Tag: Ramya

  • ರಮ್ಯಾ ಫ್ಯಾನ್ಸ್‌ಗೆ ಸಿಹಿಸುದ್ದಿ- ಕಮ್‌ ಬ್ಯಾಕ್‌ ಬಗ್ಗೆ ಸುಳಿವು ಕೊಟ್ರು ನಟಿ

    ರಮ್ಯಾ ಫ್ಯಾನ್ಸ್‌ಗೆ ಸಿಹಿಸುದ್ದಿ- ಕಮ್‌ ಬ್ಯಾಕ್‌ ಬಗ್ಗೆ ಸುಳಿವು ಕೊಟ್ರು ನಟಿ

    ಸ್ಯಾಂಡಲ್‌ವುಡ್ ನಟಿ ರಮ್ಯಾ (Ramya) ಮತ್ತೆ ಸಿನಿಮಾದಲ್ಲಿ ನಟಿಸಲಿ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಸದ್ಯದಲ್ಲೇ ಸಿನಿಮಾದಲ್ಲಿ ನಟಿಸೋದಾಗಿ ರಮ್ಯಾ ಬಿಗ್ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಹೊಸ ಚಿತ್ರಕ್ಕೆ ಸಹಿ ಹಾಕಿದರು ನಿಮಿಕಾ ರತ್ನಾಕರ್!

    ಫಿಲ್ಮ್ ಫಿಸ್ಟಿವಲ್ ಸಂವಾದದಲ್ಲಿ ಭಾಗಿಯಾಗಿದ್ದ ರಮ್ಯಾ ಅವರು ಸಿನಿಮಾ ಕಮ್ ಬ್ಯಾಕ್ ರಿಯಾಕ್ಟ್ ಮಾಡಿದ್ದಾರೆ. ಈಗಾಗಲೇ 4 ಸ್ಕ್ರಿಪ್ಟ್ ಕೇಳಿದ್ದೇನೆ. ಬಹುಶಃ ಅದರಲ್ಲಿ ಒಂದು ಸಿನಿಮಾದಲ್ಲಿ ನಾನು ನಟಿಸುತ್ತೇನೆ ಎಂದಿದ್ದಾರೆ.

    ಇದೇ ವೇಳೆ, ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದಲ್ಲಿ ತಾವ್ಯಾಕೆ ನಟಿಸಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. ಇದು ಒಟಿಟಿಗಾಗಿಯೇ ಎಂದು ಮಾಡಿದ ಸಿನಿಮಾವಾಗಿತ್ತು. ನನ್ನ ಅಭಿಮಾನಿಗಳ ಮುಂದೆ ಬರುವಾಗ ಬೆಳ್ಳಿಪರದೆಯಲ್ಲೇ ಕಾಣಿಸಿಕೊಳ್ಳಬೇಕೆಂದಿತ್ತು ಎಂದರು ರಮ್ಯಾ.

    ಅಂದಹಾಗೆ, ಕಡೆಯದಾಗಿ 2016ರಲ್ಲಿ ‘ನಾಗರಹಾವು’ ಸಿನಿಮಾದಲ್ಲಿ ದಿಗಂತ್ ಜೊತೆ ರಮ್ಯಾ ನಟಿಸಿದ್ದರು. ಬಳಿಕ 2023ರಲ್ಲಿ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು.

  • ರವಿ ಗಣಿಗ ಹೇಳಿಕೆಗೆ ತಿರುಗೇಟು- ರಶ್ಮಿಕಾ ಮಂದಣ್ಣ ಪರ ರಮ್ಯಾ ಬ್ಯಾಟಿಂಗ್

    ರವಿ ಗಣಿಗ ಹೇಳಿಕೆಗೆ ತಿರುಗೇಟು- ರಶ್ಮಿಕಾ ಮಂದಣ್ಣ ಪರ ರಮ್ಯಾ ಬ್ಯಾಟಿಂಗ್

    ಸ್ಯಾಂಡಲ್‌ವುಡ್‌ನ ಮೋಹಕತಾರೆ ರಮ್ಯಾ ಅವರು ರಶ್ಮಿಕಾ ಪರ ಬ್ಯಾಟಿಂಗ್‌ ಮಾಡಿದ್ದಾರೆ.  ರಶ್ಮಿಕಾ ಮಂದಣ್ಣಗೆ ಬುದ್ಧಿ ಕಲಿಸಬೇಕು ಎಂದ ಶಾಸಕ ರವಿ ಗಣಿಗ ಹೇಳಿಕೆಗೆ ತಿರುಗೇಟು ರಮ್ಯಾ ನೀಡಿದ್ದಾರೆ. ಇದನ್ನೂ ಓದಿ:ಮಹಿಳಾ ಕಲಾವಿದರಿಗೂ ಆದ್ಯತೆ ಕೊಡಬೇಕು: ನಟಿಯರ ಸಂಭಾವನೆ ಬಗ್ಗೆ ರಮ್ಯಾ ಬೇಸರ

    ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಮಾತನಾಡಿದ ರಮ್ಯಾ, ರಶ್ಮಿಕಾರನ್ನ ಪ್ರಾರಂಭದ ದಿನಗಳಿಂದಲೂ ಟ್ರೋಲ್ ಮಾಡ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ರಶ್ಮಿಕಾ ಹೈದರಾಬಾದ್‌ನಲ್ಲಿ ಮನೆಯನ್ನ ಮಾಡಿರಬಹುದು. ಅದಕ್ಕೆ ಹಾಗೆ ಹೇಳಿರಬಹುದು ಅಂತಾ ರಶ್ಮಿಕಾ ಪರ ರಮ್ಯಾ ಬ್ಯಾಟಿಂಗ್ ಮಾಡಿದ್ದಾರೆ.

    ಅಂದಹಾಗೆ, ವಿಧಾನಸೌಧ ಶಾಸಕ ಗಣಿಗ ರವಿ ಅವರು ಸಿನಿಮಾದವರು ಬಾಯಿಮುಚ್ಚಿಕೊಂಡು ಇರಬೇಕು. ರಶ್ಮಿಕಾ ಮಂದಣ್ಣ ‘ಕಿರಿಕ್ ಪಾರ್ಟಿ’ ಸಿನಿಮಾದಿಂದ ಬೆಳೆದವರು. ಅವರನ್ನು ಕಳೆದ ವರ್ಷ ಚಲನಚಿತ್ರೋತ್ಸವಕ್ಕೆ ಆಹ್ವಾನ ಮಾಡಿದ್ವಿ. ಆದರೆ ನಾನು ಹೈದರಾಬಾದ್‌ನಲ್ಲಿ ಇರೋದು, ನನಗೆ ಟೈಂ ಇಲ್ಲ, ಬರಲ್ಲ ಎಂದು ಹೇಳಿದ್ದರು. ಇವರಿಗೆ ಬುದ್ದಿ ಕಲಿಸಬೇಕಲ್ವಾ? ಎಂದು ಕೆಂಡಕಾರಿದರು. ಹಾಗಾಗಿ ಈ ವಿಚಾರಕ್ಕೆ ರಶ್ಮಿಕಾ ಮಂದಣ್ಣ ಪರ ರಮ್ಯಾ ಮಾತನಾಡಿದ್ದಾರೆ.

  • ಮಹಿಳಾ ಕಲಾವಿದರಿಗೂ ಆದ್ಯತೆ ಕೊಡಬೇಕು: ನಟಿಯರ ಸಂಭಾವನೆ ಬಗ್ಗೆ ರಮ್ಯಾ ಬೇಸರ

    ಮಹಿಳಾ ಕಲಾವಿದರಿಗೂ ಆದ್ಯತೆ ಕೊಡಬೇಕು: ನಟಿಯರ ಸಂಭಾವನೆ ಬಗ್ಗೆ ರಮ್ಯಾ ಬೇಸರ

    ಸ್ಯಾಂಡಲ್‌ವುಡ್ ನಟಿ ರಮ್ಯಾ (Ramya) ಅವರು 16ನೇ ಬೆಂಗಳೂರು ಚಲನಚಿತ್ರೋತ್ಸವದಲ್ಲಿ (Film Festival) ಭಾಗಿಯಾಗಿದ್ದಾರೆ. ಈ ವೇಳೆ, ಹೀರೋಗಳಂತೆಯೇ ಮಹಿಳೆಯರಿಗೂ ಸಂಭಾವನೆ ವಿಚಾರದಲ್ಲಿ ಆದ್ಯತೆ ಕೊಡಿ ಎಂದಿದ್ದಾರೆ. ಚಿತ್ರರಂಗದಲ್ಲಿ ನಟಿಯರಿಗೆ ನೀಡೋ ಸಂಭಾವನೆ (Salary) ಬಗ್ಗೆ ರಮ್ಯಾ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ನನ್ನನ್ನು ಎಲ್ಲರೂ ಸೇರಿ ಟ್ರ್ಯಾಪ್‌ ಮಾಡಿದ್ರು.. ಅದ್ಕೆ ಈ ರೀತಿ ಕೆಲಸ ಮಾಡಿದ್ದೇನೆ: ನಟಿ ರನ್ಯಾ ಅಳಲು

    ನನ್ನೊಂದಿಗೆ ಆಕ್ಟ್‌ ಮಾಡಿದ್ದ ಹೊಸಬರು, ಇಂದು ಸೂಪರ್ ಸ್ಟಾರ್ಸ್ ಆಗಿದ್ದಾರೆ. ನನ್ನ ಜೊತೆ ನಟನೆ ಮಾಡಿರೋ ಎಲ್ಲರೂ ಇವತ್ತು ಸೂಪರ್ ಸ್ಟಾರ್ಸ್ ಆಗಿದ್ದಾರೆ. ಆಗ ನನಗಿಂತ ಕಡಿಮೆ ಸಂಭಾವನೆ ಪಡೆಯುತ್ತಿದ್ದ ನಟರು, ಒಂದು ಸಿನಿಮಾ ಹಿಟ್ ಆದ್ಮೇಲೆ ಮುಂದಿನ ಚಿತ್ರಕ್ಕೆ ನನಗಿಂತ 50ರಷ್ಟು ಹೆಚ್ಚಿನ ಸಂಭಾವನೆ ಪಡೆಯುತ್ತಿದ್ದರು.

    ಹೀರೋ ಜೊತೆ ಒಟ್ಟಿಗೆ ಕೆಲಸ ಮಾಡಿ ಹಿಟ್‌ ಕೊಟ್ಟಿರುತ್ತೇವೆ. ಆದರೆ ಹೀರೋಗಳಿಗೆ ಕೋಟಿ ಕೋಟಿ ಸಂಭಾವನೆ ಸಿಗ್ತಿದ್ದರೆ, ನಾವು ಕೋಟಿ ತಲುಪೋದಕ್ಕೂ ಕಷ್ಟಪಡುತ್ತಿದ್ವಿ. ಮಹಿಳಾ ಕಲಾವಿದರಿಗೂ ಅದೇ ಆದ್ಯತೆ ಕೊಡಬೇಕು. ನಮ್ಮ ಕ್ಷೇತ್ರ ಒಂದೇ ಅಲ್ಲ, ಎಲ್ಲಾ ಕ್ಷೇತ್ರದಲ್ಲೂ ಈ ರೀತಿ ಸಮಸ್ಯೆಯಿದೆ ಎಂದು ಮಹಿಳೆಯರಿಗೆ ಬರೋ ಸಂಭಾವನೆ ಬಗ್ಗೆ ನಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  • ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ವಿವಾದ: ನ್ಯಾಯ ನನ್ನ ಪರ ಇದೆ ಎಂದ ರಮ್ಯಾ

    ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ವಿವಾದ: ನ್ಯಾಯ ನನ್ನ ಪರ ಇದೆ ಎಂದ ರಮ್ಯಾ

    ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ (Hostel Hudugaru Bekagidaare) ಚಿತ್ರತಂಡ ವಿವಾದದ ಸಂಬಂಧ ರಮ್ಯಾ ಬೆಂಗಳೂರಿನ ಕಮರ್ಷಿಯಲ್ ಕೋರ್ಟ್‌ಗೆ ಹಾಜರಾಗಿ ದಾಖಲೆಗಳನ್ನು ಸಲ್ಲಿಸಿದ್ದಾರೆ. ಈ ವೇಳೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ರಮ್ಯಾ, ಚಿತ್ರತಂಡದ ಜೊತೆಗಿನ ವಿವಾದದಲ್ಲಿ ನ್ಯಾಯ ನನ್ನ ಪರ ಇದೆ ಎಂದಿದ್ದಾರೆ. ಇದನ್ನೂ ಓದಿ:6.5 ಲಕ್ಷ ಕೊಡದೇ ವಂಚಿಸಿದ ಆರೋಪ- ನವನಿರ್ದೇಶಕಿ ವಿರುದ್ಧ ದೂರು

    ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರತಂಡವು ರಮ್ಯಾ (Ramya) ಅನುಮತಿ ಇಲ್ಲದೇ ಫೋಟೋ, ವಿಡಿಯೋ ಬಳಸಿದ್ದರ ಬಗ್ಗೆ ನಟಿ ಮಾತನಾಡಿ, ಸಿನಿಮಾ ಕುರಿತು ಮಾಡಿಕೊಂಡಿರುವ ಅಗ್ರಿಮೆಂಟ್‌ನಲ್ಲಿ ಸ್ಪಷ್ಟವಾಗಿ ಬರೆದಿದೆ. ನನ್ನ ಒಪ್ಪಿಗೆ ಇಲ್ಲದೇ ಫೋಟೋ ಆಗಲಿ, ವಿಡಿಯೋ ಆಗಲಿ ಬಳಸುವಂತಿಲ್ಲ ಎಂದಿದೆ. ಅದರಂತೆ ಚಿತ್ರದ ನಿರ್ದೇಶಕರು ಕೂಡ ಆಯ್ತು ನಾವು ಬಳಸೋದಿಲ್ಲ ಎಂದಿದ್ದರು.

    ಆ ನಂತರ ಸಿನಿಮಾ ರಿಲೀಸ್‌ಗೂ ಮುನ್ನ ಟ್ರೈಲರ್ ಹಾಕಿದ್ದಾರೆ. ಅದರಲ್ಲಿ ನನ್ನ ತುಣುಕನ್ನು ಬಳಸಿದ್ದಾರೆ. ಆದರೆ ಎಲ್ಲೂ ಕ್ಯಾಮಿಯೋ ರೋಲ್ ಮಾಡ್ತಿದ್ದೇನೆ ಅಂತ ಹಾಕಿಯೇ ಇಲ್ಲ. ನಾನೇ ಹೀರೋಯಿನ್ ಎನ್ನುವಂತೆ ಪೋಸ್ಟರ್‌ಗಳನ್ನು ಹಾಕಿದ್ದಾರೆ. ಹೀಗೆ ಮಾಡಿರೋದು ನಿಜಕ್ಕೂ ತಪ್ಪು. ಇದನ್ನು ಕೋರ್ಟ್ ಕೂಡ ಒಪ್ಪಿಕೊಂಡಿದೆ. ಈ ವಿಚಾರದಲ್ಲಿ ನ್ಯಾಯ ನನ್ನ ಪರ ಇದೆ. ಇದಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಕೆಲಸಗಳಿವೆ ಎಂದು ನಟಿ ಮಾತನಾಡಿದ್ದಾರೆ.

    ಸದ್ಯ ತಾವು ಇಂದು ಕೋರ್ಟ್ ಕೇಳಿದ ದಾಖಲೆಗಳನ್ನು ನೀಡಿ ಸಹಿ ಹಾಕಿದ್ದೇನೆ. ಮಾರ್ಚ್ 19ರಂದು ಈ ಸಂಬಂಧ ವಿಚಾರಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.

    ಅಂದಹಾಗೆ, 2023ರಲ್ಲಿ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ರಿಲೀಸ್ ಆಗಿತ್ತು. ರಮ್ಯಾ ಅನುಮತಿ ಇಲ್ಲದೇ ಫೋಟೋ, ವಿಡಿಯೋ ಬಳಸಿರೋದಕ್ಕೆ ನಟಿ ಕೋರ್ಟ್ ಮೊರೆ ಹೋಗಿದ್ದರು.

  • ಡಿಕೆಶಿ ನಟ್ಟು ಬೋಲ್ಟು ವಿವಾದ: ಡಿಸಿಎಂ ಹೇಳಿಕೆ ಸರಿಯಲ್ಲ ಎಂದ ರಮ್ಯಾ

    ಡಿಕೆಶಿ ನಟ್ಟು ಬೋಲ್ಟು ವಿವಾದ: ಡಿಸಿಎಂ ಹೇಳಿಕೆ ಸರಿಯಲ್ಲ ಎಂದ ರಮ್ಯಾ

    ಡಿಸಿಎಂ ಡಿಕೆ ಶಿವಕುಮಾರ್ ಅವರು ಕಲಾವಿದರ ನಟ್ಟು ಬೋಲ್ಟು ಟೈಟ್ ಮಾಡ್ತೀನಿ ಎಂದ ಹೇಳಿಕೆಯ ಬಗ್ಗೆ ನಟಿ ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ. ಡಿಸಿಎಂ ಡಿಕೆಶಿ (DK Shivakumar) ಅವರು ನೀಡಿರುವ ಹೇಳಿಕೆ ಸರಿಯಲ್ಲ. ಹಾಗೆ ಮಾತನಾಡಬಾರದಿತ್ತು ಎಂದು ರಮ್ಯಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:1 ಕೆಜಿ ಚಿನ್ನ ಸಾಗಾಟಕ್ಕೆ ರನ್ಯಾಗೆ 4ರಿಂದ 5 ಲಕ್ಷ ಕಮಿಷನ್ – ನಟಿ ಕೇವಲ ಪಾತ್ರಧಾರಿ, ಅಸಲಿ ಕಿಂಗ್‌ಪಿನ್ ಬೇರೆ!

    ಡಿಸಿಎಂ ಡಿಕೆ ಶಿವಕುಮಾರ್ ನಟ್ಟು ಬೋಲ್ಟ್ ಹೇಳಿಕೆ ಸರಿಯಲ್ಲ. ಆದರೆ ಅವರು ಹಾಗೇ ಮಾತನಾಡಬಾರದಿತ್ತು. ಬೆದರಿಸುವ ಉದ್ದೇಶ ಇಲ್ಲ ಅಂತ ಅವರೇ ಸ್ಪಷ್ಟನೆ ನೀಡಿದ್ದಾರೆ. ಆದರೆ ಅವರು ಹೇಳಿದ ಹೇಳಿಕೆ ತಪ್ಪು. ಆದರೆ ಅವರ ಅವರು ಹೇಳಿದ ರೀತಿ ಕೆಲವರಿಗೆ ಇಷ್ಟ ಆಗಿಲ್ಲ. ಈ ವಿಚಾರವಾಗಿ ಡಿಕೆಶಿ ಅವರು ಕ್ಲ್ಯಾರಿಟಿ ಕೊಟ್ಟಿದ್ದಾರೆ. ಈ ವಿಚಾರವನ್ನು ನಾವು ಇಲ್ಲಿಗೆ ಬಿಡೋದು ಒಳ್ಳೆಯದು ಎಂದಿದ್ದಾರೆ ರಮ್ಯಾ.

    ಫಿಲ್ಮ್ ಫೆಸ್ಟಿವಲ್‌ಗೆ ಒಂದು ವಾರದ ಹಿಂದೆಯೇ ನನಗೆ ಆಹ್ವಾನ ಬಂದಿದೆ. ಬೇರೆಯವರಿಗೆ ಆಹ್ವಾನ ಹೋಗಿದ್ಯೋ ಇಲ್ವೋ ನನಗೆ ಗೊತ್ತಿಲ್ಲ. ನನಗೆ ಆಹ್ವಾನ ಬಂದಿದೆ, ಹಾಗಾಗಿ ನಾನು ಈಗ ಫಿಲ್ಮ್ ಫೆಸ್ಟಿವಲ್‌ಗೆ ಹೋಗ್ತಿದ್ದೀನಿ. ಈ ವೇಳೆ, ನಾಡು, ನುಡಿ, ಜಲದ ವಿಚಾರದಲ್ಲಿ ಯಾವುದೇ ಆಹ್ವಾನ ಬೇಕಿಲ್ಲ. ಎಲ್ಲರೂ ಅವರಾಗಿಯೇ ಬರಬೇಕು. ಇದ್ಯಾವ್ದೋ ಮದುವೆ, ಪಾರ್ಟಿ ಅಲ್ಲ. ಇವತ್ತು ಮಧ್ಯಾಹ್ನ ನಾನೂ ಫಿಲ್ಮ್ ಫೆಸ್ಟಿವಲ್‌ಗೆ ಹೋಗುತ್ತಿದ್ದೇನೆ ಎಂದಿದ್ದಾರೆ.

  • ನಮ್ಮ ನಾಯಕರು ಬೆದರಿಕೆ ಹಾಕುವುದನ್ನು ನಿಲ್ಲಿಸಬೇಕು – ನಿನ್ನೆ ಸಮರ್ಥನೆ, ಇಂದು ರಮ್ಯಾ ಆಕ್ಷೇಪ

    ನಮ್ಮ ನಾಯಕರು ಬೆದರಿಕೆ ಹಾಕುವುದನ್ನು ನಿಲ್ಲಿಸಬೇಕು – ನಿನ್ನೆ ಸಮರ್ಥನೆ, ಇಂದು ರಮ್ಯಾ ಆಕ್ಷೇಪ

    ಬೆಂಗಳೂರು: ಭಾನುವಾರ ಡಿಸಿಎಂ ಡಿಕೆಶಿವಕುಮಾರ್ (DK Shivakumar) ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದ ರಮ್ಯಾ (Ramya) ಇಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಇಂದು ಇನ್‌ಸ್ಟಾದಲ್ಲಿ ಪೋಸ್ಟ್‌ ಹಾಕಿದ ರಮ್ಯಾ ಡಿ ಕೆ ಶಿವಕುಮಾರ್ ಅವರ ಮಾತಿಗೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಪೋಸ್ಟ್‌ನಲ್ಲಿ ಏನಿದೆ?
    ಡಿ.ಕೆ. ಶಿವಕುಮಾರ್ ಅವರ ಹೇಳಿಕೆ ಸಂಪೂರ್ಣ ತಪ್ಪು ಎಂದು ಹೇಳಲಾಗದು. ನಟರಾಗಿರುವ ನಾವೆಲ್ಲರೂ ಸಾರ್ವಜನಿಕರ ಮೇಲೆ ಗಮನಾರ್ಹ ಪ್ರಭಾವವನ್ನು ಹೊಂದಿದ್ದೇವೆ ಮತ್ತು ನಾವು ನಂಬುವ ಕಾರಣಗಳಿಗೆ ನಮ್ಮ ಧ್ವನಿಯನ್ನು ಒದಗಿಸುವುದು ಅಗತ್ಯ. ಇದನ್ನೂ ಓದಿ: ಸಿನಿಮಾದವರು ಬಾಯಿಮುಚ್ಚಿಕೊಂಡು ಇರಬೇಕು – ರಶ್ಮಿಕಾ ವಿರುದ್ಧ ಕೆಂಡ ಕಾರಿದ ಗಣಿಗ ರವಿ

     

    ಸಂವಾದ ಪ್ರಜಾಪ್ರಭುತ್ವಕ್ಕೆ ಅತ್ಯಗತ್ಯ. ಗೋಕಾಕ್ ಚಳುವಳಿಗೆ ತಮ್ಮ ಬೆಂಬಲವನ್ನು ನೀಡಿದ ಡಾ. ರಾಜಕುಮಾರ್ ಅವರೇ ಅದಕ್ಕೆ ಶ್ರೇಷ್ಠ ಉದಾಹರಣೆ. ಒಬ್ಬ ಕಲಾವಿದನು ತನ್ನ ಹೆಸರನ್ನು ಯಾವಾಗಲೂ ಒಂದು ಚಳುವಳಿಗೆ ಒದಗಿಸಬೇಕೆ, ಬೇಡವೇ ಎನ್ನುವುದು ಅವನ ಇಚ್ಚೆ. ಆದರೆ ಯಾವುದೇ ಸಂದರ್ಭದಲ್ಲೂ ಯಾರನ್ನಾದರೂ ಬೆದರಿಸಲು ಸಾಧ್ಯವಿಲ್ಲ.

    ಚಿತ್ರರಂಗದಲ್ಲಿನ ನನ್ನ ಬಹುತೇಕ ಸ್ನೇಹಿತರು ಖಾಸಗಿ ಜೀವನದಲ್ಲಿ ತಮ್ಮ ಅಭಿಪ್ರಾಯಗಳನ್ನು ಬಹಳ ಮುಕ್ತವಾಗಿ ಹಂಚಿಕೊಳ್ಳುತ್ತಾರೆ. ಆದರೆ ಸಾರ್ವಜನಿಕವಾಗಿ ಹೇಳಲು ಹಿಂಜರಿಯುತ್ತಾರೆ. ಇದಕ್ಕೆ ಕಾರಣ ಅವರ ಮಾತುಗಳಿಗೆ ರಾತ್ರೋರಾತ್ರಿ ಟ್ರೋಲ್ ಆಗುತ್ತದೆ. ಇದು ಅಪಾಯಕರವಾಗಿ ಪರಿಣಾಮ ಬೀರುತ್ತದೆ.

    ನಟರು, ವಿಶೇಷವಾಗಿ ಮಹಿಳಾ ಕಲಾವಿದರು ನೇರ ಗುರಿಯಾಗುತ್ತಿದ್ದಾರೆ. ನಮ್ಮ ನಾಯಕರು ಬೆದರಿಕೆ ಹಾಕುವುದು, ಬಲವಂತ ಮಾಡುವುದನ್ನು ನಿಲ್ಲಿಸಬೇಕು ಎಂದು ವಿನಂತಿಸುತ್ತೇನೆ. ಈ ಕಾರಣದಿಂದಲೇ ಅವರು ಮಾತನಾಡಲು ಹಿಂಜರಿಯುತ್ತಾರೆ.

  • ಡಿಕೆಶಿ ಪರ ಬ್ಯಾಟ್ ಬೀಸಿದ ರಮ್ಯಾ

    ಡಿಕೆಶಿ ಪರ ಬ್ಯಾಟ್ ಬೀಸಿದ ರಮ್ಯಾ

    ಬಳ್ಳಾರಿ: ನೆಲ, ಜಲ, ಭಾಷೆ ವಿಚಾರದಲ್ಲಿ ಎಲ್ಲರೂ ಒಂದಾಗಬೇಕು. ಸಾಹೇಬರು ಹೇಳೋದ್ರಲ್ಲಿ ತಪ್ಪೇನಿಲ್ಲಾ ಎಂದು ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ (Sandalwood Queen Ramya), ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

    ಕಲಾವಿದರಿಗೆ ಡಿಸಿಎಂ ಡಿಕೆ ಶಿವಕುಮಾರ್ ವಾರ್ನಿಂಗ್ ವಿಚಾರವಾಗಿ ವಿಜಯನಗರ (Vijayanagara) ಜಿಲ್ಲೆಯ ಹಂಪಿಯಲ್ಲಿ (Hampi) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೀರಿನ ವಿಚಾರ ಬಂದಾಗ ಕಲಾವಿದರೆಲ್ಲರೂ ಬೆಂಬಲಿಸಬೇಕು. ಡಿಸಿಎಂ ಡಿಕೆ ಶಿವಕುಮಾರ್ ಅದನ್ನೇ ಹೇಳಿದ್ದಾರೆ. ಅದಕ್ಕೆ ನನ್ನ ಸಹಮತವಿದೆ. ಉತ್ತರ ಕರ್ನಾಟಕದ ನದಿಗಳು, ಜಲಾಶಯಗಳ ಬಗ್ಗೆಯೂ ಕಲಾವಿದರು ಮಾತನಾಡಬೇಕು. ಡಾ.ರಾಜ್‌ಕುಮಾರ್ ನೆಲ, ಜಲ, ಭಾಷೆ ವಿಚಾರದಲ್ಲಿ ಹೋರಾಟ ಮಾಡಿದ್ದಾರೆ ಎಂದರು. ಇದನ್ನೂ ಓದಿ: ಡಿಕೆಶಿ ಸಿಎಂ ಆಗೋದು ಸೆಟಲ್ಡ್ ಮ್ಯಾಟರ್, ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಮೊಯ್ಲಿ

    ಸದ್ಯ ನನಗೆ ಯಾವುದೇ ಹೊಸ ಚಲನಚಿತ್ರದ ನಟನೆ ಬಗ್ಗೆ ಯೋಜನೆಗಳಿಲ್ಲಾ. ಬಹಳ ದಿನಗಳ ಬಳಿಕ ಹಂಪಿಗೆ ಬಂದಿದ್ದೇನೆ. ನನಗೆ ಖುಷಿಯಾಗಿದೆ, ಸಂತೋಷವಾಗಿದೆ. ಸಚಿವ ಜಮೀರ್ ಅಹಮ್ಮದ್ ಮತ್ತು ವಿಜಯನಗರ ಜಿಲ್ಲಾಡಳಿತ ನನಗೆ ಆಹ್ವಾನ ನೀಡಿದೆ. ಹಾಗಾಗಿ ಬಂದಿದ್ದೇನೆ, ಖುಷಿಯಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಪರೀಕ್ಷೆಯಲ್ಲಿ ನಕಲು| ಪೋಷಕರ ಸಮ್ಮುಖದಲ್ಲಿ ಸಿಸಿಟಿವಿ ಪರೀಕ್ಷಿಸಿದ್ದಕ್ಕೆ ಮನನೊಂದು ಕೆರೆಗೆ ಹಾರಿದ ವಿದ್ಯಾರ್ಥಿನಿ

  • ದರ್ಶನ್ ಬಗ್ಗೆ ಪ್ರಶ್ನೆ ಕೇಳ್ತಿದ್ದಂತೆ ಉತ್ತರಿಸಲು ನಿರಾಕರಿಸಿದ ರಮ್ಯಾ

    ದರ್ಶನ್ ಬಗ್ಗೆ ಪ್ರಶ್ನೆ ಕೇಳ್ತಿದ್ದಂತೆ ಉತ್ತರಿಸಲು ನಿರಾಕರಿಸಿದ ರಮ್ಯಾ

    ಮೋಹಕತಾರೆ ರಮ್ಯಾ (Ramya) ಸಿನಿಮಾ ಕಾರ್ಯಕ್ರಮವೊಂದಕ್ಕೆ ಹಾಜರಿ ಹಾಕಿದ್ದರು. ಈ ವೇಳೆ, ಮದುವೆ, ಸಿನಿಮಾ ಕಮ್‌ಬ್ಯಾಕ್ ಬಗ್ಗೆ ಮಾತನಾಡುವುದರ ಜೊತೆಗೆ ಹಲವು ವಿಚಾರಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ದರ್ಶನ್ (Darshan) ಬಗ್ಗೆ ಕೇಳ್ತಿದ್ದಂತೆ ಉತ್ತರಿಸಲು ಅವರು ನಿರಾಕರಿಸಿದ್ದಾರೆ.

    ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬೇಲ್‌ನಲ್ಲಿರುವ ದರ್ಶನ್ ಬಗ್ಗೆ ಎದುರಾದ ಪ್ರಶ್ನೆಗೆ ರಮ್ಯಾ, ಆ ಬಗ್ಗೆ ಮಾತನಾಡುವುದಿಲ್ಲ ಎಂದು ನಿರಾಕರಿಸಿದ್ದಾರೆ. ದರ್ಶನ್ ಕೇಸ್ ಹೆಸರು ಹೇಳ್ತಿದ್ದಂತೆ ನೋ ಎಂದಿದ್ದಾರೆ.

    ಈ ಹಿಂದೆ ಮಾಧ್ಯಮದ ಜೊತೆ ಮಾತನಾಡಿದ ರಮ್ಯಾ, ನಟರಾಗಿ ಜವಾಬ್ದಾರಿಯುತ ಸ್ಥಾನದಲ್ಲಿ ಸಮಾಜಕ್ಕೆ ಒಳ್ಳೆಯದನ್ನು ನೀಡಬೇಕು. ಅಭಿಮಾನಿಗಳನ್ನು ಬಳಸಿಕೊಂಡು ಕೊಲೆ ಮಾಡುವುದು ಎಷ್ಟು ಸರಿ? ಇಂತಹದ್ದನ್ನು ಸಮರ್ಥಿಸಿಕೊಂಡರೆ ಸಮಾಜಕ್ಕೆ ನಾವು ಕೊಡುವ ಸಂದೇಶ ಏನು? ಕಾನೂನಿಗಿಂತ ಯಾರೂ ದೊಡ್ಡವರಿಲ್ಲ ಎಂದು ರೇಣುಕಾಸ್ವಾಮಿ ಕೇಸ್ ಬಗ್ಗೆ ಮಾತನಾಡಿದ್ದರು.

  • ರಮ್ಯಾಗೆ ನಿಶ್ಚಿತಾರ್ಥ ಆಗಿದ್ಯಾ?- ಮದುವೆ ಬಗ್ಗೆ ಸ್ಪಷ್ಟನೆ ಕೊಟ್ಟ ನಟಿ

    ರಮ್ಯಾಗೆ ನಿಶ್ಚಿತಾರ್ಥ ಆಗಿದ್ಯಾ?- ಮದುವೆ ಬಗ್ಗೆ ಸ್ಪಷ್ಟನೆ ಕೊಟ್ಟ ನಟಿ

    ಮೋಹಕತಾರೆ ರಮ್ಯಾ (Ramya) ಅವರು ಮದುವೆ (Wedding) ಬಗ್ಗೆ ಆಗಾಗ ಚರ್ಚೆಗೆ ಗ್ರಾಸವಾಗುತ್ತಲೇ ಇರುತ್ತದೆ. ಇತ್ತೀಚೆಗೆ ಈ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಹಾಗಾಗಿ ಸ್ವತಃ ಮದುವೆ ವದಂತಿ ಬಗ್ಗೆ ರಮ್ಯಾ ತೆರೆ ಎಳೆದಿದ್ದಾರೆ. ಸದ್ಯಕ್ಕೆ ಮದುವೆ ಬಗ್ಗೆ ನಿರ್ಧಾರ ಕೈಗೊಂಡಿಲ್ಲ ಎಂದಿದ್ದಾರೆ.

    ಕೈಯಲ್ಲಿರುವ ರಿಂಗ್ ಟ್ರೋಲ್ ಆಗಿರುವ ಬಗ್ಗೆ ನಟಿ ಮಾತನಾಡಿ, ನನ್ನ ರಿಂಗ್ ಯಾಕೆ ಟ್ರೋಲ್ ಆಗ್ತಿದೆ ಎಂದಿದ್ದಾರೆ. ನಾನು ಮದುವೆ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ಸಿಹಿ ಊಟ ಹಾಕಿಸಬೇಕು ಅಂದರೆ ಮದುವೆನೇ ಆಗಬೇಕಿಲ್ಲ ಎಂದಿದ್ದಾರೆ.

    ಇತ್ತೀಚೆಗೆ ರಕ್ಷಿತಾ ಸಹೋದರ ರಾಣಾ ಮದುವೆಗೆ ರಮ್ಯಾ ಬಂದಿದ್ದರು. ಆಗ ರಕ್ಷಿತಾಗೆ ತಮ್ಮ ಕೈಬೆರಳಿಗೆ ಧರಿಸಿದ ರಿಂಗ್ ಅನ್ನು ತೋರಿಸಿದ್ದರು. ಈ ವೇಳೆ, ರಿಂಗ್ ನೋಡಿ ರಕ್ಷಿತಾ ಸ್ಮೈಲ್ ಮಾಡಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಮದುವೆ ವಿಚಾರಕ್ಕೆ ಪುಷ್ಠಿ ನೀಡಿತ್ತು.

  • ರಕ್ಷಿತಾ ಸಹೋದರನ ಆರತಕ್ಷತೆ: ಕಪ್ಪು ಸೀರೆಯಲ್ಲಿ ಕಂಗೊಳಿಸಿದ ರಮ್ಯಾ

    ರಕ್ಷಿತಾ ಸಹೋದರನ ಆರತಕ್ಷತೆ: ಕಪ್ಪು ಸೀರೆಯಲ್ಲಿ ಕಂಗೊಳಿಸಿದ ರಮ್ಯಾ

    ಕ್ರೇಜಿ ಕ್ವೀನ್ ರಕ್ಷಿತಾ (Rakshitha Prem) ಸಹೋದರ ರಾಣಾ (Raana) ಮದುವೆ ಆರತಕ್ಷತೆ ಫೆ.8ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ಜರುಗಿದೆ. ಈ ಸಂಭ್ರಮದಲ್ಲಿ ಮೋಹಕತಾರೆ ರಮ್ಯಾ (Ramya) ಸ್ಟೈಲೀಶ್ ಆಗಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. ಇದನ್ನೂ ಓದಿ:ಜಯಮಾಲಾ ಪುತ್ರಿಯ ಅದ್ಧೂರಿ ಆರತಕ್ಷತೆ: ಸಿನಿ ತಾರೆಯರ ದಂಡು

    ರಾಣಾ ಹಾಗೂ ಫ್ಯಾಷನ್ ಡಿಸೈನರ್ ರಕ್ಷಿತಾಗೆ ಶುಭ ಕೋರಲು ರಮ್ಯಾ ಕೂಡ ಆರತಕ್ಷತೆಗೆ ಆಗಮಿಸಿದ್ದರು. ಒಂದು ಕ್ಷಣ ಮೋಹಕತಾರೆ ರಮ್ಯಾ ಎಂಟ್ರಿ ನೋಡಿ ಅನೇಕರು ದಂಗಾದರು.

    ರಕ್ಷಿತಾ ಸಹೋದರನ ಆರತಕ್ಷತೆಯಲ್ಲಿ ಸ್ಲೀವ್‌ಲೆಸ್ ಬ್ಲೌಸ್‌ಗೆ ಕಪ್ಪು ಬಣ್ಣದ ಸೀರೆಯುಟ್ಟು ರಮ್ಯಾ ಮಿರ ಮಿರ ಅಂತ ಮಿಂಚಿದ್ದಾರೆ. ವಯಸ್ಸು 42 ವರ್ಷವಾಗಿದ್ರೂ ಬಳುಕುವ ಬಳ್ಳಿಯಂತೆ ರಮ್ಯಾ ಕಂಗೊಳಿಸಿದ್ದಾರೆ. ಅವರ ಫಿಟ್‌ನೆಸ್‌ಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಚಿತ್ರರಂಗಕ್ಕೆ ಬಂದು ಹಲವು ವರ್ಷಗಳು ಕಳೆದಿದ್ರೂ ಕೂಡ ಇಂದಿಗೂ ರಕ್ಷಿತಾ ಹಾಗೂ ರಮ್ಯಾ ನಡುವಿನ ಅದೆಷ್ಟು ಚೆನ್ನಾಗಿದೇ ಎಂಬುದಕ್ಕೆ ರಾಣಾ ಆರತಕ್ಷತೆಯಲ್ಲಿ ಇಬ್ಬರೂ ಇದ್ದ ರೀತಿಯೇ ಸಾಕ್ಷಿಯಾಗಿದೆ. ರಕ್ಷಿತಾರನ್ನು ನೋಡ್ತಿದ್ದಂತೆ ರಮ್ಯಾ ತಬ್ಬಿಕೊಂಡಿದ್ದಾರೆ.

    ರಕ್ಷಿತಾ ಹಾಗೂ ರಮ್ಯಾ ಒಂದೇ ಕಾಲಘಟ್ಟದಲ್ಲಿ ಸಿನಿಮಾ ರಂಗದಲ್ಲಿ ಮಿಂಚಿದವರು. ಪುನೀತ್‌ರಾಜ್‌ಕುಮಾರ್‌ಗೆ ನಾಯಕಿಯರಾಗಿ ಸದ್ದು ಮಾಡಿದವರು.‌ ಇದನ್ನೂ ಓದಿ:ಕ್ರೇಜಿ ಕ್ವೀನ್‌ ರಕ್ಷಿತಾ ಸಹೋದರನ ಆರತಕ್ಷತೆ ಸಂಭ್ರಮದಲ್ಲಿ ದರ್ಶನ್

    2002ರಲ್ಲಿ ‘ಅಪ್ಪು’ ಸಿನಿಮಾದಲ್ಲಿ ರಕ್ಷಿತಾ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. 2003ರಲ್ಲಿ ‘ಅಭಿ’ ಸಿನಿಮಾದ ಮೂಲಕ ರಮ್ಯಾ ಅವರು ಮೊದಲ ಬಾರಿಗೆ ಬಣ್ಣದ ಹಚ್ಚಿದ್ದರು. ಪುನೀತ್‌ಗೆ ನಾಯಕಿಯಾಗಿ ಸೈ ಎನಿಸಿಕೊಂಡರು.

    ರಮ್ಯಾ ಹಾಗೂ ರಕ್ಷಿತಾ ಇಬ್ಬರ ನಡುವೆಯೂ ಒಂದೊಳ್ಳೆಯ ಪೈಪೋಟಿ ಇತ್ತು. ಇನ್ನೂ 2006ರಲ್ಲಿ ‘ತನನಂ ತನನಂ’ ಸಿನಿಮಾದಲ್ಲಿ ಶ್ಯಾಮ್‌ಗೆ ನಾಯಕಿಯರಾಗಿ ರಮ್ಯಾ ಹಾಗೂ ರಕ್ಷಿತಾ ನಟಿಸಿದ್ದರು. ಕವಿತಾ ಲಂಕೇಶ್ ಅವರು ನಿರ್ದೇಶನ ಮಾಡಿದ್ದರು.

    ಇನ್ನೂ ರಕ್ಷಿತಾ 2007ರಲ್ಲಿ ಡೈರೆಕ್ಟರ್ ಪ್ರೇಮ್ ಜೊತೆ ಮದುವೆಯಾದರು. ರಮ್ಯಾ ಸಿನಿಮಾ ಬಳಿಕ ಪಾಲಿಟಿಕ್ಸ್ ಎಂಟ್ರಿ ಕೊಟ್ಟಿದ್ದರು. ಪ್ರಸ್ತುತ ರಮ್ಯಾ ಅವರು ಸಿನಿಮಾ, ರಾಜಕೀಯ ಎರಡರಿಂದಲೂ ಅಂತರ ಕಾಯ್ದುಕೊಂಡಿದ್ದಾರೆ.