Tag: rana

  • ತೆಳ್ಳಗಾದ ಫೋಟೋ ಹಂಚಿಕೊಂಡ ಬಾಹುಬಲಿಯ ‘ಬಲ್ಲಾಳ ದೇವ’

    ತೆಳ್ಳಗಾದ ಫೋಟೋ ಹಂಚಿಕೊಂಡ ಬಾಹುಬಲಿಯ ‘ಬಲ್ಲಾಳ ದೇವ’

    ಹೈದರಾಬಾದ್: ಬಾಹುಬಲಿ ಬಲ್ಲಾಳ ದೇವ ಖ್ಯಾತಿಯ ನಟ ರಾಣಾ ದಗ್ಗುಬಾಟಿ ಅವರ ಇತ್ತೀಚಿನ ಪೋಸ್ಟ್ ಕಂಡ ಅಭಿಮಾನಿಗಳಿಗೆ ಶಾಕ್ ಆಗಿದ್ದು, ಫೋಟೋದಲ್ಲಿ ರಾಣಾ ತೀರ ತೆಳ್ಳಗೆ ಕಾಣುತ್ತಿದ್ದಾರೆ.

    ರಾಣಾ ಅವರೇ ತಮ್ಮ ಫೋಟೋವನ್ನು ಜಾಹೀರಾತಿನ ಉದ್ದೇಶದಿಂದ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದು, ಈ ಫೋಟೋವನ್ನು ಗಮನಿಸಿದ ಅಭಿಮಾನಿಗಳು ರಾಣಾ ಪೋಸ್ಟ್ ಗೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿದಿದ್ದಾರೆ.

    ಕಳೆದ ಜುಲೈನಲ್ಲಿ ರಾಣಾ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಎಂಬ ಸುದ್ದಿ ಕೇಳಿತ್ತು. ಈ ಸಂದರ್ಭದಲ್ಲಿ ಅವರು ಕಿಡ್ನಿ ಶಸ್ತ್ರಚಿಕಿತ್ಸೆ ಒಳಗಾಗಿದ್ದಾರೆ ಎನ್ನಲಾಗಿತ್ತು. ಅಲ್ಲದೇ ಅವರಿಗೆ ಅಮೆರಿಕಾದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ರಾಣಾರ ತಾಯಿ ಅವರೇ ಅವರಿಗೆ ಕಿಡ್ನಿದಾನ ಮಾಡಿದ್ದಾರೆ ಎಂಬ ಸುದ್ದಿಗಳು ಬಾರಿ ಪ್ರಮಾಣದಲ್ಲಿ ಕೇಳಿ ಬಂದಿದ್ದವು.

    ಆ ಬಳಿಕ 34 ವರ್ಷದ ರಾಣಾ ಸುದ್ದಿ ವಾಹಿನಿಯೊಂದಿಗೆ ಮಾತನಾಡುತ್ತಾ ಇಂತಹ ಎಲ್ಲಾ ಸುದ್ದಿಗಳು ಸುಳ್ಳು ಎಂದು ಹೇಳುವ ಮೂಲಕ ಅಲ್ಲಗೆಳೆದಿದ್ದರು. ಅಲ್ಲದೇ ತಾನು ಆರೋಗ್ಯದಿಂದ ಇರುವುದಾಗಿ ತಿಳಿಸಿದ್ದರು. ಇದೇ ಸಂದರ್ಭದಲ್ಲಿ ತಮ್ಮ ಆರೋಗ್ಯದ ಬಗ್ಗೆ ಆತಂಕಗೊಂಡಿದ್ದ ಅಭಿಮಾನಿಗಳ ಪ್ರೀತಿಗೆ ಧನ್ಯವಾದ ಎಂದು ತಿಳಿಸಿದ್ದರು.

    https://www.instagram.com/p/B3B8U6FjXjC/

    ಬಾಹುಬಲಿ ಸಿನಿಮಾಗಾಗಿ ದೇಹ ದಂಡಿಸಿ ಸಿಕ್ಸ್ ಪ್ಯಾಕ್ ಮಾಡುವ ಮೂಲಕ ರಾಣಾ ಭಾರತ ಸಿನಿರಂಗದ ಅಭಿಮಾನಿಗಳ ಗಮನ ಸೆಳೆದಿದ್ದರು. ಆದರೆ ಸದ್ಯದ ಅವರ ಫೋಟೋ ಬಗ್ಗೆ ಅಭಿಮಾನಿಗಳು ಸಾಕಷ್ಟು ಪ್ರಶ್ನೆಗಳನ್ನು ಮುಂದಿಟ್ಟಿದ್ದರು. ಇದುವರೆಗೂ ರಾಣಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

  • ತಾಯಿಯಿಂದಲೇ ಮಗ ದಗ್ಗುಬಾಟಿಗೆ ಕಿಡ್ನಿ ದಾನ

    ತಾಯಿಯಿಂದಲೇ ಮಗ ದಗ್ಗುಬಾಟಿಗೆ ಕಿಡ್ನಿ ದಾನ

    ಹೈದರಾಬಾದ್: ಬಾಹುಬಲಿ ಚಿತ್ರದಲ್ಲಿ ಬಲ್ಲಾಳದೇವನಾಗಿ ಮಿಂಚಿದ್ದ ರಾಣಾ ದಗ್ಗುಬಾಟಿಗೆ ಅವರ ತಾಯಿಯೇ ಕಿಡ್ನಿ ದಾನ ಮಾಡಿದ್ದಾರೆ.

    ತೆಲುಗು ಮಾತ್ರವಲ್ಲದೆ ಬೇರೆ ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿರುವ ರಾಣಾ ದಗ್ಗುಬಾಟಿ ಕಳೆದ ಒಂದು ವರ್ಷದಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಹೈದರಾಬಾದ್ ಮತ್ತು ಮುಂಬೈ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಆದರೆ, ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಚಿಕಾಗೋಗೆ ತನ್ನ ಕುಟುಂಬಸ್ಥರೊಂದಿಗೆ ತೆರಳಿದ್ದರು.

    ಕಿಡ್ನಿ ಸಮಸ್ಯೆ ಇರುವ ಕಾರಣ ರಾಣಾ ದಗ್ಗುಬಾಟಿ ಗೆ ಕಿಡ್ನಿ ಕಸಿ ಅಗತ್ಯವಿದ್ದು ಅವರ ತಾಯಿ ಲಕ್ಷ್ಮಿ ಅವರೇ ಮೂತ್ರಪಿಂಡ ದಾನಕ್ಕೆ ಮುಂದಾಗಿದ್ದಾರೆ. ಸದ್ಯ ರಾಣಾ ಅವರ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ರಾಣಾ ಅವರು ಅಪಾಯದಿಂದ ಪಾರಾಗಿರುವುದರಿಂದ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

    ರಾಣಾ ಅವರು ಸರಿ ಸುಮಾರು 1 ತಿಂಗಳು ವಿಶ್ರಾಂತಿಯಲ್ಲಿರಬೇಕಾಗುತ್ತದೆ. ಹೀಗಾಗಿ ಅವರು ಸೆಪ್ಟೆಂಬರ್ ನಿಂದ ಮತ್ತೆ ಶೂಟಿಂಗ್ ನಲ್ಲಿ ತೊಡಗಿಕೊಳ್ಳಲಿದ್ದಾರೆ. ವೇಣು ಉಡುಗಲ ಅವರ ನಿರ್ದೇಶನದ `ವಿರಾಟ ಪರ್ವಂ’ ಚಿತ್ರದಲ್ಲಿ ರಾಣಾ ಅಭಿನಯಿಸುತ್ತಿದ್ದಾರೆ.

  • ಹಲ್ಲೆ ಪ್ರಕರಣ – ಎಎಪಿ ಶಾಸಕನಿಗೆ 6 ತಿಂಗಳು ಜೈಲು ಶಿಕ್ಷೆ

    ಹಲ್ಲೆ ಪ್ರಕರಣ – ಎಎಪಿ ಶಾಸಕನಿಗೆ 6 ತಿಂಗಳು ಜೈಲು ಶಿಕ್ಷೆ

    ನವದೆಹಲಿ: ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಆಮ್ ಆದ್ಮಿ ಪಕ್ಷದ ಶಾಸಕ ಸೋಮ್ ದತ್ ಅವರಿಗೆ ಆರು ತಿಂಗಳ ಜೈಲು ಶಿಕ್ಷೆ ಹಾಗೂ 2 ಲಕ್ಷ ರೂ. ದಂಡ ವಿಧಿಸಿ ದೆಹಲಿ ಕೋರ್ಟ್ ಆದೇಶ ಹೊರಡಿಸಿದೆ.

    ಸೋಮ್ ದತ್ ದಹಲಿಯ ಸದರ್ ಬಜಾರ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಹಾಲಿ ಎಎಪಿ ಶಾಸಕರನ್ನು ಶಿಕ್ಷೆಗೆ ಗುರಿಪಡಿಸಿರುವುದರ ಪೈಕಿ ಇದು ವಾರದಲ್ಲಿ ನಡೆದ ಎರಡನೆಯ ಪ್ರಕರಣವಾಗಿದೆ. ಈ ಹಿಂದೆ ಮತದಾನಕ್ಕೆ ಅಡ್ಡಿ ಪಡಿಸಿದ ಆರೋಪದ ಸಂಬಂಧ ಎಎಪಿ ಶಾಸಕ ಮನೋಜ್ ಕುಮಾರ್ ಅವರಿಗೆ ಮೂರು ತಿಂಗಳು ಶಿಕ್ಷೆ ವಿಧಿಸಿತ್ತು.

    ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸಮರ್ ವಿಶಾಲ್ ಅವರು ಜೂನ್ 29ರಂದು ಸೋಮ್ ದತ್ ಮೇಲಿನ ಆರೋಪ ಸಾಬೀತಾಗಿ ದೋಷಿ ಎಂದು ತೀರ್ಪು ನೀಡಿದ್ದರು.

    2015ರ ಜನವರಿಯಲ್ಲಿ ಮಾಜಿ ಶಾಸಕರಾಗಿದ್ದ ಸೋಮ್ ದತ್ ಬೇಸ್ ಬಾಲ್ ಬ್ಯಾಟ್‍ನಿಂದ ದೂರುದಾರರಾದ ಸಂಜೀವ್ ರಾಣಾ ಮೇಲೆ ಹಲ್ಲೆ ನಡೆಸಿದ್ದರು.

    ಸಂಜೀವ್ ರಾಣಾ ಅವರು ದೂರಿನಲ್ಲಿ, 2015ರ ಜನವರಿಯಲ್ಲಿ ಸೋಮ್ ದತ್ ಹಾಗೂ ಇತರೆ 50-60 ಜನ ಗುಲಾಬಿ ಬಾಗ್‍ನ ನಮ್ಮ ಫ್ಲ್ಯಾಟ್‍ಗೆ ಆಗಮಿಸಿ ಪದೆ ಪದೇ ಮನೆಯ ಡೋರ್‍ನ ಬೆಲ್ ಮಾಡಿದರು. ಬೆಲ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ದತ್ ಬೇಸ್ ಬಾಲ್ ಬ್ಯಾಟ್‍ನಿಂದ ಕಾಲಿಗೆ ಹೊಡೆದು ಹಲ್ಲೆ ಮಾಡಿದ್ದಾರೆ. ಸೋಮ್ ದತ್‍ನ ಜೊತೆಗಿದ್ದ ನನ್ನನ್ನು ರಸ್ತೆಗೆ ಎಳೆದು ಮುಷ್ಠಿಯಿಂದ ಗುದ್ದಿ, ಒದ್ದಿದ್ದಾರೆ ನಂತರ ನಾನು ಪ್ರಜ್ಞಾಹೀನನಾಗಿದ್ದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.

    ಕೋರ್ಟ್ ಮುಂದೆ ವಾದ ಮಂಡಿಸುವ ವೇಳೆ ದತ್, ರಾಜಕೀಯ ದುರುದ್ದೇಶದಿಂದ ನನ್ನ ಮೇಲೆ ದೂರು ನೀಡಿದ್ದಾರೆ. ರಾಣಾ ಬಿಜೆಪಿ ಸದಸ್ಯರಾಗಿದ್ದು, ವಿಧಾನಸಭೆ ಚುನಾವಣೆಗೆ ನನಗೆ ಟಿಕೆಟ್ ತಪ್ಪಿಸಲು ಈ ರೀತಿ ಷಡ್ಯಂತ್ರ ನಡೆಸಿದ್ದಾರೆ ಎಂದು ಆರೋಪಿಸಿದ್ದರು.

    ದತ್ ಆರೋಪಕ್ಕೆ ರಾಣಾ ಅವರು, ನಾನು ಯಾವುದೇ ರಾಜಕೀಯ ಪಕ್ಷದ ಜೊತೆ ಗುರುತಿಸಿಕೊಂಡಿಲ್ಲ ಎಂದಿದ್ದಾರೆ. ಪ್ರಕರಣಕ್ಕೆ ಸಾಕ್ಷ್ಯ ನುಡಿದ ಸುನಿಲ್ ಅವರು ಈ ಕುರಿತು ಹೇಳಿಕೆ ನೀಡಿ, ಸೋಮ್ ದತ್ ಬೇಸ್ ಬಾಲ್‍ನ ಬ್ಯಾಟ್ ಹಿಡಿದು ರಾಣಾ ಅವರ ಕಾಲಿಗೆ ಹೊಡೆದಿದ್ದನ್ನು ನೋಡಿದ್ದೇನೆ ಎಂದು ತಿಳಿಸಿದ್ದಾರೆ.

    2015ರ ಜನವರಿ 10 ರಂದು ನಡೆದ ಘಟನೆಯ ಬಗ್ಗೆ ಯಾವುದೇ ಅನುಮಾನವಿಲ್ಲ. ಅಂದು ರಾತ್ರಿ 8 ಗಂಟೆಯ ವೇಳೆ ದತ್ 50 ಮಂದಿ ಬೆಂಬಲಿಗರ ಜೊತೆ ಫ್ಲ್ಯಾಟ್ ನಂಬರ್ 13ಕ್ಕೆ ತೆರಳಿ ಸಂತ್ರಸ್ತನ ಮೇಲೆ ಹಲ್ಲೆ ನಡೆಸಿದೆ ವಿಚಾರಣೆ ವೇಳೆ ಸಾಬೀತಾಗಿದೆ ಎಂದು ಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.

  • ಲೇಟಾಗದ್ರು ‘ಕೆಜಿಎಫ್’ಗೆ ಫಿದಾ ಆದ ಬಾಹುಬಲಿ ನಟ

    ಲೇಟಾಗದ್ರು ‘ಕೆಜಿಎಫ್’ಗೆ ಫಿದಾ ಆದ ಬಾಹುಬಲಿ ನಟ

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿಯಾನದ ಕೆಜಿಎಫ್ ಸಿನಿಮಾ ಬಿಡುಗಡೆಯಾಗಿ ಭಾರತದಲ್ಲಿ ಮಾತ್ರವಲ್ಲದೇ ದೇಶ ವಿದೇಶದಲ್ಲೂ ಹಲವು ದಾಖಲೆಗಳನ್ನು ನಿರ್ಮಿಸಿದೆ. ದೇಶದ ಹಲವು ಸಿನಿಮಾ ಸ್ಟಾರ್ ನಟರು ಸಿನಿಮಾ ವಿಕ್ಷೀಸಿ ಶುಭಾ ಕೂಡ ಕೋರಿದ್ದರು. ಆದರೆ ತಡವಾಗಿ ಆದ್ರು ಬಾಹುಬಲಿ ನಟ ರಾಣಾ ದಗ್ಗುಬಾಟಿ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿರುವ ರಾಣಾ, ಕೊನೆಗೂ ಕೆಜಿಎಫ್ ಸಿನಿಮಾ ನೋಡುವ ಅವಕಾಶ ಲಭಿಸಿತ್ತು. ಆದರೆ ತಡವಾಗಿದೆ ಎಂದು ನನಗೆ ಗೊತ್ತಿದೆ. ಚಿತ್ರ ಉತ್ತಮವಾಗಿ ಮೂಡಿ ಬಂದಿದೆ. ನಿರ್ದೇಶಕರಾದ ಪ್ರಶಾಂತ್ ನೀಲ್, ಯಶ್, ಅವರಿಗೆ ಶುಭಾಶಯ. ಚಿತ್ರದ ಧೀರ ಧೀರ ಸುಲ್ತಾನ ಹಾಡು ಇಷ್ಟ ಆಯ್ತು ಎಂದು ಬರೆದುಕೊಂಡಿದ್ದಾರೆ.

    ಕೆಜಿಎಫ್ ಸಿನಿಮಾ 50 ದಿನಗಳನ್ನು ಪೂರೈಸಿ ಮುನ್ನುಗುತ್ತಿದ್ದು, ಸದ್ಯ ಅಮೆಜಾನ್ ಪ್ರೈಮ್ ನಲ್ಲಿ ಸಿನಿಮಾ ನೋಡಲು ಲಭ್ಯವಿದೆ. ಕನ್ನಡ, ತೆಲುಗು, ತಮಿಳು, ಮಲಯಾಲಂ, ಹಿಂದಿ ಭಾಷೆಯಲ್ಲಿ ಕೆಜಿಎಫ್ ಬಿಡುಗಡೆಯಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

     

  • ಜಾರ್ಜ್ ಮಗನ ಮೇಲೆ ಸಿಎಂಗೆ ಫುಲ್ ಲವ್ – ಕಾಡಲ್ಲಿ ಸ್ವಂತ ವಾಹನದಲ್ಲಿ ಸವಾರಿಗೆ ಪರ್ಮಿಷನ್

    ಜಾರ್ಜ್ ಮಗನ ಮೇಲೆ ಸಿಎಂಗೆ ಫುಲ್ ಲವ್ – ಕಾಡಲ್ಲಿ ಸ್ವಂತ ವಾಹನದಲ್ಲಿ ಸವಾರಿಗೆ ಪರ್ಮಿಷನ್

    ಬೆಂಗಳೂರು: ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್ ಮಗನ ಮೇಲೆ ಸಿಎಂ ಸಿದ್ದರಾಮಯ್ಯಗೆ ಫುಲ್ ಲವ್ವು. ಕೆಜೆ ಜಾರ್ಜ್ ಪುತ್ರ ರಾಣಾ ತನ್ನ ಸ್ವಂತ ವಾಹನದಲ್ಲಿ ಕಾಡಿನೊಳಗೆ ಸವಾರಿ ಮಾಡೋಕೆ ಸಿಎಂ ಸಿದ್ದರಾಮಯ್ಯ ಪರ್ಮಿಷನ್ ಕೊಟ್ಟಿದ್ದಾರೆ.

    ತನ್ನ ಆಪ್ತನ ಮಗನ ಸವಾರಿಗಾಗಿ ಅನುಮತಿ ಪತ್ರವನ್ನ ಅರಣ್ಯ ಇಲಾಖೆಗೆ ಸಿಎಂ ಸಿದ್ದರಾಮಯ್ಯ ರವಾನಿಸಿದ್ದಾರೆ. ಕೇಂದ್ರ ಪರಿಸರ ಇಲಾಖೆ ಬೇಡ ಅಂದ್ರೂ ತಲೆ ಕೆಡಿಸಿಕೊಳ್ಳದೇ ಮತ್ತೆ ಸಿಎಂ ಅನುಮತಿ ನೀಡಿದ್ದಾರೆ.

     

    ಕಾಡಿನೊಳಗೆ ಸ್ವಂತ ವಾಹನದಲ್ಲಿ ಸವಾರಿಗೆ ರಾಣಾ ಸಿಎಂ ಕಚೇರಿಯಿಂದ ಅನುಮತಿ ಕೇಳಿದ್ರು. ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಕೇಂದ್ರಕ್ಕೆ ಮಾಹಿತಿ ಹೋದಾಗ ಯಾರಿಗೂ ಸ್ವಂತ ವಾಹನದಲ್ಲಿ ಹೋಗೋದಕ್ಕೆ ಅನುಮತಿ ಇಲ್ಲ ಅಂತಾ ಖಡಕ್ ಆದೇಶ ಕೊಟ್ಟಿದೆ. ಆದರೆ ಇದಕ್ಕೆ ಸೊಪ್ಪು ಹಾಕದ ಸಿಎಂ ಸಿದ್ದರಾಮಯ್ಯ ತನ್ನ ಆಪ್ತನ ಮಗನ ಸವಾರಿಗೆ ಯಾರ್ರೀ ಅಡ್ಡಿ ಮಾಡೋದು, ನೀನು ಹೋಗಿ ಬಾ ಕಂದ ಅಂತಾ ಅನುಮತಿ ಪತ್ರವನ್ನು ಅರಣ್ಯ ಇಲಾಖೆಗೆ ರವಾನಿಸಿದ್ದಾರೆ.

    ಈ ಹಿಂದೆ ರಾಣಾ ಕಾಡಲ್ಲಿ ಸ್ನೇಹಿತರ ಜೊತೆ ಹೋಗಿ ಗುಂಡು ಪಾರ್ಟಿ ಮಾಡಿ ವಿವಾದಕ್ಕೀಡಾಗಿದ್ರು. ಈಗ ಬೋರ್ಡ್ ಮೆಂಬರ್ ಆಗಿರುವ ರಾಣಾಗೆ ಗ್ರೀನ್ ಸಿಗ್ನಲ್ ಸಿಎಂ ಕಡೆಯಿಂದಲೇ ಸಿಕ್ಕಿದೆ.

     

    ಇದನ್ನೂ ಓದಿ: ಬೆಂಗಳೂರಿಗೆ ಸಚಿವ ಕೆ.ಜೆ. ಜಾರ್ಜ್ ರಾಜನಾದ್ರೆ, ಮಗ ಕಾಡಿಗೆ ರಾಜ!