Tag: Ranbeer Kapoor

  • ರಣ್‌ಬೀರ್ -ಆಲಿಯಾ ರಿಸೆಪ್ಷನ್‌ಗೆ ಬಚ್ಚನ್ ಕುಟುಂಬಕ್ಕೆ ಆಹ್ವಾನವಿರಲಿಲ್ಲವೇಕೆ?

    ರಣ್‌ಬೀರ್ -ಆಲಿಯಾ ರಿಸೆಪ್ಷನ್‌ಗೆ ಬಚ್ಚನ್ ಕುಟುಂಬಕ್ಕೆ ಆಹ್ವಾನವಿರಲಿಲ್ಲವೇಕೆ?

    ಬಾಲಿವುಡ್ ಗಲ್ಲಿ ಗಲ್ಲಿಯಲ್ಲೂ ಈಗ ಒಂದೇ ಸುದ್ದಿ, ರಣ್‌ಬೀರ್ ಆಲಿಯಾ ಮದುವೆ ವಿಚಾರ. ಏಪ್ರಿಲ್ 14ಕ್ಕೆ ರಣ್‌ಬೀರ್ ಮತ್ತು ಆಲಿಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈಗ ಇಬ್ಬರು ಸ್ಟಾರ್‌ಗಳು ಮದುವೆಯ ಬಳಿಕ ಒಪ್ಪಿಕೊಂಡಿದ್ದ ಚಿತ್ರಗಳತ್ತ ಬ್ಯುಸಿಯಾಗಿದ್ದಾರೆ. ಆದರೆ ಈಗ ಬಿಟೌನ್‌ನಲ್ಲಿ ಹೊಸ ವಿಚಾರವೊಂದು ಸಿಕ್ಕಾಪಟ್ಟೆ ಚರ್ಚೆಯಾಗ್ತಿದೆ. ರಣ್‌ಬೀರ್ ಮತ್ತು ಆಲಿಯಾ ರಿಸೆಪ್ಷನ್‌ನಲ್ಲಿ ಬಚ್ಚನ್ ಕುಟುಂಬಕ್ಕೆ ಯಾಕೆ ಆಹ್ವಾನವಿರಲಿಲ್ಲ ಅಂತಾ ಭಾರೀ ಚರ್ಚೆ ಆಗುತ್ತಿದೆ.

    ರಣ್‌ಬೀರ್ ಮತ್ತು ಆಲಿಯಾ ಪ್ರೀತಿಸಿ, ಹಿರಿಯರ ಸಮ್ಮತಿಯ ಮೇರೆಗೆ ಕಳೆದ ವಾರವಷ್ಟೇ ಹಸೆಮಣೆ ಏರಿದ್ದರು. ಮದುವೆಯಲ್ಲಿ ಕುಟುಂಬಸ್ಥರು ಆಪ್ತರಿಗಷ್ಟೇ ಆಹ್ವಾನವಿತ್ತು. ನಂತರ ಏಪ್ರಿಲ್ 16ರಂದು ನಡೆದ ರಿಸೆಪಕ್ಷನ್‌ನಲ್ಲಿ ಹಿಂದಿ ಚಿತ್ರರಂಗದ ಗಣ್ಯರಿಗೆ, ಸೆಲೆಬ್ರೆಟಿಗಳಿಗೆ ಆಹ್ವಾನ ನೀಡಲಾಗಿತ್ತು. ಆದರೆ ಬಚ್ಚನ್ ಕುಟುಂಬಕ್ಕೆಯೇಕೆ ಆಹ್ವಾನವಿರಲಿಲ್ಲ. ಬಿಗ್‌ಬಿ ಮಗಳು ಶ್ವೇತಾ ಬಚ್ಚನ್ ರಣ್‌ಬೀರ್ ಕಪೂರ್ ಅವರ ಸಂಬಂಧಿಯಾಗಿದ್ದು, ಅವರಿಗೆ ಇನ್‌ವೈಟ್ ಮಾಡಿದ್ದರೆ, ಉಳಿದ ಕುಟುಂಬದ ಸದಸ್ಯರಿಗೆ ಕರೆಯದೇ ಇರೋದು ಅಚ್ಚರಿ ಮೂಡಿಸಿದೆ.

    ಬಚ್ಚನ್ ಕುಟುಂಬಕ್ಕೆ ಕರೆಯದೇ ಇರುವುದು ಅಚ್ಚರಿ ಮೂಡಿಸಿದ್ದರೆ, ಇನ್ನೊಂದ್ ಕಡೆ `ಸಾವರಿಯಾ’ ಚಿತ್ರದ ಮೂಲಕ ರಣ್‌ಬೀರ್‌ ಕಪೂರ್ ಜರ್ನಿ ಶುರು ಮಾಡಿದ್ದರು. ಈ ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರು ಕೂಡ ರಿಸೆಪ್ಷನ್‌ನಲ್ಲಿ ಗೈರಾಗಿದ್ದರು. ಇತ್ತೀಚಿಗೆ ನಟಿ ಆಲಿಯಾ ಕೂಡ `ಗಂಗೂಬಾಯಿ ಕಾಠಿಯಾವಾಡಿ’ ಚಿತ್ರದಲ್ಲಿ ನಟಿಸಿದ್ದರು. ಇದನ್ನೂ ಓದಿ:ಪಟಾಕ ಪೋರಿ ನಭಾ ಮಸ್ತ್ ಮಸ್ತ್ ಫೋಟೋಶೂಟ್

    ಒಟ್ನಲ್ಲಿ ಅಮಿತಾಭ್‌ ಬಚ್ಚನ್ ಕುಟುಂಬ ಮತ್ತು ನಿರ್ದೇಶಕ ಬನ್ಸಾಲಿ ಅವರಿಗೆ ರಣ್‌ಬೀರ್ ಮತ್ತು ಆಲಿಯಾ ರಿಸೆಪಕ್ಷನ್‌ಗೆ ಆಹ್ವಾನ ಇಲ್ಲದೇ ಇರುವುದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಇವರಿಬ್ಬರ ನಡುವಿನ ಸ್ನೇಹ ಸಂಬಂಧದ ಬಗ್ಗೆ ಸಾಕಷ್ಟು ಕುತೂಹಲ ಹುಟ್ಟು ಹಾಕಿದೆ.‌

  • ಮದುವೆಯ ಬಳಿಕ ಮತ್ತೆ ಶೂಟಿಂಗ್‌ನತ್ತ ಮುಖ ಮಾಡಿದ ಆಲಿಯಾ ಭಟ್!

    ಮದುವೆಯ ಬಳಿಕ ಮತ್ತೆ ಶೂಟಿಂಗ್‌ನತ್ತ ಮುಖ ಮಾಡಿದ ಆಲಿಯಾ ಭಟ್!

    ಬಾಲಿವುಡ್ ಕ್ಯೂಟ್ ಕಪಲ್ ರಣ್‌ಬೀರ್ ಕಪೂರ್ ಮತ್ತು ಆಲಿಯಾ ಭಟ್ ಮದುವೆ ವಿಷ್ಯಾ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಏಪ್ರಿಲ್ 14ರಂದು ದಾಂಪತ್ಯ ಜೀವನಕ್ಕೆ ಈ ಜೋಡಿ ಕಾಲಿಟ್ಟಿದ್ದರು. ಆದರೆ ಮದುವೆ ಆಗಿ ಐದೇ ದಿನಕ್ಕೆ ಶೂಟಿಂಗ್‌ನತ್ತ ಆಲಿಯಾ ಭಟ್ ಮುಖ ಮಾಡಿದ್ದಾರೆ.

    ರಣ್‌ವೀರ್ ಸಿಂಗ್ ಮತ್ತು ಆಲಿಯಾ ಭಟ್ ನಟನೆಯ `ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರದ ಶೂಟಿಂಗ್‌ಗಾಗಿ ಜೈಸಲ್ಮೇರ್ ಹೊರಡಲಿದ್ದಾರೆ. ಇತ್ತೀಚೆಗಷ್ಟೇ ಮದುವೆ ಆಗಿದ್ದ ರಣ್‌ಬೀರ್ ಆಲಿಯಾ, ವರ್ಕ್ ಕಮಿಟ್ಮೆಂಟ್‌ನಿಂದ ಇಬ್ಬರು ಒಪ್ಪಿಕೊಂಡಿದ್ದ ಸಿನಿಮಾಗಳತ್ತ ಮುಖ ಮಾಡಿದ್ದಾರೆ.

    `ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರಕ್ಕೆ ಕರಣ್ ಜೋಹರ್ ಆಕ್ಷನ್ ಕಟ್ ಹೇಳ್ತಿದ್ದು, ಭಿನ್ನ ಲವ್‌ಸ್ಟೋರಿ ಮೂಲಕ ರಣ್‌ವೀರ್ ಮತ್ತು ಆಲಿಯಾ ಕಮಾಲ್ ಮಾಡಲು ರೆಡಿಯಾಗಿದ್ದಾರೆ. ಮುಂದಿನ ಫೆಬ್ರವರಿ 2023ಕ್ಕೆ ತೆರೆಗೆ ಅಪ್ಪಳಿಸಲಿದೆ. ಇದನ್ನೂ ಓದಿ: ಬ್ಯಾಡ್ ಬಾಯ್ ಅಡ್ಡಾದಲ್ಲಿ `ಪುಷ್ಪ’ ಮ್ಯೂಸಿಕ್ ಡೈರೆಕ್ಟರ್

    ಇನ್ನು ನಟಿ ಆಲಿಯಾ, ಕರಣ್ ಜೋಹರ್ ನಿರ್ದೇಶನದ ಪ್ರಾಜೆಕ್ಟ್ನಲ್ಲಿ ಬ್ಯುಸಿಯಾಗಿದ್ದರೆ, ರಣ್‌ಬೀರ್‌ ಕಪೂರ್ `ಅನಿಮಲ್’ ಸಿನಿಮಾದ ಶೂಟಿಂಗ್ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಒಟ್ನಲ್ಲಿ ನವಜೋಡಿಗಳ ವರ್ಕ್ ಕಮಿಟ್ಮೆಂಟ್‌ಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.

  • ದೀಪಿಕಾ ಮದ್ವೆಯಲ್ಲಿ ತೊಟ್ಟ ಸೀರೆ ಬಗ್ಗೆ ಸ್ಪಷ್ಟನೆ ಕೊಟ್ಟ ಸಬ್ಯಸಾಚಿ

    ದೀಪಿಕಾ ಮದ್ವೆಯಲ್ಲಿ ತೊಟ್ಟ ಸೀರೆ ಬಗ್ಗೆ ಸ್ಪಷ್ಟನೆ ಕೊಟ್ಟ ಸಬ್ಯಸಾಚಿ

    ಮುಂಬೈ: ಬಾಲಿವುಡ್ ಚೆಲುವೆ ದೀಪಿಕಾ ಪಡುಕೋಣೆ ಮದುವೆ ಅದ್ಧೂರಿಯಾಗಿ ಇಟಲಿಯಲ್ಲಿ ನಡೆಯಿತು. ಕೊಂಕಣಿ ಮತ್ತು ಪಂಜಾಬಿ ಸಂಪ್ರದಾಯಬದ್ಧವಾಗಿ ಮದುವೆ ಸಹ ನಡೆದಿದೆ. ಬಾಲಿವುಡ್ ತಾರೆಯರ ಮದುವೆಯಲ್ಲಿ ತಮ್ಮ ನೆಚ್ಚಿನ ನಟಿ ತೊಡುವ ಉಡುಗೆಯ ಬಗ್ಗೆ ಬಹುತೇಕರಲ್ಲಿ ಕುತೂಹಲ ಇರುತ್ತದೆ. ದೀಪಿಕಾ ಸಹ ತಮ್ಮ ಮದುವೆಯಲ್ಲಿ ಎರಡು ವಿಭಿನ್ನ ಶೈಲಿಯಲ್ಲಿ ಕಾಣಿಸಿಕೊಂಡಿದ್ದರು. ವಸ್ತ್ರವಿನ್ಯಾಸಕ ಸಬ್ಯಸಾಚಿ ದೀಪಿಕಾರ ಎಲ್ಲ ಮದುವೆ ಫೋಟೋಗಳನ್ನು ತಮ್ಮ ಅಧಿಕೃತ ಟ್ವಿಟ್ಟರ್ ಮತ್ತು ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿಕೊಂಡಿದ್ದರು.

    ನವದಂಪತಿ ಧರಿಸಿದ ಎಲ್ಲ ಉಡುಪನ್ನು ನಾನು ಡಿಸೈನ್ ಮಾಡಿಲ್ಲ. ಕೊಂಕಣಿ ಸಂಪ್ರದಾಯದಂತೆ ನಡೆದ ಮದುವೆಯಲ್ಲಿ ದೀಪಿಕಾ ತಾಯಿ ಉಜ್ಜಲಾ ಅವರಿಂದ ಕಾಣಿಕೆಯಾಗಿ ಪಡೆದಿದ್ದ ಸೀರೆಯನ್ನು ಧರಿಸಿದ್ದರು. ಉಜ್ಜಲಾ ಪಡುಕೋಣೆ ಆ ಸೀರೆಯನ್ನು ಬೆಂಗಳೂರಿನ ಮಳಿಗೆಯಲ್ಲಿ ಖರೀದಿಸಿದ್ದಾರೆ ಎಂದು ಸಬ್ಯಸಾಚಿ ಬರೆದುಕೊಂಡಿದ್ದಾರೆ. ದೀಪಿಕಾ ಧರಿಸಿದ್ದ ಕೊಂಕಣಿ ಶೈ ಲಿಯಲ್ಲಿ ವಿನ್ಯಾಸ ಮಾಡಲಾಗಿತ್ತು.

    2017ರಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾರ ಮದುವೆ ಬಟ್ಟೆಯ ವಸ್ತ್ರವಿನ್ಯಾಸವನ್ನು ಸಬ್ಯಸಾಚಿ ಮಾಡಿದ್ದರು. ಅಂದು ಸಬ್ಯಸಾಚಿ ವಿರುಷ್ಕಾರ ಮದುವೆ ಮತ್ತು ಆರತಕ್ಷತೆಯ ಫೋಟೋಗಳನ್ನು ಅಪ್ಲೋಡ್ ಮಾಡಿಕೊಂಡಿದ್ದರು. ಬುಧವಾರ ಬೆಂಗಳೂರಿನಲ್ಲಿ ನಡೆದ ಆರತಕ್ಷತೆಯಲ್ಲಿ ದೀಪ್ ವೀರ್ ರಾಯಲ್ ಲುಕ್‍ನಲ್ಲಿ ಕಂಗೊಳಿಸುತ್ತಿದ್ದರು.

    ನಗರದ ಲೀಲಾ ಪ್ಯಾಲೇಸ್‍ನಲ್ಲಿ ದೀಪ್‍ವೀರ್ ಆರತಕ್ಷತೆ ಆಯೋಜಿಸಲಾಗಿತ್ತು. ಹಣೆತುಂಬಾ ಸಿಂಧೂರವಿಟ್ಟು ಮಹಾರಾಣಿಯಂತೆ ಕಂಗೊಳಿಸುತ್ತಿದ್ದ ದೀಪಿಕಾ ಪತಿಯ ಕೈ ಹಿಡಿದು ನಡೆದು ಬಂದು ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದರು. ದಕ್ಷಿಣ ಭಾರತದ ಸಂಪ್ರದಾಯಕ್ಕೆ ತಕ್ಕಂತೆ ದೀಪಿಕಾ ಬಂಗಾರದ ಬಣ್ಣದ ಜರತಾರಿ ಸೀರೆಯುಟ್ಟು ಆ್ಯಂಟಿಕ್ ಜ್ಯುವೆಲ್ಲರಿ ಧರಿಸಿ ಮಿಂಚಿದರೆ, ವರ ರಣವೀರ್ ಸಿಂಗ್ ಬಂಗಾರದ ಕಸೂತಿ ಇರುವ ಕಡು ನೀಲಿ ವರ್ಣದ ಲಾಂಗ್ ಸೂಟ್ ಧರಿಸಿದ್ದರು.

    ಇಟಲಿಯಲ್ಲಿ ಮದುವೆಯಾಗಿ ಮುಂಬೈಗೆ ಆಗಮಿಸಿದ್ದ ನವದಂಪತಿ ಆತ್ಮೀಯರಿಗೆ ತಮ್ಮ ಆರತಕ್ಷತೆಯ ಆಹ್ವಾನವನ್ನು ನೀಡಿದ್ದರು. ಈ ನಡುವೆ ಅವರ ಮದುವೆ ಸಮಾರಂಭದ ಫೋಟೋಗಳು ಎಲ್ಲಾ ಅಭಿಮಾನಿಗಳ ಮನಗೆದ್ದಿದ್ದವು. ಅಲ್ಲದೇ ಮದುವೆ ಕ್ಷಣ ಫೋಟೋ ಲೀಕ್ ಆಗದಂತೆ ಎಚ್ಚರಿಕೆ ವಹಿಸಿದ್ದ ಈ ಜೋಡಿ ಬಳಿಕ ಅಭಿಮಾನಿಗಳೊಂದಿಗೆ ಸ್ವತಃ ಫೋಟೋಗಳನ್ನು ಒಂದೊಂದಾಗಿ ಹಂಚಿಕೊಂಡಿದ್ದರು.

    https://www.instagram.com/p/BqbYDy2B0LS/

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಕೊನೆಗೂ ಟ್ಯಾಟೂ ತೆಗೆದ ದೀಪಿಕಾ-ಇಲ್ಲಿದೆ ಡಿಪ್ಪಿಯ ಟ್ಯಾಟೂ ಕಹಾನಿ

    ಕೊನೆಗೂ ಟ್ಯಾಟೂ ತೆಗೆದ ದೀಪಿಕಾ-ಇಲ್ಲಿದೆ ಡಿಪ್ಪಿಯ ಟ್ಯಾಟೂ ಕಹಾನಿ

    ಮುಂಬೈ: ಬಾಲಿವುಡ್ ಚೆಲುವೆ ದೀಪಿಕಾ ಪಡುಕೋಣೆ ತಮ್ಮ ಕತ್ತಿನ ಹಿಂಭಾಗದಲ್ಲಿದ್ದ ಆರ್.ಕೆ. ಟ್ಯಾಟೂ ತೆಗೆದಿದ್ದಾರೆ. ಮದುವೆ ಬಳಿಕ ಮೊದಲ ಬಾರಿಗೆ ಬೆಂಗಳೂರಿಗೆ ದೀಪಿಕಾ ಆಗಮಿಸಿದಾಗ ವಿಮಾನ ನಿಲ್ದಾಣದಲ್ಲಿ ತೆಗೆದ ಫೋಟೋಗಳಲ್ಲಿ ಕತ್ತಿನ ಹಿಂಭಾಗದಲ್ಲಿದ್ದ ಟ್ಯಾಟೂ ಮಾಯವಾಗಿದೆ.

    ಏನದು ಟ್ಯಾಟೋ:
    ದೀಪಿಕಾ ಸಿನಿ ಕೆರಿಯರ್ ಆರಂಭದಲ್ಲಿ ರಣ್‍ಬೀರ್ ಕಪೂರ್ ಅವರನ್ನ ಮದುವೆ ಅಗಲಿದ್ದಾರೆ ಎಂಬ ಸುದ್ದಿಗಳು ಕೇಳಿ ಬಂದಿತ್ತು. ಈ ಸುದ್ದಿಗಳಿಗೆ ಪೂರಕ ಎಂಬಂತೆ ಸಾರ್ವಜನಿಕವಾಗಿ ದೀಪಿಕಾ ಮತ್ತು ರಣ್‍ಬೀರ್ ಕಪೂರ್ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಈ ಎಲ್ಲ ಬೆಳವಣಿಗೆಗಳ ನಡುವೆ ದೀಪಿಕಾ ಆರ್.ಕೆ. (ರಣ್‍ಬೀರ್ ಕಪೂರ್) ಟ್ಯಾಟೂ ಹಾಕಿಕೊಳ್ಳುವ ಮೂಲಕ ತಮ್ಮ ಪ್ರೀತಿಯನ್ನು ಪರೋಕ್ಷವಾಗಿ ಹೇಳಿಕೊಂಡಿದ್ದರು.

    ಕೆಲ ಕಾರಣಗಳಿಂದ ದೀಪಿಕಾ ಮತ್ತು ರಣ್‍ಬೀರ್ ಇಬ್ಬರ ಮಧ್ಯೆ ವೈಮನಸ್ಸು ಮೂಡಿದ್ದರಿಂದ ಬೇರೆಯಾಗಿದ್ದರು. ಬ್ರೇಕಪ್ ಬಳಿಕ ದೀಪಿಕಾ ತಮ್ಮ ಟ್ಯಾಟೂವನ್ನು ಹಾಗೆಯೇ ಉಳಿಸಿಕೊಂಡಿದ್ದರು. ರಾಮ್‍ಲೀಲಾ ಸಿನಿಮಾದ ಬಳಿಕ ದೀಪಿಕಾ ಮತ್ತು ರಣ್‍ವೀರ್ ಸಿಂಗ್ ಇಬ್ಬರು ಪ್ರೇಮಪಾಶದಲ್ಲಿ ಸಿಲುಕಿದರು. ಇದಾದ ನಂತರ ದೀಪಿಕಾ ಮತ್ತು ರಣ್‍ವೀರ್ ಸಿಂಗ್ ಬಾಜೀರಾವ್ ಮಸ್ತಾನಿ ಮತ್ತು ಪದ್ಮಾವತ್ ಸೂಪರ್ ಹಿಟ್ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದರು.

    2013ರಿಂದಲು ಪ್ರೇಮಪಾಶದಲ್ಲಿ ಸಿಲುಕಿದರೂ ಪದೇ ಪದೇ ಇಬ್ಬರ ಮದುವೆ ಮುಂದೂಡಲಾಗುತ್ತಿತ್ತು. ಕಾರಣ ರಣ್‍ವೀರ್ ಸಿಂಗ್, ಟ್ಯಾಟೂ ತೆಗೆಸುವಂತೆ ಹೇಳಿದರೂ ದೀಪಿಕಾ ಒಪ್ಪುತ್ತಿರಲಿಲ್ಲವಂತೆ. ಈ ಕಾರಣದಿಂದಲೇ ಇಬ್ಬರ ಮಧ್ಯೆ ಜಗಳ ಸಹ ನಡೆಯುತ್ತಿತ್ತು ಎಂಬ ಮಾತುಗಳು ಬಾಲಿವುಡ್ ಅಂಗಳದಲ್ಲಿ ಕೇಳಿ ಬಂದಿದ್ದವು. ಕೊನೆಗೂ ದೀಪಿಕಾ ತಮ್ಮ ಮಾಜಿ ಪ್ರಿಯಕರ ಹೆಸರಿನ ಟ್ಯಾಟೂ ತೆಗೆಸಿಕೊಂಡಿದ್ದಾರೆ.

    ಲವ್ವರ್ ಬಾಯ್ ಆದ ರಣ್‍ಬೀರ್?
    ಇತ್ತ ದೀಪಿಕಾರಿಂದ ದೂರವಾದ ರಣ್‍ಬೀರ್ ಹೆಸರು ಕತ್ರಿನಾ ಕೈಫ್ ಜೊತೆ ತಳುಕು ಹಾಕಿಕೊಂಡಿತ್ತು. ವಿದೇಶದಲ್ಲಿ ಇಬ್ಬರು ಬೀಚ್ ನಲ್ಲಿ ಸುತ್ತಾಡಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಈ ಕುರಿತು ಸ್ಪಷ್ಟನೆ ನೀಡಿದ ಕತ್ರಿನಾ, ನಾವಿಬ್ಬರು ಒಳ್ಳೆಯ ಫ್ರೆಂಡ್ಸ್ ಅಂತಾ ಹೇಳುವ ಮೂಲಕ ಎಲ್ಲ ಗೊಂದಲಗಳಿಗೆ ತೆರೆ ಎಳೆದು ರಣ್‍ಬೀರ್ ನಿಂದ ದೂರವಾದರು. ಇತ್ತ ರಣ್‍ಬೀರ್ ಮತ್ತು ಪಾಕಿಸ್ತಾನಿ ನಟಿ ಮಹೀರಾ ಖಾನ್ ಇಬ್ಬರ ಬಗ್ಗೆ ಲವ್ ಗಾಸಿಪ್ ಗಳು ಕೇಳಿ ಬಂದಿತ್ತು. ಸದ್ಯ ರಣ್‍ಬೀರ್ ಬಹುತಾರಾಗಣವುಳ್ಳ ‘ಬ್ರಹ್ಮಾಸ್ತ್ರ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

    ತಮ್ಮ ಮೊದಲ ಸಿನಿಮಾ ಬಿಡುಗಡೆಯಾದ ದಿನವೇ (ನವೆಂಬರ್ 14 ಮತ್ತು 15) ರಣ್‍ವೀರ್ ಮತ್ತು ದೀಪಿಕಾ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಬುಧವಾರ ಬೆಂಗಳೂರಿನ ಲೀಲಾ ಪ್ಯಾಲೇಸ್ ನಲ್ಲಿ ಆರತಕ್ಷತೆ ಕಾರ್ಯಕ್ರಮ ಸಹ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv