Tag: Ranaveer sing

  • ರಣವೀರ್ ಜತೆ ಕಾಣಿಸಿಕೊಂಡ ಕಿಚ್ಚ ಸುದೀಪ್!

    ರಣವೀರ್ ಜತೆ ಕಾಣಿಸಿಕೊಂಡ ಕಿಚ್ಚ ಸುದೀಪ್!

    ಮುಂಬೈ: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಾಲಿವುಡ್ ನಟ ರಣವೀರ್ ಸಿಂಗ್ ಜೊತೆ ತೆಗೆಸಿಕೊಂಡಿರುವ ಫೋಟೋ ಸಾಕಷ್ಟು ಸದ್ದು ಮಾಡುತ್ತಿದೆ.

    ಹೌದು, ಕಿಚ್ಚ ಸುದೀಪ್ ಕರ್ನಾಟಕ ಮಾತ್ರವಲ್ಲದೇ ಪರಭಾಷೆಯಲ್ಲಿಯೂ ಜನಪ್ರಿಯತೆಯನ್ನು ಗಳಿಸಿದ್ದಾರೆ. ಅಲ್ಲದೇ ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಅವರು ಸಾಕಷ್ಟು ಸ್ನೇಹಿತರನ್ನೂ ಹೊಂದಿದ್ದಾರೆ.

    ಸದ್ಯ ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯಿಸುತ್ತಿರುವ ಸಿಂಬಾ ಚಿತ್ರ ತಂಡದ ಶೂಟಿಂಗ್ ವೇಳೆ ಭೇಟಿ ನೀಡಿ, ಸುದೀಪ್ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. ಅಲ್ಲದೇ ಚಿತ್ರದ ನಿರ್ದೇಶಕ ರೋಹಿತ್ ಶೆಟ್ಟಿ ಮತ್ತು ರಣವೀರ್ ಜೊತೆ ಫೋಟೋ ತೆಗೆದು ತಮ್ಮ ಟ್ವಿಟ್ಟರ್‍ನಲ್ಲಿ ಹಾಕಿಕೊಂಡಿದ್ದರು. ಕಿಚ್ಚ ಬಾಲಿವುಡ್ ನಟ ರಣವೀರ್ ಜೊತೆ ಹಾಕಿರುವ ಫೋಟೋ ಸಖತ್ ವೈರಲ್ ಆಗಿದ್ದು, ಅಭಿಮಾನಿಗಳು ಮತ್ತೆ ಸುದೀಪ್ ಬಾಲಿವುಡ್‍ನಲ್ಲಿ ನಟಿಸುತ್ತಾರಾ ಎಂದು ಪ್ರಶ್ನಿಸುತ್ತಿದ್ದಾರೆ.

    ತಮ್ಮ ಟ್ವಿಟ್ಟರ್ ನಲ್ಲಿ, ಸಹಜ ವ್ಯಕ್ತಿತ್ವ ಹೊಂದಿರುವ ರಣವೀರ್ ಹಾಗೂ ಎನರ್ಜಿ ಪ್ಯಾಕ್ ನಿರ್ದೇಶಕ ರೋಹಿತ್ ಶೆಟ್ಟಿ ಭೇಟಿ ಮಾಡಿದೆ. ತುಂಬು ಹೃದಯದ ಸ್ವಾಗತ ಕೋರಿದ ಎಲ್ಲರಿಗೂ ನನ್ನ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.

    ಸಿಂಬಾ ಸಿನಿಮಾದ ಶೂಟಿಂಗ್ ಸೆಟ್ ನಲ್ಲಿ ಚಿತ್ರ ತಂಡದ ಜೊತೆ ಮಾತುಕತೆ ನಡೆಸಿ, ನಟ ರಣವೀರ್ ಸಿಂಗ್ ಹಾಗೂ ನಿರ್ದೇಶಕ ರೋಹಿತ್ ಶೆಟ್ಟಿ ಅವರೊಂದಿಗೆ ಫೋಟೋ ತೆಗೆದುಕೊಂಡು ಚಿತ್ರಕ್ಕೆ ಶುಭ ಹಾರೈಸಿದರು. ಸಿಂಬಾ ಚಿತ್ರದಲ್ಲಿ ರಣವೀರ್ ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv