Tag: ramya barna

  • ಶಾಸಕ ಜಮೀರ್ ಅಹ್ಮದ್ ಸಂಬಂಧಿಯನ್ನು ವರಿಸಿದ ನಟಿ ರಮ್ಯಾ ಬಾರ್ನಾ

    ಶಾಸಕ ಜಮೀರ್ ಅಹ್ಮದ್ ಸಂಬಂಧಿಯನ್ನು ವರಿಸಿದ ನಟಿ ರಮ್ಯಾ ಬಾರ್ನಾ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಮ್ಯಾ ಬಾರ್ನಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹ್ಮದ್ ಅವರ ಸಂಬಂಧಿ ಆಗಿರುವ ಉದ್ಯಮಿ ಫಹಾದ್ ಅಲಿ ಖಾನ್ ಅವರನ್ನು ರಮ್ಯಾ ವಿವಾಹವಾಗಿದ್ದಾರೆ.

    ಚಿತ್ರರಂಗದಿಂದ ಕೆಲ ದಿನಗಳಿಂದ ದೂರವಿದ್ದ ರಮ್ಯಾ ಬಾರ್ನಾ ಮೇ29 ರಂದು ಶಿವಾಜಿನಗರದ ರಿಜಿಸ್ಟರ್ ಆಫೀಸ್‍ನಲ್ಲಿ ಮದುವೆಯಾಗಿದ್ದಾರೆ.

    ಮುಂದಿನ ವಾರ ರಮ್ಯಾ ಅಭಿನಯಿಸಿರುವ ಟಾಸ್ ಸಿನಿಮಾ ರಿಲೀಸ್‍ಗೆ ರೆಡಿಯಾಗಿದ್ದು, ಈ ಚಿತ್ರದ ಪ್ರಚಾರಕ್ಕೂ ಆಗಮಿಸದ ರಮ್ಯಾ ರಹಸ್ಯವಾಗಿ ಮದುವೆಯಾಗಿದ್ದನ್ನ ಚಿತ್ರತಂಡಕ್ಕೂ ಹೇಳದೆ ಗೌಪ್ಯವಾಗೇ ಇಟ್ಟಿದ್ದರು. ಇದೊಂದು ಪ್ರೇಮವಿವಾಹವಾಗಿದ್ದು ಚಿತ್ರೋದ್ಯಮದ ತಮ್ಮ ಆಪ್ತ ಸ್ನೇಹಿತರಿಗೂ ರಮ್ಯಾ ತಿಳಿಸಿರಲಿಲ್ಲ ಎಂದು ಹೇಳಲಾಗುತ್ತಿದೆ.

    2008ರಲ್ಲಿ ಹನಿಹನಿ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೆ ಕಾಲಿಟ್ಟ ರಮ್ಯಾ ಬಾರ್ನಾ ನೀನ್ಯಾರೆ, ಪಂಚರಂಗಿ, ಹುಡುಗರು, ಪರಮಾತ್ಮ ಸೇರಿದಂತೆ ಅನೇಕ ಚಿತ್ರಗಳಲ್ಲಿ ಸಹನಟಿಯಾಗಿ ಅಭಿನಯಿಸಿದ್ದರು. ರಮ್ಯಾ ಬಾರ್ನಾ ಮದುವೆಯಾದ ಹುಡುಗ ಫಹಾದ್ 29 ವರ್ಷದ ಪ್ರಾಯದವರಾಗಿದ್ದು ರಮ್ಯಾ 31 ವರ್ಷ ವಯಸ್ಸಿನವರು.