಟುಹಬ್ಬದ ಗಿಫ್ಟ್ ಆಗಿ ಅಭಿಮಾನಿಗಳ ಸಂಭ್ರಮ ದುಪ್ಪಟ್ಟು ಮಾಡಿದೆ.

    ಭಾರತೀಯ ಚಿತ್ರರಂಗದಲ್ಲಿ ‘ಧೂಮ್-4’ ಮೇಲೆ ಕಂಡಾಪಟ್ಟಿ ನಿರೀಕ್ಷೆಗಳನ್ನ ಇಟ್ಟುಕೊಂಡವರಿಗೆ ಬೆಂಕಿ ನ್ಯೂಸ್‌ವೊಂದು ಸಿಕ್ಕಿದೆ. ಅನಿಮಲ್ ಸಕ್ಸಸ್‌ನ ನಂತರ ರಣಬೀರ್ ಮೈಥಾಲಾಜಿಕಲ್ ರಾಮಾಯಣ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ರಾಮಾಯಣ ಬಳಿಕ ಬಿಗ್ ಬಜೆಟ್‌ನ ಧೂಮ್-4 ಚಿತ್ರದಲ್ಲಿ ರಣಬೀರ್ ಭಾಗಿಯಾಗಲಿದ್ದಾರೆ. ಈಗಾಗಲೇ ಮೂರು ಭಾಗಗಳಲ್ಲಿ ಕಮಾಲ್ ಮಾಡಿರುವ ಧೂಮ್ ಮೇಲೆ ನಿರೀಕ್ಷೆ ಇಟ್ಟುಕೊಂಡಿದೆ ಭಕ್ತಗಣ.

    ಧೂಮ್, ಧೂಮ್-2 ಹಾಗೂ ಧೂಮ್-3 ವಿಭಿನ್ನ ರೀತಿಯ ಮೇಕಿಂಗ್, ಸಾಂಗ್ಸ್ ಮೂಲಕ ಅಟ್ರ್ಯಾಕ್ಟ್ ಮಾಡಿದೆ. ಇದೀಗ ಧೂಮ್-4 ವಿಭಿನ್ನ ರೀತಿಯ ಎಂಟರ್‌ಟೈನ್ಮೆಂಟ್ ನೀಡೋಕೆ ಭಾರೀ ತಯಾರಿ ಮಾಡಿಕೊಳ್ಳುತ್ತಿದೆ. ಸದ್ಯ ರಣಬೀರ್ ನಾಯಕ ಅನ್ನೋ ಮಾಹಿತಿ ಹಂಚಿಕೊಂಡಿದೆ ಚಿತ್ರತಂಡ. ಇನ್ನು ಮುಂದಿನ ದಿನಗಳಲ್ಲಿ ಚಿತ್ರದ ಕಂಪ್ಲೀಟ್ ಮಾಹಿತಿ ಹಂಚಿಕೊಳ್ಳಲಿದೆ ಚಿತ್ರತಂಡ.

  • ಡಿಸೆಂಬರ್‌ನಲ್ಲಿ ‘ರಾವಣ’ನಾಗಿ ಘರ್ಜಿಸಲಿದ್ದಾರೆ ಯಶ್

    ಡಿಸೆಂಬರ್‌ನಲ್ಲಿ ‘ರಾವಣ’ನಾಗಿ ಘರ್ಜಿಸಲಿದ್ದಾರೆ ಯಶ್

    ನ್ಯಾಷನಲ್ ಸ್ಟಾರ್ ಯಶ್ ಪ್ರಸ್ತುತ ‘ಟಾಕ್ಸಿಕ್’ (Toxic) ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಅವರು ಒಪ್ಪಿಕೊಂಡಿರುವ ‘ರಾಮಾಯಣ’ ಸಿನಿಮಾದ ಬಗ್ಗೆ ಬಿಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಡಿಸೆಂಬರ್‌ನಲ್ಲಿ ಯಶ್ (Yash) ‘ರಾಮಾಯಣ’ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ. ಇದನ್ನೂ ಓದಿ:ಕನ್ನಡತಿ ಸೀರಿಯಲ್‌ ನಟ ಕಿರಣ್‌ ರಾಜ್‌ ಪ್ರಯಾಣಿಸುತ್ತಿದ್ದ ಕಾರು ಅಪಘಾತ

    ಆ.8ಕ್ಕೆ ಟಾಕ್ಸಿಕ್ ಸಿನಿಮಾಗೆ ಚಿತ್ರಕ್ಕೆ ನೀಡಲಾಗಿತ್ತು. ಅಂದಿನಿಂದ ಈ ಪ್ರಾಜೆಕ್ಟ್‌ನಲ್ಲಿ ಯಶ್ ಬ್ಯುಸಿಯಾಗಿದ್ದಾರೆ. ಇನ್ನೂ ಹಲವು ಹಂತದಲ್ಲಿ ಶೂಟಿಂಗ್ ನಡೆಯಲಿದೆ. ಆದರೆ ರಣ್‌ಬೀರ್ ಕಪೂರ್ (Ranbir Kapoor) ‘ರಾಮಾಯಣ’ (Ramayana) ಚಿತ್ರದಲ್ಲಿ ಯಶ್ ‘ರಾವಣ’ನಾಗಿ ಬರೋಕೆ ಮುಹೂರ್ತ ಫಿಕ್ಸ್ ಆಗಿದೆ. ‘ಟಾಕ್ಸಿಕ್’ ಸಿನಿಮಾ ಜೊತೆಗೆಯೇ ಈ ಚಿತ್ರಕ್ಕೂ ಅವರು ಸಾಥ್ ನೀಡಲಿದ್ದಾರೆ.

    ರಣ್‌ಬೀರ್ ರಾಮನ ಪಾತ್ರ, ಸಾಯಿ ಪಲ್ಲವಿ (Sai Pallavi) ಸೀತೆ ಪಾತ್ರಕ್ಕೆ ಜೀವತುಂಬುತ್ತಿದ್ದಾರೆ. ಇವರ ಭಾಗದ ಶೂಟಿಂಗ್ ಮುಂಬೈನಲ್ಲಿ ನಡೆಯುತ್ತಿದೆ. ಡಿಸೆಂಬರ್‌ನಲ್ಲಿ ಚಿತ್ರದ ಸೆಟ್‌ಗೆ ಯಶ್ ಎಂಟ್ರಿ ಕೊಡಲಿದ್ದಾರೆ. ರಾವಣನಾಗಿ ಘರ್ಜಿಸೋಕೆ ಸಕಲ ತಯಾರಿ ಮಾಡಿಕೊಂಡಿದ್ದಾರೆ. ಇನ್ನೂ ಸನ್ನಿ ಡಿಯೋಲ್ ಅವರು ಹನುಮಂತನ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ.

    ಇನ್ನೂ ‘ರಾಮಾಯಣ’ ಸಿನಿಮಾದಲ್ಲಿ ನಟಿಸುವುದರ ಜೊತೆಗೆ ಸಹ ನಿರ್ಮಾಪಕನಾಗಿಯೂ ಕನ್ನಡದ ನಟ ಯಶ್ ಕೈಜೋಡಿಸಿದ್ದಾರೆ. ಹಾಗಾಗಿ ಈ ಸಿನಿಮಾದ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.

  • ಒಂದೇ ಚಿತ್ರದಲ್ಲಿ ರಣ್‌ಬೀರ್, ಆಲಿಯಾ ಭಟ್, ವಿಕ್ಕಿ ಕೌಶಲ್- ಬನ್ಸಾಲಿ ಆ್ಯಕ್ಷನ್ ಕಟ್

    ಒಂದೇ ಚಿತ್ರದಲ್ಲಿ ರಣ್‌ಬೀರ್, ಆಲಿಯಾ ಭಟ್, ವಿಕ್ಕಿ ಕೌಶಲ್- ಬನ್ಸಾಲಿ ಆ್ಯಕ್ಷನ್ ಕಟ್

    ಬಾಲಿವುಡ್ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ (Sanjay Leela Bansali)’ಹೀರಾಮಂಡಿ’ ಸಿನಿಮಾದ ನಂತರ ‘ಲವ್ & ವಾರ್’ (Love & War) ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಡೆಡ್ಲಿ ಪ್ರೇಮ ಕಥೆ ಹೇಳೋದಕ್ಕೆ ನಿರ್ದೇಶಕ ಸಜ್ಜಾಗಿದ್ದಾರೆ. ಇದನ್ನೂ ಓದಿ:‘ಬ್ರಹ್ಮರಾಕ್ಷಸ’ನಿಗಾಗಿ ಐಟಂ ಸಾಂಗ್: ಸಂಜೆ ಹೊತ್ನಾಗ ಮೈಪುಳಕ

    ರಣ್‌ಬೀರ್ ಕಪೂರ್, ಆಲಿಯಾ ಭಟ್ (Alia Bhatt) ಜೊತೆ ವಿಕ್ಕಿ ಕೌಶಲ್ ಒಂದೇ ಸಿನಿಮಾದಲ್ಲಿ ಜೊತೆಯಾಗುತ್ತಿದ್ದಾರೆ. ವಿಕ್ಕಿಗೆ ಜೋಡಿಯಾಗಿ ನಟಿಸುತ್ತಿರುವ ಆಲಿಯಾಗೆ ರಣ್‌ಬೀರ್ (Ranbir Kapoor) ವಿಲನ್ ಆಗಿ ನಟಿಸಲಿದ್ದಾರೆ ಎನ್ನಲಾಗಿದೆ. ಇದೇ ಅಕ್ಟೋಬರ್ ಮೊದಲ ವಾರದಿಂದ ಶೂಟಿಂಗ್ ಶುರುವಾಗಲಿದೆ.

    ಈ ಹಿಂದೆ ಎಂದೂ ತೋರಿಸಿರದ ವಿಭಿನ್ನ ತ್ರಿಕೋನ ಪ್ರೇಮಕಥೆಯನ್ನು ಹೇಳೋಕೆ ಸಂಜಯ್ ಲೀಲಾ ಬನ್ಸಾಲಿ ಸಜ್ಜಾಗಿದ್ದಾರೆ. ಆಲಿಯಾ ಭಟ್, ರಣ್‌ಬೀರ್ ಕಪೂರ್, ವಿಕ್ಕಿ ಕೌಶಲ್ ಸುತ್ತ ಈ ಕಥೆ ಇರಲಿದೆ. ಮುಂದಿನ ವರ್ಷ ಈ ಸಿನಿಮಾ ರಿಲೀಸ್ ಆಗಲಿದೆ.

  • ಕತ್ರಿನಾ, ದೀಪಿಕಾ ಪಡುಕೋಣೆ ಜೊತೆಗಿನ ಬ್ರೇಕಪ್ ಬಗ್ಗೆ ಮೌನ ಮುರಿದ ರಣ್‌ಬೀರ್ ಕಪೂರ್

    ಕತ್ರಿನಾ, ದೀಪಿಕಾ ಪಡುಕೋಣೆ ಜೊತೆಗಿನ ಬ್ರೇಕಪ್ ಬಗ್ಗೆ ಮೌನ ಮುರಿದ ರಣ್‌ಬೀರ್ ಕಪೂರ್

    ‘ಅನಿಮಲ್’ (Animal) ಸಿನಿಮಾದ ಸಕ್ಸಸ್ ನಂತರ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ರಣ್‌ಬೀರ್ ನೀಡಿರುವ ಸಂದರ್ಶನವೊಂದರಲ್ಲಿ ಸ್ಟಾರ್ ನಟಿಯರ ಜೊತೆಗಿನ ಬ್ರೇಕಪ್ ಬಗ್ಗೆ ಮಾತನಾಡಿದ್ದಾರೆ. ನನಗೆ ಸ್ತ್ರೀಲೋಲ, ಚೀಟರ್ ಎಂಬ ಹಣೆಪಟ್ಟಿ ಇದೆ. ಈಗಾಲೂ ಹಾಗೆಯೇ ಬದುಕುತ್ತಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ:ಧ್ರುವ ಸರ್ಜಾ ಫ್ಯಾನ್ಸ್‌ಗೆ ಗುಡ್ ನ್ಯೂಸ್- ಜು.29ರಂದು ಹೊರಬೀಳಲಿದೆ ‘ಕೆಡಿ’ ಚಿತ್ರದ ಅಪ್‌ಡೇಟ್

    ಈ ಹಿಂದೆ ಕತ್ರಿನಾ ಕೈಫ್ (Katrina Kaif) ಮತ್ತು ದೀಪಿಕಾ ಪಡುಕೋಣೆ (Deepika Padukone) ಜೊತೆ ಡೇಟಿಂಗ್ ಮಾಡಿದ್ದರ ಕುರಿತು ರಣ್‌ಬೀರ್ ಕಪೂರ್ (Ranbir Kapoor) ಸಂದರ್ಶನವೊಂದರಲ್ಲಿ ಮೌನ ಮುರಿದಿದ್ದಾರೆ. ನಾನು ಈ ಹಿಂದೆ ಇಬ್ಬರು ಯಶಸ್ವಿ ನಟಿಯರೊಂದಿಗೆ ಡೇಟ್ ಮಾಡಿದ್ದೆ. ಅದು ನನ್ನ ಐಡೆಂಟಿಟಿ ಆಗಿ ಹೋಯಿತು. ನನಗೆ ಚೀಟರ್, ಸ್ತ್ರೀಲೋಲ ಎನ್ನುವ ಟ್ಯಾಗ್ ಸಿಕ್ಕಿತು. ನನ್ನ ಜೀವನದ ಬಹುಪಾಲು ನಾನು ಮೋಸಗಾರ ಎಂಬ ಹಣೆಪಟ್ಟಿಯೊಂದಿಗೆ ಬದುಕಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ:ರೇಣುಕಾಸ್ವಾಮಿ ಕುಟುಂಬಕ್ಕೆ 1 ಲಕ್ಷ ನೆರವು ನೀಡಿದ ನಟ ವಿನೋದ್ ರಾಜ್

    ಮಗಳು ರಾಹಾ ಮೇಲೆ ರಣ್‌ಬೀರ್‌ಗೆ ಅಪಾರ ಪ್ರೀತಿ ಇದೆ. ಈ ಮೂಲಕ ರಾಹಾ (Raha) ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಸದ್ಯ ಆಲಿಯಾ ಭಟ್ (Aliaa  Bhatt) ಜೊತೆ ಸುಂದರ ಬದುಕು ಕಂಡುಕೊಂಡಿದ್ದಾರೆ ರಣ್‌ಬೀರ್.

    ಅಂದಹಾಗೆ, ದೀಪಿಕಾ ಪಡುಕೋಣೆ ಜೊತೆ ನಟ ಡೇಟ್ ಮಾಡಿದ್ದರು. ಈ ರಿಲೇಷನ್‌ಶಿಪ್‌ಗೆ 2010ರಲ್ಲಿ ಬ್ರೇಕ್ ಬಿದ್ದಿತ್ತು. ಬಳಿಕ 6 ವರ್ಷಗಳ ಡೇಟಿಂಗ್ ನಂತರ 2016ರಲ್ಲಿ ಕತ್ರಿನಾ ಕೈಫ್ ಜೊತೆನೂ ರಣ್‌ಬೀರ್ ಬ್ರೇಕಪ್ ಮಾಡಿಕೊಂಡರು. ನಂತರ ಆಲಿಯಾ ಭಟ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

  • ಪತಿ ಜೊತೆಗಿನ ರೊಮ್ಯಾಂಟಿಕ್‌ ಫೋಟೋ ಹಂಚಿಕೊಂಡ ಆಲಿಯಾ ಭಟ್

    ಪತಿ ಜೊತೆಗಿನ ರೊಮ್ಯಾಂಟಿಕ್‌ ಫೋಟೋ ಹಂಚಿಕೊಂಡ ಆಲಿಯಾ ಭಟ್

    ಅಂಬಾನಿ ಮನೆ ಮಗ ಅನಂತ್ ಅಂಬಾನಿ ಮತ್ತು ರಾಧಿಕಾ ವಿವಾಹ ಪೂರ್ವ ಕಾರ್ಯಕ್ರಮ ಇತ್ತೀಚೆಗೆ ಅದ್ಧೂರಿಯಾಗಿ ನಡೆಯಿತು. ಈ ಇವೆಂಟ್‌ನಲ್ಲಿ ಆಲಿಯಾ, ರಣ್‌ಬೀರ್ ಕಪೂರ್ (Ranbir Kapoor) ಕೂಡ ಭಾಗಿಯಾಗಿದ್ರು. ಇಬ್ಬರೂ ಕಾರ್ಯಕ್ರಮದಲ್ಲಿ ಮಿಂಚಿದ್ದು ಹೇಗೆ ಎಂದು ಸುಂದರ ಫೋಟೋವನ್ನು ಶೇರ್ ಮಾಡಿದ್ದಾರೆ.‌ ಇದನ್ನೂ ಓದಿ:ಬಾಲಿವುಡ್‌ನಲ್ಲಿ ಬಿಗ್ ಚಾನ್ಸ್‌- ಆಯುಷ್ಮಾನ್‌ಗೆ ರಶ್ಮಿಕಾ ಮಂದಣ್ಣ ಹೀರೋಯಿನ್

    ಅನಂತ್ ಅಂಬಾನಿ ಮನೆ ಕಾರ್ಯಕ್ರಮಕ್ಕೆ ಮಗಳು ರಾಹಾ ಜೊತೆ ಆಲಿಯಾ (Alia Bhatt) ದಂಪತಿ ಹಾಜರಿ ಹಾಕಿದ್ದರು. ಕಪ್ಪು ಪ್ಯಾಂಟ್, ವೈಟ್ ಶರ್ಟ್‌ಗೆ ನೇರಳೆ ಬಣ್ಣದ ಕೋಟ್ ಅನ್ನು ರಣ್‌ಬೀರ್ ಧರಿಸಿದ್ರೆ, ಆಲಿಯಾ ಲೈಟ್ ಬಣ್ಣದ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ಇದೀಗ ತಡವಾಗಿ ಕಾರ್ಯಕ್ರಮದ ಫೋಟೋವನ್ನು ನಟಿ ಶೇರ್ ಮಾಡಿದ್ದಾರೆ.

    ಇನ್ನೂ ಆಲಿಯಾ ಮತ್ತು ರಣ್‌ಬೀರ್ ಇಬ್ಬರೂ ಹಲವು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ರಾಮಾಯಣ, ಅನಿಮಲ್ 2 ಸೇರಿದಂತೆ ಹಲವು ಚಿತ್ರಗಳು ರಣ್‌ಬೀರ್ ಕೈಯಲ್ಲಿವೆ. ಇದನ್ನೂ ಓದಿ:Darshan: ‘ಡೆವಿಲ್’ ಸಿನಿಮಾ ಕೈತಪ್ಪಿದರೆ ನಿಜಕ್ಕೂ ಬೇಸರ ಆಗುತ್ತೆ- ವಿನಯ್ ಗೌಡ

    ಸಿನಿಮಾದ ಜೊತೆಗೆ ನಿರ್ಮಾಪಕಿಯಾಗಿ ಆಲಿಯಾ ಭಟ್ ಗುರುತಿಸಿಕೊಳ್ತಿದ್ದಾರೆ. ಸಿನಿಮಾ ಕೆಲಸ ಮತ್ತು ರಾಹಾ ಆರೈಕೆಯಲ್ಲಿ ನಟಿ ಬ್ಯುಸಿಯಾಗಿದ್ದಾರೆ.

  • ಅಪ್ಪನ ಜೊತೆ ರಾಹಾ ಕ್ಯೂಟ್ ಪೋಸ್- ‘ಮುದ್ದು ರಾಜಕುಮಾರಿ’ ಎಂದ ಫ್ಯಾನ್ಸ್

    ಅಪ್ಪನ ಜೊತೆ ರಾಹಾ ಕ್ಯೂಟ್ ಪೋಸ್- ‘ಮುದ್ದು ರಾಜಕುಮಾರಿ’ ಎಂದ ಫ್ಯಾನ್ಸ್

    ಬಾಲಿವುಡ್ ನಟ ರಣ್‌ಬೀರ್ ಕಪೂರ್ (Ranbir Kapoor) ಮತ್ತು ಆಲಿಯಾ ಭಟ್ (Alia Bhatt) ಯುರೋಪ್ ವೆಕೇಷನ್ ಮುಗಿಸಿ ಭಾರತಕ್ಕೆ ಮರಳಿದ್ದಾರೆ. ಅಂಬಾನಿ ಮನೆಯ ಪ್ರಿ ವೆಡ್ಡಿಂಗ್ ಕಾರ್ಯಕ್ರಮ ಮುಗಿಸಿ ಮುಂಬೈ ಏರ್‌ಪೋರ್ಟ್‌ನಲ್ಲಿ ಈ ಜೋಡಿ ಕಾಣಿಸಿಕೊಂಡಿದ್ದು, ಅಪ್ಪನ ಜೊತೆಗಿನ ರಾಹಾ ತುಂಟಾಟದ ಪೋಸ್ ನೆಟ್ಟಿಗರ ಗಮನ ಸೆಳೆದಿದೆ. ರಾಹಾಗೆ ಮುದ್ದು ರಾಜಕುಮಾರಿ ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ.

     

    View this post on Instagram

     

    A post shared by Viral Bhayani (@viralbhayani)

    ಮುಂಬೈ ವಿಮಾನ ನಿಲ್ದಾಣದಿಂದ ರಣ್‌ಬೀರ್ ಜೊತೆ ಮನೆಗೆ ತೆರಳುವಾಗ ಕ್ಯೂಟ್‌ ಆಗಿ ಕಾಣಿಸಿಕೊಂಡಿದ್ದಾಳೆ. ರಾಹಾ ಮುದ್ದು ಮುಖ ನೋಡಿ ನೆಟ್ಟಿಗರು ಬಗೆ ಬಗೆಯ ಕಾಮೆಂಟ್‌ಗಳನ್ನು ಹಾಕುತ್ತಿದ್ದಾರೆ. ರಿಷಿ ಕಪೂರ್ ಹೋಲಿಸಿ ರಾಹಾ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ:ನಾನು ರಿಲೇಷನ್‌ಶಿಪ್‌ನಲ್ಲಿದ್ದೇನೆ ಎಂದು ಪಡ್ಡೆಹುಡುಗರಿಗೆ ಶಾಕ್ ಕೊಟ್ಟ ಕೃತಿ ಶೆಟ್ಟಿ

    ರಾಹಾಳನ್ನು ಕ್ಯಾಮೆರಾ ಕಣ್ಣಿಂದ ರಣ್‌ಬೀರ್ ಕಪೂರ್ ದಂಪತಿ ದೂರವಿಟ್ಟಿದ್ದಾರೆ. ವರ್ಷಗಳ ಬಳಿಕ ಕಳೆದ ಕ್ರಿಸ್‌ಮಸ್ ವೇಳೆ ಮಗಳ ಮುಖವನ್ನು ಮೊದಲ ಬಾರಿಗೆ ರಿವೀಲ್ ಮಾಡಿದ್ದರು.

    ಅಂದಹಾಗೆ, ‘ರಾಮಾಯಣ’ ಮತ್ತು ‘ಅನಿಮಲ್’ ಪಾರ್ಕ್ ಸಿನಿಮಾದಲ್ಲಿ ರಣ್‌ಬೀರ್ ಕಪೂರ್ ಬ್ಯುಸಿಯಾಗಿದ್ದಾರೆ. ಆಲಿಯಾ ಭಟ್, ವಾರ್ 2 ಸೇರಿದಂತೆ ಹಲವು ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿದ್ದಾರೆ.

  • ‘ರಾಮಾಯಣ’ ಚಿತ್ರಕ್ಕಾಗಿ ರಣ್‌ಬೀರ್ ಕಪೂರ್ ಹೇರ್ ಸ್ಟೈಲ್ ಚೇಂಜ್

    ‘ರಾಮಾಯಣ’ ಚಿತ್ರಕ್ಕಾಗಿ ರಣ್‌ಬೀರ್ ಕಪೂರ್ ಹೇರ್ ಸ್ಟೈಲ್ ಚೇಂಜ್

    ‘ಅನಿಮಲ್’ (Animal) ಸಿನಿಮಾದ ಸಕ್ಸಸ್ ನಂತರ ರಣ್‌ಬೀರ್ ಕಪೂರ್ ‘ರಾಮಾಯಣ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ರಾಮನಾಗಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ರಣ್‌ಬೀರ್ ಕಪೂರ್ ಹೊಸ ಹೇರ್ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರಣ್‌ಬೀರ್ (Ranbir Kapoor) ನಯಾ ಲುಕ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ‘ರಾಮಾಯಣ’ ಸಿನಿಮಾದಲ್ಲಿ ರಾಮನಾಗಿ ರಣ್‌ಬೀರ್ ಕಾಣಿಸಿಕೊಂಡ್ರೆ, ಸೀತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಚಿತ್ರೀಕರಣ ಕೂಡ ಭರದಿಂದ ಸಾಗುತ್ತಿದೆ. ಇದೀಗ ರಣ್‌ಬೀರ್ ಕಪೂರ್ ಹೇರ್ ಸ್ಟೈಲ್ ಚೇಂಜ್ ಮಾಡಿರೋದು ಅಭಿಮಾನಿಗಳ ಗಮನ ಸೆಳೆದಿದೆ. ಕಣ್ಣಿಗೆ ಸ್ಟೈಲ್‌ ಆಗಿ ಕನ್ನಡಕ ಹಾಕಿ ಕಪ್ಪು ಟೀ ಶರ್ಟ್ ಧರಿಸಿ ನಟ ಸ್ಟೈಲೀಶ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

    ಇನ್ನೂ ‘ರಾಮಾಯಣ’ (Ramayana) ಸಿನಿಮಾವನ್ನು ನಿತೇಶ್ ನಿರ್ದೇಶನ ಮಾಡುತ್ತಿದ್ದಾರೆ. ‘ಅನಿಮಲ್’ ಚಿತ್ರದಲ್ಲಿ ರಗಡ್ ಆಗಿ ಕಾಣಿಸಿಕೊಂಡಿದ್ರು, ಈಗ ರಾಮನಾಗಿ ರಣ್‌ಬೀರ್ ಮತ್ತೊಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಇದನ್ನೂ ಓದಿ:‘ರಣಹದ್ದು’ ಚಿತ್ರ ಟೀಸರ್ ರಿಲೀಸ್: ಇದು ತಂದೆ-ಮಕ್ಕಳ ಸಿನಿಮಾ

    ಲವ್ & ವಾರ್, ಅನಿಮಲ್ ಪಾರ್ಕ್ ಸೇರಿದಂತೆ ಹಲವು ಚಿತ್ರಗಳು ರಣ್‌ಬೀರ್ ಕಪೂರ್ ಕೈಯಲ್ಲಿವೆ.

  • ಮತ್ತೆ ಕಾಣಿಸಿಕೊಂಡ ರಾಹಾ: ರಣ್‌ಬೀರ್ ದಂಪತಿ ಪುತ್ರಿಗೆ ನೆಟ್ಟಿಗರ ಮೆಚ್ಚುಗೆ

    ಮತ್ತೆ ಕಾಣಿಸಿಕೊಂಡ ರಾಹಾ: ರಣ್‌ಬೀರ್ ದಂಪತಿ ಪುತ್ರಿಗೆ ನೆಟ್ಟಿಗರ ಮೆಚ್ಚುಗೆ

    ಬಾಲಿವುಡ್ ನಟ ರಣ್‌ಬೀರ್ ಕಪೂರ್ (Ranbir Kapoor) ಮತ್ತು ಆಲಿಯಾ ಭಟ್ ದಂಪತಿ ಪುತ್ರಿ ರಾಹಾಳನ್ನ ಸಾರ್ವಜನಿಕ ವಲಯದಿಂದ ದೂರವಿಟ್ಟಿದ್ದಾರೆ. ಇದೀಗ ‘ಬ್ರಹ್ಮಾಸ್ತ್ರ’ ಡೈರೆಕ್ಟರ್ ಅಯಾನ್ ಮುಖರ್ಜಿ ಜೊತೆ ರಾಹಾ (Raha) ಕಾಣಿಸಿಕೊಂಡಿದ್ದು, ಆಕೆಯ ಮುದ್ದಾದ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ. ಇದನ್ನೂ ಓದಿ:‘ಯುನಿಸೆಫ್ ಇಂಡಿಯಾ’ಗೆ ರಾಯಭಾರಿಯಾದ ಕರೀನಾ ಕಪೂರ್

    ರಾಹಾ ಹುಟ್ಟಿದ ದಿನದಿಂದಲೂ ಆಕೆಯ ಮುಖವನ್ನು ಆಲಿಯಾ ದಂಪತಿ ರಿವೀಲ್ ಮಾಡಿರಲಿಲ್ಲ. ಅದಾದ ಬಳಿಕ ಕಳೆದ ವರ್ಷ ಅಂತ್ಯದಲ್ಲಿ ಕ್ರಿಸ್‌ಮಸ್ ಹಬ್ಬದಂದು ಮೊದಲ ಬಾರಿಗೆ ರಾಹಾಳ ಮುಖ ರಿವೀಲ್ ಮಾಡಿದ್ದರು. ಆ ನಂತರ ಇದೀಗ 2ನೇ ಬಾರಿ ರಾಹಾ ಕಾಣಿಸಿಕೊಂಡಿದ್ದಾಳೆ.

     

    View this post on Instagram

     

    A post shared by Snehkumar Zala (@snehzala)

    ರಾಹಾಳ ಮುದ್ದು ಮುಖ ಆಕೆಯ ಕಣ್ಣೋಟ ತುಂಟಾಟದ ವಿಡಿಯೋ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಕೆಲವರು ರಾಹಾ ಲುಕ್ ಅನ್ನು ರಣ್‌ಬೀರ್ ಹೋಲಿಸಿದ್ರೆ, ಇನ್ನೂ ಕೆಲವರು ನಟ ರಿಷಿ ಕಪೂರ್‌ಗೆ ಹೋಲಿಸಿ ಮೆಚ್ಚುಗೆ ಸೂಚಿಸಿದ್ದಾರೆ. ತಾತನಂತೆಯೇ ಮೊಮ್ಮಗಳು ಎಂದು ಹೊಗಳಿ ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದಾರೆ.

    ಅಂದಹಾಗೆ, ರಣ್‌ಬೀರ್ ಕಪೂರ್ ಅನಿಮಲ್ ಸಕ್ಸಸ್ ನಂತರ ‘ರಾಮಾಯಣ’ (Ramayana) ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಆಲಿಯಾ ಭಟ್ ಕೂಡ ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ ಹೊಸ ಚಿತ್ರ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

  • Ramayana: ಕೈಕೇಯಿ ಪಾತ್ರದಲ್ಲಿ ಲಾರಾ ದತ್ತಾ? ನಟಿ ಸ್ಪಷ್ಟನೆ

    Ramayana: ಕೈಕೇಯಿ ಪಾತ್ರದಲ್ಲಿ ಲಾರಾ ದತ್ತಾ? ನಟಿ ಸ್ಪಷ್ಟನೆ

    ಬಾಲಿವುಡ್‌ನ ‘ರಾಮಾಯಣ’ (Ramayana Film) ಚಿತ್ರದ ಮೇಲೆ ಅಭಿಮಾನಿಗಳಿಗೆ ಭಾರೀ ನಿರೀಕ್ಷೆಯಿದೆ. ರಾಮನಾಗಿ ರಣ್‌ಬೀರ್ ಕಪೂರ್ (Ranbir Kapoor), ಸೀತೆಯಾಗಿ ಸಾಯಿ ಪಲ್ಲವಿ (Sai Pallavi) ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಕೈಕೇಯಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಗೆ ಲಾರಾ ದತ್ತಾ ಸ್ಪಷ್ಟನೆ ನೀಡಿದ್ದಾರೆ.

    ‘ರಾಮಾಯಣ’ ಚಿತ್ರದಲ್ಲಿ ಕೈಕೇಯಿ ಪಾತ್ರದಲ್ಲಿ ನಟಿಸುತ್ತಿದ್ದೀರಾ? ಎಂಬ ಪ್ರಶ್ನೆ ನಟಿಗೆ ಸಂದರ್ಶನವೊಂದರಲ್ಲಿ ಎದುರಾಗಿದೆ. ನಾನು ಕೂಡ ಈ ಬಗ್ಗೆ ತುಂಬಾ ಕೇಳುತ್ತಿದ್ದೇನೆ. ನಾನು ಆ ಬಗ್ಗೆ ಓದಲು, ಕೇಳಲು ಇಷ್ಟಪಡುತ್ತೇನೆ. ಆದ್ದರಿಂದ ದಯವಿಟ್ಟು ಮುಂದುವರಿಸಿ ಎಂದು ಲಾರಾ ಮಾತನಾಡಿದ್ದಾರೆ. ಇದನ್ನೂ ಓದಿ:ಪವನ್ ಕಲ್ಯಾಣ್ ನಟನೆಯ ‘ಹರಿಹರ ವೀರ ಮಲ್ಲು’ ಟೀಸರ್ ರಿಲೀಸ್

    ರಾಮಾಯಣದ (Ramayana Film) ಭಾಗವಾಗಲು ಯಾರು ತಾನೇ ಇಷ್ಟಪಡುವುದಿಲ್ಲ ಹೇಳಿ ಚಿತ್ರದಲ್ಲಿ ನನಗೆ ಆಫರ್ ಕೊಟ್ರರೆ ನಾನು ನಟಿಸಲು ಇಷ್ಟಪಡುವ ಅನೇಕ ಪಾತ್ರಗಳಿವೆ. ಶೂರ್ಪನಖಿ, ಮಂಡೋದರಿ, ನಾನು ಎಲ್ಲಾ ರೀತಿಯ ಪಾತ್ರಗಳನ್ನು ನಿರ್ವಹಿಸಲು ಇಷ್ಟಪಡುತ್ತೇನೆ ಎಂದು ಲಾರಾ ಹೇಳಿದ್ದಾರೆ. ಆ ಮೂಲಕ ‘ರಾಮಾಯಣ’ ಚಿತ್ರದಲ್ಲಿ ನಟಿಸುವ ಬಗ್ಗೆ ಲಾರಾ (Lara Dutta) ಯಾವುದೇ ಖಚಿತ ಮಾಹಿತಿ ನೀಡಿಲ್ಲ.

    ‘ರಾಮಾಯಣ’ ಚಿತ್ರ ಬಿಗ್ ಬಜೆಟ್‌ನಲ್ಲಿ ಮೂಡಿ ಬರುತ್ತಿದೆ. ಸಿನಿಮಾ ನಿರ್ಮಾಣಕ್ಕೆ ‘ಕೆಜಿಎಫ್‌ 2’ (KGF 2) ನಟ ಯಶ್ (Yash) ಕೂಡ ಸಾಥ್ ನೀಡುತ್ತಿದ್ದಾರೆ.

  • ಅಶ್ಲೀಲ ಪದ ಬಳಸಿದ ಫೋಟೋಗ್ರಾಫರ್- ಶಾಕ್ ಆದ ರಣ್‌ಬೀರ್ ಕಪೂರ್

    ಅಶ್ಲೀಲ ಪದ ಬಳಸಿದ ಫೋಟೋಗ್ರಾಫರ್- ಶಾಕ್ ಆದ ರಣ್‌ಬೀರ್ ಕಪೂರ್

    ಬಾಲಿವುಡ್ ನಟ ರಣ್‌ಬೀರ್ ಕಪೂರ್ (Ranbir Kapoor) ಸದ್ಯ ‘ರಾಮಾಯಣ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಆಭರಣ ಮಳಿಗೆಯೊಂದಕ್ಕೆ ನಟ ಚಾಲನೆ ನೀಡಿದ್ದಾರೆ. ಈ ವೇಳೆ, ರಣ್‌ಬೀರ್ ವೇದಿಕೆ ಮೇಲಿದ್ದಾಗ ಫೋಟೋಗ್ರಾಫರ್ ಅಶ್ಲೀಲ ಪದ ಬಳಸಿ ಮಾತನಾಡಿದ್ದು, ಕೇಳಿ ಶಾಕ್ ಆಗಿದ್ದಾರೆ.

    ರಣ್‌ಬೀರ್ ವೇದಿಕೆಗೆ ಎಂಟ್ರಿ ಕೊಟ್ಟಾಗ ಬೇಗನೆ ಫೋಟೋ ಕ್ಲಿಕ್ಕಿಸಬೇಕೆಂಬ ತವಕ. ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದ ನಿಮಿತ್ತ ಫೋಟೋಗ್ರಾಫರ್‌ಗೆ ಸರಿಯಾದ ಫೋಟೋ ಸಿಗದ ಕಾರಣ ಸಿಟ್ಟಾಗಿದ್ದಾರೆ. ಈ ವೇಳೆ, ಕೆಟ್ಟ ಪದ ಬಳಸಿ ಮಾತನಾಡಿದ್ದಾರೆ. ಆ ಪದ ಬಳಕೆ ಮಾಡಿದ್ದು, ರಣ್‌ಬೀರ್ ಅವರಿಗೇನಾ ಅಥವಾ ಸೇರಿದ್ದ ಜನರಿಗೇನಾ? ಎಂದು ಸ್ಪಷ್ಟನೆ ಸಿಕ್ಕಿಲ್ಲ. ಒಟ್ನಲ್ಲಿ ಫೋಟೋಗ್ರಾಫರ್ ವರ್ತನೆ ರಣ್‌ಬೀರ್‌ಗೆ ಕೋಪ ತರಿಸಿದೆ.

    ರಣ್‌ಬೀರ್ ಕೂಡ ತಾಳ್ಮೆ ಕಳೆದುಕೊಂಡಿಲ್ಲ. ಖಡಕ್ ಆಗಿ ಲುಕ್ ಕೊಟ್ಟು ವೇದಿಕೆಯಿಂದ ಹೊರನಡೆದಿದ್ದಾರೆ. ವೈರಲ್‌ ಆಗಿರುವ ವಿಡಿಯೋ ನೋಡಿ ಫೋಟೋಗ್ರಾಫರ್ ವರ್ತನೆಗೆ ಫ್ಯಾನ್ಸ್ ಗರಂ ಆಗಿದ್ದಾರೆ. ಎಲ್ಲಿ ಹೇಗಿರಬೇಕು ಎಂಬ ಸೌಜನ್ಯವಿಲ್ಲ ಎಂದು ಖಡಕ್ ಆಗಿ ಪಾಪರಾಜಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ:ಕೈಯಲ್ಲಿ ಗನ್ ಹಿಡಿದು ರಕ್ತಸಿಕ್ತ ಅವತಾರದಲ್ಲಿ ಸಮಂತಾ

    ರಾಮಾಯಣ, ಅನಿಮಲ್ ಪಾರ್ಕ್, ಬ್ರಹ್ಮಾಸ್ತ್ರ 2, ಲವ್ & ವಾರ್ ಸೇರಿದಂತೆ ಹಲವು ಸಿನಿಮಾಗಳು ರಣ್‌ಬೀರ್ ಕೈಯಲ್ಲಿವೆ.