ಮೋಹಕ ತಾರೆ ರಮ್ಯಾ ಸ್ಯಾಂಡಲ್‌ವುಡ್‌ನಲ್ಲಿ ಸೃಷ್ಟಿಮಾಡಿದ್ದ ಕ್ರೇಜ್ ಅಷ್ಟಿಷ್ಟಲ್ಲ. ತೆರೆಯ ಹಿಂದೆಯೂ ತೆರೆಯ ಮುಂದೆಯೂ ಆಕರ್ಷಕವಾಗಿ ಕಾಣಿಸಿಕೊಳ್ಳುತ್ತಿದ್ದರು ರಮ್ಯಾ. ವಿಶೇಷವಾಗಿ ರಮ್ಯಾ ಸಿನಿಮಾಗಳಲ್ಲಿ ಕಾಸ್ಟ್ಯೂಮ್ ವಿಚಾರಕ್ಕೂ ಹೆಚ್ಚು ಸುದ್ದಿಯಾಗುತ್ತಿದ್ದರು. ಹೀಗೆ `ರಕ್ತ ಕಾಶ್ಮೀರ’ ಚಿತ್ರದ ಹಾಡೊಂದಕ್ಕಾಗಿ ರಮ್ಯಾ 75 ಸಾವಿರ ರೂಪಾಯಿ ಬೆಲೆಯ ಸೀರೆ ಉಟ್ಟಿದ್ದರಂತೆ.
15 ವರ್ಷಗಳ ಹಿಂದೆಯೇ 75 ಸಾವಿರ ರೂಪಾಯಿಗೆ ಬೆಲೆಬಾಳುವ ಸೀರೆಯನ್ನು ಒಂದು ನಿಮಿಷ ಕಾಣಿಸಿಕೊಳ್ಳುವ ಹಾಡಿಗಾಗಿ ರಮ್ಯಾ ಧರಿಸಿದ್ದರು ಎಂಬ ರಹಸ್ಯ ಇದೀಗ ರಿವೀಲ್ ಆಗಿದೆ.
ರಮ್ಯಾ-ಉಪೇಂದ್ರ ನಟಿಸಿರುವ ರಕ್ತಕಾಶ್ಮೀರ ಚಿತ್ರದ ಹಾಡಿಗಾಗಿ ಈ ಚಿತ್ರದ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಅವರ ಬಳಿ ಬಂದ ರಮ್ಯಾ, ಅಂಕಲ್ ನಾನೊಂದು ಸೀರೆ ನೋಡಿದ್ದೇನೆ. ಅದನ್ನ ನೀವು ಚಿತ್ರೀಕರಣಕ್ಕಾಗಿ ಕೊಡಿಸಬೇಕು ಎಂದರಂತೆ. ಆಗಲಿ ಎಂದು ರಮ್ಯಾ ಇಷ್ಟ ಪಟ್ಟಿದ್ದ ಆ ಸೀರೆಯನ್ನ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಕೊಡಿಸಿದ್ದರಂತೆ. ಅದರ ಬೆಲೆ ಆಗಲೇ 75 ಸಾವಿರ ರೂಪಾಯಿ ಆಗಿತ್ತು ಎಂದಿದ್ದಾರೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು. ಇದರಿಂದಾಗಿ ರಮ್ಯಾ ಉಟ್ಟಿದ್ದ ಸೀರೆಯ ವೈಭವ ಬೆಳಕಿಗೆ ಬಂದಿದೆ.
ಬೆಂಗಳೂರು: ನಟಿ ರಮ್ಯಾಗೆ ಸೋಷಿಯಲ್ ಮೀಡಿಯಾದಲ್ಲಿ (Social Media) ಅಶ್ಲೀಲ ಕಮೆಂಟ್ ಹಾಕಿದ ದರ್ಶನ್ (Darshan) ಅಭಿಮಾನಿಗಳ ಮೇಲೆ ಸಿಸಿಬಿ (CCB Police) ಸೈಬರ್ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.
11 ಆರೋಪಿಗಳ ಮೇಲೆ 380 ಪುಟಗಳ ಸುಧೀರ್ಘ ಚಾರ್ಜ್‌ಶೀಟ್ (Chargesheet) ಸಲ್ಲಿಕೆ ಮಾಡಲಾಗಿದೆ. ಆರೋಪಿಗಳ ಮೊಬೈಲ್, ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಹಾಕಿದ ಸ್ಕ್ರೀನ್ ಶಾಟ್, ವಿಡಿಯೋ ಶೇರ್ ಆಗಿರುವ ಲಿಂಕ್‌ಗಳು, ದೂರುದಾರೆ ರಮ್ಯಾ ಸ್ಟೇಟ್‌ಮೆಂಟ್, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ, ಆರೋಪಿಗಳ ಸ್ವ ಇಚ್ಚಾ ಹೇಳಿಕೆ ಆಧಾರದಲ್ಲಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿದೆ. ಇದನ್ನೂ ಓದಿ: ಡಿಕೆಶಿ ವೈಲ್ಡ್ ಕಾರ್ಡ್‌ಎಂಟ್ರಿ – ಬಿಗ್‌ಬಾಸ್ ಮನೆ ಓಪನ್ | ರಾತ್ರಿ ಏನೇನಾಯ್ತು? ಇಲ್ಲಿದೆ ಇನ್‌ಸೈಡ್ ಸ್ಟೋರಿ
ಬೆಂಗಳೂರು: ನಟಿ ರಮ್ಯಾ (Ramya) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರನ್ನು ಬೆಂಗಳೂರಿನ ನಿವಾಸದಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.
ಬಳಿಕ ಮಾಧ್ಯಮಗಳ ಜೊತೆ ಅವರು ಮಾಹಿತಿ ಹಂಚಿಕೊಂಡಿದ್ದು, ಮಲ್ಲಿಕಾರ್ಜುನ ಖರ್ಗೆ ಸರ್ ಆರೋಗ್ಯವಾಗಿದ್ದಾರೆ. ಅವರಿಗೆ ವಿಶ್ರಾಂತಿ ಬೇಕಿದೆ. ಆರೋಗ್ಯವಾಗಿದ್ದಾರೆ ಅಷ್ಟೇ ಸಾಕು. ಡಾಕ್ಟರ್ ಜಾಸ್ತಿ ಪ್ರಯಾಣ ಮಾಡದಂತೆ ಅವರಿಗೆ ಸಲಹೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆ ಆರೋಗ್ಯ ಸ್ಥಿರವಾಗಿದೆ: ಸಿದ್ದರಾಮಯ್ಯ
ಅವರು ನಮಗೆಲ್ಲಾ ಸ್ಪೂರ್ತಿ, ಈ ವಯಸ್ಸಲ್ಲಿ ದೇಶಾದ್ಯಂತ ಟೂರ್ ಮಾಡ್ತಾರೆ. ದೈಹಿಕ ಶಕ್ತಿಗಿಂತ ಅವರ ಇಚ್ಛಾಶಕ್ತಿ ದೊಡ್ಡದು. ನನ್ನ ಬಗ್ಗೆ ಕೇಳಿದ್ರು, ಏನು ಮಾಡ್ತಿದ್ದೀರಿ ಅಂತ. ರಾಜಕೀಯಕ್ಕೆ ಬರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ, ಆ ಬಗ್ಗೆ ನಾನು ಯೋಚಿಸಿಲ್ಲ. ಆ ರೀತಿ ಇದ್ದರೆ ನಿಮಗೆ ತಿಳಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ
ತುಮಕೂರು: ತುಮಕೂರು ದಸರಾ (Tumakuru Dasara) ಹಿನ್ನೆಲೆ ಸೆ.30 ರಂದು ಸಂಜೆ ನಡೆಯುವ ಸಾಂಸ್ಕೃತಿಕ ವೈಭವ ಕಾರ್ಯಕ್ರಮಕ್ಕೆ ಖ್ಯಾತ ಚಲನಚಿತ್ರ ನಟರಾದ ವಿ ರವಿಚಂದ್ರನ್ (V Ravichandran) ಹಾಗೂ ನಟಿ ರಮ್ಯಾ (Ramya) ಆಗಮಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ ಪರಮೇಶ್ವರ್ (G Parameshwar) ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ನ್ಯಾಯಿಕ ಸಭಾಂಗಣದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಸರಾ ಉತ್ಸವದ ಅಂಗವಾಗಿ ಅಕ್ಟೋಬರ್ 2ರಂದು ನಡೆಯಲಿರುವ ವೈಭವಯುತ ಮೆರವಣಿಗೆಯಲ್ಲಿ ಜಂಬೂ ಸವಾರಿಯೊಂದಿಗೆ ಸಾರೋಟಿನಲ್ಲಿ 50 ಗ್ರಾಮ ದೇವತೆಗಳು ಸಾಗಲಿವೆ. ಈ ಬಾರಿ ಜಿಲ್ಲೆಯ ಸಾಂಸ್ಕೃತಿಕ, ಸಾಹಿತ್ಯ, ಕಲಾ ಪರಂಪರೆಯನ್ನು ಯುವ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಎರಡನೇ ಬಾರಿ ತುಮಕೂರು ದಸರಾ ಉತ್ಸವವನ್ನು ಅದ್ಧೂರಿಯಾಗಿ ಆಯೋಜಿಸಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಬೆಂಗಳೂರು| ಆಸ್ತಿ ಆಸೆಗೆ ಸ್ನೇಹಿತನೊಂದಿಗೆ ಸೇರಿ ತಂದೆಯನ್ನೇ ಕೊಂದ ಪಾಪಿ ಮಗ
ದಸರಾ ಪ್ರಯುಕ್ತ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಸೆಪ್ಟೆಂಬರ್ 22ರಂದು ಬೆಳಿಗ್ಗೆ 9:30ಕ್ಕೆ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ ಪರಮೇಶ್ವರ್ ಅವರು ಧಾರ್ಮಿಕ ಉತ್ಸವ, ನವರಾತ್ರಿ ಉತ್ಸವ, ಧ್ವಜಾರೋಹಣ, ದುರ್ಗಾಪೂಜೆಯನ್ನು ನೆರವೇರಿಸಲಿದ್ದಾರೆ. ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ಡಾ. ಹನುಮಂತನಾಥ ಮಹಾಸ್ವಾಮೀಜಿ, ಶಿವಯೋಗೀಶ್ವರ ಮಹಾಸ್ವಾಮೀಜಿ, ವೀರಪತ್ರ ಶಿವಾಚಾರ್ಯ ಸ್ವಾಮೀಜಿ ಹಾಗೂ ವೀರೇಶಾನಂದ ಸರಸ್ವತ ಸ್ವಾಮೀಜಿಗಳ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಸಂಸದ ವಿ. ಸೋಮಣ್ಣ, ಜನಪ್ರತಿನಿಧಿಗಳಾದ ಟಿ.ಬಿ ಜಯಚಂದ್ರ, ಎಸ್.ಆರ್ ಶ್ರೀನಿವಾಸ್, ಶಿವರಾಜ್ ತಂಗಡಗಿ, ಕೆ.ಎನ್ ರಾಜಣ್ಣ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಲಿದ್ದು, ಶಾಸಕ ಜಿ.ಬಿ. ಜ್ಯೋತಿ ಗಣೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು. ಇದನ್ನೂ ಓದಿ: ಗಾಜಾ ಮೇಲೆ ಇಸ್ರೇಲ್ ದಾಳಿ – ಒಂದೇ ದಿನ 91 ಮಂದಿ ಸಾವು
ಮೋಹಕತಾರೆ ನಟಿ ರಮ್ಯಾ (Ramya) ಅಮೆರಿಕದಲ್ಲಿ ಫುಲ್ ಮಸ್ತಿ ಮಾಡುತ್ತಿದ್ದಾರೆ. ಅಮೆರಿಕದಲ್ಲಿ ನಡೆಯುವ ನಾವಿಕ ಕಾರ್ಯಕ್ರಮಕ್ಕೆ ಈ ಬಾರಿ ನಟಿ ರಮ್ಯಾ ಅತಿಥಿಯಾಗಿ ಹೋಗಿದ್ದಾರೆ. ಸಮಾರಂಭದ ಬಿಡುವಿನ ವೇಳೆ ಅಮೆರಿಕದ (America) ಬ್ಯೂಟಿಫುಲ್ ಲೊಕೇಶನ್‌ನಲ್ಲಿ ಸುತ್ತಾಟ ನಡೆಸಿದ್ದಾರೆ. ಈ ಬಾರಿಯ ನಾವಿಕ ಸಮಾರಂಭಕ್ಕೆ ರಮ್ಯಾ ಜೊತೆ ನಟ ವಿನಯ್ ರಾಜ್‌ಕುಮಾರ್ (Vinay Rajkumar) ಕೂಡ ಹೋಗಿದ್ದಾರೆ. ವಿಶೇಷ ಅಂದ್ರೆ ಪುನೀತ್ ರಾಜ್‌ಕುಮಾರ್ ಕಿರಿಯ ಪುತ್ರಿ ವಂದಿತಾ ಕೂಡಾ ಇವರ ಜೊತೆಗಿದ್ದಾರೆ.
ಅಮೆರಿಕದಲ್ಲಿ ಮೂವರೂ ಎಂಜಾಯ್ ಮಾಡ್ತಿರುವ ಫೋಟೋಗಳನ್ನ ರಮ್ಯಾ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡ್ಕೊಂಡಿದ್ದು, ಫೋಟೋಗಳ ಜೊತೆಗೆ ಅದಕ್ಕೆ ಕ್ಯಾಪ್ಷನ್ ಹಾಕಿರುವ ರಮ್ಯಾ `ನಾನು ಹಾಗೂ ಬೆಸ್ಟ್ ಕಂಪನಿ’ ಎಂದು ವಿನಯ್ ರಾಜ್‌ಕುಮಾರ್ ಮತ್ತು ವಂದಿತಾ ಪುನೀತ್ ರಾಜ್‌ಕುಮಾರ್ ಹೆಸರನ್ನು ಮೆನ್ಷನ್ ಮಾಡಿದ್ದಾರೆ. ರಮ್ಯಾ ಹಂಚಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹಲ್‌ಚಲ್ ಎಬ್ಬಿಸಿದ್ದವು. ನಟಿ ರಮ್ಯಾ ಫೋಟೋಗಳಿಗೆ ಹಲವರು ಡೇಟಿಂಗ್‌ನಲ್ಲಿ ಇದ್ದಾರೆ ಎಂದು ಬರೆದುಕೊಂಡಿದ್ದರು. ಇದೀಗ ಈ ವಿಷಯಕ್ಕೆ ಸಂಬಂಧಿಸಿದಂತೆ ನಟಿ ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ.
ತಮ್ಮ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ರಮ್ಯಾ `ನೀವು ತುಂಬಾ ತಮಾಷೆ ಮಾಡುತ್ತಿದ್ದೀರಾ.. ನನಗೆ ಸಹೋದರ ಸಮಾನರು ವಿನಯ್ ರಾಜ್‌ಕುಮಾರ್. ನಿಮ್ಮ ಕಲ್ಪನೆ, ಮಾತುಗಳಿಗೆ ಹಿಡಿತವಿರಲಿ’ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ನಟಿ ರಮ್ಯಾ ವಿನಯ್ ರಾಜ್‌ಕುಮಾರ್ ಚಿಕ್ಕಪ್ಪ ಹಾಗೂ ದೊಡ್ಡಪ್ಪ ಅವರ ಜೊತೆಗೆ ಸಿನಿಮಾಗಳಲ್ಲಿ ನಾಯಕಿಯಾಗಿ ಪಾತ್ರವನ್ನ ಮಾಡಿದ್ದಾರೆ. ಅವರಿಬ್ಬರ ಮಧ್ಯೆ ಡೇಟಿಂಗ್ ಎನ್ನುವ ಯೋಚನೆ ಮಾಡುವವರಿಗೆ ಖಡಕ್ ರಿಪ್ಲೈ ಕೊಟ್ಟಿದ್ದಾರೆ ನಟಿ ರಮ್ಯಾ.
ಪ್ರತಿ ವರ್ಷ ಅಮೆರಿಕದಲ್ಲಿ ನಡೆಯುವ ನಾವಿಕ ಕಾರ್ಯಕ್ರಮಕ್ಕೆ ಈ ಬಾರಿ ರಮ್ಯಾ ಅತಿಥಿಯಾಗಿ ಹೋಗಿದ್ದರು. ಈ ಸಮಾರಂಭಕ್ಕೆ ರಮ್ಯಾ ಜೊತೆ ನಟ ವಿನಯ್ ರಾಜ್‌ಕುಮಾರ್ ಕೂಡ ಹೋಗಿದ್ದಾರೆ. ವಿಶೇಷ ಅಂದ್ರೆ ಇವರಿಗೆ ಪುನೀತ್ ರಾಜ್‌ಕುಮಾರ್ ಕಿರಿಯ ಪುತ್ರಿ ವಂದಿತಾ ಕೂಡ ಸಾಥ್ ಕೊಟ್ಟಿದ್ದಾರೆ.
ಅಮೆರಿಕದಲ್ಲಿ ಮೂವರೂ ಎಂಜಾಯ್ ಮಾಡ್ತಿರುವ ಫೋಟೋಗಳನ್ನ ರಮ್ಯಾ ಇದೀಗ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡ್ಕೊಂಡಿದ್ದಾರೆ. ಅದಕ್ಕೆ ಕ್ಯಾಪ್ಷನ್ ಹಾಕಿರುವ ರಮ್ಯಾ ‘ನಾನು ಹಾಗೂ ಬೆಸ್ಟ್ ಕಂಪನಿ’ ಎಂದು ವಿನಯ್ ರಾಜ್‌ಕುಮಾರ್ ಮತ್ತು ವಂದಿಯಾ ಪುನೀತ್ ರಾಜ್‌ಕುಮಾರ್ ಹೆಸರನ್ನು ಮೆನ್ಷನ್ ಮಾಡಿದ್ದಾರೆ.
ಅಮೆರಿಕದಲ್ಲಿ ತೆಗೆದಿರುವ ಒಂದಷ್ಟು ಕ್ಯಾಂಡಿಡ್ ಫೋಟೋಗಳನ್ನ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ ರಮ್ಯಾ. ಇಲ್ಲಿ ಮೋಹಕತಾರೆ ಮೇಕಪ್ ಮಾಡಿಸಿಕೊಳ್ತಿರುವ ಫೋಟೋ ಸಮೇತ ಜಾಲಿ ಸಮಯದ ಹತ್ತಾರು ಫೋಟೋಗಳನ್ನ ಶೇರ್ ಮಾಡಿದ್ದಾರೆ. ರಮ್ಯಾ ಜೊತೆ ವಿನಯ್ ರಾಜ್‌ಕುಮಾರ್ ಹಲವು ಬಾರಿ ಪ್ರವಾಸ ಕೈಗೊಂಡಿರುವುದು ಗೊತ್ತಿರೋದೆ. ಆದರೆ ಈ ಬಾರಿ ರಮ್ಯಾ ಕಂಪನಿಗೆ ವಂದಿತಾ ಪುನೀತ್ ರಾಜ್‌ಕುಮಾರ್ ಸೇರಿಕೊಂಡಿರುವುದು ವಿಶೇಷ.
ಮೂವರು ಒಟ್ಟಾಗಿ ಜಾಲಿ ಮಾಡ್ತಿರೋದು ಬಹಳ ವಿಶೇಷ. ರಮ್ಯಾ ಪೋಸ್ಟ್‌ಗೆ ಅದಿತಿ ಪ್ರಭುದೇವ ಹಾಗೂ ಪ್ರಣಿತ ಇನ್ನಿತರ ತಾರೆಯರು ಪ್ರೀತಿಪೂರ್ವಕ ಇಮೋಜಿ ಕಳಿಸಿದ್ದಾರೆ. ಇನ್ನು ಕೆಲವರು ನೀವು ವಿನಯ್ ರಾಜ್‌ಕುಮಾರ್ ಜೊತೆ ಡೇಟ್ ಮಾಡುತ್ತಿದ್ದೀರಾ ಎಂದು ಕಾಮೆಂಟ್‌ನ್ನೂ ಹಾಕಿದ್ದಾರೆ. ಯಾವುದಕ್ಕೂ ತಲೆಕೆಡಿಸಿಕೊಳ್ಳದ ರಮ್ಯಾ ಆಪ್ತರೊಂದಿಗೆ ಉತ್ತಮ ಸಮಯ ಕಳೆಯುತ್ತಿದ್ದಾರೆ.
ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾರನ್ನು (Ramya) ಸಾರ್ವಕಾಲಿಕ ಸುಂದರಿ ಎಂದು ಹೊಗಳುವುದುಂಟು. ನಾಯಕಿಯಾಗಿ ಸ್ಟಾರ್‌ಡಂ ಹುಟ್ಟುಹಾಕಿರುವ ಅನಭಿಶಕ್ತ ನಟಿ. ಇದೀಗ ಚಿಕ್ಕದೊಂದು ರೀಲ್ಸ್ ಮಾಡುವ ಮೂಲಕ ಇನ್‌ಸ್ಟಾಗ್ರಾಮ್‌ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ಪರಮ ಸುಂದರಿ (Param Sundari) ಚಿತ್ರದ ಟ್ರೆಂಡಿಂಗ್ ಮ್ಯೂಸಿಕ್‌ಗೆ ರಮ್ಯಾ ಜಸ್ಟ್ ಒಂದು ಲುಕ್ ಕೊಟ್ಟಿದ್ದಾರೆ.
ಅನೇಕ ವರ್ಷಗಳಿಂದ ರಮ್ಯಾ ಸಿನಿಮಾದಿಂದ ದೂರವಿದ್ದರೂ ಸಿನಿಮಾ ಅವರನ್ನು ಬಿಡುತ್ತಿಲ್ಲ. ಮೊದಲೆಲ್ಲಾ ಸುದ್ದಿಯನ್ನಷ್ಟೇ ಹಂಚಿಕೊಳ್ಳಲು ರಮ್ಯಾ ಸೋಶಿಯಲ್ ಮೀಡಿಯಾ ಬಳಸುತ್ತಿದ್ದರು. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಾಗೂ ರೀಲ್ಸ್‌ಗಳನ್ನು ಪೋಸ್ಟ್ ಮಾಡಲಾರಂಭಿಸಿದ್ದಾರೆ. ಇದನ್ನೂಓದಿ: ಸದ್ದಿಲ್ಲದೇ ಹಾಸ್ಯನಟ ಚಿಕ್ಕಣ್ಣ ಮದ್ವೆ ನಿಶ್ಚಯ
ರಮ್ಯಾ ಅಭಿಮಾನಿಗಳಿಗೆ ಈ ಬದಲಾವಣೆ ಇಷ್ಟವಾಗಿದೆ. ಮತ್ತೆ ಹದಿನೈದು ವರ್ಷದ ಹಿಂದಿನ ಚಾರ್ಮ್‌ಗೆ ಮರಳಿದ್ದಾರೆ ರಮ್ಯಾ. ಇದೀಗ ಟ್ರೆಂಡ್‌ನಲ್ಲಿರುವ ಪರಮ ಸುಂದರಿ ಮ್ಯೂಸಿಕ್‌ಗೆ ರಮ್ಯಾ ಸೀರೆಯುಟ್ಟು ಸಣ್ಣದೊಂದು ಝಲಕ್ ಕೊಟ್ಟಿದ್ದಾರೆ. ಅಷ್ಟಕ್ಕೇ ಲಕ್ಷಾಂತರ ವೀವ್ಸ್, ಲೈಕ್ಸ್, ಬಂದಿದೆ. ಅಭಿಮಾನಿಗಳು ನೀವೇ ನಿಜವಾದ ಪರಮ ಸುಂದರಿ ಎಂದು ಕಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಚಿತ್ರರಂಗಕ್ಕೆ ದರ್ಶನ್ (Darshan) ಲೈಟ್‌ಬಾಯ್ ಆಗಿ ಬಂದ್ರೂ ಕಷ್ಟಪಟ್ಟು ಮೇಲೆ ಬಂದಿದ್ರು. ಆದ್ರೆ ಜೀವನ ಹಾಳುಮಾಡಿಕೊಂಡ್ರು ಅಂತ ನಟಿ ರಮ್ಯಾ (Actress Ramya) ಕೊಲೆ ಆರೋಪಿ ದಚ್ಚು ಬಗ್ಗೆ ಸಾಫ್ಟ್ ಕಾರ್ನರ್ ತೋರಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ನಟಿ, ನಾನು ಹೇಳಬೇಕಾದ್ದನ್ನೆಲ್ಲ ಹೇಳಿದ್ದೀನಿ. ದೂರು ಕೊಟ್ಮೇಲೆ ಬ್ಯಾಡ್ ಕಾಮೆಂಟ್ಸ್ ಬರ್ತಿಲ್ಲ. ಎಷ್ಟೋ ಜನ ಪೋನ್ ಸ್ವಿಚ್ ಆಫ್ ಮಾಡಿ ಮನೆ ಬಿಟ್ಟಿದ್ದಾರೆ. ಇನ್ನಷ್ಟು ಮಂದಿ ಅರೆಸ್ಟ್ ಆಗಿದ್ದಾರೆ. ದರ್ಶನ್ ಲೈಟ್ ಬಾಯ್ ಆಗಿ ಚಿತ್ರರಂಗಕ್ಕೆ ಬಂದವರಾಗಿದ್ದರೂ ಕಷ್ಟ ಪಟ್ಟು ಈ ಹಂತಕ್ಕೆ ಬಂದಿದ್ರು. ಆದ್ರೆ ಜೀವನ ಹಾಳು ಮಾಡಿಕೊಂಡ್ರು. ಹೀಗೆ ಆಗದೇ ಇದ್ದಿದ್ದರೇ ಇನ್ನಷ್ಟು ದೊಡ್ಡ ಮಟ್ಟಕ್ಕೆ ಬೆಳಿಯಬಹುದಿತ್ತು ಎಂದರಲ್ಲದೇ ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಿಸುವುದಾಗಿ ಹೇಳಿದರು. ಇದನ್ನೂ ಓದಿ: ವಿಷ್ಣು ಸ್ಮಾರಕ ನಿರ್ಮಿಸೋಕೆ ನಿಮ್ಮ ಜೊತೆ ನಾವಿದ್ದೇವೆ – ಅಭಿಮಾನಿಗಳೊಂದಿಗೆ ನಿಂತ ನಟ ಅನಿರುದ್ಧ
ನಟಿ ರಮ್ಯಾಗೆ (Ramya) ಅಶ್ಲೀಲ ಸಂದೇಶ ಕಳುಹಿಸಿದ ಪ್ರಕರಣದ ತನಿಖೆ ದಿನದಿಂದ ದಿನಕ್ಕೆ ಚುರುಕುಗೊಂಡಿದೆ. ಆ ಪ್ರಕರಣದಲ್ಲಿ ಈಗಾಗಲೇ ಬೆಂಗಳೂರು ಕ್ರೈಂ ಬ್ರ್ಯಾಂಚ್ ಪೊಲೀಸರು (Bengaluru Crime Branch Police) ನಾಲ್ಕು ಜನರನ್ನ ಬಂಧಿಸಿದ್ದಾರೆ. ಸುಮಾರು 48 ಜನರ ಜಾಲತಾಣದ ಐಡಿಗಳ ಡಿಟೇಲ್ಸ್ ಕೊಟ್ಟಿದ್ದಾರೆ ನಟಿ ರಮ್ಯಾ. ಪೊಲೀಸರು ಆರು ತಂಡದೊಂದಿಗೆ ಫೀಲ್ಡಿಗಿಳಿದು ಕಾರ್ಯಾಚರಣೆ ನಡೆಸಿದ್ದಾರೆ. ಕರ್ನಾಟಕದ ವಿವಿಧ ಭಾಗದಲ್ಲಿ ಪೊಲೀಸರ ಕಾರ್ಯಾಚರಣೆಗೆ ಬೆಚ್ಚಿಬಿದ್ದ ಮುಖೇಡಿಗಳು ಚೆಲ್ಲಾಪಿಲ್ಲಿಯಾಗಿದ್ದಾರೆ.
ಈ ಪ್ರಕರಣದ ಬಗ್ಗೆ ನಟ ಪ್ರಜ್ವಲ್ ದೇವರಾಜ್ ಪ್ರತಿಕ್ರಿಯೆ ನೀಡಿದ್ದಾರೆ. `ಸು ಫ್ರಮ್ ಸೋ’ ಸಿನಿಮಾವನ್ನ ವೀಕ್ಷಿಸಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಪ್ರಜ್ವಲ್ ದೇವರಾಜ್ (Prajwal Devaraj) `ಯಾರ ಫ್ಯಾನ್ಸ್ ಆದರೂ ಜವಾಬ್ದಾರಿ ಬೇಕು. ಹೆಣ್ಣುಮಕ್ಕಳಿಗೆ ಕಿರುಕುಳ ಕೊಡಬಾರದು ಅನ್ನೋದು ಈ ಸು ಫ್ರಮ್ ಸೋ ಸಿನಿಮಾದ ಮೇನ್ ಕಂಟೆಂಟ್. ಧೈರ್ಯ ಇದ್ದರೆ ಮುಂದೆ ಬಂದು ಮಾತಾಡಲಿ. ಎಲ್ಲ ಚಿಕ್ಕ ಚಿಕ್ಕ ಹುಡುಗರ ಕೈಯಲ್ಲಿ ಮೊಬೈಲ್ ಇದೆ ಅಂತಾ, ಯಾರಿಗೂ ಗೊತ್ತಾಗಲ್ಲ ಎಂಬ ಭಾವನೆಯಿಂದ ಕೆಟ್ಟದಾಗಿ ಮೆಸೇಜ್ ಮಾಡಬಾರದು’ ಎಂದಿದ್ದಾರೆ.
ಅಲ್ಲದೇ ಇಷ್ಟೆಲ್ಲ ಬೆಳವಣಿಗೆಗಳು ಆಗುತ್ತಿದ್ದರೂ ಇದರ ಮಧ್ಯೆ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿಯವರ ಸಹೋದರಿಗೆ ಅಪರಿಚಿತ ವ್ಯಕ್ತಿಯಿಂದ 280 ಫೋನ್ ಕಾಲ್ ಹಾಗೂ ಅಶ್ಲೀಲ ಸಂದೇಶ, ಫೋಟೋಗಳು ಬರುತ್ತಿರುವ ಬಗ್ಗೆ ಮಾತನಾಡಿದ್ದಾರೆ. ಇನ್ನು ಆ ಅಪರಿಚಿತ ವ್ಯಕ್ತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದಾರೆ ನಟ ಪ್ರಜ್ವಲ್ ದೇವರಾಜ್. ಏನೇ ಆದರೂ ಕಾನೂನಾತ್ಮಕವಾಗಿ ಅಂತವರಿಗೆ ಬಿಸಿ ಮುಟ್ಟಿಸಬೇಕು ಎಂದು ನುಡಿದಿದ್ದಾರೆ ಪ್ರಜ್ವಲ್ ದೇವರಾಜ್.
ಹುಚ್ಚರು ಮಾತ್ರ ಅನಾವಶ್ಯಕವಾಗಿ ಕಾಮೆಂಟ್ ಮಾಡ್ತಾರೆ. ಸ್ಟಾರ್‌ಗಳು ಸಹ ಎಲ್ಲರಿಗೂ ಸಪೋರ್ಟ್ ಮಾಡ್ತಾರೆ ಅನ್ನಿಸುತ್ತದೆ ಎಂದು ನಟಿ ಅದಿತಿ ಪ್ರಭುದೇವ (Aditi Prabhudeva) ಖಡಕ್ಕಾಗಿ ಮಾತನಾಡಿದ್ದಾರೆ.
ನಟಿ ರಮ್ಯಾಗೆ (Ramya) ಅಶ್ಲೀಲ ಕಾಮೆಂಟ್ ಮಾಡಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬರೀ ಸಿನಿಮಾ ತಾರೆಯರಿಗೆ ಹೀರೋಯಿನ್ಸ್ ಅಂತಲ್ಲ. ಸೋಶಿಯಲ್ ಮೀಡಿಯಾ ಅಂದ ಮೇಲೆ ಇದೆಲ್ಲ ಇರುತ್ತದೆ. ನಾನು ವೈಯಕ್ತಿಕವಾಗಿ ಬ್ಯಾಡ್ ಕಾಮೆಂಟ್ಸ್ ಅನುಭವಿಸಿಲ್ಲ. ಹುಡುಗರು ಬಿಟ್ಟಾಕಿ, ಹುಡುಗಿಯರೂ ಕೂಡ ಕಾಮೆಂಟ್ ಮಾಡೋದು ಇದೆ ಎಂದಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ವಾರ್-2 ಚಿತ್ರಕ್ಕೆ ಭಾರೀ ಡಿಮ್ಯಾಂಡ್
ಇವರಿಗೆಲ್ಲ ಫೇಕ್ ಅಕೌಂಟ್ ಮಾಡಿ ಈ ರೀತಿ ಕೆಟ್ಟ ಕಾಮೆಂಟ್ ಮಾಡೋದ್ರಿಂದ ಏನು ಸಿಗುತ್ತೋ ಗೊತ್ತಿಲ್ಲ. ಇದನ್ನೆಲ್ಲ ಇಗ್ನೋರ್ ಮಾಡೋದು ಒಳಿತು. ನನಗೆ ವೈಯಕ್ತಿಕವಾಗಿ ಈ ರೀತಿ ಆಗಿಲ್ಲ. ಆದರೆ ಹುಚ್ಚರು ಮಾತ್ರ ಅನಾವಶ್ಯಕವಾಗಿ ಕಾಮೆಂಟ್ ಮಾಡ್ತಾರೆ. ಸ್ಟಾರ್‌ಗಳು ಎಲ್ಲರಿಗೂ ಸಪೋರ್ಟ್ ಮಾಡ್ತಾರೆ ಅಂತ ಅನ್ನಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ‘ಎಲ್ಲಾ ಹೆಣ್ಣುಮಕ್ಕಳಿಗೆ ನ್ಯಾಯ ಸಿಕ್ಕಿದೆ’ ಪ್ರಜ್ವಲ್ ಕೇಸ್ ಬಗ್ಗೆ ರಮ್ಯಾ ಪೋಸ್ಟ್
ನಮಗೂ ಸಾಮಾನ್ಯ ಜ್ಞಾನ ಇರಬೇಕು. ನಮ್ಮ ಮನೆಯಲ್ಲೇ ರಕ್ತ ಹಂಚಿಕೊಂಡು ಹುಟ್ಟಿರೋರ ನಡುವೆಯೇ ವೈಮನಸ್ಸು ಇರುತ್ತದೆ. ಕೆಲವು ಚಿಕ್ಕಪುಟ್ಟ ಸಮಸ್ಯೆಗಳೂ ಇರುತ್ತದೆ. ಆದರೆ ಅನಾವಶ್ಯಕ ಇದೆಲ್ಲಾ ಯಾಕಪ್ಪಾ? ನಮ್ದು ಒಂದು ಫ್ಯಾಮಿಲಿ ಇರುತ್ತದೆ ಎಂದಿದ್ದಾರೆ.
ಫೇಕ್ ಅಕೌಂಟ್ ಕ್ರಿಯೇಟ್ ಮಾಡ್ಕೊಂಡು ಸ್ಟಾರ್ ನಟರ ಅಭಿಮಾನಿ ಹೆಸರಲ್ಲಿ ಕಾಮೆಂಟ್ ಮಾಡುವ ಗೀಳು ಹೆಚ್ಚಾಗಿದೆ. ಸಂಬಂಧಪಟ್ಟ ನಟನ ಫ್ಯಾನ್ಸ್ ಬಳಗ ಪ್ರಸ್ತುತ ಘಟನೆಗಳ ಬಗ್ಗೆ ದನಿ ಎತ್ತುವ ನಟ ನಟಿಯರನ್ನ ಟಾರ್ಗೆಟ್ ಮಾಡುತ್ತಿದೆ ಅನ್ನೋ ಆರೋಪವಿದೆ. ನಟಿ ರಮ್ಯಾ ಈ ಕುರಿತು ಕಾನೂನು ಹೋರಾಟವನ್ನೂ ಪ್ರಾರಂಭಿಸಿದ್ದಾರೆ. ನಟ ಪ್ರಥಮ್ ಸೇರಿದಂತೆ ಹಲವರು ದೂರನ್ನೂ ದಾಖಲಿಸಿದ್ದಾರೆ. ಅಲ್ಲದೇ ನಿರ್ಮಾಪಕರು ಮುಂದೆ ಬಂದು ನಟರಿಗೆ ಬುದ್ಧಿ ಹೇಳುವಂತೆ ಕಲಾವಿದರ ಸಂಘಕ್ಕೂ ದೂರು ನೀಡಿದ್ದಾರೆ.