Tag: Ramya

  • ನಾನು ಬಾಸ್ಕೆಟ್‌ಬಾಲ್ ಪ್ಲೇಯರ್, ಸ್ಪೋರ್ಟ್ಸ್‌ಗೆ  ಹೈಟ್ ಮ್ಯಾಟರ್ ಆಗಲ್ಲ: ರಮ್ಯಾ

    ನಾನು ಬಾಸ್ಕೆಟ್‌ಬಾಲ್ ಪ್ಲೇಯರ್, ಸ್ಪೋರ್ಟ್ಸ್‌ಗೆ ಹೈಟ್ ಮ್ಯಾಟರ್ ಆಗಲ್ಲ: ರಮ್ಯಾ

    ಕ್ವೀನ್ಸ್ ಪ್ರೀಮಿಯರ್ ಲೀಗ್ (QPL) ಲೋಗೊ ಲಾಂಚ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸ್ಯಾಂಡಲ್‌ವುಡ್‌ನ ಮೋಹಕತಾರೆ ರಮ್ಯಾ (Ramya) ಲೋಗೊ ಲಾಂಚ್ ಮಾಡಿದ್ದಾರೆ.

    ಈ ಸಂದರ್ಭ ಮಾತನಾಡಿದ ಅವರು, ತಮ್ಮ ಬಾಲ್ಯದ ದಿನಗಳ ಬಗ್ಗೆ ಮೆಲುಕು ಹಾಕಿಕೊಂಡಿದ್ದಾರೆ. ಅಲ್ಲದೇ ಸಿನಿಮಾ ಇಂಡಸ್ಟ್ರಿಯಲ್ಲಿ ಹೆಣ್ಣುಮಕ್ಕಳಿಗೆ ಸಪೋರ್ಟ್ ಕಡಿಮೆ. ಕ್ರೀಡೆಯಲ್ಲಿ ಗಂಡು ಮಕ್ಕಳು ಡೊಮಿನೇಟ್ ಮಾಡ್ತಾರೆ. ಹೆಣ್ಮಕ್ಕಳು ಕ್ರೀಡೆಯಲ್ಲಿ ಭಾಗಿಯಾಗಬೇಕು ಎಂದಿದ್ದಾರೆ. ಇದನ್ನೂ ಓದಿ: ಕೆಡಿ ಟೀಸರ್ ಡೇಟ್ ಘೋಷಣೆ – ಪ್ರಚಾರದ ವೈಖರಿಯಲ್ಲಿದೆ ಮಿಸ್ಟರಿ!

    ಬಡವ, ಶ್ರೀಮಂತ ಎನ್ನದೇ ಆಡೋ ಆಟ ಅಂದ್ರೆ ಅದು ಕ್ರೀಡೆ. ನಾನು ಬಾಸ್ಕೆಟ್‌ಬಾಲ್ ಪ್ಲೇಯರ್. ಅದರಲ್ಲಿ ನಾನು ಪ್ರವೀಣೆ. ನಾನು ಹೈಟ್ ಕಮ್ಮಿ ಇದೀನಿ ಅಂತಾ ಅಲ್ಲ. ಸ್ಪೋರ್ಟ್ಸ್‌ಗೆ ಹೈಟ್ ಮ್ಯಾಟರ್ ಆಗೋದೇ ಇಲ್ಲ. ಅಪ್ಪು ನಾನು ಇಬ್ಬರು ಆರ್‌ಸಿಬಿ ತಂಡಕ್ಕೆ ರಾಯಭಾರಿ ಆಗಿದ್ದೆವು. ಕನ್ನಡ ಚಿತ್ರರಂಗದಲ್ಲಿ ಯುನಿಟಿ ಕಾಣಿಸುತ್ತಿಲ್ಲ. ಈ ರೀತಿ ಸ್ಪೋರ್ಟ್ಸ್ ಹಮ್ಮಿಕೊಂಡ್ರೆ ಆಗಲಾದ್ರೂ ಒಗ್ಗಟ್ಟು ಕಾಣಿಸುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದರ್ಶನ್ ಫ್ಯಾಮಿಲಿ ಕುಡಿ ಶೀಘ್ರದಲ್ಲೇ ಹೀರೋ ಆಗಿ ಎಂಟ್ರಿ?

    ಇತ್ತೀಚೆಗೆ ಸ್ಯಾಂಡಲ್‌ವುಡ್‌ನ ಹಲವಾರು ಕಾರ್ಯಕ್ರಮಗಳಿಗೆ ಬರುತ್ತಿರುವ ಬಗ್ಗೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹೊಸ ಹೊಸ ಸಿನಿಮಾ ತಂಡದವ್ರು ಆಹ್ವಾನ ಮಾಡಿದ್ರೆ ಅಥವಾ ಸಿನಿಮಾ ಪ್ರಮೋಷನ್ ಬಗ್ಗೆ ಕೇಳಿಕೊಂಡಾಗ ಮಾಡಿಕೊಟ್ಟಿದ್ದೇನೆ ಎಂದಿದ್ದಾರೆ.

    ಹೊಸಬರಾದ್ರೂ ನಾನು ಅವರಿಗೆ ಸಪೋರ್ಟ್ ಮಾಡುತ್ತೇನೆ. ನಾನು ಇವತ್ತು ಈ ಸ್ಥಾನದಲ್ಲಿ ಇರೋಕೆ ಕಾರಣ ಮಾಧ್ಯಮದವರು ಹಾಗೂ ಕರುನಾಡಿನ ಜನತೆ. ನೀವು ಸಿನಿಮಾ ನೋಡಿ, ನನಗೆ ಸಪೋರ್ಟ್ ಮಾಡಿದ್ದೀರಾ. ಕ್ವೀನ್ಸ್ ಪ್ರೀಮಿಯರ್ ಲೀಗ್‌ನಿಂದ ಹೆಣ್ಣುಮಕ್ಕಳಿಗೆ ಸ್ಪೋರ್ಟ್ಸ್‌ನಲ್ಲಿ ಭಾಗಿಯಾಗೋಕೆ ಅವಕಾಶ ಸಿಗುತ್ತದೆ. ಎಲ್ಲರೂ ಒಗ್ಗಟ್ಟಾಗಿ ಬೆರೆಯೋಕೆ, ಟೈಂ ಕಳೆಯೋಕೆ ಅವಕಾಶ ಸಿಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾಷೆ ಹೆಸರಲ್ಲಿ ಜನರನ್ನು ವಿಭಜಿಸಬಾರದು: ಮರಾಠಿ-ಹಿಂದಿ ಸಂಘರ್ಷ ಬಗ್ಗೆ ಕಂಗನಾ ಪ್ರತಿಕ್ರಿಯೆ

    ಮೋಹಕತಾರೆ ರಮ್ಯಾ ಇತ್ತೀಚೆಗೆ ಸ್ಯಾಂಡಲ್‌ವುಡ್ ಕಡೆ ಹಾಗೂ ಅದಕ್ಕೆ ಪೂರಕವಾದ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಅಲ್ಲದೇ ಅವರ ಅಭಿಮಾನಿಗಳಿಗೆ ಸದ್ಯದಲ್ಲಿಯೇ ಗುಡ್‌ನ್ಯೂಸ್ ನೀಡಲು ರೆಡಿಯಾಗಿದ್ದಾರೆ.

  • ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ – ಇದು ಹೃದಯ ವಿದ್ರಾವಕ ಘಟನೆ; ರಮ್ಯಾ ಬೇಸರ

    ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ – ಇದು ಹೃದಯ ವಿದ್ರಾವಕ ಘಟನೆ; ರಮ್ಯಾ ಬೇಸರ

    ಬೆಂಗಳೂರು: ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (Chinnaswamy Stadium) ಕಾಲುಳ್ತಿತ (Stampede) ಉಂಟಾಗಿ 10 ಮಂದಿ ಅಭಿಮಾನಿಗಳು ಮೃತಪಟ್ಟಿದ್ದು, ಈ ಬಗ್ಗೆ ನಟಿ ರಮ್ಯಾ (Ramya) ಎಕ್ಸ್ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.

    ಸ್ಟೇಡಿಯಂನಲ್ಲಿ ಕಾಲುಳ್ತಿತದ ಬಗ್ಗೆ ಎಕ್ಸ್ ಪೋಸ್ಟ್ ಮಾಡಿದ ಅವರು, ಸಂಭ್ರಮಾಚರಣೆಯು ಯಾವ ರೀತಿ ದುಃಖಕರ ಸಂಗತಿಯಾಗಿ ಬದಲಾಯಿತು. ನಿಜಕ್ಕೂ ಇದು ಹೃದಯವಿದ್ರಾಕ ಘಟನೆ ಎಂದು ಬರೆದುಕೊಂಡು ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸರ್ಕಾರದ ಪ್ರಚಾರದ ಹುಚ್ಚಿಗೆ ಜನ ಬಲಿಯಾಗಿದ್ದಾರೆ: ವಿಜಯೇಂದ್ರ ಆಕ್ರೋಶ

    ಆರ್‌ಸಿಬಿ (RCB) ಗೆಲುವು ವಿಜಯೋತ್ಸವದ ವೇಳೆ ಯಡವಟ್ಟು ಸಂಭವಿಸಿ, ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತಕ್ಕೆ 10 ಮಂದಿ ಆರ್‌ಸಿಬಿ ಫ್ಯಾನ್ಸ್ ದುರ್ಮರಣಕ್ಕೀಡಾಗಿದ್ದಾರೆ. 50ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಇದನ್ನೂ ಓದಿ: ಆರ್‌ಸಿಬಿ ವಿಜಯೋತ್ಸವದ ವೇಳೆ ಯಡವಟ್ಟು – ಕಾಲ್ತುಳಿತಕ್ಕೆ 10 ಆರ್‌ಸಿಬಿ ಫ್ಯಾನ್ಸ್‌ ದುರ್ಮರಣ

    ಬೌರಿಂಗ್ ಆಸ್ಪತ್ರೆಯಲ್ಲಿ 5, ವೈದೇಹಿ ಆಸ್ಪತ್ರೆಯಲ್ಲಿ 4 ಹಾಗೂ ಮಣಿಪಾಲ್ ಆಸ್ಪತ್ರೆಯಲ್ಲಿ ಒಬ್ಬರು ಅಭಿಮಾನಿಗಳು ಮೃತಪಟ್ಟಿದ್ದಾರೆಂದು ವೈದ್ಯರು ದೃಢಪಡಿಸಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಮೃತಪಟ್ಟವರು ಯಲಹಂಕ ಮೂಲದ ಓರ್ವ ಯುವತಿ ಹಾಗೂ 6 ಯುವಕರು ಎಂದು ಗುರುತಿಸಲಾಗಿದೆ.

  • ಕಮಲ್‌ ಹಾಸನ್‌ ಪರ ಬ್ಯಾಟ್‌ ಬೀಸಿದ ರಮ್ಯಾ – ಸಿನಿಮಾ ಬಹಿಷ್ಕರಿಸುವುದು ಸ್ವಲ್ಪ ಜಾಸ್ತಿ ಆಯ್ತು ಅಲ್ಲವೇ? ಎಂದ ನಟಿ

    ಕಮಲ್‌ ಹಾಸನ್‌ ಪರ ಬ್ಯಾಟ್‌ ಬೀಸಿದ ರಮ್ಯಾ – ಸಿನಿಮಾ ಬಹಿಷ್ಕರಿಸುವುದು ಸ್ವಲ್ಪ ಜಾಸ್ತಿ ಆಯ್ತು ಅಲ್ಲವೇ? ಎಂದ ನಟಿ

    ಬೆಂಗಳೂರು: ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದ ನಟ ಕಮಲ್ ಹಾಸನ್ (Kamal Haasan) ಪರವಾಗಿ ಮಾಜಿ ಸಂಸದೆ, ನಟಿ ರಮ್ಯಾ (Actress) ಬ್ಯಾಟ್ ಬೀಸಿದ್ದಾರೆ.

    ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿಯೊಂದನ್ನ ಹಂಚಿಕೊಂಡಿದ್ದಾರೆ. ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಎಲ್ಲವೂ ದ್ರಾವಿಡ ಭಾಷೆಗಳ ಒಂದೇ ಕೊಡಿಯಡಿಯಲ್ಲಿ ಬರುತ್ತವೆ. ಆದ್ರೆ ನಮ್ಮಲ್ಲಿನ ಕೆಲವು ಸಾಮಾನ್ಯತೆ ಮತ್ತು ಹಂಚಿಕೆಯಾಗಿರುವ ಭಾಷಾ ವಂಶಾವಳಿ ಬೇರೆ ಇರಬಹುದು. ಅವರೆಡೂ ಶ್ರೇಷ್ಠವಲ್ಲ. ಸಂಸ್ಕೃತ ಎಲ್ಲಾ ಭಾಷೆಗಳ ತಾಯಿ ಎಂದು ಭಾವಿಸುವವರಿಗೆ ನೀವು ಕೂಡ ತಪ್ಪಾಗಿ ಕಾಣಿಸಿಸುತ್ತಿದ್ದೀರಿ. ಏಕೆಂದರೆ ಸಂಸ್ಕೃತ ಇಂಡೋ – ಆರ್ಯನ್‌ ಭಾಷೆ. ನಾವು ದ್ರಾವೀಡರು, ಎರಡೂ ಪಸ್ಪರ ಭಿನ್ನ. ಕಮಲ್ ಹಾಸನ್ ಅವರು ತಪ್ಪು ಮಾಡಿದ್ದಾರೆ? ಆದ್ರೆ ಚಿತ್ರವನ್ನ ಬಹಿಷ್ಕರಿಸುವುದು ಸ್ವಲ್ಪ ಜಾಸ್ತಿ ಆಯ್ತು ಅಲ್ಲವೇ? ಹಿಂದಿ ಹೇರಿಕೆಯ ವಿರುದ್ಧ ನಾವು ಒಂದಾಗಬೇಕು. ಅದಕ್ಕಾಗಿ ನಾವು ಮೊದಲು ಪರಸ್ಪರ ಗೌರವಿಸುವದನ್ನು ಕಲಿಯಬೇಕು ಎಂದು ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ಚಾರ್ಟ್‌ ಸಮೇತ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಕನ್ನಡದ ಬಗ್ಗೆ ಕಮಲ್ ಹಾಸನ್‌ಗೆ ಪ್ರೀತಿಯಿದೆ, ಯಾಕೆ ಅದನ್ನ ದೊಡ್ಡ ವಿಷಯ ಮಾಡ್ತೀರಾ?: ಶಿವಣ್ಣ

    ಇನ್ನೂ ತಮಿಳಿನಿಂದ ಕನ್ನಡ ಹುಟ್ಟಿದೆ ಅನ್ನೋ ಕಮಲ್ ಹಾಸನ್ ವಿವಾದದಲ್ಲಿ ತಮಿಳುನಾಡಿನ ರಾಜಕಾರಣಿಗಳು ಮೂಗು ತೂರಿಸ್ತಿದ್ದಾರೆ. ವಿಸಿಕೆ ಪಕ್ಷದ ಮುಖ್ಯಸ್ಥ ತಿರುಮಾವಳವನ್, ತಮಿಳು ದ್ರಾವಿಡ ಭಾಷೆಯ ತಾಯಿ, ಈಗಾಗಲೇ ಇತಿಹಾಸದಿಂದ ಸಾಬೀತಾಗಿದೆ. ಇತಿಹಾಸ ತಜ್ಞರು ಕೂಡ ಇದನ್ನು ಸಾಬೀತುಪಡಿಸಿದ್ದಾರೆ. ಕಮಲ್‌ ಹಾಸನ್ ಹೇಳಿರೋ ಮಾತನ್ನು ಕನ್ನಡಿಗರು ಹಾಗೂ ಮಲಯಾಳಿಗಳು ಒಪ್ಪುತ್ತಿಲ್ಲ. ತಮಿಳು ಎಲ್ಲ ಭಾಷೆಗಳ ತಾಯಿ ಅನ್ನೋದು ಇತಿಹಾಸ. ಇದು ಸತ್ಯ ಅಂತ ತುಪ್ಪ ಸುರಿದಿದ್ದಾರೆ. ಇದನ್ನೂ ಓದಿ: ಮತ್ತೆ ಕಮಲ್ ಹಾಸನ್ ಮೊಂಡಾಟ – ಕ್ಷಮೆ ಕೇಳಲ್ಲ ಎಂದ ನಟ

    ಆದರೆ, ಕಮಲ್ ಹಾಸನ್ ದುರಂಹಕಾರಿ, ವಿಷಬೀಜ ಬಿತ್ತುತ್ತಿದ್ದಾರೆ ಅಂತ ವಿಜಯೇಂದ್ರ ಖಂಡಿಸಿದ್ರೆ, ಕ್ಷಮೆ ಕೇಳಲೇಬೇಕು ಅಂತ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ. ಸಿಟಿ ರವಿ ಕೂಡ ನಾವೆಲ್ಲಾ ಒಂದೇ ತಾಯಿಯ ಮಕ್ಕಳು ಅಂತ ಗೌರವ ಕೊಟ್ಟಿದ್ದೇವೆ ಅಂದಿದ್ದಾರೆ. ಇದನ್ನೂ ಓದಿ: ನಟ ಕಮಲ್ ಹಾಸನ್ ಕ್ಷಮೆಯಾಚನೆಗೆ ಆಗ್ರಹ – ಫಿಲಂ ಚೇಂಬರ್‌ಗೆ ಕರವೇ ಮುತ್ತಿಗೆ

  • ‘ಮಾರ್ನಮಿ’ಗೆ ಮೋಹಕ ತಾರೆ ರಮ್ಯಾ ಸಾಥ್ – ರಿವೀಲಾಯ್ತು ಚೈತ್ರಾ ಆಚಾರ್ ರೋಲ್

    ‘ಮಾರ್ನಮಿ’ಗೆ ಮೋಹಕ ತಾರೆ ರಮ್ಯಾ ಸಾಥ್ – ರಿವೀಲಾಯ್ತು ಚೈತ್ರಾ ಆಚಾರ್ ರೋಲ್

    ನ್ನಡ ಚಿತ್ರರಂಗದ ಪ್ರತಿಭಾವಂತ ನಟಿ ಚೈತ್ರಾ ಆಚಾರ್, ಯಾವುದೇ ಪಾತ್ರ ಕೊಟ್ಟರೂ ಅದಕ್ಕೆ ಜೀವ ತುಂಬಬಲ್ಲರು. ಈಗ ಅವರು ಮಾರ್ನಮಿಗೆ ಮದುವೆಯಾಗೋದಿಕ್ಕೆ ಹೊರಟಿದ್ದಾರೆ. ಅರೇ! ಚೈತ್ರಾ ಮದುವೆನಾ ಅಂತಾ ಹುಬ್ಬೇರಿಸಬೇಡಿ. ಮದುವೆ ನಿಜವೇ, ಆದ್ರೆ ರೀಲ್‌ನಲ್ಲಿ. ಕರಾವಳಿ ಭಾಗದ ಪ್ರೇಮಕಥೆಯುಳ್ಳ ‘ಮಾರ್ನಮಿ’ ಸಿನಿಮಾದಲ್ಲಿ ಚೈತ್ರಾ ಆಚಾರ್ (Chaithra Achar) ನಾಯಕಿಯಾಗಿ ನಟಿಸುತ್ತಿದ್ದಾರೆ. ಅವರ ಪಾತ್ರದ ಪರಿಚಯದ ಟೀಸರ್ ಇಂದು (ಮೇ 25) ಬಿಡುಗಡೆಯಾಗಿದೆ. ಇದನ್ನೂ ಓದಿ:ಆಲಿಯಾ ಭಟ್‌ ಮತ್ತೆ ಪ್ರೆಗ್ನೆಂಟ್..? ವೈರಲ್‌ ಆಯ್ತು ವಿಡಿಯೋ..!

    ‘ಮಾರ್ನಮಿ’ಯಲ್ಲಿ (Maarnami) ಚೈತ್ರಾ, ದೀಕ್ಷಾ ಎಂಬ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ತನ್ನ ಪ್ರೀತಿ, ಮದುವೆ ಬಗ್ಗೆ ಕರಾವಳಿ ಭಾಷೆಯಲ್ಲಿ ಪರಿಚಯ ಮಾಡಿಕೊಳ್ಳುತ್ತಾರೆ. ಡಿ ಗ್ಲಾಮ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಮೋಹಕ ತಾರೆ ರಮ್ಯಾ (Ramya) ತಮ್ಮ ಇನ್ಸ್ಟಾಗ್ರಾಂ ಟೀಸರ್ ಬಿಡುಗಡೆ ಮಾಡಿ ಇಡೀ ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ. ಇದನ್ನೂ ಓದಿ: ತಮ್ಮನ್ನಾರನ್ನ ವಿರೋಧಿಸುವುದಾದ್ರೆ ಅವರ ಸಿನಿಮಾಗಳನ್ನೂ ನೋಡಬೇಡಿ: ಮಧು ಬಂಗಾರಪ್ಪ

    ಕುಂದಾಪುರದ ಪಡುಕೋಣೆಯ ರಿಶಿತ್ ಶೆಟ್ಟಿ ‘ಮಾರ್ನಮಿ’ ಸಿನಿಮಾದ ಸೂತ್ರಧಾರ. ಕರಾವಳಿ ಭಾಗದ ಹುಲಿವೇಷದ ಹಿನ್ನೆಲೆ ಸಂಸ್ಕೃತಿಯ ಜೊತೆಗೆ ಪ್ರೇಮಕಥೆ, ಆಕ್ಷನ್, ಎಮೋಷನ್, ಕಾಮಿಡಿ ಮಿಶ್ರಣದ ಮಾರ್ನಮಿ ಚಿತ್ರವನ್ನು ಗುನಾಧ್ಯ ಬ್ಯಾನರ್ ಅಡಿಯಲ್ಲಿ ಶಿಲ್ಪಾ ನಿಶಾಂತ್ ನಿರ್ಮಾಣ ಮಾಡುತ್ತಿದ್ದಾರೆ.

    ಈ ಸಿನಿಮಾದಲ್ಲಿ ಗಿಣಿರಾಮ, ನಿನಗಾಗಿ ಸೀರಿಯಲ್ ಖ್ಯಾತಿಯ ರಿತ್ವಿಕ್ ಮಠದ್ ನಾಯಕನಾಗಿ ಅಭಿನಯಿಸಿದ್ದಾರೆ. ಪ್ರಕಾಶ್ ತುಮಿನಾಡು, ಸೋನು ಗೌಡ, ಜ್ಯೋತೀಶ್ ಶೆಟ್ಟಿ, ರೋಚಿತ್, ಸ್ವರಾಜ್ ಶೆಟ್ಟಿ, ಮೈಮ್ ರಾಮದಾಸ್ ಹಾಗೂ ಚೈತ್ರ ಶೆಟ್ಟಿ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ಈ ಚಿತ್ರಕ್ಕೆ ಚರಣ್ ರಾಜ್ ಸಂಗೀತ ನಿರ್ದೇಶನವಿದ್ದು, ಶಿವಸೇನ ಛಾಯಾಗ್ರಹಣ ನಿರ್ವಹಿಸುತ್ತಿದ್ದಾರೆ.

  • ತಮನ್ನಾ ರಾಯಭಾರಿ | ತೆರಿಗೆ ಪಾವತಿದಾರರ ಹಣವನ್ನು ವ್ಯರ್ಥ ಮಾಡಿದಂತೆ: ರಮ್ಯಾ ಬೇಸರ

    ತಮನ್ನಾ ರಾಯಭಾರಿ | ತೆರಿಗೆ ಪಾವತಿದಾರರ ಹಣವನ್ನು ವ್ಯರ್ಥ ಮಾಡಿದಂತೆ: ರಮ್ಯಾ ಬೇಸರ

    ಮೈಸೂರು ಸ್ಯಾಂಡಲ್‌ ಸೋಪ್‌ಗೆ (Mysore Sandal Soap) ಪ್ರತಿ ಕನ್ನಡಿಗನೂ ರಾಯಭಾರಿ ಎಂದು ಸ್ಯಾಂಡಲ್‌ವುಡ್‌ ಕ್ವೀನ್ ರಮ್ಯಾ (Ramya) ಹೇಳಿಕೊಂಡಿದ್ದಾರೆ.

    ತೆಲುಗು ನಟಿ ತಮನ್ನಾ ಭಾಟಿಯಾ (Tamannaah Bhatia ) ಅವರನ್ನು ಮೈಸೂರು ಸ್ಯಾಂಡಲ್‌ ಸೋಪ್‌ಗೆ ರಾಯಭಾರಿಯಾಗಿ ಆಯ್ಕೆ ಮಾಡಿರುವುದರಿಂದ ಎದ್ದಿರುವ ವಿವಾದದ ಬೆನ್ನಲ್ಲೇ ರಮ್ಯಾ, ಇನ್ಸ್ಟಾದಲ್ಲಿ ಸ್ಟೋರಿ ಹಂಚಿಕೊಂಡಿದ್ದಾರೆ. ಅದರಲ್ಲಿ, ಉತ್ಪನ್ನಗಳ ಪ್ರಮೋಷನ್‌ಗೆ ರಾಯಭಾರಿಗಳನ್ನು ನೇಮಿಸುವುದು ಹಳೆಯ ಸಂಪ್ರದಾಯ. ಇದರಿಂದ ತೆರಿಗೆ ಪಾವತಿದಾರರ ಹಣ ವ್ಯರ್ಥಮಾಡಿದಂತಾಗುತ್ತದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಮೈಸೂರು ಸ್ಯಾಂಡಲ್‌ ಸೋಪ್‌ಗೆ ಮಿಲ್ಕಿ ಬ್ಯೂಟಿ ರಾಯಭಾರಿ – ಬರೋಬ್ಬರಿ 6.20 ಕೋಟಿ ಸಂಭಾವನೆ

    ಒಂದು ಉತ್ಪನ್ನಕ್ಕೆ ಜನ ಗ್ರಾಹಕರಾಗಲು, ಆ ಉತ್ಪನ್ನ ಉತ್ತಮವಾಗಿರಬೇಕು. ನಮ್ಮ ಮೈಸೂರು ಸ್ಯಾಂಡಲ್‌ ಸೋಪ್ ಉತ್ತಮ ಉತ್ಪನ್ನವಷ್ಟೇ ಅಲ್ಲ, ಅದು‌ ನಮ್ಮ ಪರಂಪರೆಯಾಗಿದೆ. ಮೈಸೂರು ಸ್ಯಾಂಡಲ್ ಸೋಪ್ ಬಳಸಿದ ಪ್ರತಿಯೊಬ್ಬ ವ್ಯಕ್ತಿಯು ಅದರ ರಾಯಭಾರಿ. ಪ್ರತಿಯೊಬ್ಬ ಕನ್ನಡಿಗ ಸಹ ಅದರ ರಾಯಭಾರಿ, ಅದನ್ನು ಪ್ರತಿಯೊಬ್ಬ ಕನ್ನಡಿಗನು ಉಚಿತವಾಗಿ ಜಗತ್ತಿಗೆ ಪರಿಚಯ ಮಾಡಿಕೊಡುವ ಕೆಲಸ ಮಾಡುತ್ತಾನೆ ಎಂದು ಅವರು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

    ಪಿ.ಎಸ್. ಆಪಲ್ ಒಂದು ಯಶಸ್ವಿ ಬ್ರ್ಯಾಂಡ್, ಅದು ‘ಬ್ರಾಂಡ್ ಅಂಬಾಸಿಡರ್‌ನ್ನು ಹೊಂದಿಲ್ಲ. ರಾಯಭಾರಿಗಾಗಿ ಆ ಕಂಪನಿ ಹಣ ವ್ಯಯಿಸುವುದಿಲ್ಲ. ಇನ್ನೂ ನಾನು ಕಂಡಂತೆ ಡವ್ ಸೋಪ್‌ನದ್ದು ಅತ್ಯುತ್ತಮ ಅಭಿಯಾನಗಳಲ್ಲಿ ಒಂದು ಎಂದು ಹೇಳಿಕೊಂಡಿದ್ದಾರೆ.

    ಮೈಸೂರು ಸ್ಯಾಂಡಲ್‌ ಸೋಪ್‌ಗೆ ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಲಾಗಿದ್ದು, ನಟಿಗೆ ಕರ್ನಾಟಕ ಸರ್ಕಾರ 6.20 ಕೋಟಿ ರೂ. ಹಣ ಕೊಟ್ಟಿದೆ. ಇದಕ್ಕೆ ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ನಟಿ ರಮ್ಯಾ ಕೂಡ ಪೋಸ್ಟ್‌ ಮಾಡಿದ್ದು, ಸಂಚಲನ ಮೂಡಿಸಿದೆ. ಇದನ್ನೂ ಓದಿ: Video | ತಮನ್ನಾಗೆ 6.20 ಕೋಟಿ – ನಟಿ ತಾರಾ ಬೇಸರ

  • ಯುದ್ಧ ಬೇಡ, ಯಾರೂ ಉದ್ಧಾರ ಆಗಲ್ಲ: ರಮ್ಯಾ

    ಯುದ್ಧ ಬೇಡ, ಯಾರೂ ಉದ್ಧಾರ ಆಗಲ್ಲ: ರಮ್ಯಾ

    ಯುದ್ಧ ಬೇಡ. ಯುದ್ಧದಿಂದ ಯಾರೂ ಉದ್ಧಾರ ಆಗಲ್ಲ, ಅದರಿಂದ ನಮ್ಮ ಸೈನಿಕರೇ ಸಾಯೋದು ಎಂದು ಪಹಲ್ಗಾಮ್‌ನಲ್ಲಿ (Pahalgam Terrorist Attack) ನಡೆದ ಉಗ್ರರ ದಾಳಿ ಬಗ್ಗೆ ರಮ್ಯಾ (Ramya) ಮಾತನಾಡಿದ್ದಾರೆ. ಇದನ್ನೂ ಓದಿ:ನಟಿ ಲಾಸ್ಯ ನಾಗರಾಜ್ ತಾಯಿ ಮೇಲೆ ಚಿಕ್ಕಮ್ಮನಿಂದ ಹಲ್ಲೆ

    ಪಹಲ್ಗಾಮ್‌ನಲ್ಲಿ ದಾಳಿ ಆಗಿರೋದು ಗುಪ್ತಚರ ವೈಫಲ್ಯ ಹಾಗೂ ಭದ್ರತಾ ಉಲ್ಲಂಘನೆನೇ ಕಾರಣ. ಹೇಗೆ ಉಗ್ರರು ಒಳಗೆ ಬಂದ್ರು, ಹೀಗೆಲ್ಲಾ ಆಗಲು ಏನು ನ್ಯೂನತೆ ಕಾರಣ ಅನ್ನೋದನ್ನು ತಿಳಿದುಕೊಳ್ಳಬೇಕು. ಈಗ ಸರ್ಕಾರದವರು ಏನು ಆ್ಯಕ್ಷನ್ ತೆಗೆದುಕೊಳ್ತಾರೆ ಅಂತ ನೋಡಬೇಕು ಎಂದಿದ್ದಾರೆ. ಈ ಹಿಂದೆ ಉಪೇಂದ್ರ ಜೊತೆಗಿನ ಸಿನಿಮಾವೊಂದಕ್ಕೆ ಕಾಶ್ಮೀರಕ್ಕೆ ಹೋಗಿ ಬಂದಿದ್ದೇನೆ. ಆಗ ನಾವು ಕಾಶ್ಮೀರದಲ್ಲಿ ಶೂಟಿಂಗ್ ಮಾಡುವಾಗ ಫುಲ್ ಸೆಕ್ಯೂರಿಟಿ ಕೊಟ್ಟಿದ್ದರು ಎಂದು ತಿಳಿಸಿದರು.

    ಯುದ್ಧದ ಬಗ್ಗೆ ಮಾತನಾಡಿ, ವೈಯಕ್ತಿಕವಾಗಿ ಹಿಂಸೆ ಮಾಡೋದನ್ನು ನಾನು ಇಷ್ಟಪಡಲ್ಲ. ಯುದ್ಧ ಮಾಡೋದ್ರಿಂದ ಯಾರು ಉದ್ಧಾರ ಆಗಲ್ಲ. ಎಲ್ಲದ್ದಕ್ಕೂ ಯುದ್ಧನೇ ಉತ್ತರ ಅಲ್ಲ, ಇದ್ದರಿಂದ ನಮ್ಮ ಸೈನಿಕರೇ ಸಾಯೋದು. ನಾವು ನಾಯಕರನ್ನು ಎಲೆಕ್ಟ್ ಮಾಡೋದು ನಮ್ಮ ರಕ್ಷಣೆ ಮಾಡಲಿ ಅಂತ ಅಲ್ವಾ. ಇನ್ನೊಂದು ಬಾರಿ ಈ ತರ ನಡೆಯದೇ ಇರೋ ಹಾಗೇ ನೋಡಿಕೊಳ್ಳಬೇಕು. ಅದು ಬಿಟ್ಟು ಯುದ್ಧನೇ ಪರಿಹಾರ ಅಲ್ಲ ಎಂದಿದ್ದಾರೆ. ಇದನ್ನೂ ಓದಿ:ಉದ್ಯಮಿ ಜೊತೆ ಎಂಗೇಜ್ ಆದ ಬಾಲಿವುಡ್ ಗಾಯಕಿ ಪ್ರಕೃತಿ

    ನರೇಂದ್ರ ಮೋದಿಯವರ ಮುಂದಿನ ನಿರ್ಧಾರ ಏನಿರಬಹುದು ಎಂದು ನಿಜವಾಗಲೂ ಗೊತ್ತಿಲ್ಲ. ನಾವು ಇಲ್ಲಿ ಇದ್ದೀವಿ, ಇದರ ಬಗ್ಗೆ ಕಾಮೆಂಟ್ ಮಾಡೋದು ಸುಲಭ. ಆದರೆ ಅಲ್ಲಿದ್ದವರಿಗೆ ಒಳಗೆ ಏನೆಲ್ಲಾ ರಾಜಕೀಯ ನಡೆಯುತ್ತಿದೆ ಎಂದು ಗೊತ್ತಿರುತ್ತದೆ. ಹಾಗಾಗಿ ನಾಯಕರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಅಂತ ಕಾದು ನೋಡಬೇಕು. ನಾವು ಸಾಮಾನ್ಯ ಜನರು, ಕರೆನ್ಸಿಯ ಕಾನೂನು ಮಾನ್ಯತೆಯನ್ನು ರದ್ದುಗೊಳಿಸೋದ್ರಿಂದ ಟೆರರಿಸಂ ನಿಲ್ಲತ್ತದೆ ಎಂದು ಹೇಳಿದ್ರು. ಅದು ಇದುವರೆಗೂ ನಿಂತಿಲ್ಲ. ಅದಕ್ಕೆ ಉತ್ತರ ನಾಯಕರೇ ಹೇಳಬೇಕು ಎಂದು ರಮ್ಯಾ ಪ್ರಶ್ನಿಸಿದರು.

  • ಪ್ರಣಿತಾ ಮಗನ ನಾಮಕರಣದ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ ತಾರೆಯರು

    ಪ್ರಣಿತಾ ಮಗನ ನಾಮಕರಣದ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ ತಾರೆಯರು

    ಸ್ಯಾಂಡಲ್‌ವುಡ್ ನಟಿ ಪ್ರಣಿತಾ ಸುಭಾಷ್ (Pranitha Subhash) ಮಗನ ನಾಮಕರಣ ಏ.20ರಂದು ಅದ್ಧೂರಿಯಾಗಿ ಜರುಗಿದೆ. ಈ ಸಮಾರಂಭಕ್ಕೆ ಮೋಹಕತಾರೆ ರಮ್ಯಾ (Ramya) ಸೇರಿದಂತೆ ಅನೇಕ ಕನ್ನಡದ ನಟ-ನಟಿಯರು ಭಾಗಿಯಾಗಿದ್ದಾರೆ.

    ಬೆಂಗಳೂರಿನ ಖಾಸಗಿ ಹೋಟೆಲ್‌ವೊಂದರಲ್ಲಿ ನಟಿಯ ಮಗನ ನಾಮಕರಣ (Naming Ceremony) ನಡೆದಿದೆ. ಈ ಕಾರ್ಯಕ್ರಮಕ್ಕೆ ಸ್ಯಾಂಡಲ್‌ವುಡ್ ನಟ, ನಟಿಯರಿಗೆ ಆಹ್ವಾನ ನೀಡಲಾಗಿತ್ತು. ಅದರಂತೆ ರಮ್ಯಾ ಕೂಡ ನಾಮಕರಣ ಫಂಕ್ಷನ್‌ಗೆ ಆಗಮಿಸಿ ಪ್ರಣಿತಾ ಮಗನಿಗೆ ಶುಭಕೋರಿದರು. ಈ ಸಮಾರಂಭದಲ್ಲಿ ರಮ್ಯಾ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ.

    ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಅವರು ನಟಿಯ ಮಗನ ನಾಮಕರಣಕ್ಕೆ ಆಗಮಿಸಿದ್ದರು. ಇದನ್ನೂ ಓದಿ:ಚಂದನ್ ಶೆಟ್ಟಿ, ಸುಪ್ರೀತಾ ಸತ್ಯನಾರಾಯಣ್ ಎಂಗೇಜ್‌ಮೆಂಟ್ ಫೋಟೋಸ್

    ಡಾಲಿ ಧನಂಜಯ, ಯೋಗರಾಜ್ ಭಟ್ ಕೂಡ ಕಾರ್ಯಕ್ರಮಕ್ಕೆ ಆಗಮಿಸಿ ಪ್ರಣಿತಾ ಪುತ್ರನಿಗೆ ಶುಭಹಾರೈಸಿದರು. ಇದನ್ನೂ ಓದಿ:ನಾನು ಚಿಕ್ಕಂದಿನಿಂದ ಶಿವನ ಭಕ್ತ: ಉಜ್ಜಯಿನಿಯ ಮಹಾಕಾಳೇಶ್ವರ ದೇಗುಲದಲ್ಲಿ ಯಶ್

    ‘ಮಾಕ್ಸ್’ ಚಿತ್ರದ ನಟಿ ಸಂಯುಕ್ತಾ ಹೊರನಾಡ್, ಮಾಳವಿಕಾ ಅವಿನಾಶ್, ಹಿರಿಯ ನಟಿ ಶ್ರುತಿ ಕೃಷ್ಣ, ಕೆ. ಸುಧಾಕರ್, ನಟಿ ಅಮೂಲ್ಯ, ಧನ್ಯ ರಾಮ್‌ಕುಮಾರ್ ಅನೇಕರು ಭಾಗಿಯಾಗಿದ್ದರು.

    ಈ ಸಂದರ್ಭ ಲೈಟ್ ಪಿಂಕ್ ಬಣ್ಣದ ಸೀರೆಯಲ್ಲಿ ಪತಿಯೊಂದಿಗೆ ನಿಂತು ಪ್ರಣಿತಾ ಪೋಸ್ ನೀಡಿದ್ದಾರೆ. ಟ್ರೆಡಿಷನಲ್ ಲುಕ್‌ನಲ್ಲಿ ನಟಿ ಮಿಂಚಿದ್ದಾರೆ.

    ಅಂದಹಾಗೆ, ಎರಡನೇ ಮಗು ಇಂದು (ಏ.20) ಜಯ್ ಕೃಷ್ಣ ನಿತಿನ್ ರಾಜ್ ಅನ್ನೋ ಹೆಸರಿಟ್ಟಿದ್ದಾರೆ ಪ್ರಣಿತಾ ದಂಪತಿ.

     

    View this post on Instagram

     

    A post shared by Pranita Subhash (@pranitha.insta)

    2021ರಲ್ಲಿ ನಿತಿನ್ ರಾಜ್ ಜೊತೆ ಪ್ರಣಿತಾ ಸುಭಾಷ್ ಮದುವೆಯಾದರು. ಈ ಜೋಡಿಗೆ ಇಬ್ಬರೂ ಮುದ್ದಾದ ಮಕ್ಕಳಿದ್ದಾರೆ. 2 ವರ್ಷದ ಮುದ್ದು ಮಗಳಿಗೆ ಆರ್ನಾ ಎಂದು ಹೆಸರಿಟ್ಟಿದ್ದಾರೆ.

  • ಸಿನಿಮಾ ಮೂಲಕ ಪುನೀತ್ ಜೀವಂತವಾಗಿದ್ದಾರೆ: ‘ಅಪ್ಪು’ ಸಿನಿಮಾ ಬಗ್ಗೆ ರಮ್ಯಾ ಮಾತು

    ಸಿನಿಮಾ ಮೂಲಕ ಪುನೀತ್ ಜೀವಂತವಾಗಿದ್ದಾರೆ: ‘ಅಪ್ಪು’ ಸಿನಿಮಾ ಬಗ್ಗೆ ರಮ್ಯಾ ಮಾತು

    ಟ ಪುನೀತ್ ರಾಜ್‌ಕುಮಾರ್ (Puneeth Rajkumar) 50ನೇ ಜನ್ಮದಿನದ ಪ್ರಯುಕ್ತ ‘ಅಪ್ಪು’ (Appu) ಸಿನಿಮಾ ಮಾ.14ರಂದು ರೀ-ರಿಲೀಸ್ ಆಗಿದೆ. ಈ ಹಿನ್ನೆಲೆ ವೀರೇಶ್ ಥಿಯೇಟರ್‌ಗೆ ಆಗಮಿಸಿ ವಿನಯ್ ರಾಜ್‌ಕುಮಾರ್, ಶರ್ಮಿಳಾ ಮಾಂಡ್ರೆ ಜೊತೆ ರಮ್ಯಾ (Ramya) ‘ಅಪ್ಪು’ ಚಿತ್ರ ವೀಕ್ಷಿಸಿದ್ದಾರೆ. ಬಳಿಕ ‘ಪಬ್ಲಿಕ್ ಟಿವಿ’ಗೆ ಮಾತನಾಡಿದ ರಮ್ಯಾ, ಸಿನಿಮಾ ಮೂಲಕ ಅಪ್ಪು ಜೀವಂತವಾಗಿದ್ದಾರೆ ಎಂದು ಹೇಳಿದ್ದಾರೆ.

    ‘ಅಪ್ಪು’ ಸಿನಿಮಾ ರಿಲೀಸ್ ಆದಾಗ ಥಿಯೇಟರ್‌ಗೆ ಬಂದು ಸಿನಿಮಾ ನೋಡಿದ್ದೆ, ಹಾಗಾಗಿ ಹಳೆಯ ನೆನಪುಗಳೆಲ್ಲಾ ಬರುತ್ತಿದೆ. ಆಗ ನಾನು ‘ಅಪ್ಪು’ ಚಿತ್ರಕ್ಕೆ ಆಡಿಷನ್ ಕೊಟ್ಟಿದ್ದು, ನೆನಪಾಯ್ತು. ಈಗ ಮತ್ತೆ ಅದೇ ಸಿನಿಮಾ ನೋಡಿದಾಗ ಅಪ್ಪು ಇಲ್ಲ ಅಂತ ನಂಬೋಕೆ ಆಗಲ್ಲ. ಆದರೆ ಸಿನಿಮಾ ಮೂಲಕ ಅಪ್ಪು ಜೀವಂತವಾಗಿದ್ದಾರೆ ಎಂದು ಪುನೀತ್‌ರನ್ನು ನಟಿ ಸ್ಮರಿಸಿದ್ದಾರೆ. ಈ ವೇಳೆ, ಹಾಗಾಗಿ ಅಭಿಮಾನಿಗಳೊಂದಿಗೆ ಅಪ್ಪು ಚಿತ್ರ ನೋಡಿದ್ದು ಖುಷಿಯಾಗಿದೆ ಎಂದಿದ್ದಾರೆ. ಇದನ್ನೂ ಓದಿ:‘ರಾಣಾ ಅಮರ್‌ ಅಂಬರೀಶ್‌’ ಎಂದು ಅಂಬಿ ಮೊಮ್ಮಗನಿಗೆ ನಾಮಕರಣ

    ‘ಅಪ್ಪು’ ಸಿನಿಮಾ ಬಂದು 23 ವರ್ಷಗಳಾಯ್ತು. ಈಗ ಮತ್ತೆ ಈ ಚಿತ್ರವನ್ನು ನೋಡೋಕೆ ಬಂದಿದ್ದೀನಿ, ನಂಬೋಕೆ ಆಗ್ತಿಲ್ಲ. ಇದೇ ಜೀವನ. ಮೊದಲ ಬಾರಿ ‘ಅಪ್ಪು’ ಸಿನಿಮಾ ನೋಡಿದಾಗ ನಾನು ಕೂಡ ಅಭಿಮಾನಿಯಾಗಿ ಹೋಗಿ ಚಿತ್ರ ನೋಡಿದ್ದೆ, ಆ ನಂತರ ಪುನೀತ್ ಜೊತೆ ನಾನು ಕೂಡ ಸಿನಿಮಾ ಮಾಡಿದ್ದೀನಿ. ಜನ ನನ್ನನ್ನು ಗುರುತಿಸುತ್ತಾರೆ. ಈಗ ಚಿತ್ರ ನೋಡಿದಾಗ ಎಲ್ಲವೂ ನೆನಪಾಗುತ್ತದೆ ಎಂದಿದ್ದಾರೆ ಮೋಹಕ ತಾರೆ ರಮ್ಯಾ.

    ಇನ್ನೂ ಪುರಿ ಜಗನ್ನಾಥ್ ನಿರ್ದೇಶನದ ‘ಅಪ್ಪು’ ಸಿನಿಮಾದಲ್ಲಿ ಪುನೀತ್‌ಗೆ ನಾಯಕಿಯಾಗಿ ರಕ್ಷಿತಾ (Rakshita) ನಟಿಸಿದ್ದರು. ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಣ ಮಾಡಿದ್ದರು. 2002ರಲ್ಲಿ ಈ ಸಿನಿಮಾದ ಮೂಲಕ ಪುನೀತ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.

  • ಅಭಿಮಾನಿಗಳೊಂದಿಗೆ ‘ಅಪ್ಪು’ ಸಿನಿಮಾ ವೀಕ್ಷಿಸಲಿದ್ದಾರೆ ರಮ್ಯಾ

    ಅಭಿಮಾನಿಗಳೊಂದಿಗೆ ‘ಅಪ್ಪು’ ಸಿನಿಮಾ ವೀಕ್ಷಿಸಲಿದ್ದಾರೆ ರಮ್ಯಾ

    ಪುನೀತ್ ರಾಜ್‌ಕುಮಾರ್ (Puneeth Rajkumar) 50ನೇ ವರ್ಷದ ಜನ್ಮ ದಿನದ ಪ್ರಯುಕ್ತ ‘ಅಪ್ಪು’ ಚಿತ್ರ ಮಾ.14ರಂದು ರಿಲೀಸ್ ಆಗಿದೆ. ಈ ಹಿನ್ನೆಲೆ ಇಂದು (ಮಾ.16) ಅಭಿಮಾನಿಗಳೊಂದಿಗೆ ಮೋಹಕ ತಾರೆ ರಮ್ಯಾ ‘ಅಪ್ಪು’ (Appu Film) ಚಿತ್ರ ವೀಕ್ಷಿಸಲಿದ್ದಾರೆ.

    ಅಭಿಮಾನಿಗಳೊಂದಿಗೆ ಅವರು ಪುನೀತ್‌ ಮತ್ತು ರಕ್ಷಿತಾ ನಟನೆಯ ‘ಅಪ್ಪು’ ಚಿತ್ರ ವೀಕ್ಷಿಸಲಿದ್ದಾರೆ. ಇಂದು ಮಧ್ಯಾಹ್ನ 1 ಗಂಟೆಗೆ ಬೆಂಗಳೂರಿನ ವೀರೇಶ್ ಮಂದಿರಕ್ಕೆ ರಮ್ಯಾ ಆಗಮಿಸಲಿದ್ದಾರೆ. ಇದನ್ನೂ ಓದಿ:ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಪಡೆದ ನಟ ಪ್ರಭುದೇವ

    ಇನ್ನೂ ಪುನೀತ್‌ಗೆ ನಾಯಕಿಯಾಗಿ ‘ಅಭಿ’ ಸಿನಿಮಾದ ಮೂಲಕ ರಮ್ಯಾ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು. ಅರಸು, ಆಕಾಶ್ ಸಿನಿಮಾಗಳಲ್ಲಿ ಕೂಡ ಅವರು ಜೊತೆಯಾಗಿ ನಟಿಸಿದ್ದಾರೆ.

  • ಸ್ಯಾಂಡಲ್‌ವುಡ್ ಕ್ವೀನ್ ಇಸ್‌ ಬ್ಯಾಕ್- ರಮ್ಯಾಗೆ ಯೋಗರಾಜ್ ಭಟ್ ಡೈರೆಕ್ಷನ್‌

    ಸ್ಯಾಂಡಲ್‌ವುಡ್ ಕ್ವೀನ್ ಇಸ್‌ ಬ್ಯಾಕ್- ರಮ್ಯಾಗೆ ಯೋಗರಾಜ್ ಭಟ್ ಡೈರೆಕ್ಷನ್‌

    ಮೋಹಕ ತಾರೆ ರಮ್ಯಾ (Ramya) ಕೊನೆಗೂ ಸಿನಿಮಾಗೆ ಕಮ್ ಬ್ಯಾಕ್ ಆಗೋ ಕಾಲ ಬಂತು. ‘ರಂಗ ಎಸ್‌ಎಸ್‌ಎಲ್‌ಸಿ’ ಆದ್ಮೇಲೆ 20 ವರ್ಷಗಳ ಬಳಿಕ ಮತ್ತೆ ಯೋಗರಾಜ್ ಭಟ್ (Yogaraj Bhat) ಜೊತೆ ಸಿನಿಮಾ ಮಾಡೋಕೆ ರಮ್ಯಾ ಸಾಥ್ ನೀಡಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

    ರಮ್ಯಾ ಮತ್ತೆ ಬೆಳ್ಳಿಪರದೆಯಲ್ಲಿ ಮಿಂಚಲು ವೇದಿಕೆ ಸಜ್ಜಾಗಿದೆ. ವಿಕಟಕವಿ ನಿರ್ದೇಶಕ ಯೋಗರಾಜ್ ಭಟ್ ಅವರು ಬರೆದ ಸ್ಕ್ರಿಪ್ಟ್ ಇಷ್ಟವಾಗಿ ನಟಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ‘ಮನದ ಕಡಲು’ ಸಿನಿಮಾಗೆ ಬಂಡವಾಳ ಹೂಡಿರುವ ಇ. ಕೃಷ್ಣಪ್ಪ ಮತ್ತು ಜಿ. ಗಂಗಾಧರ್ ಅವರು ರಮ್ಯಾ ಕಮ್ ಬ್ಯಾಕ್ ಚಿತ್ರಕ್ಕೆ ನಿರ್ಮಾಣ ಮಾಡ್ತಿದ್ದಾರೆ. ಈ ಚಿತ್ರಕ್ಕೆ ರಮ್ಯಾ ನಿರ್ಮಾಣದ ಸಂಸ್ಥೆ ‘ಆ್ಯಪಲ್ ಬ್ಯಾಕ್ಸ್’ ಕೂಡ ಕೈ ಜೋಡಿಸಲಿದೆ.

    ಸದ್ಯ ರಮ್ಯಾ ಕಮ್ ಬ್ಯಾಕ್ ಸಿನಿಮಾ ಯಾರ ನಿರ್ದೇಶನದಲ್ಲಿ ಎಂದು ಕೇಳಿಯೇ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ರಮ್ಯಾ ಜೊತೆ ಯಾರೆಲ್ಲಾ ನಟಿಸ್ತಾರೆ? ಯಾವಾಗಿನಿಂದ ಶೂಟಿಂಗ್ ಶುರು ಆಗಲಿದೆ ಎಂಬ ಮಾಹಿತಿ ಇನ್ನೂ ಚಿತ್ರತಂಡದ ಕಡೆಯಿಂದ ರಿವೀಲ್ ಆಗಬೇಕಿದೆ. ಇದನ್ನೂ ಓದಿ:ಉಪ್ಪಿ ಅಣ್ಣನ ಮಗನಿಗೆ ಮಹಾಂತೇಶ್ ಹಂದ್ರಾಳ್ ಆ್ಯಕ್ಷನ್ ಕಟ್

    ನಿನ್ನೆ ಫಿಲ್ಮ್ ಫಿಸ್ಟಿವಲ್ ಸಂವಾದದಲ್ಲಿ ಭಾಗಿಯಾಗಿದ್ದ ರಮ್ಯಾ ಅವರು ಸಿನಿಮಾ ಕಮ್ ಬ್ಯಾಕ್ ರಿಯಾಕ್ಟ್ ಮಾಡಿದ್ದರು. ಈಗಾಗಲೇ 4 ಸ್ಕ್ರಿಪ್ಟ್ ಕೇಳಿದ್ದೇನೆ. ಬಹುಶಃ ಅದರಲ್ಲಿ ಒಂದು ಸಿನಿಮಾದಲ್ಲಿ ನಾನು ನಟಿಸುತ್ತೇನೆ ಎಂದು ಮಾತನಾಡಿದ್ದರು. ಅದರಂತೆ ಈಗ ಗುಡ್‌ ನ್ಯೂಸ್‌ ಸಿಕ್ಕಿದೆ.

    ಅಂದಹಾಗೆ, 2004ರಲ್ಲಿ ಯೋಗರಾಜ್ ಭಟ್ ನಿರ್ದೇಶನದ ‘ರಂಗ ಎಸ್‌ಎಸ್‌ಎಲ್‌ಸಿ’ ಚಿತ್ರದಲ್ಲಿ ಸುದೀಪ್‌ಗೆ (Sudeep) ನಾಯಕಿಯಾಗಿ ರಮ್ಯಾ ನಟಿಸಿದ್ದರು. ಕಡೆಯದಾಗಿ 2016ರಲ್ಲಿ ‘ನಾಗರಹಾವು’ ಸಿನಿಮಾದಲ್ಲಿ ದಿಗಂತ್ ಜೊತೆ ರಮ್ಯಾ ನಟಿಸಿದ್ದರು. ಬಳಿಕ 2023ರಲ್ಲಿ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು.