Tag: Ramzan festival

  • ಯುಗಾದಿ, ರಂಜಾನ್‌ ಹಬ್ಬದ ಹಿನ್ನೆಲೆ ಮಾ.31ರ ವರೆಗೆ ವಿಶೇಷ ಬಸ್‌ – ಇಲ್ಲಿದೆ ಡಿಟೇಲ್ಸ್‌

    ಯುಗಾದಿ, ರಂಜಾನ್‌ ಹಬ್ಬದ ಹಿನ್ನೆಲೆ ಮಾ.31ರ ವರೆಗೆ ವಿಶೇಷ ಬಸ್‌ – ಇಲ್ಲಿದೆ ಡಿಟೇಲ್ಸ್‌

    ಬೆಂಗಳೂರು: ಯುಗಾದಿ ಹಬ್ಬದ ಪ್ರಯುಕ್ತ ಕೆಎಸ್‌ಆರ್‌ಟಿಸಿ (KSRTC) ವತಿಯಿಂದ 2,000 ಹೆಚ್ಚುವರಿ ಬಸ್‌ಗಳ ವಿಶೇಷ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಈ ವಿಶೇಷ ಬಸ್‌ಗಳು ಮಾರ್ಚ್‌ 28, 29 ಹಾಗೂ 30 ರಂದು ಮೂರು ದಿನ ಬೆಂಗಳೂರಿನಿಂದ (Bengaluru) ರಾಜ್ಯ, ಹೊರ ರಾಜ್ಯದ ಪ್ರಮುಖ ಸ್ಥಳಗಳಿಗೆ ಸಂಚಾರ ನಡೆಸಲಿವೆ.

    ಈ ಬಗ್ಗೆ ಕೆಎಸ್‌ಆರ್‌ಟಿಸಿ ಪ್ರಕಟಣೆ ನೀಡಿದ್ದು, ಮಾರ್ಚ್‌ 30 ರಂದು ಚಂದ್ರಮಾನ ಯುಗಾದಿ, ಮಾರ್ಚ್‌ 31 ರಂದು ರಂಜಾನ್ ಹಬ್ಬವಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿನಿಂದ ಪ್ರಯಾಣಿಕರು ತಮ್ಮ ಊರುಗಳಿಗೆ ಸಂಚಾರ ನಡೆಸುತ್ತಾರೆ. ಇವರ ಅನುಕೂಲಕ್ಕಾಗಿ ವಿಶೇಷ ಬಸ್‌ ವ್ಯವಸ್ಥೆ ಮಾಡಲಾಗಿದೆ. ಈ ಹೆಚ್ಚುವರಿ ಬಸ್‌ಗಳು ಮೆಜೆಸ್ಟಿಕ್, ಶಾಂತಿನಗರ, ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಕಾರ್ಯಾಚರಣೆ ನಡೆಸಲಿವೆ. ಇದನ್ನೂ ಓದಿ: ಅಮೆರಿಕ ಜೊತೆಗಿನ ಹಳೆಯ ಸಂಬಂಧಗಳು ಮುಗಿದಿವೆ – ಸುಂಕದ ಬರೆ ಬೆನ್ನಲ್ಲೇ ಕೆನಡಾ ಪ್ರಧಾನಿ ಹೇಳಿಕೆ

    ಮೆಜೆಸ್ಟಿಕ್‌ನಿಂದ…
    ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್, ತಿರುಪತಿ, ವಿಜಯವಾಡ, ಹೈದರಾಬಾದ್ ಮುಂತಾದ ಸ್ಥಳಗಳಿಗೆ ಈ ವಿಶೇಷ ಬಸ್‌ ಸಂಚರಿಸಲಿವೆ. ಇದನ್ನೂ ಓದಿ: ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಬಲಿ – ಗಂಡನ ಹಿಂಸೆ ತಾಳಲಾರದೆ ತವರು ಸೇರಿದ್ದ ಪತ್ನಿ

    ಸ್ಯಾಟಲೈಟ್‌ ಬಸ್‌ ನಿಲ್ದಾಣದಿಂದ
    ಮಂಡ್ಯ,ರಾಮನಗರ, ಕುಶಾಲನಗರ, ಚಾಮರಾಜನಗರ, ಕೊಡಗು, ವೀರಾಜಪೇಟೆ, ಪಿರಿಯಾಪಟ್ಟಣಕ್ಕೆ ಬಸ್ ಗಳು ಲಭ್ಯವಿರಲಿದೆ. ಇದನ್ನೂ ಓದಿ: ಪತ್ನಿ ತುಂಡರಿಸಿ ಸೂಟ್‍ಕೇಸ್‍ಗೆ ತುಂಬಿ, ಪುಣೆಯಲ್ಲಿ ವಿಷ ಸೇವಿಸಿದ್ದ ಹಂತಕ!

    ಶಾಂತಿನಗರ ಬಸ್ ನಿಲ್ದಾಣದಿಂದ
    ತಮಿಳುನಾಡು ಮತ್ತು ಕೇರಳ ಕಡೆಗೆ ಅಂದರೆ ಮಧುರೈ, ಕುಂಭಕೋಣ, ಚೆನ್ನೈ, ಕೊಯಮತ್ತೂರ್, ತಿರುಚಿ, ಪಾಲಕ್ಕಾಡ್, ತ್ರಿಶೂರ್, ಏರ್ನಾಕುಲಂ, ಕೋಝಿಕೋಡ್, ಕ್ಯಾಲಿಕಟ್ ಮುಂತಾದ ಸ್ಥಳಗಳಿಗೆ ಹೋಗುವ ಪ್ರತಿಷ್ಠಿತ ಸಾರಿಗೆಗಳನ್ನು ಶಾಂತಿನಗರದಲ್ಲಿನ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಿಂದ ವಿಶೇಷ ಬಸ್‌ಗಳು ಕಾರ್ಯಾಚರಣೆ ಮಾಡಲಿವೆ.

  • ರಂಜಾನ್‌ ಹಬ್ಬದ ಸಮಯದಲ್ಲಿ 1 ತಿಂಗಳು ಉಪವಾಸ ಮಾಡುವುದೇಕೆ? ಖರ್ಜೂರ ತಿಂದು ಉಪವಾಸ ಮುರಿಯುವುದರ ಹಿಂದಿನ ಕಾರಣವೇನು?

    ರಂಜಾನ್‌ ಹಬ್ಬದ ಸಮಯದಲ್ಲಿ 1 ತಿಂಗಳು ಉಪವಾಸ ಮಾಡುವುದೇಕೆ? ಖರ್ಜೂರ ತಿಂದು ಉಪವಾಸ ಮುರಿಯುವುದರ ಹಿಂದಿನ ಕಾರಣವೇನು?

    ಮುಸ್ಲಿಮರ ಪವಿತ್ರ ಹಬ್ಬಗಳ ಪೈಕಿ ಒಂದಾದ ರಂಜಾನ್ ಹಬ್ಬದ ಆಚರಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಮರು ಉಪವಾಸ ವೃತಗಳನ್ನು ಕೈಗೊಳ್ಳುತ್ತಾರೆ. ಈಗಾಗಲೇ ಮುಸ್ಲಿಂ ಬಾಂಧವರು ಈ ವರ್ಷದ ರಂಜಾನ್ ಹಬ್ಬಕ್ಕೆ ಉಪವಾಸ ವೃತವನ್ನು ಆರಂಭಿಸಿದ್ದಾರೆ. ಈ ಸಮಯದಲ್ಲಿ, ಮುಸ್ಲಿಮರು ಒಂದು ತಿಂಗಳ ಕಾಲ ಉಪವಾಸ ಮಾಡುತ್ತಾರೆ ಮತ್ತು ಸೂರ್ಯೋದಯ ಮತ್ತು ಸೂರ್ಯಾಸ್ತದ ನಡುವಿನ ಸಮಯದಲ್ಲಿ ತಿನ್ನುವುದಿಲ್ಲ. ಹಾಗಿದ್ರೆ ರಂಜನ್‌ ಹಬ್ಬದ ಸಮದಲ್ಲಿ 1 ತಿಂಗಳು ಉಪವಾಸ ಮಾಡುವುದರ ಹಿಂದಿನ ಮಹತ್ವವೇನು? ಉಪವಾಸ ಮುಗಿದ ಬಳಿಕ ಮುಸ್ಲಿಂ ಬಾಂಧವರು ಖರ್ಜೂರ ತಿನ್ನುವುದೇಕೆ ಎಂಬುದರ ಕುರಿತು ಇಲ್ಲಿ ವಿವರಿಸಲಾಗಿದೆ.

    ಉಪವಾಸ ಮಾಡುವುದೇಕೆ?
    ಈ ತಿಂಗಳಲ್ಲಿ ಪ್ರವಾದಿ ಮೊಹಮ್ಮದ್ ಪವಿತ್ರ ಕುರಾನ್‌ನ ಮೊದಲ ಸಿದ್ಧಾಂತಗಳನ್ನು ಸ್ವೀಕರಿಸಿದರು.ಪುರಾತನ ನಂಬಿಕೆಗಳ ಪ್ರಕಾರ, ಅರೇಬಿಯನ್ ನಗರ – ಮೆಕ್ಕಾ ನಿವಾಸಿ ಮುಹಮ್ಮದ್ ಎಂಬ ವ್ಯಕ್ತಿ ಗೇಬ್ರಿಯಲ್ ಎಂಬ ದೇವತೆಯ ಮೂಲಕ ಅಲ್ಲಾ ಅಥವಾ ದೇವರಿಂದ ಸಿದ್ಧಾಂತಗಳನ್ನು ಸ್ವೀಕರಿಸಲು ಪ್ರಾರಂಭಿಸಿದರು. ಈ ಸಂದೇಶಗಳನ್ನು 114 ಅಧ್ಯಾಯಗಳಲ್ಲಿ ಸಂಗ್ರಹಿಸಲಾಯಿತು, ಈ ಅಧ್ಯಾಯಗಳನ್ನು ನಂತರ ಒಂದು ಪುಸ್ತಕದಲ್ಲಿ ಸಂಯೋಜಿಸಲಾಯಿತು. ಅದುವೇ ಮುಸಲ್ಮಾನರ ಪವಿತ್ರ ಗ್ರಂಥ ಕುರಾನ್.

    ರಂಜಾನ್ ತಿಂಗಳಲ್ಲಿ ರೋಜಾ ಅಥವಾ ಉಪವಾಸಕ್ಕೆ ಅದರದೇ ಆದ ಮಹತ್ವವಿದೆ. ಸೂರ್ಯೋದಯಕ್ಕೆ ಮುಂಚಿನ ತಿಂಡಿಯನ್ನು ಸೋಹರ್ ಎಂದು ಕರೆಯಲಾಗುತ್ತದೆ ಮತ್ತು ಸೂರ್ಯಾಸ್ತದ ನಂತರ ಉಪವಾಸವನ್ನು ಮುಕ್ತಾಯಗೊಳಿಸುವ ಪ್ರಕ್ರಿಯೆಯನ್ನು ಇಫ್ತಾರ್ ಎಂದು ಕರೆಯಲಾಗುತ್ತದೆ. ಇನ್ನು ರಂಜಾನ್ ಸಮಯದಲ್ಲಿ ಕೇವಲ ದೇಹಕ್ಕೆ ಮಾತ್ರವಲ್ಲ ಮನಸ್ಸಿಗೂ ಉಪವಾಸ ಮಾಡಿಸಲಾಗುತ್ತದೆ. ಮುಸ್ಲಿಮರು ಉಪವಾಸದ ವೇಳೆ ಸಿಗರೇಟ್, ಮದ್ಯ, ತಂಬಾಕು ಸೇವನೆ, ಲೈಂಗಿಕ ಸಂಬಂಧವನ್ನು ಬೆಳೆಸುವುದನ್ನೂ ಕೂಡ ತಪ್ಪಿಸುತ್ತಾರೆ. ಏಕೆಂದರೆ ಉಪವಾಸದ ಸಮಯದಲ್ಲಿ ಇಂಥ ಚಟುವಟಿಕೆಗಳನ್ನು ಪಾಪ ಎಂದು ಪರಿಗಣಿಸಲಾಗುತ್ತದೆ. ರಂಜಾನ್ ತಿಂಗಳಲ್ಲಿ ಮುಸ್ಲಿಮರು ತಮ್ಮನ್ನು ಅಧ್ಯಾತ್ಮ ಪ್ರವೃತ್ತಿಗೆ ಅರ್ಪಿಸಿಕೊಳ್ಳುತ್ತಾರೆ.

    ರಂಜಾನ್ ತಿಂಗಳ ಉಪವಾಸವನ್ನು ಆರಾಧನೆಯ ಕ್ರಮವಾಗಿ ನೋಡಲಾಗುತ್ತದೆ. ಉಪವಾಸ ಮಾಡುವುದರಿಂದ ತಾವು ಮಾಡಿದ ಪಾಪಗಳನ್ನು ಕಳೆದುಕೊಂಡು ದೇವರಿಗೆ ಇನ್ನಷ್ಟು ಹತ್ತಿರವಾಗಬಹುದು ಎಂಬ ನಂಬಿಕೆಯಿದೆ. ಉಪವಾಸವು ಬಳಲುತ್ತಿರುವವರ ಕಡೆಗೆ ಹೆಚ್ಚು ಸಹಾನುಭೂತಿ ಹೊಂದಲು, ನಿಮ್ಮ ದಾನ ಕಾರ್ಯಗಳನ್ನು ಹೆಚ್ಚಿಸಲು, ತಾಳ್ಮೆಯನ್ನು ಕಲಿಯಲು ಮತ್ತು ಕೆಟ್ಟ ಅಭ್ಯಾಸಗಳನ್ನು ತೊರೆಯಲು ನೆನಪು ಮಾಡಿಕೊಡುತ್ತದೆ. ಪ್ರತಿ ದಿನವೂ ಸುಹೂರ್ ಎಂದು ಕರೆಯಲ್ಪಡುವ ಮುಂಜಾನೆಯ ಊಟದಿಂದ ಉಪವಾಸ ಪ್ರಾರಂಭವಾಗುತ್ತದೆ ಮತ್ತು ಪ್ರತಿ ಸಂಜೆ, ಇಫ್ತಾರ್ ಎಂಬ ಸಂಜೆಯ ಊಟದೊಂದಿಗೆ ಉಪವಾಸವನ್ನು ಮುರಿಯಲಾಗುತ್ತದೆ.

    ಹಸಿದ ಹೊಟ್ಟೆಯ ಕಷ್ಟ ಅದನ್ನು ಅನುಭವಿಸಿದವನಿಗೆ ಮಾತ್ರ ಗೊತ್ತು. ಅದಕ್ಕಾಗಿಯೇ ತಿಂಗಳುಗಳ ಕಾಲ ಉಪವಾಸವಿದ್ದು, ಹಸಿದವನ ಕಷ್ಟವನ್ನು ಸ್ವತ: ಅನುಭವಿಸಿ, ಹಸಿದವರ ಪಾಲಿಗೆ ನೆರವಾಗಬೇಕೆಂದು ಕೂಡ ಖುರಾನ್‌ ತಿಳಿಸುತ್ತದೆ. ಅಲ್ಲದೆ ಪ್ರತೀ ಕ್ಷಣವೂ ಅಕ್ರಮ ಅಧರ್ಮಗಳಿಂದ ದೂರ ಉಳಿದು ಧರ್ಮನಿಷ್ಟನಂತೆತೆ ಬದುಕಲು ಪ್ರೇರೇಪಿಸುತ್ತದೆ

    ಸಾಮಾನ್ಯವಾಗಿ ಮುಸ್ಲಿಮರು ತಮ್ಮ ಉಪವಾಸವನ್ನು ಖರ್ಜೂರ ಸೇವಿಸುವ ಮೂಲಕ ಪೂರ್ಣಗೊಳಿಸುತ್ತಾರೆ. 12 ರಿಂದ 17 ಗಂಟೆಗಳ ಕಠಿಣ ಉಪವಾಸದ ಬಳಿಕ ಮುಸ್ಲಿಮರು ಖರ್ಜೂರವನ್ನೇ ಸೇವಿಸುವುದರ ಹಿಂದೆ ದೊಡ್ಡ ಇತಿಹಾಸವೇ ಇದೆ.

    ಪಶ್ಚಿಮ ಏಷ್ಯಾಗಳಲ್ಲಿ ಈ ಸಮಯದಲ್ಲಿ ಖರ್ಜೂರವು ಹೆಚ್ಚಾಗಿ ಸಿಗುವುದರಿಂದ ರೋಜಾ ಮುಗಿದ ಬಳಿಕ ಮುಸ್ಲಿಮರು ಖರ್ಜೂರವನ್ನು ಸೇವಿಸುವ ಮೂಲಕ ಉಪವಾಸ ಮುರಿಯುತ್ತಾರೆ. ಪ್ರವಾದಿಗಳೇ ರಂಜಾನ್ ಸಮಯದಲ್ಲಿ ರಸಭರಿತವಾದ ಖರ್ಜೂರಗಳನ್ನು ಸೇವನೆ ಮಾಡುವ ಮೂಲಕ ಉಪವಾಸ ಮುರಿಯುತ್ತಿದ್ದರು. ಪ್ರವಾದಿ ಮೊಹಮ್ಮದ್ ಅವರ ನೆಚ್ಚಿನ ಹಾಗೂ ಅವರು ಹೆಚ್ಚಾಗಿ ಇಷ್ಟಪಟ್ಟು ತಿನ್ನುತ್ತಿದ್ದ ಆಹಾರ ಪದಾರ್ಥ ಖರ್ಜೂರವಾಗಿತ್ತು. ಹೀಗಾಗಿ ಇಫ್ತಾರ್ ಸಮಯದಲ್ಲಿ ಮುಸ್ಲಿಮರು ಖರ್ಜೂರವನ್ನು ಸೇವಿಸುವ ಮೂಲಕ ತಮ್ಮ ಉಪವಾಸವನ್ನು ಮುರಿಯುತ್ತಾರೆ. ರಂಜಾನ್ ಸಮಯದಲ್ಲಿ ಅಥವಾ ವರ್ಷದ ಯಾವುದೇ ದಿನಗಳಲ್ಲಿ ಖರ್ಜೂರ ಸೇವನೆ ಮಾಡುವುದರಿಂದ ನಾವು ನಮ್ಮ ಪ್ರವಾದಿಗಳಿಗೆ ಹಾಗೂ ನಮ್ಮ ಧರ್ಮಕ್ಕೆ ಇನ್ನಷ್ಟು ಹತ್ತಿರವಾಗುತ್ತೇವೆ ಎನ್ನುವುದು ಇಸ್ಲಾಂ ಧರ್ಮದಲ್ಲಿರುವ ನಂಬಿಕೆಯಾಗಿದೆ. ಹೀಗಾಗಿ ಮುಸ್ಲಿಮರು ತಮ್ಮ ಧರ್ಮದಲ್ಲಿ ಖರ್ಜೂರಕ್ಕೆ ವಿಶೇಷ ಸ್ಥಾನ ನೀಡಿದ್ದಾರೆ.

    ವೈಜ್ಞಾನಿಕ ಕಾರಣವೇನು?
    ಇನ್ನು ವೈಜ್ಞಾನಿಕ ರೀತಿಯಲ್ಲಿ ನೋಡುವುದಾದರೆ ಖರ್ಜೂರದಲ್ಲಿ ಪ್ರೋಟೀನ್, ವಿವಿಧ ಜೀವಸತ್ವಗಳು ಹಾಗೂ ಖನಿಜಾಂಶಗಳು ಅಗಾಧ ಪ್ರಮಾಣದಲ್ಲಿ ಇರುತ್ತದೆ. ಖರ್ಜೂರದಲ್ಲಿ ಪಾಲಿಫಿನಾಲ್, ಮ್ಯಾಂಗನೀಸ್, ಪೊಟ್ಯಾಷಿಯಂ ಹಾಗೂ ಕಬ್ಬಿಣಾಂಶ ಕೂಡ ಇದೆ. ದಿನವಿಡೀ ಖಾಲಿ ಹೊಟ್ಟೆಯಿಂದ ಇರುವವರು ಒಮ್ಮೆಲೆ ಸಿಕ್ಕಿದ್ದೆಲ್ಲ ತಿಂದರೆ ಅಜೀರ್ಣ ಹಾಗೂ ಆಸಿಡಿಟಿ ಸಮಸ್ಯೆ ಕಾಡುವ ಸಾಧ್ಯತೆ ಹೆಚ್ಚಿರುತ್ತದೆ. ಖರ್ಜೂರ ವಿವಿಧ ಪೋಷಕಾಂಶಗಳಿಂದ ಸಮೃದ್ಧವಾಗಿದ್ದು ಯಾವುದೇ ರೀತಿಯ ಆರೋಗ್ಯ ಸಮಸ್ಯೆಯನ್ನು ನೀಡದೆಯೇ ದೇಹಕ್ಕೆ ಹೆಚ್ಚಿನ ಶಕ್ತಿ ಕೊಡುತ್ತದೆ.

    ಖರ್ಜೂರವು ನೈಸರ್ಗಿಕ ಸಕ್ಕರೆಯಂತೆ ಕಾರ್ಯ ನಿರ್ವಹಿಸುತ್ತದೆ. ಇದರಲ್ಲಿರುವ ವಿಟಮಿನ್ ಬಿ 6, ಹಾಗೂ ಕಬ್ಬಿಣಾಂಶ ಹಾಗೂ ಫೈಬರ್ ದೇಹವನ್ನು ಹೆಚ್ಚು ಸಮಯಗಳ ಕಾಲ ಹಸಿವೆಯಾಗದಂತೆ ನೋಡಿಕೊಳ್ಳುತ್ತದೆ. ಇದರಿಂದ ಜನರಿಗೆ ಹೆಚ್ಚುಕಾಲ ಹೊಟ್ಟೆ ತುಂಬಿದಂತಹ ಅನುಭವ ಕೂಡ ನೀಡುತ್ತದೆ. ಆದ್ದರಿಂದ ಮುಸ್ಲಿಂಮರು ಖರ್ಜೂರ ಸೇವಿಸುವ ಮೂಲಕ ರಂಜಾನ್ ಉಪವಾಸ ಮುರಿಯುತ್ತಾರೆ.

    ಈ ಹಬ್ಬದಲ್ಲಿ ಶ್ರೀಮಂತ, ಬಡವ, ಬಲ್ಲಿದ ಎನ್ನದೇ ಎಲ್ಲರೂ ಕೂಡ ತಮ್ಮ ಕೈಲಾದಷ್ಟು ದಾನವನ್ನನು ಮಾಡುತ್ತಾರೆ. ಅದರಲ್ಲೂ ಮುಖ್ಯವಾಗಿ ನಿರಾಶ್ರಿತರಿಗೆ, ತುಂಬಾ ಬಡವರಿಗೆ ಈ ಸಮಯದಲ್ಲಿ ದಾನವನ್ನು ಮಾಡಲಾಗುತ್ತದೆ. ಇದಕ್ಕೆ ಜಕಾತ್‌ ಎಂದೂ ಹೇಳುತ್ತಾರೆ. ಈ ದಾನದಲ್ಲಿ 2 ರಿಂದ 5 ಕೆ.ಜಿಯಷ್ಟು ಅಕ್ಕಿ ಅಥವಾ ಗೋಧಿಯನ್ನು ಬಡವರಿಗೆ ಹಂಚಲಾಗುತ್ತದೆ. ಹಬ್ಬದ ದಿನ ಮಾಡುವ ವಿಶೇಷ ಪ್ರಾರ್ಥನೆ ಅಥವಾ ನಮಾಜ್‌ ಗೂ ಮುನ್ನವೇ ಈ ದಾನವನ್ನು ನೀಡಬೇಕು. ಈ ಈದ್‌ ಹಬ್ಬವು ಚಂದ್ರನನ್ನು ಆಧರಿಸಿರುತ್ತದೆ.

    ರಂಜಾನ್ ತಿಂಗಳ ಉಪವಾಸ ಕೊನೆಗೊಂಡ ನಂತರ ಈದ್-ಉಲ್-ಫಿತರ್ ಹಬ್ಬವನ್ನು ಆಚರಿಸಲಾಗುತ್ತದೆ. ಇಸ್ಲಾಮಿಕ್ ಧರ್ಮದಲ್ಲಿ ಅತ್ಯಂತ ಮಹತ್ವದ ಹಬ್ಬಗಳಲ್ಲಿ ಇದು ಕೂಡಾ ಒಂದು. ಈ ದಿನದಂದು ಮುಸ್ಲಿಮರು ತಮ್ಮ ಉಪವಾಸ( ರೋಜಾ) ಕೊನೆಗೊಳಿಸುತ್ತಾರೆ. ರಂಜಾನ್ ಸಮಯದಲ್ಲಿ ಹೊಸ ಬಟ್ಟೆಯನ್ನು ಧರಿಸುತ್ತಾರೆ. ವಿಶೇಷ ಭಕ್ಷ್ಯಗಳನ್ನು ತಯಾರಿಸಿ ಕುಟುಂಬ ಮತ್ತು ಸ್ನೇಹಿತರ ಜೊತೆ ಸೇರಿ ಸಮಯವನ್ನು ಕಳೆಯುತ್ತಾರೆ.

  • ಬಳ್ಳಾರಿ: ಮಹಾನಗರ ಪಾಲಿಕೆಯಿಂದ ರಂಜಾನ್ ಹಬ್ಬಕ್ಕೆ ನೀರಿನ ವ್ಯವಸ್ಥೆ

    ಬಳ್ಳಾರಿ: ಮಹಾನಗರ ಪಾಲಿಕೆಯಿಂದ ರಂಜಾನ್ ಹಬ್ಬಕ್ಕೆ ನೀರಿನ ವ್ಯವಸ್ಥೆ

    ಬಳ್ಳಾರಿ: ಮುಸ್ಲಿಂ ಸಮುದಾಯದ ಪ್ರಮುಖ ಹಬ್ಬವಾದ ರಂಜಾನ್ ಹಬ್ಬ ಸೋಮವಾರ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಬಳ್ಳಾರಿ ಮಹಾನಗರ ಪಾಲಿಕೆ ವಿಶೇಷ ವ್ಯವಸ್ಥೆಯನ್ನು ಕಲ್ಪಿಸಿದೆ.

    ರಂಜಾನ್ ಹಬ್ಬದ ಪ್ರಯುಕ್ತ ಬಳ್ಳಾರಿ ಮಹಾನಗರದಲ್ಲಿ ಮುಸ್ಲಿಂ ಬಾಂಧವರಿಗೆ 15 ಟ್ಯಾಂಕರ್‍ಗಳ ಮೂಲಕ ಎಲ್ಲ ವಾರ್ಡ್‍ಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಹಬ್ಬದ ಸಂದರ್ಭದಲ್ಲಿ ನೀರಿನ ಸಮಸ್ಯೆ ಉದ್ಭವಿಸಬಾರದು ಎಂಬ ದೃಷ್ಠಿಯಿಂದ ಪಾಲಿಕೆ ಈ ನಿರ್ಧಾರ ಕೈಗೊಂಡಿದೆ. ನೀರಿನ ಸಮಸ್ಯೆ ಉದ್ಭವಿಸಿದ್ದಲ್ಲಿ ಪಾಲಿಕೆಯನ್ನು ತಕ್ಷಣ ಸಂಪರ್ಕಿಸಲು ನಗರದ ನಾಗರೀಕರಲ್ಲಿ ಆಯುಕ್ತ ಎಂಕೆ ನಲ್ವಡಿ ಮನವಿ ಮಾಡಿದ್ದಾರೆ.

    ಬಳ್ಳಾರಿ ಮಹಾನಗರದಲ್ಲಿ ಹಬ್ಬದಂದು ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೀರು ಸರಬುರಾಜು ಮಾಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ರವಿವಾರ ಮುಂಜಾನೆ ಪಾಲಿಕೆ ಆಯುಕ್ತ ಎಂ ಕೆ ನಲ್ವಡಿ ಹಾಗೂ ಮೇಯರ್ ವೆಂಕಟರಮಣ ನಗರದ ವಾಟರ್ ಬೂಸ್ಟ್‍ನಿಂದ ನೀರಿನ ಟ್ಯಾಂಕರಗಳನ್ನು ಎಲ್ಲ ವಾರ್ಡ್‍ಗಳಿಗೆ ತಲುಪಿಸುವಂತೆ ಟ್ಯಾಂಕರ್ ಸೌಲಭ್ಯದ ವ್ಯವಸ್ಥೆ ಮಾಡಿರುವುದು ವಿಶೇಷವಾಗಿದೆ.

    ಹೀಗಾಗಿ ಪಾಲಿಕೆ ಹಬ್ಬಂದಂದು ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಂಡಿರುವುದು ಮುಸ್ಲಿಂ ಬಾಂಧವರಿಗೆವರಲ್ಲಿ ಹರ್ಷ ಮೂಡಿಸಿದೆ.