Tag: Ramya Raghupathi

  • ಮತ್ತೆ ನರೇಶ್ ಮನೆಗೆ ಎಂಟ್ರಿ ಕೊಟ್ರು ರಮ್ಯಾ ರಘುಪತಿ

    ಮತ್ತೆ ನರೇಶ್ ಮನೆಗೆ ಎಂಟ್ರಿ ಕೊಟ್ರು ರಮ್ಯಾ ರಘುಪತಿ

    ಸ್ಯಾಂಡಲ್‌ವುಡ್ ಮತ್ತು ಟಾಲಿವುಡ್‌ನಲ್ಲಿ ಕೆಲ ತಿಂಗಳುಗಳಿಂದ ಸಂಚಲನ ಮೂಡಿಸಿದ ವಿಚಾರ ಅಂದ್ರೆ ನರೇಶ್ (Naresh) ಮತ್ತು ಪವಿತ್ರಾ ಲೋಕೇಶ್ (Pavitra Lokesh) ಲವ್ವಿ ಡವ್ವಿ ವಿಚಾರ. ಸಾಕಷ್ಟು ರಂಪಾಟದ ನಂತರ ಇದೀಗ ಮತ್ತೆ ನರೇಶ್ ವಿಷ್ಯಕ್ಕೆ ಹೊಸ ಟ್ವಿಸ್ಟೊಂದು ಸಿಕ್ಕಿದೆ. ಟಾಲಿವುಡ್ ನಟ ನರೇಶ್ ಮನೆಗೆ ರಮ್ಯಾ ರಘುಪತಿ ಮತ್ತೆ ಎಂಟ್ರಿ ಕೊಟ್ಟಿದ್ದಾರೆ.

    ಸದ್ಯ ಚಿತ್ರರಂಗದಲ್ಲಿ ಸೌಂಡ್ ಮಾಡುತ್ತಿರುವ ಸುದ್ದಿ ಅಂದ್ರೆ ನರೇಶ್ ಮತ್ತು ಪವಿತ್ರಾ ಲೋಕೇಶ್ ವಿಚಾರ. ನರೇಶ್ ಮತ್ತು ಪತ್ನಿ ರಮ್ಯಾ ರಘುಪತಿ (Ramya Raghupathi) ಸಂಬಂಧದಲ್ಲಿ ಸಾಕಷ್ಟು ಬಿರುಕು ಬಂದ ಮೇಲೆ ಕಾನೂನು ಸಮರಕ್ಕೆ ಮುಂದಾಗಿದ್ದರು. ಈ ವೇಳೆ ನರೇಶ್ ಮತ್ತು ಪವಿತ್ರಾ ನಡುವೆ ಸಂಬಂಧವಿರುವ ವಿಚಾರ ಬೆಳಕಿಗೆ ಬಂದಿತ್ತು.

    ಬೆಂಗಳೂರಿನಲ್ಲಿ ಸಾಕಷ್ಟು ರಂಪಾಟದ ನಂತರ ಮೈಸೂರು ಹೋಟೆಲ್‌ವೊಂದರಲ್ಲಿ ನರೇಶ್ ಮತ್ತು ಪವಿತ್ರಾ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದರು. ಈ ವಿಚಾರ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿತ್ತು. ಬಳಿಕ ಮೂವರು ಸೈಲೆಂಟ್ ಆಗಿದ್ದರು. ಇದೀಗ ಮತ್ತೆ ನರೇಶ್ ಮನೆಗೆ ರಮ್ಯಾ ರಘುಪತಿ ಎಂಟ್ರಿ ಕೊಟ್ಟಿದ್ದಾರೆ. ಇಷ್ಟೆಲ್ಲಾ ಗಲಾಟೆಯ ನಂತರ ನರೇಶ್ ಹೆದರಿದ್ದಾರೆ. ಈಗ ಪತ್ನಿ ರಮ್ಯಾ ಅವರನ್ನ ಮನೆಗೆ ಸೇರಿಸಿಕೊಂಡಿದ್ದಾರೆ. ಇದನ್ನೂ ಓದಿ:ಸೆಟ್ಟೇರಿತು ಭಾವನಾ ಮೆನನ್- ವಿಜಯ್ ರಾಘವೇಂದ್ರ ನಟನೆಯ `ಕೇಸ್ ಆಫ್ ಕೊಂಡಾಣ’ ಚಿತ್ರ

    ಇನ್ನೂ ಪತಿ ನರೇಶ್ ಮನೆಗೆ ರಮ್ಯಾ ಎಂಟ್ರಿ ಕೊಟ್ಟರು ಕೂಡ ಕಾನೂನು ಸಮರ ನಿಲ್ಲಿಸಿಲ್ಲ. ಇವೆಲ್ಲದರ ನಡುವೆ ಪವಿತ್ರಾ ಲೋಕೇಶ್ ಮುಂದಿನ ನಡೆಯೇನು ಎಂಬುದರ ಬಗ್ಗೆ ಎಲ್ಲರಿಗೂ ಕುತೂಹಲ ಮೂಡಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಮೀಸೆ ಜಾರಿ ನೆಲದ ಮೇಲೆ ಬಿದ್ದರೂ ನರೇಶ್ ನಕ್ಕಿದ್ದೆ, ನನಗೆ ಸಿಕ್ಕ ಜಯ : ರಮ್ಯಾ

    ಮೀಸೆ ಜಾರಿ ನೆಲದ ಮೇಲೆ ಬಿದ್ದರೂ ನರೇಶ್ ನಕ್ಕಿದ್ದೆ, ನನಗೆ ಸಿಕ್ಕ ಜಯ : ರಮ್ಯಾ

    ಮೈಸೂರು: ಮೀಸೆ ಜಾರಿ ನೆಲದ ಮೇಲೆ ಬಿದ್ದರೂ ನಗುತ್ತಾ ಹೋಗಿದ್ದೆ ಇಂದು ನನಗೆ ಸಿಕ್ಕ ಜಯ ಎಂದು ಪತಿ ನರೇಶ್ ವಿರುದ್ಧ ರಮ್ಯಾ ರಘುಪತಿ ವ್ಯಂಗ್ಯವಾಡಿದ್ದಾರೆ.

    ನಟಿ ಪವಿತ್ರಾ ಲೋಕೇಶ್ ಹಾಗೂ ನರೇಶ್ ಸಂಬಂಧ ಪ್ರಕರಣ ದಿನೇ ದಿನೇ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ನಡುವೆ ಮೈಸೂರಿನ ಹುಣಸೂರು ರಸ್ತೆಯ ಹೋಟೆಲ್‍ವೊಂದರಲ್ಲಿ ಒಂದೇ ರೂಮ್‍ನಲ್ಲಿ ತಂಗಿದ್ದ ಪವಿತ್ರಾ ಲೋಕೇಶ್, ನರೇಶ್ ಮೇಲೆ ರಮ್ಯಾ ರಘುಪತಿ ಅವರು ಚಪ್ಪಲಿಯಿಂದ ಹಲ್ಲೆ ನಡೆಸಲು ಮುಂದಾಗಿದ್ದರು. ಬಳಿಕ ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಸ್ಟ್ ಫ್ರೆಂಡ್ಸ್ ಅಂತ ಹೇಳಿ ರಾತ್ರಿ ಎಲ್ಲ ಒಂದೇ ರೂಮ್‍ನಲ್ಲಿದ್ದರು. ಅವರು ಮಾಡಿರುವ ತಪ್ಪನ್ನು ಹೇಗೆ ಮರೆಮಾಚಿಕೊಂಡು ಹೋಗಬೇಕು ಎಂದು ತಿಳಿಯದೇ ನಗುತ್ತಾ ಹೋದರು. ಮೀಸೆ ಜಾರಿ ನೆಲದ ಮೇಲೆ ಬಿದ್ದರೂ ನರೇಶ್ ನಗುತ್ತಾ ಹೋಗಿದ್ದೆ, ಇಂದು ನನಗೆ ಸಿಕ್ಕ ಜಯ ಎಂದಿದ್ದಾರೆ. ಇದನ್ನೂ ಓದಿ: ಕೊಠಡಿ ಮುಂದೆ ಹೈಡ್ರಾಮಾ- ಪವಿತ್ರ ಲೋಕೇಶ್, ನರೇಶ್ ಮೇಲೆ ಚಪ್ಪಲಿಯಿಂದ ಹಲ್ಲೆಗೆ ಯತ್ನಿಸಿದ ರಮ್ಯಾ

    ಕಳೆದ ಹತ್ತು ವರ್ಷದಿಂದ ಇದೇ ಯಾತನೆ ಅನುಭವಿಸುತ್ತಿದ್ದೇನೆ. ಮದುವೆಯಾದ ಕೇವಲ ಒಂದು ವರ್ಷ ಚೆನ್ನಾಗಿದ್ದೆವು. ಆದರೆ ನಮ್ಮ ಸಂಸಾರದಲ್ಲಿ ಬಿರುಕು ಮೂಡಲು ಹೊರಗಿನ ವ್ಯಕ್ತಿಯೇ ಕಾರಣವಾಗಿದ್ದಾರೆ. ಒಂದೊಂದು ತಿಂಗಳು ಒಂದೊಂದು ಹುಡುಗಿಯರ ಜೊತೆಗೆ ನಾಟಕವಾಡುತ್ತಾನೆ. ನಮ್ಮ ಅತ್ತೆ ಇಲ್ಲದೇ ಇರುವ ಕಾರಣ ಈಗ ನನಗೆ ಡಿವೋರ್ಸ್ ನೋಟಿಸ್ ನೀಡಿದ್ದಾನೆ. ನಾನು ಹಿಂದೂ ಕುಟುಂಬದಲ್ಲಿ ಜನಿಸಿದ್ದು, ನನಗೆ ಈ ಡಿವೋರ್ಸ್ ಮೇಲೆ ನಂಬಿಕೆ ಇಲ್ಲ. ಒಂದು ಸರಿ ಮದುವೆಯಾದ ನಂತರ ಕಷ್ಟವಾದರೂ, ಸುಖವಾದರೂ ನಿಭಾಯಿಸಿಕೊಂಡು ಹೋಗುತ್ತೇನೆ. ನನ್ನ ಮಗನಿಗೂ ಡಿವೋರ್ಸ್ ನೀಡುವುದು ಇಷ್ಟವಿಲ್ಲ. ಇದರ ಪರಿಣಾಮವಾಗಿ ಪ್ರತಿ ದಿನ ನನ್ನ ಮಗ ಅಳುತ್ತಿದ್ದಾನೆ ಎಂದು ಅಸಮಾಧಾನ ಬೇಸರ ವ್ಯಕ್ತಪಡಿಸಿದ್ದಾರೆ.

    ನನ್ನ ಮಗನನ್ನು ಕಸ್ಟಡಿಗೆ ಕೇಳಿದ್ದಾರೆ. ಕೇವಲ 10 ದಿನಕ್ಕೊಮ್ಮೆ ರೈಡ್‍ಗೆ ಕರೆದುಕೊಂಡು ಹೋಗಿ, ಪಿಜ್ಜಾ ಕೊಡಿಸಿಬಿಟ್ಟರೆ ತಂದೆಯಾಗುವುದಿಲ್ಲ. ಪ್ರತಿ ಕ್ಷಣ ಮಗನೊಂದಿಗೆ ನಿಂತು ಸರಿಯಾದ ದಾರಿಯಲ್ಲಿ ನಡೆಸುವವನೇ ನಿಜವಾದ ಅಪ್ಪ. ನಮ್ಮ ಅತ್ತೆ ಇದ್ದಿದ್ದರೆ ಇಂದು ನನಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಎಷ್ಟೋ ನ್ಯಾಯ ಪಂಚಾಯಿತಿಯನ್ನು ಮಾಡಿ ನಮ್ಮ ಅತ್ತೆ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದರು. ಆದರೆ ಈಗ ನಾನು ರಸ್ತೆಯಲ್ಲಿ ನಿಂತಿದ್ದೇನೆ ಎಂದು ಅಳಲು ತೋಡಿಕೊಂಡರಿದ್ದಾರೆ. ಇದನ್ನೂ ಓದಿ: ನಟಿ ಪವಿತ್ರಾ ಲೋಕೇಶ್ ನನ್ನ ಬೆಸ್ಟ್ ಫ್ರೆಂಡ್ : ಪತ್ನಿ ರಮ್ಯಾ ಆರೋಪಕ್ಕೆ ನಟ ನರೇಶ್ ತಿರುಗೇಟು

    ನರೇಶ್ ರಾಜಕೀಯ ಪ್ರವೇಶ ಮಾಡುವ ಸಲುವಾಗಿ ನನ್ನನ್ನು ಮದುವೆಯಾದರು. ಆದರೆ ರಾಜಕೀಯ ಪ್ರವೇಶಿಸಲು ಸಾಧ್ಯವಾಗದ ಕಾರಣ ಜಗಳ ಆರಂಭವಾಯಿತು. ಮೊದಲು ನಾನು ಅವರಿಗೆ ರಾಜಲಕ್ಷ್ಮಿಯಾಗಿದ್ದೆ. ಆದರೆ ನಂತರದ ದಿನಗಳಲ್ಲಿ ನಾನು ದರಿದ್ರ್ಯಾ ಆಗಿಬಿಟ್ಟೆ. ನಿನ್ನಿಂದ ನನಗೆ ಯಾವುದೇ ಲಾಭವಿಲ್ಲ ಎಂದು ನರೇಶ್ ನನ್ನನ್ನು ನಿಂದಿಸುತ್ತಿದ್ದರು. ಹಿಂದೆ ಪವಿತ್ರಾ ಲೋಕೇಶ್ ನಮ್ಮ ಮನೆಗೆ ಬಂದಾಗ ಅರಿಶಿನ, ಕುಂಕುಮ ಹಾಗೂ ಸೀರೆ ನೀಡಲು ಆಗಲಿಲ್ಲ ಎಂದು ಬೇಸರಗೊಂಡಿದ್ದೆ. ಆದರೆ ಇಂದು ನಾನು ಕೊಡದೇ ಇದ್ದಿದ್ದೆ ಒಳ್ಳೆಯದಾಯಿತು ಎಂದು ಭಾವಿಸುತ್ತೇನೆ ಎಂದಿದ್ದಾರೆ.

    ನನ್ನ ಬಾಳಿಗೆ ಮುಳ್ಳಾಗಲು ಪವಿತ್ರಾ ಲೋಕೇಶ್ ಕಾರಣ ಎಂದು ಹೇಳುವುದಿಲ್ಲ. ಪವಿತ್ರಾ ಲೋಕೇಶ್ 6 ತಿಂಗಳು ತನ್ನ ಗಂಡನೊಂದಿಗೆ ಚೆನ್ನಾಗಿದ್ದರೆ, ಇನ್ನೂ 6 ತಿಂಗಳು ಚೆನ್ನಾಗಿರುವುದಿಲ್ಲ ಎಂದು ಅವರ ಪತಿ ಸುಚೇಂದ್ರ ಲೋಕೇಶ್ ಅವರೇ ಹೇಳಿದ್ದಾರೆ. ಆದರೆ ಪವಿತ್ರಾ ಲೋಕೇಶ್ ಹಾಗೂ ನರೇಶ್ ಸಂಬಂಧಕ್ಕೆ ಅರ್ಥವಿಲ್ಲ. ನನ್ನ ಮಗನಿಗೆ ಕಣ್ಣೀರು ತರಿಸಲು ಬಿಡುವುದಿಲ್ಲ. ಕರ್ನಾಟಕದ ಜನತೆ ನನ್ನೊಂದಿಗಿದ್ದಾರೆ. ಕಾನೂನಿನ ಪ್ರಕಾರವಾಗಿ ಡಿವೋರ್ಸ್ ನೋಟಿಸ್ ಕಳುಹಿಸಿದ್ದಾರೆ. ಖಂಡಿತವಾಗಿಯೂ ಇದಕ್ಕೆ ಕೋರ್ಟ್‍ನಲ್ಲಿ ಉತ್ತರ ನೀಡುತ್ತೇನೆ ಮತ್ತು ನ್ಯಾಯಕ್ಕಾಗಿ ಹೋರಾಟ ನಡೆಸುತ್ತೇನೆ ಎಂದು ಹೇಳಿದ್ದಾರೆ.

    Live Tv

  • ಕೊಠಡಿ ಮುಂದೆ ಹೈಡ್ರಾಮಾ-  ಪವಿತ್ರ ಲೋಕೇಶ್, ನರೇಶ್ ಮೇಲೆ ಚಪ್ಪಲಿಯಿಂದ ಹಲ್ಲೆಗೆ ಯತ್ನಿಸಿದ ರಮ್ಯಾ

    ಕೊಠಡಿ ಮುಂದೆ ಹೈಡ್ರಾಮಾ- ಪವಿತ್ರ ಲೋಕೇಶ್, ನರೇಶ್ ಮೇಲೆ ಚಪ್ಪಲಿಯಿಂದ ಹಲ್ಲೆಗೆ ಯತ್ನಿಸಿದ ರಮ್ಯಾ

    ಮೈಸೂರು: ಟಾಲಿವುಡ್ ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ ಇದ್ದ ಹೋಟೆಲ್ ಮುಂದೆ ರಮ್ಯಾ ರಘುಪತಿ ಅವರು ದೊಡ್ಡ ಹೈಡ್ರಾಮಾ ಮಾಡಿದ್ದಾರೆ.

    ಮೈಸೂರಿನ ಹುಣಸೂರು ರಸ್ತೆಯ ಹೋಟೆಲ್ ಒಂದರಲ್ಲಿ ಪವಿತ್ರಾ ಲೋಕೇಶ್ ಹಾಗೂ ನರೇಶ್ ಒಂದೇ ರೂಮ್‌ನಲ್ಲಿದ್ದರು. ಹೀಗಾಗಿ ರೂಮ್ ಬಳಿಯೇ ಕಾದು ಕುಳಿತಿದ್ದ ರಮ್ಯಾ ರಘುಪತಿ, ಪತಿ ನರೇಶ್, ಪವಿತ್ರಾ ಹೊರ ಬರುತ್ತಿದ್ದಂತೆಯೇ ಚಪ್ಪಲಿಯಲ್ಲಿ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಈ ವೇಳೆ ಕೂಡಲೇ ಪೊಲೀಸರು ರಮ್ಯಾ ರಘುಪತಿಯನ್ನು ತಡೆದಿದ್ದಾರೆ. ಇದನ್ನೂ ಓದಿ: ನಟಿ ಪವಿತ್ರಾ ಲೋಕೇಶ್ ಭಾವನೆ ಘಾಸಿಗೊಳಿಸಲಾರೆ ಎಂದ ಸುಚೇಂದ್ರ ಪ್ರಸಾದ್

    ನಂತರ ಪವಿತ್ರಾ ಲೋಕೇಶ್ ಹಾಗೂ ನರೇಶ್‍ಗೆ ಅವಾಚ್ಯ ಶಬ್ದಗಳಿಂದ ರಮ್ಯಾ ರಘುಪತಿ ನಿಂದಿಸಿದ್ದಾರೆ. ಈ ವೇಳೆ ನರೇಶ್ ಅವರು ನೀನೊಬ್ಬಳು ವಂಚಕಿ, ಮೋಸಗಾತಿ ಎಂದು ಜೋರಾಗಿ ಕಿರುಚಾಡುತ್ತಾ, ವಿಜಲ್‌ ಹೊಡೆಯುತ್ತಾ ಲಿಫ್ಟ್‌ ಮೂಲಕ ತೆರಳಿದರು. ಇದನ್ನೂ ಓದಿ:  Exclusive- ನನ್ನ ಜೊತೆ ಇರೋದು ನನ್ನದೇ ಒಡವೆ, ನರೇಶ್ ಪತ್ನಿ ರಮ್ಯಾದ್ದಲ್ಲ : ನಟಿ ಪವಿತ್ರಾ ಲೋಕೇಶ್

    Live Tv